Connect with us

Hassan

ಜಿಟಿಟಿಸಿಯಿಂದ ಮೂರು ಡಿಪ್ಲೋಮಾ ಕೋರ್ಸ್

Published

on

೧೯ ರಿಂದ ೨೦ ವರ್ಷಕ್ಕೆ ಉದ್ಯೋಗ: ಬಸವರಾಜು

ಹಾಸನ: ಸರಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ {ಜಿಟಿಟಿಸಿ}ಯಿಂದ ಒಟ್ಟು ಮೂರು ಕೋರ್ಸ್ ನಡೆಸಲಾಗುತ್ತಿದ್ದು, ಇಲ್ಲಿ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳು ತಮ್ಮ ೧೯ ರಿಂದ ೨೦ ವರ್ಷ ಒಳಗೆ ಉದ್ಯೋಗಸ್ಥರಾಗುತ್ತಾರೆ ಎಂದು ಜಿಟಿಟಿಸಿ ಕಾಲೇಜು ಪ್ರಾಂಶುಪಾಲವ ಬಸವರಾಜು ಮಟಪತಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ನಮ್ಮ ಜಿಟಿಟಿಸಿ ನಮ್ಮ ಕಾಲೇಜು ೧೯೯೦-೯೪ ರಲ್ಲಿ ಇಲಿವರೆಗೂ ೩೦ ಬ್ಯಾಚ್ ಯಶಸ್ವಿಗೊಳಿಸಲಾಗಿದೆ. ನಮ್ಮ ಬಳಿ ಡಿಪ್ಲೋ, ಇನ್ ಟೂಲ್ ಅಂಡ್ ಡೈ ಮೇಕಿಂಗ್ ಎನ್ನುವ ಒಂದೆ ಕೋರ್ಸ್ ಇತ್ತು. ಈಗ ಮತ್ತೆರಡು ಕೋರ್ಸನ್ನು ತರಲಾಗಿದೆ. ಅದರಲ್ಲಿ ಡಿಪ್ಲೋಮಾ ಇನ್ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯೂನಿಕೇಶನ್ ಮತ್ತೊಂದು ಡಿಪ್ಲೋಮಾ ಇನ್ ಆರ್ಟಿಪಿಸೆಲ್ ಇಂಟೆಲಿಜೆನ್ಸಿ, ಅಂಡ್ ಮೆಷೆನ್ ಅಂಡ್ ಮೆಷೆನ್ ಲರ್ನರ್ ಇವು ಹೊಸದಾಗಿ ಬಂದಿರುವ ಕೋರ್ಸ್ ಆಗಿದೆ. ಒಂದು ಕೋರ್ಸ್ ಇದ್ದಾಗ ೮೦ ಜನ ವಿದ್ಯಾರ್ಥಿಗಳಿದ್ದರು.

ಈ ಹೊಸ ಎರಡು ಕೋರ್ಸ್ ಇರುವುದರಿಂದ ೧೮೦ ಜನ ವಿದ್ಯಾರ್ಥೀಗಳು ಶಿಕ್ಷಣ ಪಡೆಯುತ್ತಿದ್ದಾರೆ ಎಂದರು. ಇದುವರೆಗೂ ನೂರರಷ್ಟು ಪ್ಲೇಸ್ಮೇಂಟ್ ಕೊಟ್ಟಿದ್ದೇವೆ. ಈಗಾಗಲೇ ೨೦೨೪-೨೫ರ ಶೈಕ್ಷಣಿಕ ವರ್ಷದ ಪ್ರವೇಶಗಳು ಪ್ರಾರಂಭವಾಗಿದ್ದು, ಇದು ಮೂರು ವರ್ಷ ಕೋರ್ಸ್ ಆಗಿದ್ರೂ ಮತ್ತೊಂದು ವರ್ಷ ತರಬೇತಿ ಕೊಡಲಾಗುವುದು ಈ ವೇಳೆ ಸೈಪೆಂಡ್ ೨೧ ಸಾವಿರದವರೆಗೂ ಇರುತ್ತದೆ. ಸುಸಜ್ಜಿತವಾದ ಮೂಳ ಸೌಕರ್ಯ, ಹೈಟೆಕ್ ಯಂತ್ರೋಪಕರಣ, ಲೇಸೆನ್ಸ್ ಹೊಂದಿದ ಸಾಪ್ಟ್ ವೇರ್, ಅನುಭವಿ ತರಬೇತುದಾರರು. ೨೦ ವರ್ಷದೊಳಗೆ ವಿದ್ಯಾರ್ಥೀಗಳು ಉದ್ಯೋಗಸ್ಥರು ಆಗುತ್ತಾರೆ ಎಂದು ಹೇಳಿದರು.

ಸರಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದ ದಿನೇಶ್, ವಿನಯ್, ಪುಟ್ಟಪ್ಪ ಇತರರು ಉಪಸ್ಥಿತರಿದ್ದರು.

 

Continue Reading
Click to comment

Leave a Reply

Your email address will not be published. Required fields are marked *

Hassan

ವರ್ತಕರು ಕಾಫಿ, ಏಲಕ್ಕಿ, ಮೆಣಸು ಕಳ್ಳತನ ಪ್ರಕರಣಗಳು ನಡೆಯದಂತೆ ಮುಂಜಾಗ್ರತಾಕ್ರಮವನ್ನು ಅನುಸರಿಸಿ: ಡಿವೈಎಸ್‌ಪಿ ಎಸ್ .ಕೆ.ಮಾಲತೀಶ

Published

on

ಸಕಲೇಶಪುರ : ಇತ್ತೀಚಿನ ದಿನಗಳಲ್ಲಿ ಕಾಫಿ ಬೆಲೆಯಲ್ಲಿ ಏರಿಕೆ ಇರುವುದರಿಂದ ಕಾಫಿ ಕಳ್ಳತನ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿದ್ದು, ಅವುಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಬೆಳೆಗಾರರು ಹಾಗೂ ವರ್ತಕರು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವ ಮೂಲಕ ಕಳ್ಳತನ ಪ್ರಕರಣಗಳನ್ನು ಕಡಿಮೆ ಮಾಡಬೇಕು ಎಂದು ಸಕಲೇಶಪುರ ಪೊಲೀಸ್ ಉಪ ಆಧೀಕ್ಷಕ  ಎಸ್ .ಕೆ. ಮಾಲತೀಶ ಹೇಳಿದರು


ಗ್ರಾಮಾಂತರ ಠಾಣೆ ಸಕಲೇಶಪುರದಲ್ಲಿ ಕರ್ನಾಟಕ ರಾಜ್ಯ ಪೊಲೀಸ್, ಸಕಲೇಶಪುರ ಪೊಲೀಸ್ ಉಪಾಧೀಕ್ಷಕ ಸಂಯೋಗದಲ್ಲಿ ಕಾಫಿ ವರ್ತಕರ ಸಭೆ 2025 ಯನ್ನು ಹಮ್ಮಿಕೊಳ್ಳಯಾಗಿತ್ತು. ಸಭೆಯಲ್ಲಿ ಬೆಳೆಗಾರರಿಗೆ ಮತ್ತು ವರ್ತಕರಿಗೆ ಕಾಫಿ,ಏಲಕ್ಕಿ,ಮೆಣಸು ಕಳ್ಳತನ ಪ್ರಕರಣಗಳು ನಡೆಯದಂತೆ ಮುಂಜಾಗೃತಕ್ರಮದ ಬಗ್ಗೆ ಸೂಚನೆ ನೀಡಿದರು.

ವರ್ತಕರು ಕಾಫಿ,ಏಲಕ್ಕಿ,ಮೆಣಸು ಮಾರಾಟ ಮಾಡಲು ಬರುವವರ ಬಳಿ ಜಮೀನಿನ ಆರ್‌ಟಿಸಿ ಪಡೆದುಕೊಳ್ಳಬೇಕು,ಹಾಗೂ ತಮ್ಮ ಅಂಗಡಿಗಳಲ್ಲಿ ಅಂಗಡಿಯ ಒಳ ಬಾಗ ಮತ್ತು ಅಂಗಡಿ ಮುಂಬಾಗ ಹಾದುಹೋಗಿರುವ ರಸ್ತೆಯ ದೃಶ್ಯಗಳು ಕಾಣುವ ಹಾಗೆ ಸಿಸಿ ಕ್ಯಾಮೆರಗಳನ್ನು ಕಡ್ಡಾಯವಾಗಿ ಆಳವಡಿಸಿ ಕನಿಷ್ಟ 3 ತಿಂಗಳ ಬ್ಯಾಕ್ ಅಪ್ ಇಟ್ಟುಕೊಳ್ಳುಬೇಕು ಮತ್ತು ಅಂಗಡಿಗಳಲ್ಲಿ ಒಂದು ರಿಜಿಸ್ಟರ್ ಇಟ್ಟು ಅದರಲ್ಲಿ ಪ್ರತಿ ದಿನ ಅವರ ಬಳಿಗೆ ಕಾಫಿ,ಏಲಕ್ಕಿ,ಮೆಣಸು ಮಾರಾಟ ಮಾಡಲು ಬರುವವರ ವಿಳಾಸ, ಮೊಬೈಲ್ ನಂಬರ್ ಹಾಗೂ ಅವರಿಂದ ಖರೀದಿಸಿದ ಕಾಫಿಯ ವಿವರವನ್ನು ನಮೂದು ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.

ಅನುಮಾನಸ್ಪದ ವ್ಯಕ್ತಿಗಳು ಕಾಫಿ,ಏಲಕ್ಕಿ,ಮೆಣಸು ಮಾರಲು ಬಂದಾಗ ಪೊಲೀಸ್ ಠಾಣೆಗೆ ಮಾಹಿತಿಯನ್ನು ನೀಡಬೇಕು, ವರ್ತಕರು ಹಾಗೂ ಬೆಳೆಗಾರರು ಮುಂಜಾಗ್ರತಾಕ್ರಮವನ್ನು ವಹಿಸುವ ಮೂಲಕ ಕಳ್ಳತನ ಕಡಿಮೆ ಮಾಡಬಹುದು.ಇದಕ್ಕೆ ತಮ್ಮೆಲ್ಲರ ಸಹಕಾರ ಅತಿ ಮುಖ್ಯವಾಗಿರುತ್ತದೆ ಎಂದು ತಿಳಿಸಿದರು.

ರಾತ್ರಿ ಗಸ್ತಿನ ವೇಳೆ ಅನುಮಾನಸ್ಪದವಾಗಿ ಓಡಾಡುವ ಮಾರುತಿ 800 ಕಾರು,ಓಮಿನಿ ಕಾರು. ಗೂಡ್ಸ್ ಆಟೋಗಳನ್ನು ಕಡ್ಡಾಯವಾಗಿ ತಪಾಸಣೆ ಮಾಡುವಂತೆ ಬೀಟ್‌ ಸಿಬ್ಬಂದಿ ಮತ್ತು ರಾತ್ರಿ ರೌಂಡ್ಸ್ ಅಧಿಕಾರಿಗಳಿಗೆ ಸೂಚಿಸಿದರು.

 


ಈ ಸಂದರ್ಭದಲ್ಲಿ ಯಸಳೂರು ಠಾಣೆ ಪಿ.ಎಸ್.ಐ ಸಲ್ಮಾನ್ ಖಾನ್ ತಂಬುಳ್ಳಿ, ನಗರ ಠಾಣೆ ಇನ್ಸ್‌ಪೆಕ್ಟರ್‌ ವನರಾಜ್, ಗ್ರಾಮಾಂತರ ಪೊಲೀಸ್ ಠಾಣೆ ಸಬ್ ಇನ್ಸ್‌ಪೆಕ್ಟರ್‌ ಪ್ರಸನ್ನ ಕುಮಾರ್ ಸೇರಿದಂತೆ ಹೆಚ್ಚಿನ ಸಂಖ್ಯೆಯ ವರ್ತಕರು ಹಾಗೂ ಪೊಲೀಸ್ ಸಿಬ್ಬಂದಿ ವರ್ಗದವರು ಹಾಜರಿದ್ದರು .

Continue Reading

Hassan

ಡಿ. 16ಕ್ಕೆ ಖಾಸಗಿ ವಿದ್ಯಾಸಂಸ್ಥೆ ವಿರುದ್ಧ ಪ್ರತಿಭಟನೆ : ಎಂ.ಡಿ.ಬಾಲರಾಜು ಆಗ್ರಹ

Published

on

ವರದಿ: ಮಹದೇವಸ್ವಾಮಿ ಪಟೇಲ್

ನಂಜನಗೂಡು: ತಾಲೂಕಿನ ಹುಣಸನಾಳು ಗ್ರಾಮದ ಬಳಿ ಇರುವ ಖಾಸಗಿ ವಿದ್ಯಾ ಸಂಸ್ಥೆಯೂ ಕಾನೂನು ಬಾಹಿರವಾಗಿ ಶಾಲೆಯನ್ನು ನಡೆಸುತ್ತಿದ್ದು, ಇದೇ ತಿಂಗಳ ಡಿ. 16ರಂದು ಶಾಲೆ ಮುಂಭಾಗ ಪೋಷಕರು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಯುವ ಮುಖಂಡ ಎಂ.ಡಿ ಬಾಲರಾಜು ತಿಳಿಸಿದರು.

ನಗರದ ಪತ್ರಕರ್ತ ಭವನದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಖಾಸಗಿ ವಿದ್ಯಾ ಸಂಸ್ಥೆಯೂ ಒಂದರಿಂದ ಐದನೇ ತರಗತಿವರೆಗೆ ಮಾತ್ರ ರಾಜ್ಯ ಪಠ್ಯಕ್ರಮಕ್ಕೆ ಪರವಾನಾಗಿ ಪಡೆದು, ಐಸಿಎಸ್‌ಸಿ ಕೇಂದ್ರ ಪಠ್ಯಕ್ರಮ ಶುಲ್ಕವನ್ನು ವಸೂಲಿ ಮಾಡುತ್ತಿದೆ. ಇತ್ತೀಚಿಗೆ 6ನೇ ತರಗತಿಗೆ ಪಾಠ ಮಾಡುತ್ತಿದ್ದು ವಿದ್ಯಾರ್ಥಿಗಳ ಭವಿಷ್ಯದ ಜೊತೆಗೆ ಚೆಲ್ಲಾಟವಾಡುತ್ತಿದೆ. ಶಿಕ್ಷಣ ಇಲಾಖೆಗೆ ಒಂದು ಶುಲ್ಕದ ಮಾಹಿತಿ ನೀಡಿ, ಪೋಷಕರಿಗೆ ಮತ್ತೊಂದು ಶುಲ್ಕದ ಪಟ್ಟಿ ನೀಡಿ ಹಗಲು ದರೋಡೆ ಮಾಡುತ್ತಿದ್ದಾರೆ. ಈ ಬಗ್ಗೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಗೊತ್ತಿದ್ದರೂ ಕೂಡ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಶಿಕ್ಷಣ ಇಲಾಖೆಯ ಆಡಳಿತ ವೈಫಲ್ಯ ಎದ್ದು ಕಾಣುತ್ತಿದೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಅಂಚೆ ಇಲಾಖೆ ಕೆಲಸದ ರೀತಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.

ಕಳೆದ ತಿಂಗಳು ಪೋಷಕರು ಪ್ರತಿಭಟನೆ ಮಾಡಿ ಶಾಲೆಯ ಆಡಳಿತ ಮಂಡಳಿ ವಿರುದ್ಧ ಕೇಸು ದಾಖಲು ಮಾಡುವಂತೆ, ಹಾಗೂ ಹೆಚ್ಚುವರಿ ಶುಲ್ಕ ವಾಪಸ್ ನೀಡುವಂತೆ ಡಿಡಿಪಿಐ ನೇತೃತ್ವದಲ್ಲಿ ಸಭೆ ನಡೆಸಲಾಗಿತ್ತು. ಆದರೆ ಅದು ಕೂಡ ಶಾಲಾ ಆಡಳಿತ ಮಂಡಳಿಗೆ ಸಾಧ್ಯವಾಗಿಲ್ಲ. ಬಲವಂತವಾಗಿ ಆರನೇ ತರಗತಿ ವಿದ್ಯಾರ್ಥಿಗಳಿಗೆ ಟಿಸಿ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ. ಖಾಸಗಿ ವಿದ್ಯಾಸಂಸ್ಥೆ ಜೊತೆ ಶಾಮೀಲಾಗಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು ಅಮಾನತು ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ವಂಚನೆ ಪ್ರಕರಣದಲ್ಲಿ ಖಾಸಗಿ ಸಂಸ್ಥೆಯ ಆಡಳಿತ ಮಂಡಳಿಯ ಮುಖ್ಯಸ್ಥರ ವಿರುದ್ಧ ಪ್ರಕರಣವನ್ನು ದಾಖಲು ಮಾಡಿ ಕ್ರಮ ಕೈಗೊಳ್ಳಬೇಕು. ಇನ್ನು ಮೂರು ದಿನಗಳ ಒಳಗೆ ಸಮಸ್ಯೆಯನ್ನು ಬಗೆಹರಿಸದಿದ್ದಲ್ಲಿ ಡಿ.16ರಂದು  ಶಾಲೆ ಮುಂಭಾಗ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಪೋಷಕರಾದ ರುದ್ರೇಶ್, ಪವಿತ್ರ ಕುಮಾರ್, ಅಮರನಾಥ್, ಪ್ರಶಾಂತ್, ದೇವಪ್ಪ, ಗಣೇಶ್ ಗಿರೀಶ್ ಅಶೋಕ್‌ ಹಾಗೂ ಪ್ರಭು  ಸೇರಿದಂತೆ ಪೋಷಕರು ಉಪಸ್ಥಿತರಿದ್ದರು.

Continue Reading

Hassan

ಡಿ.14 ರಿಂದ ಜ.4 ರವರೆಗೂ ಬಾಳ್ಳುಪೇಟೆಯಲ್ಲಿ ಯೋಗ, ಧ್ಯಾನ ಶಿಬಿರ

Published

on

ಸಕಲೇಶಪುರ: ತಾಲೂಕಿನ ಬಾಳ್ಳುಪೇಟೆಯಲ್ಲಿ ನಿರಂತರ ಯೋಗ ಕೇಂದ್ರ  ವತಿಯಿಂದ ಯೋಗ, ಧ್ಯಾನ ಮತ್ತು ದೇಶಿ ಚಿಕಿತ್ಸಾ ಶಿಬಿರವನ್ನು  ಹಮ್ಮಿಕೊಳ್ಳಲಾಗಿದೆ.

ಸ್ವಾಸ್ಥ್ಯ ಜೀವನ ಮಾರ್ಗ ಯೋಗ ಪ್ರತಿಷ್ಠಾನ ನಾಗಮಂಗಲ ಇವರ ಸಂಯುಕ್ತಾಶ್ರಯದಲ್ಲಿ ಡಿ. 14 ರಿಂದ 2025ರ ಜ.4 ರವರೆಗೂ ಖ್ಯಾತ ಯೋಗ ಗುರುಗಳಾದ ಜಿ.ಲಕ್ಷಣ್ ರವರ ಮಾರ್ಗದರ್ಶನದಲ್ಲಿ ಗ್ರಾಮದ ಕೆಂಚಮ್ಮ ಮಲ್ಲೇಗೌಡ ಸಮುದಾಯ ಭವನದಲ್ಲಿ ಪ್ರತಿದಿನ ಬೆಳಿಗ್ಗೆ 05:15 ರಿಂದ 06:45 ವರೆಗೆ ನಡೆಯಲಿದೆ ಎಂದು ನಿರಂತರ ಯೋಗ ಕೇಂದ್ರ ಬಾಳ್ಳುಪೇಟೆ ಹಾಗೂ ಕುನಿಗನಹಳ್ಳಿಯ ಪದಾಧಿಕಾರಿಗಳು ತಿಳಿಸಿದ್ದಾರೆ.

ಯೋಗ ಶಿಬಿರದಲ್ಲಿ ಮಂಡಿ ನೋವು, ಸೊಂಟ ನೋವು, ಬೆನ್ನು ನೋವು ಗ್ಯಾಸ್ಟಿಕ್ ಬಿಪಿ ಶುಗರ್, ಬೊಜ್ಜು ಮೈಗ್ರೇನ್ ಮುಟ್ಟಿನ ತೊಂದರೆ ಅಲರ್ಜಿ ಉಸಿರಾಟದ ತೊಂದರೆ ಜೀರ್ಣಕ್ರಿಯೆ ಇನ್ನು ಮುಂತಾದ ಅನಾರೋಗ್ಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Continue Reading

Trending

error: Content is protected !!