Connect with us

Mysore

ನಂಜನಗೂಡು ಪತ್ರ ಬರಹಗಾರ ಸಂಘದಿಂದ ಡಿ. 15 ಮತ್ತು 16 ರಂದು ಪ್ರತಿಭಟನೆ

Published

on

ವರದಿ:ಮಹದೇವಸ್ವಾಮಿ ಪಟೇಲ್

ನಂಜನಗೂಡು :ಪತ್ರ ಬರಹಗಾರರಿಗೆ ನೋಂದಣಿ ಇಲಾಖೆಯ ಕಾವೇರಿ 1 ಇದ್ದಾಗ ಯಾವುದೇ ಸಮಸ್ಯೆಗಳು ಆಗಿರಲಿಲ್ಲ, ಕಾವೇರಿ 2 ತಂತ್ರಾಂಶವನ್ನು ಜಾರಿಗೆ ಬಂದಾಗ, ಪತ್ರ ಬರಹಗಾರರ ಕೆಲಸಕ್ಕೆ ಕುಂದು ಉಂಟಾಗಿದೆ. ಈಗಿರುವಾಗಲೇ ಕಾವೇರಿ 3 ಯಲ್ಲಿ ಫೇಸ್ ಲೇಸ್ ಮತ್ತು ಪೇಪರ್ ಲೇಸ್ ಎಂಬ ತಂತ್ರಾಂಶವನ್ನು ಜಾರಿಗೆ ತರುವ ಯೋಜನೆ ಜಾರಿಯಾಗುವ ಮುನ್ಸೂಚನೆಗಳು ಕಂಡು ಬಂದಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಪತ್ರ ಬರಹಗಾರರ ಒಕ್ಕೂಟದ ಆದೇಶದಂತೆ ರಾಜ್ಯ ವ್ಯಾಪ್ತಿ ಪತ್ರ ಬರಹಗಾರರ ಪ್ರತಿಭಟನೆ ನಡೆಯುತ್ತಿದ್ದು, ನಂಜನಗೂಡು ಪತ್ರ ಬರಹಗಾರ ಸಂಘದಿಂದ ಪ್ರತಿಭಟನೆಯನ್ನು ಡಿ. 15 ಮತ್ತು 16 ರಂದು ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯ ಪತ್ರ ಬರಹಗಾರರ ಒಕ್ಕೂಟದ ಸಂಚಾಲಕರು ಮತ್ತು ನಂಜನಗೂಡು ಪತ್ರ ಬರಹಗಾರರ ಸಂಘದ  ಅಧ್ಯಕ್ಷ   ಪ್ರಕಾಶ್ ರಾಜೇ ಅರಸ್ ಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಇಂದು ಗುರುವಾರ ತಾಲೂಕು ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡುತ್ತವರು ಪತ್ರ ಬರಹಗಾರರ ಒಂದು ಇತಿಹಾಸ ಇದೆ. ಭಾರತ ಸರ್ಕಾರವು 1908ನೇ ಇಸವಿಯಲ್ಲಿ ನೋಂದಣಿ ಕಾಯ್ದೆಯನ್ನು ಜಾರಿಗೆ ತಂದು ಕಾಯ್ದೆ ಕಾಲಂ 80 ಬಿ ಯಡಿಯಲ್ಲಿ ಪತ್ರ ಬರಹಗಾರರ ಕಾನೂನು ಅನ್ನು ಜಾರಿಗೆ ಮಾಡುದ್ರು,

ಕರ್ನಾಟಕ ಸರ್ಕಾರವು ಅದೇ ಕಾನೂನಿನ ಅನುಸಾರವಾಗಿ 1979 ರ ಅಧಿನಿಯಮ ಮೂರರಲ್ಲಿ ಪತ್ರ ಬರಹಗಾರರ ಲೈಸೆನ್ಸ್ ಅನ್ನು ಜಾರಿ ಮಾಡುತ್ತಾರೆ.

1994 -95 ನೇ ಸಾಲಿನಲ್ಲಿ ಮತ್ತು 2009-10 ನೇ ಸಾಲಿನಲ್ಲೂ ಕರ್ನಾಟಕ ರಾಜ್ಯ ಸರ್ಕಾರವು ಪತ್ರ ಬರಹಗಾರರ ಪರೀಕ್ಷೆಯನ್ನು ಮಾಡಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ವರಿಗೆ ಪತ್ರ ಬರಹಗಾರರ ಲೈಸೆನ್ಸ್ ಅನ್ನು ನೀಡುತ್ತಾರೆ.

ಪ್ರತಿವರ್ಷದಂತೆ ನವೀಕರಣ ಶುಲ್ಕವನ್ನು ಕಟ್ಟಿಕೊಂಡು ಜವಾಬ್ದಾರಿತವಾಗಿ ಕೆಲಸವನ್ನು ಮಾಡಿಕೊಂಡು ಬರುತ್ತಿದ್ದೇವೆ.

ಇತ್ತೀಚಿಗೆ ಫೇಸ್ ಲೆಸ್ ಮತ್ತು ಪೇಪರ್ ಲೇಸ್ ಕಾವೇರಿ 3 ಜಾರಿಯಾಗುವ ಮುನ್ಸೂಚನೆಗಳು ಕಂಡು ಬಂದಿದೆ ಈ ಒಂದು ತಂತ್ರಾಂಶ ಜಾರಿಗೆ ಬಂದರೆ ಸಾರ್ವಜನಿಕರಿಗೆ ತುಂಬಾ ತೊಂದರೆ ಉಂಟಾಗುತ್ತದೆ ಈಗಾಗಲೇ ಸುಳ್ಳು ಮೋಸ ಮತ್ತು ವಂಚನೆ ನೋಂದಣಿಗಳಲ್ಲೂ ನಡೆಯುತ್ತಿದ್ದು, ಒಂದು ವೇಳೆ ಫೇಸ್ ಲೇಸ್ ಮತ್ತು ಪೇಪರ್ ಲೇಸ್ ತಂತ್ರಾಂಶ ಜಾರಿಗೆ ಬಂದರಲ್ಲಿ ಪತ್ರ ಬರಹಗಾರರು ಇರುವುದಿಲ್ಲ ಎಂದು ಸರ್ಕಾರಕ್ಕೆ ಎಚ್ಚರಿಸಿದರು

ಕರ್ನಾಟಕ ರಾಜ್ಯ ಪತ್ರ ಬರಹಗಾರ ಒಕ್ಕೂಟದ ಆದೇಶದಂತೆ ರಾಜ್ಯ ವ್ಯಾಪ್ತಿ ಪತ್ರ ಬರಹಗಾರ ಪ್ರತಿಭಟನೆ ನಡೆಯುತ್ತಿದ್ದು ನಂಜನಗೂಡು ಪತ್ರ ಬರಹಗಾರ ಸಂಘದಿಂದ ಸಹ ಪ್ರತಿಭಟನೆಗೆ ಪಾಲ್ಗೊಂಡು, ಬೆಳಗಾವಿಯ ಸುವರ್ಣ ಸೌಧ ಚಲೋ ಕಾರ್ಯಕ್ರಮವನ್ನು ಹಮ್ಮಿಕೊಂಡಿರುತ್ತೇವೆ ಎಲ್ಲರೂ ಸಹ ನೋಂದಣಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದೆ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಭಾಗವಹಿಸಿ ಎಂದು ಕರೆ ಕೊಟ್ಟರು.

ಪತ್ರ ಬರಹಗಾರರ ಮುಖ್ಯ ಬೇಡಿಕೆಗಳು

1 ನಮ್ಮ ರಾಜ್ಯದ ಎಲ್ಲಾ ಪತ್ರ ಬರಹಗಾರರಿಗೆ ಪ್ರತ್ಯೇಕ ಲಾಗಿನ್, ( ಡೀಡ್ ರೈಟರ್ ಲಾಗಿನ್) ನೀಡುವುದು.
2 ನೋಂದಾವಣೆಯಾಗುವ ಎಲ್ಲಾ ದಸ್ತಾವೇಜುಗಳಿಗೆ ಕಡ್ಡಾಯವಾಗಿ ಪತ್ರ ಬರಹಗಾರರು ಅಥವಾ ವಕೀಲರ ಸಹಿ ಕಡ್ಡಾಯಗೊಳಿಸುವುದು.
3 ರಾಜ್ಯಾದ್ಯಂತ ಇರುವ ಎಲ್ಲಾ ಪತ್ರ ಬರಹಗಾರರಿಗೆ ಸರ್ಕಾರದ ಮಾನ್ಯತೆ ಇರುವ ಅಧಿಕೃತ ಗುರುತಿನ ಚೀಟಿಯನ್ನು ನೀಡುವುದು.

ಸುದ್ದಿಗೋಷ್ಠಿಯಲ್ಲಿ ನಂಜನಗೂಡು ಪತ್ರ ಬರಹಗಾರರ ಸಂಘದ ಅಧ್ಯಕ್ಷ ಪ್ರಕಾಶ್ ರಾಜೇ ಅರಸ್, ಉಪಾಧ್ಯಕ್ಷರಾದ ಹುಲ್ಲಹಳ್ಳಿ ಹೆಚ್. ಎಸ್. ಬಸವರಾಜು, ಕೆ ಶಶಿಧರ್, ಬದನವಾಳು ಮಹದೇವಪ್ಪ, ಲೋಕೇಶ್ ಕುಮಾರ್, ಸಿದ್ದರಾಜು ಹುಣಸನಾಳು ಸೇರಿದಂತೆ ಇತರರು ಹಾಜರಿದ್ದರು.

Continue Reading

Mysore

ಹುಣಸೂರಿನಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹ*ತ್ಯೆ; ಸಾವಿನ ಕಾರಣ ನಿಗೂಢ

Published

on

ಹುಣಸೂರು: ಜು.21: ಮೈಸೂರು ಜಿಲ್ಲೆಯ ಹುಣಸೂರು ನಗರದಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂದಿದೆ. ಘಟನೆಯಿಂದ ಸ್ಥಳದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಮೃತರನ್ನು ಹರೀಶ್ (43), ಪತ್ನಿ ನಿಶ್ಚಿತ (35), ಪುತ್ರಿಯರಾದ ನಿಕ್ಷ (13) ಹಾಗೂ ರಕ್ಷಾ (9) ಎಂದು ಗುರುತಿಸಲಾಗಿದೆ.

ಇವರು ನಗರದ ಮಾರುತಿ ಬಡಾವಣೆಯಲ್ಲಿರುವ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ಏನು ಎಂಬುದು ಇನ್ನೂ ತಿಳಿದುಬಂದಿಲ್ಲ. ಮೂಲತಃ ತಾಲೂಕಿನ ರತ್ನಾಪುರಿ ಗ್ರಾಮದ ಕೋಡಿ ನಿವಾಸಿಗಳಾಗಿದ್ದ ಕುಟುಂಬವು ಇತ್ತೀಚೆಗೆ ಹುಣಸೂರು ನಗರದ ಮಾರುತಿ ಬಡಾವಣೆಯಲ್ಲಿ ಹೊಸ ಮನೆ ನಿರ್ಮಿಸಿ ವಾಸಕ್ಕೆ ಬಂದಿದ್ದರು ಎನ್ನಲಾಗಿದೆ.

ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆತ್ಮಹತ್ಯೆಗೆ ಕಾರಣವೇನು ಎಂಬ ಬಗ್ಗೆ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.

Continue Reading

Mysore

ನಂಜನಗೂಡಿನಲ್ಲಿ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ: ಕಾಮುಕನಿಗೆ ಗ್ರಾಮಸ್ಥರಿಂದ ಧರ್ಮದೇಟು, ಪೊಲೀಸರ ವಶಕ್ಕೆ

Published

on

ನಂಜನಗೂಡು:  ಜು.21: ಮನೆಯಲ್ಲಿ ಒಂಟಿಯಾಗಿದ್ದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿಯನ್ನು ಗ್ರಾಮಸ್ಥರು ಹಿಡಿದು ಧರ್ಮದೇಟು ನೀಡಿ ಪೊಲೀಸರ ವಶಕ್ಕೆ ಒಪ್ಪಿಸಿದ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಕಡಬೂರು ಗ್ರಾಮದಲ್ಲಿ ನಡೆದಿದೆ. ಬಂಧಿತ ಆರೋಪಿಯನ್ನು ಸುರೇಶ್ (23) ಎಂದು ಗುರುತಿಸಲಾಗಿದೆ.

ಮಾಹಿತಿಯಂತೆ, ಬಾಲಕಿಯ ತಂದೆ-ತಾಯಿ ಕೂಲಿ ಕೆಲಸಕ್ಕೆ ತೆರಳಿದ್ದ ವೇಳೆ ಬಾಲಕಿ ಮನೆಯಲ್ಲಿ ಒಂಟಿಯಾಗಿರುವುದನ್ನು ಗಮನಿಸಿದ ಸುರೇಶ್ ಮನೆಗೆ ನುಗ್ಗಿ ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎನ್ನಲಾಗಿದೆ. ಈ ವೇಳೆ ಬಾಲಕಿ ಜೋರಾಗಿ ಕಿರುಚಿಕೊಂಡಿದ್ದು, ಶಬ್ದ ಕೇಳಿ ಅಕ್ಕಪಕ್ಕದ ಮನೆಯವರು ಸ್ಥಳಕ್ಕೆ ಧಾವಿಸಿದ್ದಾರೆ. ಆರೋಪಿಯನ್ನು ಹಿಡಿದು ಹಿಗ್ಗಾಮುಗ್ಗ ಥಳಿಸಿದ ಗ್ರಾಮಸ್ಥರು ಬಳಿಕ ಹುಲ್ಲಹಳ್ಳಿ ಪೊಲೀಸ್ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ.

ಘಟನೆ ಸಂಬಂಧ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆದು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Continue Reading

Mysore

ಇಮ್ಮಾವು ಚಿತ್ರನಗರಿ ಸಂತ್ರಸ್ತರಿಗೆ ನ್ಯಾಯಯುತ ಪರಿಹಾರಕ್ಕೆ ಆಗ್ರಹಬಿಡದಿಯಲ್ಲಿ 7,464 ಎಕರೆ ಭೂಸ್ವಾಧೀನ ವಿರೋಧಿಸಿ ರೈತ ಸಂಘ ಪ್ರತಿಭಟನೆ

Published

on

ನಂಜನಗೂಡು : ಇಮ್ಮಾವು ಚಿತ್ರನಗರಿ ಯೋಜನೆಗಾಗಿ ಭೂಮಿ ಕಳೆದುಕೊಂಡ ರೈತರಿಗೆ ನ್ಯಾಯಯುತ ಪರಿಹಾರ ನೀಡಬೇಕು. ಜೊತೆಗೆ ಬಿಡದಿ ಸಮೀಪ 7,464 ಎಕರೆ ಕೃಷಿಭೂಮಿಯನ್ನು ಸ್ವಾಧೀನಪಡಿಸಿಕೊಂಡು ಟೌನ್‌ಶಿಪ್ ನಿರ್ಮಿಸಲು ಸರ್ಕಾರ ಮುಂದಾಗಿರುವ ಕ್ರಮವನ್ನು ಕೈಬಿಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಪ್ರತಿಭಟನೆಪ್ರತಿಭಟನೆಯಲ್ಲಿ ಮಾತನಾಡಿದ ರೈತ ಸಂಘದ ಮುಖಂಡ ಹೊಸ ಕೋಟೆ ಬಸವರಾಜು, ರೈತರ ಸಂಕಷ್ಟ ಅಧಿಕಾರಿಗಳಿಗೆ ಅರ್ಥವಾಗುತ್ತಿಲ್ಲ. 589 ಎಕರೆ ಭೂಸ್ವಾಧೀನಕ್ಕೆ ಒಳಗಾದ ರೈತರಿಗೆ ಇನ್ನೂ ಸಮರ್ಪಕ ಪರಿಹಾರ ದೊರೆತಿಲ್ಲ. ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ ಅನೇಕ ರೈತರನ್ನು ಕಡೆಗಣಿಸಲಾಗಿದ್ದು, ಮತ್ತೊಂದೆಡೆ ಕಾನೂನು ವ್ಯಾಪ್ತಿಯನ್ನು ಮೀರಿ ಕೆಲವರಿಗೆ ಪರಿಹಾರ ವಿತರಿಸಿರುವುದು ತೀವ್ರ ಅನ್ಯಾಯ ಎಂದು ಆರೋಪಿಸಿದರು.

ನಮ್ಮ ಹೋರಾಟ ಸಂಪೂರ್ಣ ಅಹಿಂಸಾತ್ಮಕವಾಗಿದೆ. ಅದನ್ನು ಪ್ರಚೋದಿಸುವ ಪ್ರಯತ್ನ ಮಾಡಬಾರದು. ರೈತರ ತಾಳ್ಮೆಗೂ ಮಿತಿಯಿದ್ದು, ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಪಕ್ಷಪಾತದ ನಡವಳಿಕೆಯಿಂದ , ಗ್ರಾಮಗಳ ರೈತರು ಬೀದಿಪಾಲಾಗುವ ಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಕೂಡಲೇ ಸಮಸ್ಯೆ ಬಗೆಹರಿಸದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ವಿಭಾಗೀಯ ಸಂಘಟನಾ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ತಾಲ್ಲೂಕು ಅಧ್ಯಕ್ಷ ಕೆ.ಆರ್.ಪುರ ಮಹೇಶ್, ಕಾರ್ಯದರ್ಶಿ ರವಿ ಮೈಸೂರು, ಯುವ ಘಟಕದ ಜಿಲ್ಲಾ ಅಧ್ಯಕ್ಷ ಪ್ರೇಮ್ ರಾಜ್, ಮಹಿಳಾ ಘಟಕದ ಅಧ್ಯಕ್ಷೆ ರಾಜಮ್ಮ, ರಾಚಮ್ಮ, ಹೊಸಕೋಟೆ ರಘು, ಮಾದಯ್ಯನ ಹುಂಡಿ ಬಸಪ್ಪ, ಯುವ ಘಟಕದ ತಾಲ್ಲೂಕು ಅಧ್ಯಕ್ಷ ಇಮ್ಮಾವು ರಂಗಸ್ವಾಮಿ, ಯುವ ಘಟಕದ ಸಂಘಟನಾ ಕಾರ್ಯದರ್ಶಿ ಮಹೇಂದ್ರ, ಅಡಕನಹಳ್ಳಿ ಶ್ರೀಕಂಠ, ಇಮ್ಮಾವು ಪ್ರಕಾಶ್, ಹುಳಿಮಾವು ಬಸವರಾಜು, ರವಿ, ರಂಗಪ್ಪ, ಆಯರಹಳ್ಳಿ ಇಮ್ಮಾವು ಮೊಳ್ಳಶೆಟ್ಟರು, ಮಹದೇವಪ್ಪ, ಜವನೆಗೌಡ, ಹುಂಡಿ ರಾಜಣ್ಣ, ನಾಗಣ್ಣ ಸೇರಿದಂತೆ ರೈತ ಮುಖಂಡರು, ರೈತ ಮಹಿಳೆಯರು ಹಾಗೂ ರೈತರು ಭಾಗವಹಿಸಿದ್ದರು.

Continue Reading

Trending

error: Content is protected !!