Mysore
ಕಲ್ಬುಗಿ೯ಯ ಹಲಕಟಿ೯ಯಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಅಪಮಾನ ಖಂಡಿಸಿ ನಂಜನಗೂಡಿನಲ್ಲಿ ಬೃಹತ್ ಪ್ರತಿಭಟನೆ.
ಬಸವಣ್ಣನವರ ಭಾವಚಿತ್ರಕ್ಕೆ ಅವಮಾನ ಮಾಡಿದ ಕಿಡಿಗೇಡಿಗಳನ್ನು ಬಂಧಿಸುವಂತೆ ಆಗ್ರಹಿಸಿ ನಂಜನಗೂಡಿನಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.
ನಂಜನಗೂಡು ನಗರದ ಮಿನಿ ವಿಧಾನಸೌಧದ ಮುಂಭಾಗದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಸಭಾ ಅಧ್ಯಕ್ಷ ಬುಲೆಟ್ ಮಹದೇವಪ್ಪ ಮಾತನಾಡಿ, ಸಮಾನತೆಯ ಅಧಿಕಾರ ಕೊಟ್ಟಂತಹ ವಿಶ್ವಗುರು, ಕಲಬುರ್ಗಿಯ ಹಲಕರ್ಟಿ ಗ್ರಾಮದಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಅಪಮಾನ ಮಾಡಿದ್ದಾರೆ. ಇದನ್ನು ಅಖಿಲ ಭಾರತ ವೀರಶೈವ ಸಮಾಜ ಹಾಗೂ ವಿವಿಧ ಸಂಘಟನೆಗಳು ಎಲ್ಲಾ ಸೇರಿ ನಾವು ತೀವ್ರವಾಗಿ ಖಂಡಿಸುತ್ತೇವೆ.
300 ವರ್ಷಗಳ ಕಾಲ ಬ್ರಿಟಿಷರು ನಮ್ಮನ್ನು ಆಳಿದ್ದಾರೆ, ನಮ್ಮ ಪದವನ್ನು ಇಂಗ್ಲೆಂಡ್ ನಲ್ಲಿ ಪ್ರಚಾರಿಸಲು 12 ಶತಮಾನಗಳು ಶ್ರಮಿಸಿದ್ದಾರೆ.
ವಿಶ್ವಗುರುಕ್ಕೆ ವಿಶ್ವಮಾನವ ಸಂದೇಶವನ್ನು ನೀಡಿದ ಬಸವಣ್ಣನವರ ಭಾವಚಿತ್ರಕ್ಕೆ ಅವಮಾನ ಮಾಡಿದ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಬೇಕು. ಆತನಿಗೆ ಉಗ್ರವಾದ ಶಿಕ್ಷೆ ನೀಡಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಬಳಿಕ ತಹಶೀಲ್ದಾರ್ ರವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಅಖಿಲ ಸಭಾ ಅಧ್ಯಕ್ಷ ಮಹದೇವಪ್ಪ, ದೇಬೂರು ಅಶೋಕ, ಮಹಿಳಾ ಉಪಾಧ್ಯಕ್ಷರಾದ ಮಂಜುಳಾ ನಂಜನಗೂಡು ಮಧು, ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಎನ್.ಸಿ. ಬಸವಣ್ಣ, ವಕೀಲ ಮಹೇಶ್ ಬಾಬು, ಹೊರಳವಾಡಿ ಮಹೇಶ್, ಸಿಂಧುವಳ್ಳಿ ಕೆಂಪಣ್ಣ, ಗುರುಸ್ವಾಮಿ, ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಹಾಗೂ ಲಿಂಗಾಯತ ಸಮುದಾಯದ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದರು.


ವರದಿ : ನಂಜನಗೂಡು ಮಹದೇವಸ್ವಾಮಿ ಪಟೇಲ್
Mysore
ಕಾರು-ಬೈಕ್ ಮುಖಾಮುಖಿ ಡಿಕ್ಕಿ: ಬಾಲಕಿ ಸ್ಥಳದಲ್ಲೇ ಸಾ*ವು, ಮೂವರ ಸ್ಥಿತಿ ಗಂಭೀರ
ಚಿಕ್ಕಮಗಳೂರು: ತಾಲೂಕಿನ ಕಟ್ಟೆ ತಿಮ್ಮನಹಳ್ಳಿ ಕ್ರಾಸ್ ಬಳಿ ಕಾರು ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಓರ್ವ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಮೂವರ ಸ್ಥಿತಿ ಗಂಭೀರವಾಗಿರುವ ಘಟನೆ ನಡೆದಿದೆ.
ಲಹರಿ (6) ಸ್ಥಳದಲ್ಲೇ ಮೃತಪಟ್ಟ ಬಾಲಕಿ. ಅವರ ಸಹೋದರಿ, ತಂದೆ ತಾಯಿ ಸ್ಥಿತಿ ಗಂಭೀರವಾಗಿದೆ.
ಪುನೀತ್ (37) ಚೈತ್ರ (34)ದಂಪತಿ ಮಗು ಸಿರಿ(8) ಸ್ಥಿತಿ ಗಂಭೀರವಾಗಿದ್ದು, ಇಬ್ಬರು ಮಕ್ಕಳ ಜೊತೆ ಬೈಕಿನಲ್ಲಿ ಬರುವಾಗ ಕಾರು ಡಿಕ್ಕಿ ಹೊಡೆದಿದೆ.

ಬೈರಂಬುದಿ ಗ್ರಾಮದಿಂದ ಅಂಬಳೆ ಗ್ರಾಮಕ್ಕೆ ಬರುತ್ತಿದ್ದ ಪುನೀತ್ ಕುಟುಂಬದೊಂದಿಗೆ ಬೈಕಿನಲ್ಲಿ ಬರುತ್ತಿದ್ದ ಪುನೀತ್ ಬೈಕ್‌ಗೆ ಕಾರು ಡಿಕ್ಕಿ ಹೊಡೆದಿದೆ. ಇನ್ನೂ ಗಾಯಾಳುಗಳಿಗೆ ಚಿಕ್ಕಮಗಳೂರು ಮಲ್ಲೇಗೌಡ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಲಹರಿ ಮೃತ ದೇಹ ಆಸ್ಪತ್ರೆಯ ಶವಗಾರಕ್ಕೆ ರವಾನಿಸಲಾಗಿದೆ. ಈ ಘಟನೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
Mysore
ಉದ್ಯಮಿ ಅಪಹರಿಸಿ ಕೋಟಿ ರೂ.ಗಳಿಗೆ ಡಿಮ್ಯಾಂಡ್: ನಾಲ್ವರ ಬಂಧನ
ಮೈಸೂರು: ಲೇವಾದೇವಿ, ರಿಯಲ್ ಎಸ್ಟೇಟ್ ಉದ್ಯಮಿಯನ್ನು ಅಪಹರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದ ನಾಲ್ವರು ಆರೋಪಿಗಳನ್ನು ವಿಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ವಿಜಯನಗರ ನಿವಾಸಿ ಲೋಕೇಶ್ ಅಪಹರಣಕ್ಕೆ ಒಳಗಾಗಿದ್ದ ಉದ್ಯಮಿ. ಸುಲಭವಾಗಿ ಹಣ ಮಾಡುವ ಸಂಚು ರೂಪಿಸಿದ್ದ ಸಂತೋಷ್ ಹೆಚ್. ಎಂ., ಅಭಿಷೇಕ್ ಹೆಚ್. ಎಸ್., ಪ್ರಜ್ವಲ್ ಆರ್. ಹಾಗೂ ದರ್ಶನ್ ಬಿ.ಎನ್. ಬಂಧಿತ ಆರೋಪಿಗಳು.
ಆಗಿದ್ದೇನು?
ಶನಿವಾರ ರಾತ್ರಿ 8.15ರ ಸಮಯದಲ್ಲಿ ವಿಜಯನಗರ 3ನೇ ಹಂತ ಹೆರಿಟೇಜ್ ಕ್ಲಬ್‌ನಿಂದ ಲೋಕೇಶ್ ಹೊರಗೆ ಬಂದಿದ್ದಾರೆ. ಮನೆಗೆ ತೆರಳುತ್ತಿದ್ದಾಗ ಏಕಾಏಕಿ ಅಡ್ಡಗಟ್ಟಿದ ನಾಲ್ವರ ಗುಂಪು ಕಣ್ಣಿಗೆ ಖಾರದ ಪುಡಿ ಎರಚಿ ಬಲವಂತವಾಗಿ ಟಾಟಾ ಸುಮೋ ವಾಹನದಲ್ಲಿ ಎತ್ತಿ ಹಾಕಿಕೊಂಡು ಅಪಹರಣ ಮಾಡಿದ್ದರು. ಲೋಕೇಶ್ ಒತ್ತೆಯಾಳಗಿರಿಸಿಕೊಂಡು ಒಂದು ಕೋಟಿ ರೂ. ಗಳಿಗೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಕಿಡ್ನಾಪ್ ಆದ ಲೋಕೇಶ್ ಅವರ ಪತ್ನಿ ನಯನಾ ವಿಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಕೂಡಲೇ ಕಾರ್ಯ ಪ್ರವೃತ್ತರಾದ ವಿಜಯನಗರ ಠಾಣೆ ಪೊಲೀಸರು ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಕೆ.ಆರ್. ನಗರದ ಹಂಪಾಪುರ ಬಳಿ ವಶಕ್ಕೆ ಪಡೆದು ಲೋಕೇಶ್ ಅವರನ್ನು ರಕ್ಷಣೆ ಮಾಡಿದ್ದಾರೆ. ಲೋಕೇಶ್ ಕುಟುಂಬದಿಂದ ಹಣ ಪಡೆಯಲು ಹೋಗಿದ್ದ ಮತ್ತೊಬ್ಬ ಆರೋಪಿ ಪ್ರೀತಮ್ ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆ ಬೀಸಿದ್ದಾರೆ.
ಆರೋಪಿ ಸಂತೋಷ್ ಮೂಲತಃ ಮಂಡ್ಯ ಜಿಲ್ಲೆ ಕೆ ಆರ್ ಎಸ್ ರಸ್ತೆಯ ಹೊಸಳ್ಳಿ ಗ್ರಾಮದವನು. ಈತನಿಗೆ ಲೋಕೇಶ್ ಅವರ ಪರಿಚಯವಿತ್ತು. ಲೋಕೇಶ್ ಫೈನಾನ್ಸ್, ರಿಯಲ್ ಎಸ್ಟೇಟ್ ನಲ್ಲಿ ಹಣ ಮಾಡಿಕೊಂಡಿರುವ ವಿಚಾರ ಗೊತ್ತಿದ್ದು, ಈತ ತನ್ನದೇ ಗ್ರಾಮದ ಪ್ರಜ್ವಲ್, ಪ್ರೀತಮ್, ದರ್ಶನ್ ಹಾಗೂ ಮೇಟಗಳ್ಳಿ ನಿವಾಸಿ ಅಭಿಷೇಕ್ ಜತೆ ಸಂಚು ರೂಪಿಸಿ ಲೋಕೇಶ್ ಅವರನ್ನು ಅಪಹರಣಕ್ಕೆ ಯೋಜನೆ ರೂಪಿಸಿದ್ದರು.

ಒತ್ತೆಯಾಳಾಗಿ ಇರಿಸಿಕೊಂಡು ಹಣ ಮಾಡಿಕೊಳ್ಳಬಹುದು ಎಂಬ ದುರುದ್ದೇಶದಿಂದ ಸುಮಾರು 15 ದಿನ ಹಿಂಬಾಲಿಸಿ ಹೊಂಚು ಹಾಕಿದ್ದರು. ನಿನ್ನೆ ಹೆರಿಟೇಜ್ ಕ್ಲಬ್ ನಿಂದ ಹೊರಬಂದ ಲೋಕೇಶ್ ನನ್ನ ಅಪಹರಿಸಿ ಪತ್ನಿ ಗೆ ಒಂದು ಕೋಟಿ ರೂ. ಹಣ ಕಳುಹಿಸುವಂತೆ ಬೇಡಿಕೆ ಇಟ್ಟಿದ್ದರು. ಇಲ್ಲದಿದ್ದರೆ ಗಂಡನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಈ ಬಗ್ಗೆ ಪತ್ನಿ ನಯನಾ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಎರಡು ಮೂರು ತಂಡಗಳನ್ನು ರಚಿಸಿ ಕಾರ್ಯಾಚರಣೆ ಆರಂಭಿಸಲಾಯಿತು. ಕೆ ಆರ್ ನಗರ ಹಂಪಾಪುರ ಬಳಿ ಲೋಕೇಶ್ ರಕ್ಷಿಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದರು. ಘಟನೆ ನಡೆದ ಕೆಲವೇ ಗಂಟೆ ಗಳಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಯಶಸ್ವಿಯಾಗಿದ್ದಾರೆ.
ಪತ್ತೆ ಕಾರ್ಯಾಚರಣೆಯಲ್ಲಿ ವಿಜಯನಗರ ಎಸಿಪಿ ರವಿ ಪ್ರಸಾದ್, ಪೊಲೀಸ್ ಇನ್ಸ್ಪೆಕ್ಟರ್ ಎಸ್ ಡಿ ಸುರೇಶ್ ಕುಮಾರ್, ಸಬ್ ಇನ್ಸ್ಪೆಕ್ಟರ್ ಗಳಾದ ಜೈಕೀರ್ತಿ ಎಂ, ಆನಂದ್, ಸಿಬ್ಬಂದಿಯಾದ ಶಂಕರ್, ವೆಂಕಟೇಶ್, ಸುನೀಲ್, ಗಂಗಾಧರ್, ಲಿಖಿತ್, ಮಂಜುನಾಥ್, ಲೋಕೇಶ್, ಚಾಲಕ ಗಿರೀಶ್ ಭಾಗವಹಿಸಿದ್ದರು.
Mysore
ವಿದ್ಯಾರ್ಥಿಗಳೇ ರಾಷ್ಟ್ರ ದೇವೋಭವ ಎನ್ನಿ: ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಸಲಹೆ
ಮೈಸೂರು: ಸಂಸ್ಕೃತಿ, ಮೌಲ್ಯಗಳು ಮತ್ತು ದೇಶಪ್ರೇಮ ಬೆಳೆಸುವಲ್ಲಿ ಮತ್ತು ವ್ಯಕ್ತಿತ್ವ ವಿಕಸನ, ಚಾರಿತ್ರ‍್ಯವನ್ನು ರೂಪಿಸುವಲ್ಲಿ ಶಿಕ್ಷಣದ ಪಾತ್ರ ಹಿರಿದಾದುದು ಎಂದು ವಿಜಯ ವಿಠಲ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ವಿಜಯ ವಿಠಲ ಶಿಕ್ಷಣ ಸಂಸ್ಥೆಗಳ ವತಿಯಿಂದ ಆಯೋಜಿಸಿದ್ದ ಸಾಧಕರ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶಿಸ್ತು, ವಿನಯ, ಕರುಣೆ ಮತ್ತು ಆತ್ಮವಿಶ್ವಾಸದಂತಹ ಗುಣಗಳನ್ನು ಬೆಳೆಸಿಕೊಳ್ಳಬೇಕು. ರಾಷ್ಟ್ರದೇವೋಭವ ಎಂಬ ಉಕ್ತಿಗೆ ಮಹತ್ವವಿದೆ. ರಾಷ್ಟ್ರದ ಬಗ್ಗೆ ಪ್ರೀತಿಯನ್ನು ಬೆಳೆಸಿಕೊಳ್ಳಿ, ಸಾಂಸ್ಕೃತಿಕ ಮೌಲ್ಯಗಳನ್ನು ಎತ್ತಿಹಿಡಿಯಿರಿ ಎಂದು ಸಲಹೆ ನೀಡಿದರು.

ವಿದ್ಯಾರ್ಥಿಗಳು ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಫನ್ ಫೇರ್ ಮೂಲಕ ವಿದ್ಯಾರ್ಥಿಗಳು ಸಂಗ್ರಹಿಸಿ, ದಾನ ಮಾಡಿದ ಹಣವನ್ನು ಅಜೇಯ ಟ್ರಸ್ಟ್ (ಬಾಲಕಿಯರಿಗಾಗಿ), ವಿಶ್ವಜನೀನ ಟ್ರಸ್ಟ್ (ವಿಕಲ ಮತ್ತು ವಿಶೇಷ ಚೇತನರಿಗಾಗಿ) ಮತ್ತು ವನವಾಸಿ ಕಲ್ಯಾಣ ಟ್ರಸ್ಟ್ (ಬುಡಕಟ್ಟು ಮತ್ತು ಗ್ರಾಮೀಣ ಹಿಂದುಳಿದ ವಿದ್ಯಾರ್ಥಿಗಳಿಗಾಗಿ) ಎಂಬ ಮೂರು ಸೇವಾ ಸಂಸ್ಥೆಗಳಿಗೆ ನೀಡಿರುವುದನ್ನು ಶ್ಲಾಘಿಸಿದರು.
ಸಂಸ್ಥೆಯ ಕಾರ್ಯದರ್ಶಿ ಆರ್. ವಾಸುದೇವ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೇವಲ ಶೈಕ್ಷಣಿಕ ಸಾಧನೆಗಳನ್ನು ಮಾತ್ರವಲ್ಲದೆ, ಮುಕ್ತ ದಿನ ಮತ್ತು ಫನ್ ಫೇರ್ ಕಾರ್ಯಕ್ರಮಗಳಲ್ಲಿನ ಅವರ ಸಕ್ರಿಯ ಭಾಗವಹಿಸುವಿಕೆಯನ್ನೂ ಪ್ರಶಂಶಿಸಿದರು.

ಈ ಚಟುವಟಿಕೆಗಳನ್ನು ಆಯೋಜಿಸುವಲ್ಲಿ ವಿದ್ಯಾರ್ಥಿಗಳು ತಮ್ಮ ಸಮಯ, ಸೃಜನಶೀಲತೆ ಮತ್ತು ತಂಡದ ಮನೋಭಾವವನ್ನು ಸಮರ್ಪಣಾಭಾವದಿಂದ ವಿನಿಯೋಗಿಸಿದ್ದು, ಇದು ಸೇವಾ ಉದ್ದೇಶಗಳಿಗಾಗಿ ನಿಧಿ ಸಂಗ್ರಹಕ್ಕೆ ಸಹಕಾರಿಯಾಯಿತು ಎಂದು ತಿಳಿಸಿದರು.
ಸಂಸ್ಥೆಯ ಗೌರವ ಕಾರ್ಯದರ್ಶಿ ಸಿಎ ವಿಶ್ವನಾಥ ಎ. ಪ್ರಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿಗಳ ಆತ್ಮವಿಶ್ವಾಸ ಮತ್ತು ಸಮಗ್ರ ಬೆಳವಣಿಗೆಯನ್ನು ರೂಪಿಸುವಲ್ಲಿ ಪ್ರೋತ್ಸಾಹದ ಮಹತ್ವವನ್ನು ಹೇಳಿದರು. ಒಂದು ಸರಳ ಮೆಚ್ಚುಗೆ ಕೂಡಾ ಯುವ ಮನಸ್ಸುಗಳ ಮೇಲೆ ಹೇಗೆ ಗಹನವಾದ ಮತ್ತು ಉಲ್ಲಾಸಕರ ಪರಿಣಾಮವನ್ನು ಬೀರಬಲ್ಲದು ಎಂಬುದನ್ನು ಅವರು ವಿವರಿಸಿದರು. ಸರಿಯಾದ ಸಮಯದಲ್ಲಿ ನೀಡುವ ಪ್ರೋತ್ಸಾಹ, ವಿದ್ಯಾರ್ಥಿಗಳಿಗೆ ಸ್ಫೂರ್ತಿ , ಆತ್ಮವಿಶ್ವಾಸ ಮತ್ತು ಉತ್ಸಾಹವನ್ನು ಮರಳಿ ಗಳಿಸಲು ಸಹಾಯ ಮಾಡುತ್ತದೆ . ಶಿಕ್ಷಕರು, ಪೋಷಕರು ಮತ್ತು ಮಾರ್ಗದರ್ಶಕರಿಂದ ವಿದ್ಯಾರ್ಥಿಗಳಲ್ಲಿ ದೃಢಸಂಕಲ್ಪ, ಆತ್ಮವಿಶ್ವಾಸ ಮತ್ತು ಸಕಾರಾತ್ಮಕ ಮನೋಭಾವವನ್ನು ಪೋಷಿಸುವಲ್ಲಿ ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ತವೆ ಎಂದು ಹೇಳಿದರು.

ಸಾಧಕ ವಿದ್ಯಾರ್ಥಿಗಳಿಗೆ ಗೌರವ
2024-25ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ೧೩ ವಿದ್ಯಾರ್ಥಿಗಳಿಗೆ ಹಾಗೂ ಮೂವರು ವಿದ್ಯಾರ್ಥಿಗಳಿಗೆ ಕ್ರಮವಾಗಿ ಚಿನ್ನದ ಪದಕ ನೀಡಿ ಸನ್ಮಾನಿಸಲಾಯಿತು. ರಾಜ್ಯ ಹಾಗೂ ರಾಷ್ಟ್ರಮಟ್ಟದ ಕ್ರೀಡಾ ಸ್ಪರ್ಧೆಯಗಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆಯನ್ನು ನೀಡಲಾಯಿತು.
ವಿಜಯ ವಿಠಲ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಎಚ್. ಸತ್ಯಪ್ರಸಾದ್ ಮತ್ತು ವಿಜಯ ವಿಠಲ ವಿದ್ಯಾಶಾಲಾ ಪ್ರಾಂಶುಪಾಲ ವೀಣಾ ಎಸ್.ಎ. ಉಪಸ್ಥಿತರಿದ್ದರು.
-
Mysore5 hours agoಉದ್ಯಮಿ ಅಪಹರಿಸಿ ಕೋಟಿ ರೂ.ಗಳಿಗೆ ಡಿಮ್ಯಾಂಡ್: ನಾಲ್ವರ ಬಂಧನ
-
Mysore8 hours agoಬಸ್ ನಿಲ್ದಾಣಕ್ಕೆ ಕಾರು ಡಿಕ್ಕಿ: ಚಾಲಕನಿಗೆ ಗಂಭೀರ ಗಾಯ
-
Special3 hours agoಮಹಿಳೆಯರಿಗೆ ದೊಡ್ಡ ಅವಕಾಶ! ಅಂಗನವಾಡಿಯ 571 ಹುದ್ದೆಗಳಿಗೆ ಅರ್ಜಿ ಅಹ್ವಾನ.
-
Hassan7 hours agoHKS PUC ಕಾಲೇಜಿನಲ್ಲಿ ಜರುಗಿದ ರಾಜ್ಯಮಟ್ಟದ ಬಾಲ್ ಬ್ಯಾಡ್ಮಿಂಟನ್ ಕ್ರೀಡಾಕೂಟ ಸಮಾರೋಪ ಸಮಾರಂಭ
-
Chikmagalur8 hours agoಕಾಫಿನಾಡಲ್ಲಿ ನಿಲ್ಲದ ಕಾಡಾನೆ ದಾಳಿ: ಕಾರ್ಮಿಕ ಗಣಪತಿ ಪ್ರಾಣಾಪಾಯದಿಂದ ಪಾರು
-
Chikmagalur8 hours agoಗ್ರಾ.ಪಂ.ಸದಸ್ಯ ಗಣೇಶ್ ಕೊಲೆ ಪ್ರಕರಣ: ಐವರ ಬಂಧನ, ಮೂವರಿಗಾಗಿ ತೀವ್ರ ಶೋಧ
-
State9 hours agoನಾಳೆಯಿಂದ ಚಳಿಗಾಲದ ಅಧಿವೇಶನ: ಸುವರ್ಣಸೌಧದಲ್ಲಿ ಸುತ್ತ ಹೈ ಆಲರ್ಟ್ 6,000 ಪೊಲೀಸ್ ಭದ್ರತೆ
-
Mysore13 hours agoಕೊಲ್ಕತ್ತಾದ ಮೈಸೂರು ಉದ್ಯಾನಕ್ಕೆ 10ನೇ ಚಾಮರಾಜ ಒಡೆಯರ್ ನಾಮಫಲಕ ಅಳವಡಿಸಲು ಪತ್ರ
