Connect with us

Kodagu

ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಸಮ್ಮೇಳನ

Published

on

ಮಡಿಕೇರಿ: ಕೊಡಗು ಜಿಲ್ಲೆಯ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದಲ್ಲಿ ಮಾ. ೨೫ ಮತ್ತು ೨೬ ರಂದು ಜೀವವೈವಿಧ್ಯತೆಯ ಸಂರಕ್ಷಣೆ ಮತ್ತು ಸುಸ್ಥಿರ ಭವಿಷ್ಯಕ್ಕಾಗಿ ಹವಾಮಾನ ಬದಲಾವಣೆಯ ತಗ್ಗಿಸುವಿಕೆ ಕುರಿತು ರಾಷ್ಟ್ರೀಯ ಸಮ್ಮೇಳನ ಆಯೋಜಿಸಲಾಗಿದೆ ಎಂದು ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಡೀನ್ ಡಾ.ಜಿ.ಎಂ.ದೇವಗಿರಿ ತಿಳಿಸಿದರು.
ಸಮ್ಮೇಳನದಲ್ಲಿ ದೇಶದ ವಿವಿಧ ವಿಶ್ವವಿದ್ಯಾಲಯಗಳು ವೈಜ್ಞಾನಿಕ ಸಂಸ್ಥೆಗಳು ಮತ್ತು ಜೀವವೈವಿಧ್ಯತೆಯ ಕುರಿತು ಸಂಶೋಧನೆ, ಶಿಕ್ಷಣದಲ್ಲಿ ತೊಡಗಿಕೊಂಡಿರುವ ವಿಜ್ಞಾನಿಗಳು ಭಾಗವಹಿಸಲಿದ್ದಾರೆ. ಜೀವವೈವಿಧ್ಯತೆ ಪ್ರಸ್ತುತ ಸ್ಥಿತಿ, ಅಪಾಯಗಳು ಹಾಗೂ ಸಂರಕ್ಷಣೆ, ಜೈವಿಕ ಪರಿಶೋಧನೆ ಮತು ಜೈವಿಕ ಸಂಪನ್ಮೂಲಗಳ ಸುಸ್ತಿರ ಬಳಕೆ, ಹವಾಮಾನ ಬದಲಾವಣೆ ಪ್ರಸ್ತುತ ಸ್ಥಿತಿ ವತ್ತು ಭವಿಷ್ಯದ ಸವಾಲುಗಳು, ಹವಾಮಾನ ಬದಲಾವಣೆ ಎದುರಿಸಲು ಪರ್ಯಾಯ ಶಕ್ತಿ ಮೂಲಗಳು ಕುರಿತು ಪ್ರಬಂಧ ಮಂಡನೆ, ವಿಚಾರ ವಿನಿಮಯ ನಡೆಯಲಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ಸಮ್ಮೇಳನದಲ್ಲಿ ಒಟ್ಟು ೧೦೦ಕ್ಕೂ ಅಧಿಕ ವಿಜ್ಞಾನಿಗಳು ಪಾಲ್ಗೊಂಡು, ವಿವಿಧ ವಿಷಯಗಳ ಒಟ್ಟು ೧೨೩ ಸಂಶೋಧನಾ ಪ್ರಬಂಧಗಳನ್ನು ಮಂಡಿಸಲಿದ್ದಾರೆ. ಪಾರಿಸರಿಕ ವಿಷಯದಲ್ಲಿ ನುರಿತ ೧೦ ತಜ್ಞರು ಸಂಬಂಧಿಸಿದ ವಿವಿಧ ವಿಷಯಗಳಲ್ಲಿ ಉಪನ್ಯಾಸ ನೀಡಲಿದ್ದಾರೆ. ಮಾ.೨೫ರಂದು ಬೆಳಗ್ಗೆ ೯.೩೦ ಗಂಟೆಗೆ ನಡೆಯುವ ಸಮ್ಮೇಳನವನ್ನು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಶಿವಮೊಗ್ಗದ ಕುಲಪತಿ ಡಾ.ಆರ್.ಸಿ.ಜಗದೀಶ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣಾ ಮಂಡಳಿ ಸದಸ್ಯ ಕಾರ್ಯದರ್ಶಿ ಎನ್.ಎಸ್.ಲಿಂಗರಾಜ್ ಭಾಗವಹಿಸಲಿದ್ದಾರೆ. ಸಮ್ಮೇಳನದ ಪ್ರಬಂಧ ಸಾರಾಂಶದ ಪುಸ್ತಕವನ್ನು ಕರ್ನಾಟಕ ರಾಜ್ಯ ವಿಜ್ಞಾನ ವತ್ತು ತಂತ್ರಜ್ಞಾನ ಪರಿಷತ್ ಕಾರ್ಯದರ್ಶಿ ಡಾ.ಯು.ಟಿ.ವಿಜಯ್ ಬಿಡುಗಡೆಗೊಳಿಸಲಿದ್ದಾರೆ. ಈ ಸಂದರ್ಭದಲ್ಲಿ ಬೆಂಗಳೂರು ಬಿ.ಬಿ.ಎಂ.ಪಿ. ಉಪಅರಣ್ಯ ಸಂರಕ್ಷಣಾಧಿಕಾರಿ ಬಿ.ಎಲ್.ಜಿ.ಸ್ವಾಮಿ, ಪ್ರಮುಖರಾದ ಡಾ.ಬಿ.ಹೇಮಳಾ ನಾಯಕ್, ಡಾ.ಕೆ.ಸಿ.ಶಶಿಧರ್ ಇತರರು ಪಾಲ್ಗೊಳ್ಳಲಿದ್ದಾರೆ ಎಂದು ವಿವವರಿಸಿದರು.


ಸಮ್ಮೇಳನದ ಸಮಾರೋಪ ಸಮಾರಂಭ ಮಾ.೨೬ರಂದು ಸಂಜೆ ೪.೩೦ ಗಂಟೆಗೆ ನಡೆಯಲಿದ್ದು, ನೂತನವಾಗಿ ಸ್ಥಾಪಿತವಾಗಿರುವ ಮಂಡ್ಯ ಕೃಷಿ ವಿಶ್ವವಿದ್ಯಾಲಯದ ವಿಷೇಶಾಧಿಕಾರಿ ಡಾ.ಕೆ.ಎಮ್.ಹರಿಣಿಕುಮಾರ್, ಉಪಅರಣ್ಯ ಸಂರಕ್ಷಣಾಧಿಕಾರಿ ಎಚ್.ಸಿ.ಬಾಲಚಂದ್ರ, ಟಾಟಾ ಕಾಫಿ ಲಿಮಿಟೆಡ್ ಪಾಲಿಬೆಟ್ಟ ಜನರಲ್ ಮ್ಯಾನೇಜರ್ ಬಿ.ಜಿ.ಪೊನ್ನಪ್ಪ, ವಿಶ್ವವಿದ್ಯಾಲಯದ ಅಧಿಕಾರಿ ಡಾ.ಡಿ.ಸುರೇಶ್, ಪ್ರಮುಖರಾದ ಡಾ.ವಿ.ಶ್ರೀನಿವಾಸ್, ಡಾ.ಡಿ.ತಿಪ್ಪೇಶ್, ಡಾ.ಬಿ.ಸಿ.ಧನಂಜಯ ಇತರರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಅರಣ್ಯ ಮಹಾವಿದ್ಯಾಲಯದ ಪ್ರೋ.ಡಾ.ಬಿ.ಎನ್.ಸತೀಶ್, ಆರ್.ಎನ್.ಕೆಂಚಾರೆಡ್ಡಿ ಉಪಸ್ಥಿತರಿದ್ದರು.

Continue Reading

Kodagu

ಸೋಮವಾರಪೇಟೆ ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿ ಪರವಾನಿಗೆ ಇಲ್ಲದೆ ಟಿಪ್ಪರ್ ಗಳ ಒಡಾಟ!

Published

on

ಸೋಮವಾರಪೇಟೆ :  ಸೋಮವಾರಪೇಟೆ ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿ ಪರವಾನಿಗೆ ಇಲ್ಲದೆ ಟಿಪ್ಪರ್ ಗಳ ಒಡಾಟ! ಇಲ್ಲಿ ಕಲ್ಲು ಕೋರೆ ಮಾಲೀಕರದೇ ದರ್ಬಾರ್  ಶಾಸಕರೇ ಇತ್ತ ಗಮನಿಸಿ, ಸೋಮವಾರಪೇಟೆ ತಾಲೂಕಿನ ಹೊಸಳ್ಳಿ ಗ್ರಾಮದ ಜನರು ಇದೀಗ ಬವಣೆ ಪಡುವಂತಾಗಿದೆ.

ರಸ್ತೆ ಬದಿ ಇರುವ ರೈತರ ಜಮೀನಿನ ಬೇಲಿಯನ್ನು ಕಿತ್ತು ಬಲವಂತವಾಗಿ ರಸ್ತೆ ಅಗಲೀಕರಣ ಮಾಡಿಕೊಂಡಿರುವ ಕೋರೆ ಮಾಲೀಕರು ರಾಜ ರೋಷವಾಗಿ ಯಾವುದೇ ಪರವಾನಿಗೆ ಇಲ್ಲದೆ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಸರ್ಕಾರಿ ಜಾಗದಿಂದಲೂ ಕೂಡ ಈ ಗಣಿಗಾರಿಕೆ ನಡೆಯುತ್ತಿದ್ದು, ಸಂಬಂಧಿಸಿದ ಇಲಾಖೆಯವರ ಜಾಣ ಮೌನದಿಂದ ಇದೀಗ ಸಾರ್ವಜನಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಒಂದೆಡೆ ರಸ್ತೆಯಲ್ಲಿ ಓಡಾಡುವ ಟಿಪ್ಪರ್ಗಳಿಂದ ಧೂಳು, ಶಬ್ದ ಮಾಲಿನ್ಯ, ಮತ್ತೊಂದೆಡೆ ತಮ್ಮ ಹೊಲದ ಅತಿಕ್ರಮಣದಿಂದ ಹಲವರು ಬೇಸತ್ತಿದ್ದಾರೆ. ಈ ಬಲಿಷ್ಠ ಗುಂಪನ್ನು ಎದುರಿಸುವ ಶಕ್ತಿ ಇಲ್ಲದೆ ಮೌನಕ್ಕೆ ಶರಣಾಗುವ ಪರಿಸ್ಥಿತಿ ಇಲ್ಲಿನವರಿಗೆ ಒದಗಿ ಬಂದಿದೆ. ಶಾಸಕರೇ ಇತ್ತ ಗಮನಿಸಿ ಎನ್ನುತ್ತಾರೆ ಸ್ಥಳೀಯರು.

Continue Reading

Kodagu

ಕೊಡವ ಭಾಷಿಕ ಸಮುದಾಯಗಳ ಕೂಟದಿಂದ ಮೂವರಿಗೆ ಸನ್ಮಾನ

Published

on

ಮಡಿಕೇರಿ : ಕೊಡವ ಭಾಷಿಕ ಸಮುದಾಯಗಳ ಕೂಟದ ವತಿಯಿಂದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ಶಾಸಕ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ, ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಚೆಪ್ಪುಡಿರ ಅರುಣ್ ಮಾಚಯ್ಯ ಹಾಗೂ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಅಜ್ಜಿನಿಕಂಡ ಸಿ.ಮಹೇಶ್ ನಾಚಯ್ಯ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ವಿರಾಜಪೇಟೆಯಲ್ಲಿ ಇಂದು ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ನಡೆದ ’ಕೊಡವ ಪುಸ್ತಕ ಪತ್ತಾಯ’ ಉದ್ಘಾಟನಾ ಕಾರ್ಯಕ್ರಮದಲ್ಲಿ ಮೂವರನ್ನು ಸನ್ಮಾನಿಸುವ ಸಂದರ್ಭ ಕೊಡವ ಭಾಷಿಕ ಸಮುದಾಯಗಳ ಕೂಟದ ಅಧ್ಯಕ್ಷ ಡಾ.ಮೇಚಿರ ಸುಭಾಷ ನಾಣಯ್ಯ, ಉಪಾಧ್ಯಕ್ಷ ಪೊನ್ನಿರ ಗಗನ್ ಉತಯ್ಯ, ಪೊಟ್ಡಂಡ ಗಣೇಶ್, ಕೊಡವ ಸವಿತಾ ಸಮಾಜದ ಮುಖಂಡರುಗಳಾದ ತಪನೇರ ಸಾಬು, ಮಹೇಶ್, ಪೂಣಚ್ಚಿರ ಮನೋಜ್, ತಪಾನೇರ ಮಹೇಶ್, ವೇದಪಂಡ ಬಿದ್ದಪ್ಪ, ಹಲ್ ಚಿರ ದೇವಯ್ಯ ಹಾಗೂ ನಿರ್ದೇಶಕರುಗಳು ಕಕ್ಕಬೆ ಚೋವಂಡ ಜೀಜ, ತೊರೆರ ಪೊನ್ನಕ್ಕಿ, ಕೊಡವ ಕೆಂಬಟ್ಟಿ ಸಮುದಾಯದ ಅಧ್ಯಕ್ಷರಾದ ಬಿಲ್ಲರೀಕುಟ್ಟಡ ಪ್ರಭು ಐಯ್ಯಪ್ಪ, ಬಾಳೆಕುಟ್ಟಡ ಉದಯ್ ಮಾದಪ್ಪ, ಪೆಗ್ಗೋಲಿ ದಿನೇಶ್, ಚಾವರೆ ಕುಟ್ಟಡ ಜೀವನ್, ಕೋಪರೆಕುಟ್ಟಡ ಸಾಗರ್ ಪೊವಣ್ಣ, ಚಿಮ್ಮಿಕುಟ್ಟಡ ನಿತೇಶ್. ಬಣ್ಣ ಸಮಾಜ ಬಿಕಚಂಡ ಬೆಳ್ಳಿಪ್ಪ, ಅರಮನೆಪಾಲೆ ಸಮಾಜ ದೇವಯ್ಯ, ದಿನೇಶ್, ಮಲೆಯ ಸಮಾಜ ಕಾರ್ಯದರ್ಶಿ ಮಲೆಯಂಡ ಬಿದ್ದಪ್ಪ, ಹ್ಯಾರಿ ಲೋಕೇಶ್ ತಂಡ ಇತರರು ಇದ್ದರು.

Continue Reading

Kodagu

ಕುಟ್ಟ ಪಟ್ಟಣದ ಉದ್ಯಮಿ ಕೇರಳದಲ್ಲಿ ಕಾರಿನಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹ*ತ್ಯೆ: ಪತ್ನಿ, ಮಕ್ಕಳು ಪಾರು

Published

on

ಪೊನ್ನಂಪೇಟೆ: ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಕುಟ್ಟ ಗ್ರಾಮದ ಉದ್ಯಮಿಯೊಬ್ಬರು, ಕೇರಳದ ವಯನಾಡಿನಲ್ಲಿ ಕುಟುಂಬ ಸಮೇತ ಆತ್ಮಹತ್ಯೆ ಮಾಡಿಕೊಳ್ಳಲು ಬೆಂಕಿ ಹಚ್ಚಿಕೊಂಡಿದ್ದು, ಇವರ ಪೈಕಿ ಉದ್ಯಮಿ ಸಾವನ್ನಪ್ಪಿದ್ದರೆ, ಪತ್ನಿ ಹಾಗೂ ಮಕ್ಕಳು ಪಾರಾಗಿದ್ದಾರೆ.

ಈ ದುರಂತದಲ್ಲಿ ಕುಟ್ಟ ಗ್ರಾಮದ ನಿವಾಸಿ, ಉದ್ಯಮಿ ಸಜೀರ್ ಮೃತಪಟ್ಟಿದ್ದಾರೆ. ಇವರ ಪತ್ನಿಗೆ ಗಂಭೀರ ಗಾಯವಾಗಿದ್ದು, ಕಲ್ಲಿಕೋಟೆ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನಲ್ಲಿದ್ದ ಇಬ್ಬರು ಮಕ್ಕಳನ್ನು ಸ್ಥಳೀಯ ನಿವಾಸಿಗಳು ರಕ್ಷಿಸಿದ್ದಾರೆ. ಮಾನಂದವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಡೆದಿದ್ದೇನು?
ಉದ್ಯಮಿ ಸಜೀರ್, ಕುಟ್ಟ ಗ್ರಾಮದಲ್ಲಿ ಹಲವು ವ್ಯಾಪಾರ ಮಳಿಗೆ ಹೊಂದಿದ್ದರು. ಬಾಪು ಎಂಬಾತ ಸಜೀರ್ಗೆ 20 ಲಕ್ಷ ರೂ. ನೀಡಬೇಕಿತ್ತು. ಸಾಲ ಪಡೆದಿದ್ದ ಬಾಪುನ ಮನೆ ಎದುರೇ ಸಜೀರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೂ ಮುನ್ನ ಕಾರಿನಲ್ಲೇ ಕುಳಿತು ಉದ್ಯಮಿ ಸಜೀರ್ ವಿಡಿಯೋ ರೆಕಾರ್ಡ್ ಮಾಡಿದ್ದು, ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಕ್ಕೆ ಬಾಪು ಕಾರಣ ಎಂದು ಹೇಳಿದ್ದಾರೆ.

Continue Reading

Trending

error: Content is protected !!