Connect with us

Mysore

ಕಾಲ್ನಡಿಗೆ ಮೂಲಕ 69 ವನ್ಯಜೀವಿ ಸಪ್ತಾಹ ಆಚರಣೆ : ಜಿಲ್ಲಾಧಿಕಾರಿ ಚಾಲನೆ.

Published

on

ವನ್ಯಜೀವಿ ಸಪ್ತಾಹದ ಅಂಗವಾಗಿ ಇಂದು ಜಿಲ್ಲಾಡಳಿತ ಮತ್ತು ಚಾಮರಾಜೇಂದ್ರ ಮೃಗಾಲಯ ಅರಣ್ಯ ಇಲಾಖೆ ವತಿಯಿಂದ ನಗರದ ಕೋಟೆ ಆಂಜನೇಯ ದೇವಸ್ಥಾನ ಮುಂಭಾಗದಲ್ಲಿ
ವನ್ಯಜೀವಿಗಳ ಮಹತ್ವವನ್ನು ಸಾರುವ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು

ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಡಾ. ಕೆ.ವಿ ರಾಜೇಂದ್ರ ಚಾಲನೆ ನೀಡಿದರು ನಂತರ ಮೈಸೂರು ಮೃಗಾಲಯದವರೆಗೆ ಸುಮಾರು 200 ಮಂದಿ ವಿದ್ಯಾರ್ಥಿಗಳು, ಸ್ಥಳೀಯ ಅರಣ್ಯ ಇಲಾಖೆ ಮತ್ತು ಮೃಗಾಲಯ ಅಧಿಕಾರಿ ಸಿಬ್ಬಂದಿಗಳು, ಮೃಗಾಲಯ ಸ್ವಯಂ ಸೇವಕರುಗಳು ಮತ್ತು ಇತರ ಸರ್ಕಾರೇತರ ಅಧಿಕಾರಿಗಳನ್ನೊಳಗೊಂಡ ಕಾಲ್ನಡಿಗೆ ಮೂಲಕ ತೆರಳಿದರು

ಈ ಸಂದರ್ಭದಲ್ಲಿ ವನ್ಯಜೀವಿ ಛಾಯಾಚಿತ್ರ ಪ್ರದರ್ಶನ ಹಾಗೂ ಚಿತ್ರಕಲೆ ಪ್ರದರ್ಶನ ಕಾರ್ಯಕ್ರಮವನ್ನು ಮೃಗಾಲಯದ ಆಂಫಿ ಥಿಯೇಟರ್‌ನಲ್ಲಿ ಆಯೋಜಿಸಲಾಗಿದೆ.

ದಿನೇ ದಿನೇ ಅರಣ್ಯ ನಾಶವಾಗುತ್ತಿರುವ ಹಿನ್ನೆಲೆಯಲ್ಲಿ ಕಾಡು ಪ್ರಾಣಿಗಳು ನಾಡಿಗೆ ಬಂದು ಹಾವಳಿ ಮಾಡುತ್ತಿವೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಅರಣ್ಯ ಸಂಪತ್ತನ್ನು ಹೆಚ್ಚಿಸುವ ಜವಾಬ್ದಾರಿಯನ್ನು ನಾವೆಲ್ಲರೂ ಹೊರಬೇಕಿದೆ. ಮೈಸೂರು ಭಾಗದಲ್ಲಿ ಹೆಚ್ಚು ಅರಣ್ಯ ಸಂಪತ್ತು ಇದೆ ಹೀಗಾಗಿ ವನ್ಯಜೀವಿ ಸಂರಕ್ಷಣೆಗೆ ಎಲ್ಲರೂ ಮುಂದಾಗಬೇಕು

ಅಕ್ಟೋಬರ್ 2 ರಿಂದ 8 ವರಗೆ ವನ್ಯಜೀವಿ ಸಪ್ತಾಹ ಹಮ್ಮಿಕೊಂಡಿದ್ದು ಇಂದು ಅರಮನೆಯಿಂದ ಮೃಗಾಲಯದವರಗೆ ಕಾಲ್ನಡಿ ಕಾರ್ಯಕ್ರಮ ನಡೆಸಲಾಗಿದೆ ಹಾಗೂ ವನ್ಯಜೀವಿ ಛಾಯಾಚಿತ್ರ ಪ್ರದರ್ಶನ ಹಾಗೂ ಚಿತ್ರಕಲೆ ಪ್ರದರ್ಶನ ಕಾರ್ಯಕ್ರಮವನ್ನು ಮೃಗಾಲಯದ ಆಂಫಿ ಥಿಯೇಟರ್‌ನಲ್ಲಿ ಆಯೋಜಿಸಲಾಗಿದೆ ಈ ಒಂದು ವಾರದಲ್ಲಿ ವವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಗುಜರಾತ್ ಯಿಂದ ಸೈಕಲ್ ಸವಾರಿ ಸವರಿ ಮಾಡುತ್ತಿದ್ದೇನೆ ಪೂರ್ತಿ ಭಾರತವನ್ನು ಸೈಕಲ್ ಸವಾರಿ ಮಾಡಿದ್ದೇನೆ ಪ್ಲಾಸ್ಟಿಕ್ ಬಳಕೆಯಿಂದ ಪರಿಸರ ನಾಶಗೊಳ್ಳುತ್ತದೆ ಕಾಡಿನಲ್ಲಿ ಸಂಚರಿಸುವಾಗ ಪ್ರಾಣಿಗಳು ರಸ್ತೆ ಮಧ್ಯದಲ್ಲಿ ಇದ್ದರೆ ಅವುಗಳಿಗೆ ತೊಂದರೆ ಕೊಡಬಾರದು ಪ್ರಾಣಿಗಳು ನಮ್ಮ ದೇಶದ ಆಸ್ತಿ ಎಂದರು.

ಈ ಸಂದರ್ಭದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಸೌರಭ ಕುಮಾರ್, ಬಸವರಾಜು ಉಪಸ್ಥಿತರಿದ್ದರು

Continue Reading
Click to comment

Leave a Reply

Your email address will not be published. Required fields are marked *

Mysore

ಆಮಿಷ ಗೊಳಕ್ಕಾಗಿ ಕ್ರೆಡಿಟ್ ಕಾರ್ಡ್  ಲಿಂಕ್ ನಿಂದ 90 ಸಾವಿರ   ಸಾಲವಾದ ಸರ್ಕಾರಿ ನೌಕರಿ ವಿ ಎ 

Published

on

ಎಷ್ಟೇ ಬುದ್ದಿವಂತರಾದರೂ ಆಮಿಷದ ವಂಚನೆಗೆ ಮೋಸ ಹೋಗುತ್ತಿರುವವರು ಜಾಸ್ತಿಯಾಗುತ್ತಿರುವುದು ಇದು ಒಂದು ಉದಾಹರಣೆಯಾಗಿದೆ.

ಸಾಲಿಗ್ರಾಮ ಪಟ್ಟಣದ ನಾಡ ಕಚೇರಿಯಲ್ಲಿ ಗ್ರಾಮ ಲೆಕ್ಕಿಗರಾಗಿ ಸೇವೆ ಸಲ್ಲಿಸುತ್ತಿರುವ ಆರತಿ ಇವರ ಕ್ರೆಡಿಟ್ ಕಾರ್ಡ್ ನಿಂದ ಮೊದಲು ಒಂದೇ ದಿನ ಅಪರಿಚಿತ   40 ಸಾವಿರ ತೆಗೆದು ನಂತರ 50  ಸಾವಿರ ಒಟ್ಟು 90 ಸಾವಿರ ರೂಗಳನ್ನು ಶಾಪಿಂಗ್ ಮಾಡುವ ನೆಪದಲ್ಲಿ,   ಸಾಲದ ರೂಪದಲ್ಲಿ ಪಡೆದು          ಆನ್ ಲೈನ್ ವಂಚನೆಯಿಂದ  ಮೋಸ   ಮಾಡಿರುತ್ತಾನೆ.

ಸಾಲಿಗ್ರಾಮ ಠಾಣೆಯಲ್ಲಿ ದೂರು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿರುತ್ತಾರೆ

ಸಾರ್ವಜನಿಕರಲ್ಲಿ ಭಯ ಉಂಟಾಗಿದೆ : ತಮ್ಮ ಖಾತೆ ಗಳಲ್ಲಿ ಇಟ್ಟಿರುವ ಹಣ ಯಾವ ಯಾವ ರೂಪ, ತರಹ ಗಳಲ್ಲಿ ಹೋಗುತ್ತದೆ ಎಂಬುದು ಗೊತ್ತಾಗುತ್ತಿಲ್ಲ, ಮೊಬೈಲ್ ಗಳಿಗೆ ಬರುವ ಮೆಸೇಜ್ ಅನ್ನು ಓಕೆ ಮಾಡಬಾರದು ಮತ್ತು ಅನಾಮಿ ಕರೆಗಳು ಬಂದರೆ ಸ್ವೀಕರಿಸಬಾರದು,  ದುಪ್ಪಟ್ಟು ಹಣ ಎಂಬ ಆಸೆಗೆ ಬಿದ್ದರೆ ನಮ್ಮ ಹಣ ಹೋಗುತ್ತದೆ, ದುರಾಸೆ ಬೇಡವೇ ಬೇಡ, ಭಯ ಉಂಟಾಗುತ್ತಿದೆ ಬಹಳ ಎಚ್ಚರಿಕೆ ಯಿಂದ ಇರಬೇಕು. ಮೊದಲು ಬ್ಯಾಂಕ್ ನ ಖಾತೆಯಲ್ಲಿ  ಇರುವ ಹಣವನ್ನು ಡ್ರಾ ಮಾಡಿಕೊಂಡು ಮನೆಯಲ್ಲಿ ಇಟ್ಟಿಕೊಳ್ಳುವುದು ಒಳ್ಳೆಯದು ಎಂದು  ಸಾರ್ವಜನಿಕರು ಅಲ್ಲಲ್ಲೇ ಮಾತಾಡಿಕೊಳ್ಳುತ್ತಿದ್ದರು

Continue Reading

Mysore

ಬಸ್ ನಲ್ಲಿ ಸಿಕ್ಕ ಪ್ರಯಾಣಿಕರ ಬ್ಯಾಗ್ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಸಾರಿಗೆ ಸಿಬ್ಬಂದಿ ಸಂತೋಷ್

Published

on

ಪಿರಿಯಾಪಟ್ಟಣ: ಸಾರಿಗೆ ಬಸ್ ನಲ್ಲಿ ಸಿಕ್ಕ ಮಹಿಳಾ ಪ್ರಯಾಣಿಕರೊಬ್ಬರ ಬೆಲೆ ಬಾಳುವ ವಸ್ತು ಹಾಗೂ ನಗದು ಇದ್ದ ಬ್ಯಾಗ್ ಅನ್ನು ಚಾಲಕ ಕಮ್ ನಿರ್ವಾಹಕ ಸಂತೋಷ್ ಮರಳಿ ಪ್ರಯಾಣಿಕರಿಗೆ ಹಿಂತಿರುಗಿಸುವ ಮೂಲಕ ಪ್ರಾಮಾಣಿಕತೆ ಮೆರೆದು ಮಾನವೀಯತೆ ಪ್ರದರ್ಶಿಸಿದ್ದಾರೆ.

ಪಿರಿಯಾಪಟ್ಟಣ ಸಾರಿಗೆ ಘಟಕದಲ್ಲಿ ಚಾಲಕ ಕಮ್ ನಿರ್ವಾಹಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸಂತೋಷ್ (ಬಿಲ್ಲೆ ಸಂಖ್ಯೆ 3133) ಮಾರ್ಗ ಸಂಖ್ಯೆ 67 ರಲ್ಲಿ ಮೈಸೂರಿನಿಂದ ಪಿರಿಯಾಪಟ್ಟಣಕ್ಕೆ ಕಾರ್ಯಾಚರಣೆ ಮಾಡುತ್ತಿದ್ದ ವೇಳೆ ಮೈಸೂರಿನ ದಟ್ಟಗಳ್ಳಿ  ನಿವಾಸಿ ವಿನುತ ಎಂಬ ಪ್ರಯಾಣಿಕರು ಸಂಜೆ 6 ಗಂಟೆ ಸಮಯದಲ್ಲಿ ಮೈಸೂರಿನಿಂದ

ಪಿರಿಯಾಪಟ್ಟಣಕ್ಕೆ ಟಿಕೆಟ್ ಪಡೆದು ಪ್ರಯಾಣಿಸಿದ್ದು ಪಿರಿಯಾಪಟ್ಟಣದಲ್ಲಿ ಇಳಿಯುವ ಸಂದರ್ಭ ತಮ್ಮ ಬ್ಯಾಗ್ ಮರೆತು ಮಡಿಕೇರಿಗೆ ಪ್ರಯಾಣಿಸಿದ್ದಾರೆ ಈ ವೇಳೆ ರಾತ್ರಿ ಬಸ್ ಪಿರಿಯಾಪಟ್ಟಣದಲ್ಲಿ ತಂಗಿದ್ದಾಗ ಬಸ್ ನಲ್ಲಿ ಬ್ಯಾಗ್ ಗಮನಿಸಿದ ಸಂತೋಷ್ ತಮ್ಮ ಸಹೋದ್ಯೋಗಿ ಚಾಲಕ ನಿರ್ವಾಹಕರೊಂದಿಗೆ ಬ್ಯಾಗ್ ತೆಗೆದು ಪರಿಶೀಲಿಸಿದಾಗ ಅದರಲ್ಲಿ ಸಿಕ್ಕ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಿ ಬ್ಯಾಗ್ ಕಳೆದುಕೊಂಡಿದ್ದ ಮಹಿಳೆಯನ್ನು ಗೊತ್ತು ಮಾಡಿ ಬ್ಯಾಗ್ ನಲ್ಲಿದ್ದ 5 ಸಾವಿರ ಹಣ ಹಾಗೂ ಬ್ಯಾಂಕ್ ದಾಖಲಾತಿ ಎಟಿಎಂ ಆಧಾರ್ ವೋಟರ್ ಐಡಿ ಸೇರಿದಂತೆ ಬ್ಯಾಗ್ ನಲ್ಲಿದ್ದ ಇತರೆ ವಸ್ತುಗಳ ಬಗ್ಗೆ ಅವರು ನಿಖರವಾಗಿ ತಿಳಿಸಿದ ಬಳಿಕ ಅವರನ್ನು ಮುಂಜಾನೆ ಪಿರಿಯಾಪಟ್ಟಣ ಬಸ್ ನಿಲ್ದಾಣಕ್ಕೆ ಕರೆಸಿ ಬ್ಯಾಗ್ ಹಿಂದಿರುಗಿಸುವ ಮೂಲಕ ಪ್ರಾಮಾಣಿಕ ಮೆರೆದಿದ್ದಾರೆ.


ಸಂತೋಷ್ ಅವರ ಕಾರ್ಯಕ್ಕೆ ಘಟಕ ವ್ಯವಸ್ಥಾಪಕ ದರ್ಶನ್ ರಾಮಚಂದ್ ಸೇರಿದಂತೆ ಸಾರಿಗೆ ನಿಲ್ದಾಣದ ನಿಯಂತ್ರಣಾಧಿಕಾರಿಗಳು ಸಹೋದ್ಯೋಗಿಗಳು ಮತ್ತು ಬ್ಯಾಗ್ ಕಳೆದುಕೊಂಡಿದ್ದ ವಿನುತ ಅವರು ಶ್ಲಾಘನೆ ವ್ಯಕ್ತಪಡಿಸಿ ಅಭಿನಂದಿಸಿದರು.

Continue Reading

Mysore

ನಂಜನಗೂಡು ತಾಲ್ಲೂಕಿನ ತಗಡೂರಿನಲ್ಲಿ ವಾಂತಿ-ಭೇದಿ ಪ್ರಕರಣ — ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ ಮಹದೇವಪ್ಪ ಭೇಟಿ

Published

on

ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣ ವಿಧಾನಸಭಾ ಕ್ಷೇತ್ರದ ನಂಜನಗೂಡು ತಾಲ್ಲೂಕಿನ ತಗಡೂರು ಗ್ರಾಮದಲ್ಲಿ ಗ್ರಾಮಸ್ಥರಿಗೆ ವಾಂತಿಭೇದಿ ಕಾಣಿಸಿಕೊಂಡು ಸುಮಾರು 120ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲಾಗಿದ್ದರು. ಗ್ರಾಮದಲ್ಲಿ ಕಲುಷಿತ ನೀರು ಸೇವನೆಯಿಂದಾಗಿ ಕಾಲರಾ ರೋಗವು ಆವರಿಸಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ ಮಹದೇವಪ್ಪ ತಗಡೂರು ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರಿಗೆ ಧೈರ್ಯ ತುಂಬಿದ್ದಾರೆ.


ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ. ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ಗ್ರಾಮಕ್ಕೆ ಭೇಟಿ ನೀಡಲು ಸಾಧ್ಯವಾಗಲಿಲ್ಲ. ದೂರವಾಣಿ ಮೂಲಕ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದೆ ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೀತಿ ಸಮಿತಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಸೂಚನೆ ನೀಡಿದರು. ಮುಖ್ಯಮಂತ್ರಿಗಳ ಆದೇಶದ ಮೇರೆಗೆ ಬಂದಿದ್ದೇನೆ. ಮಳೆಗಾಲ ಇನ್ನು ಕಡಿಮೆಯಾಗಿಲ್ಲ ಕೂಡಲೇ ಅಧಿಕಾರಿಗಳು ಗ್ರಾಮದ ಎಲ್ಲಾ ಚರಂಡಿಗಳನ್ನು ಸ್ವಚ್ಛಗೊಳಿಸಿ ಬ್ಲೇಚಿಂಗ್ ಪೌಡರ್ ಸಿಂಪಡಣೆ ಮಾಡಬೇಕು. ಗ್ರಾಮಸ್ಥರಿಗೆ ಮುಂಜಾಗ್ರತೆ ಕ್ರಮಗಳನ್ನು ಅನುಸರಿಸುವಂತೆ ಸಲಹೆ ನೀಡಬೇಕು. ಸ್ಥಗಿತಗೊಂಡಿರುವ ಜಲಜೀವನ್ ಮಿಷನ್ ಯೋಜನೆಯ ಕಾಮಗಾರಿಯನ್ನು ಪೂರ್ಣಗೊಳಿಸಿ ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರನ್ನು ನೀಡಬೇಕು. ಈಗಾಗಲೇ ಮೂರು ಟ್ಯಾಂಕರ್ ಗಳಿಂದ ಶುದ್ಧ ಕುಡಿಯುವ ನೀರನ್ನು ಗ್ರಾಮಕ್ಕೆ ಸರಬರಾಜು ಮಾಡಲಾಗುತ್ತಿದೆ. ಗ್ರಾಮಸ್ಥರಿಗೆ ಆರೋಗ್ಯ ಸಮಸ್ಯೆ ಆಗದಂತೆ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಜಿಪಂ ಸಿಇಒ ಗಾಯಿತ್ರಿ, ತಹಶೀಲ್ದಾರ್ ಶಿವಕುಮಾರ್ ಕಾಸ್ನೂರ್, ಗ್ರಾಪಂ ಅಧ್ಯಕ್ಷೆ ಚಂದ್ರವತಿ ಬಸವರಾಜು, ಉಪಾಧ್ಯಕ್ಷ ಗುರುಮಲ್ಲೇಶ್, ಜಿಲ್ಲಾ ಆರೋಗ್ಯ ಅಧಿಕಾರಿ ಕುಮಾರಸ್ವಾಮಿ, ಯುವ ಮುಖಂಡರಾದ ಗಾರ್ಡನ್ ಮಹೇಶ್, ಶಿವರಾಂ, ಆಸ್ಪತ್ರೆಯ ವೈದ್ಯಾಧಿಕಾರಿ ಪ್ರಭು ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

ನಂಜನಗೂಡು ಮಹದೇವಸ್ವಾಮಿ ಪಟೇಲ್.

Continue Reading

Trending

error: Content is protected !!