Connect with us

Uncategorized

ಅಖಿಲ ಭಾರತ ಸಮ್ಮೇಳನದಲ್ಲಿ 87 ಪುಸ್ತಕ ಪ್ರಕಟ: ನಾಡೋಜ ಮಹೇಶ ಜೋಶಿ

Published

on

ಮಂಡ್ಯ: ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 87 ಪುಸ್ತಕಗಳನ್ನು ಪ್ರಕಟಿಸಲಾಗುವುದು, ಮಂಡ್ಯ ಜಿಲ್ಲೆಯ ನಾಡು ನುಡಿ ಸಾಂಸ್ಕೃತಿಕ ಕಲೆಗಳಿಗೆ ಸೀಮಿತವಾದ ವಿಷಯಗಳಿಗೆ ಹೆಚ್ಚು ಒತ್ತು ನೀಡಲಾಗುವುದು ಎಂದು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ನಾಡೋಜ ಮಹೇಶ ಜೋಶಿ ಹೇಳಿದರು.

ನಗರದ ಖಾಸಗಿ ಹೋಟೆಲ್‌ನಲ್ಲಿ ಶನಿವಾರ ನಡೆದ ಪುಸ್ತಕ ಪ್ರಕಟಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

87 ಪುಸ್ತಕಗಳ ಪೈಕಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಅತಿ ಮುಖ್ಯವಾದ ಕೆಲವು ಪುಸ್ತಕಗಳನ್ನು ಮರು ಮುದ್ರಣ ಮಾಡಲಾಗುವುದು. ಇದರ ಜೊತೆಗೆ ಮಂಡ್ಯ ಜಿಲ್ಲೆಗೆ ಸೀಮಿತವಾದ ವಿಷಯಗಳನ್ನಿಟ್ಟುಕೊಂಡು ಜಿಲ್ಲೆಯ ಸಾಹಿತಿಗಳು, ಲೇಖಕರಿಂದ 50ಕ್ಕೂ ಹೆಚ್ಚು ಪುಸ್ತಕಗಳನ್ನು ಹೊಸತಾಗಿ ರಚಿಸಲು ಪ್ರಕಟಣಾ ಸಮಿತಿ ರೂಪುರೇಷೆ ಹಮ್ಮಿಕೊಳ್ಳುತ್ತದೆ ಎಂದು ತಿಳಿಸಿದರು.

ಜಿಲ್ಲೆಗೆ ಸಂಬಂಧಿಸಿದಂತೆ ಪ್ರವಾಸಿ ತಾಣಗಳು, ಸಾಂಸ್ಕೃತಿಕ ಕೇಂದ್ರಗಳು, ದೇಶಕ್ಕಾಗಿ ಪ್ರಾಣ ಕೊಟ್ಟ ಹುತಾತ್ಮರು, ಸಾರಸ್ವತ ಲೋಕ ಕಟ್ಟಿದವರು, ಜಿಲ್ಲೆಯ ಸಾಧಕರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಡೆದು ಬಂದ ದಾರಿ, ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್.ಎಂ.ವಿಶ್ವೇಶ್ವರಯ್ಯ, ಕರ್ನಾಟಕ ಏಕೀಕರಣ, ಕೃಷ್ಣರಾಜಸಾಗರ(ಕನ್ನಂಬಾಡಿ) ಏಳು ತಾಲ್ಲೂಕುಗಳ ದರ್ಶನ, ಸಾಂಸ್ಕೃತಿಕ ಕೇಂದ್ರಗಳು, ಜಿಲ್ಲೆಯ ವಾಸ್ತುಶಿಲ್ಪ, ಆಧ್ಯಾತ್ಮಿಕ ಹಿನ್ನೆಲೆಯಲ್ಲಿ ದಾರಿ ತೋರಿದ ದಾರ್ಶನಿಕರು, ನಾಡು ಕಟ್ಟಿದವರು ವಿಷಯಗಳೂ ಸೇರಿದಂತೆ ಇನ್ನೂ ಹಲವು ವಿಷಯಗಳ ಬಗ್ಗೆ 80 ರಿಂದ 100 ಪುಟಗಳ ಒಳಗಿನ ಪುಸ್ತಕಗಳನ್ನು ಹೊರ ತರಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಈ ಕೃತಿಗಳನ್ನು ಜನಸಾಮಾನ್ಯ ಓದುಗರನ್ನು ದೃಷ್ಟಿಯಲ್ಲಿಟ್ಟುಕೊಂಡು ಎಲ್ಲರಿಗೂ ಅರ್ಥವಾಗುವ ಭಾಷಾ ಶೈಲಿಯಲ್ಲಿ ರಚಿಸಲಾಗುವುದು. ಕೃತಿಗಳನ್ನು ರಚಿಸುವ ಆಸಕ್ತಿಯುಳ್ಳ ಲೇಖಕರಿಗೆ ಅವಕಾಶ ನೀಡಬೇಕಾಗಿದ್ದು ಆಯಾ ಕ್ಷೇತ್ರದಲ್ಲಿ ಪರಿಣತಿ, ತಿಳುವಳಿಕೆ, ಆಸಕ್ತಿ ಇರುವವರನ್ನು ಸಾಮಾಜಿಕ, ಪ್ರಾದೇಶಿಕ ಮತ್ತು ಪ್ರತಿಭಾ ನ್ಯಾಯದ ಆಧಾರದ ಮೇಲೆ ಲೇಖಕರನ್ನು ಆಯ್ಕೆ ಮಾಡಿ ಹಾಗೂ ಕಾಲಮಿತಿಯೊಳಗೆ ಪುಸ್ತಕ ರಚಿಸಿ ಕೊಡಲು ಬದ್ಧತೆ ಇರುವವರ ಹೆಸರನ್ನು ಮುಂದಿನ ಸಭೆಯೊಳಗೆ ಸೂಚಿಸಬೇಕೆಂದು ಸಮಿತಿ ಸದಸ್ಯರಿಗೆ ತಿಳಿಸಿದರು.

ಅವರುಗಳ ಬಗ್ಗೆ ಪರಿಶೀಲನೆ ನಡೆಸಿ ಆಯ್ಕೆ ಮಾಡಿ ಪುಸ್ತಕ ರಚಿಸಲು ಅವಕಾಶ ಮಾಡಿಕೊಡಲಾಗುವುದು. ಬಿಡುಗೆಯಾಗುವ ಈ ಕೃತಿಗಳು ಮೌಲಿಕ ಹಾಗೂ ಆಕರ ಗ್ರಂಥ ಆಗುವ ರೀತಿಯಲ್ಲಿರಬೇಕು. ಹಾವೇರಿಯಲ್ಲಿ ನಡೆದ 86ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಅದ್ಭುತ ಯಶಸ್ಸು ಕಂಡ ನಂತರ ಮಂಡ್ಯದಲ್ಲಿ ನಡೆಯುವ 87ನೇ ಸಮ್ಮೇಳನದ ಕುರಿತು ಕನ್ನಡಿಗರಲ್ಲಿ ಅಪಾರ ನಿರೀಕ್ಷೆ, ಮತ್ತು ಕುತೂಹಲವಿದೆ, ಈ ನಿಟ್ಟಿನಲ್ಲಿ ಇದೊಂದು ಮಾರ್ಗದರ್ಶಿ ಸಮ್ಮೇಳನವಾಗಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಾ.ಹುಸ್ಕೂರು ಕೃಷ್ಣೇಗೌಡ ಮಾತನಾಡಿ, ಹಾವೇರಿಯಲ್ಲಿ ನಡೆದ 86ನೇ ಸಮ್ಮೇಳನ ನಡೆದುದಕ್ಕಿಂತ ಹೆಚ್ಚು ಅರ್ಥಪೂರ್ಣವಾಗಿ ನಡೆಸಲಾಗುವುದು. ಮಂಡ್ಯ ಸಮ್ಮೇಳನದಲ್ಲಿ ಬಿಡುಗಡೆಯಾಗುವ ಪುಸ್ತಕಗಳು ಸಾರ್ವಕಾಲಿಕವಾಗಿ ಉಳಿಯುವಂತೆ ಮಾಡಲು ಪುಸ್ತಕ ಸಮಿತಿ ಒಗ್ಗಟ್ಟಿನಿಂದ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕಿದ್ದು, ಜಿಲ್ಲೆಯ ಘನತೆ ಹೆಚ್ಚಿಸುವ ರೀತಿಯಲ್ಲಿ ಎಲ್ಲರೂ ಸಮ್ಮೇಳನ ನಡೆಸೋಣ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸಭೆಯಲ್ಲಿ ಕೇಂದ್ರ ಕಸಾಪ ಕಾರ್ಯದರ್ಶಿ ನೇ.ಭ.ರಾಮಲಿಂಗಶೆಟ್ಟಿ, ಕೋಶಾಧ್ಯಕ್ಷ ಪಟೇಲ್ ಪಾಂಡು, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷೆ ಮೀರಾ ಶಿವಲಿಂಗಯ್ಯ, ಜಿಲ್ಲಾ ಕೋಶಾಧ್ಯಕ್ಷ ಬಿ.ಎಂ.ಅಪ್ಪಾಜಪ್ಪ, ಪದಾಧಿಕಾರಿಗಳಾದ ಧನಂಜಯ ದರಸಗುಪ್ಪೆ, ಹೊಳಲು ಶ್ರೀಧರ್, ಚಂದ್ರಲಿಂಗು, ಪೂರ್ಣಚಂದ್ರ, ಸಮಿತಿ ಸದಸ್ಯರಾದ ಸುಮಾರಾಣಿ ಶಂಭು, ಭವಾನಿ ಲೋಕೇಶ್, ಶುಭಶ್ರೀ ಪ್ರಸಾದ್, ಎಂ.ಯು.ಶ್ವೇತಾ, ಷೌಕತ್ ಆಲಿ, ಚಲುವೇಗೌಡ, ಚಂದ್ರಶೇಖರಯ್ಯ, ಶಿವಣ್ಣ, ಕೊತ್ತತ್ತಿ ರಾಜು, ಹರಿಚರಣ ತಿಲಕ್, ಧರ್ಮಪ್ಪ, ಬಸಪ್ಪ ನೆಲಮಾಕನಹಳ್ಳಿ ಭಾಗವಹಿಸಿದ್ದರು.

Continue Reading
Click to comment

Leave a Reply

Your email address will not be published. Required fields are marked *

Mandya

ಮದ್ದೂರು ತಾಲೂಕಿನ ಸೋಮನಹಳ್ಳಿ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದಲ್ಲಿ ಡಿಪ್ಲೋಮೋ ಪ್ರವೇಶ ಆರಂಭ*

Published

on

*ಮದ್ದೂರು ತಾಲೂಕಿನ ಸೋಮನಹಳ್ಳಿ ಸರ್ಕಾರಿ ಉಪಕರಣಗಾರ ಮತ್ತು ತರಬೇತಿnnnnn

ಮಂಡ್ಯ : ಮದ್ದೂರು ತಾಲೂಕಿನ ಸೋಮನಹಳ್ಳಿ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದಲ್ಲಿ ಡಿಪ್ಲೋಮೋ ಪ್ರವೇಶ ಆರಂಭವಾಗಿದೆ ಎಂದು ತರಬೇತಿ ಕೇಂದ್ರದ ಉಪನ್ಯಾಸಕ ಶಾಂತರಾಜ ಅರಸ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಮತ್ತು ಡೆನ್ಮಾರ್ಕ್ ಸರಕಾರದಿಂದ ಬೆಂಗಳೂರಿನ ರಾಜಾಜಿನಗರದಲ್ಲಿ ಸ್ಥಾಪನೆಗೊಂಡಿರುವ ಈ ಕೇಂದ್ರ ಪ್ರಸ್ತುತ 33 ಶಾಖೆಗಳನ್ನು ರಾಜ್ಯಾದ್ಯಂತ ಹೊಂದಿದೆ ಎಂದು ತಿಳಿಸಿದರು .

ಈಗಾಗಲೇ 800 ವಿದ್ಯಾರ್ಥಿಗಳು ತರಬೇತಿ ಪಡೆದು ಉನ್ನತ ಹುದ್ದೆಗಳಲ್ಲಿ ನೇಮಕಗೊಂಡು ಸ್ವಂತ ಉದ್ಯಮವನ್ನು ಕೂಡ ಆರಂಭಿಸಿದ್ದಾರೆ ಎಂದು ತಿಳಿಸಿದರು.

2024 25ನೇ ಸಾಲಿನಲ್ಲಿ ಪ್ರವೇಶ ಆರಂಭಿಸಲಾಗಿದ್ದು ಎಸ್ ಎಸ್ ಎಲ್ ಸಿ ಮತ್ತು ಐಟಿಐ ಹಾಗೂ ಪಿಯುಸಿ ತೇರ್ಗಡೆಯಾದವರು ಪ್ರವೇಶ ಪಡೆಯಬಹುದಾಗಿದೆ ಎಂದರು .

ಮತ್ತೊಬ್ಬ ಉಪನ್ಯಾಸಕ ನರೇಂದ್ರಬಾಬು ಮಾತನಾಡಿ, ಡಿಪ್ಲೋಮೋ ಇನ್ ಟೂಲ್ ಮತ್ತು ಡೈ ಮೇಕಿಂಗ್ ಕೋರ್ಸ್ಗೆ ನೇರ ಪ್ರವೇಶಾತಿ ಲಭ್ಯವಿದ್ದು ಆಸಕ್ತ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.

ಗೋಷ್ಠಿಯಲ್ಲಿ ತರಬೇತಿ ಕೇಂದ್ರದ ಪ್ರಾಂಶುಪಾಲ ಶಿವಕುಮಾರ್, ಉಪನ್ಯಾಸಕ ಸಿದ್ದಾರ್ಥ ಉಪಸ್ಥಿತರಿದ್ದರು.

Continue Reading

Mysore

ಮೈಸೂರಿನಲ್ಲಿ ಡೆಂಗ್ಯೂವಿಗೆ ಮತ್ತೊಂದು ಬಲಿ*

Published

on

 

ಮೈಸೂರು: ರಾಜ್ಯದಲ್ಲಿ ಡೆಂಗ್ಯೂ ಪ್ರಕರಣ ದಿನೇ ದಿನೇ ಹೆಚ್ಚುತ್ತಲೇ ಇದೆ. ಜಿಲ್ಲೆಯಲ್ಲಿ ಡೆಂಗ್ಯೂ ಸೋಂಕಿಗೆ ಎರಡನೇ ಬಲಿಯಾಗಿರುವುದು ಬಹಳ ಆತಂಕವನ್ನು ಸೃಷ್ಟಿಸಿದೆ.

ನಗರದ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಡಾಟಾ ಎಂಟ್ರಿ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ ಲಲಿತಾ ಎಂಬವರು ಮೃತಪಟ್ಟಿದ್ದಾರೆ. ಡೆಂಗ್ಯೂ ಪ್ರಕರಣಗಳಲ್ಲಿ ರಾಜ್ಯದಲ್ಲೇ ಮೈಸೂರು ಜಿಲ್ಲೆ ಎರಡನೇ ಸ್ಥಾನದಲ್ಲಿದ್ದು, ಸದ್ಯ 35 ಮಂದಿ ಡೆಂಗ್ಯೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತೀಚಿಗಷ್ಟೇ ಹುಣಸೂರು ಸಮುದಾಯ ಆರೋಗ್ಯಾಧಿಕಾರಿ ಡೆಂಗ್ಯೂನಿಂದ ಸಾವನ್ನಪ್ಪಿದ್ದರು.

ರಾಜ್ಯದಲ್ಲಿ ಒಟ್ಟು 301 ಡೆಂಗ್ಯೂ ಸಕ್ರಿಯ ಪ್ರಕರಣಗಳಿದ್ದು. ಇಂದು ಒಂದೇ ದಿನ 159 ಹೊಸ ಪ್ರಕರಣಗಳು ಪತ್ತೆಯಾಗಿವೆ. ಡೆಂಗ್ಯೂ ಪ್ರಕರಣಗಳ ಸಂಖ್ಯೆ 7,165 ಕ್ಕೆ ಏರಿಕೆಯಾಗಿದ್ದು, ಸಾವಿನ ಸಂಖ್ಯೆ 6 ಕ್ಕೆ ಏರಿದೆ.

ಡೆಂಗ್ಯೂ ರೋಗದ ಲಕ್ಷಣಗಳು :ಜ್ವರ, ತಲೆನೋವು, ಮೈ ಕೈ ನೋವು, ಕೀಲುನೋವು, ಹೊಟ್ಟೆನೋವು, ವಾಕರಿಕೆ, ವಾಂತಿ ಹಾಗೂ ಭೇದಿ ಕಾಣಿಸಿಕೊಂಡಲ್ಲಿ ಭಯಪಡೆದೆ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯುವುದು ಉತ್ತಮ. ಕೊಳಚೆ ನೀರಿನಲ್ಲಿ ಡೆಂಘೀ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಸೊಳ್ಳೆ ನಿಯಂತ್ರಿಣಕ್ಕೆ ಸ್ವಚ್ಛತೆ ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ.

ಡೆಂಗ್ಯೂ ತಡೆಗಟ್ಟಲು ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮ: ಮನೆಯ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಮಕ್ಕಳ ಸುರಕ್ಷತೆಗೆ ಸೊಳ್ಳೆ ಪರದೆಯಡಿ ಮಲಗಿಸುವುದು ಒಳ್ಳೆಯದು. ಶುದ್ಧ, ಕುದಿಸಿ ಆರಿಸಿದ ನೀರನ್ನು ಕುಡಿಯುವುದು ಒಳ್ಳೆಯದು. ಮನೆ ಸುತ್ತ ಹಾಗೂ ಟೆರೇಸ್ ಮೇಲೆ ನೀರು ನಿಲ್ಲದಂತೆ ಎಚ್ಚರವಹಿಸಬೇಕು. ನೀರು ಶೇಖರಣೆಯಾಗುವ ಪ್ರದೇಶವಿದ್ದರೆ, ಅಲ್ಲಿ ಶುಚಿಗೊಳಿಸಬೇಕು. ಮೂರು ದಿನ ನಿರಂತರ ಜ್ವರ, ಮೈಕೈ ನೋವಿದ್ದರೆ ವೈದ್ಯರಿಗೆ ತೋರಿಸಬೇಕು.

Continue Reading

State

ಚಡ್ಡಿಗ್ಯಾಂಗ್‌ನಿಂದ ಮತ್ತೊಂದು ಕಳವು ಕೃತ್ಯ?

Published

on

 

ಮಂಗಳೂರು: ನಗರದ ಉರ್ವ ಠಾಣಾ ವ್ಯಾಪ್ತಿಯ ಕೋಟೆಕಣಿಯಲ್ಲಿನ ಮನೆಯೊಂದಕ್ಕೆ ಸೋಮವಾರ ರಾತ್ರಿ ನುಗ್ಗಿದ ಕಳ್ಳರು ವಾಹನ, ಚಿನ್ನಾಭರಣವನ್ನು ಕದ್ದೊಯ್ದ ಘಟನೆ ನಡೆದಿದೆ. ಇದು ನಗರದಲ್ಲಿ ನಡೆದ ಚಡ್ಡಿ‌ಗ್ಯಾಂಗ್‌ನ ಮತ್ತೊಂದು ಕೃತ್ಯವೆಂಬ ಶಂಕೆ ವ್ಯಕ್ತವಾಗಿದೆ.

ಮನೆಮಂದಿ ಮನೆಯೊಳಗಡೆ ಮಲಗಿದ್ದಾಗಲೇ ಕಿಟಕಿ ಮುರಿದು ಚಿನ್ನಾಭರಣ ಕಳವು ಮಾಡಲಾಗಿದೆ. ಅಲ್ಲದೆ ಕಳ್ಳರು ಕಾರನ್ನು ಕೂಡ ಕಳವು ಮಾಡಿದ್ದಾರೆಂದು ತಿಳಿದುಬಂದಿದೆ.

ಕಳೆದ ಶನಿವಾರ ನಗರದ ಕೋಡಿಕಲ್ ಬಳಿ ಮನೆಯೊಂದರ ಕಿಟಕಿ ಮುರಿದು ಕಳವು ಕೃತ್ಯ ನಡೆದಿತ್ತು. ಚಡ್ಡಿಗ್ಯಾಂಗ್ ಆ ಕೃತ್ಯ ನಡೆಸಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದರು.‌ ಅದೇ ತಂಡ ಕೋಟೆಕಣಿಯಲ್ಲಿಯೂ ಕೃತ್ಯ ಎಸಗಿದೆ ಎಂದು ಅಂದಾಜಿಸಲಾಗಿದೆ.

Continue Reading

Trending

error: Content is protected !!