Connect with us

Kodagu

ನಗ್ಮಾ ಬಾನು ಹೆಚ್. ಎ., ಅವರು Synthesis of Some Novel Heterocyclic Compounds Via Dipolar Cycloaddition Reactions” ಎಂಬ ವಿಷಯದ ಮೇಲೆ ಡಾಕ್ಟರೇಟ್ ಪದವಿ

Published

on

ಸೋಮವಾರಪೇಟೆ ತಾಲ್ಲೂಕಿನ ಕೊಡ್ಲಿಪೇಟೆಯ ಅಬ್ಬಾಸ್ ಮತ್ತು ನಸ್ರೀನ್ ದಂಪತಿಗಳ ಮಗಳಾಗಿರುವ ನಗ್ಮಾ ಬಾನು ಹೆಚ್. ಎ., ಅವರು, ಮಂಗಳೂರು ವಿಶ್ವವಿದ್ಯಾನಿಲಯದ, ಮಂಗಳ ಗಂಗೋತ್ರಿಯಲ್ಲಿನ ರಸಾಯನಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದಲ್ಲಿ ವಿಶ್ರಾಂತ ಪ್ರಾಧ್ಯಾಪಕರಾದ ಪ್ರೊ. ಬಾಲಕೃಷ್ಣ ಕಲ್ಲೂರಾಯ ಅವರ ಮಾರ್ಗದರ್ಶನದಲ್ಲಿ “Synthesis of Some Novel Heterocyclic Compounds Via Dipolar Cycloaddition Reactions” ಎಂಬ ವಿಷಯದ ಮೇಲೆ ಡಾಕ್ಟರೇಟ್ ಪದವಿ ಪಡೆದಿರುತ್ತಾರೆ.

ಕನ್ನಡ ಉಪನ್ಯಾಸಕರಾದ ಡಾ. ಜ಼ಮೀರ್ ಅಹಮದ್ ಅವರ ಧರ್ಮಪತ್ನಿ ಆಗಿರುವ ನಗ್ಮಾ ಬಾನು ಹೆಚ್ ಎ ಅವರು, ತಮ್ಮ ಪಿಯುಸಿ ಮತ್ತು ಸ್ನಾತಕ ಪದವಿಯನ್ನು ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಹಾಗೂ ಸ್ನಾತಕೋತ್ತರ ಪದವಿಯನ್ನು ಮಂಗಳೂರು ವಿಶ್ವವಿದ್ಯಾನಿಲಯದ ರಸಾಯನಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದಲ್ಲಿ ಪೂರ್ಣಗೊಳಿಸಿರುತ್ತಾರೆ. ಪ್ರಸ್ತುತ ಕೊಡಗು ವಿಶ್ವವಿದ್ಯಾಲಯದ, ಜ್ಞಾನ ಕಾವೇರಿ ಆವರಣದಲ್ಲಿನ ರಸಾಯನಶಾಸ್ತ್ರ ವಿಭಾಗದಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Continue Reading
Click to comment

Leave a Reply

Your email address will not be published. Required fields are marked *

Kodagu

ವಿರಾಜಪೇಟೆಯ ಸಂತ ಅನ್ನಮ್ಮ ಪ್ರೌಢಶಾಲೆಯ ಎನ್ ಸಿ ಸಿ ವಿದ್ಯಾರ್ಥಿಗಳಿಂದ ಸೈಕಲ್ ಜಾಥಾ

Published

on

ವಿರಾಜಪೇಟೆ : ಪಟ್ಟಣದ ಸಂತ ಅನ್ನಮ್ಮ ಪ್ರೌಢಶಾಲೆಯ ಎನ್ಸಿಸಿ ಘಟಕದ ಏರ್ ವಿಂಗ್ ಹಾಗೂ ಆರ್ಮಿ ವಿಂಗ್ ಗಳ ವತಿಯಿಂದ ಆರ್ಮಡ್ ಫೋರ್ಸ್ ಫ್ಲಾಗ್ ಡೇ ಯ ಪ್ರಯುಕ್ತ ಎಂಸಿಸಿ ವಿದ್ಯಾರ್ಥಿಗಳಿಂದಎಂಸಿಸಿ ವಿದ್ಯಾರ್ಥಿಗಳಿಂದ ಸೈಕಲ್ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಸಂತ ಅನ್ನಮ್ಮ ಪ್ರೌಢಶಾಲೆಯ ಬಳಿ ವಿದ್ಯಾಸಂಸ್ಥೆ ವ್ಯವಸ್ಥಾಪಕರು ಹಾಗೂ ಸಂತ ಅನ್ನಮ್ಮ ಚರ್ಚ್ ನ ಪ್ರಧಾನ ಗುರುಗಳಾದ ರೆ. ಫಾ. ಜೇಮ್ಸ್ ಡೊಮಿಮಿಕ್ ಹಾಗೂ ಎನ್ಸಿಸಿ ವಿಂಗ್ ಕಮಾಂಡರ್ ಆಫೀಸರ್ ಪ್ರವೀಣ್ ಕಾರ್ಯಪ್ಪ ಈ ಜಾಥಾಕ್ಕೆ ಚಾಲನೆಯನ್ನು ನೀಡಿದರು.

ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ವ್ಯವಸ್ಥಾಪಕ ರೆ. ಫಾ. ಜೇಮ್ಸ್ ಡೊಮಿನಿಕ್ ಮಕ್ಕಳಲ್ಲಿ ಧೈರ್ಯ ಮನೋಭಾವನೆ ಮೂಡಬೇಕು. ವಾಯುಮಾಲಿನ್ಯ ಹೆಚ್ಚಳವಾಗುತ್ತಿರುವ ಈ ಸಂದರ್ಭದಲ್ಲಿ ಅದನ್ನು ನಿಯಂತ್ರಿಸಿ ಪರಿಸರ ಸಂರಕ್ಷಣೆಗೆ ಗಮನ ನೀಡಬೇಕು. ಜೊತೆಗೆ ವಿದ್ಯಾರ್ಥಿಗಳು ಸಮಾಜದಲ್ಲಿ ಆರೋಗ್ಯ ಜಾಗೃತಿಯನ್ನು ಮೂಡಿಸಿ ಎಂದು ಕರೆ ನೀಡಿದರು.


ಎನ್ಸಿಸಿ ವಿಂಗ್ ಕಮಾಂಡರ್ ಆಫೀಸರ್ ಪ್ರವೀಣ್ ಕಾರ್ಯಪ್ಪ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ಇಂದು ಸೇನಾ ವಿಭಾಗಗಳ ದ್ವಜ ದಿನಾಚರಣೆ ಪ್ರಯುಕ್ತ ಸೈಕಲ್ ಜಾಥಾವನ್ನು ಹಮ್ಮಿಕೊಳ್ಳಲಾಗಿದ್ದು, ಆ ಮೂಲಕ ನಾವು ನಮ್ಮ ಸೈನಿಕರಿಗೆ ಗೌರವವನ್ನು ಸಲ್ಲಿಸುತ್ತಿದ್ದೇವೆ. ವಿದ್ಯಾರ್ಥಿಗಳು ಸೈಕಲ್ ಜಾಥದ ಮೂಲಕ ಸಮಾಜಮುಖಿ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಶ್ಲ್ಯಾಘನೀಯ. ನಮ್ಮ ಸೈನಿಕರು ನಮ್ಮ ದೇಶದ ಹೆಮ್ಮೆಯಾಗಿದ್ದು ಅವರ ಪರಿಶ್ರಮವನ್ನು ಗೌರವಿಸೋಣ ಎಂದು ಹೇಳಿದರು.

60ಕ್ಕೂ ಅಧಿಕ ಎನ್ ಸಿ ಸಿ ವಿದ್ಯಾರ್ಥಿಗಳನ್ನು ಒಳಗೊಂಡ ಸೈಕಲ್ ಜಾಥಾವು ವಿರಾಜಪೇಟೆ ನಗರ, ಆರ್ಜಿ ಗ್ರಾಮ – ಬೇಟೋಳಿ ರಾಮನಗರದ ಮೂಲಕ ಹೆಗ್ಗಳದ ಸ್ನೇಹ ಭವನ ವೃದ್ದಶ್ರಮವನ್ನು ತಲುಪಿತು.

ರಾಮನಗರ ಅಂಗಡಿಯ ಸಮೀಪದಿಂದ ಸರ್ಕಾರಿ ಶಾಲೆಯವರೆಗೂ ಎನ್ ಸಿ ಸಿ ವಿದ್ಯಾರ್ಥಿಗಳು ಸ್ವಚ್ಛತಾ ಕಾರ್ಯಕ್ರಮವನ್ನು ನಡೆಸಿದರು. ತದನಂತರ ಹೆಗ್ಗಳದ ಸ್ನೇಹ ಭವನದಲ್ಲಿ ಸ್ವಚ್ಛತ ಕಾರ್ಯವನ್ನು ಮಾಡಿದರು. ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸ್ಥಳದಲ್ಲಿಯೇ ಅಡುಗೆಯನ್ನು ತಯಾರಿಸಿ ಸ್ನೇಹ ಭವನದ ಹಿರಿಯರಿಗೆ ಅಡುಗೆಯನ್ನು ಬಡಿಸಿದರು.

ಹಿರಿಯರಿಗೆ ಮನೋರಂಜನ ಕ್ರೀಡೆ, ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಮೂಡಿ ಬಂದವು. ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸ್ನೇಹ ಭವನದ ಹಿರಿಯರ ಯೋಗಕ್ಷೇಮವನ್ನು ವಿಚಾರಿಸುವುದರ ಮೂಲಕ ಉಭಯ ಕುಶಲೋಪರಿಯನ್ನು ನಡೆಸಿದರು.

ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯರುಗಳಾದ ಬೆನ್ನಿ ಜೋಸೆಫ್, ಟೀನಾ ಫರ್ನಾಂಡಿಸ್, ಎನ್ಸಿಸಿ ಏರ್ ವಿಂಗ್ ಅಧಿಕಾರಿ ಅಬ್ದುಲ್ ಮುನೀರ್, ಆರ್ಮಿ ವಿಂಗ್ ನ ಅಧಿಕಾರಿ ಸಹನಾ, ಸಹ ಶಿಕ್ಷಕರುಗಳು, ಸಿಬ್ಬಂದಿಗಳು, ಎನ್ ಸಿ ಸಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Continue Reading

Kodagu

ನಾಪೋಕ್ಲು ಬಳಿಯ ಐತಿಹಾಸಿಕ ಬಿದ್ದಾಟಂಡ ವಾಡೆಯಲ್ಲಿ ಸಂಭ್ರಮದಿಂದ ಜರುಗಿದ ಪುತ್ತರಿ ಕೋಲಾಟ

Published

on

ವರದಿ : ಝಕರಿಯ ನಾಪೋಕ್ಲು

ನಾಪೋಕ್ಲು : ನಾಪೋಕ್ಲು ಬಳಿಯ ಬಿದ್ದಾಟಂಡ ವಾಡೆಯ ಐತಿಹಾಸಿಕ ನೂರಂಬಡ ನಾಡ್ ಮಂದ್ ನಲ್ಲಿ ಪುತ್ತರಿ ಹಬ್ಬದ ಪ್ರಯುಕ್ತ ನಡೆದ ಕೋಲಾಟ ಕಾರ್ಯಕ್ರಮವು ಸಂಭ್ರಮದಿಂದ ನಡೆಯಿತು.

ಬೇತು ಗ್ರಾಮದ ಪ್ರಸಿದ್ಧ ಶ್ರೀ ಮಕ್ಕಿ ಶಾಸ್ತಾವು ದೇವಾಲಯದಿಂದ ಊರಿನ ಮುಖ್ಯಸ್ಥರು ದೇವರ ಕೋಲು, ವಸ್ತ್ರ ಹಾಗೂ ಬೆಳ್ಳಿಯ ಖಡ್ಗದೊಂದಿಗೆ ದೈವಾಧೀನವಾಗಿ ಸಾಂಪ್ರದಾಯಿಕ ಕಾಪಳಕಳಿ,ಕೊಂಬು,ಕೊಟ್ಟು ವಾಲಗ, ದುಡಿ ಕೊಟ್ಟ್ ಪಾಟ್ ನೊಂದಿಗೆ ಬೇತು ಗ್ರಾಮದ ಕುರುಂಬರಾಟ್ ಎಂಬ ಸ್ಥಳದಿಂದ ಬಿದ್ದಾಟಂಡ ವಾಡೆಗೆ ಗ್ರಾಮಸ್ಥರು ಮೆರವಣಿಗೆಯ ಮೂಲಕ ಬರುತ್ತಿದ್ದಂತೆ ನೂರಂಬಡ ಮಂದ್ ನಲ್ಲಿ ಬಿದ್ದಾಟಂಡ ಕುಟುಂಬದ ಹಿರಿಯರು ಸಾಂಪ್ರದಾಯಿಕ ಉಡುಪು ಧರಿಸಿ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸುವುದರ ಮೂಲಕ ದೇವರ ಕೋಲನ್ನು ಬರಮಾಡಿಕೊಳ್ಳಲಾಯಿತು.

ನೂರಂಬಡ ನಾಡಿಗೆ ಸಂಬಂಧಿಸಿದಂತೆ ಬೇತು ಗ್ರಾಮದ ಶ್ರೀ ಮಕ್ಕಿ ಶಾಸ್ತಾವು ದೇವಾಲಯದಿಂದ ಪುತ್ತರಿ ಹಬ್ಬಕ್ಕೆ ಚಾಲನೆ ನೀಡಲಾಗುತ್ತದೆ. ಅದರಂತೆ ನಾಲ್ಕು ಗ್ರಾಮದವರು ದುಡಿಕೊಟ್ಟ್ ಪಾಟ್ ನೊಂದಿಗೆ ಬಿದ್ದಾಟಂಡ ವಾಡೆಗೆ ಬರುತ್ತಾರೆ.ಅದರಂತೆ ಮೂಟೇರಿ,ಕೊಳಕೇರಿಯ ಗ್ರಾಮಸ್ಥರು ಬರುತ್ತಿದ್ದಂತೆ ಅವರನ್ನು ಬಿದ್ದಾಟಂಡ ವಾಡೆಗೆ ಬರಮಾಡಿಕೊಳ್ಳಲಾಯಿತು. ಬಳಿಕ ಕೋಲಾಟ ನಡೆಸುವ ಮರದ ಕೆಳಗೆ ದೇವರ ಕೋಲನ್ನು ಇಟ್ಟು ಪ್ರಾರ್ಥನೆ ಸಲ್ಲಿಸಿದ ಬಳಿಕ ಸಾಂಪ್ರದಾಯಿಕ ಪುತ್ತರಿ ಕೋಲಾಟಕ್ಕೆ ಚಾಲನೆ ನೀಡಲಾಗಿ ಬಿದ್ದಾಟಂಡ ವಾಡೆಯ ಮಂದ್ ನಲ್ಲಿ ಮೂರು ಗ್ರಾಮಸ್ಥರು ಸೇರಿ ಕೋಲಾಟವನ್ನು ದೇವರ ಉದ್ಘೋಷದೊಂದಿಗೆ ನಡೆಸಿದರು.

ಗ್ರಾಮಸ್ಥರ ಉತ್ಸಾಹ ಹರ್ಷೋದ್ಗಾರಗಳ ನಡುವೆ ನೂರಂಬಡ ಮಂದ್ ನ ಪುತ್ತರಿ ಕೋಲಾಟದ ಸಂಭ್ರಮವನ್ನು ನೆರೆದ ಜನರು ಕಣ್ತುಂಬಿಕೊಂಡರು. ಇದೇ ವಾಡೆಯಲ್ಲಿ ಎರಡನೇ ದಿನ ಚಿಕ್ಕ ಕೋಲಾಟವನ್ನು ಇದೇ ಮೂರು ಗ್ರಾಮಸ್ಥರು ಸೇರಿ ನಡೆಸಿದ ಬಳಿಕ ಕೋಲನ್ನು ಮಕ್ಕಿಶಾಸ್ತಾವು ದೇವಾಲಯಕ್ಕೆ ಒಪ್ಪಿಸುವುದರೊಂದಿಗೆ ಹಬ್ಬ ಸಂಭ್ರಮದಿಂದ ಸಂಪನ್ನಗೊಳ್ಳಲಿದೆ.

ಕಾಪಳಕಳಿ

ಪುತ್ತರಿಹಬ್ಬದಲ್ಲಿ ಕಾಪಳಕಳಿಗೆ ಹೆಚ್ಚು ಪ್ರಾಮುಖ್ಯತೆ ಇದೆ. ಪುತ್ತರಿ ಹಬ್ಬದಂದು ಬೇತು ಗ್ರಾಮದ ಮಕ್ಕಿಶಾಸ್ತಾವು ದೇವಾಲಯಕ್ಕೆ ಅಡಗಿದ ಕೆಂಬಟ್ಟಿ ಜನಾಂಗದವರು ಕಾಪಳ ವೇಷವನ್ನು ಧರಿಸುತ್ತಾರೆ.ಮೈಗೆ ಕಪ್ಪು ಬಣ್ಣದ ಮಸಿಯನ್ನು ಬಳಿದು ಕೈಯಲ್ಲಿ ಅಂಗರೆ ಕೋಲು ಹಿಡಿದು ವಾದ್ಯಕ್ಕೆ ತಕ್ಕಂತೆ ಕುಣಿಯುತ್ತಾರೆ. ಈ ವೇಷ ಎರಡು ಮೂರು ದಿನಗಳ ಕಾಲ ಇದ್ದು, ಊರಿನ ಎಲ್ಲಾ ಮನೆಗಳಿಗೆ ತೆರಳುವುದು ಸಾಂಪ್ರದಾಯಿಕವಾಗಿ ನಡೆದು ಬಂದಿರುತ್ತದೆ. ಕೋಲಾಟ ಕಾರ್ಯಕ್ರಮದಲ್ಲಿ ಊರಿನ ಪರ ಊರಿನ ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಪಾಲ್ಗೊಂಡು ಕೋಲಾಟ ಕಾರ್ಯಕ್ರಮಕ್ಕೆ ಮೆರಗು ನೀಡಿದರು.ಕಾರ್ಯಕ್ರಮದಲ್ಲಿ ಬಿದ್ದಾಟಂಡ ಕುಟುಂಬದ ಪ್ರಮುಖರಾದ ರಮೇಶ್ ಚಂಗಪ್ಪ ಹಾಗೂ ಬೇತು ಗ್ರಾಮದ ಕೊಂಡಿರ ಕುಟುಂಬದ ಗಣೇಶ್ ಅವರು ನಾಡ್ ಮಂದ್ ನಲ್ಲಿ ನಡೆಯುವ ಕೋಲಾಟದ ಇತಿಹಾಸದ ಕುರಿತು ಮಾಹಿತಿ ನೀಡಿದರು.

Continue Reading

Kodagu

ಪುತ್ತರಿ ಪ್ರಯುಕ್ತ ದೇವಟ್ ಪರಂಬುವಿನಲ್ಲಿ ಸಿಎನ್‌ಸಿಯಿಂದ ಗೌರವ ನಮನ ಸಲ್ಲಿಕೆ

Published

on

ಮಡಿಕೇರಿ: ಕೊಡಗಿನ ಸುಗ್ಗಿ ಹಬ್ಬ ಪುತ್ತರಿಯ ಹಿನ್ನೆಲೆಯಲ್ಲಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ದೇವಟ್ ಪರಂಬುವಿನ ಕೊಡವರ ನರಮೇಧದ ಸ್ಮಾರಕ ಸ್ಥಳದಲ್ಲಿ ಪುಷ್ಪಾ ನಮನ ಸಲ್ಲಿಸಿದ್ದಾರೆ.


ಪುತ್ತರಿ ದಿನ ಕೊಯ್ಲು ಮಾಡಿದ ಕದಿರನ್ನು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರ ನೇತೃತ್ವದಲ್ಲಿ ಪಟ್ಟಮಾಡ ಕುಶ, ಮಂದಪಂಡ ಮನೋಜ್ ಹಾಗೂ ನಂದೇಟಿರ ಮೋಹನ್ ಸುಬ್ಬಯ್ಯ ಅವರುಗಳು ಸ್ಮಾರಕಗಳಿಗೆ ಕಟ್ಟಿ ಪುಷ್ಪ ನಮನ ಸಲ್ಲಿಸಿದರು.


ನಂತರ ಮಾತನಾಡಿದ ಎನ್.ಯು.ನಾಚಪ್ಪ ಅವರು ಹಿರಿಯರಿಗೆ ಗೌರವ ಅರ್ಪಿಸಿ ಏಕ-ಜನಾಂಗೀಯ ಆನಿಮಿಸ್ಟಿಕ್ ಕೊಡವ ಸಮುದಾಯದ ಪರವಾದ ಸಿಎನ್‌ಸಿಯ ಹೋರಾಟಕ್ಕೆ ಬೆಂಬಲ ಕೋರಲಾಯಿತು ಎಂದರು.

Continue Reading

Trending

error: Content is protected !!