Connect with us

Mysore

ಮೈಸೂರಿನ KSRTC ಬಸ್ ನಿಲ್ದಾಣ ಸ್ಥಳಾಂತರ !! ಯಾವ ಜಾಗಕ್ಕೆ, ಯಾವಾಗ?

Published

on

ಮೈಸೂರು ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಪ್ರತೀ ದಿನ 1400ಕ್ಕೂ ಅಧಿಕ ಬಸ್‌ಗಳು ಸಂಚಾರ ನಡೆಸುತ್ತವೆ. ನಗರ ಬೆಳೆದಂತೆ ಹೆಚ್ಚಿದ ಜನಸಂಖ್ಯೆಗೆ ಅನುಗುಣವಾಗಿ ಕೆಎಸ್‌ಆರ್‌ಟಿಸಿ ತನ್ನ ಸೇವೆ ವಿಸ್ತರಿಸಬೇಕಿದೆ. ಸದ್ಯ ಹೆಚ್ಚಾಗಿರುವ ಬಸ್‌ಗಳ ಸಂಖ್ಯೆಯಿಂದಾಗಿ ನಿಲ್ದಾಣದಲ್ಲಿ ವಾಹನ ದಟ್ಟಣೆ ಸೃಷ್ಟಿಯಾಗಿದೆ. ಶುಕ್ರವಾರ, ಶನಿವಾರ, ಭಾನುವಾರ, ಹಬ್ಬ ಸೇರಿದಂತೆ ಇನ್ನಿತರ ರಜೆ ಸಂದರ್ಭಗಳಲ್ಲಿ ಸಮಸ್ಯೆ ಮತ್ತಷ್ಟು ಗಂಭೀರವಾಗುತ್ತಿದೆ. ಜನರನ್ನು ಹತ್ತಿಸಿಕೊಳ್ಳಲು ಸ್ವಲ್ಪ ಹೊತ್ತು ಬಸ್‌ ನಿಲ್ಲಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆ ಬಸ್‌ ನಿಲ್ದಾಣ ಸ್ಥಳಾಂತರ (Mysore KSRTC New Bus Station) ಮಾಡಬೇಕು ಎಂಬ ಒತ್ತಾಯ ಕೇಳಿ ಬಂದಿದೆ.

ಹೌದು, ಮೈಸೂರು ಕೇಂದ್ರೀಯ ಬಸ್‌ ನಿಲ್ದಾಣವನ್ನು ಕೆಎಸ್‌ಆರ್‌ಟಿಸಿಗೆ ಸೇರಿದ ಬನ್ನಿಮಂಟಪ ಡಿಪೋ ಖಾಲಿ ಜಾಗಕ್ಕೆ ಸ್ಥಳಾಂತರ ಮಾಡಬೇಕು ಎನ್ನುವ ಬೇಡಿಕೆ ಹೆಚ್ಚಿದೆ. ಪ್ರಸ್ತಾವನೆಯನ್ನು ಸರಕಾರದ ಗಮನಕ್ಕೆ ತರಲು ಕೆಎಸ್‌ಆರ್‌ಟಿಸಿ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಮುಖ್ಯವಾಗಿ ಕೊಳ್ಳೇಗಾಲ, ಮಳವಳ್ಳಿ, ತುಮಕೂರು ಭಾಗಕ್ಕೆ ತೆರಳುವ ಬಸ್‌ ನಿಲ್ಲಿಸಲು ಫ್ಲಾಟ್‌ ಫಾರಂಗಳೇ ಇಲ್ಲದೇ ಗೋಡೆಯ ಪಕ್ಕದಲ್ಲಿರುವ ಜಾಗದಲ್ಲಿಯೇ ಬಸ್‌ಗಳನ್ನು ನಿಲ್ಲಿಸಿಕೊಂಡು ಜನರನ್ನು ಹತ್ತಿಸಿಕೊಳ್ಳಬೇಕು. ಇಲ್ಲಿ ಬಸ್‌ಗೆ ಕಾಯುವ ಜನರು ಕುಳಿತುಕೊಳ್ಳಲು ಜಾಗವಿಲ್ಲ. ಚಾಮರಾಜ ನಗರ ಹಾಗೂ ಅಕ್ಕ ಪಕ್ಕದ ಕೆಲ ಪ್ಲಾಟ್‌ ಫಾರಂಗಳಲ್ಲಿ ಕೇವಲ ಎರಡು ಇಲ್ಲವೇ ಮೂರು ಬಸ್‌ ಮಾತ್ರ ನಿಲ್ಲಿಸಬಹುದು. 4ನೇ ಬಸ್‌ ಬಂದರೆ ಅದು ನಿಲ್ದಾಣದ ಪ್ರವೇಶ ದ್ವಾರದ ಬಳಿಯ ರಸ್ತೆಯಲ್ಲಿಯೇ ನಿಲ್ಲಬೇಕಾದ ಸನ್ನಿವೇಶ ಸೃಷ್ಟಿಯಾಗಿದೆ. ಈ ಎಲ್ಲ ಕಾರಣಕ್ಕೆ ಹಾಲಿ ಇರುವ ಗ್ರಾಮಾಂತರ ಬಸ್‌ ನಿಲ್ದಾಣವನ್ನು ಬನ್ನಿಮಂಟಪ ಬಳಿಯ ಕೆಎಸ್‌ಆರ್‌ಟಿಸಿಗೆ ಸೇರಿದ 56 ಎಕರೆ ಜಾಗಕ್ಕೆ ವರ್ಗಾವಣೆ ಮಾಡಬೇಕೆಂಬ ಒತ್ತಾಯ ನಾಗರಿಕರಿಂದ ಕೇಳಿಬಂದಿದೆ.

ಇನ್ನು ಬನ್ನಿ ಮಂಟಪ ಬಳಿಯ ಕೆಎಸ್‌ಆರ್‌ಟಿಸಿ ಜಾಗದಲ್ಲಿಸದ್ಯ ಇರುವ ನಾಲ್ಕು ಡಿಪೊ, ವರ್ಕ್‌ಶಾಪ್‌ ಹಿಂದಕ್ಕೆ ಸ್ಥಳಾಂತರಿಸಿ ರಸ್ತೆ ಬಳಿಯ ಮುಂಭಾಗದ ಜಾಗವನ್ನು ನಿಲ್ದಾಣದ ಬಳಕೆಗೆ ಉಪಯೋಗಿಸಬೇಕು. ನಗರ ಹಾಗೂ ಕೇಂದ್ರೀಯ ಬಸ್‌ ನಿಲ್ದಾಣಗಧಿಳನ್ನು ಒಂದೇ ಕಡೆ ಮಾಡಬೇಕು ಎಂಬುದು ಸಾರ್ವಜನಿಕರ ಬೇಡಿಕೆ ಆಗಿದೆ.

ಈಗಾಗಲೇ ನಗರಕ್ಕೂ ಪರ್ಯಾಯ ನಿಲ್ದಾಣ
ನಗರ ಬಸ್‌ ನಿಲ್ದಾಣಕ್ಕಾಗಿ ಸದ್ಯ ಬಳಕೆ ಮಾಡುತ್ತಿರುವ ಖಾಸಗಿ ಜಾಗಕ್ಕೆ ವರ್ಷಕ್ಕೆ ಅಂದಾಜು 60,000 ರೂ. ಪಾವತಿಸಲಾಗುತ್ತಿದೆ. ನಗರ ಪ್ರದೇಶಕ್ಕೆ ಸಾರಿಗೆ ಸೇವೆ ಒದಗಿಸಲು ಈ ಜಾಗವೂ ಸಾಕಾಗುತ್ತಿಲ್ಲ. ಒಂದು ವೇಳೆ ಕೇಂದ್ರೀಯ ಬಸ್‌ ನಿಲ್ದಾಣ ಬನ್ನಿಮಂಟಪ ಡಿಪೊ ಜಾಗಕ್ಕೆ ವರ್ಗಾಯಿಸಿದರೆ ಆ ಜಾಗದಲ್ಲಿ ನಗರ ಬಸ್‌ ನಿಲ್ದಾಣವನ್ನು ಆರಂಭಿಸಬೇಕು ಎಂಬ ಸಲಹೆಯೂ ಕೇಳಿಬಂದಿದೆ.

ಸದ್ಯ ಜನರ ಅಭಿಪ್ರಾಯ ಆಲಿಸಿ ಅದನ್ನು ಸರಕಾರದ ಗಮನಕ್ಕೆ ತರುವುದು ನಮ್ಮ ಕರ್ತವ್ಯ. ಇದೊಂದು ಉಪಯುಕ್ತ ಸಲಹೆಯೂ ಆಗಿರುವುದರಿಂದ ಕೂಡಲೇ ಈ ವಿಷಯಕ್ಕೆ ಸಂಬಂಧಿಸಿದ ಯೋಜನೆಯನ್ನು ಸಿದ್ಧಪಡಿಸಿ ಸರಕಾರಕ್ಕೆ ಸಲ್ಲಿಸುತ್ತೇವೆ ಎಂದು ಶ್ರೀನಿವಾಸ್‌, ಕೆಎಸ್‌ಆರ್‌ಟಿಸಿ ಮೈಸೂರು ವಿಭಾಗೀಯ ನಿಯಂತ್ರಣಾಧಿಕಾರಿ ಅವರು ತಿಳಿಸಿದ್ದಾರೆ.

Continue Reading
Click to comment

Leave a Reply

Your email address will not be published. Required fields are marked *

Mysore

ಈ ದೇಶಕಂಡ ಅತ್ಯಂತ ದುರ್ಬಲ ಪ್ರಧಾನಿ ನರೇಂದ್ರ ಮೋದಿ: ಉಗ್ರಪ್ಪ

Published

on

ಮೈಸೂರು: ಈ ದೇಶಕಂಡ ಅತ್ಯಂತ ದುರ್ಬಲ ಪ್ರಧಾನಿ ಅಂದರೆ ಅದು ನರೇಂದ್ರ ಮೋದಿ ಎಂದು ಕೆ.ಪಿ.ಸಿ.ಸಿ ಉಪಾಧ್ಯಕ್ಷ ವಿ.ಎಸ್.‌ ಉಗ್ರಪ್ಪ ಆರೋಪಿಸಿದರು.

ಇಲ್ಲಿನ ಕಾಂಗ್ರೆಸ್‌ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಜನವಿರೋಧಿ, ಸಮಾಜವನ್ನು ಒಡೆದು ಆಳುವುದನ್ನು ಮೈಗೂಡಿಸಿಕೊಂಡಿರೋ ಪ್ರಧಾನ ಮಂತ್ರಿ ನರೇಂದ್ರ ಮೋದಿ. ಕಳೆದ 11 ವರ್ಷಗಳಿಂದ ದೇಶದಲ್ಲಿ 185 ಲಕ್ಷ ಕೋಟಿ ರೂ ಅಷ್ಟು ಸಾಲ ಮಾಡಿರುವ ಹೆಗ್ಗಳಿಕೆ ಮೋದಿ ನೇತೃತ್ವದ ಕೇಂದ್ರ ಸರಕಾರಕ್ಕೆ ಸಲ್ಲುತ್ತದೆ ಎಂದರು.

ನಮ್ಮ ರಾಜ್ಯದಲ್ಲಿ ಕೆ. ಆರ್‌ ಎಸ್, ತುಂಗಭದ್ರಾ ಅಣೆಕಟ್ಟೆಯನಾದರೂ ಕಟ್ಟಿದ್ದೀರ. ಯಾವುದಾದರು ಜನರಿಗೆ ಉದ್ಯೋಗ ದೊರಕುವಂತ ಕಂಪನಿ ಮಾಡಿದ್ದೀರ? ಇಷ್ಟೊಂದು ಸಾಲವನ್ನು ಯಾವುದಕ್ಕಾಗಿ ಮಾಡಿದ್ದೀರ. ಯಾವ ಅಭಿವೃದ್ದಿ ಕೆಲಸವಾಗಿದೆ ತೋರಿಸಿ ಎಂದು ಕೇಂದ್ರದ ಎನ್.ಡಿ.ಎ ಸರಕಾರವನ್ನು ಪ್ರಶ್ನಿಸಿದರು.

ಸಮಾಜದ ನಡುವೇ ಧರ್ಮ. ಜಾತಿ, ಭಾಷೆ ಎಂಬ ಕಂದಕ ಸೃಷ್ಟಿ ಮಾಡಿದ್ದೀರ. ಜನರ ನಿತ್ಯ ಬಳಕೆ ವಸ್ತುಗಳ ಬೆಲೆ ಏರಿಕೆ ಮಾಡಿ ಅವರ ಬದುಕಿನ ಮೇಲೆ ಚಪ್ಪಡಿಕಲ್ಲು ಎಳೆಯುವ ಕೆಲಸ ಮಾಡುತ್ತಿದ್ದಾರೆ.

ಕೇಂದ್ರ ಸರಕಾರದ ಬೆಲೆ ಏರಿಕೆಯನ್ನು ಮುಚ್ಚಿಕೊಳ್ಳುವುದಕ್ಕಾಗಿ ರಾಜ್ಯದಲ್ಲಿ ಬಿಜೆಪಿ ಅವರು ಜನಕ್ರೋಶ ಯಾತ್ರೆ ಮಾಡಿ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಜನರ ಆಕ್ರೋಶ ಸಿಎಂ. ಸಿದ್ದರಾಮಯ್ಯ, ಡಿಸಿಎಂ. ಡಿ.ಕೆ ಶಿವಕುಮಾರ್ ನೇತೃತ್ವದ ಕಾಂಗ್ರೆಸ್‌ ಸರಕಾರದ ಮೇಲೆ ಇಲ್ಲ. ಮೋದಿ ನೇತೃತ್ವದ ಕೇಂದ್ರ ಎನ್‌.ಡಿ.ಎ ಸರಕಾರದ ಮೇಲೆ ಇರೋದು ಎಂದು ಹರಿಹಾಯ್ದರು.

ರಾಜ್ಯದ ಬಿಜಿಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ,ಪತ್ರಿಪಕ್ಷನಾಯಕ ಆರ್‌, ಅಶೋಕ ಅವರೆ ಈ ರಾಜ್ಯದಲ್ಲಿ ಬೆಲೆ ಏರಿಕೆಗೆ ಕೇಂದ್ರ ಸರಕಾರ ಕಾರಣವೋ. ರಾಜ್ಯ ಕಾಂಗ್ರೆಸ್‌ ಸರಕಾರ ಕಾರಣವೋ ಸಾರ್ವಜನಿಕ ಚರ್ಚೆ ಮಾಡೋಣ. ಈ ಚರ್ಚೆಗೆ ಬರುವ ನೈತಿಕತೆ ನಿಮಗೆ ಇದೇಯ. ಕಾಂಗ್ರೆಸ್‌ ಸರಕಾರ ಸಿದ್ದವಿದೇ. ಸಾರ್ವಜನಿಕರಿಗೆ ಬೆಲೆ ಏರಿಕೆ ಬಗ್ಗೆ ಉತ್ತರಿಸುವ ಧೈರ್ಯ ಇದೆಯ. ನಿಮ್ಮಲ್ಲಿ ಆತ್ಮವಿಶ್ವಸ ಬದುಕಿದೇಯ ಎಂದು ಉಗ್ರಪ್ಪ ಕಿಡಿಕಾರಿದರು.

ಈ ದೇಶದಲ್ಲಿ 2013 ರ ಅಂತರಾಷ್ಟ್ರೀಯ ಮಾರಿಕಟ್ಟೆಯಲ್ಲಿ ಕ್ರೂಡ್‌ ಆಯಿಲ್‌ ಬೆಲೆ ಒಂದು ಬ್ಯಾರೆಲ್ ಗೆ120 ರಿಂದ 130 ಡಾಲರ್‌ ಇತ್ತು. ಆಗ ಒಂದು ಲೀಟರ್‌ ಡೇಸಲ್‌ 56.83 ರೂ ಪೈಸೆ, ಪೆಟ್ರೋಲ್‌ ಲೀಟರ್‌ 63.62 ರೂ ಪೈಸೆಗೆ ಮಾರಾಟಮಾಗುತ್ತಿತ್ತು. ಅಡುಗೆ ಅನಿಲ ದರ 400 ರೂ ಗಳಂತೆ ನೀಡಿ ಸಾರ್ವಜನಿಕರಿಕೆ ಪ್ರತಿ ತಿಂಗಳು ಅದರ ಸಬ್ಸಿಡಿ ನೀಡುತ್ತಿದ್ದೋ. ಆದರೆ ನೀವು ಹೀಗ ಬೆಲೆ ಏರಿಕೆ ಮಾಡಿ ಏನು ಕೊಡುತ್ತಿದ್ದೀರ ಎಂದು ಕೇಂದ್ರ ಸರಕಾರವನ್ನು ಪ್ರಶ್ನಿಸಿದರು. ರಾಜ್ಯ ದಲ್ಲಿ ಅಡುಗೆ ಅನಿಲದ ದರ 50 ರೂ ಏರಿಕೆಯನ್ನು ಈಕೂಡಲೇ ವಾಪಾಸು ಪಡೆಯಬೇಕು ಎಂದು ಕೇಂದ್ರ ಸರಕಾರವನ್ನು ಒತ್ತಾಯಿಸಿದರು.

ರಾಜ್ಯ ಬಿಜೆಪಿ ಶಾಸಕರು, ಸಂಸದರು ಕೇಂದ್ರ ಸರಕಾರ ಬೆಲೆ ಏರಿಕೆಯನ್ನು ಪಾರ್ಲಿಮೆಂಟ್ ನಲ್ಲಿ ಏಕೆ ಪ್ರಶ್ನೆ ಮಾಡದೇ ಬಾಯಿಗೆ ಬೀಗ ಜಡಿದು ಕುಳಿತ್ತಿದ್ದೀರೆ. ರಾಜ್ಯದಲ್ಲಿ ಜನಕ್ರೋಶ ಯಾತ್ರೆ ಮಾಡುತ್ತ ಜನರಿಗೆ ಮಂಕು ಬೂದಿ ಎರಚುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಕೇಂದ್ರ ಸರಕಾರ ಅಂಬಾನಿ. ಅದಾನಿ ಅವರ 16 ಸಾವಿ ಕೋಟಿ ರೂ ಸಾಲ ಮನ್ನ ಮಾಡುತ್ತಾರೆ ಆದರೆ ರೈತರ ಸಾಲ ಏಕೆ ಮನ್ನ ಮಾಡೋದಿಲ್ಲ. ನಮ್ಮ ಕಾಂಗ್ರೆಸ್ ಸರಕಾರದ 5 ಗ್ಯಾರಂಟಿ ಯೋಜನೆಯಿಂದ ರಾಜ್ಯದಲ್ಲಿ ಜನರು ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಹಾಲಿನ ದರ ಏರಿಕೆ ಮಾಡಿ ಆ ಹಣವನ್ನು ನೇರವಾಗಿ ರೈತರಿಗೆ ನೀಡುವ ಮೂಲಕ ರೈತರ ಪರವಾಗಿ ನಿಂತಿದ್ದೇವೆ ಎಂದರು.

ಮಾಜಿ ಶಾಸಕ ಜಿ.ಎನ್‌ ನಂಜುಂಡಾಸ್ವಾಮಿ, ನಗರ ಕಾಂಗ್ರೆಸ್ ಅಧ್ಯಕ್ಷ ಆರ್.‌ ಮೂರ್ತಿ, ಜಿಲ್ಲಾ ಗ್ರಾಮಾಂತರ ಅಧ್ಯಕ್ಷ ಡಾ, ಬಿ.ಜೆ ವಿಜಯ್‌ ಕುಮಾರ್ ಮಾಧ್ಯಮ ಸಂಚಾಲಕ ಕೆ ಮಹೇಶ ಉಪಸ್ಥಿತರಿದ್ದರು.

Continue Reading

Mysore

ದಲಿತರ ಮೇಲೆ ಹಲ್ಲೆ ಖಂಡಿಸಿ ಪ್ರತಿಭಟನೆ

Published

on

ಮೈಸೂರು: ಜಿಲ್ಲೆಯ ಎಚ್‌.ಡಿ.ಕೋಟೆ ತಾಲ್ಲೂಕಿನ ಗ್ರಾಮದಲ್ಲಿ ದಲಿತ ಮಹಿಳೆ ಮೇಲೆ ಹಲ್ಲೆ ನಡೆಸಿರುವ ಘಟನೆಯನ್ನು ಖಂಡಿಸಿ ಕರ್ನಾಟಕ ವೀರಕೇಸರಿ ಪಡೆ ಪ್ರತಿಭಟಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟಿಸಿದ ಪಡೆಯ ಕಾರ್ಯಕರ್ತರು ದಲಿತರ ಮೇಲಿನ ಹಲ್ಲೇ ಘಟನೆಯನ್ನು ವಿರುದ್ಧ ನಾನಾ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ವೀರಕೇಸರಿ ಪಡೆಯ ಅಧ್ಯಕ್ಷ ಮಧುವನ ಚಂದ್ರು ಮಾತನಾಡಿ, ಎಚ್‌.ಡಿ.ಕೋಟೆ ತಾಲ್ಲೂಕಿನ ನಾಗನಹಳ್ಳಿ ಗ್ರಾಮದ ಕವಿತಾಬಾಯಿ ಮತ್ತು ಅವರ ವಿಕಲಚೇತನ ಪತಿ ರಾಯಪ್ಪರ ಮೇಲೆ ಸವರ್ಣೀಯರಾದ ವಿಜಯಕುಮಾರ್‌ ಮತ್ತು ಪತ್ನಿ ಕವಿತಾ ಮೇರಿ, ಮಗಳಾದ ಶಾಲಿನಿ, ಅಳಿಯ ಯೋಗೇಶ್‌ ನಿರಂತರವಾಗಿ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ. ಇದಾಗಿಯೂ ಹಲ್ಲೆಗೊಳಗಾದವರಿಂದ ಅಟ್ರಾಸಿಟಿ ದೂರು ದಾಖಲಿಸಿಲ್ಲ. ಬದಲಿಗೆ ಹಲ್ಲೆಗೆ ಒಳಗಾದವರ ಮೇಲೆ ದೂರು ದಾಖಲಿಸಿದ್ದಾರೆಂದು ದೂರಿದರು.

ಈ ಹಿನ್ನೆಲೆಯಲ್ಲಿ ಹಲ್ಲೆ ನಡೆಸಿದವರ ವಿರುದ್ಧ ಕಾನೂನು ರೀತಿ ದೂರು ದಾಖಲಿಸಿ ಮುಂದಿನ ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ರೂಪದ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು. ಬಸವರಾಜು, ಸಿದ್ದರಾಜು, ರಾಮನಾಯಕ, ರಾಜೇಶ್ವರಿ ಇನ್ನಿತರರು ಉಪಸ್ಥಿತರಿದ್ದರು.

Continue Reading

Mysore

ವಾಜಮಂಗಲ ಗ್ರಾಮದಲ್ಲಿ ಅಂಬೇಡ್ಕರ್ ಬ್ಯಾನರ್ ಹರಿದ ಕಿಡಿಗೇಡಿಗಳು

Published

on

ಅಂಬೇಡ್ಕರ್ ಅವರ ಭಾವಚಿತ್ರವಿರುವ ಬ್ಯಾನರ್ ಹರಿದ ಕಿಡಿಗೇಡಿಗಳು

ಸಂವಿಧಾನ ಶಿಲ್ಪಿ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರವಿರುವ ಬ್ಯಾನರ್ ಅನ್ನು ಕತ್ತರಿಸಿ ಅವಮಾನ ಮಾಡಿರುವ ಘಟನೆ ತಾಲ್ಲೂಕಿನ ವಾಜಮಂಗಲ ಗ್ರಾಮದಲ್ಲಿ ನಡೆದಿದೆ.

ವಾಜಮಂಗಲದಲ್ಲಿ ಗ್ರಾಮದಲ್ಲಿ ಏ.14 ರಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ಆಚರಣೆ ವೇಳೆ ಗ್ರಾಮದ ಮುಖ್ಯ ರಸ್ತೆಯಲ್ಲಿ ಅಂಬೇಡ್ಕರ್ ಪ್ಲೆಕ್ಸ್ ಗಳನ್ನು ಹಾಕಲಾಗಿತ್ತು. ಕಿಡಿಗೇಡಿಗಳು ಶುಕ್ರವಾರ ರಾತ್ರಿ ವೇಳೆಯಲ್ಲಿ ಅಂಬೇಡ್ಕರ್ ಪ್ಲೆಕ್ಸ್ ಗಳನ್ನು ಹರಿದು ಅವಮಾನ ಮಾಡಿದ್ದಾರೆ.

ಅಂಬೇಡ್ಕರ್ ಅವರ ನಾಮ ಫಲಕದ ಮೇಲೆ ಚಪಲ್ಲಿ ನೇತು ಹಾಕಿ ಅಪಮಾನ ಮಾಡಿದ್ದಾರೆ.

ಗ್ರಾಮಸ್ಥರು ಸ್ಥಳದಲ್ಲೇ ಕುಳಿತು ಪ್ರತಿಭಟನೆ ಮಾಡಿದರು.
ಘಟನೆಯ ಸ್ಥಳಕ್ಕೆ ಆಗಮಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು ಮಾತನಾಡಿ, ಈ ಘಟನೆಗೆ ಕಾರಣರಾದವರಿಗೆ ಕಾನೂನಿನಡಿಯಲ್ಲಿ ಕಠಿಣ ಶಿಕ್ಷೆ ವಿಧಿಸಲಾಗುವುದು.
ಜಿಲ್ಲೆಯ ಬೇರೆ ಯಾವ ಕಡೆಯೂ ಸಹ ಈ ರೀತಿಯ ಘಟನೆ ಯಾಗದಂತೆ ಮುಂಜಾಗ್ರತಾ ಕ್ರಮ ವಹಿಸುತ್ತೇವೆ ಎಂದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ದನ್, ತಹಶೀಲ್ದಾರ್ ಮಹೇಶ್ ಹಾಜರಿದ್ದರು.

Continue Reading

Trending

error: Content is protected !!