Connect with us

Mysore

ನಮ್ಮಲ್ಲಿ ಒಳಜಗಳ ಇಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

Published

on

ಮೈಸೂರು :ಮೇ -14 : ನಮ್ಮಲ್ಲಿ ಒಳಜಗಳ ಇಲ್ಲ.ಹಾಗಿದ್ದಿದ್ದರೆ ಲೋಕಸಭಾ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡಲು ಸಾಧ್ಯವಾಗುತ್ತಿರಲಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು

ಮೈಸೂರಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಜಗಳವಾಗಿ ಸರ್ಕಾರ ಪತನವಾಗಲಿದೆ ಎಂದು ಪಬಿಜೆಪಿ ನಾಯಕರು ಹೇಳಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಅವರು ರಾಜಕೀಯವಾಗಿ ಹೇಳಿಕೆ ನೀಡುತ್ತಿದ್ದಾರೆ ಎಂದರು.

ಉತ್ತಮ ವಾತಾವರಣ
ಪರಿಷತ್ ಚುನಾವಣೆಯ ವಾತಾವರಣ ಉತ್ತಮವಾಗಿದ್ದು, ಈ ಬಾರಿ ಕಾಂಗ್ರೆಸ್ ಪಕ್ಷ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದೆ. ಅದಕ್ಕಾಗಿ ಅಭ್ಯರ್ಥಿಗಳನ್ನು ಆರು ತಿಂಗಳು ಮುಂಚಿತವಾಗಿಯೇ ಆಯ್ಕೆ ಮಾಡಲಾಗಿತ್ತು. ಅಭ್ಯರ್ಥಿಗಳಿಗೆ ಸಮಯ ಸಿಕ್ಕು, ಮತದಾರರನ್ನು ಭೇಟಿಯಾಗಲು ಅವಕಾಶ ದೊರೆಯಿತು ಎಂದರು.

ಪರಿಣಾಮ ಬೀರುವುದಿಲ್ಲ
ಮೈತ್ರಿ ಪರಿಣಾಮ ಚುನಾವಣೆಯ ಮೇಲೆ ಆಗಲಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ ಲೋಕಸಭೆ ಚುನಾವಣೆಯಲ್ಲಿಯೂ ಕೆಡಿಎಎ ಬಿಜೆಪಿ ಮೈತ್ರಿ ಮಾಡಿಕೊಂಡಿದ್ದು, ಯಾವುದೇ ಪರಿಣಾಮ ಬೀರುವುದಿಲ್ಲ ಎಂದರು.

ಸಾಧನೆಗಳ ತುಲನೆ ಮಾಡುವ ಶಕ್ತಿ ಮತದಾರರಿಗಿದೆ

ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣ ಚುನಾವಣೆಯ ಮೇಲೆ ಪರಿಣಾಮ ಬೀರಲಿದೆಯೇ ಎಂಬ ಪ್ರಶ್ನೆಗೆ ಉತ್ತರ ನೀಡಿ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಮತದಾರರು ರಾಜಕೀಯವಾಗಿ ಪ್ರಬುದ್ಧರಾಗಿರುವವರು
ಯಾವುದು ಸರಿ, ತಪ್ಪು ಎನ್ನುವ ಬಗ್ಗೆ ಅರಿವು ಹೊಂದಿದವರು. ಕೇಂದ್ರ ಸರ್ಕಾರದ ಸಾಧನೆಗಳು ಹಾಗೂ ನಮ್ಮ ಸರ್ಕಾರದ ಸಾಧನೆಗಳ ಬಗ್ಗೆ ತುಲನೆ ಮಾಡುವ ಶಕ್ತಿ ಅವರಿಗಿದೆ ಎಂದರು.

ಬೇರೆ ರಾಜ್ಯಗಳ ಚುನಾವಣೆಯ ಪ್ರಚಾರಕ್ಕೆ ತೆರಳುವ ಬಗ್ಗೆ ಮಾತನಾಡಿ ಪ್ರಚಾರಕ್ಕೆ ಆಹ್ವಾನ ಬಂದಿದೆ ಎಂದರು.

ಹಿಟ್ ಅಂಡ್ ರನ್ ಕೇಸ್
ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ .ಅವರು ಭ್ರಷ್ಟಾಚಾರದ ಬಗ್ಗೆ ತಮ್ಮ ಬಳಿ ಪೆನ್ ಡ್ರೈವ್ ಇದ್ದು, ತನಿಖೆ ಮಾಡಿಸುವ ತಾಕತ್ತು ಸರ್ಕಾರಕ್ಕಿದೆ ಎಂದರೆ ಬಿಡುಗಡೆ ಮಾಡುವುದಾಗಿ ಹೇಳಿಕೆ ನೀಡಿರುವ ಬಗ್ಗೆ ಮಾತನಾಡಿ ಕುಮಾರಸ್ವಾಮಿಯವರದ್ದು ಸದಾ ಹಿಟ್ ಅಂಡ್ ರನ್ ಕೇಸ್ ಎಂದು ಹೇಳಿದರು.

ಅವರ ಸರ್ಕಾರವನ್ನು ಮೊದಲು ಉಳಿಸಿಕೊಳ್ಳಲಿ
ಮಹಾರಾಷ್ಟ್ರ ಸಿಎಂ ಕರ್ನಾಟಕ ಸರ್ಕಾರ ಪತನವಾಗುವ ಬಗ್ಗೆ ಮಾತನಾಡಿ ನಮ್ಮ ಸರ್ಕಾರದ ಬಗ್ಗೆ ಮಾತನಾಡುವ ಬದಲು ಅವರ ಸರ್ಕಾರವನ್ನು ಮೊದಲು ಉಳಿಸಿಕೊಳ್ಳಲಿ ಎಂದರು.

Continue Reading
Click to comment

Leave a Reply

Your email address will not be published. Required fields are marked *

Mysore

ಕೆವಿಸಿ ಕೋಚಿಂಗ್ ಸೆಂಟರ್ ಆರಂಭ

Published

on

ಮೈಸೂರು: ಕೆವಿಸಿ ಆಸ್ಪತ್ರೆಯು ಮಾತೃ ಸಂಸ್ಥೆ ಆಶ್ರಯದಲ್ಲಿ ನಗರದ ದಟ್ಟಗಳ್ಳಿ ಸೋಮನಾಥ ನಗರ ರಸ್ತೆಯಲ್ಲಿ ಕೆವಿಸಿ ಕೋಚಿಂಗ್ ಕೇಂದ್ರ ತೆರೆದಿದೆ.
ಗ್ರಾಮೀಣ ಹಾಗೂ ಬಡ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಮತ್ತು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ನೆರವು ನೀಡುವ ಮಹತ್ವಾಕಾಂಕ್ಷೆಯೊAದಿಗೆ ಕೇಂದ್ರ ಪ್ರಾರಂಭಿಸಲಾಗಿದೆ ಎಂದು ವಾಣಿಜ್ಯ ಸಲಹೆಗಾರ ಚೇತನ್ ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ತರಬೇತಿ ಕೇಂದ್ರವನ್ನು 12ನೇ ತರಗತಿ ವಿದ್ಯಾರ್ಥಿಗಳನ್ನು ಗಮನದಲ್ಲಿರಿಸಿಕೊಂಡಿದೆ. ನೀಟ್, ಜೆಇಇ, ಸಿಇಟಿ ಮತ್ತು ಬೋರ್ಡ್ ಪರೀಕ್ಷೆಗಳಿಗೆ ವಿಶೇಷ ತರಬೇತಿ ನೀಡಲಾಗುತ್ತದೆ. ಪ್ರತಿಯೊಂದೂ ವಿಷಯಕ್ಕೆ ಕೇವಲ 5 ಸಾವಿರ ಶುಲ್ಕ ನಿಗದಿ ಮಾಡಲಾಗಿದೆ. ಅನುಭವಿ ಹಾಗೂ ನುರಿತ ಬೋಧಕರು ಇದ್ದಾರೆ. ಪರಿಕಲ್ಪನೆ ಆಧಾರಿತ ಕಲಿಕೆ, ನಿರಂತರ ಮೌಲ್ಯ ಮಾಪನ ಅಣಕು ಪರೀಕ್ಷೆ, ವಿದ್ಯಾರ್ಥಿಗೆ ಅಗತ್ಯವಾದ ಮಾರ್ಗದರ್ಶನ ಕೇಂದ್ರದ ವಿಶೇಷವಾಗಿದೆ. ನಗರದ ವಿದ್ಯಾರ್ಥಿಗಳಿಗೆ ಉಚಿತ ವಾಹನ ಸೌಲಭ್ಯವಿದೆ. ಹೆಚ್ಚಿನ ಮಾಹಿತಿಗೆ ದೂ.96115 50355ನ್ನು ಸಂಪರ್ಕಿಸಬಹುದು ಎಂದು ವಿವರಿಸಿದರು.
ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ನಂದೀಶ್‌ಕುಮಾರ್, ಕಮಲಾಕ್ಷಿ, ಡಾ.ಜೀಜೀ ಗೋಷ್ಠಿಯಲ್ಲಿದ್ದರು.

Continue Reading

Mysore

ಹುಲಿ ದಾಳಿಗೆ ಮತ್ತೊಂದು ಹಸು ಬಲಿ

Published

on

ಶಂಕರ್ ಕಟ್ಟೆಮಳಲವಾಡಿ

ಹುಣಸೂರು, ಮೈಸೂರು ಜಿಲ್ಲೆ, ಹುಣಸೂರು ತಾಲೂಕಿನ ಕರುಣ ಕುಪ್ಪೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೆಮ್ಮಿಗೆ ಗ್ರಾಮದ ಮಹೇಶ ಬಿನ್ ಚೆಲುವೇಗೌಡ ರವರ ಹಸು ತಮ್ಮ ಜಮೀನಿನಲ್ಲಿ ಮೇಯುವ ಸಮಯದಲ್ಲಿ ಹುಲಿ ದಾಳಿ ಮಾಡಿ ಹಸುವನ್ನು ಅರ್ಧಂಬರ್ಧ ತಿಂದು ಕೊಂದುಹಾಕಿ ಉಳಿದ ಆಹಾರವನ್ನು ಬಿಟ್ಟು ಹೋಗಿದೆ.

Continue Reading

Mysore

ದಮನಿತ ಸಮಾಜಗಳ ವೇದಿಕೆ ಅಸ್ತಿತ್ವಕ್ಕೆ: ದೇವರಾಜ್ ಕಾಟೂರು ರಾಜ್ಯಾಧ್ಯಕ್ಷರಾಗಿ ಆಯ್ಕೆ

Published

on

ಮೈಸೂರು: ಕರ್ನಾಟಕ ದಮನಿತ ಸಮಾಜಗಳ ವೇದಿಕೆ ಅಸ್ತಿತ್ವಕ್ಕೆ ಬಂದಿದ್ದು, ರಾಜ್ಯಾಧ್ಯಕ್ಷರಾಗಿ ದೇವರಾಜ್ ಟಿ.ಕಾಟೂರು ಅವರನ್ನು ಆಯ್ಕೆ ಮಾಡಲಾಗಿದೆ.
ನೂತನ ಸಮಿತಿಯ ಆಡಳಿತ ಮಂಡಳಿಯ ಪದಾಧಿಕಾರಿಗಳಾಗಿ ಸತ್ಯನಾರಾಯಣ(ಮಡಿವಾಳ), ಉಪೇಂದ್ರಕುಮಾರ್(ಗಾಣಿಗ), ಟಿಂಬರ್ ನಾಗರಾಜು(ವಿಶ್ವಕರ್ಮ), ಪರಮೇಶ್(ಸವಿತ ಸಮಾಜ), ನಾಸಿರ್(ಅಲ್ಪ ಸಂಖ್ಯಾತ), ಮಹೇಶ್(ಕುಂಬಾರ), ಲಕ್ಷ್ಮಣ್(ಕಣಿಯರ್), ಪಿ.ಶಂಕರ್(ಸೋಲಿಗ), ಮಂಜುನಾಥ್(ಸಿಳ್ಳೆಕ್ಯಾತ- ಹಕ್ಕಿಪಿಕ್ಕಿ), ರಾಬರ್ಟ್(ಕ್ರಿಶ್ಚಿಯನ್), ಆರ್.ಆರ್.ಪ್ರಕಾಶ್(ದರ್ಜಿ- ಮರಾಠ), ರಾಮಕೃಷ್ಣ(ಹೆಳವ-ಅಲೆಮಾರಿ), ಸುನೀಲ್ ಕುಮಾರ್(ದಲಿತ), ನೃಪತುಂಗ(ನಾಯಕ), ಕೆಂಪಯ್ಯ ಜಯಪುರ(ದಲಿತ), ಶ್ರೀಕಂಠ (ದಲಿತ), ಬಸವಣ್ಣ ಬದನವಾಳು(ದಲಿತ), ಸಿದ್ದಪ್ಪ(ಉಪ್ಪಾರ), ಬಸವರಾಜು (ಉಪ್ಪಾರ), ಮಲ್ಲೇಶ(ಉಪ್ಪಾರ) ಅವರನ್ನು ಆಯ್ಕೆ ಮಾಡಲಾಯಿತು.
ಹಿರಿಯ ಹೋರಾಟಗಾರ ಹರಿಹರ ಆನಂದಸ್ವಾಮಿ ಆಯ್ಕೆಯನ್ನು ಪ್ರಕಟಿಸಿದರು. ಬಳಿಕ ಮಾತನಾಡಿದ ಅವರು, ಸ್ವಾತಂತ್ರ‍್ಯ ಬಂದು 75 ವರ್ಷಗಳಾದರೂ ಅನೇಕ ಸಮುದಾಯಗಳು ಸರ್ಕಾರದ ಸವಲತ್ತುಗಳಿಂದ ವಂಚಿತರಾಗಿ ಮುಖ್ಯ ವಾಹಿನಿಗೆ ಬರದೆ ತೆರಮರೆಗೆ ಸರಿದಿವೆ. ಇದು ಸ್ವಾತಂತ್ರ‍್ಯ ಭಾರತದಲ್ಲಿ ದೊಡ್ಡ ದುರಂತ. ಇಂತಹ ಸಮಾಜಗಳ ಪರವಾಗಿ ಹೋರಾಟ ಮಾಡಲಿಕ್ಕೆ ನಾಯಕತ್ವದ ಕೊರತೆ ಇರುವ ಕಾರಣ ಸಣ್ಣ ಮತ್ತು ಅತಿ ಸಣ್ಣ ಸಮುದಾಯಗಳ ದ್ವನಿಯಾಗಿ ನಿಂತು ಹೋರಾಟ ಮಾಡಲು ವೇದಿಕೆಯನ್ನು ಅಸ್ಥಿತ್ವಕ್ಕೆ ತರಲಾಗಿದೆ ಎಂದು ವಿವರಿಸಿದರು.
ಹಿಂದುಳಿದ ವರ್ಗಗಳ ಮುಖಂಡ ಜಿ.ಎಂ.ಗಾಡ್ಕರ್ ಮಾತನಾಡಿ, ಮೈಸೂರಿನಲ್ಲಿ ಹುಟ್ಟುವ ಸಂಘಟನೆಗಳು ರಾಜ್ಯ ಮತ್ತು ದೇಶ ವ್ಯಾಪ್ತಿ ವಿಸ್ತರಿಸಿಕೊಂಡು ಜೀವಂತವಾಗಿ ಉಳಿದಿವೆ. ಅದೇ ರೀತಿ ಈ ಸಂಘಟನೆ ಕೂಡ ಡಿಎಸ್‌ಎಸ್ ಮತ್ತು ರೈತ ಚಳವಳಿಗಳಂತೆ ಹೋರಾಟ ಮಾಡಿ ಸಂವಿಧಾನ ಬದ್ದ ಹಕ್ಕುಗಳನ್ನು ದಮನಿತ ಸಮಾಜಗಳಿಗೆ ದೊರಕಿಸಿ ಕೊಡಬೇಕು. ಜವಾಬ್ದಾರಿ ಹೊತ್ತ ಅಧ್ಯಕ್ಷರು ರಾಜಕೀಯವಾಗಿ ಬಳಕೆ ಆಗದೆ ಪಕ್ಷಾತೀತವಾಗಿ ನೊಂದವರ ಪರ ಹೋರಾಟ ಮಾಡಿ ಜನ ಸೇವೆ ಮಾಡುವ ಸಂಘಟನೆಯಾಗಿ ರೂಪಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಹಿರಿಯ ಹೋರಾಟಗಾರರಾದ ಬನ್ನೂರ್ ಕುಮಾರ್(ನಾಯಕ), ಮಹಾನಗರ ಪಾಲಿಕೆ ಮಾಜಿ ಸದಸ್ಯ ಡಿ.ನಾಗಭೂಷಣ್(ಗೊಲ್ಲ), ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ(ದಲಿತ), ಅಶೋಕಪುರಂ ದೊಡ್ಡಗರಡಿ ಅಧ್ಯಕ್ಷ ಜೋಗಿ ಮಹೇಶ್(ದಲಿತ) ಮುಂತಾದವರು ಬೆಂಬಲ ಸೂಚಿಸಿದರು.

ನನ್ನ ಮೇಲೆ ವಿಶ್ವಾಸವಿಟ್ಟು ರಾಜ್ಯಾಧ್ಯಕ್ಷರಾಗಿ ಆಯ್ಕೆ ಮಾಡಿದ ದಮನಿತ ಸಮಾಜಗಳ ಮುಖಂಡರಿಗೆ ಧನ್ಯವಾದ ಸಲ್ಲಿಸುತ್ತೇನೆ. ನಾನು ಪಕ್ಷಾತೀತವಾಗಿ ಸಾಂವಿಧಾನಿಕ ಹಕ್ಕುಗಳನ್ನು ಪಡೆಯಲು ಹಾಗೂ ಶೋಷಿತರ ಪರವಾಗಿ ಹೋರಾಟ ಮಾಡಲು ಬದ್ಧನಾಗಿದ್ದೇನೆ.
ದೇವರಾಜ್ ಕಾಟೂರು, ರಾಜ್ಯಾಧ್ಯಕ್ಷ

Continue Reading

Trending

error: Content is protected !!