Connect with us

Kodagu

ಮಡಿಕೇರಿ ನಗರಸಭೆಗೆ ಮೃತ ಇಂಜಿನಿಯರ್‌ ಟ್ರಾನ್ರ್ಫರ್‌ !

Published

on

ಮಡಿಕೇರಿ : ಸರ್ಕಾರ ಮತ್ತು ಇಲಾಖೆಯಿಂದ ವರ್ಗಾವಣೆಯ ಎಡವಟ್ಟಿನಿಂದಾಗಿ 6 ತಿಂಗಳ ಹಿಂದೆ ಮೃತಪಟ್ಟ ನಗರಾಭಿವೃದ್ಧಿ ಇಲಾಖೆಯ ಕಿರಿಯ ಇಂಜಿನಿಯರ್ ಓರ್ವರನ್ನು ಜುಲೈ 9ರಂದು ಕೊಡಗಿನ ಮಡಿಕೇರಿಯ ನಗರಸಭೆಯಲ್ಲಿ ಖಾಲಿ ಇರುವ ಕಿರಿಯ ಅಭಿಯಂತರ ಹುದ್ದೆಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಅಶೋಕ ಪುಟಪಾಕ್ ಎಂಬ ಅಧಿಕಾರಿಯನ್ನು ಜುಲೈ 9ರಂದು ಕೊಡಗಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ವಾಸ್ತವವಾಗಿ, ಅಶೋಕ ಪುಟಪಾಕ್ ಕಳೆದ ಜನವರಿ 12ರಂದು ಮೃತಪಟ್ಟಿದ್ದಾರೆ.
ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ಮಾಹಿತಿ ಇಲ್ಲದೆಯೇ ಎಡವಟ್ಟು ಮಾಡಿಕೊಂಡಿದ್ದು, ವರ್ಗಾವಣೆಯ ಪ್ರತಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.


ಕಲಬುರಗಿ ಜಿಲ್ಲೆಯ ಸೇಡಂ ಪುರಸಭೆಯಲ್ಲಿ ಕಿರಿಯ ಇಂಜಿನಿಯರ್ ಆಗಿ ಕೆಲಸ ಮಾಡ್ತಿದ್ದ ಅಶೋಕ್, ಜಿಲ್ಲೆಯ ಚಿತ್ತಾಪುರ ತಾಲೂಕಿನ ದಿಗ್ಗಾಂವ್ ಗ್ರಾಮದ ನಿವಾಸಿ. ಕಳೆದ ಜನವರಿಯಲ್ಲಿ ಮೃತಪಟ್ಟಿದ್ದರು. ಆದರೆ ಈ ಮಾಹಿತಿಯನ್ನು ಅವರು ಕೆಲಸ ಮಾಡುತ್ತಿದ್ದ ಕಚೇರಿಯ ಅಧಿಕಾರಿಗಳು ಮೇಲಾಧಿಕಾರಿಗಳಿಗೆ ನೀಡಿರಲಿಲ್ಲವೇ ? ಎನ್ನುವ ಅನುಮಾನ ಹುಟ್ಟಿಕೊಂಡಿದ್ದು, ಮೃತಪಟ್ಟ ಬಗ್ಗೆ ಮಾಹಿತಿ ಇಲ್ಲದ ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳು, ಕಳೆದ ಜುಲೈ ಜುಲೈ 9ರಂದು ಕೊಡಗಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.
ಇಲಾಖೆಯ ನೌಕರ ಮೃತಪಟ್ಟ ವಿಚಾರ ಗೊತ್ತಿಲ್ಲದೆ ವರ್ಗಾವಣೆ ಮಾಡಿದೆಯಾ ಅಥವಾ ಸಾಯುವ ಮುನ್ನ ಅಶೋಕ್ ಪುಟಪಾಕ್ ವರ್ಗಾವಣೆ ಬಯಸಿದ್ದರಾ ಎಂದು ಜಿಲ್ಲಾಡಳಿತವೇ ಈ ಬಗ್ಗೆ ಸ್ಪಷ್ಟ ಮಾಹಿತಿ ನೀಡಬೇಕಷ್ಟೇ.

Continue Reading
Click to comment

Leave a Reply

Your email address will not be published. Required fields are marked *

Kodagu

ಚಿಕ್ಕಮ್ಮನ ಮೇಲೆ ಗುದ್ದಲಿಯಿಂದ ಹಲ್ಲೆ: ಆರೋಪಿ ಆರೆಸ್ಟ್‌

Published

on

ಮಡಿಕೇರಿ: ಪೊನ್ನಂಪೇಟೆ ತಾಲೂಕಿನ ಬೆಸಗೂರು ಗ್ರಾಮದಲ್ಲಿ ಸ್ವಂತ ಚಿಕ್ಕಮ್ಮನನ್ನೇ ಗುದ್ದಲಿಯಿಂದ ಹಲ್ಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊನ್ನಂಪೇಟೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಏನಿದು ಪ್ರಕರಣ?

ಅರಮಣಮಾಡ ಸಚಿನ್‌(42) ಎಂಬಾತ ಅರಮಣಮಾಡ ಬಾಗು(56) ಎಂಬುವವರ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದನು. ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ಮಧ್ಯೆ ಹಿಂದಿನಿಂದಲೂ ಪರಸ್ಪರ ವೈಶ್ಯಮ್ಯವಿದ್ದು, ಇಂದು ಗದ್ದೆಗೆ ತೆರಳುವ ಹಾದಿಗಾಗಿ ಇವರಿಬ್ಬರ ಮಧ್ಯೆ ಗಲಾಟೆ ನಡೆದು ಹಲ್ಲೆ ನಡೆಸಲಾಗಿದೆ ಎಂದು ತಿಳಿದು ಬಂದಿತ್ತು. ಹೀಗಾಗಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

 

Continue Reading

Kodagu

ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರ ಮೇಲೆ ಎಫ್ಐಆರ್ ದಾಖಲು

Published

on

ಮಡಿಕೇರಿ: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜನಿಕಂಡ ಮಹೇಶ್ ನಾಚಯ್ಯ ಅವರ ಮೇಲೆ ಬ್ರಹ್ಮಗಿರಿ ಕೊಡವ ವಾರ ಪತ್ರಿಕೆಯ ಸಂಪಾದಕಿ ಉಳಿಯಂಡ ಡಾಟಿ ಪೂವಯ್ಯ ಅವರು ನೀಡಿದ ದೂರಿನ್ವಯ ಭಾರತೀಯ ನ್ಯಾಯ ಸಂಹಿತೆ (BNS) U\S 75(1)(iv) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.


ಶುಕ್ರವಾರ(ಜು.18) ಪಿರ್ಯಾದಿಯವರು ಮಡಿಕೇರಿ ನಗರ ಮಹಿಳಾ ಠಾಣೆಗೆ ಹಾಜರಾಗಿ ನೀಡಿದ ಪುಕಾರಿನ ಸಾರಾಂಶವೇನೆಂದರೆ,ಪಿರ್ಯಾದಿಯವರ 38 ವರ್ಷಗಳಿಂದ ಬ್ರಹ್ಮಗಿರಿ ಕೊಡವ ವಾರ ಪತ್ರಿಕೆಯಲ್ಲಿ ಉಪಸಂಪಾದಕಿಯಾಗಿ ಕಾರ್ಯನಿರ್ವಹಿಸಿಕೊಂಡಿದ್ದು, ವೈಯಕ್ತಿಕ ದ್ವೇಷ ಎಂಬಂತೆ ಮಾನಹಾನಿ ಮಾಡುವ ಉದ್ದೇಶದಿಂದ ಪೂಮಾಲೆ ಪತ್ರಿಕೆಯ ಸಂಪಾದಕ ಮತ್ತು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಅಜ್ಜನಿಕಂಡ ಮಹೇಶ್ ನಾಚಯ್ಯ ಅವರ ವ್ಯಾಟ್ಸ್ ಅಪ್ ನಂಬರ್ ನಿಂದ ದಿನಾಂಕ 6-07-2025ರಂದು ಸಾಮಾಜಿಕ ಜಾಲತಾಣವಾದ ವ್ಯಾಟ್ಸ್ ಅಪ್ ಗುಂಪುಗಳಲ್ಲಿ ಹಾಗೂ ಬೇರೆಯವರ ವೈಯಕ್ತಿಕ ವ್ಯಾಟ್ಸ್ ಅಪ್ ನಂಬರ್ ಳಿಗೆ ಪಿರ್ಯಾದಿಯವರನ್ನು ಕೊಡವ ಭಾಷೆಯಲ್ಲಿ “ಎಲ್ಲಾ ಬೆತ್ತಲೆ ಆನವಡ ಕೊಣಿ ನೋಟಿಯಪ್ಪ(ಎಲ್ಲಾ ಬೆತ್ತಲಾದವಳ ಚೆಲ್ಲಾಟ ನೋಡ್ರಪ್ಪಾ) ಎಂಬುದಾಗಿ ತೀರಾ ಆಕ್ಷೇಪಕಾರಿಯಾಗಿಯೂ ಆಘಾತಕಾರಿಯಾಗಿಯೂ ಟಿಪ್ಪಣಿ ಬರೆದು ಸುಮಾರು20 ವರ್ಷಗಳ ಹಿಂದೆ ಆಗಿಹೋದ ಘಟನೆಯನ್ನೂ,ಅಂದೂ ನ್ಯಾಯಾಲಯ ನಿರಪರಾಧಿ ಎಂದು ಘೋಷಿಸಿರುವುದನ್ನು ಲೆಕ್ಕಿಸದೆ ವ್ಯಾಪಕ ಅಪಪ್ರಚಾರ ಮಾಡಿ ತೇಜೋವಧೆ ಮಾಡಿ ಪಿರ್ಯಾದಿಯವರಿಗೆ ಮಾನಸಿಕ ಹಿಂಸೆ ಅನುಭವಿಸುವಂತೆ ಮಾಡಿರುತ್ತಾರೆ.

ತಪ್ಪಿತಸ್ಥೆ ಅಲ್ಲವೆಂದು ಘನವೆತ್ತ ಮಡಿಕೇರಿ ನ್ಯಾಯಾಲಯ ತೀರ್ಪು ಹೊರಡಿಸಿರುವುದನ್ನು ಮರೆಮಾಚಿ ಕುತಂತ್ರಿಗಳು ಪಿರ್ಯಾದಿಯವರ ಮೇಲೆ ಆರೋಪಿಸಿದ್ದ ಹಳೆ ವದಂತಿಗಳನ್ನು ಫೋಟೋ ಸಹಿತ ಪ್ರಕಟಿಸಿ ಎಲ್ಲಾ ಗ್ರೂಪ್ ಗಳಿಗೆ ಹರಡಿ ಆರೋಪ ,ಅಸಹ್ಯಕರ ಲೈಂಗಿಕ ಅರ್ಥ ಛಾಯೆ ಬರುವಂತೆ ಶಬ್ದ ಬಳಸಿ ಆಕ್ಷೇಪವಾದ ವಾಕ್ಯಗಳನ್ನು ದುರುದ್ದೇಶದಿಂದ ಬಳಸಿ ಲೈಂಗಿಕವಾಗಿ ಬಣ್ಣದ ಟೀಕೆಗಳ ಪದಗಳನ್ನು ಉಪಯೋಗಿಸಿ ಕಿರುಕುಳ ಕೊಟ್ಟದ್ದು ಪಿರ್ಯಾದಿಯವರನ್ನು ಕಳಂಕಿತ ಮಹಿಳೆ ಎಂಬಂತೆ ಬಿಂಬಿಸಿ ಮಾನಸಿ ಆಘಾತ ಉಂಟುಮಾಡಿರುತ್ತಾರೆ.

ಇದರಿಂದ ಮಾನಸಿಕವಾಗಿ ಬಹಳಷ್ಟು ನೊಂದಿರುವ ಪಿರ್ಯಾದಿ ತುಂಬಾ ಕುಗ್ಗಿ ಹೋಗಿರುತ್ತೇನೆ.ಆದ್ದರಿಂದ ಅಜ್ಜನಿಕಂಡ ಮಹೇಶ್‌ ನಾಚಯ್ಯವರ ಮೇಲೆ ಕಾನೂನು ಕ್ರಮಕೈಗೊಳ್ಳಬೇಕಾಗಿ ಕೊಟ್ಟ ಪುಕಾರಿಗೆ FIR ದಾಖಲಾಗಿದೆ.

Continue Reading

Kodagu

ಸ್ಟಾರ್ ಆಫ್ ಕರ್ನಾಟಕ ಪ್ರಶಸ್ತಿ ಗರಿಯನ್ನು ತನ್ನ ಮುಡಿಗೇರಿಸಿಕೊಂಡ ಭರತನಾಟ್ಯ ಕಲಾವಿದೆ ಕೊಂಪುಳಿರ ಪಿ.ದಿಥ್ಯ

Published

on

ಮಡಿಕೇರಿ: ಬೆಳೆಯುವ ಸಿರಿ ಮೊಳಕೆಯಲ್ಲೇ ಎನ್ನುವಂತೆ ವಿರಾಜಪೇಟೆಯ ಪುಟ್ಟ ಪೋರಿ ಭರತನಾಟ್ಯ ಕಲಾವಿದೆ ಕೊಂಪುಳಿರ.ಪಿ.ದಿಥ್ಯ ಗೆ ಸ್ಟಾರ್ ಆಫ್ ಕರ್ನಾಟಕ-2025 ರ ಪ್ರಶಸ್ತಿ ಗರಿಯನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ.

ವಿರಾಜಪೇಟೆಯ ನಾಟ್ಯಾಂಜಲಿ ನಾಟ್ಯ ನೃತ್ಯ ಶಾಲೆಯಲ್ಲಿ ತನ್ನ ಚಿಕ್ಕ ವಯಸ್ಸಿಗೆ ಅಮೋಘ ಪ್ರತಿಭೆ ಮಾಡಿರುವ ಇವರು ತನ್ನ ಗುರುಗಳಾದ ವಿದುಷಿ ಹೇಮಾವತಿ ಮತ್ತು ಕಾವ್ಯ ಇವರ ಮಾರ್ಗದರ್ಶನದಲ್ಲಿ ಈ ಸಾಧನೆ ಮಾಡಿದ್ದಾರೆ.

ಈ ಸಾಧನೆಯನ್ನು ಮೈಸೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ದಿಥ್ಯಳ ಪ್ರತಿಭೆಯನ್ನು ಗಣ್ಯರು ಗುರುತಿಸಿದ್ದು, ಬಳಿಕ ಈ ರಾಜ್ಯಮಟ್ಟದ ಪ್ರಶಸ್ತಿಗೆ ತನ್ನ ಸಣ್ಣ ವಯಸ್ಸಿನಲ್ಲೇ ಆಯ್ಕೆಯಾದರು.

ಕಾವ್ಯಶ್ರೀ ಚಾರಿಟೇಬಲ್ ಟ್ರಸ್ಟ್, ರೋಟರಿ ಕ್ಲಬ್ ಹಾಗೂ ದಿನೇಶ್ ಫೌಂಡೇಶನ್ ಸಹಯೋಗದೊಂದಿಗೆ ಬೆಂಗಳೂರಿನ ಬನಶಂಕರಿ 2ನೇ ಹಂತದಲ್ಲಿರುವ ಜೆಎಸ್‍ಎಸ್ ಶಾಲಾ ಆವರಣದಲ್ಲಿರುವ ಶ್ರೀ ಘನಲಿಂಗ ಶಿವಯೋಗಿ ಸಭಾಂಗಣದಲ್ಲಿ ನಡೆದ ಕನ್ನಡ ಸಾಹಿತ್ಯ ಸಂಭ್ರಮ ಹಾಗೂ ಸಾಧಕರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಕೊಂಪುಳಿರ.ಪಿ.ದಿಥ್ಯ ಗೆ ಸ್ಟಾರ್ ಆಫ್ ಕರ್ನಾಟಕ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ದಿಥ್ಯ ವಿರಾಜಪೇಟೆ ಪಟ್ಟಣದ ವಿನಾಯಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎರಡನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ಇಲ್ಲಿನ ಚಿಕ್ಕಪೇಟೆಯ ನಿವಾಸಿ ನಿವೃತ್ತ ಶಿಕ್ಷಕರುಗಳಾದ ಕೊಂಫುಳಿರ ಯು ಪಳಂಗಪ್ಪ, ತಾರಾಮಣಿ ಅವರ ಮೊಮ್ಮಗಳು ಹಾಗೂ ಪೃಥ್ವಿ ಕುಮಾರ್ ಮತ್ತು ಭವ್ಯ ದಂಪತಿಯ ಪುತ್ರಿಯಾಗಿದ್ದಾರೆ.

Continue Reading

Trending

error: Content is protected !!