Connect with us

Location

ಜಿಂಕೆ ಮೇಲೆ ನಾಯಿಗಳ ದಾಳಿ

Published

on

ಮೈಸೂರು : ಜಿಂಕೆ ಮೇಲೆ ನಾಯಿಗಳ ದಾಳಿ ಮಾಡಿದ್ದು
ಕಾಡಿನಿಂದ ನಾಡಿಗೆ ಬಂದ ಜಿಂಕೆ ರಕ್ಷಣೆ ಮಾಡಲಾಗಿದೆ.
ನಾಯಿಗಳ ದಾಳಿಗೆ ಗಾಯಗೊಂಡಿದ್ದ ಜಿಂಕೆ.
ಕಾಡಿನಿಂದ ನಾಡಿಗೆ ಬಂದ ಜಿಂಕೆ ರಕ್ಷಣೆ ಮಾಡಿದ ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದ ಉಪ ಪೊಲೀಸ್ ಠಾಣೆಯ ಪೊಲೀಸರು.

ದಾರಿ ತಪ್ಪಿ ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದ ಬಳಿಗೆ ಬಂದಿದ್ದ ಜಿಂಕೆ.
ಕಾಡಿನಿಂದ ನಾಡಿಗೆ ಬಂದಿದ್ದ ಜಿಂಕೆ ಮೇಲೆ ನಾಯಿಗಳ ದಾಳಿ.ನಾಯಿಗಳ ದಾಳಿಯಿಂದ ಜಿಂಕೆಯ ಕುತ್ತಿಗೆ ಭಾಗದಲ್ಲಿ ಗಾಯ.ನಾಯಿಗಳು ಜಿಂಕೆಯನ್ನ ಅಟ್ಟಾಡಿಸುತ್ತಿದ್ದನ್ನ ಕಂಡ ಶ್ರೀಕಂಠೇಶ್ವರಸ್ವಾಮಿ ದೇವಾಲಯದ ಉಪ ಪೊಲೀಸ್ ಠಾಣೆಯ ಪೊಲೀಸರು.
ತಕ್ಷಣ ಜಿಂಕೆಯನ್ನು ರಕ್ಷಣೆ ಮಾಡಿದ್ದಾರೆ.

ಸುಮಾರು ಎರಡು ವರ್ಷದ ಗಂಡು ಜಿಂಕೆ.
ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಪಶು ವೈದ್ಯಾಧಿಕಾರಿಗಳಿಗೆ ಮಾಹಿತಿ.ಜಿಂಕೆಗೆ ಪಶು ವೈದ್ಯಧಿಕಾರಿ
ಶರಣಬಸಪ್ಪ ಚಿಕಿತ್ಸೆ.ನಂತರ ನಗರದ ಸಸ್ಯಕಾಶಿಯ ಅರಣ್ಯಕ್ಕೆ ಬಿಡಲಾಗಿದೆ.

Continue Reading
Click to comment

Leave a Reply

Your email address will not be published. Required fields are marked *

Mandya

ಮಂಡ್ಯ ಪೋಲೀಸರಿಂದ 17 ಕೆಜಿ ಮಾದಕ ವಸ್ತು ನಾಶ

Published

on

ಮಂಡ್ಯ: ಮಂಡ್ಯ ಜಿಲ್ಲಾ ಪೊಲೀಸ್ ವತಿಯಿಂದ ಎನ್.ಡಿ.ಪಿ.ಎಸ್ ಕಾಯ್ದೆಯಡಿ 2024 ಮತ್ತು 2025 ನೇ ಇಸವಿಯ ಈವರೆಗೆ ವರದಿಯಾಗಿದ್ದ 19 ಪ್ರಕರಣಗಳಲ್ಲಿ ಅಮಾನತ್ತು ಪಡಿಸಿಕೊಂಡು ಸುಮಾರು 3,60,460 ರೂ. ಮೌಲ್ಯದ 17 ಕೆ.ಜಿ 613 ಗ್ರಾಂ. ಗಾಂಜಾವನ್ನು ನಾಶಪಡಿಸಲಾಗಿದೆ.

ಎನ್.ಡಿ.ಪಿ.ಎಸ್ ಕಾಯ್ದೆ ಪ್ರಕರಣಗಳಲ್ಲಿ ಅಮಾನತ್ತು ಪಡಿಸಿಕೊಂಡಿರುವ ಮಾದಕ ವಸ್ತುಗಳನ್ನು Drug Disposal Committee ವತಿಯಿಂದ ನಾಶಪಡಿಸಿದ್ದಾರೆ.

ಮಂಡ್ಯ ಜಿಲ್ಲಾ ಡ್ರಗ್ಸ್ ಡಿಸ್ಪೋಸಲ್ ಸಮಿತಿ ಮುಖಾಂತರ ನಾಶಪಡಿಸಲು ನ್ಯಾಯಾಲಯವು ಆದೇಶಿಸಿ ಸಮಿತಿಗೆ ನೀಡಿತ್ತು. ಅದರಂತೆ ಒಟ್ಟು 17 ಕೆ.ಜಿ 613 ಗ್ರಾಂ ಮಾದಕ ವಸ್ತು(ಗಾಂಜಾ)ವನ್ನು ಮಂಡ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರು ಮತ್ತು Drug Disposal Committee ಮಂಡ್ಯ ಜಿಲ್ಲೆ ಅಧ್ಯಕ್ಷ ಮಲ್ಲಿಕಾರ್ಜುನ ಬಾಲದಂಡಿ ಹಾಗೂ ಸಮಿತಿಯ ಸದಸ್ಯರ ಸಮಕ್ಷಮದಲ್ಲಿ ನಿಯಮಾನುಸಾರ ಬುಧವಾರ (ಜ.22) ಮೈಸೂರು ಜಿಲ್ಲೆ, ಜಯಪುರ ಹೋಬಳಿಯ ಗುಚ್ಚೇನಹಳ್ಳಿ ಗ್ರಾಮದ M/S GIPS Bio-Tech Incinerator waste management ನಲ್ಲಿ ನಾಶಪಡಿಸಲಾಗಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Continue Reading

Chamarajanagar

ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಚೇರ್ ನೀಡಿದ ಗ್ರಾಪಂ ಸದಸ್ಯ ಗುರುಲಿಂಗಯ್ಯ

Published

on

ಯಳಂದೂರು: ತಾಲ್ಲೂಕಿನ ಕೆಸ್ತೂರು ಗ್ರಾಮದ ಅಂಬೇಡ್ಕರ್ ಬಡಾವಣೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ-2 ಗೆ ಗ್ರಾಮ ಪಂಚಾಯತಿ ಸದಸ್ಯ ಗುರುಲಿಂಗಯ್ಯ ಕೆಸ್ತೂರು ಗ್ರಾಮ ಪಂಚಾಯತಿ 15 ನೇ ಹಣಕಾಸಿನಲ್ಲಿ 30 ಚೇರ್ ಗಳನ್ನು ಒದಗಿಸಿಕೊಟ್ಟಿದ್ದಾರೆ.

ವಿದ್ಯಾರ್ಥಿಗಳು ಚೇರ್ ನಲ್ಲಿ ಕೂತು ಅಧ್ಯಾಯನ ಮಾಡಲಿ. ವಿದ್ಯಾರ್ಥಿಗಳ ಹಿತಾ ದೃಷ್ಟಿಯಿಂದ ಚೇರ್ ಗಳನ್ನು ಪಂಚಾಯತಿ ಅನುದಾನದಲ್ಲಿ ನೀಡಲಾಗಿದೆ ಎಂದರು.

ಈ ಶಾಲೆಯು ಪರಿಶಿಷ್ಟರ ಕಾಲೋನಿಯಲ್ಲಿದ್ದು ಶೋಷಿತರ ಮಕ್ಕಳು ಚೆನ್ನಾಗಿ ಓದಬೇಕು ಅವರಿಗೆ ಯಾವುದೇ ಮೂಲಭೂತ ಸಮಸ್ಯೆಗಳು ಇರಬಾರದು ಡಾ ಬಿ.ಆರ್.ಅಂಬೇಡ್ಕರ್ ಅವರ ಆಶಯದಂತೆ ನಾವೆಲ್ಲರೂ ಅವರ ಮಾರ್ಗದಲ್ಲಿ ನಡೆಯಬೇಕಿದೆ. ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಂತ ಭಿನ್ನವಾಗಿರಬೇಕು.‌ ಪೋಷಕರು ದಯವಿಟ್ಟು ನಿಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ ಸರ್ಕಾರಿ ಶಾಲೆಗಳನ್ನು ಉಳಿಸಬೇಕಾಗಿದೆ ಖಾಸಗಿ ಶಾಲೆಗಿಂತ ಸರ್ಕಾರಿ ಶಾಲೆಯಲ್ಲಿಯೇ ಗುಣಮಟ್ಟ ಶಿಕ್ಷಣವನ್ನು ನೀಡಲಾಗುತ್ತದೆ.

ನಮಗೆ ಸಹಕಾರ ನೀಡಿದ ಗ್ರಾಮಪಂಚಾಯತಿ ಅಧ್ಯಕ್ಷಕರಿಗೆ, ಎಲ್ಲಾ ಸದಸ್ಯರಿಗೆ ಹಾಗೂ ಅಭಿವೃದ್ಧಿ ಅಧಿಕಾರಿ ಮಹದೇವಸ್ವಾಮಿ ಸಹಕಾರದಿಂದ ಈ ಶಾಲೆಗೆ ಚೇರ್ ಗಳನ್ನು ನೀಡಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಕೆ.ಚಿನ್ನಸ್ವಾಮಿ, ಮುಖ್ಯೋಪಾಧ್ಯಾಯರಾದ ಸಿದ್ದರಾಜು, ಶಿಕ್ಷಕರಾದ ನಂಜಯ್ಯ, ರಾಜೇಶ್, ಯುವ ಮುಖಂಡ ಮನೋಹರ್ ಹಾಗೂ ಇತರರು ಹಾಜರಿದ್ದರು.

Continue Reading

Kodagu

ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆ: ಅಪ್ಪಚೆಟ್ಟೋಳಂಡ ಡಿಯಾ ಗೆ ಪ್ರಶಸ್ತಿ

Published

on

ವರದಿ: ಝಕರಿಯ ನಾಪೋಕ್ಲು

ನಾಪೋಕ್ಲು: ಕರ್ನಾಟಕ ರಾಜ್ಯ ಮಕ್ಕಳ ಕಲ್ಯಾಣ ಸಮಿತಿ ಆಯೋಜಿಸಿದ್ದ ಮಕ್ಕಳ ದಿನಾಚರಣೆ ಪ್ರಯುಕ್ತ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ನಾಪೋಕ್ಲು ಬಳಿಯ ಬಲ್ಲಮಾಟಿ ಗ್ರಾಮದ ಅಪ್ಪಚೆಟ್ಟೋಳಂಡ ಎ.ಎಂ. ಡಿಯಾ ಪಾಲ್ಗೊಂಡು ಪ್ರಥಮ ಸ್ಥಾನ ಗಳಿಸಿ ಪ್ರಶಸ್ತಿ ಪಡೆದಿದ್ದಾರೆ.

ಕೊಡಗಿನ ಜವಾಹರ್ ನವೋದಯ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ಯಾಗಿರುವ ಡಿಯಾ ಬಲ್ಲಮಾವಟಿ ಗ್ರಾಮದ ಅಪ್ಪಚೆಟ್ಟೊಳಂಡ ಮಿಥುನ್ ಮಾಚಯ್ಯ ಹಾಗೂ ನೀನಾ ಮಾಚಯ್ಯ ದಂಪತಿಗಳ ಪುತ್ರಿಯಾಗಿದ್ದಾರೆ.

Continue Reading

Trending

error: Content is protected !!