Kodagu
ನಾಲ್ ನಾಡ್ ಹಾಕಿ ಪಂದ್ಯಾವಳಿ ಮುಂದೂಡಿಕೆ

ನಾಪೋಕ್ಲು: ನಾಲ್ ನಾಡ್ ಹಾಕಿ ಕ್ಲಬ್ ವತಿಯಿಂದ ಅಪ್ಪಚೆಟ್ಟೋಳಂಡ ಕುಟುಂಬಸ್ಥರ ಪ್ರಾಯೋಜಕತ್ವದಲ್ಲಿ ಮೆ 22 ರಿಂದ ನಾಪೋಕ್ಲು ಬಳಿಯ ಬಲ್ಲಮಾವಟಿ ನೇತಾಜಿ ವಿದ್ಯಾಸಂಸ್ಥೆಯ ಮೈದಾನದಲ್ಲಿ ನಡೆಸಲು ಉದ್ದೇಶಿಸಿರುವ ನಾಲ್ ನಾಡ್ ವ್ಯಾಪ್ತಿಯ ಅಂತರಗ್ರಾಮ ಹಾಕಿ ಪಂದ್ಯಾಟ ಮತ್ತು ಮಹಿಳೆಯರ ಹಗ್ಗಜಗ್ಗಾಟವನ್ನು ಮಳೆಯ ಕಾರಣದಿಂದ ಮುಂದೂಡಲಾಗಿದೆ.

ಪಂದ್ಯಾಟಗಳನ್ನು ಅಕ್ಟೋಬರ್ ಅಥವಾ ನವೆಂಬರ್ ತಿಂಗಳಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಕ್ರೀಡಾಭಿಮಾನಿಗಳು ಮತ್ತು ನೋಂದಾಯಿತ ತಂಡಗಳು ಬದಲಿಸಲಾದ ದಿನಾಂಕವನ್ನು ಗಮನಿಸಿ ಸಹಕರಿಸುವಂತೆ ನಾಲ್’ನಾಡ್ ಹಾಕಿ ಕ್ಲಬ್ ಅಧ್ಯಕ್ಷರು ಮತ್ತು ಆಡಳಿತ ಮಂಡಳಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Kodagu
ನಾಪೋಕ್ಲು ವ್ಯಾಪ್ತಿಯಲ್ಲಿ ಅಕ್ರಮ ಮರಳು ದಂಧೆ: ಟ್ರಂಚ್ ತೆಗೆದು ದಂಧೆಗೆ ಕಡಿವಾಣ ಹಾಕಿದ ಪೊಲೀಸರು
ವರದಿ: ಝಕರಿಯ ನಾಪೋಕ್ಲು
ನಾಪೋಕ್ಲು : ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ಕಾವೇರಿ ನದಿದಡದಿಂದ ಅಕ್ರಮವಾಗಿ ಮರಳು ದಂದೆ ನಡೆಸುತ್ತಿರುವ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಮರಳು ಸಾಗಿಸುವ ದಾರಿಗೆ ಅಡ್ಡಲಾಗಿ ಟ್ರಂಚ್ ತೆಗೆದು ಮರಳು ದಂಧೆಗೆ ಕಡಿವಾಣ ಹಾಕಿದ್ದಾರೆ.

ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ಚೆರಿಯಪರಂಬು, ಕೂರುಳಿ ಗ್ರಾಮದಲ್ಲಿರುವ ಕಾವೇರಿ ನದಿ ದಡದಿಂದ ಆಕ್ರಮವಾಗಿ ಮರಳು ದಂಧೆ ನಡೆಸುತ್ತಿರುವ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕೆ ಧಾವಿಸಿದ ನಾಪೋಕ್ಲು ಠಾಣಾಧಿಕಾರಿ ರಾಘವೇಂದ್ರ ಹಾಗೂ ಸಿಬ್ಬಂದಿಗಳು ಪರಿಶೀಲಿಸಿ ಜೆಸಿಬಿ ಯಂತ್ರದ ಮೂಲಕ ಕಾವೇರಿ ನದಿ ದಡಕ್ಕೆ ಮರಳು ತೆಗೆಯಲು ತೆರಳುವ ರಸ್ತೆಗೆ ಅಡ್ಡಲಾಗಿ ಟ್ರಂಚ್ (ಚೆರಂಡಿ )ತಗೆದು ವಾಹನಗಳು ತೆರಳದಂತೆ ಕ್ರಮ ಕೈಗೊಂಡು ಮರಳು ದಂಧೆಗೆ ಕಡಿವಾಣ ಹಾಕಿದ್ದಾರೆ.

ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮರಳುದಂಧೆ ನಡೆಸುತ್ತಿರುವ ಬಗ್ಗೆ ಮಾಹಿತಿ ತಿಳಿದಲ್ಲಿ ಸಾರ್ವಜನಿಕರು ನಾಪೋಕ್ಲು ಪೊಲೀಸ್ ಠಾಣೆಗೆ ಅಥವಾ ಗಣಿ ಮತ್ತು ಭೂವಿಜ್ಞಾನಿ ಇಲಾಖೆಗೆ ಮಾಹಿತಿ ನೀಡುವಂತೆ ಪೋಲಿಸ್ ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಿದೆ.
Kodagu
ಡಿ.18ಕ್ಕೆ ಮಟ್ನಳ್ಳಿ, ಕಿಬ್ಬೆಟ್ಟ ಸೇರಿದಂತೆ ವಿವಿಧೆಡೆ ವಿದ್ಯುತ್ ವ್ಯತ್ಯಯ
ಮಡಿಕೇರಿ : 66/ 11 ಕೆ.ವಿ ಸೋಮವಾರಪೇಟೆ ವಿದ್ಯುತ್ ವಿತರಣಾ ಉಪ ಕೇಂದ್ರದಿಂದ ಹೊರಹೊಮ್ಮುವ ಎಫ್1-ದೊಡ್ಡಮಳ್ತೆ ಫೀಡರ್‌ನಲ್ಲಿ ಡಿ. 18 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಫೀಡರ್ ನಿರ್ವಾಹಣೆ ಕಾಮಗಾರಿಯನ್ನು ಕೈಗೆತ್ತಿಕೊಂಡಿರುವುದರಿಂದ ಈ ಫೀಡರ್‌ನಿಂದ ಹೊರಹೊಮ್ಮುವ ಬಿಳಿರೆಕೊಪ್ಪ, ಮಟ್ನಳ್ಳಿ, ಕಿಬ್ಬೆಟ್ಟ, ಅಯ್ಯಪ್ಪ ಕಾಲೋನಿ, ದೊಡ್ಡಹನಕೋಡು, ಗೆಜ್ಜೆಹನಕೋಡು, ಕಾಡುಮನೆ, ಚಿಕ್ಕತೊಳೂರು, ಕಾಗಡೀಕಟ್ಟೆ, ದೊಡ್ಡಮಳ್ತೆ, ಒಳಗುಂದ, ಸುಳಿಮಳ್ತೆ, ಹೊನ್ನಾವಳ್ಳಿ, ಕೂಗೆಕೋಡಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಚಾವಿಸನಿನಿ ಕಾರ್ಯ ಮತ್ತು ಪಾಲನೆ ವಿಭಾಗ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಕೋರಿದ್ದಾರೆ
Kodagu
ಮಡಿಕೇರಿಯಲ್ಲಿ ಬೇಟಿ ಬಚಾವೋ ಬೇಟಿ ಪಡಾವೋ ಕುರಿತು ಮಾಹಿತಿ ಕಾರ್ಯಾಗಾರ
ಮಡಿಕೇರಿ: ಕೊಡಗು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಮಡಿಕೇರಿ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಯ ಸಹಯೋಗದೊಂದಿಗೆ ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯ ಕುರಿತು ಅರಿವು ಕಾರ್ಯಾಗಾರ ಕಾರ್ಯಕ್ರಮವು ಮಡಿಕೇರಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಪ್ರಸನ್ನಕುಮಾರ್‌ರವರು ಮಾತನಾಡಿ, ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯು ಕುಸಿಯುತ್ತಿರುವ ಮಕ್ಕಳ ಲಿಂಗ ಅನುಪಾತವನ್ನು ಪರಿಹರಿಸುವ ಮತ್ತು ಹೆಣ್ಣು ಮಗುವಿನ ಬದುಕುಳಿಯುವಿಕೆ, ರಕ್ಷಣೆ ಮತ್ತು ಹೆಣ್ಣು ಮಗುವಿನ ಶಿಕ್ಷಣವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿದರು.
ಮಿಷನ್ ಶಕ್ತಿ ಯೋಜನೆಯಡಿಯಲ್ಲಿ ಬರುವ ಸಂಬಲ್ ಯೋಜನೆಗಳಾದ ಸಖಿ ಒನ್ ಸ್ಟಾಫ್ ಸೆಂಟರ್, ಮಹಿಳಾ ಸಹಾಯವಾಣಿ ಹಾಗೂ ಸಾಮರ್ಥ್ಯ ಯೋಜನೆಗಳಾದ ಪ್ರಧಾನಮಂತ್ರಿ ಮಾತೃವಂದನಾ ಯೋಜನೆ, ಸಖಿ ನಿವಾಸ, ಶಕ್ತಿ ಸದನ್ ಬಗ್ಗೆ ತಿಳಿಸಿದ ಅವರು ಫಲಾನುಭವಿಗಳು ಯಾವುದೇ ಯೋಜನೆಗಳಿಂದ ವಂಚಿತರಾಗದಂತೆ ನೋಡಿಕೊಂಡು, ಅಗತ್ಯವಿದ್ದವರಿಗೆ ಯೋಜನೆಗಳ ಪ್ರಯೋಜನ ದೊರಕುವಂತೆ ಮಾಡಬೇಕು ಎಂದು ತಿಳಿಸಿದರು.

ಮಡಿಕೇರಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಟಿ.ಎಸ್. ಸೀತಾಲಕ್ಷ್ಮಿರವರು ಮಾತನಾಡಿ, ಪೌಷ್ಟಿಕ ಆಹಾರ ಸೇವನೆಯಿಂದ ಆರೋಗ್ಯ ಸುಧಾರಣೆ ಸಾಧ್ಯವಿದೆ. ಈ ನಿಟ್ಟಿನಲ್ಲಿ ಸರ್ಕಾರವು ಪೋಷಣ್ ಅಭಿಯಾನ ಯೋಜನೆಯ ಮೂಲಕ ಮಕ್ಕಳು, ಹೆಣ್ಣು ಮಕ್ಕಳು, ಗರ್ಭಿಣಿ, ಬಾಣಂತಿಯರಲ್ಲಿ ಪೌಷ್ಠಿಕಾಂಶ ಕೊರತೆಯನ್ನು ನೀಗಿಸುವುದಕ್ಕಾಗಿ ಶ್ರಮ ಪಡುತ್ತಿದೆ ಎಂದರು.
ಮಡಿಕೇರಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಯ ಪ್ರಭಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೀಲಾ ಹಾಗೂ ಪ್ರಥಮ ದರ್ಜೆ ಸಹಾಯಕಿ ವನಿತಾರವರು ಇಲಾಖೆಯ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಹಣಕಾಸು ಸಾಕ್ಷರತೆ ಮತ್ತು ಲೆಕ್ಕಪರಿಶೋಧಕರಾದ ನಳಿನಿ, ಪೋಷಣ್ ಅಭಿಯಾನದ ಜಿಲ್ಲಾ ಕಾರ್ಯಕ್ರಮ ಸಹಾಯಕಿ ಕಾವ್ಯ, ಮಡಿಕೇರಿ ತಾಲೂಕು ಸಂಯೋಜಕಿತಿ ತೇಜಸ್ವಿನಿ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
-
Special17 hours agoತಪಸ್ ಸಾಧನ ಪ್ರವೇಶಕ್ಕೆ ವಿದ್ಯಾರ್ಥಿಗಳಿಗೆ ಅರ್ಜಿ ಆಹ್ವಾನ: ಉಚಿತ ಶಿಕ್ಷಣ ವಸತಿ ಸೌಲಭ್ಯ.
-
Special6 hours agoಗೃಹಲಕ್ಷ್ಮಿ ಯೋಜನೆಯಲ್ಲಿ ಅಚ್ಚರಿಯ ಮಾಹಿತಿ: ರಾಜ್ಯದಲ್ಲಿ 1.8 ಲಕ್ಷ ತೆರಿಗೆದಾರರು ಫಲಾನುಭವಿಗಳಾಗಿದ್ದಾರೆ
-
Hassan12 hours agoನೀರಿನ ಸಂಪ್ಗೆ ಬಿದ್ದು ಮಗು ಸಾ*ವು
-
Hassan10 hours agoಸಾಲಭಾದೆ ತಾಳಲಾರದೇ ಬಾವಿಗೆ ಬಿದ್ದು ರೈತ ಆತ್ಮಹ*ತ್ಯೆ
-
Chamarajanagar8 hours agoಹೈನುಗಾರಿಕೆ ಸಾಕಾಣಿಕೆ ಉಚಿತ ತರಬೇತಿಗೆ ಅರ್ಜಿ ಆಹ್ವಾನ
-
Manglore9 hours agoನಿರ್ಭಯಾ ಪ್ರಕರಣದಲ್ಲಿ ಸಿಕ್ಕ ನ್ಯಾಯ ಸೌಜನ್ಯಾ ಪ್ರಕರಣದಲ್ಲೇಕೆ ಸಿಕ್ಕಿಲ್ಲ: ಎ. ಜ್ಯೋತಿ
-
National8 hours agoಮೋದಿ ಸರ್ಕಾರ ಬೃಹತ್ ನಿರುದ್ಯೋಗದ ಮೂಲಕ ಯುವಕರ ಭವಿಷ್ಯವನ್ನು ನಾಶಪಡಿಸಿದೆ: ರಾಹುಲ್ ಗಾಂಧಿ
-
Hassan12 hours agoರೈತರ ಜಮೀನಿನಲ್ಲಿ ಕಾಣಿಸಿಕೊಂಡ ಚಿರತೆ
