Connect with us

Location

ಮೈಸೂರು ಫೆಸ್ಟ್- 2023 ಆಚರಣೆ ಕುರಿತು ಪೂರ್ವಭಾವಿ ಸಭೆ*

Published

on

*ಮೈಸೂರು ಫೆಸ್ಟ್- 2023 ಆಚರಣೆ ಕುರಿತು ಪೂರ್ವಭಾವಿ ಸಭೆ*

*ಮೂರು ದಿನಗಳ ಕಾಲ ನಗರದಲ್ಲಿ ಮೈಸೂರು ಫೆಸ್ಟ್ – 2023 ಆಯೋಜನೆ – ಡಾ. ಹೆಚ್ ಸಿ ಮಹದೇವಪ್ಪ*

ಮೈಸೂರು ಡಿ.19
2024 ರ ಜನವರಿ 26, 27 ಹಾಗೂ 28 ರಂದು ನಗರದ ಮೈಸೂರುವಿಶ್ವವಿದ್ಯಾನಿಲಯದ ಬಯಲು ರಂಗ ಮಂದಿರದಲ್ಲಿ ಮೈಸೂರು ಫೆಸ್ಟ್ – 2023 ಅನ್ನು ಆಯೋಜನೆ ಮಾಡಲಾಗುವುದು ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಡಾ. ಎಚ್ ಸಿ ಮಹದೇವಪ್ಪನವರು ತಿಳಿಸಿದರು.

ಇಂದು ನಗರದ ಜದರ್ಶಿನಿ ಅತಿಥಿಗೃಹದಲ್ಲಿ ಹಮ್ಮಿಕೊಂಡಿದ್ದ ಮೈಸೂರು ಫೆಸ್ಟ್ – 2023ರ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈಗಾಗಲೇ ವಿಶ್ವ ವಿಖ್ಯಾತ ಮೈಸೂರು ದಸರಾ, ಹಲವಾರು ಪ್ರೇಕ್ಷಣೀಯ ಸ್ಥಳಗಳು ಪ್ರಸಿದ್ಧ ಉತ್ಪನ್ನಗಳಿಗೆ ಜಾಗತಿಕ ಮಟ್ಟದಲ್ಲಿ ಮೈಸೂರು ಹೆಸರುವಾಸಿಯಾಗಿದೆ. ಈ ಹಿನ್ನಲೆಯಲ್ಲಿ ಮೈಸೂರಿನ ಸಾಂಸ್ಕೃತಿಕ ಸೊಬಗು, ಪರಂಪರೆ, ಪ್ರವಾಸೋದ್ಯಮ ವಾಣಿಜ್ಯೋದ್ಯಮ ಹಾಗೂ ಮೈಸೂರಿನ ಹಿರಿಮೆಯನ್ನು ಇನ್ನಷ್ಟು ಮುಮ್ಮಡಿಗೊಳಿಸಲು ನೂತನವಾಗಿ ಅನಾವರಣಗೊಂಡ ಲೋಗೋ ವನ್ನು ಜಿಲ್ಲೆಯ ಎಲ್ಲಾ ಸರ್ಕಾರಿ ಸಂಸ್ಥೆಗಳು ಅನುದಾನಿತ ಸಂಸ್ಥೆಗಳು ಮತ್ತು ಇತರೆ ಖಾಸಗಿ ಕ್ಷೇತ್ರಗಳಲ್ಲಿ ಬಳಸುವುದರ ಮೂಲಕ ಜಿಲ್ಲೆಯ ಮತ್ತಷ್ಟು ಪ್ರಖ್ಯಾತಿಗೆ ಎಲ್ಲರೂ ಕೈಜೋಡಿಸಿ ಎಂದರು.

ಜಿಲ್ಲಾಧಿಕಾರಿಗಳಾದ ಡಾ. ಕೆ ವಿ ರಾಜೇಂದ್ರ ಅವರು ಮಾತನಾಡಿ, ಮೈಸೂರು ಫಸ್ಟ್ 2023ರ ಅಂಗವಾಗಿ ಮೈಸೂರು ಪರಂಪರೆಯನ್ನು ಬಿಂಬಿಸುವ ಅತ್ಯುತ್ತಮ ಕಲಾ ತಂಡಗಳಿಂದ ನಗಾರಿ, ಡೊಳ್ಳು, ಭರತನಾಟ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಮಕ್ಕಳು ಹಾಗೂ ದೊಡ್ಡವರಿಗಾಗಿ ಚಿತ್ರಸಂತೆ, ಜಾಗತಿಕ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿರುವ ಮೈಸೂರು ಸ್ಥಳೀಯ ಉತ್ಪನ್ನಗಳನ್ನು ಉತ್ತಮ ಗುಣಮಟ್ಟದಲ್ಲಿ ನಿರ್ದಿಷ್ಟ ಬೆಲೆಗೆ ಒಂದೇ ಸೂರಿನಡಿ ಮಾರಾಟ ಮಾಡಲು flea ಮಾರ್ಕೆಟಿಂಗ್ಆಯೋಜನೆ, ಆಹಾರಮೇಳ, ಫ್ಯಾಷನ್ ಶೋ( ವಿವಿಧ ಬ್ರಾಂಡ್ ವಸ್ತುಗಳ ಮಾರಾಟಗಾರಿಂದ ಸೇಲ್ಸ್ ಉತ್ತೇಜನಕ್ಕಾಗಿ), ಗಾಳಿಪಟ ಉತ್ಸವ, ರಾಕ್ ಬ್ಯಾಂಡ್ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮವನ್ನು ವೀಕ್ಷಿಸಲು ಬರುವ ಪ್ರವಾಸಿಗರಿಗೆ ಹಾಗೂ ವೀಕ್ಷಕರಿಗೆ ಸರಿಯಾದ ವಾಹನ ನಿಲುಗಡೆ ವ್ಯವಸ್ಥೆ, ಸಾರ್ವಜನಿಕ ಶೌಚಾಲಯದ ವ್ಯವಸ್ಥೆ ಹಾಗೂ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ 24 ಗಂಟೆಗಳು ಸ್ವಚ್ಛತೆ ಕಾಪಾಡುವ ಕೆಲಸ ಆಗಬೇಕು. ಪ್ರವಾಸಿಗರಿಗೆ ಮನೋರಂಜನೆ ನೀಡುವ ಉದ್ದೇಶದಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.

ಈ ವೇಳೆಯಲ್ಲಿ ಪ್ರವಾಸೋದ್ಯಮ ಇಲಾಖೆಯ ಮೈಸೂರು ವಿಭಾಗದ ಜಂಟಿ ನಿರ್ದೇಶಕರಾದ ಎಂ ಕೆ ಸವಿತಾ ಅವರು ಮಾತನಾಡಿ, ಬ್ರಾಂಡ್ ಮೈಸೂರು -2023 ಸ್ಪರ್ಧೆಯಲ್ಲಿ ಬಿಡುಗಡೆ ಮಾಡಿರುವ ಲೋಗೋ, ಮ್ಯಾಸ್ಕಾಟ್, ಸ್ಮರಣಿಕೆಗಳನ್ನು ಬಳಸುವುದರ ಮೂಲಕ ಮೈಸೂರು ಪ್ರವಾಸೋದ್ಯಮವನ್ನು ಉತ್ತೇಜಿಸಬೇಕು. ಈ ನಿಟ್ಟಿನಲ್ಲಿ ಪೊಲೀಸ್ ಬ್ಯಾರಿಗೇಟ್, ಸಿಗ್ನಲ್ ಬೋರ್ಡ್ ಪೊಲೀಸ್ ಚೌಕಿಗಳಲ್ಲಿ ನಮ್ಮ ಪರಂಪರೆ ನಿಮ್ಮ ತಾಣ ಎಂಬ ಅಡಿ ಬರಹವನ್ನು ಒಳಗೊಂಡ ಮೈಸೂರಿನ ನೂತನ ಲೋಗೋ ಅಳವಡಿಕೆಗೆ ಸ್ಥಳಗಳನ್ನು ಗುರುತಿಸಲಾಗಿದೆ ಎಂದರು.

ಸಭೆಯಲ್ಲಿ ಪೋಲಿಸ್ ವರಿಷ್ಠಾಧಿಕಾರಿಗಳಾದ ಸೀಮಾಲಾಟ್ಕರ್, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ದಿನೇಶ್ ಕುಮಾರ್, ಪ್ರಾಚ್ಯ ವಸ್ತು ಸಂಗ್ರಹಾಲಯದ ಆಯುಕ್ತರಾದ ದೇವರಾಜು, ಡಿಸಿಪಿ ಮುತ್ತುರಾಜ್, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರಾದ ಟಿ.ಕೆ ಹರೀಶ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಹೋಟೆಲ್ ಓನರ್ ಅಸೋಸಿಯೇಷನ್ ನ ಅಧ್ಯಕ್ಷರಾದ ನಾರಾಯಣ್ ಗೌಡ, ಮೈಸೂರು ವಾಣಿಜ್ಯ ಹಾಗೂ ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾದ ಕೆ ಬಿ ಲಿಂಗರಾಜು, ಮೈಸೂರು ಸಂಘ ಸಂಸ್ಥೆಗಳ ಅಧ್ಯಕ್ಷರಾದ ಪ್ರಶಾಂತ್ ಬಿ ಎಸ್, ಮೈಸೂರು ಮರ್ಚೆಂಟ್ ಅಸೋಸಿಯೇಷನ್ ಅಧ್ಯಕ್ಷರಾದ ಆನಂದ್, ಮೈಸೂರು ಟ್ರಾವೆಲ್ಸ್ ಅಸೋಸಿಯೇಷನ್ ನ ಅಧ್ಯಕ್ಷರಾದ ಜೆ.ಪಿ ಅರಸ್, ಜವಾಜಿ ಹೋಟೆಲ್ ಗ್ರೂಪ್ಸನ ಜೆ ಬಾಪೂಜಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Kodagu

ಮಡಿಕೇರಿ ನಗರಸಭೆಗೆ ಮೃತ ಇಂಜಿನಿಯರ್‌ ಟ್ರಾನ್ರ್ಫರ್‌ !

Published

on

ಮಡಿಕೇರಿ : ಸರ್ಕಾರ ಮತ್ತು ಇಲಾಖೆಯಿಂದ ವರ್ಗಾವಣೆಯ ಎಡವಟ್ಟಿನಿಂದಾಗಿ 6 ತಿಂಗಳ ಹಿಂದೆ ಮೃತಪಟ್ಟ ನಗರಾಭಿವೃದ್ಧಿ ಇಲಾಖೆಯ ಕಿರಿಯ ಇಂಜಿನಿಯರ್ ಓರ್ವರನ್ನು ಜುಲೈ 9ರಂದು ಕೊಡಗಿನ ಮಡಿಕೇರಿಯ ನಗರಸಭೆಯಲ್ಲಿ ಖಾಲಿ ಇರುವ ಕಿರಿಯ ಅಭಿಯಂತರ ಹುದ್ದೆಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಅಶೋಕ ಪುಟಪಾಕ್ ಎಂಬ ಅಧಿಕಾರಿಯನ್ನು ಜುಲೈ 9ರಂದು ಕೊಡಗಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ವಾಸ್ತವವಾಗಿ, ಅಶೋಕ ಪುಟಪಾಕ್ ಕಳೆದ ಜನವರಿ 12ರಂದು ಮೃತಪಟ್ಟಿದ್ದಾರೆ.
ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ಮಾಹಿತಿ ಇಲ್ಲದೆಯೇ ಎಡವಟ್ಟು ಮಾಡಿಕೊಂಡಿದ್ದು, ವರ್ಗಾವಣೆಯ ಪ್ರತಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.


ಕಲಬುರಗಿ ಜಿಲ್ಲೆಯ ಸೇಡಂ ಪುರಸಭೆಯಲ್ಲಿ ಕಿರಿಯ ಇಂಜಿನಿಯರ್ ಆಗಿ ಕೆಲಸ ಮಾಡ್ತಿದ್ದ ಅಶೋಕ್, ಜಿಲ್ಲೆಯ ಚಿತ್ತಾಪುರ ತಾಲೂಕಿನ ದಿಗ್ಗಾಂವ್ ಗ್ರಾಮದ ನಿವಾಸಿ. ಕಳೆದ ಜನವರಿಯಲ್ಲಿ ಮೃತಪಟ್ಟಿದ್ದರು. ಆದರೆ ಈ ಮಾಹಿತಿಯನ್ನು ಅವರು ಕೆಲಸ ಮಾಡುತ್ತಿದ್ದ ಕಚೇರಿಯ ಅಧಿಕಾರಿಗಳು ಮೇಲಾಧಿಕಾರಿಗಳಿಗೆ ನೀಡಿರಲಿಲ್ಲವೇ ? ಎನ್ನುವ ಅನುಮಾನ ಹುಟ್ಟಿಕೊಂಡಿದ್ದು, ಮೃತಪಟ್ಟ ಬಗ್ಗೆ ಮಾಹಿತಿ ಇಲ್ಲದ ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳು, ಕಳೆದ ಜುಲೈ ಜುಲೈ 9ರಂದು ಕೊಡಗಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.
ಇಲಾಖೆಯ ನೌಕರ ಮೃತಪಟ್ಟ ವಿಚಾರ ಗೊತ್ತಿಲ್ಲದೆ ವರ್ಗಾವಣೆ ಮಾಡಿದೆಯಾ ಅಥವಾ ಸಾಯುವ ಮುನ್ನ ಅಶೋಕ್ ಪುಟಪಾಕ್ ವರ್ಗಾವಣೆ ಬಯಸಿದ್ದರಾ ಎಂದು ಜಿಲ್ಲಾಡಳಿತವೇ ಈ ಬಗ್ಗೆ ಸ್ಪಷ್ಟ ಮಾಹಿತಿ ನೀಡಬೇಕಷ್ಟೇ.

Continue Reading

Mysore

ನಂಜನಗೂಡು ತಾಲ್ಲೂಕಿನ ಕಂದೇಗಾಲ ಗ್ರಾಮದಲ್ಲಿ ನೂತನ ಪಶು ಸಂಗೋಪನೆಯ ಆಸ್ಪತ್ರೆಯನ್ನು ಸಚಿವ ಕೆ ವೆಂಕಟೇಶ್ ,ಮತ್ತು ನಂಜನಗೂಡು ಕ್ಷೇತ್ರದ ಜನಪ್ರಿಯ ಶಾಸಕರಾದ ದರ್ಶನ್ ರವರುಗಳು ಉದ್ಘಾಟಿಸಿದರು.

Published

on

ನಂಜನಗೂಡು ತಾಲ್ಲೂಕಿನ ಕಂದೇಗಾಲ ಗ್ರಾಮದಲ್ಲಿ ನೂತನ ಪಶು ಸಂಗೋಪನೆಯ ಆಸ್ಪತ್ರೆಯನ್ನು ಸಚಿವ ಕೆ ವೆಂಕಟೇಶ್ ,ಮತ್ತು ನಂಜನಗೂಡು ಕ್ಷೇತ್ರದ ಜನಪ್ರಿಯ ಶಾಸಕರಾದ ದರ್ಶನ್ ರವರುಗಳು ಉದ್ಘಾಟಿಸಿದರು.

ಬಳಿಕ ಸಚಿವ ವೆಂಕಟೇಶ್ ಮಾತನಾಡಿ ಗ್ರಾಮೀಣ ಭಾಗದಲ್ಲಿ ಅತೀ ಹೆಚ್ಚು ರೈತರು ಹೆಚ್ಚಿನ ಸಂಖ್ಯೆಯಲ್ಲಿ ಜಾನುವಾರುಗಳನ್ನು ಸಾಕುತ್ತಿದ್ದು ಅದರಲ್ಲೇ ಜೀವನ ಸಾಗಿಸುತ್ತಾರೆ ಈ ಗ್ರಾಮದಿಂದ ಜಾನುವಾರುಗಳಿಗೆ ಚಿಕಿತ್ಸೆ ಕೊಡಿಸಲು ಸುಮಾರು 20 ಕಿ ಮೀ ದೂರ ಹೋಗಬೇಕಾದ ದೃಷ್ಟಿಯಿಂದ ಈ ಕ್ಷೇತ್ರದ ಶಾಸಕರು ಒತ್ತಾಡದ ಮೇರೆಗೆ ಈ ಗ್ರಾಮಕ್ಕೆ ಪಶು ಸಂಗೋಪನೆ ಆಸ್ಪತ್ರೆಗೆ ಅನುದಾನ ನೀಡಲಾಗಿದೆ ಪ್ರತಿಯೊಬ್ಬ ರೈತರು ಸದ್ದುಪಯೋಗ ಪಡೆದುಕೊಳ್ಳಿ ಎಂದರಲ್ಲದೆ ನಮ್ಮ ಸರ್ಕಾರದಿಂದ ಜಾನುವಾರುಗಳು ಸಾವನ್ನಾಪ್ಪಿದರೆ 10 ಸಾವಿರ ಪರಿಹಾರ ನೀಡಲಾಗುತ್ತಿದೆ ಕುರಿ ಸಾವನ್ನಾಪ್ಪಿದರೆ 5 ಸಾವಿರ ಪರಿಹಾರವನ್ನು ನಮ್ಮ ಸರ್ಕಾರ ನೀಡುತ್ತಿದೆ ಮುಂದಿನ ದಿನಗಳಲ್ಲಿ ಕ್ಷೇತ್ರಕ್ಕೆ ಮತ್ತೊಂದು ಆಸ್ಪತ್ರೆ ನೀಡಲಾಗುವುದು ಎಂದು ಭರವಸೆ ನೀಡಿದರು.

ಶಾಸಕ ದರ್ಶನ್ ಧ್ರುವನಾರಾಯಣ್ ಮಾತನಾಡಿ ಕ್ಷೇತ್ರದಲ್ಲಿ ಹೆಚ್ಚಿನ ಅಭಿವೃದ್ಧಿಯಾಗಬೇಕಿದೆ ಕಾಡಾಂಚಿನ ಗ್ರಾಮದಲ್ಲಿ ರೈತರು ಜಾನುವಾರುಗಳಿಗೆ ಚಿಕಿತ್ಸೆ ಕೊಡಿಸಲು ತುಂಭಾ ತೊಂದರೆಯಾಗಿರುವ ಬಗ್ಗೆ ನನಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಸಚಿವರ ಗಮನಕ್ಕೆ ತಂದು ಆಸ್ಪತ್ರೆಗೆ ಹೆಚ್ಚಿನ ಒತ್ತು ನೀಡಲಾಗಿದೆ ಕ್ಷೇತ್ರದ ಅಭಿವೃದ್ಧಿ ಪ್ರಾಮಾಣಿಕವಾಗಿ ಶ್ರಮಿಸಲಾಗುವುದು ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಶಿವಕುಮಾರ್,
ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಬ್ಲಾಕ್ ಅದ್ಯಕ್ಷರಾದ ಕೆ ಜಿ ಮಹೇಶ್, ಶ್ರೀಕಂಠನಾಯಕ,ಗ್ರಾ ಪಂ ಅದ್ಯಕ್ಷ ಹರೀಶ್ ಕುಮಾರ್, ಸದಸ್ಯ ಕೃಷ್ಣಮೂರ್ತಿ,ಮಹದೇವು,ನಿಂಗಮಣಿ,ಮುಖಂಡರುಗಳಾದ ದೊರೆಸ್ವಾಮಿ ನಾಯಕ,ಸೇರಿದಂತೆ ಪ್ರಮುಖರು ಹಾಜರಿದ್ದರು.

ನಂಜನಗೂಡು ಮಹದೇವಸ್ವಾಮಿ ಪಟೇಲ್.

Continue Reading

Kodagu

ಜು.17ರಂದು ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಪದಾಧಿಕಾರಿಗಳ ಪದಗ್ರಹಣ

Published

on

ಪ್ರಾಧಿಕಾರದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜು.17 ರಂದು ನಡೆಯಲಿದೆ ಎಂದು ನೂತನ ಅಧ್ಯಕ್ಷ ಬಿ.ವೈ.ರಾಜೇಶ್ ಯಲ್ಲಪ್ಪ ತಿಳಿಸಿದ್ದಾರೆ.


ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಬೆಳಿಗ್ಗೆ 11 ಗಂಟೆಗೆ ತಾವು ಸೇರಿದಂತೆ ಸದಸ್ಯರುಗಳಾದ ಸುದಯ್ ನಾಣಯ್ಯ, ಕಾನೆಹಿತ್ಲು ಮೊಣ್ಣಪ್ಪ, ಆರ್.ಪಿ.ಚಂದ್ರಶೇಖರ್ ಹಾಗೂ ಮೀನಾಜ್ ಪ್ರವೀಣ್ ಅಧಿಕಾರ ಸ್ವೀಕರಿಸಲಿರುವುದಾಗಿ ಪತ್ರಿಕಾ ಪ್ರಕಟಣೆ ನೀಡಿದ್ದಾರೆ.

Continue Reading

Trending

error: Content is protected !!