Connect with us

Uncategorized

ನಡುರಸ್ತೆಯಲ್ಲೇ ಇಬ್ಬರು ರೌಡಿಶೀಟರ್ ಗಳ ಭೀಕರ ಹತ್ಯೆ

Published

on

ಶಿವಮೊಗ್ಗ ಬ್ರೇಕಿಂಗ್:
ಶಿವಮೊಗ್ಗದಲ್ಲಿ ಹಾಡಹಗಲೇ ಗ್ಯಾಂಗ್ ವಾರ್.

ನಡುರಸ್ತೆಯಲ್ಲೇ ಇಬ್ಬರು ರೌಡಿಶೀಟರ್ ಗಳ ಭೀಕರ ಹತ್ಯೆ

ಮಾರಕಾಸ್ತ್ರ, ಚಪ್ಪಡಿ ಕಲ್ಲು, ಸೈಕಲ್ ಎತ್ತಿ ಹಾಕಿ ಭೀಕರ ಹತ್ಯೆ.

ಶಿವಮೊಗ್ಗದ ಲಷ್ಕರ್ ಮೊಹಲ್ಲಾ ಸರ್ಕಲ್ ಬಳಿ ಘಟನೆ.

ತುಂಗಾನಗರ ಠಾಣಾ ವ್ಯಾಪ್ತಿಯ ರೌಡಿಶೀಟರ್ ಶೋಹೆಬ್@ ಸೇಬು ಭೀಕರವಾಗಿ ಹತ್ಯೆ.

ದೊಡ್ಡಪೇಟೆ ಠಾಣಾ ವ್ಯಾಪ್ತಿಯ ಇನ್ನೋರ್ವ ರೌಡಿಶೀಟರ್ ಗೌಸ್ ಭರ್ಬರ ಹತ್ಯೆ.

ರೌಡಿ ಶೀಟರ್ ಯಾಸೀನ್ ಕುರೇಶಿ ಮೇಲೆ ಅಟ್ಯಾಕ್ ಮಾಡಿದ್ದ ಇನ್ನೊಂದು ಗ್ಯಾಂಗ್

ಯಾಸೀ‌ನ್ ಗೆ ಚಾಕುವಿನಿಂದ ಚುಚ್ಚಿರುವ ದುಷ್ಕರ್ಮಿಗಳ ಗುಂಪು

ಗಂಭೀರ ಗಾಯಗೊಂಡಿರುವ ಯಾಸೀನ್ ಕುರೇಶಿ ಖಾಸಗಿ ಆಸ್ಪತ್ರೆಗೆ ದಾಖಲು

ಯಾಸೀನ್ ಮೇಲೆ ದಾಳಿ ಮಾಡಿರುವ ವೇಳೆ ಪ್ರತಿದಾಳಿ ಮಾಡಿರುವ ಯಾಸೀನ್ ಕುರೇಶಿ ಗ್ಯಾಂಗ್

ದಾಳಿಗೆ ಬಂದಿದ್ದ ಇಬ್ಬರು ರೌಡಿಶೀಟರ್ ಗಳು ಸ್ಥಳದಲ್ಲೇ ಬರ್ಬರ್ ಹತ್ಯೆ

ಬ್ಯಾಟ್,ಲಾಂಗು,ಮಚ್ಚುಗಳಿಂದ ಕೊಚ್ಚಿ ಕೊಲೆ

ಕೊಲೆ ಮಾಡಿ ಪರಾರಿಯಾದ ಕುರೇಶಿ ಗ್ಯಾಂಗ್ ನ ಯುವಕರು

ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣ

ಸ್ಥಳದಲ್ಲಿ ಪೊಲೀಸ್ ಬೀಗಿ ಬಂದೋಬಸ್ತ್

ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.

Continue Reading
Click to comment

Leave a Reply

Your email address will not be published. Required fields are marked *

Uncategorized

ಗ್ರಾಮೀಣ ಶಾಲೆಗಳ ಬೆಳವಣಿಗೆಗೆ ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸಿ : ಎಸಿ ಶ್ರೀನಿವಾಸ್ ಕರೆ

Published

on

ನಾಗಮಂಗಲ : ಗ್ರಾಮಾಂತರ ಪ್ರದೇಶಗಳಲ್ಲಿ ಸರ್ಕಾರಿ ಶಾಲೆಗಳ ಸರ್ವತೋಮುಖ ಬೆಳವಣಿಗೆಗೆ ಹಾಗೂ ಕಡ್ಡಾಯವಾಗಿ ಮಕ್ಕಳನ್ನು ಸರ್ಕಾರಿಗೆ ಶಾಲೆಗೆ ಸೇರಿಸುವಂತೆ ಉಪವಿಭಾಗಾಧಿಕಾರಿ ಶ್ರೀನಿವಾಸ್ ಕರೆ ನೀಡಿದರು.

ಅವರು ತಾಲೂಕಿನ ದೇವಲಾಪುರ ಹೋಬಳಿ ಕೇಂದ್ರದಲ್ಲಿರುವ ಕರ್ನಾಟಕ ಪಬ್ಲಿಕ್ ಸ್ಕೂಲ್ ಸಿರಿ ಸಂಭ್ರಮ -25 ಶಾಲಾ ವಾರ್ಷಿಕೋತ್ಸವದ ನಗಾರಿ ಬಾರಿಸುವ ಮುಖಾಂತರ ಉದ್ಘಾಟಿಸಿ ಮಾತನಾಡಿದರು.

ಮಕ್ಕಳಿಗೆ ಶಿಕ್ಷಣ ಕೊಡಿಸುವ ಮುಖಾಂತರ, ಶಿಕ್ಷಣ ಆಸ್ತಿ ನೀಡುವ ಜೊತೆಗೆ ಜ್ಞಾನ ಸಂಪತ್ತು ಕೂಡ ಮೈಗೂಡಿಸಿಕೊಂಡು ಸಮಾಜ ಕಟ್ಟಲು ಅವರುಗಳು ಮಾದರಿಯಾಗಲು ಸಹಕಾರವಾಗುತ್ತದೆ.

ಗ್ರಾಮೀಣ ಪ್ರದೇಶದಲ್ಲಿ ವಿಧ್ಯಾರ್ಜನೆಯ ಕೊಡಿಸಲು ಖಾಸಗಿ ಶಾಲೆಯ ವ್ಯಾಮೋಹಗಳನ್ನ ಬಿಟ್ಟು ಸರ್ಕಾರಿ ಶಾಲೆಗೆ ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಸೇರಿಸಿ ಅವರುಗಳ ಉಜ್ವಲ ಭವಿಷ್ಯಕ್ಕೆ ಹೊಸ ಮುನ್ನುಡಿ ಬರೆಯಲು ಪೋಷಕರು ಸಹಕರಿಸುವಂತೆ ತಿಳಿಸಿದರು.

ಇದೇ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯರಾದ ಅಪ್ಪಾಜಿಗೌಡ, ಮಂಡ್ಯ ಡಯಟ್ ಪ್ರಾಚಾರ್ಯ ಮಹೇಶ್, ತಾಲೂಕು ಶಿಕ್ಷಣಾಧಿಕಾರಿ ಯೋಗೇಶ್, ಸಂಪನ್ಮೂಲ ಸಮನ್ವಯಧಿಕಾರಿ ರವೀಶ್. ಜಿಲ್ಲಾ ಮತ್ತು ತಾಲೂಕು ಶಿಕ್ಷಣ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜೆ ವೈ ಮಂಜುನಾಥ್ ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ರಮೇಶ್ ತಾಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ರಮೇಶ್ ಉಪಸ್ಥಿತರಿದ್ದರು

Continue Reading

Uncategorized

ಜಿಲ್ಲಾಧ್ಯಕ್ಷರಾಗಿ ತಿತಿಮತಿ ಶರತ್ ಕುಮಾರ್ ಆಯ್ಕೆ

Published

on

ತಿತಿಮತಿ : ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘ(ರಿ)ದ ಜಿಲ್ಲಾಧ್ಯಕ್ಷರಾಗಿ ತಿತಿಮತಿ ಶರತ್ ಕುಮಾರ್ ಆಯ್ಕೆ ಆಗಿದ್ದಾರೆ.
ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘ( ರಿ) ಬೆಂಗಳೂರು ಘಟಕದ ಕೊಡಗು ಜಿಲ್ಲಾ ಘಟಕಕ್ಕೆ ಪದಾಧಿಕಾರಿಗಳ ನೇಮಕ ಮಾಡಲಾಗಿದ್ದು, ಸರ್ಕಾರಿ ಪ್ರೌಢಶಾಲೆ ತಿತಿಮತಿಯ ಶಿಕ್ಷಕರಾದ ಶರತ್ ಕುಮಾರ್ ಇವರನ್ನು ಜಿಲ್ಲಾಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮುಳ್ಳುಸೋಗೆ ಶಿಕ್ಷಕ ಶಿವಲಿಂಗ ಜಿಲ್ಲಾ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.
ಸರ್ಕಾರಿ ಪ್ರೌಢಶಾಲೆ ಮಾಯಮುಡಿಯ ಶಿಕ್ಷಕ ಆರ್ ದಿವಾಕರ್ ಜಿಲ್ಲಾ ಖಜಾಂಚಿಯಾಗಿ ಆಯ್ಕೆಯಾಗಿದ್ದಾರೆ.
ಸರ್ಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಶಿಕ್ಷಕಿ ಮಂದಾಕಿನಿಯನ್ನು ರಾಜ್ಯ ಪರಿಷತ್ ಸದಸ್ಯ ರಾಗಿ ಆಯ್ಕೆಯಾಗಿದ್ದಾರೆ.
ಇವರೆಲ್ಲರಿಗೂ ರಾಜ್ಯಾಧ್ಯಕ್ಷ ಚೌಡಪ್ಪ, ರಾಜ್ಯ ಕಾರ್ಯಧ್ಯಕ್ಷ ಕಿರಣ್ ರಘುಪತಿ, ರಾಜ್ಯ ಪ್ರಧಾನ ಕಾರ್ಯದರ್ಶಿ ರವಿ ಪ್ರಕಾಶ್ ಹಾಗೂ ರಾಜ್ಯ ಖಜಾಂಚಿಗಳಾದ ಸಂತೋಷ್ ಪಟ್ಟಣಶೆಟ್ಟಿ ಶುಭ ಹಾರೈಸಿದ್ದಾರೆ.

Continue Reading

Uncategorized

ಪ್ರಥಮ ಆರ್ಬಿಟಲ್‌ ಅಥೆರೆಕ್ಟಮಿ ಶಸ್ತ್ರಚಿಕಿತ್ಸೆ ಯಶಸ್ವಿ

Published

on

ದಾವಣಗೆರೆ: ಆರ್ಬಿಟಲ್‌ ಅಥೆರೆಕ್ಟಮಿ ಎಂಬ ಎರಡು ಕ್ಲಿಷ್ಟಕರ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನೆರವೇರಿಸಿ ಇಲ್ಲಿನ ಎಸ್‌ ಎಸ್‌ ನಾರಾಯಣ ಹೆಲ್ತ್‌ ಸೂಪರ್‌ ಸ್ಪೇಷಾಲಿಟಿ ಆಸ್ಪತ್ರೆಯ ವೈದ್ಯರು ವಿಶೇಷ ಸಾಧನೆಗೈದಿದ್ದು ವಿಶೇಷವೆಂದರೆ ಇದು ಮಧ್ಯ ಕರ್ನಾಟಕದಲ್ಲಿ ನೇರವೇರಿಸಿದ ಪ್ರಪ್ರಥಮ ಶಸ್ತ್ರಚಿಕಿತ್ಸೆಯಾಗಿದೆ.

 

ಹಿರಿಯ ಹೃದ್ರೋಗ ತಜ್ಞ ಡಾ. ಧನಂಜಯ ಆರ್‌.ಎಸ್ ಹಾಗೂ ಅವರ ತಂಡ ಈ ಚಿಕಿತ್ಸೆಯನ್ನು ನೀಡಿದ್ದು ಇಬ್ಬರು ರೋಗಿಗಳು ಸಂಪೂರ್ಣ ಗುಣಮುಖರಾಗಿ ಇತ್ತೀಚೆಗೆ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ.

 

ಈ ಚಿಕಿತ್ಸೆಯಲ್ಲಿ ಡಾ. ಧನಂಜಯ ಅವರ ತಂಡ ಇಬ್ಬರೂ ರೋಗಿಗಳಲ್ಲಿ ಪರಿಧಮನಿಯ ಅಪಧಮನಿಗಳಲ್ಲಿ ( coronary arteries) ಕ್ಯಾಲ್ಸಿಯಂ ಶೇಖರಣೆಗೊಂಡು ರಕ್ತ ಪರಿಚಲನೆ ಸುಗಮವಾಗದೇ ಹೃದಯ ಬೇನೆಯಿಂದ ಬಳಲುತ್ತಿದ್ದರು ಇದನ್ನು ಅತ್ಯಂತ ನವೀನವಾದ ತಂತ್ರಜ್ಞಾನ ಆರ್ಬಿಟಲ್‌ ಅಥೆರೆಕ್ಟಮಿ ಶಸ್ತ್ರಚಿಕಿತ್ಸೆ ಮೂಲಕ ಪರಿಹರಿಸಿದ್ದಾರೆ.

ಏನಿದು ಚಿಕಿತ್ಸೆ

ಆರ್ಬಿಟಲ್‌ ಅಥೆರೆಕ್ಟಮಿಯು ಆಂಜಿಯೋಪ್ಲಾಸ್ಟಿಗಳಿಗಾಗಿ ಕ್ಯಾಲ್ಸಿಯಂ ಶೇಖರಣೆಗೊಂಡ ಅಪಧಮನಿಗಳನ್ನುಸ್ವಚ್ಛಗೊಳಿಸಲು ಉಪಯೋಗಿಸುವ ತಂತ್ರಜ್ಞಾನವಾಗಿದೆ. ಇದರಲ್ಲಿ ಉಪಯೋಗಿಸುವ ಸಾಧನ ವಜ್ರದ ತುದಿ ಹೊಂದಿದ್ದು, ಪ್ರತಿ ಸೆಕೆಂಡಗೆ ೮೦,೦೦೦ ದಿಂದ ೧,೨೦,೦೦೦ ಸಾರಿ ತಿರುಗುವ ಮೂಲಕ, ಅಪಧಮನಿಗಳಲ್ಲಿ ಜಮಾವಣೆಗೊಂಡ ಕ್ಯಾಲ್ಸಿಯಂನ್ನು ತೆಗೆದು ಹಾಕುತ್ತದೆ. ಇದರಿಂದ ಸ್ಟೆಂಟ್‌ ಹಾಕಲು ಇರುವ ಅಡೆತಡಗಳು ದೂರವಾಗಿ, ಸ್ಟೆಂಟ್‌ ಹಾಕಿದ ನಂತರ ಹೃದಯಕ್ಕೆ ರಕ್ತಸಂಚಾರ ಸರಾಗವಾಗಿ ತೊಂದರೆ ದೂರವಾಗುತ್ತದೆ.

ಸುಮಾರು ೭೪ ವರ್ಷದ ಹಿರಿಯರೊಬ್ಬರು ತೀವ್ರವಾದ ಹೃದಯ ಬೇನೆಯಿಂದ ದಾವಣಗೆರೆಯ ಎಸ್‌ ಎಸ್‌ ನಾರಾಯಣ ಹೆಲ್ತ್‌ ಸೂಪರ್‌ ಸ್ಪೇಷಾಲಿಟಿ ಆಸ್ಪತ್ರೆ ಗೆ ದಾಖಲಾಗಿದ್ದರು. ಅವರನ್ನು ತಪಾಸಣೆ ನಡೆಸಿದ ವೈದ್ಯರು ಇವರ ಹೃದಯದ ಪರಿಧಮನಿಯ ಅಪಧಮನಿಗಳಲ್ಲಿ ( coronary arteries) ಕ್ಯಾಲ್ಸಿಯಂ ಶೇಖರಣೆಗೊಂಡು ರಕ್ತ ಸಂಚಾರ ತೊಡಕಾಗುತ್ತಿರುವುದು ಎಂದು ತಿಳಿದು ಬಂದಿದೆ.

 

ಇದೇ ವೇಳೆ ೬೬- ವರ್ಷದ ಹಿರಿಯ ವ್ಯಕ್ತಿಯು ಸಹ ಇದೇ ತರಹದ ಹೃದಯ ಬೇನೆಯೊಂದಿಗೆ ಆಸ್ಪತ್ರೆಗೆ ಬಂದಿದ್ದರು, ಇವರನ್ನು ಸಹ ತಪಾಸಣೆಗೆ ಒಳಪಡಿಸಿದಾಗ ಇವರಿಗೂ ಸಹ ೭೪ ವರ್ಷದ ರೋಗಿ ತರಹ ಕ್ಯಾಲ್ಸಿಯಂ ಆರ್ಟರಿಗಳಲ್ಲಿ ಗಟ್ಟಿಯಾಗಿದೆ ಎಂದು ತಿಳಿದು ಬಂದಿದೆ.

 

 

ಈ ಇಬ್ಬರು ರೋಗಿಗಳಿಗೆ, ಸುಗಮ ರಕ್ತ ಸಂಚಾರಕ್ಕೆ ಕ್ಯಾಲ್ಸಿಯಂ ಶೇಖರಣೆಯಿಂದ ಸ್ಟೆಂಟ್‌ ಅಳವಡಿಸುವುದು ಕ್ಲಿಷ್ಟಕರವಾಗಿತ್ತು. ಇದನ್ನು ಮನಗಂಡ ವೈದ್ಯರು ಆರ್ಬಿಟಲ್‌ ಅಥೆರೆಕ್ಟಮಿ ಎಂಬ ವಿನೂತನ ಮತ್ತು ಅತ್ಯಂತ ಸುಧಾರಿತ ತಂತ್ರಜ್ಞಾನದ ಮೂಲಕ ಆರ್ಟರಿಗಳಲ್ಲಿ ಶೇಖರಣೆಗೊಂಡು ಗಟ್ಟಿಯಾಗಿದ್ದ ಕ್ಯಾಲ್ಸಿಯಂ ಅನ್ನು ತೆಗೆದು ಸ್ಟೆಂಟ್‌ ಅಳವಡಿಸಿ ರೋಗಿಗಳ ಜೀವವನ್ನು ಕಾಪಾಡಿದ್ದಾರೆ.

 

ಈ ನವೀನ ತಂತ್ರಜ್ಞಾನದ ಬಗ್ಗೆ ಮಾತನಾಡಿದ ಡಾ. ಧನಂಜಯ “ ಆರ್ಬಿಟಲ್‌ ಅಥೆರೆಕ್ಟಮಿ ಎಂಬ ವಿನೂತನ ಚಿಕಿತ್ಸೆ ನಮ್ಮ ಮಧ್ಯ ಕರ್ನಾಟಕದ ಜನರಿಗೆ ಈಗ ಎಸ್‌ ಎಸ್‌ ನಾರಾಯಣ ಹೆಲ್ತ್‌ ಸೂಪರ್‌ ಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ಲಭ್ಯವಿದೆ. ಇತ್ತೀಚೆಗೆ ನಾವು ಈ ಚಿಕಿತ್ಸೆಯನ್ನು ಇಬ್ಬರು ರೋಗಿಗಳಿಗೆ ನೀಡಿದ್ದೇವೆ, ಚಿಕಿತ್ಸೆ ಬಹಳ ಪರಿಣಾಮಕಾರಿಯಾಗಿದೆ ಅಲ್ಲದೆ ಬಹಳ ಬೇಗ ರೋಗಿಗಳು ಸಂಪೂರ್ಣವಾಗಿ ಗುಣಮುಖಗೊಂಡು ಮನೆಗೆ ತೆರಳಿದ್ದಾರೆ. ಎಸ್‌ ಎಸ್‌ ನಾರಾಯಣ ಹೆಲ್ತ್‌ ಸೂಪರ್‌ ಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ಹೃದಯರೋಗಕ್ಕೆ ಸಂಬಂಧಿಸಿದ ಎಲ್ಲ ತರಹದ ಸಮಸ್ಯೆಗಳಿಗೆ ಅತ್ಯಾಧುನಿಕ ಚಿಕಿತ್ಸೆ ಲಭ್ಯವಿದೆ. ಮಧ್ಯ ಕರ್ನಾಟಕದ ಜನರಿಗೆ ವಿಶ್ವದರ್ಜೆಯ ಅತ್ಯಾಧುನಿಕ ಚಿಕಿತ್ಸೆ ನೀಡುವ ನಾರಾಯಣ ಹೆಲ್ತ್‌ ನ ಪ್ರಯತ್ನ ನಿರಂತರವಾಗಿರಲಿದೆ,” ಎಂದರು.

Continue Reading

Trending

error: Content is protected !!