Connect with us

State

ಮುರಾರ್ಜಿ ಹಾಗೂ ವಿವಿಧ ವಸತಿ ಶಾಲೆಗಳ ಪ್ರವೇಶಾತಿಗೆ ಅರ್ಜಿ ಅಹ್ವಾನ : ಉಚಿತ ಶಿಕ್ಷಣದ ಜೊತೆ ಉಚಿತ ಊಟ ವಸತಿ |

Published

on

Murarji Application Started 2025 – ರಾಜ್ಯದ ವಸತಿ ಶಿಕ್ಷಣ ಸಂಸ್ಥೆಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ವಸತಿ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಸ್ತುತ 5ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ 6ನೇ ತರಗತಿಯ ಪ್ರವೇಶಾತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಇದೀಗ ಆನ್ಲೈನ್ ಮೂಲಕ ಅರ್ಹ ಅಭ್ಯರ್ಥಿಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು 25ನೇ ಜನವರಿ 2025 ಕೊನೆಯ ದಿನಾಂಕವಾಗಿದೆ. ಅರ್ಜಿ ಸಲ್ಲಿಸಲು ಏನೆಲ್ಲಾ ಅರ್ಹತೆಗಳಿರಬೇಕು? ಬೇಕಾಗುವ ದಾಖಲಾತಿಗಳು ಯಾವುವು? ಹೇಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ ಎಂಬ ಮಾಹಿತಿ ಇಲ್ಲಿದೆ..

ಮೊರಾರ್ಜಿ ದೇಸಾಯಿ ಸೇರಿದಂತೆ ವಿವಿಧ ವಸತಿ ಶಿಕ್ಷಣ ಸಂಸ್ಥೆಗಳ ವಿಶೇಷತೆ ಏನು?

ಈ ಶಾಲೆಗಳಿಗೆ ಒಮ್ಮೆ 6ನೇ ತರಗತಿ ಪ್ರವೇಶಾತಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ದ್ವಿತೀಯ ಪಿಯುಸಿ ತನಕ ಉಚಿತ ವಸತಿ ಊಟದೊಂದಿಗೆ ಒಳ್ಳೆಯ ಗುಣಮಟ್ಟದ ಶಿಕ್ಷಣವನ್ನು ನೀಡಲಾಗುವುದು. ಅಷ್ಟೇ ಅಲ್ಲದೆ ವಿದ್ಯಾರ್ಥಿಗಳಿಗೆ ಸರ್ವತೋಮುಖ ಕ್ಷೇತ್ರಗಳಲ್ಲಿ ಬೆಳೆಯಲು ಇಂತಹ ಶಾಲೆಗಳಲ್ಲಿ ಅವಕಾಶವಿದೆ.

ಯಾರು ಅರ್ಜಿ ಸಲ್ಲಿಸಬಹುದು?

• ಪ್ರಸ್ತುತ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು 2025-26ನೇ ಶೈಕ್ಷಣಿಕ ಸಾಲಿ cx6ನೇ ತರಗತಿ ಪ್ರವೇಶಾತಿಗಾಗಿ ಅರ್ಜಿ ಸಲ್ಲಿಸಬಹುದು.
• ವಿದ್ಯಾರ್ಥಿಯ ಕುಟುಂಬ ವಾರ್ಷಿಕ ಆಧಾಯ ಮಿತಿ ನೋಡುವುದಾದರೆ, OBC ಅಭ್ಯರ್ಥಿಗಳಿಗೆ 1 ಲಕ್ಷ ರೂ. ಒಳಗೆ ಇರಬೇಕು.
– SC, ST ಹಾಗೂ ಪ್ರವರ್ಗ 1 ವರ್ಗದ ಅಭ್ಯರ್ಥಿಗಳ ಕುಟುಂಬ ವಾರ್ಷಿಕ ಆಧಾಯವು 2.5ಲಕ್ಷ ರೂ. ಒಳಗಿರಬೇಕು.

ವಿದ್ಯಾರ್ಥಿಗಳನ್ನು ಹೇಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ?

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ 100 ಅಂಕಗಳ ಬಹು ಆಯ್ಕೆ ಪ್ರವೇಶಾತಿ ಪರೀಕ್ಷೆಯನ್ನು ನಡೆಸಿ ಅದರಲ್ಲಿ ವಿದ್ಯಾರ್ಥಿಗಳು ಗಳಿಸುವ ಅಂಕಗಳ ಆಧಾರದ ಮೇಲೆ ಮೆರಿಟ್ ಪಟ್ಟಿ ಸಿದ್ಧಪಡಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುವುದು.

ಪ್ರವೇಶಾತಿ ಪರೀಕ್ಷೆ ನಡೆಯುವ ದಿನಾಂಕ – 15ನೇ ಫೆಬ್ರವರಿ 2025

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 25ನೇ ಜನವರಿ 2025

ಅರ್ಜಿ ಸಲ್ಲಿಕೆಗೆ ಜಾಲತಾಣದ ಲಿಂಕ್ – https://cetonline.karnataka.gov.in/kreis20

Continue Reading

State

ವಾಲ್ಮೀಕಿ ಹಗರಣದ ತನಿಖೆ ಚುರುಕುಗೊಳಿಸಿದ ಸಿಬಿಐ

Published

on

ಬೆಂಗಳೂರು: ವಾಲ್ಮೀಕಿ ನಿಗಮದಲ್ಲಿ ನಡೆದಿರುವ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ಚುರುಕುಗೊಳಿಸಿದ್ದಾರೆ.

ಈ ಸಂಬಂಧ ಪ್ರಕರಣದ ಮೂವರು ಆರೋಪಿಗಳಿಗೆ ಸಿಬಿಐ ಅಧಿಕಾರಿಗಳು ಗುರುವಾರ ನೋಟಿಸ್‌ ನೀಡಿದ್ದಾರೆ.

ಪ್ರಕರಣದ ಪ್ರಮುಖ ಆರೋಪಿ ಚಂದ್ರಮೋಹನ್‌ ಮತ್ತು ಕುಟುಂಬಸ್ಥರಿಗೆ ನೋಟಿಸ್‌ ಜಾರಿಗೊಳಿಸಿದೆ.

ಈ ಹಿಂದೆ ಚಂದ್ರಮೋಹನ್‌ ಈ ಪ್ರಕರಣದಲ್ಲಿ 100ಕ್ಕೂ ಹೆಚ್ಚು ನಕಲಿ ಆಕೌಂಟ್‌ಗಳನ್ನು ಸೃಷ್ಠಿಮಾಡಿ 89 ಕೋಟಿ ರೂ ವರ್ಗಾವಣೆ ಮಾಡಿದ್ದ ಆರೋಪ ಹೊಂದಿದ್ದರು.

ಸಿಬಿಐ ಈಗಾಗಲೇ ಪ್ರಕರಣದ ಆರೋಪಿಗಳಾದ ಪರಶುರಾಮ್‌, ಸತ್ಯನಾರಾಯಣ ಇಟಕಾರಿಗೆ ನೋಟಿಸ್‌ ನೀಡಿ ವಿಚಾರಣೆ ನಡೆಸುತ್ತಿದೆ.

Continue Reading

State

ಪಕ್ಷದಲ್ಲಿನ ಆಂತರಿಕ ಭಿನ್ನಾಭಿಪ್ರಾಯ ದುರದೃಷ್ಟಕರ: ಬಸವರಾಜ ಬೊಮ್ಮಾಯಿ ಬೇಸರ

Published

on

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಅತ್ಯಂತ ಕೆಟ್ಟ ದುರಾಡಳಿ ನಡೆಯುತ್ತಿದ್ದು, ಎಲ್ಲ ರಂಗದಲ್ಲೂ ವೈಫಲ್ಯ ವಾಗಿದೆ. ಜನ ಸಾಮನ್ಯರು, ರೈತರು, ಮಹಿಳೆಯರು ಸಂಕಷ್ಟದಲ್ಲಿದ್ದು, ದಿನನಿತ್ಯ ಹಿಂಸೆ ಮತ್ತು ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿರುವುದನ್ನು ನೋಡಿದಾಗ ಅದರ ವಿರುದ್ದ ಸಮರ ಸಾರಬೇಕಾಗಿರುವ ಭಾರತೀಯ ಜನತಾ ಪಕ್ಷ ಆಂತರಿಕವಾಗಿ ಭಿನ್ನಾಭಿಪ್ರಾಯದ ಮಾತಿನ ಸಮರ ಅತ್ಯಂತ ದುರದೃಷ್ಟಕರ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಬೇಸರ ವ್ಯಕ್ತಪಡಿಸಿದ್ದಾರೆ‌.
ಇಡೀ ದೇಶಕ್ಕೆ ಸಮರ್ಥ ಆಡಳಿತ ಕೊಡುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಈ ಪಕ್ಚ ಮತ್ತು ವರಿಷ್ಠರ ತೀರ್ಮಾನವೇ ಅಂತಿಮವಾಗಿದ್ದು ನಾನು ಯಾವುದೇ ಗುಂಪುಗಾರಿಕೆಯಲ್ಲಿ ನಂಬಿಕೆ ಇಟ್ಟವನಲ್ಲ. ಆದುದರಿಂದ ನಾನು ಯಾವುದೇ ಒಂದು ಗುಂಪಿನ ಸಭೆಯನ್ನು ಕರೆಯುವ ಪ್ರಶ್ನೆಯೇ ಬರುವುದಿಲ್ಲ. ಎಲ್ಲರನ್ನೂ ಒಂದುಗೂಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುವ ಹಲವಾರು ಮುಖಂಡರಲ್ಲಿ ನಾನೂ ಒಬ್ಬ. ಎರಡೂ ಕಡೆ ತಾಳ್ಮೆ ಯನ್ನು ಕಳೆದುಕೊಳ್ಳದೆ ಕರ್ನಾಟಕ ಬಿಜೆಪಿಯ ಸರ್ವೋಚ್ಚ ನಾಯಕ ಮಾಜಿ ಮುಖ್ಯಮಂತ್ರಿ ಬಿ‌. ಎಸ್ ಯಡಿಯೂರಪ್ಪ ಹಾಗೂ ಇತರ ಹಿರಿಯ ಮುಖಂಡರ ಮಾರ್ಗದರ್ಶನದಲ್ಲಿ ಒಟ್ಟಿಗೆ ಕುಳಿತು ಮಾತುಕತೆಯ ಮೂಲಕ ಇದನ್ನು ಬಗೆ ಹರಿಸಬೇಕು. ಇಲ್ಲದಿದ್ದರೆ ವರಿಷ್ಠರ ತೀರ್ಮಾನಕ್ಕೆ ನಾವೆಲ್ಲರೂ ಬದ್ದರಾಗಬೇಕು‌.
ವರಿಷ್ಠರು ಕೂಡಲೇ ಕರ್ನಾಟಕದ ಪಕ್ಷದ ಬೆಳವಣಿಗೆಯ ಬಗ್ಗೆ ಗಮನವನ್ನು ಹರಿಸಿ, ಎಲ್ಲ ಪ್ರಮುಖರ ಜೊತೆಗೆ ಚರ್ಚೆ ಮಾಡಿ ಸೂಕ್ತ ನಿರ್ಣಯವನ್ನು ತೆಗೆದುಕೊಳ್ಳುತ್ತಾರೆ ಎನ್ನುವ ನಂಬಿಕೆ ನನಗಿದೆ ಎಂದು ತಿಳಿಸಿದ್ದಾರೆ.

Continue Reading

State

ಮೈಕ್ರೋ ಫೈನಾನ್ಸ್ ನಲ್ಲಿ ಸಾಲ ಮಾಡಿದವರು & ಮುಂದೆ ಮಾಡುವವರು ಈ ವಿಷಯಗಳನ್ನು ತಿಳಿದುಕೊಳ್ಳಿ

Published

on

ಮೈಕ್ರೋ ಫೈನಾನ್ಸ್ ಇಂಡಸ್ಟ್ರಿ ನೆಟ್ವರ್ಕ್ – Microfinance Industry Network : ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಮೈಕ್ರೋ ಫೈನಾನ್ಸ್ ಕಂಪನಿಯವರ ಕಿರುಕುಳ, ಹಲವು ಬಡ ಜನರ ಜೀವ ಬಳಿ ತೆಗೆದುಕೊಳ್ಳುತ್ತಿದ್ದು, ದಿನದಿಂದ ದಿನಕ್ಕೆ ಇಂತಹ ಪ್ರಕರಣಗಳು ಹೆಚ್ಚುತ್ತಲೇ ಇವೆ.

ಇದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರವು ಕೆಲವು ಮಾರ್ಗ ಸೂಚಿಗಳನ್ನು ಬಿಡುಗಡೆ ಮಾಡಿದ್ದು, ಇದರ ಬಗ್ಗೆ ಪ್ರತಿಯೊಬ್ಬರು ತಿಳಿದುಕೊಳ್ಳಲೇಬೇಕು. ಇದರಿಂದ ಮುಂದೆ ನಿಮಗೆ ಆಗುವಂತಹ ತೊಂದರೆಗಳಿಂದ ತಪ್ಪಿಸಿಕೊಳ್ಳಬಹುದು.

ಮಧ್ಯಮ ವರ್ಗದ ಅಥವಾ ಬಡಜನರ ಅತಿಯಾದ ಅವಶ್ಯಕತೆಯನ್ನು ಅವಕಾಶವಾಗಿ ಮಾಡಿಕೊಂಡು ಬಂಡವಾಳ ಮಾಡಿಕೊಳ್ಳುವ ಕೆಲವು ಮೈಕ್ರೋ ಫೈನಾನ್ಸ್ ಕಂಪನಿಗಳು, ವ್ಯಕ್ತಿಗಳು, ಅನಧಿಕೃತ ಲೇವಾದೇವಿದಾರರು ಬಡ ಜನರಿಗೆ ಜನರ ತುರ್ತು ಸಮಯದಲ್ಲಿ ಸಾಲದ ರೂಪದಲ್ಲಿ ಹಣ ನೀಡಿ, ಅದಕ್ಕೆ ಹೆಚ್ಚು ಬಡ್ಡಿ ವಿಧಿಸಿ ಶೋಷಣೆ ಮಾಡುತ್ತಿರುವದರ ಕುರಿತು ಸರ್ಕಾರದ ಮಾರ್ಗಸೂಚಿಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಸಾಲ ಮರುಪಾವತಿ ಮಾಡದೇ ಇರುವುದು ಅಪರಾಧವೆ?

ಹಲವು ವೈಯಕ್ತಿಕ ಕಾರಣಗಳಿಂದಾಗಿ ಪಡೆದಂತಹ ವೈಯಕ್ತಿಕ ಸಾಲವನ್ನು ನಿಗದಿತ ಸಮಯದಲ್ಲಿ ಮರುಪಾವತಿ ಮಾಡದಿರುವುದು ಕ್ರಿಮಿನಲ್ ಅಪರಾಧ ಆಗಿರುವುದಿಲ್ಲ. ಒಂದು ವೇಳೆ ನೀವು ಸಾಲವನ್ನು ಮರುಪಾವತಿ ಮಾಡಲು ಸಾಧ್ಯವಾಗದಿದ್ದಲ್ಲಿ, ಮೈಕ್ರೋ ಫೈನಾನ್ಸ್ ಕಂಪನಿಯವರು ನಿಮಗೆ ಅತಿಯಾದ ಕಿರುಕುಳ ಅಥವಾ ತೊಂದರೆ ನೀಡಿದ್ದಲ್ಲಿ ಈ ಕೆಳಗಿನ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಿ.

• RBI ನಿಯಮಗಳ ಅನುಸಾರ, ಸಾಲ ವಸೂಲು ಮಾಡುವವರು ಪರಸ್ಪರ ನಿರ್ಧರಿಸಿದ ಅಥವಾ ಗೊಟ್ಟುಪಡಿಸಿದ ಸ್ಥಳದಲ್ಲಿ ಮಾತ್ರ ವಸೂಲಾತಿ ಮಾಡಲು ಅವಕಾಶವಿದೆ. ಒಂದು ವೇಳೆ ಸಾಲ ಪಡೆದ ಅಭ್ಯರ್ಥಿಯು ಎರಡು ಅಥವಾ ಹೆಚ್ಚಿನ ಸಂದರ್ಭದಲ್ಲಿ ಗೊತ್ತು ಪಡಿಸಿದ ಸ್ಥಳಕ್ಕೆ ಬರಲು ವಿಫಲವಾದಲ್ಲಿ ಮಾತ್ರ ಅವರ ಮನೆಗೆ ಹೋಗಲು ಅವಕಾಶವಿರುತ್ತದೆ.

• ಮೈಕ್ರೋ ಫೈನಾನ್ಸ್ ಕಂಪನಿಗಳಿಗೆ ಅಥವಾ ಇತರೆ ಸಾಲ ನೀಡುವವರು ಹಣ ವಸೂಲಾತಿಗಾಗಿ ಯಾವುದೇ ರೀತಿಯ ಕಠಿಣ ವಿಧಾನಗಳನ್ನು ಬಳಸಲು ಅವಕಾಶವಿರುವುದಿಲ್ಲ.
• ಸಾಲಗಾರರಿಗೆ ಸಾಲ ವಸೂಲಾತಿ ಮಾಡಲು ನಿರಂತರ ಕರೆ ಮಾಡುವುದು ಅಥವಾ, ಬೆಳಿಗ್ಗೆ 9:00 ಗಂಟೆಯ ಮುಂಚೆ ಮತ್ತು ಸಾಯಂಕಾಲ 6:00 ನಂತರ ಕರೆ ಮಾಡಲು ಅನುಮತಿ ಇರುವುದಿಲ್ಲ.

 

ಒಂದು ವೇಳೆ ನಿಮಗೆ ಮೈಕ್ರೋಫೈನಾನ್ಸ್ ನವರು ಅಥವಾ ಇತರೆ ಅನಧಿಕೃತ ಸಾಲದಾರರು ಯಾವುದೇ ರೀತಿಯಲ್ಲಿ ಕಿರುಕುಳ ಕೊಟ್ಟರೆ ಸರ್ಕಾರದ 24×7 ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿ ದೂರು ನೀಡಬಹುದು.

24×7 ಟೋಲ್ ಫ್ರೀ ಸಂಖ್ಯೆ – 112 ಅಥವಾ 1902

Continue Reading

Trending

error: Content is protected !!