Connect with us

Location

ಮೈಸೂರಿನಲ್ಲಿ ಇಬ್ಬರು ಸುಲಿಗೆಕೋರರ ಬಂಧನವಾಗಿದ್ದು10 ಪ್ರಕರಣಗಳು ಪತ್ತೆಯಾಗಿದೆ

Published

on

ಹತ್ತು ಕಳ್ಳತನ ಪ್ರಕರಣಗಳನ್ನು ಬೇಧಿಸಿ ಆರೋಪಿಗಳ

ಮೈಸೂರು : ಮೈಸೂರಿನಲ್ಲಿ ಇಬ್ಬರು ಸುಲಿಗೆಕೋರರ ಬಂಧನವಾಗಿದ್ದು10 ಪ್ರಕರಣಗಳು ಪತ್ತೆಯಾಗಿದೆ.

ಮೈಸೂರು ಗ್ರಾಮಾಂತರ ಪೊಲೀಸರ ಕಾರ್ಯಾಚರಣೆ
ಬಂಧಿತರಿಂದ ಆಟೋ ಹಾಗೂ ಬೈಕ್‌ಗಳು ವಶಕ್ಕೆ
ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 10 ಪ್ರಕರಣಗಳು ಪತ್ತೆಕೆಂಪಿ ಸಿದ್ದನಹುಂಡಿ ಗ್ರಾಮದ ಉಮೇಶ್ 23
ಮಂಚಳ್ಳಿಹುಂಡಿಯ ಶಿವಾನಂದ 21 ಬಂಧಿತ ಆರೋಪಿಗಳು.

6 ಆರೋಪಿಗಳ ತಂಡದಿಂದ ನಿರಂತರವಾಗಿ ಕಳ್ಳತನ
ಈ ಪೈಕಿ ಇಬ್ಬರ ಬಂಧನಉಳಿದ ನಾಲ್ವರ ಆರೋಪಿಗಳ ಬಂಧನಕ್ಕಾಗಿ ಮುಂದುವರಿದ ಕಾರ್ಯಾಚರಣೆ
ಆಟೋ ಬಾಡಿಗೆ ಪಡೆದು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಸುಲಿಗೆಚಾಲಕನಿಗೆ ಹಲ್ಲೆ ನಡೆಸಿ ಆಟೋ ಕಳ್ಳತನ ಮಾಡುತ್ತಿದ್ದ ಆರೋಪಿಗಳು

ಆರೋಪಿಗಳು 5 ಸುಲಿಗೆ, 2 ದೇವಸ್ಥಾನ ಕಳುವು ಹಾಗೂ ಮೂರು ಬೈಕ್ ಗಳನ್ನ ಕಳುವು ಮಾಡಿರುವುದು ತನಿಖೆಯಲ್ಲಿ ಬಹಿರಂಗ. ಬಿಳಿಗೆರೆ ಪೊಲೀಸ್ ಠಾಣೆಯ 1 ಪ್ರಕರಣ, ವರುಣ ಪೊಲೀಸ್ ಠಾಣೆಯ 2 ಪ್ರಕರಣ
ನಂಜನಗೂಡು ಗ್ರಾಮಾಂತರ ಠಾಣೆಯ 3 ಪ್ರಕರಣ
ಜಯಪುರ ಠಾಣೆ 1 ಪ್ರಕರಣ
ಹುಲ್ಲಹಳ್ಳಿ ಠಾಣೆ 1 ಹಾಗೂ ಮೈಸೂರು ಗ್ರಾಮಾಂತರ ಠಾಣೆಯ 2 ಪ್ರಕರಣಗಳು ಪತ್ತೆ
ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading
Click to comment

Leave a Reply

Your email address will not be published. Required fields are marked *

Mandya

ಎಲ್ಲರೂ ಕಳ್ಳರೇ ಆದರೆ, ಕಳ್ಳನನ್ನು ಹಿಡಿಯುವವರು ಯಾರು?.. : ವಾಟಾಳ್ ನಾಗರಾಜ್ ಪ್ರಶ್ನೆ

Published

on

ಎಲ್ಲರೂ ಕಳ್ಳರೇ ಆದರೆ, ಕಳ್ಳನನ್ನು ಹಿಡಿಯುವವರು ಯಾರ?.. : ವಾಟಾಳ್ ನಾಗರಾಜ್ ಪ್ರಶ್ನೆ

ಎಲ್ಲಾ ರಾಜಕೀಯ ಪಕ್ಷಗಳು, ಅಧಿಕಾರಿಗಳು‌, ಪೋಲೀಸ್ ಇಲಾಖೆ ಸೇರಿದಂತೆ ಎಲ್ಲರೂ ಕಳ್ಳರೇ ಆದರೆ ಕಳ್ಳನನ್ನು ಹಿಡಿಯುವವರು ಯಾರು ಎಂದು ಕನ್ನಡಪರ ಚಳುವಳಿ ಹೋರಾಟಗಾರ ವಾಟಾಳ್ ನಾಗರಾಜ್ ಪ್ರಶ್ನಿಸಿದರು.

ದಕ್ಷಿಣ ಶಿಕ್ಷಕರ ಕ್ಷೇತ್ರದ‌ ಚುನಾವಣಾ ಕಣಕ್ಕೆ ಸ್ಪರ್ಧಿಸುತ್ತಿರುವುದಾಗಿ ಸುದ್ದಿಗೋಷ್ಠಿ ನಡೆಸಿದ ಆವರು, ಬಳಿಕ ಪ್ರಜ್ವಲ್ ರೇವಣ್ಣ ಕುರಿತಾದ ಲೈಂಗಿಕ ಪ್ರಕರಣದ ಕುರಿತಾದ ಮಾದ್ಯಮ‌ ಮಿತ್ರರ ಪ್ರಶ್ನೆಗೆ ಉತ್ತರಿಸಿದರು.

ರಾಜ್ಯದ ಮಹಿಳೆಯರ ಮಾನವನ್ನು ಇಂದು ದೇಶ ವಿದೇಶಗಳಲ್ಲಿ ಹರಾಜು ಹಾಕಲಾಗಿದೆ. ನೈತಿಕ‌ ಹೊಣೆ ಹೊತ್ತು ರಾಜ್ಯದ ಗೃಹ ಮಂತ್ರಿಗಳು ಸೇರಿದಂತೆ ಇಡೀ ಸರ್ಕಾರವೇ ಕೆಳಗಿಳಿಯಬೇಕೆಂದು ಪರೋಕ್ಷವಾಗಿ ಎಚ್ಚರಿಸಿದರು.

ಇನ್ನು ತಮಿಳುನಾಡಿಗೆ ಮತ್ತೆ ಎರಡು ಸಾವಿರ ಕ್ಯೂಸೆಕ್ ನೀರು ಬಿಡಬೇಕೆಂಬ ಆದೇಶದ ಬಗ್ಗೆ ಪ್ರತಿಕ್ರಿಯಿಸಿದ ವಾಟಾಳ್ ನಾಗರಾಜ್, ಸರ್ಕಾರ ತಮಿಳುನಾಡಿನೊಂದಿಗೆ ಬೀಗತನ ಮಾಡಿಕೊಂಡಿದ್ದು ಈಗಾಗಲೇ ಅವರು ಕೇಳುವ ಮೊದಲೇ ಸಾಕಷ್ಡು ನೀರು ಹರಿಸಿದ್ದಾರೆ.

ತಮಿಳುನಾಡಿಗೆ ನೀರು ಬಿಟ್ಟ ಪರಿಣಾಮ ಮಂಡ್ಯ, ಮೈಸೂರು ಸೇರಿದಂತೆ ಬೆಂಗಳೂರು ನಗರಕ್ಕೆ ಕುಡಿಯುವ ನೀರಿಗೂ ಅಭಾವ ಸೃಷ್ಟಿಸಿದೆ. ಇದೀಗ ಸರ್ಕಾರ ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡಬಾರದು ಎಂದು ಎಚ್ಚರಿಕೆ ನೀಡಿದರು.

Continue Reading

Chamarajanagar

ತಾಲೂಕಿನಲ್ಲಿ ಕಳೆದ ನಾಲ್ಕೈದು ದಿನಗಳಿಂದ ಸುರಿಯತ್ತಿರುವ ಭರ್ಜರಿ ಮಳೆಗೆ ಭೂಮಿ ತಂಪಾಗಿದೆ

Published

on

ಯಳಂದೂರು ಮೇ 24

ತಾಲೂಕಿನಲ್ಲಿ ಕಳೆದ ನಾಲ್ಕೈದು ದಿನಗಳಿಂದ ಸುರಿಯತ್ತಿರುವ ಭರ್ಜರಿ ಮಳೆಗೆ ಭೂಮಿ ತಂಪಾಗಿದೆ. ರಾತ್ರಿ ಬಿದ್ದ ಭಾರಿ ಮಳಿಗೆ ಭೂಮಿ ಸಂಪೂರ್ಣವಾಗಿ ನೀರು ಕುಡಿದು ಜಮೀನುಗಳು ಕೆರೆ,ಕಟ್ಟೆ ಹಾಗೂ ಶಾಲೆ ಕಾಲೇಜು ಮೈದಾನದಲ್ಲಿ ನೀರು ತುಂಬಿಕೆರೆಯಂತಾಗಿ ಅವಾಂತರ ಸೃಷ್ಟಿಯಾಗಿದೆ.

ಕೆಲವು ಜಮೀನುಗಳಲ್ಲಿ ಹಾಗೂ ರಸ್ತೆಗಳಲ್ಲಿ ಮರಗಳ ಬಿದ್ದು ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಗ್ರಾಮೀಣ ಭಾಗದ ರ ರಸ್ತೆಗಳು ಡಾಂಬರ್ ಕಿತ್ತು ದೊಡ್ಡ ದೊಡ್ಡ ಹೊಂಡ ಬಿದ್ದು, ವಾಹನ ಸವರರು ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗಿದೆ.

ಇನ್ನು ಕುರಿಗಾಹಿಗಳು ತಮ್ಮ ಕುರಿಗಳ ಜೊತೆಗೆ ಜಮೀನುಗಳಲ್ಲಿ ತುಂಬಿರುವ ನೀರಿನಲ್ಲಿ ರಾತ್ರಿ ಇಡೀ ಕಾಲ ಕಳೆಯುವಂತೆ ಆಯಿತು. ಪಟ್ಟಣದಿಂದ
ಬಿಳಗಿರಿರಂಗನ ಬೆಟ್ಟಕ್ಕೆ ಹೋಗುವ ಮುಖ್ಯ ರಸ್ತೆಯಲ್ಲಿ ಹಳ್ಳ ಬಿದ್ದು ವಾಹನ ಸವಾರರು ಬಿದ್ದು ಗಾಯಗೊಂಡಿದ್ದಾರೆ.


ರಾಷ್ಟ್ರೀಯ ಹೆದ್ದಾರಿ 209 ರಿಂದ ಕೆಸ್ತೂರಿನಿಂದ ಕುಂತೂರ ಗ್ರಾಮದವರೆಗೆ, ಇನ್ನೂ ಹಲವು ಗ್ರಾಮಗಳ ಪ್ರಮುಖ ರಸ್ತೆಗಳ ಡಾಂಬರ್ ಕಿತ್ತು ದೊಡ್ಡ ದೊಡ್ಡ ಹಳ್ಳಗಳಾಗಿ ಮಳೆ ನೀರು ತುಂಬಿ ಕೆರೆಯಂತೆ ಆಗಿ ಸವಾರರು ಆ ಹಳ್ಳದಲ್ಲೇ ಬಿದ್ದು ತಮ್ಮ ಕೈಕಾಲುಗಳನ್ನು ಮುರಿದುಕೊಂಡಿರುವ ಘಟನೆಗಳು ನಡೆದಿದೆ. ಸಂಬಂಧಪಟ್ಟ ಇಲಾಖೆ ಇದನ್ನು ಗಮನ ಹರಿಸಿ ಶಾಲಾ ಕಾಲೇಜು ಮೈದಾನ ಹಾಗೂ ರಸ್ತೆಗಳನ್ನು ಆದಷ್ಟು ಬೇಗ ಸರಿಪಡಿಸಿ ಸಾರ್ವಜನಿಕರ ಸಂಚಾರಕ್ಕೆ ಅಡೆತಡೆಗಳಾಗದೆ ಅನುಕೂಲ ಮಾಡಿಕೊಡಬೇಕು ಎಂದು ಪಟ್ಟಣದ ನಾಗರಿಕರು ಹಾಗೂ ಗ್ರಾಮಸ್ಥರುಗಳು ಆಗ್ರಹಿಸಿದ್ದಾರೆ.

Continue Reading

Hassan

ಬೆಳ್ಳಂಬೆಳಿಗ್ಗೆ ಬೈಕ್ ಸವಾರನ ಮೇಲೆ ಕಾಡಾನೆ ದಾಳಿ

Published

on

ಹಾಸನ : ಬೆಳ್ಳಂಬೆಳಿಗ್ಗೆ ಬೈಕ್ ಸವಾರನ ಮೇಲೆ ಕಾಡಾನೆ ದಾಳಿ

ಬೈಕ್ ಸವಾರನನ್ನು ಸೊಂಡಲಿನಿಂದ ಎತ್ತಿ ಬಿಸಾಡಿದ ಪುಂಡಾನೆ

ಬೈಕ್ ಸವಾರನಿಗೆ ಗಾಯ ಆಸ್ಪತ್ರೆಗೆ ದಾಖಲು

ಹಾಸನ ಜಿಲ್ಲೆ, ಬೇಲೂರು ತಾಲ್ಲೂಕಿನ, ಕಲ್ಲಗಂಡಿ ಗ್ರಾಮದಲ್ಲಿ ಘಟನೆ

ಅರೇಹಳ್ಳಿ ಪಟ್ಟಣದ ಡೆಸಿನ್ ಡಿಸೋಜಾ (55) ಕಾಡಾನೆ ದಾಳಿಯಿಂದ ಗಾಯಗೊಂಡಿರುವ ವ್ಯಕ್ತಿ

ರೋಟರಿ ಶಾಲೆಯಲ್ಲಿ ವಾಚ್‌ಮ್ಯಾನ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಡೆಸಿನ್ ಡಿಸೋಜಾ

ಇಂದು ಬೆಳಿಗ್ಗೆ ಬೈಕ್‌ನಲ್ಲಿ ಕೆಲಸಕ್ಕೆ ತೆರಳುತ್ತಿದ್ದ ವೇಳೆ ಏಕಾಏಕಿ ದಾಳಿ ಮಾಡಿದ ಒಂಟಿಸಲಗ

ಬೈಕ್‌ ಎಳೆದಾಡಿ ಸೊಂಡಿಲಿನಿಂದ ಎಸೆದು ಕಾಫಿ ತೋಟದೊಳಗೆ ಹೋಗಿರುವ ಕಾಡಾನೆ

ಗಾಯಾಳುವಿಗೆ ಸಮೀಪ್ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನೆ

ಎರಡು ಕಾಡಾನೆಗಳು ರಸ್ತೆ ದಾಟುತ್ತಿದ್ದ ವೇಳೆ ದಾಳಿ ನಡೆಸಿರುವ ಒಂದು ಕಾಡಾನೆ

ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ, ಪರಿಶೀಲನೆ

Continue Reading

Trending

error: Content is protected !!