Connect with us

Mysore

ನಗರದ 101 ಗಣಪತಿ ದೇವಸ್ಥಾನದಲ್ಲಿ ಪ್ರಜ್ಞಾವಂತ ನಾಗರಿಕ ವೇದಿಕೆಯ ಕಾರ್ಯಕರ್ತರು 101 ಪ್ರದಕ್ಷಣೆ ಮಾಡುವ ಮೂಲಕ ವಿಶೇಷವಾಗಿ ಪ್ರತಿಭಟಿಸಿದ್ದಾರೆ.

Published

on

ಮೈಸೂರು: ರಾಜ್ಯ ಸರ್ಕಾರ ಕಾವೇರಿ ವಿಚಾರದಲ್ಲಿ ಪೂರಕವಾಗಿ ಸ್ಪಂದಿಸಲಿ ಎಂದು
ನಗರದ 101 ಗಣಪತಿ ದೇವಸ್ಥಾನದಲ್ಲಿ ಪ್ರಜ್ಞಾವಂತ ನಾಗರಿಕ ವೇದಿಕೆಯ ಕಾರ್ಯಕರ್ತರು 101 ಪ್ರದಕ್ಷಣೆ ಮಾಡುವ ಮೂಲಕ ವಿಶೇಷವಾಗಿ ಪ್ರತಿಭಟಿಸಿದ್ದಾರೆ.

ನಗರಪಾಲಿಕ ಸದಸ್ಯರಾದ ಮಾ.ವಿ. ರಾಮ್ ಪ್ರಸಾದ್ ಮತ್ತು ಕನ್ನಡ ಸಾಹಿತ್ಯ ಪರಿಷತ್‌ ಮಾಜಿ ಅಧ್ಯಕ್ಷ ಚಂದ್ರಶೇಖರ್ ಅವರ ನೇತೃತ್ವದಲ್ಲಿ ಜನಪ್ರತಿನಿಧಿಗಳಿಗೆ ಬುದ್ಧಿ ಬರಲಿ ಎಂದು ವಿಜ್ಞ ನಿವಾರಕ ವಿಘ್ನೇಶ್ವರನಲ್ಲಿ ಸಾಮೂಹಿಕ ನಮಸ್ಕಾರ ಮಾಡಿ 101 ಪ್ರದಕ್ಷಣೆ ಮಾಡುವ ಮೂಲಕ ವಿಶೇಷವಾಗಿ ಪ್ರತಿಭಟಿಸಿದ್ದಾರೆ

ಈ ಕೂಡಲೇ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ಕಾವೇರಿ ಸಮಸ್ಯೆ ನಿವಾರಿಸಲಿ ಹಾಗೂ ನ್ಯಾಯಾಧೀಕರಣ ವಸ್ತುಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲಿ ಮತ್ತು ರಾಜ್ಯದಲ್ಲಿ ವರುಣನ ಕೃಪೆ ಬರಲಿ ಎಂದು ವಿಶೇಷ ಪ್ರಾರ್ಥನೆ ಸಲ್ಲಿಸಿದರು

ಇದೇ ಸಂದರ್ಭದಲ್ಲಿ ನಗರ ಪಾಲಿಕಾ ಸದಸ್ಯರಾದ ಮ ವಿ ರಾಮ್ ಪ್ರಸಾದ್, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಚಂದ್ರಶೇಖರ್, ಪ್ರಜ್ಞಾವಂತ ನಾಗರಿಕ ವೇದಿಕೆ ಅಧ್ಯಕ್ಷರಾದ ಕಡಕೊಳ ಜಗದೀಶ್, ಸಾಮಾಜಿಕ ಹೋರಾಟಗಾರ ವಿಕ್ರಂ ಅಯ್ಯಂಗಾರ್, ಅಜಯ್ ಶಾಸ್ತ್ರಿ, ನಂದೀಶ್ ನಾಯಕ್, ಅಪೂರ್ವ ಸುರೇಶ್, ಮೋಹನ್ ಕುಮಾರ್ ಗೌಡ, ಗೌತಮ್, ಈಶ್ವರ್ ಗೌಡ, ಸದಾಶಿವ್, ಚಂದ್ರು, ಇನ್ನಿತರರು ಭಾಗಿಯಾಗಿದ್ದರು

Continue Reading
4 Comments

4 Comments

  1. DavidMop

    May 8, 2024 at 5:10 am

    Привет, приятели!

    Я желал бы поделиться с вами ссылкой на один удивительный ресурс, который, я уверен, несомненно будет может быть полезен каждому из вас. Этот сайт предлагает широкий диапазон информации, начиная от интересных заметок и заканчивая нужными советами по саморазвитию. Здесь вы найдете ответы на огромное количество вопросов, которые тревожут любого среди нас в ежедневной жизни.
    https://sanatate-mintala.md/discussion/лепидофобия-боязнь-бабочек/
    Не упустите вероятность узнать что-нибудь новое и увлекательное! Просто кликните по ссылке ставить ссылку], чтобы погрузиться в мир удивительных открытий и полезных советов. Поверьте мне, это несомненно будет время, проведенное с пользой.

    Не смущяйтесь разделиться этой ссылкой с вашими приятелями и близкими. Так как мена полезной информацией делает наш мир лучше и увлекательнее.

    Спасибо, что нашли время прочитать это известие, и надеюсь, собственно что вы оцените содержимое сайта например же, скажем я. Успеха и позитива для вас всем!

Leave a Reply

Your email address will not be published. Required fields are marked *

Mysore

ಜೂಜಾಡುತ್ತಿದ್ದ ನಾಲ್ವರ ಬಂಧನ

Published

on

ಮೈಸೂರು: ಕಾನೂನು ಬಾಹಿರವಾಗಿ ಜೂಜಾಡುತ್ತಿದ್ದ ಅಡ್ಡೆ ಮೇಲೆ ದಾಳಿ ಮಾಡಿ ನಾಲ್ವರನ್ನು ಸಿ.ಸಿ.ಬಿ ಪೊಲೀಸರು ಬಂಧಿಸಿ ಒಟ್ಟು 12.5 ಸಾವಿರ ರೂ ನಗದು ಮತ್ತು ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ.

ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ವಿಜಯ ನಗರ 2ನೇ ಹಂತದ ಜೆ.ಬಿ. ಪ್ಯಾರಡೈಸ್ನ ಕೊಠಡಿಯೊಂದರಲ್ಲಿ ಕಾನೂನು ಬಾಹಿರವಾಗಿ ಹಣವನ್ನು ಪಣವಾಗಿಟ್ಟುಕೊಂಡು ಜೂಜಾಡುತ್ತಿದ್ದರು.

ಇದರ ಬಗ್ಗೆ ಜನವರಿ 14 ರಂದು ನಗರದ ಸಿ.ಸಿ.ಬಿ ಅಧಿಕಾರಿಗಳಿಗೆ ಬಂದ ಖಚಿತ ಮಾಹಿತಿಯ ಮೇರೆಗೆ ಸಿ.ಸಿ ಬಿ.ಅಧಿಕಾರಿ ಮತ್ತು ಸಿಬ್ಬಂದಿ ದಾಳಿ ಮಾಡಿ ನಾಲ್ವರನ್ನು ಬಂಧಿಸಿದ್ದಾರೆ. ವಿ ಜಯನಗರ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುತ್ತಾರೆ.

Continue Reading

Mysore

ಕಾನೂನು ಬಾಹಿರವಾಗಿ ಗ್ಯಾಸ್ ದಾಸ್ತಾನು ಮಾಡುತ್ತಿದ್ದ ನಾಲ್ವರ ಬಂಧನ.

Published

on

ಮೈಸೂರು: ವಿವಿಧ ಕಂಪನಿಗೆ ಕಾನೂನು ಬಾಹಿರವಾಗಿ ಗ್ಯಾಸ್ ದಾಸ್ತಾನು ಮಾಡಿಕೊಂಡು ಗ್ಯಾಸ್ ರೀಫಿಲ್ಲಿಂಗ್ ಮಾಡುತ್ತಿದ್ದ ನಾಲ್ವರನ್ನು ಸಿ.ಸಿ.ಬಿ ಪೊಲೀಸರು ಬಂಧಿಸಿ. ಒಟ್ಟು 127 ಸಿಲಿಂಡರ್ ಗಳು 79 ರಾಡುಗಳು, 2 ಡಿಜಿಟಲ್ ಯಂತ್ರಗಳು ಹಾಗೂ 1 ಗೂಡ್ಸ್ ವಾಹನವನ್ನು ವಶಪಡಿಸಿಕೊಂಡಿದ್ದಾರೆ.


ನಗರದ ನರಸಿಂಹರಾಜ ಪೊಲೀಸ್ ಠಾಣಾ ವ್ಯಾಪ್ತಿಯ ಜಮೀನಿನಲ್ಲಿ ನಿರ್ಮಾಣ ಮಾಡಿರುವ ಶೆಡ್ ನಲ್ಲಿ ಅಕ್ರಮವಾಗಿ ವಿವಿಧ ಕಂಪನಿಗಳಿಗೆ ಅಡುಗೆ ಅನಿಲ ಸಿಲಿಂಡರ್ ಗಳನ್ನು ಉಪಯೋಗಿಸಿಕೊಂಡು ಯಾವುದೇ ಅಧಿಕೃತ ರಹದಾರಿ ಮತ್ತು ಖರೀದಿ ಮಾಡಿರುವ ಬಿಲ್ ಇಲ್ಲದೆ.

ಗ್ಯಾಸ್ ರೀಫಿಲ್ಲಿಂಗ್ ಮಾಡುತ್ತಿದ್ದಾರೆ ಎಂದು ಜನವರಿ 11 ರಂದು ಸಿ.ಸಿ.ಬಿ ಅಧಿಕಾರಿಗಳಿಗೆ ಬಂದ ಖಚಿತ ಮಾಹಿತಿಯ ಮೇರೆಗೆ. ಸಿ.ಸಿ.ಬಿ ಅಧಿಕಾರಿ ಮತ್ತು ಸಿಬ್ಬಂದಿ ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ.

Continue Reading

Mysore

ಮಾದಕವಸ್ತು ಮಾರಾಟ ಮಾಡಲು ಪ್ರಯತ್ನಿಸುತ್ತದ್ದ ಪೆಡ್ಲರ್ ಬಂಧನ

Published

on

ಮೈಸೂರು ಎಂ.ಡಿ.ಎಂ.ಎ ಎಂಬ ನಿಷೇಧಿತ ಮಾದಕವಸ್ತುವನ್ನು ಮಾರಾಟ ಮಾಡಲು ಪ್ರಯತ್ನಿಸಿದ ಪೆಡ್ಲರ್ ನನ್ನು ಸಿ.ಸಿ.ಬಿ ಘಟಕದ ಪೊಲೀಸರು ಬಂಧಿಸಿ ಒಟ್ಟು 20. ಸಾವಿರ ರೂ ಮೌಲ್ಯದ 6 ಗ್ರಾಂ 600 ಮಿಲಿ ಮಾದಕವಸ್ತುವನ್ನು ವಶಪಡಿಸಿಕೊಂಡಿದ್ದಾರೆ.


ನಗರದ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಯಾಣಿಗಿರಿ ಹಳೇ ಆರ್.ಟಿ.ಒ. ಅಫೀಸ್ ಹತ್ತಿರ ಇರುವ ತ್ರಿವೇಣೆ ಪಾರ್ಕ್ ಬಳಿ. ಎಂ.ಡಿ.ಎಂ.ಎ ಎಂಬ ನಿಷೇಧಿತ ಮಾದಕವಸ್ತುವನ್ನು ಮಾರಾಟ ಮಾಡಲು ಒಬ್ಬ ಪೆಡ್ಲರ್ ನಿಂತಿದ್ದಾನೆಂದು ಜನವರಿ 7 ರಂದು ನಗರದ ಸಿ.ಸಿ.ಬಿ. ಘಟಕದ ಅಧಿಕಾರಿಗಳಿಗೆ ಬಂದ ಖಚಿತ ಮಾಹಿತಿಯ ಮೇರೆಗೆ.

ಸಿ.ಸಿ.ಬಿ ಘಟಕದ ಅಧಿಕಾರಿ ಮತ್ತು ಸಿಬ್ಬಂದಿ ದಾಳಿ ಮಾಡಿ ಆರೋಪಿಯನ್ನು ಬಂಧಿಸಿದ್ದಾರೆ. ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದಾರೆ.

Continue Reading

Trending

error: Content is protected !!