Connect with us

Kodagu

ನಾಪೋಕ್ಲುವಿನಲ್ಲಿ ಗುಡುಗು ಸಹಿತ ಉತ್ತಮ ಮಳೆ -ಬಿಸಿಲ ಬೇಗೆಗೆಯಿಂದ ಬಸವಳಿದಿದ್ದ ಜನರಿಗೆ ಕೃಪೆತೋರಿದ ಮಳೆರಾಯ

Published

on

ನಾಪೋಕ್ಲು : ನಾಪೋಕ್ಲು ವ್ಯಾಪ್ತಿಯಲ್ಲಿ ಏರುತ್ತಿದ್ದ ಬಿಸಿಲಿನ ತಾಪದಿಂದ ಬಸವಳಿದಿದ್ದ ಜನತೆಗೆ ಶುಕ್ರವಾರ ವರುಣ ಕೃಪೆ ತೋರುವ ಮೂಲಕ ಇಳೆಯನ್ನು ತಂಪುಗೊಳಿಸಿದ್ದಾನೆ.

ನಾಪೋಕ್ಲು ವಿಭಾಗದ ಕೆಲವು ಪ್ರದೇಶಗಳಿಗೆ ಶುಕ್ರವಾರ ಮದ್ಯಾಹ್ನ ಗುಡುಗು ಸಹಿತ ಒಂದು ಇಂಚಿಗೂ ಅಧಿಕ ಮಳೆಯಾಗಿದ್ದು ಬಿಸಿಲ ಬೇಗೆಯಲ್ಲಿ ಕಾದ ಭುವಿಗೆ ತಂಪೆರದಂತಾಗಿದೆ.

ನಾಪೋಕ್ಲು ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಬೇತು,ಚೆರಿಯಪರಂಬು, ಕೊಳಕೇರಿ ಎಮ್ಮೆಮಾಡು, ನೆಲೆಜಿ, ಕುಂಜಿಲ ಕಕ್ಕಬ್ಬೆ,ಬಲ್ಲಮಾವಟಿ ಸೇರಿದಂತೆ ವಿಭಾಗದ ಹಲವು ಗ್ರಾಮಗಳಲ್ಲಿ ಉತ್ತಮ ಮಳೆಯಾಗಿದೆ.

ಕಳೆದ ಕೆಲವು ದಿನಗಳಿಂದ ಜಿಲ್ಲೆಯ ವಿವಿಧ ಕಡೆಗಳಲ್ಲಿ ಬಿಸಿಲ ಬೇಗೆ ಹೆಚ್ಚಿದ್ದು ಬಹುತೇಕ ತೋಟಗಳಲ್ಲಿ ಕಾಫಿಗಿಡ,ಕಾಳು ಮೆಣಸು ಬಳ್ಳಿಗಳು ಬಿಸಿಲಿನ ತಾಪಕ್ಕೆ ಕುರುಟಿ ಹೋಗಿದ್ದವು. ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯ ಕೆಲವು ಭಾಗಗಳಲ್ಲಿ ಉತ್ತಮ ಮಳೆಯಾದರೆ,ನಾಪೋಕ್ಲು ಭಾಗದಲ್ಲಿ ಅಲ್ಪ ಪ್ರಮಾಣದಲ್ಲಿ ಮಳೆಯಾಗಿತ್ತು.ಶುಕ್ರವಾರ ಸುರಿದ ಉತ್ತಮ ಮಳೆಯಿಂದ ಸ್ವಲ್ಪ ಮಟ್ಟಿಗೆ ರೈತರಲ್ಲಿ ನೆಮ್ಮದಿ ತಂದಿದೆ.

ಜಿಲ್ಲೆಯಲ್ಲಿ ಕಾಫಿ ಹಾಗೂ ಕಾಳು ಮೆಣಸಿನ ಬಳ್ಳಿಗಳಿಗೆ ಬೇಸಿಗೆ ಅವಧಿಯಲ್ಲಿ ಉತ್ತಮ ಮಳೆಯ ಅವಶ್ಯಕತೆ ಇದ್ದು, ಈ ವರ್ಷದ ಮಳೆಯಿಂದ ಬೆಳೆಗಾರರು ವಂಚಿತರಾಗಿದ್ದರು.ಶುಕ್ರವಾರ ನಾಪೋಕ್ಲು ಕೆಲವು ಭಾಗಗಳಲ್ಲಿ ಸುರಿದ ಮಳೆಯಿಂದ ಬೆಳೆಗಾರರಿಗೆ ಅಲ್ಪ ಪ್ರಮಾಣದಲ್ಲಿ ಖುಷಿ ತಂದಿದೆ.

ನಾಪೋಕ್ಲು ವಿಭಾಗದಲ್ಲಿ ಮಳೆ ಇಲ್ಲದೆ ಕೃಷಿ ಚಟುವಟಿಕೆಗಳಿಗೆ ಮತ್ತು ಕುಡಿಯುವ ನೀರಿಗೂ ಜನರು ಸಮಸ್ಯೆಗಳನ್ನು ಎದುರಿಸುವಂತ್ತಾಗಿದೆ. ಕಾವೇರಿ ನದಿ ಸೇರಿದಂತೆ ವ್ಯಾಪ್ತಿಯ ಇನ್ನಿತರ ನದಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಶುಕ್ರವಾರ ಸುರಿದ ಮಳೆ ಜನರ ಸಮಸ್ಯೆಯನ್ನು ಕೊಂಚ ಮಟ್ಟಿಗೆ ಬಗೆಹರಿಸಿದ್ದು ಮುಂದೆ ಉತ್ತಮ ಮಳೆ ಯಾಗುವ ನಿರೀಕ್ಷೆ ಮೂಡಿಸಿದೆ.

Continue Reading
Click to comment

Leave a Reply

Your email address will not be published. Required fields are marked *

Kodagu

ಕಸ ವಿಲೇವಾರಿಗೆ ವಿರೋಧ: 4ನೇ ದಿನಕ್ಕೆ ಮುಂದುವರಿದ ಅಹೋರಾತ್ರಿ ಪ್ರತಿಭಟನೆ

Published

on

ಸಿದ್ದಾಪುರ: ವೀರಾಜಪೇಟೆ ತಾಲ್ಲೂಕಿನ, ಮಾಲ್ದಾರೆ ಗ್ರಾಮ ಪಂಚಾಯಿತಿ ಚೊಟ್ಟೆಪಾಳಿ (ಕಲ್ಲಳ್ಳ) ಜಾಗದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ನೂತನವಾಗಿ ಕಸವಿಲೇವಾರಿ ಕೇಂದ್ರ ನಿರ್ಮಿಸಲು ಮುಂದಾಗಿರುವ ಕ್ರಮವನ್ನು ಖಂಡಿಸಿ ಬಹುಜನ ಸಮಾಜ ಪಾರ್ಟಿ ನೇತ್ರತ್ವದಲ್ಲಿ ಮಾಲ್ದಾರೆ ಗ್ರಾಮ ಪಂಚಾಯತಿ ಮುಂದೆ ನಾಲ್ಕನೇ ದಿನ ಅಹೋರಾತ್ರಿ ಪ್ರತಿಭಟನೆ ಮುಂದುವರೆದಿದೆ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಬರಬೇಕೆಂದು ಒತ್ತಾಯಿಸಿದ್ದಾರೆ.

ಬಹುಜನ ಸಮಾಜ ಪಾರ್ಟಿ ಜಿಲ್ಲಾಧ್ಯಕ್ಷ ದಿವಿಲ್ ಕುಮಾರ್ ಮಾತನಾಡಿ ಮಾಲ್ದಾರೆ ಗ್ರಾಮ ಪಂಚಾಯತಿ ಮುಂದೆ ನಡೆಯುತ್ತಿರುವ ಆಹೋರಾತ್ರಿ ಪ್ರತಿಭಟನೆ ನಾಲ್ಕನೇ ದಿನಕ್ಕೂ ಮುಂದುವರೆದಿದ್ದು ನಮ್ಮ ಮನವಿಗೆ ಮತ್ತು ಹೋರಾಟಕ್ಕೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಆಡಳಿತ ನಡೆಸುವ ಸರ್ಕಾರ ವಿರುದ್ಧ ಇಂದಿನಿಂದ ಉಪವಾಸ ಸತ್ಯಾಗ್ರಹ ಮಾಡಲಾಗುವುದು ಈ ಹೋರಾಟದಲ್ಲಿ ಬಡವರು ಹಾಗೂ ಕೂಲಿ ಕಾರ್ಮಿಕರಿಗೆ ಏನೇ ಹೆಚ್ಚು ಕಮ್ಮಿಯದಲ್ಲಿ ಸಂಬಂಧಪಟ್ಟ ಅಧಿಕಾರಿಗಳೇ ನೇರ ಹೊಣೆ ಹಾಗೂ ಜಿಲ್ಲಾಧಿಕಾರಿ ಸ್ಥಳಕ್ಕೆ ಬಂದು ಬೇಡಿಕೆ ಈಡೇರಿಸುವವರೆಗೂ ಪ್ರತಿಭಟನೆ ಮುಂದುವರೆಯಲಿದೆ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆ ವೇಳೆ ಅಧಿಕಾರಿಗಳು ಹಾಗೂ ಆಡಳಿತದ ವ್ಯವಸ್ಥೆಯ ವಿರುದ್ಧ ಧಿಕ್ಕಾರ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಹಾಗೂ ಪೊನ್ನಂಪೇಟೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ತೆಜರಾಜ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು ಪ್ರತಿಭಟನೆಗಾರರು ಮನವಿ ಪತ್ರ ಇದೆ ಸಂದರ್ಭ ನೀಡಿದರು.

ಪ್ರತಿಭಟನೆಯಲ್ಲಿ ಬ್ರಿಗೇಡ್ ಸಂಘಟನೆಯ ರಾಜ್ಯಾಧ್ಯಕ್ಷ ರೇವತಿ ರಾಜ್, ಬಹುಜನ ಭಾಗ್ಯ ವಿಧಾತಾ ವೇದಿಕೆ ಸಂಘಟನೆಯ ರಾಜ್ಯಾಧ್ಯಕ್ಷ ಚೇತನ್ ಕುಮಾರ್, ಹಾಗೂ ಸ್ಥಳೀಯ ಕಾಫಿ ಬೆಳೆಗಾರರಾದ ಬೋಪಣ್ಣ, ರಾಮಚಂದ್ರ, ವಿಷ್ಣು, ರೋಹನ್,ಸೇದಂತೆ ವಿವಿಧ ಸಂಘ ಸಂಸ್ಥೆಗಳ ಮುಖಂಡರುಗಳು  ಹಾಜರಿದ್ದರು

Continue Reading

Kodagu

ಭೀಕರ ರಸ್ತೆ ಅಪಘಾತ – ಬೈಕ್ ಸವಾರ ದುರ್ಮರಣ

Published

on

ಮಡಿಕೇರಿ : ಮಡಿಕೇರಿ ಕಾಟಕೇರಿ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಲಾರಿ ಅಡಿಗೆ ಸಿಲುಕಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ಮಡಿಕೇರಿ-ಮಂಗಳೂರು ಮುಖ್ಯರಸ್ತೆಯ ಕಾಟಕೇರಿ ಬಳಿಯ ಪ್ರಶಾಂತಿ ಹೋಂ ಸ್ಟೇ ಎದುರು ನಡೆದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಬೈಕ್ ಸವಾರ ನಾಪೋಕ್ಲು ಬಳಿಯ ಕಕ್ಕಬ್ಬೆ ನಿವಾಸಿ ಬೆಟ್ಟಗೇರಿಯಲ್ಲಿ ವಾಸವಿರುವ ಶರತ್ (28) ಮೃತ ವ್ಯಕ್ತಿ.
ಮಡಿಕೇರಿ ಮಂಗಳೂರು ಮುಖ್ಯರಸ್ತೆಯಲ್ಲಿ ಕಾರನ್ನು ಹಿಂದಿಕ್ಕಿ ಹೋಗುತ್ತಿದ್ದಾಗ ಲಾರಿ ಅಡಿಗೆ ಬಿದ್ದ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಘಟನಾ ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Continue Reading

Kodagu

ವಿದ್ಯಾರ್ಥಿನಿ ಗಾಯತ್ರಿಗೆ ಸನ್ಮಾನ

Published

on

ಕುಶಾಲನಗರ : ಕುಶಾಲನಗರ ನಳಂದ ಇಂಟರ್ನ್ಯಾಷನಲ್ ಪಿಯು ಕಾಲೇಜಿನ ದ್ವಿತೀಯ ಪಿಯು (ವಿಜ್ಞಾನ) ವಿದ್ಯಾರ್ಥಿನಿ ಗಾಯತ್ರಿ ಕೆ 2023-24 ನೇ ಸಾಲಿನಲ್ಲಿ ನಡೆದ ದ್ವಿತೀಯ ಪಿಯು ಪರೀಕ್ಷೆಯಲ್ಲಿ ರಾಜ್ಯಕ್ಕೆ ಎರಡನೇ ರ್ಯಾಂಕ್ ಪಡೆದಿರುತಾರೆ. ಇವರು 600 ಕ್ಕೆ 597 ಅಂಕಗಳನ್ನು ಗಳಿಸಿದ್ದು, ಈ ಸಾಧನೆಗಾಗಿ ವಿದ್ಯಾರ್ಥಿಯನ್ನು ಕಾಲೇಜು ವತಿಯಿಂದ ಸನ್ಮಾನಿಸಲಾಯಿತು.


ಕಾರ್ಯಕ್ರಮದಲ್ಲಿ ವಸತಿ ನಿರ್ದೇಶಕ ನಾಮ್ಗಿಲ್ ಎನ್, ಶೈಕ್ಷಣಿಕ ಸಲಹೆಗಾರ ಎಫ್ ಎ ಎಸ್ ಸುರೇಂದ್ರ, ಪ್ರಾಂಶುಪಾಲ ಷಜಿ ಅಲುಂಗಲ್ ಜೋಸೆಫ್, ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಸಮ್ಮುಖದಲ್ಲಿ ಕವಿತಾ ಸತಪನ್, ಗಾಯತ್ರಿಯವರಿಗೆ ಪ್ರಶಸ್ತಿ ಯನ್ನು ನೀಡಿ ತಲಾ 2 ಲಕ್ಷ ರೂಪಾಯಿಯ ಚೆಕ್ ಅನ್ನು ಹಸ್ತಾಂತರಿಸಿ ಗಾಯತ್ರಿಯನ್ನು ಸನ್ಮಾನ ಮಾಡಿದರು.

Continue Reading

Trending

error: Content is protected !!