Mysore
ನಂಜನಗೂಡು ಫುಡ್‌ಜೋನ್ ಉದ್ಘಾಟಿಸಿದ ಶಾಸಕ ದರ್ಶನ್ ಧ್ರುವ

ವರದಿ: ನಂಜನಗೂಡು ಮಹದೇವಸ್ವಾಮಿ ಪಟೇಲ್
ನಂಜನಗೂಡು: ನಗರಸಭೆ ವತಿಯಿಂದ ಸೋಮವಾರ ನಗರದ 6ನೇ ಕ್ರಾಸ್ ನಿಂದ 9ನೇ ಕ್ರಾಸ್ ವರೆಗೆ ಕವರ್ ಡೆಕ್ ನಲ್ಲಿ ಫುಡ್ ಜೋನ್ (ಫುಡ್ ಸ್ಟ್ರೀಟ್ ) ಅನ್ನು ಉದ್ಘಾಟನೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ನಂಜನಗೂಡು ಕ್ಷೇತ್ರದ ಯುವ ಶಾಸಕರಾದ ದರ್ಶನ್ ಧ್ರುವನಾರಾಯಣ್, ಮತ್ತು ಗುಂಡ್ಲುಪೇಟೆ ಶಾಸಕರಾದ ಗಣೇಶ್ ಪ್ರಸಾದ್ ಅವರು ಜೊತೆಗೂಡಿ ಮಂಗಳವಾರ (ಫೆ.4) ಫುಡ್ ಜೋನ್ ಉದ್ಘಾಟನೆ ಮಾಡಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಶಾಸಕ ದರ್ಶನ್ ಧ್ರುವ, ಎಲ್ಲರ ಸಹಕಾರದಿಂದ ಮತ್ತು ನಗರಸಭೆ ವತಿಯಿಂದ ಫುಡ್ ಜೋನ್ ಯೋಜನೆಯನ್ನು ಜಾರಿ ಮಾಡಿದ್ದಾರೆ. ರಸ್ತೆ ಬೀದಿ ವ್ಯಾಪಾರಸ್ಥರು ಇದನ್ನು ಸದು ಉಪಯೋಗಿಸಿಕೊಳ್ಳಿ ಎಂದರು. ನಗರ ಸಭೆ ಒಂದು ಚಿಂತನೆ ಇಟ್ಟುಕೊಂಡು ಪ್ರತ್ಯೇಕವಾಗಿ ಫುಡ್ ಜೋನ್ ಕಲ್ಪಿಸಿ ಕೊಟ್ಟಿದ್ದಾರೆ. ಸ್ವಚ್ಛತೆ ಕಾಪಾಡಿಕೊಳ್ಳಿ. ಮೊದಲನೇ ಹಂತ ಎಲ್ಲೆಲ್ಲಿ ಟ್ರಾಫಿಕ್ ಆಗುತ್ತದೆ ಅದನ್ನು ತಪ್ಪಿಸಲು, ರಸ್ತೆ ಬದಿ ವ್ಯಾಪಾರಸ್ಥರಿಗೆ ಒಂದನೇ ಹಂತವಾಗಿ ಉತ್ತಮ ಜಾಗವನ್ನು ಕಲ್ಪಿಸಿ ಕೊಟ್ಟಿದ್ದೇವೆ. ಎಲ್ಲರೂ ಒಂದೇ ಕಡೆ ಸೇರಿದರೆ ವ್ಯಾಪಾರ ಚೆನ್ನಾಗಿ ಆಗುತ್ತದೆ. ನಗರಸಭೆ ವತಿಯಿಂದ ಇನ್ನು ಹೆಚ್ಚು ಮೂಲಸೌಕರ್ಗಳನ್ನು ಒದಗಿಸಿಕೊಡುತ್ತಾರೆ ಸ್ವಚ್ಛತೆಯನ್ನು ಕಾಪಾಡಿಕೊಳ್ಳಿ ಎಂದು ಸಲಹೆ ನೀಡಿದರು.
ಗುಂಡ್ಲುಪೇಟೆ ಶಾಸಕ ಗಣೇಶ್ ಪ್ರಸಾದ್ ಮಾತನಾಡಿ, ಮೈಸೂರು ಜಿಲ್ಲೆಗೆ ತಾಲ್ಲೂಕುಗಳಲ್ಲಿ ನಂಜನಗೂಡು ಪ್ರಪ್ರಥಮವಾಗಿ ಫುಡ್ ಸ್ಟ್ರೀಟ್ ಯೋಜನೆಯನ್ನು ತಂದಿರುವುದು ನನಗೆ ಬಹಳ ಸಂತೋಷಕರವಾಯಿತು. ನನ್ನ ಕ್ಷೇತ್ರದಲ್ಲೂ ಈ ಯೋಜನೆ ತರುತ್ತೇನೆ. ಎಂದು ಕ್ಷೇತ್ರದ ಶಾಸಕ ದರ್ಶನ್ ಧ್ರುವನಾರಾಯಣ್ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.ಸಾರ್ವಜನಿಕರು ಸದುಪಯೋಗವನ್ನು ಪಡೆದುಕೊಂಡು ಸ್ವಚ್ಛತೆ ಕಾಪಾಡಿ ಎಂದು ಕಿವಿಮಾತು ಹೇಳಿದರು,
ಪೌರಾಯುಕ್ತ ವಿಜಯ್ ಮಾತನಾಡಿ ನಂಜನಗೂಡು ನಗರಸಭೆ ವತಿಯಿಂದ ಉತ್ತಮ ಬೆಳವಣಿಗೆ ಹಮ್ಮಿಕೊಂಡಿದ್ದು, 2018ರ ಸಾಲಿನಲ್ಲಿ ರಸ್ತೆ ಬೀದಿ ವ್ಯಾಪಾರಸ್ಥ ಕಾಯ್ದೆ ಹೊಸದಾಗಿ ರಚನೆಯಾಗಿತ್ತು. ಅವತ್ತಿನ ನಿಂದ ಇವತ್ತಿನವರೆಗೂ ಫುಡ್ ಜೋನ್ ಕಲ್ಪಿಸಲು ಆಗಿರಲಿಲ್ಲ. ಆ ಯೋಜನೆಯ ಜಾರಿಯನ್ನು ಈ ವರ್ಷದ 2025 ರಂದು ಎಲ್ಲರ ಸಹಕಾರದಿಂದ ಫುಡ್ ಜೋನ್ ಗೆ ಚಾಲನೆ ಕೊಟ್ಟಿದ್ದೇವೆ. ಯಾರ ಉದ್ದೇಶಕ್ಕೆ ಮತ್ತು ಯಾರ ವೈಯಕ್ತಿ ಗೋಸ್ಕರ ಆಗಿಲ್ಲ.2018 ರ ಕಾಯ್ದೆ ಪಾಲನೆ ಮಾಡಿದ್ದೇವೆ. ಏನೇನು ಮೂಲಭೂತ ಸೌಕರ್ಯಗಳನ್ನು ಕೊಡಬೇಕು ಅದನ್ನು ಚಾಚು ತಪ್ಪದೇ ತಲ್ಪಸುತ್ತೇವೆ. ಶಾಸಕರು ನಿರ್ದೇಶನ ಕೊಟ್ಟಿದ್ದಾರೆ ಎಂದರು. ನಗರಸಭಾ ವತಿಯಿಂದ ಜವಾಬ್ದಾರಿ ತೆಗೆದು ಕೊಂಡು ಸಂಚಾರಕ್ಕೆ ಮತ್ತು ವ್ಯಾಪಾರಸ್ಥರಿಗೆ ಜನರು ಹೋಗಿ ಬಂದು ಜನರು ತಿಂಡಿ ತಿನ್ನಬಹುದು ಎಂದು ಹೇಳಿದರು.
ಸಾರ್ವಜನಿಕರು ಇದನ್ನು ಸದುಪಯೋಗ ಪಡೆದುಕೊಳ್ಳಿ ಮತ್ತು ಸ್ವಚ್ಛತೆ ಕಾಪಾಡಿಕೊಳ್ಳಿ ನಗರಸಭೆ ನಿಮ್ಮ ಜೊತೆ ಇರುತ್ತದೆ. ಸ್ವಚ್ಛತೆ ಕಾಪಾಡಿ “ಕಸ ಕೊಟ್ಟರೆ” “ಕೈ ಮುಗಿವೆ” ಎಂದು ಅವರ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಕಳಲೆ ಕೇಶವಮೂರ್ತಿ, ನಗರಸಭೆ ಅಧ್ಯಕ್ಷರಾದ ಶ್ರೀಕಂಠ ಸ್ವಾಮಿ ,ಉಪಾಧ್ಯಕ್ಷರಾದ ರಿಯಾನಾ ಬಾನು, ನಗರಸಭೆ ಪೌರಯುಕ್ತರಾದ ವಿಜಯ್,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹೇಶ್ , ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್, ನಗರಸಭಾ ಸದಸ್ಯರಾದ ಬಸವರಾಜು, ರವಿ, ಮಂಗಳಮ್ಮ , ಗಾಯತ್ರಿ, ಶ್ವೇತಾ ಲಕ್ಷ್ಮಿ, ವಿಜಯ ಲಕ್ಶ್ಮೀ, ಮೀನಾಕ್ಷಿ ನಾಗರಾಜ್, ಗಂಗಾಧರ್, ಯೋಗೀಶ್, ಪ್ರದೀಪ್, ಮಹೇಶ್, ದೀಪು, ಸೇರಿದಂತೆ ಹಲವು ಮುಖಂಡರು ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
Mysore
ವಚನಗಳು ಮನುಷ್ಯನ ಆದರ್ಶ ಬದುಕಿಗೆ ದಾರಿದೀಪವಾಗಿವೆ: ಅರಳಿ ನಾಗರಾಜ್

ವರದಿ: ಚನ್ನಬಸವಣ್ಣ
ತಿ.ನರಸೀಪುರ: ವಚನಗಳು ಮನುಷ್ಯನ ಆದರ್ಶ ಬದುಕಿಗೆ ದಾರಿದೀಪವಾಗಿವೆ ಎಂದು ನಿವೃತ್ತ ನ್ಯಾಯಾಧೀಶ ಅರಳಿ ನಾಗರಾಜ್ ಹೇಳಿದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಮೈಸೂರು,ತಾಲೂಕು ಶರಣ ಸಾಹಿತ್ಯ ಪರಿಷತ್ತು ತಿ.ನರಸೀಪುರ ಹಾಗೂ ಗ್ರಾಮ ವಿದ್ಯೋದಯ ಸಂಘ ಇವರ ಸಹಯೋಗದಲ್ಲಿ ಶನಿವಾರ ವಿದ್ಯೋದಯ ಕಾಲೇಜು ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ದತ್ತಿ ಉಪನ್ಯಾಸ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಹೆತ್ತ ತಂದೆ ತಾಯಿಯರು,ವಿದ್ಯೆ ಕಲಿಸಿದ ಗುರುಗಳು ಸರಿಯಾದ ಮಾರ್ಗದರ್ಶನ ನೀಡುತ್ತಾರೋ ಗೊತ್ತಿಲ್ಲ,ಆದರೆ ವಚನಗಳು ಉತ್ತಮ,ಆದರ್ಶ ಬದುಕಿಗೆ ದಾರಿ ಮಾಡಿಕೊಡುವುದರಿಂದ ವಚನಗಳನ್ನು ಪ್ರತಿಯೊಬ್ಬರು ಕಲಿತು ಸಂಧರ್ಭ ಬಂದಾಗ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಮಕ್ಕಳು ಸಂಸ್ಕಾರವಂತರಾಗಬೇಕು, ತಂದೆ– ತಾಯಿ, ಗುರು ಹಿರಿಯರನ್ನು ಗೌರವಿಸಬೇಕು,.ಬಸವಣ್ಣ ತಮ್ಮ ವಚನಗಳ ಸಂದೇಶಗಳಲ್ಲಿ ಬಹಿರಂಗ ಶುದ್ಧಿಗೆ ನೀಡಿದಷ್ಟೇ ಪ್ರಾಧಾನ್ಯತೆಯನ್ನು ಅಂತರಂಗ ಶುದ್ಧಿಗೂ ನೀಡಿದ್ದರು. ವಚನಗಳ ಆದರ್ಶಗಳನ್ನು ಜನರು ಮೈಗೂಡಿಸಿಕೊಳ್ಳುವ ಮೂಲಕ ಸಾತ್ವಿಕ ಬದುಕು ಕಟ್ಟಿಕೊಳ್ಳಬಹುದಾಗಿದೆ ಎಂದು ಸಲಹೆ ನೀಡಿದರು
ಸಂಸ್ಕಾರದಿಂದ ಬದುಕು ಸಾರ್ಥಕವಾಗುತ್ತದೆ. ಆಧುನಿಕತೆಯ ಭರಾಟೆಯಲ್ಲಿ ಕಳೆದು ಹೋಗುತ್ತಿರುವ ಇಂದಿನ ಪೀಳಿಗೆಯವರಿಗೆ ಸಂಸ್ಕಾರ ಅಗತ್ಯವಿದೆ. ಈ ನಿಟ್ಟಿನಲ್ಲಿ ತಾಯಂದಿರ ಪಾತ್ರ ಮಹತ್ತರವಾಗಿದೆ. ಜೀವನದ ನಿಜ ಸತ್ಯ, ಅಂಕು-ಡೊಂಕುಗಳನ್ನು ತಿದ್ದಿ ಹೇಳುವುದು ಹಿರಿಯರ ಕೆಲಸ. ಅದನ್ನು ಪಾಲಿಸುವುದು, ಆಚರಣೆಗೆ ತರುವುದು ಕಿರಿಯರ ಜವಾಬ್ದಾರಿ ಎಂದು ಹೇಳಿದರು.
ಖೋ ಖೋ ವಿಶ್ವ ಕಪ್ ಪಂದ್ಯಾವಳಿಯಲ್ಲಿ ಉತ್ತಮ ಸಾಧನೆ ತೋರಿದ ಚೈತ್ರಾರನ್ನು ಸನ್ಮಾನಿಸಿ ಮಾತನಾಡಿದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹೆಳವರ ಹುಂಡಿ ಸಿದ್ದಪ್ಪ ಮಾತನಾಡಿ ಬಸವಾದಿ ಶರಣರು ತಮ್ಮ ವಚನ ಸಾಹಿತ್ಯದಲ್ಲಿ ಜನಸಾಮಾನ್ಯರಿಗೆ ಅರ್ಥವಾಗುವ ಭಾಷೆಯನ್ನು ಕೊಟ್ಟು ಕನ್ನಡ ಭಾಷೆಯ ಹಿರಿಮೆ ಗರಿಮೆ ಹೆಚ್ಚಿಸಿದರು. ಶರಣರು ತಮ್ಮ ವಚನಗಳ ಮೂಲಕ ಸರಳವಾಗಿ ಜೀವನಮೌಲ್ಯ, ವೈಚಾರಿಕ ಬದುಕು, ಮೌಢ್ಯಗಳ ಧಿಕ್ಕಾರವನ್ನು ಹರಡಿದರು ಎಂದರು.
ಕೇಂದ್ರ ಸರ್ಕಾರ ಅರ್ಜುನ, ರಾಜ್ಯ ಏಕಲವ್ಯ ಪ್ರಶಸ್ತಿ ನೀಡಲಿ: ಖೋ ಖೋ ವಿಶ್ವ ಕಪ್ ಪಂದ್ಯಾವಳಿಯಲ್ಲಿ ರಾಷ್ಟ್ರದ ಹಿರಿಮೆಯನ್ನು ಪ್ರಪಂಚಕ್ಕೆ ಕೊಂಡೊಯ್ದು ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ನಮ್ಮ ತಾಲೂಕಿನ ಹೆಮ್ಮೆಯ ಕುವರಿ ಚೈತ್ರಾರವರಿಗೆ ರಾಜ್ಯ ಸರ್ಕಾರ 5 ಲಕ್ಷ ರೂ.ಗಳನ್ನು ನೀಡಿರುವುದು ಸರಿಯಲ್ಲ. ಮಹಾರಾಷ್ಟ್ರ ಸರ್ಕಾರವು ಅಲ್ಲಿನ ಕ್ರೀಡಾ ಪಟುಗಳಿಗೆ 2.25 ಕೋಟಿ ರೂ,ಹಾಗು ಮದ್ಯ ಪ್ರದೇಶ ಸರ್ಕಾರ 1.50 ಕೋಟಿ ರೂ.ಗಳನ್ನು ಕೊಟ್ಟು ಸಾಧನೆಗೆ ಪ್ರೋತ್ಸಾಹ ನೀಡಿದೆ.ಆದರೆ ರಾಜ್ಯ ಸರ್ಕಾರ ಮಾತ್ರ ಕ್ರೀಡಾಪಟುಗಳಿಗೆ ಉತ್ತೇಜನ ನೀಡುತ್ತಿಲ್ಲ.ಇಂತಹ ವ್ಯವಸ್ಥೆಯಲ್ಲಿ ಕ್ರೀಡಾಪಟುಗಳು ಸಾಧನೆ ಮಾಡುವುದಾದರು ಹೇಗೆ ಎಂದು ಬೇಸರ ವ್ಯಕ್ತ ಪಡಿಸಿದ ಸಿದ್ದಪ್ಪ ಕೇಂದ್ರ ಸರ್ಕಾರ ಅರ್ಜುನ ಪ್ರಶಸ್ತಿ ಹಾಗು ರಾಜ್ಯ ಸರ್ಕಾರ ನೀಡುವ ಅಭಿಮನ್ಯು ಪ್ರಶಸ್ತಿಯನ್ನು ಚೈತ್ರಾ ರಿಗೆ ನೀಡಿ ಗೌರವಿಸಬೇಕೆಂದು ಒತ್ತಾಯಿಸಿದರು.
ಶಿಕ್ಷಣ ಊಟದಂತೆ, ಕ್ರೀಡೆ ಉಪ್ಪಿನ ಕಾಯಿ ಇದ್ದಂತೆ: ಸನ್ಮಾನ ಸ್ವೀಕರಿಸಿ ಮಾತನಾಡಿದ ವಿಶ್ವ ಕಪ್ ಖೋ ಖೋ ಆಟಗಾರ್ತಿ ಬಿ.ಚೈತ್ರಾ ಶಿಕ್ಷಣ ಊಟ ಇದ್ದಂತೆ,ಕ್ರೀಡೆ ಉಪ್ಪಿನ ಕಾಯಿ ಇದ್ದಂತೆ,ಹಾಗಾಗಿ ಶಿಕ್ಷಣದೊಂದಿಗೆ ಕ್ರೀಡೆಯಲ್ಲೂ ಹೆಚ್ಚಿನ ರೀತಿಯಲ್ಲಿ ವಿದ್ಯಾರ್ಥಿಗಳು ತೊಡಗಿಕೊಂಡು ಯಶಸ್ಸು ಸಾಧಿಸಬೇಕು. ಬರೀ ಕ್ರೀಡೆ ಮಾತ್ರವೇ ಅಲ್ಲದೇ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಪ್ರತಿಭೆಯನ್ನು ಅನಾವರಣ ಮಾಡಬೇಕಿದೆ ಎಂದರು.
ಜೀವನದಲ್ಲಿ ಸೋಲು ಗೆಲುವು ಎಂಬುದು ಆಟದ ತರಹ,ಗೆದ್ದವರಿಗೆ ಮತ್ತೆ ಸೋಲಬಾರದೆಂಬ ಛಲವಿದ್ದರೆ, ಸೋತವರಿಗೆ ಗೆಲ್ಲಲೇ ಬೇಕೆಂಬ ಛಲವಿರುತ್ತೆ. ನಾನೂ ಕೂಡ ಸೋತು ಸೋತು ನಂತರ ಗೆದ್ದು ವಿಶ್ವಕಪ್ ನಲ್ಲಿ ಯಶಸ್ಸು ಗಳಿಸಿದ್ದೇನೆ ಸತತ ಪ್ರಯತ್ನದಿಂದ ಗೆಲುವು ಸಾಧ್ಯ ಎಂದರು.
ವಾಟಾಳು ಮಠದ ಶ್ರೀ ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಜಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದರು.
ಇದೇ ವೇಳೆ ಪಿ ಕಾರ್ಡ್ ಬ್ಯಾಂಕಿನ ನಿರ್ದೇಶಕರಾಗಿ ಚುನಾವಣೆಯಲ್ಲಿ ಆಯ್ಕೆಯಾದ ಮಾಡ್ರಹಳ್ಳಿ ಎಂ.ಶಿವಮೂರ್ತಿ, ಎನ್.ಎನ್.ಮಹದೇವಸ್ವಾಮಿ ಹಾಗೂ ಮಹೇಶ್ ಅವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ವಿದ್ಯೋದಯ ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿ ಕೆ.ಪಿ. ಮಹದೇವಸ್ವಾಮಿ, ಶರಣ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷ ಚಂದ್ರಶೇಖರ್,ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸೋಮಶೇಖರಪ್ಪ, ಉಪಾಧ್ಯಕ್ಷ ಮಹದೇವಸ್ವಾಮಿ,ವೀರಶೈವ ಮಹಾಸಭಾದ ಅಧ್ಯಕ್ಷ ಎಸ್ ಎಂ ಆರ್ ಪ್ರಕಾಶ್,ಕ್ಷೇತ್ರ ಬಿಜೆಪಿ ಅಧ್ಯಕ್ಷ ಸತ್ಯಪ್ಪ, ಬೆನಕನಹಳ್ಳಿ ಪ್ರಭುಸ್ವಾಮಿ, ಮೂಗೂರು ಕುಮಾರಸ್ವಾಮಿ, ರಾಜಶೇಖರ್, ಅಡಿಟರ್ ಮಂಜುನಾಥ್, ಬಸವ ಬಳಗದ ಅಧ್ಯಕ್ಷ ಪರಮೇಶ್ ಪಟೇಲ್, ಸೀಹಳ್ಳಿ ಗುರುಮೂರ್ತಿ,ಮೆಡಿಕಲ್ ಕುಮಾರ್, ಕೆಇಬಿ ನಿವೃತ್ತ ನೌಕರ ಸಿದ್ದಲಿಂಗಸ್ವಾಮಿ ಮತ್ತಿತರಿದ್ದರು.
Mysore
65 ಕೋಟಿ ವೆಚ್ಚದಲ್ಲಿ ಸರ್ಕಾರಿ ಆಸ್ಪತ್ರೆ ನಿರ್ಮಾಣ: ಶಾಸಕ ಡಿ.ರವಿಶಂಕರ್ ಭರವಸೆ

ವರದಿ: ಎಸ್ ಬಿ ಹರೀಶ್ ಸಾಲಿಗ್ರಾಮ
ಸಾಲಿಗ್ರಾಮ: 65 ಕೋಟಿ ರೂಗಳ ವೆಚ್ಚದಲ್ಲಿ ತಾಲೂಕು ಸರ್ಕಾರಿ ಆಸ್ಪತ್ರೆ ಮಾಡಲಾಗುವುದು ಎಂದು ಶಾಸಕ ಡಿ. ರವಿಶಂಕರ್ ಹೇಳಿದರು.
ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನೂತನವಾಗಿ ಸ್ಥಾಪಿಸಲಾಗಿರುವ ಡಯಾಲಿಸಿಸ್ ಘಟಕವನ್ನು ಉದ್ಘಾಟಿಸಿ ಮಾತನಾಡಿ, ಇದು ಕೇಂದ್ರ ಬಿಂದುವಾಗಿರುವ ಕಾರಣ ಮಹಿಳೆಯರೇ ಜಾಸ್ತಿ ಆಸ್ಪತ್ರೆಗೆ ಬರುತ್ತಾರೆ. ಹಾಗಾಗಿ ಅನುಕೂಲಕ್ಕಾಗಿ ಹೆಚ್ಚಾಗಿ ವೈದ್ಯರುಗಳ ನೇಮಕ ಮಾಡಿ, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ತೆರೆಯಲಾಗುವುದು. ಹಲವು ರೀತಿಯ ಸಮಸ್ಯೆಗಳು ಈ ಆಸ್ಪತ್ರೆಯಲ್ಲಿ ಇವೆ, ಅರೋಗ್ಯ ಸಚಿವರಿಗೆ ಮನವಿ ಮಾಡಿ ಸಮಸ್ಯೆ ಬಗ್ಗೆ ಹರಿಸಲಾಗುವುದು ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳ ಸಭೆ ಕರೆದು ಈ ನೂತನ ತಾಲೂಕಿಗೆ ಬೇಕಾಗಿರುವ, ತಾಲೂಕು ಪಂಚಾಯತಿ ಕಟ್ಟಡ, ಮಿನಿ ವಿಧಾನಸೌಧ ಸೇರಿದಂತೆ ಎಲ್ಲಾ ರೀತಿಯ ಕಟ್ಟಡಗಳನ್ನು ನಿರ್ಮಿಸಲು ಸೂಚನೆ ನೀಡಿದ್ದಾರೆ. ಈ ತಾಲೂಕಿನ ಸಂಪೂರ್ಣ ಜವಾಬ್ದಾರಿ ನನ್ನ ಮೇಲೆ ಇದೆ ನಾನು ಹಂತ ಹಂತವಾಗಿ ಏನೇ ಸಮಸ್ಯೆಗಳಿದ್ದರೂ ಬಗೆಹರಿಸುತ್ತೇನೆ ಇದು ಶತಸಿದ್ದ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಡಿಹೆಚ್‌ಓ ಡಾ.ಕುಮಾರಸ್ವಾಮಿ, ಟಿಹೆಚ್‌ಓ ಡಾ.ನಟರಾಜ್, ತಹಶೀಲ್ದಾರ್ ನರಗುಂದ, ತಾಲೂಕು ಪಂಚಾಯತಿ ಇಓ ರವಿಕುಮಾರ್, ಸಾಲಿಗ್ರಾಮ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅಶೋಕ್, ತಜ್ಞ ವೈದ್ಯ ಡಾ.ಮಂಜುನಾಥ್, ಡಾ.ಕೀರ್ತಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಉದಯಶಂಕರ್, ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಎಲ್.ಎಂ.ಸಣ್ಣಪ್ಪ, ಮಂಜೇಗೌಡ, ಬಸವರಾಜು, ಅಶ್ವಿನಿ, ದಿನೇಶ್, ಗೋಪಾಲ, ಗ್ರಾ.ಪಂ ಅಧ್ಯಕ್ಷ ಸುವರ್ಣ, ಉಪಾಧ್ಯಕ್ಷ ಶಶಿಕಲಾ, ಸಿಡಿಸಿ ಅಧ್ಯಕ್ಷರಾದ ಅಪ್ಪು ಶ್ರೀನಿವಾಸ್, ಎಸ್.ಎಮ್.ಪರೀಕ್ಷಿತ್, ಸಂತೋಷ, ಸಯ್ಯದ್, ಸೌಕತ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Mysore
ಲೋಕಾಯುಕ್ತ ಬಲೆಗೆ ಬಿದ್ದ ಬೆಟ್ಟದಪುರ ಸಬ್ ಇನ್ಸ್ಪೆಕ್ಟರ್ ಶಿವಶಂಕರ್

ವರದಿ: ಬೆಕ್ಕರೆ ಸತೀಶ್ ಆರಾಧ್ಯ
ಪಿರಿಯಾಪಟ್ಟಣ: ತಾಲೂಕಿನ ಬೆಟ್ಟದಪುರ ಆರಕ್ಷಕ ಠಾಣೆ ಸಬ್ ಇನ್ಸ್ಪೆಕ್ಟರ್ ಶಿವಶಂಕರ್ ಲಂಚ ಪ್ರಕರಣದಲ್ಲಿ ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕಿ ಬಿದ್ದಿದ್ದಾರೆ.
ಪ್ರಕರಣವೊಂದನ್ನ ಇತ್ಯರ್ಥಗೊಳಿಸುವ ಸಲುವಾಗಿ ಜಪ್ತಿ ಮಾಡಿದ ಮೊಬೈಲ್, ಕೊಲೆ ಯತ್ನ ಪ್ರಕರಣಗಳಲ್ಲಿ ಒಬ್ಬರಿಗೆ ಅನುಕೂಲ ಮಾಡಿಕೊಡಲು ವ್ಯಕ್ತಿಯೊರ್ವರಿಂದ ಲಂಚಕ್ಕೆ ಬೇಡಿಕೆ ಇಟ್ಟಿದ್ದು ಈ ಸಂಬಂಧ ಹೈಕೋರ್ಟ್ ವಕೀಲರೊಬ್ಬರು ಲೋಕಾಯುಕ್ತರಿಗೆ ನೀಡಿದ ದೂರಿನ ಮೇರೆಗೆ ಶುಕ್ರವಾರ ರಾತ್ರಿ ವೇಳೆ ಪೊಲೀಸ್ ಠಾಣೆಯಲ್ಲಿ 80 ಸಾವಿರ ಹಣ ಪಡೆಯುವ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ತಡರಾತ್ರಿವರೆಗೂ ಪರಿಶೀಲನೆ ನಡೆಸಿದ್ದಾರೆ.
ದಾಳಿಯಲ್ಲಿ ಲೋಕಾಯುಕ್ತ ಡಿವೈಎಸ್ಪಿ ಮಹಾಂತೇಶ್, ಇನ್ಸ್ಪೆಕ್ಟರ್ ಗಳಾದ ಅಶೋಕ್ ಕುಮಾರ್ ಹಾಗೂ ರವಿಕುಮಾರ್ ಮತ್ತು ಸಿಬ್ಬಂದಿ ಇದ್ದರು.
-
Mysore21 hours ago
ಲೋಕಾಯುಕ್ತ ಬಲೆಗೆ ಬಿದ್ದ ಬೆಟ್ಟದಪುರ ಸಬ್ ಇನ್ಸ್ಪೆಕ್ಟರ್ ಶಿವಶಂಕರ್
-
Kodagu21 hours ago
ಸುಗ್ರಿವಾಜ್ಞೆ ಅನುಷ್ಠಾನಕ್ಕೂ ಮೊದಲು ಬಡವರ ಸಾಲಮನ್ನಾ ಮಾಡಲಿ: ಯುವ ಜೆಡಿಎಸ್ ಆಗ್ರಹ
-
Mysore21 hours ago
ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಆಡಳಿತದಲ್ಲಿ ಬಳಕೆ ಮಾಡಬೇಕು: ಪುರುಷೋತ್ತಮ ಬಿಳಿಮಲೆ
-
Mandya22 hours ago
ಸಕ್ಕರೆ ಕಾರ್ಖಾನೆಗಳು ರೈತರಿಗೆ 14 ದಿನದೊಳಗಾಗಿ ಹಣ ಪಾವತಿ ಮಾಡಿ: ಡಾ.ಕುಮಾರ
-
Mandya21 hours ago
ಮತ್ತತ್ತಿ: ಕಾವೇರಿ ನದಿಯಲ್ಲಿ ಮುಳುಗಿ ಯುವತಿಯರು ಸಾ**ವು
-
Tech14 hours ago
ಅತ್ಯಂತ ಶಕ್ತಿಶಾಲಿ ಕ್ಯಾಮೆರಾ ಹೊಂದಿರುವ ಮಧ್ಯಮ ಬೆಲೆಯ ವಿವೋ ಕಂಪನಿಯ Vivo V50 ಹೊಸ ಫೋನ್ ಬಿಡುಗಡೆ : ಬೆಲೆ ಎಷ್ಟು?
-
Hassan19 hours ago
ಹಾಸನ ವಿಮಾನ ನಿಲ್ದಾಣದ ಬಗ್ಗೆ ಸುದೀರ್ಘ ಚರ್ಚೆ ಮಾಡಿದ್ದೇವೆ: ಎಚ್ಡಿ ಕುಮಾರಸ್ವಾಮಿ
-
Hassan17 hours ago
ಜನರ ಮೇಲಿ ಕಾಳಜಿಯಿಂದ ಶಾಸಕರು ಅರಣ್ಯ ಅಧಿಕಾರಿಗಳ ವಿರುದ್ಧ ಮಾತನಾಡಿದ್ದಾರೆ