Mandya
ಎಚ್‌ಡಿಕೆ ಸೋಲಿಗೂ ಕಾರಣರಾಗುವ ಸಿಎಸ್‌ಪಿ: ಪಿ.ಎಂ.ನರೇಂದ್ರಸ್ವಾಮಿ ಆಕ್ರೋಶ

ಮಂಡ್ಯ: ನಿಖಿಲ್ ಕುಮಾರಸ್ವಾಮಿ ಸೋಲಿಗೆ ಕಾರಣರಾದ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರೇ ಪ್ರಸ್ತುತದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರಿಗೂ ಅದೇರೀತಿ ಮಾಡಲು ಹೊರಟಿರುವ ನಿಮ್ಮ ಬಾಯಲ್ಲಿ ದುಷ್ಟ ಶಾಸಕ ಎಂದು ಟೀಕಿಸುವುದನ್ನು ಬಿಟ್ಟು ನಾಲಿಗೆಯನ್ನು ಹಿಡಿತದಲ್ಲಿಟ್ಟುಕೊಂಡು ಮಾತನಾಡಿ ಪುಟ್ಟರಾಜು ಅವರೇ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ವೀರಾವೇಶದಿಂದ ಮಾತನಾಡುತ್ತಾ ನನ್ನನ್ನು ಟೀಕಿಸುವ ಭರಲ್ಲಿ ದುಷ್ಟ ಶಾಸಕ ಎಂದು ಹೇಳಿದ್ದೀರಾ, ಜಿಲ್ಲೆಯಲ್ಲಿ ಯಾರು ದುಷ್ಟ ಶಾಸಕರು ಎಂಬುದು ಜನರಿಗೆ ತಿಳಿದಿದೆ, ಅಕ್ರಮ ಗಣಿಗಾರಿಕೆ ನಡೆಸುವವರಿಂದ ನಾವು ಏನನ್ನೂ ಕಲಿಯಬೇಕಿಲ್ಲ, ರಾಜಕಾಣರವನ್ನು ಮಾಡಲು ನಮಗೂ ತಿಳಿದಿದೆ, ನೀವು ಪುಟ್ಟರಾಜು ಅಲ್ಲ ಇನ್ನುಮುಂದೆ ದೊಡ್ಡರಾಜು ಕರೆಯುತ್ತೇವೆ ಎಂದು ಸುದ್ದಿಗೋಷ್ಠಿಯಲ್ಲಿ ಶನಿವಾರ ತಿರುಗೇಟು ನೀಡಿದರು.
2008ರಲ್ಲಿ ನಾನು ಪಕ್ಷೇತರ ಶಾಸಕನಾಗಿ ಗೆಲ್ಲುವ ಮೂಲಕ ಮಳವಳ್ಳಿ ಕ್ಷೇತ್ರದಲ್ಲಿ ನಿಜವಾದ ಕಾಂಗ್ರೆಸ್ ಏನು ಎಂಬುದನ್ನು ಸಾಭೀತುಪಡಿಸಿದ್ದೆ. ಅದರಂತೆ ಯಡಿಯೂರಪ್ಪ ಅವರು ಬೆಂಬಲ ಕೋರಿದಾಗ 9 ಮಂದಿ ಪಕ್ಷೇತರ ಶಾಸಕರು ಬೆಂಬಲ ನೀಡಿದ್ದೆವು. ಆದರೆ, ನೀವು ಮತ್ತು ಮಾಜಿ ಪ್ರಧಾನಿ ದೇವೇಗೌಡರು ಯಡಿಯೂರಪ್ಪ ಸರ್ಕಾರ ಕಿತ್ತು ಹಾಕಲು ಏನೇನು ಮಾಡಿದಿರಿ ಎಂಬುದನ್ನು ಮರೆತ್ತಿದ್ದೀರಾ, ಯಡಿಯೂರಪ್ಪ ಸರ್ಕಾರ ಬೀಳಲು ಕಾರಣರಾದವರು ಯಾರು ಎಂದು ಪ್ರಶ್ನಿಸಿದರು.
ಯಡಿಯೂರಪ್ಪ ಸರ್ಕಾರ ಬೀಳಿಸಲು ನೀವು ಎಲ್ಲೆಲ್ಲಿ ಸಭೆ ಮಾಡಿದಿರಿ. ಪ್ರಚೋದನೆ ಮಾಡಿದಿರಿ. ನಿಮ್ಮ ಪಕ್ಷದ ಮುಖಂಡರು ಗೋವಾ, ಬಾಂಬೆ, ಚೆನ್ನೈ, ಕೇರಳಕ್ಕೆ ಕರೆದುಕೊಂಡು ಹೋಗಿ ನಂತರ ಈಗಲ್ಟನ್ ರೆಸಾರ್ಟ್‌ಗೆ ಕರೆದುಕೊಂಡು ಬಂದರು. ನಮ್ಮನ್ನು ಕರೆದುಕೊಂಡು ಬಂದ ಪುಟ್ಟಣ್ಣನವರು ಚೆನ್ನೈನಲ್ಲಿ 9 ಮಂದಿ ಸಚಿವರ ರಾಜೀನಾಮೆ ಪಡೆದು ರಾಜ್ಯಪಾಲರಿಗೆ ನೀಡಿದ್ದೆವು. ನಾನು ಬಾಯಿ ಬಿಟ್ಟರೆ ನಿಮ್ಮ ಬಣ್ಣ ಬಯಲಾಗಲಿದೆ ಎಂಬುದನ್ನು ನೀವು ಮರೆತಿದ್ದೀರಾ ಎಂದು ತಿವಿದರು.
ನೀವು ನನ್ನೊಬ್ಬನ ಮನೆ ಹಾಳು ಮಾಡಿದ್ದಲ್ಲ. 9 ಮಂದಿ ಸಚಿವರು ರಾಜೀನಾಮೆ ನೀಡಲು ಯಾರು ಕಾರಣ. ಸ್ವಂತ ಶಕ್ತಿಯಿಂದ ವೈಯಕ್ತಿಕವಾಗಿ ಸಚಿವ ಸ್ಥಾನವನ್ನು ಪಡೆದುಕೊಂಡಿದ್ದೆವು. ಆದರೆ, ಕಾಂಗ್ರೆಸ್-ಜಾ.ದಳ ಮೈತ್ರಿ ಸರ್ಕಾರ ಮಾಡುತ್ತೇವೆ ಎಂದು ಆಮಿಷವೊಡ್ಡಿದವರು ಯಾರು? 21 ಮಂದಿ ಶಾಸಕರನ್ನು ಒಗ್ಗೂಡಿಸಿ ಕೊನೆಗೆ 17 ಮಂದಿ ಶಾಸಕರು ಅನೂರ್ಜಿತರಾಗಲು ಕಾರಣ ಯಾರು ಎಂಬುದನ್ನು ನೀವೇ ಹೇಳಬೇಕು ಎಂದು ಕುಟುಕಿದರು.
ಶಾಸಕ ಸ್ಥಾನ ಕಳೆದುಕೊಂಡು ಕಣ್ಣೀರು ಹಾಕುವಾಗ ದೇವೇಗೌಡರು ಕಾಪಾಡಿದರು ಎಂದು ಹೇಳುತ್ತೀರಿ. ಅದಕ್ಕೆ ಕಾರಣ ಯಾರು ಹಾಗೂ ಅದರ ಹಿಂದಿನ ಕಹಿ ಸತ್ಯವನ್ನು ಬಾಯಿ ಬಿಟ್ಟರೆ ಮಹಾನಾಯಕನಿಗೆ ಚ್ಯುತಿ ಬರುತ್ತದೆ ಎಂದು ಮುಚ್ಚಿಟ್ಟು ಮಾತನಾಡುತ್ತಿದ್ದೇನೆ. ನಿಮಗೆ ಎಚ್ಚರಿಕೆ ಇರಲಿ, ನಮ್ಮ ಇಷ್ಟು ಜನರ ರಂಪಾಟಕ್ಕೆ ಕಾರಣರಾದವರೇ ಎಚ್.ಡಿ.ಕುಮಾರಸ್ವಾಮಿ ಎಂಬುದನ್ನು ನೀವು ಮರೆಯಬೇಡಿ ಎಂದರು.
ಯಾಕೆ ಈ ರೀತಿ ತೊಂದರೆ ಕೊಡುತ್ತೀರಿ. ನಿಮಗೆ ಎಲ್ಲರೂ ವಿರೋಧಿಗಳೇ, ಅವರು ಬದುಕಿದ್ದಾಗ ಯಾವ ರೀತಿ ತೊಂದರೆ ಕಿರುಕುಳ ನೀಡಿದಿರಿ. ಅವರ ಮನೆಗೆ ಹೋಗಿದ್ದೀರಿ? ಈಗ ಅವರು ಸತ್ತ ಮೇಲೆ ಅವರ ಸಮಾಧಿಗೆ ಹೋಗಿ ನಮನ ಅರ್ಪಿಸುತ್ತಿದ್ದೀರಾ, ನಿಖಿಲ್ ಕುಮಾರಸ್ವಾಮಿ ಅವರ ಸೋಲಿಗೆ ಯಾರು ಕಾರಣ? ಆ ಚುನಾವಣೆಯಲ್ಲಿ ನೀವೆಷ್ಟು ಬೆಂಬಲ ನೀಡಿದ್ದೀರಿ. ಈಗ ಕುಮಾರಸ್ವಾಮಿ ಅವರಿಗೂ ನೀವು ಅದೇ ರೀತಿ ಮಾಡುತ್ತಿದ್ದೀರಾ? ಚುನಾವಣೆ ಭಾಷಣಕ್ಕೊಸ್ಕರ ಒಬ್ಬರನ್ನು ಹೀಯಾಳಿಸುವುದನ್ನು ಬಿಡಬೇಕು, ನಾವು ಇದಕ್ಕೆಲ್ಲ ಅಂಜುವುದಿಲ್ಲ ಎಂದು ತಿಳಿಸಿದರು.
ನಾನು ನಮ್ಮ ರಾಜಕಾರಣ ಮಾಡುತ್ತೀದ್ದೇವೆ. ಗಣಿಗಾರಿಕೆ ವಿಚಾರದಲ್ಲಿ ನಿಮ್ಮ ಬಗ್ಗೆ ಮಾತನಾಡಿದವರ ಜೊತೆಯೇ ಸಖ್ಯ ಬೆಳೆಸಿದ್ದೀರಾ? ಆಗ ಅವರೇ ದುಷ್ಟ ಶಾಸಕರು ಯಾರು ಎಂಬುದನ್ನು ಮಾತನಾಡಿದ್ದಾರೆ. ಇದು ಜನರಿಗೆ ಗೊತ್ತಿದೆ. ನೀವು ಸಣ್ಣ ನೀರಾವರಿ ಸಚಿವರಾಗಿದ್ದಾಗ ನಮ್ಮ ಕ್ಷೇತ್ರಕ್ಕೆ ಬಂದ ಅನುದಾನವನ್ನು ನೀವು ಪಾಂಡವಪುರಕ್ಕೆ ತೆಗೆದುಕೊಂಡು ಹೋಗಲಿಲ್ಲವೇ ನಾಚಿಕೆಯಾಗಬೇಕು ನಿಮಗೆ ಎಂದು ಹರಿಯಾಯ್ದರು.
ನಿಖಿಲ್ ಕುಮಾರಸ್ವಾಮಿ ಅವರು ನನ್ನ ಕ್ಷೇತ್ರಕ್ಕೆ ಬಂದು ಜೆಡಿಎಸ್ ಸಮಾವೇಶದಲ್ಲಿ ಈ ಶಾಸಕರಿಗೆ ಬುದ್ದಿಕಲಿಸುತ್ತೇವೆ ಎಂದು ಹೇಳಿರುವ ನೀವು? ಈ ಮಾತನ್ನು ತಿಳಿದೋ ಅಥವಾ ತಿಳಿಯದೆಯೋ ಹೇಳಿದ್ದೀರಾ ಅನ್ನಿಸುತ್ತದೆ, ಏಕೆಂದರೆ ನಾನು ನಿಮ್ಮಂತಹ ದೊಡ್ಡ ರಾಜಕಾರಣ ಕುಟುಂಬದಿಂದ ಬಂದವನಲ್ಲ, ನಾನೊಬ್ಬ ಸಾಮಾನ್ಯ ಮನುಷ್ಯ, ಜೊತೆಗೆ ಜಿ.ಮಾದೇಗೌಡ, ಎಸ್.ಎಂ.ಕೃಷ್ಣ ಅವರ ಶಿಷ್ಯ ಅವರಿಂದ ರಾಜಕಾರಣ ಕಲಿತವನು, ನಿಮ್ಮ ದೊಡ್ಡ ರಾಜಕಾರಣದ ಕುಟುಂಬದ ಬಗ್ಗೆ ಮಾತನಾಡುವುದಿಲ್ಲ ನಿಮ್ಮ ತಾತನ ಆಶೀರ್ವಾದ ನನ್ನ ಮೇಲಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ, ಕಾಂಗ್ರೆಸ್ ಕಾರ್ಯಾಧ್ಯಕ್ಷ ಎಂ.ಎಸ್.ಚಿದಂಬರ್, ಮುಖಂಡರಾದ ಸುರೇಶ್‌ಕಂಠಿ, ಸಿದ್ದರಾಜು, ಸ್ವಾಮಿ, ನಾಗೇಶ್, ಲಿಂಗದೇವರು ಇದ್ದರು.
Mandya
ಪತ್ರಕರ್ತರಿಗೆ ಪರಿಹಾರದ ಚೆಕ್ ವಿತರಣೆ

ಮಂಡ್ಯ : ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮನವಿ ಮೇರೆಗೆ ಮಂಡ್ಯ ನಗರ ಸಭೆಯಲ್ಲಿ ಮೀಸಲಿರಿಸಿದ್ದ ಆರೋಗ್ಯ ಪರಿಹಾರ ನಿಧಿಯಿಂದ ಹಿರಿಯ ಪತ್ರಕರ್ತರಾದ ಬಸವರಾಜ್ ಹೆಗಡೆ ಹಾಗೂ ಶೇಷು ಅವರಿಗೆ ಪರಿಹಾರದ ಚೆಕ್ ವಿತರಣೆ ಮಾಡಲಾಯಿತು.
ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷರಾದ ಕೆ..ಎನ್.ನವೀನ್ ಕುಮಾರ್ ಹಾಗೂ ಮಾಜಿ ಅಧ್ಯಕ್ಷರಾದ ಬಿ.ಪಿ ಪ್ರಕಾಶ್ ಅವರು, ಪರಿಹಾರದ ಚೆಕ್ ವಿತರಣೆ ಮಾಡಿ ಆರೋಗ್ಯ ವಿಚಾರಿಸಿದರು.
ಬಸವರಾಜ್ ಹೆಗಡೆ ಹಾಗೂ ಶೇಷು ಅವರು ಇತ್ತೀಚೆಗೆ ಅನಾರೋಗ್ಯಕ್ಕೆ ತುತ್ತಾಗಿದ್ದರು. ಜಿಲ್ಲಾ ಸಂಘದ ಮನವಿ ಮೇರೆಗೆ ನಗರ ಸಭೆ ತಲಾ ಹತ್ತು ಸಾವಿರದ ಪರಿಹಾರದ ಚೆಕ್ ಅನ್ನು ನೀಡಿದೆ.
Mandya
ಕರೀಘಟ್ಟ ದೇವರ ಕಾಡು ಅರಣ್ಯ ಪ್ರದೇಶಕ್ಕೆ ಬೆಂಕಿ: 25 ಎಕರೆ ಅರಣ್ಯ ಭಸ್ಮ

ಶ್ರೀರಂಗಪಟ್ಟಣ : ಕರೀಘಟ್ಟ ದೇವರ ಕಾಡು ಅರಣ್ಯ ಪ್ರದೇಶಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು, ಸುಮಾರು 25 ಎಕರೆ ಪ್ರದೇಶದ ಅರಣ್ಯ ಭಸ್ಮವಾಗಿದೆ.
ತಾಲ್ಲೂಕಿನ ಗಣಂಗೂರು ಐಬಿ ಎದುರುಗಿನ ಅರಣ್ಯ ಪ್ರದೇಶಕ್ಕೆ ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿರುವುದರಿಂದ ಅರಣ್ಯ ಪ್ರದೇಶದಲ್ಲಿನ ಮರ, ಗಿಡಗಳು ಸೇರಿದಂತೆ ಪ್ರಾಣಿ ಪಕ್ಷಿಗಳು ಹಾನಿಗೊಳಗಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂಧಿಗಳು ಹಾಗೂ ಅಗ್ನಿಶಾಮಕ ದಳದ ಸಿಬ್ಬಂಧಿಗಳು ಬೆಂಕಿ ನಂದಿಸಿದ್ದಾರೆ.
Mandya
ಫೈನಾನ್ಸ್ ಕಿರುಕುಳದಿಂದ ಮೃತರಾದ ತಾಯಿ-ಮಗನ ಕುಟುಂಬ ಭೇಟಿಯಾದ ಆರ್.ಅಶೋಕ್

ಮಂಡ್ಯ: ಮೈಕ್ರೋ ಫೈನಾನ್ಸ್ ಕಿರುಕಳಕ್ಕೆ ಬೇಸತ್ತು ತಾಯಿ, ಮಗ ಆತ್ಮಹತ್ಯೆ ಮಾಡಿಕೊಂಡದ್ದ ಗ್ರಾಮಕ್ಕೆ ಗುರುವಾರ ಭೇಟಿ ನೀಡಿದ ವಿಪಕ್ಷ ನಾಯಕ ಆರ್.ಅಶೋಕ್ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ್ದಾರೆ.
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಕೊನ್ನಾಪುರ ಗ್ರಾಮದ ಪ್ರೇಮ ಎಂಬವವರು ಉಜ್ಜೀವನ್ ಬ್ಯಾಂಕ್‌ನಲ್ಲಿ 6 ಲಕ್ಷ ಸಾಲ ಪಡೆದು, ಸಾಲ ತೀರಿಸಲಾಗದೆ ಬ್ಯಾಂಕ್ ಸಿಬ್ಬಂದಿಗಳ ಕಾಟದಿಂದ ಮನನೊಂದು ಜ.28 ರಂದು ಆತ್ಮಹತ್ಯೆಗೆ ಶರಣಾಗಿದ್ದರು. ಬಳಿಕ ತಾಯಿ ಸಾವಿನಿಂದ ಮನನೊಂದ ಮಗ ರಂಜಿತ್ ಕೂಡ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಇಂದು (ಫೆ.6) ಗ್ರಾಮಕ್ಕೆ ಭೇಟಿ ನೀಡಿದ ವಿಪಕ್ಷ ನಾಯಕ ಆರ್.ಅಶೋಕ್ ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು. ಜೊತೆಗೆ ಜೆಡಿಎಸ್ ಶಾಸಕ ಡಾ.ಕೆ.ಅನ್ನದಾನಿ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್, ಇಂಡವಾಳು ಸಚ್ಚಿದಾನಂದ ಮತ್ತಿತರರು ಸಾಥ್ ನೀಡಿದರು.
-
State12 hours ago
ಪಕ್ಷದಲ್ಲಿನ ಆಂತರಿಕ ಭಿನ್ನಾಭಿಪ್ರಾಯ ದುರದೃಷ್ಟಕರ: ಬಸವರಾಜ ಬೊಮ್ಮಾಯಿ ಬೇಸರ
-
Kodagu9 hours ago
ಕೊಡವಾಮೆ ಬಾಳೋ ಪಾದಯಾತ್ರೆ: ಮಧ್ಯ ಮಾರಾಟ ನಿಷೇಧ
-
Chamarajanagar9 hours ago
ಚಿಕ್ಕಮಗಳೂರು: ನಕ್ಸಲ್ ರವೀಂದ್ರಗೆ ಸೇರಿದ್ದು ಎನ್ನಲಾದ ಬಂದೂಕು ಪತ್ತೆ?
-
Kodagu13 hours ago
ಫೆ.7 ರ ಕೊಡವ ಪಾದಯಾತ್ರೆಗೆ ಸಿಎನ್ ಸಿ ಬೆಂಬಲ
-
Kodagu8 hours ago
ಕೊಟ್ಟಮುಡಿ ಝೀನತ್ ಯುವಕ ಸಂಘ ಅಧ್ಯಕ್ಷರಾಗಿ ಸೌಕತ್ ಆಯ್ಕೆ
-
Hassan8 hours ago
ಆಸ್ತಿ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಮಾರಾಮಾರಿ
-
Sports10 hours ago
ಏಕದಿನ ಮಾದರಿಗೆ ದಿಢೀರ್ ನಿವೃತ್ತಿ ಘೋಷಿಸಿದ ಆಸೀಸ್ ಆಲ್ರೌಂಡರ್ ಸ್ಟೋಯ್ನಿಸ್
-
Hassan7 hours ago
ಎಂಸಿಇ ಕಾಲೇಜು ಉಪಾಧ್ಯಕ್ಷರಿಗೆ ವೀರಶೈವ ಲಿಂಗಾಯತ ಮಹಾಸಭಾದಿಂದ ಸನ್ಮಾನ