Mysore
ಇಂದಿನಿಂದ ಮರಳು ಮೂಟೆ ತಾಲೀಮು ಆರಂಭ

ಮೈಸೂರು : ಇಂದಿನಿಂದ ಗಜಪಡೆಗೆ ಮರಳು ಮೂಟೆ ಹೊರಿಸುವ ತಾಲೀಮು ಆರಂಭವಾಗಿದೆ. ಅರಮನೆಯ ಆವರಣದಲ್ಲಿ ಪೂಜೆ ಸಲ್ಲಿಸುವ ಮೂಲಕ ಚಾಲನೆ ಲನೀಡಲಾಯಿತು.
ಅರಣ್ಯ ಇಲಾಖೆಯ ಅಧಿಕಾರಿಗಳ ನೇತೃತ್ವದಲ್ಲಿ ಪೂಜಾ ಕಾರ್ಯ ನೆರವೇರಿದವು ಕೊಡಿ ಸೋಮೇಶ್ವರ ದೇವಸ್ಥಾನದ ಮುಂಭಾಗ ಅಭಿಮನ್ಯು ಆನೆಗೆ ಗಾದಿ ಕಟ್ಟಿ, ತೊಟ್ಟಿಲಲ್ಲಿ ಮರಳು ಮೂಟೆ ಇಟ್ಟು ತಾಲಿಮು
ಮೊದಲ ದಿನವೇ 600 ಕೆಜಿ ತೂಕದ ತಾಲಿಮು ಶುರುವಾಗಿದೆ.
ಇಂದಿನಿಂದ ಅಭಿಮನ್ಯುವಿಗೆ 600ಕೆಜಿ ಬಾರ ಹೊರಿಸುತ್ತೇವೆ.ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ತೂಕ ಹೆಚ್ಚಿಸುತ್ತೇವೆ.5 ಆನೆಗಳಿಗೆ ಬಾರ ಹೊರಿಸುವ ಕೆಲಸ ಮಾಡುತ್ತೇವೆ.ಅಭಿಮನ್ಯು , ಧನಂಜಯ, ಭೀಮ, ಕಂಜನ್, ಗೋಪಾಲಸ್ವಾಮಿ ಆನೆಗಳಿಗೆ ಬಾರ ಹೊರಿಸುತ್ತೇವೆ.
ಮುಂದಿನ ದಿನಗಳಲ್ಲಿ 600ರಿಂದ 1200 ಕೆಜಿಯ ವರೆಗೂ ತೂಕ ಹೊರಿಸುತ್ತೇವೆ. ಇದೆ 25ಕ್ಕೆ ಎರಡನೇ ಹಂತದಲ್ಲಿ 5 ಆನೆಗಳು ಬರಲಿವೆ.ಸದ್ಯ ಎಲ್ಲಾ ಆನೆಗಳ ಆರೋಗ್ಯ ಸ್ಥಿತಿ ಚೆನ್ನಾಗಿದೆ ಎಂದು ಸಿಎಫ್ ಮಾಲತಿ ಪ್ರಿಯ ಹೇಳಿದರು
Mysore
ಡಿಕೆಶಿ, ಮಲ್ಲಿಕಾರ್ಜುನ ಖರ್ಗೆ ಇಬ್ಬರಲ್ಲಿ ಒಬ್ಬರು ಸಿಎಂ ಆಗುತ್ತಾರೆ: ಎಚ್.ವಿಶ್ವನಾಥ್

ಮೈಸೂರು: ಈ ವರ್ಷದ ನವೆಂಬರ್‌ಗೆ ಸಿಎಂ ಬದಲಾವಣೆ ಆಗುತ್ತದೆ, ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇಬ್ಬರಲ್ಲಿ ಒಬ್ಬರು ಮುಖ್ಯಮಂತ್ರಿ ಆಗುತ್ತಾರೆ ಎಂದು ಎಂಎಲ್‌ಸಿ ಎಚ್.ವಿಶ್ವನಾಥ್ ತಿಳಿಸಿದ್ದಾರೆ.
ಮೈಸೂರಿನಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಹತ್ತು ವರ್ಷದ ಹಿಂದೆಯೇ ಜಾತಿವಾರು ಜನಗಣತಿ ಮಾಡಿಸಿದ್ದರು. ಒಂದುವರೆ ಲಕ್ಷ ಶಿಕ್ಷಕರು 2 ವರ್ಷ ಗಣತಿ ಮಾಡಿದ್ದರು. ಅದಕ್ಕಾಗಿ 170 ಕೋಟಿ ರೂ. ಅಧಿಕ ಹಣ ಖರ್ಚಾಗಿತ್ತು. ಆಗಿನ ಕಾಲದಿಂದಲೂ ವರದಿ ಬಹಿರಂಗ ಮಾಡದೇ ಹಾಗೆಯೇ ಇಟ್ಟುಕೊಂಡಿದ್ದರು. ಇದೀಗ ಹೈಕಮಾಂಡ್‌ಗೆ ಹೆದರಿಕೊಂಡು ಮತ್ತೆ ಜಾತಿಗಣತಿ ಮಾಡಿರುವುದಾಗಿ ಹೇಳಿದ್ದಾರೆ. ಇದು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ್ದಾರೆ.
ಜಾತಿಗಣತಿ ಮಾಡಲು ಶಿಕ್ಷಕರು ಬೇಕು. ಈಗ ತಾನೇ ಶಾಲೆಗಳು ಪ್ರಾರಂಭವಾಗಿರುವುದರಿಂದ ಶಿಕ್ಷಕರು ಲಭ್ಯವಾಗೋದಿಲ್ಲ. ಸಿದ್ದರಾಮಯ್ಯ ಹಾವಾಡಿಗನ ರೀತಿ ಈಗ ಮತ್ತೆ ಜಾತಿಗಣತಿ ಮಾಡಿಸುವುದಾಗಿ ಹೇಳುತ್ತಿದ್ದಾರೆ. ಮುಂದಿನ ನವೆಂಬರ್ ಮತ್ತು ಡಿಸೆಂಬರ್‌ಗೆ ಸಿಎಂ ಹುದ್ದೆಯಿಂದ ಸಿದ್ದರಾಮಯ್ಯ ಆಗುತ್ತಾರೆ. ಅದು ಹೇಗೆ ಜಾತಿಗಣತಿ ಮಾಡಿಸುತ್ತೀರಿ? ಮರುಜಾತಿಗಣತಿ ಮಾಡಿಸುವುದಿಲ್ಲವೆಂದು ಹೈಕಮಾಂಡ್‌ಗೆ ಹೇಳಿದ್ದರೇ ಸಿದ್ದರಾಮಯ್ಯ ಹೀರೋ ಆಗುತ್ತಿದ್ದರು. ಸಿದ್ದರಾಮಯ್ಯ ಹಿಂದುಳಿದ ವರ್ಗಗಳಿಗೆ ಅನ್ಯಾಯ ಮಾಡಿದರು. ಮೂರು ತಿಂಗಳೊಳಗೆ ಜಾತಿಗಣತಿ ಮಾಡಲು ಸಾಧ್ಯವಿಲ್ಲ. ಸಿದ್ದರಾಮಯ್ಯ ಸುಮ್ಮನೇ ದೇವರಾಜ ಹೆಸರು ಹೇಳಬೇಡಿ. ಪ್ರಾಮಾಣಿಕತೆ ಇಲ್ಲದ ಸಿಎಂ ಸಿದ್ದರಾಮಯ್ಯ ಎಂದು ಚರಿತ್ರೆಯಲ್ಲಿ ದಾಖಲಾಗಿ ಹೋದರು. ಸುಳ್ಳು ಹೇಳಿಕೊಂಡು ಓಡಾಡುತ್ತಿರುವ ಸಿಎಂ ಸಿದ್ದರಾಮಯ್ಯ ಎಂದು ಚರಿತ್ರೆಯಲ್ಲಿ ದಾಖಲಾಗುತ್ತಾರೆ. 170 ಕೋಟಿಗೂ ಹೆಚ್ಚು ಹಣ ಖರ್ಚು ಮಾಡಿ ಜಾತಿಗಣತಿ ಮಾಡಿಸಿದ ವರದಿಯನ್ನು ತಿಪ್ಪೆಗೆ ಎಸೆದಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಆರ್‌ಸಿಬಿ ಸಂಭ್ರಮಾಚರಣೆ ವೇಳೆ ಡಿ.ಕೆ.ಶಿವಕುಮಾರ್ ಎಲ್ಲವನ್ನೂ ಕೆಡಿಸಿಬಿಟ್ಟರು
ಡಿಕೆಶಿ ಮುಖ್ಯಮಂತ್ರಿ ಆಗಲಿ ಎಂದುಕೊಂಡಿದ್ದೆ, ಆದರೆ ಆರ್‌ಸಿಬಿ ಸಂಭ್ರಮಾಚರಣೆ ವೇಳೆ ಡಿಕೆ ಶಿವಕುಮಾರ್ ಎಲ್ಲವನ್ನೂ ಕೆಡಿಸಿಬಿಟ್ಟರು. ಆರ್‌ಸಿಬಿಯಲ್ಲಿ ಕರ್ನಾಟಕದ ಆಟಗಾರರೇ ಇಲ್ಲ. ಆರ್‌ಸಿಬಿಗೂ ನಮ್ಮ ರಾಜ್ಯಕ್ಕೂ ಸಂಬಂಧವೇ ಇಲ್ಲ. ಕಾಲ್ತುಳಿತ ಘಟನೆ ಸಂಬಂಧ ಸಿಎಂ ಸಿದ್ದರಾಮಯ್ಯ ನೀಡಿದ ಹೇಳಿಕೆಗಳು ವೈರುಧ್ಯದಿಂದ ಕೂಡಿವೆ ಎಂದು ಕಿಡಿಕಾರಿದರು.
ಚಿನ್ನಸ್ವಾಮಿ ಸ್ಟೇಡಿಯಂ ಬಳಿ 3:30ಕ್ಕೆ ಕಾಲ್ತುಳಿತ ಆದರೂ ಸಂಜೆ 5:30 ಕ್ಕೆ ಗೊತ್ತಾಯಿತು. ವಿಧಾನಸೌಧ ಕಾರ್ಯಕ್ರಮಕ್ಕೂ, ಚಿನ್ನಸ್ವಾಮಿ ಕ್ರೀಡಾಂಗಣ ಕಾರ್ಯಕ್ರಮಕ್ಕೂ ಸಂಬಂಧವಿಲ್ಲ. ರಾಜ್ಯಪಾಲರನ್ನು ಆಹ್ವಾನಿಸಿರಲಿಲ್ಲ ಎಂದೆಲ್ಲ ಸಿದ್ದರಾಮಯ್ಯ ಹೇಳಿದ್ದರು. ಆ ಬಳಿಕ ರಾಜ್ಯಪಾಲರನ್ನು ಆಹ್ವಾನಿಸಿದ್ದು ನಾನೇ ಎಂದು ಹೇಳಿದ್ದಾರೆ. ಇವರ ತಪ್ಪು ಇಲ್ಲದಿದ್ದರೇ ಗೋವಿಂದರಾಜು ಅವರನ್ನು ರಾಜಕೀಯ ಕಾರ್ಯದರ್ಶಿ ಸ್ಥಾನದಿಂದ ಏಕೆ ತೆಗೆದರು ಎಂದು ಹೇಳಬೇಕು? ಎಂದು ಎಚ್ ವಿಶ್ವನಾಥ್ ಆಗ್ರಹಿಸಿದರು.
Mysore
ಕಾವೇರಿ ಆರತಿ ಹಾಗೂ ಅಮ್ಯೂಸ್ಮೆಂಟ್ ಪಾರ್ಕಿ ನಿರ್ಮಾಣ ಖಂಡಿಸಿ ಪ್ರತಿಭಟನೆ.

ಮೈಸೂರು: ಕೆ,ಆರ್,ಎಸ್, ಅಣೆಕಟ್ಟೆಯ ಬಳಿ ಕಾವೇರಿ ಆರತಿ ಹಾಗೂ ಅಮ್ಯೂಸ್ಮೆಂಟ್ ಪಾರ್ಕಿಗಲ್ಲ ನಿರ್ಮಾಣ ಮಾಡುವುದನ್ನು ಖಂಡಿಸಿ ಕನ್ನಡ ವೇದಿಕೆ ವತಿಯಿಂದ ಪ್ರತಿಭಟನೆ ನೆಡೆಸಲಾಯಿತು.
ಇಲ್ಲಿನ ಹಳೆ ಜಿಲ್ಲಾಧಿಕಾರಿ ಕಚೇರಿಯ ಬಳಿ ಶನಿವಾರ ಜಮಾಗೊಂಡ ಪ್ರತಿಭಟನಕಾರರು, ಕೆ. ಆರ್.ಎಸ್. ಅಣೆಕಟ್ಟೆ ನಿರ್ಮಾಸಿರೋದು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಮೋಜು ಮಸ್ತಿ ಮಾಡೋದಕ್ಕೆ ಅಲ್ಲ. ರೈತಾಪಿ ವರ್ಗದವರು ಕೃಷಿ ಚಟುವಟಿಕೆಗಳು, ಹಾಗೂ ಮೈಸೂರು ಬೆಂಗಳೂರಿನ ಕುಡಿಯುವ ನೀರಿನ ಯೋಜನೆಗಾಗಿ ರಾಣಿ ಕೆಂಪ ನಂಜಮ್ಮಣಿ ಕೃಷ್ಣರಾಜಸಾಗರ ಮೀಸಲಾಗಿದೆ. ವಿನಹ ಮೋಜು ಮಸ್ತಿ ಮಾಡುವಂತಹ ಅಮ್ಯೂಸ್ಮೆಂಟ್ ಪಾರ್ಕಿಗಲ್ಲ, ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕನ್ನಡ ವೇದಿಕೆ ಅಧ್ಯಕ್ಷ ಎಸ್ ಬಾಲಕೃಷ್ಣ ಮಾತನಾಡಿ, ಕರ್ನಾಟಕ ಮತ್ತು ತಮಿಳುನಾಡು ಜನರ ಜೀವ ನದಿ ಕಾವೇರಿ ಮೈಸೂರಿನ ಇತಿಹಾಸ ತಿಳಿಯದ ಸಚಿವರು ವಿಧಾನಸೌಧದ ಎಲ್ಲೋ ಒಂದು ಮೂಲೆಯಲ್ಲಿ ಕುಳಿತು ಮನಸ್ಸಿಗೆ ಬಂದಂತೆ ಹೇಳಿಕೆ ನೀಡುವುದು ಎಷ್ಟು ಸಮಂಜಸ. ಈಗಾಗಲೇ ಡಿ.ಸಿಎಂ. ಡಿ.ಕೆ.ಶಿವಕುಮಾರ ಅವರ ನಿರ್ಧಾರದಿಂದ ಆರ್.ಸಿ.ಬಿ ಕ್ರಿಕೆಟಿನ ವಿಜಯ್ಯೋತ್ಸವ ಆಚರಣೆಯಲ್ಲಿ ಕಾಲು ತುಳಿತಕ್ಕೆ 11 ಅಮಾಯಕ ಜನ ಬಲಿಯಾಗಿದ್ದಾರೆ. ಮೈಸೂರು ಮತ್ತು ಮಂಡ್ಯ ಭಾಗದ ಕೆಲವು ಶಾಸಕರು,ರೈತ ಹೋರಾಟಗಾರರು, ಕನ್ನಡ ಪರ ಹೋರಾಟಗಾರರು ಅಮ್ಯುಸ್ಮೆಂಟ್ ಪಾರ್ಕ್ ವಿರುದ್ಧ ಹೋರಾಟ ಮಾಡುತ್ತಿದ್ದಾರೆ ಆದರೆ ಸರ್ಕಾರದ ಮಂತ್ರಿಮಂಡಲದವರು ನಾವೇ ಕೆ.ಆರ್.ಎಸ್ ಅಣೆಕಟ್ಟು ಕಟ್ಟಿದ ರೀತಿಯಲ್ಲಿ ಮನ ಬಂದಂತೆ ಮಾತನಾಡುತ್ತಿದ್ದಾರೆ ಎಂದರು.
ಮಂಡ್ಯ ಮತ್ತು ಮೈಸೂರು ಜನತೆಯನ್ನು ಗಣನೆಗೆ ತೆಗೆದುಕೊಳ್ಳದೆ ತುಘುಲಕ್ ದರ್ಬಾರಿನಂತೆ ಸರ್ಕಾರ ದರ್ಬಾರು ಮಾಡುತ್ತಿದೆ ಯಾವೊಬ್ಬ ರೈತನಿಗಾಗಲಿ ಕಿಂಚಿತ್ತು ಗೌರವ ನೀಡುತ್ತಿಲ್ಲ. ಕೋಟ್ಯಾಂತರ ಜನರಿಗೆ ಆಶ್ರಯವಾಗಿರುವ ಕಾವೇರಿ ನೀರು ಇವರ ಮನೆ ಸ್ವತ್ತಂತೆ ಮಾತನಾಡುತ್ತಿದ್ದಾರೆ ಎಂದು ಹೇಳಿದರು.
ನೂರು ಕೋಟಿ ರೂ ವೆಚ್ಚ ಮಾಡಿ ಕಾವೇರಿ ಆರತಿ ಮಾಡುತ್ತಿವೆ ಅಂತ ಹೇಳುತ್ತಿದ್ದಾರೆ ಅದೇ ಹಣವನ್ನು ರೈತರ ನಿಧಿಗೆಂದು ಉಪಯೋಗಿಸಿದರೆ ಬೆಳೆ ನಷ್ಟವಾದಾಗ ಅಥವಾ ಯಾವುದಾದರೂ ಬಡ ರೈತ ತೀರಿಕೊಂಡರೆ ಪರಿಹಾರ ನೀಡಬಹುದು. ಇವೆಲ್ಲವನ್ನೂ ಲೆಕ್ಕಿಸದೆ ನಾವು ಕಾವೇರಿ ಆರತಿ ಮಾಡೇ ಮಾಡುತ್ತೇವೆ ಎಂದು ಪಟ್ಟು ಹಿಡಿತಿರುವುದು ರೈತರ ದಂಗೆ ಉಂಟು ಮಾಡುವುದಕ್ಕೆ ಎಡೆ ಮಾಡಿಕೊಡುತ್ತಿದೆ ಎಂದರು.
ನಾಲಾ ಬೀದಿ ರವಿ, ಬೋಗಾದಿ ಸಿದ್ದೇಗೌಡ, ಪ್ಯಾಲೇಸ್ ಬಾಬು, ಗುರು ಬಸಪ್ಪ, ಮಾದಪ್ಪ, ಗೋವಿಂದರಾಜು, ಕಾವೇರಮ್ಮ, ಹರೀಶ್, ಮಾಲಿನಿ, ಪ್ರೇಮ, ಪುಷ್ಪ, ಸುನಿಲ್, ಶಿವು ಗೌಡ, ಚಿನ್ನಪ್ಪ, ಸ್ವಾಮಿ ಗೈಡ್, ಎಲ್ಐಸಿ ಸಿದ್ದಪ್ಪ, ಸ್ವಾಮಿ ಹೊನಕೆರೆ, ಮೋದಿ, ರಮೇಶ್ ಮುಂತಾದವರಿದ್ದರು.
Mysore
ಜಯನಗರದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನೂತನ ವೇದಿಕೆ ಉದ್ಘಾಟಿಸಿದ ರೊಟೇರಿಯನ್ ವಿಕ್ರಂದತ್ತ

ಮೈಸೂರು : ರೋಟರಿ ಕ್ಲಬ್ ಆಫ್ ಮೈಸೂರು ಸೌತ್ ಈಸ್ಟ್ ವತಿಯಿಂದ ಜಯನಗರದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 3 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ನೂತನ ವೇದಿಕೆಯನ್ನು ಡಿಸ್ಟ್ರಿಕ್ ಗವರ್ನರ್ ರೊಟೇರಿಯನ್ ವಿಕ್ರಂದತ್ತ ಉದ್ಘಾಟಿಸಿದರು.
ಶುಕ್ರವಾರ ಬೆಳಗ್ಗೆ ಶಾಲಾ ಆವರಣದಲ್ಲಿ ನಿರ್ಮಿಸಿರುವ ನೂತನ ವೇದಿಕೆಯನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿ, ರೋಟರಿ ಕ್ಲಬ್ ಆಫ್ ಮೈಸೂರು ಸೌತ್ ಈಸ್ಟ್‌ನಲ್ಲಿ ಇದುವರೆಗೂ ಅಧ್ಯಕ್ಷರಾಗಿದ್ದ ಎಲ್ಲರೂ ಉತ್ತಮ ಸಮಾಜಮುಖಿ ಕೆಲಸಗಳನ್ನು ಮಾಡಿ ಗಮನಸೆಳೆದಿದ್ದಾರೆ. ಅದೇ ರೀತಿ ರೊಟೇರಿಯನ್ ಕೆ.ಎ.ಗೋವರ್ಧನ್ ಯಾದವ್ ಅವರೂ ಸಹ ಜಯನಗರ ಸರ್ಕಾರಿ ಶಾಲೆಗೆ ಅಗತ್ಯವಾಗಿ ಬೇಕಾದ ವೇದಿಕೆಯನ್ನು 3 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿಕೊಟ್ಟಿರುವುದು ಶ್ಲಾಘನೀಯ.
ಈ ವೇದಿಕೆಯಲ್ಲಿ ಮಕ್ಕಳು ಯಾವುದೇ ಸಭೆ ಸಮಾರಂಭ, ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಬಹುದು. ಪಠ್ಯ, ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಮಕ್ಕಳ ಪ್ರತಿಭೆ ಅನಾವರಣವಾಗುತ್ತದೆ. ಮಕ್ಕಳ ಪ್ರತಿಭೆ ಅನಾವರಣಕ್ಕೆ ಈ ವೇದಿಕೆ ಸಹಾಯ ಮಾಡುತ್ತದೆ. ಇಂತಹ ಶಾಶ್ವತ ಉಪಯೋಗಿ ಕಾರ್ಯಕ್ರಮಗಳನ್ನು ನಮ್ಮ ಸಂಸ್ಥೆ ಮಾಡುತ್ತಿದೆ ಈ ಚಟುವಟಿಕೆ ಕಾರ್ಯದಲ್ಲಿ ಕೈ ಜೋಡಿಸಿದ ಎಲ್ಲರೂ ಅಭಿನಂದನಾರ್ಹರು ಎಂದರು.
ಕಳೆದ ಮಾರ್ಚ್‌ನಲ್ಲಿ ಇದೇ ವೇದಿಕೆ ಕಟ್ಟಡಕ್ಕೆ ನಾನೇ ಗುದ್ದಲಿಪೂಜೆ ನೆರವೇರಿಸಿದ್ದೆ ಮೂರು ತಿಂಗಳ ಬಳಿಕ ನಾನೇ ಇದನ್ನು ಉದ್ಘಾಟಿಸುತ್ತಿರುವುದು ಸಂತಸ ತಂದಿದೆ. ಮಕ್ಕಳು ತಾವು ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿದ್ದೇವೆ ಎಂಬ ಕೀಳರಿಮೆ ಬಿಟ್ಟು ಉತ್ತಮವಾಗಿ ಕಲಿತು ನಿಮ್ಮ ಶಾಲೆಗೆ ನಾಡಿಗೆ ಪೋಷಕರಿಗೆ ಗೌರವ ತರುವ ಕೆಲಸ ಮಾಡಬೇಕು ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎನ್.ರಾಜು ಅವರು ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸಲು ರಾಜ್ಯ ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದೆ. ಮಕ್ಕಳಿಗೆ ಬಿಸಿಯೂಟ, ಬಾಳೆಹಣ್ಣು, ಮೊಟ್ಟೆ, ಉಚಿತ ಸಮವಸ್ತ್ರ, ಉಚಿತ ಪುಸ್ತಕಗಳನ್ನು ನೀಡುವುದರ ಜತೆಗೆ ವಿದ್ಯಾರ್ಥಿ ವೇತನವನ್ನು ನೀಡುತ್ತದೆ. ಈ ರೀತಿ ಹಲವಾರು ಕಾರ್ಯಕ್ರಮಗಳು ಸರ್ಕಾರ ಒದಗಿಸುತ್ತಿದೆ. ಇದರ ಜತೆಗೆ ಸಂಘ ಸಂಸ್ಥೆಗಳು ಸಹ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಹಕರಿಸುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆಯ ಪದಾಧಿಕಾರಿಗಳನ್ನು ಶಾಲೆ ವತಿಯಿಂದ ಸನ್ಮಾನಿಸಲಾಯಿತು. ನಂತರ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಬಡೆಸಿಕೊಟ್ಟರು.
ಈ ಸಂದರ್ಭದಲ್ಲಿ ರೊಟೇರಿಯನ್‌ಗಳಾದ ಎಂ.ರಾಜೀವ್, ಎಂ.ಮೋಹನ್, ಕೆ.ಎ.ಗೋವರ್ಧನ್ ಯಾದವ್, ಆರ್.ರಮೇಶ್‌ರಾವ್, ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಮಾಜಿ ಸದಸ್ಸರಾದ ಡಾ.ಈ.ಸಿ.ನಿಂಗರಾಜ್ ಗೌಡ, ವೆಂಕಟೇಶ್, ನಾಗರಾಜ್, ರಾಕೇಶ್ ಭಟ್, ಮುರಳಿ, ರವೀಂದ್ರ ಸೇರಿದಂತೆ ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.
-
Mandya23 hours ago
ನೇಣು ಬಿಗಿದ ಸ್ಥಿತಿಯಲ್ಲಿ ಪುರುಷ ಹಾಗೂ ಮಹಿಳೆಯ ಕೊಳೆತ ಶ*ವಗಳು ಪತ್ತೆ
-
State19 hours ago
ಹಾಸನ ಏರ್ಪೋರ್ಟ್ 2026ಕ್ಕೆ ಪೂರ್ಣ: ಚಿಕ್ಕಮಗಳೂರು-ಮಡಿಕೇರಿಯಲ್ಲಿ ಹೆಲಿಪೋರ್ಟ್ ನಿರ್ಮಾಣಕ್ಕೆ ವರದಿ ಸಿದ್ಧ
-
Mandya24 hours ago
ಜೂ. 26ಕ್ಕೆ ಮಾದಕ ವಸ್ತುಗಳ ದುಷ್ಪರಿಣಾಮ ಕುರಿತು ಜಾಗೃತಿ ಕಾರ್ಯಕ್ರಮ: ಡಾ. ಕುಮಾರ
-
Kodagu23 hours ago
ಗೃಹಲಕ್ಷ್ಮಿ ಯೋಜನೆ ಇ-ಕೆವೈಸಿ ಫೆಲ್ಯೂರ್: ಹತ್ತಿರದ ಸಿಡಿಪಿಓ ಕಚೇರಿ ತೆರಳಿ Status ಪರಿಶೀಲನೆ ಮಾಡಿಸಿ
-
Hassan22 hours ago
ಬೆಳೆ ವಿಮೆ ಪ್ರಚಾರದ ವಾಹನಗಳಿಗೆ ಡಿಸಿ ಸಿ. ಸತ್ಯಭಾಮ ಚಾಲನೆ
-
Hassan20 hours ago
ಕಾಣೆಯಾಗಿದ್ದ ಮಹಿಳೆ ಶವವಾಗಿ ಪತ್ತೆ
-
Mandya23 hours ago
ಗೌರವ ಡಾಕ್ಟರೇಟ್ ಸ್ವೀಕರಿಸಲು ಪ್ರೊ.ಜಯಪ್ರಕಾಶ್ ಗೌಡ ಅವರಿಗೆ ಅಧಿಕೃತ ಆಹ್ವಾನ
-
State19 hours ago
16ನೇ ಹಣಕಾಸಿನ ಆಯೋಗಕ್ಕೆ ಹೆಚ್ಚುವರಿ ಜ್ಞಾಪನಾ ಪತ್ರ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ