Connect with us

Manglore

ಮುಸ್ಲಿಂ ಯುವಕನ ಕಂಬಕ್ಕೆ ಕಟ್ಟಿ ಥಳಿತ ಪ್ರಕರಣ: 19 ಮಂದಿ‌ ಆರೋಪಿಗಳು ಖುಲಾಸೆ

Published

on

ಮಂಗಳೂರು: ಹಿಂದೂ ಯುವತಿಯೊಂದಿಗಿದ್ದ ಎಂದು ಮುಸ್ಲಿಂ ಯುವಕನನ್ನು ಕಾರಿನಿಂದೆಳೆದು ಹಲ್ಲೆಗೈದು ಅರೆ ಬೆತ್ತಲೆಗೊಳಿಸಿ ಕಂಬಕ್ಕೆ ಕಟ್ಟಿ ವಿಡಿಯೋ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 19ಮಂದಿ ಆರೋಪಿಗಳನ್ನು ಖುಲಾಸೆಗೊಳಿಸಿ ಮಂಗಳೂರಿನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.

ಅತ್ತಾವರದ ಈಝೀ ಡೇ ಮಳಿಗೆಯಲ್ಲಿ ಕೆಲಸಕ್ಕಿದ್ದ ಯುವತಿಯೊಂದಿಗೆ ಮಳಿಗೆಯ ವ್ಯವಸ್ಥಾಪಕ ಶಾಕೀರ್ ಎಂಬಾತ ಕಾರಿನಲ್ಲಿ ಹೋಗುತ್ತಿದ್ದ. ಈತನ ಕಾರನ್ನು ಅತ್ತಾವರ ನಂದಿಗುಡ್ಡೆ ಬಳಿ ಅಡ್ಡಗಟ್ಟಿದ್ದ ಹಿಂದೂ ಇಸಂಘಟನೆಗಳಿಗೆ ಸೇರಿದ ಕಾರ್ಯಕರ್ತರು ಯುವತಿಯನ್ನು ಕಾರಿನಲ್ಲಿ ಕರೆದೊಯ್ಯುತ್ತಿದ್ದಾನೆಂದು ಆರೋಪಿಸಿ ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿದ್ದರು. 2015ರ ಆಗಸ್ಟ್ 28ರಂದು ಘಟನೆ ನಡೆದಿತ್ತು.

ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಸಂದರ್ಭ ಸಹೋದ್ಯೋಗಿ ಯುವತಿ 2ಸಾವಿರ ಹಣ ಬೇಕೆಂದು ಕೇಳಿದ್ದಕ್ಕೆ ಶಾಕೀರ್ ಅತ್ತಾವರ ಕೆಎಂಸಿ ಆಸ್ಪತ್ರೆಯ ಬಳಿ ತೆರಳಿ ಹಣ ಕೊಡುತ್ತಿದ್ದ. ಈ ವೇಳೆ ನಾಲ್ಕು ಬೈಕ್‌ಗಳಲ್ಲಿ ಬಂದ ಯುವಕರ ತಂಡ ಕಾರಿಗೆ ಅಡ್ಡಲಾಗಿ ಬೈಕ್ ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಆತನನ್ನು ಕಾರಿನಿಂದ ಎಳೆದು ಹಾಕಿ 10ರಿಂದ 12 ಮಂದಿ ಆರೋಪಿಗಳು ಸೇರಿ ವಿದ್ಯುತ್ ಕಂಬಕ್ಕೆ ಕಟ್ಟಿ ಹಲ್ಲೆ ನಡೆಸಿದ್ದರು. ಬಳಿಕ ಆತನ ಬಳಿಯಿದ್ದ ಎಟಿಎಂ ಕಾರ್ಡ್, ಎರಡು ಸಾವಿರ ನಗದು, ಮೊಬೈಲ್ ಕಿತ್ತುಕೊಂಡು ಹೋಗಿರುವುದಾಗಿ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪೊಲೀಸರು 19ಮಂದಿ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದಲ್ಲಿ 78 ದಾಖಲೆ, 33 ಸಾಕ್ಷಿಗಳನ್ನು ಹಾಜರುಪಡಿಸಿದರೂ ಪೊಲೀಸರಿಗೆ ಆರೋಪ ಸಾಬೀತು ಪಡಿಸಲು ಸಾಧ್ಯವಾಗದೇ ನ್ಯಾಯಾಧೀಶ ಮಲ್ಲಿಕಾರ್ಜುನ ಸ್ವಾಮಿ 19 ಜನ ಆರೋಪಿಗಳನ್ನು ಖುಲಾಸೆಗೊಳಿಸಿ ಮಾ.15ರಂದು ತೀರ್ಪು ನೀಡಿದ್ದಾರೆ. ಆರೋಪಿಗಳ ಪರವಾಗಿ ವಕೀಲರಾದ ಬಿ.ಅರುಣ ಬಂಗೇರ, ಮೋಹನರಾಜ್ ಕೆ.ಆ‌ರ್, ಆಶಾ ನಾಯ್ಕ ಸುನೀಲ್ ಮತ್ತು ರಿಹಾನ ಪರ್ವೀನ್ ವಾದಿಸಿದ್ದರು.

Continue Reading

Manglore

ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಳದ ರಥೋತ್ಸವದ ವೇಳೆ ತೇರು ಮುರಿದು ಅವಘಡ

Published

on

ದ.ಕ ಜಿಲ್ಲೆಯ ಮುಲ್ಕಿ ತಾಲೂಕಿನ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ

ರಥೋತ್ಸವ ನಡೆಯುತ್ತಿದ್ದ ವೇಳೆ ತೇರಿನ ಮೇಲ್ಭಾಗ ಏಕಾಏಕಿ ಕುಸಿತ

ತೇರಿನ ಮೇಲ್ಬಾಗ ಕುಸಿಯುವ ವೇಳೆ ಅರ್ಚಕರು ತೇರಿನಲ್ಲೇ ಇದ್ದರೂ ಅದೃಷ್ಟವಶಾತ್ ಪಾರು

ರಥೋತ್ಸವದ ವೇಳೆ ತೇರು ಕುಸಿದ ಕಾರಣ
ಭಕ್ತ ಸಮೂಹದಲ್ಲಿ ಆತಂಕ

ರಾತ್ರಿ‌ ಸುಮಾರು 1.40-2.00 ಗಂಟೆ ವೇಳೆ ನಡೆದ ಘಟನೆ

ಅದೃಷ್ಟವಶಾತ್ ಯಾರಿಗೂ ಗಂಭೀರ ಗಾಯವಾಗಿಲ್ಲ

ಬಳಿಕ ಚಂದ್ರಮಂಡಲ ತೇರಿನಲ್ಲಿ ಮುಂದುವರಿದ ದೇವರ ಉತ್ಸವ

Continue Reading

Manglore

ಕೇಂದ್ರ ಸರ್ಕಾರದ ವಿರುದ್ಧ ರಣಕಹಳೆ

Published

on

ಮಂಗಳೂರು: ವಕ್ಫ್ ಕಾಯ್ದೆಗೆ ಸಿಡಿದೆದ್ದ ಮುಸ್ಲಿಂ ಸಮುದಾಯ- ಲಕ್ಷಲಕ್ಷ ಸಂಖ್ಯೆಯಲ್ಲಿ ಜಮಾಯಿಸಿದ ಮುಸ್ಲಿಮರು

 

ಸ್ಲಗ್: ಕೇಂದ್ರ ಸರ್ಕಾರದ ವಿರುದ್ಧ ರಣಕಹಳೆ

 

ಮಂಗಳೂರು: ನಗರದಲ್ಲಿ ವಕ್ಫ್ ಕಾನೂನು ತಿದ್ದುಪಡಿ ವಿರುದ್ಧ ಸಿಡಿದೆದ್ದ ಮುಸ್ಲಿಮ್ ಸಮುದಾಯ ಕೇಂದ್ರ ಸರ್ಕಾರದ ವಿರುದ್ಧ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಲಕ್ಷಲಕ್ಷ ಸಂಖ್ಯೆಯಲ್ಲಿ ಮುಸ್ಲಿಮರು ಜಮಾಯಿಸಿ ಕೇಂದ್ರ ಸರಕಾರದ ವಿರುದ್ಧ ರಣಕಹಳೆ ಊದಿದ್ದಾರೆ.

 

ಹೌದು… ಮಂಗಳೂರಿನ ಅಡ್ಯಾರ್‌ನ ಷಾ ಗಾರ್ಡನ್‌ನಲ್ಲಿ ಮುಗಿಲು ಮುಟ್ಟಿದ ಘೋಷಣೆ ಕೇಳುತ್ತಿತ್ತು. ಜನಸಾಗರವನ್ನು ನಿಯಂತ್ರಿಸಲಾಗದೇ ಪೊಲೀಸರು ಕೈಚೆಲ್ಲಿ ಕುಳಿತ ದೃಶ್ಯ ಕಂಡು ಬಂದಿತು. ಸಂಯುಕ್ತ ಖಾಝಿಗಳ ನಾಯಕತ್ವದಲ್ಲಿ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ, ಕೇಂದ್ರ ಸರ್ಕಾರದ ವಕ್ಫ್ ತಿದ್ದುಪಡಿ ಕಾಯ್ದೆಯ ವಿರುದ್ಧ ಮುಸ್ಲಿಮರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಸ್ಲಿಂ ಉಲೇಮಾಗಳು ಭಾಷಣದುದ್ದಕ್ಕೂ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

 

ವಕ್ಫ್ ಪ್ರತಿಭಟನೆ ಹಿನ್ನಲೆಯಲ್ಲಿ ಇಡೀ ಪೊಲೀಸ್ ಸರ್ಪಗಾವಲು ಭದ್ರತೆಯಿತ್ತು. ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಪ್ರದೇಶದಲ್ಲಿ ಅರೆಸೇನಾ ಪಡೆಯ ಭದ್ರತೆ ಅಳವಡಿಸಲಾಗಿತ್ತು. ಹೆದ್ದಾರಿ ಸಂಪೂರ್ಣ ಬ್ಲಾಕ್ ಆಗಿರೋದರಿಂದ ಮುಸ್ಲಿಂ ಯುವಕರು ರಸ್ತೆಯಲ್ಲಿ ನಿಂತ ಬಸ್, ಲಾರಿಗಳ ಮೇಲೆ ನಿಂತಿರುವ ದೃಶ್ಯ ಕಂಡುಬಂದಿತ್ತು. ಒಟ್ಟಿನ್ನಲ್ಲಿ ಕೇಂದ್ರದ ವಿರುದ್ಧ ಮುಸ್ಲಿಂ ಸಮಾಜದ ಧಾರ್ಮಿಕ ಮುಖಂಡರು ಒಗ್ಗಟ್ಟಿನ ಹೋರಾಟಕ್ಕೆ ಮುಂದಾಗಿದ್ದು ಇದರ ಅಂತ್ಯ ಯಾವ ರೀತಿ ಆಗಲಿದೆ ಎಂಬುವುದುನ್ನು ಕಾದುನೋಡಬೇಕಾಗಿದೆ.

 

ಸಮಾವೇಶದಲ್ಲಿ ಉಲೇಮಾ ಕೋರ್ಡಿನೇಷನ್ ಕಮಿಟಿ ಕೋಶಾಧಿಕಾರಿ ಶಾಫಿ ಸಅದಿ ಉಸ್ತಾದ್ ಮಾತನಾಡಿ, ಮೇ 5ರಂದು ಸುಪ್ರೀಂ ಕೋರ್ಟ್ ಈ ಕಾಯ್ದೆ ತಂದವರನ್ನು ಬೀದಿಗೆ ತರಲಿದೆ. ಯಾವ ಹಿಂದೂಗಳ ಆಸ್ತಿಯನ್ನು ವಕ್ಫ್ ಮಂಡಳಿ ಮುಟ್ಟಿಲ್ಲ. ಕರ್ನಾಟಕದಲ್ಲಿ ಇತರ ಧರ್ಮೀಯರ ಆರಾಧನಾ ವಿಚಾರದಲ್ಲಿ ವಕ್ಫ್ ಮಂಡಳಿ ಹಸ್ತಕ್ಷೇಪ ಮಾಡಿಲ್ಲ. 26 ಲಕ್ಷ ಎಕರೆ ವಕ್ಫ್ ಆಸ್ತಿಯನ್ನು ಕಬಳಿಸುವ ತಂತ್ರಗಾರಿಕೆ ಕೇಂದ್ರ ಸರ್ಕಾರದ್ದು ಆಗಿದೆ. ಯಾರಿಗೂ ಇಲ್ಲದ ಕಾನೂನನ್ನು ಮುಸ್ಲಿಮರಿಗೆ ಹೇರಲಾಗಿದೆ. ಯಾವುದೇ ಕಾರಣಕ್ಕೂ ಮುಸ್ಲಿಮರ ಧಾರ್ಮಿಕ ಭೂಮಿಯನ್ನು ಮುಟ್ಟಲು ಬಿಡಲ್ಲ ಅಂತಾ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

ಬೈಟ್_

 

ಶಾಫಿ ಸ‌ಅದಿ ಉಸ್ತಾದ್- ಉಲೇಮಾ ಕೋರ್ಡಿನೇಷನ್ ಕಮಿಟಿ ಕೋಶಾಧಿಕಾರಿ

Continue Reading

Manglore

ಮಂಗಳೂರಿನಲ್ಲಿ ಯುವತಿಯ ಗ್ಯಾಂಗ್ ರೇಪ್ ಆರೋಪ- ಮೂವರು ಆರೋಪಿಗಳ ಬಂಧನ

Published

on

ಮಂಗಳೂರು: ಮಂಗಳೂರಿನಲ್ಲಿ ಪಶ್ಚಿಮ ಬಂಗಾಳದ ಕೂಚ್ ಬಿಹಾರದ ಮೂಲದ 20 ವರ್ಷ ವರ್ಷದ ವಲಸೆ ಕಾರ್ಮಿಕ ಯುವತಿಯೊಬ್ಬಳನ್ನು ಗ್ಯಾಂಗ್ ರೇಪ್ ಮಾಡಿದ ಬಗ್ಗೆ ಯುವತಿಯ ಆರೋಪದ ಹಿನ್ನೆಲೆಯಲ್ಲಿ ಮೂವರನ್ನು ಬಂಧಿಸಲಾಗಿದೆ.

ಯುವತಿಯ ಮೇಲೆ ಅತ್ಯಾಚಾರ ಎಸಗಿದ ಆರೋಪಿಗಳಾದ ಆಟೋ ಚಾಲಕ ಮುಲ್ಕಿಯ ಪ್ರಭುರಾಜ್ (38), ಕೋಟೆಕಾರ್ ಕುಂಪಲದ ಮಿಥುನ್‌ (37) ಮತ್ತು ಪಡೀಲ್ ಕೊಡಕ್ಕಲ್ ನ ಮನೀಶ್ (30) ಎಂಬವರನ್ನು ಬಂಧಿಸಲಾಗಿದೆ.

 

ಎ. 16 ರಂದು ಪಶ್ಚಿಮ ಬಂಗಾಳದ ಕೂಚ್ ಬಿಹಾರದ ಮೂಲದ 20 ರ ಹರೆಯದ ಯುವತಿಯೊಬ್ಬಳು ಪರಿಚಿತ ಯುವಕನೊಂದಿಗೆ ಮಂಗಳೂರಿಗೆ ರೈಲಿನಲ್ಲಿ ಬಂದಳು. ಆಕೆ ಕೇರಳದಲ್ಲಿ ಫ್ಲೈವುಡ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಳು. ಆಕೆ ಉದ್ಯೋಗಾವಕಾಶಗಳನ್ನು ಹುಡುಕಿಕೊಂಡು ನಗರಕ್ಕೆ ಬಂದಿದ್ದಳು.

ಮಂಗಳೂರಿಗೆ ತಲುಪಿದ ನಂತರ, ಆಕೆಯ ಮತ್ತು ಆಕೆಯ ಜೊತೆಗೆ ಬಂದಿದ್ದ ಯುವಕನ ನಡುವೆ ಜಗಳ ಉಂಟಾಯಿತು, ಈ ಸಮಯದಲ್ಲಿ ಆಕೆಯ ಮೊಬೈಲ್ ಫೋನ್ ನ್ನು ಆತ ಹಾನಿ ಮಾಡಿದ್ದ. ಆಟೋರಿಕ್ಷಾ ಹತ್ತಿದ ಆಕೆಯನ್ನು ಚಾಲಕ ಪ್ರಭುರಾಜ್ ಆಕೆಯನ್ನು ಮೊಬೈಲ್ ರಿಪೇರಿ ಅಂಗಡಿಗೆ ಕರೆದೊಯ್ದು ಫೋನ್ ರಿಪೇರಿ ಮಾಡಲು ಸಹಾಯ ಮಾಡಿದ್ದನು. ಆ ಬಳಿಕ ಆಕೆಗೆ ಆಹಾರವನ್ನು ಸಹ ನೀಡಿದ್ದಾನೆ. ಆಕೆಯ ಕೋರಿಕೆಯ ಮೇರೆಗೆ, ಪಶ್ಚಿಮ ಬಂಗಾಳಕ್ಕೆ ಹೋಗಲು ನಿರ್ಧರಿಸಿದ ಆಕೆಯನ್ನು ಆಟೋ ಚಾಲಕ ಮತ್ತೆ ರೈಲ್ವೆ ನಿಲ್ದಾಣಕ್ಕೆ ಬಿಡಲು ಒಪ್ಪಿಕೊಂಡನು. ರೈಲ್ವೆ ಸ್ಟೇಷನ್ ಬಳಿ ಮಿಥುನ್ ಮತ್ತು ಮನೀಶ್ ಎಂಬ ಇಬ್ಬರು ಆರೋಪಿಗಳು ಇವರ ಜೊತೆ ಸೇರಿಕೊಂಡರು.

ಆಟೋ ಚಾಲಕ ತನಗೆ ಮಾದಕ ವಸ್ತುವನ್ನು ನೀಡಿದ್ದಾನೆ, ನಂತರ ತಾನು ಪ್ರಜ್ಞೆ ಕಳೆದುಕೊಂಡಿದ್ದೇನೆ ಎಂದು ಯುವತಿ ಆರೋಪಿಸಿದ್ದಾರೆ. ಆಕೆಗೆ ಭಾಗಶಃ ಪ್ರಜ್ಞೆ ಬಂದಾಗ, ಆಟೋ ಚಾಲಕ ಸೇರಿದಂತೆ ಮೂವರು ವ್ಯಕ್ತಿಗಳೊಂದಿಗೆ ಕಾರಿನಲ್ಲಿ ತಾನು ಇರುವುದನ್ನು ತಿಳಿದುಕೊಂಡಳು. ಆಕೆ ಎಚ್ಚರಿಕೆ ನೀಡಿದಾಗ, ಆರೋಪಿ ಆಕೆಯನ್ನು ರಸ್ತೆಬದಿಯಲ್ಲಿ ಬಿಟ್ಟು ಹೋಗಿದ್ದಾನೆ. ಆಕೆ ಆ ಬಳಿಕ ಹತ್ತಿರದ ಮನೆಯೊಂದಕ್ಕೆ ಹೋದಾಗ, ಅಲ್ಲಿನ ನಿವಾಸಿಗಳು ಪೊಲೀಸ್ ಸಹಾಯವಾಣಿ (112) ಗೆ ಕರೆದೊಯ್ದರು.ಪೊಲೀಸ್ ಅಧಿಕಾರಿಗಳು ಆಕೆಯನ್ನು ತಕ್ಷಣ ಪೊಲೀಸ್ ಠಾಣೆಗೆ ಕರೆದೊಯ್ದು, ಮಾದಕ ವ್ಯಸನದ ಲಕ್ಷಣಗಳನ್ನು ಗಮನಿಸಿ, ಚಿಕಿತ್ಸೆಗಾಗಿ ಆಸ್ಪತ್ರೆಗೆ ಸ್ಥಳಾಂತರಿಸಿದರು.

ವೈದ್ಯಕೀಯ ಚಿಕಿತ್ಸೆ ಪಡೆದು ಪ್ರಜ್ಞೆ ಬಂದ ನಂತರ, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾಗ ತನ್ನ ಮೇಲೆ ಅತ್ಯಾಚಾರ ನಡೆದಿರಬಹುದು ಎಂದು ಶಂಕಿಸಿರುವುದಾಗಿ ಆಕೆ ಹೇಳಿದ್ದಾಳೆ.

ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ನ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಅಪರಾಧ ಸಂಖ್ಯೆ 51/2025 ರಲ್ಲಿ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Continue Reading

Trending

error: Content is protected !!