Connect with us

Sports

WPL 2025: ನ್ಯಾಟ್‌ ಸ್ಕಿವರ್‌ ಬ್ರಂಟ್‌ ಅರ್ಧಶಕತ; ಮುಂಬೈ 164ಕ್ಕೆ ಆಲ್‌ಔಟ್‌

Published

on

ವಡೋದರಾ: ಇಲ್ಲಿನ ಕೋಟಂಬಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಡಬ್ಲ್ಯೂಪಿಎಲ್‌ ಸೀಸನ್‌ 3ರ ಎರಡನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಮುಂಬೈ ಇಂಡಿಯನ್ಸ್‌ 164ಕ್ಕೆ ಆಲ್‌ಔಟ್‌ ಆಗಿದೆ. ಇತ್ತ ಡೆಲ್ಲಿ ಗೆಲ್ಲಲ್ಲು 165ರನ್‌ಗಳ ಅವಶ್ಯಕತೆಯಿದೆ.

ಈ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಹರ್ಮನ್‌ಪ್ರೀತ್‌ ಪಡೆ 19.1 ಓವರ್‌ಗಳಲ್ಲಿ ಆಲ್‌ಔಟ್‌ ಆಗುವ ಮೂಲಕ 164 ರನ್‌ ಬಾರಿಸಿದೆ.

ಮುಂಬೈ ಪರ ಆರಂಭಿಕರಾಗಿ ಕಣಕ್ಕಿಳಿದ ಮ್ಯಾಥ್ಯೂಸ್‌ಗೆ ಶೂನ್ಯ ಸಂಪಾದಿಸಿ ಬಂದ ಹಾದಿಯಲ್ಲೇ ಹಿಂತಿರುಗಿದರು. ಯಶ್ತಿಕಾ ಭಟಿಯಾ ಕೇವಲ 11 ರನ್‌ಗಳಿಗೆ ಸುಸ್ತಾದರು.

ತಂಡ ಆರಂಭಿಕ ಕುಸಿತ ಕಾಣುತ್ತಿದ್ದ ವೇಳೆ ಬ್ರಂಟ್‌ ಹಾಗೂ ಕೌರ್‌ ಭದ್ರ ಇನ್ನಿಂಗ್ಸ್‌ ಕಟ್ಟಿದರು. ನ್ಯಾಟ್‌ ಸ್ಕಿವರ್‌ ಬ್ರಂಟ್‌ ಔಟಾಗದೇ 59 ಎಸೆತ ಎದುರಿಸಿ 13 ಬೌಂಡರಿ ಸಹಿತ 80 ರನ್‌ ಚಚ್ಚಿದರೇ, ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಕೇವಲ 22 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್‌ಗಳೊಂದಿಗೆ 42 ರನ್‌ ಕೆಲಹಾಕಿ ತಂಡಕ್ಕೆ ಆಸರೆಯಾದರು.

ಬಳಿಕ ಬಂದ ಯಾರಿಂದಲೂ ನಿರೀಕ್ಷಿತ ಆಟ ಕಂಡುಬರಲಿಲ್ಲ. ಉಳಿದಂತೆ ಅಮೇಲಿಯಾ 9, ಸಂಜನಾ 1, ಅಮನ್ಜೋತ್‌ ಕೌರ್‌ 7, ಸಂಸ್ಕೃತಿ ಗುಪ್ತಾ 2, ಕಲಿತಾ 1, ಶಾಬ್ನಿಮ್‌ ಇಸ್ಮಾಯಿಲ್‌ ಹಾಗೂ ಸೈಕಾ ಡಕ್‌ಔಟ್‌ ಆದರು.

ಡೆಲ್ಲಿ ಪರ ಸದರ್ಲ್ಯಾಂಡ್‌ ಮೂರು, ಶಿಕಾ ಪಾಂಡೆ ಎರಡು, ಕ್ಯಾಪ್ಸಿ ಹಾಗೂ ಮಿನ್ನು ಮಣಿ ತಲಾ ಒಂದೊಂದು ವಿಕೆಟ್‌ ಕಬಳಿಸಿದರು.

 

Sports

IPL-2026ರ ಪಂದ್ಯಗಳು ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಫಿಕ್ಸ್‌: KSCA ಅಧಿಕೃತ ಘೋಷಣೆ

Published

on

ಬೆಂಗಳೂರು: ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ  ಐಪಿಎಲ್- 2026 ಪಂದ್ಯಗಳು ನಡೆಯಲಿವೆ ಎಂದು ಕೆಎಸ್‌ಸಿಎ ಅಧಿಕೃತವಾಗಿ ಘೋಷಣೆ ಮಾಡಿದೆ.

ಬೆಂಗಳೂರಿನಲ್ಲಿ ಇಂದುನಡೆದ ಸುದ್ದಿಗೋಷ್ಠಿಯಲ್ಲಿ ಕೆಎಸ್‍ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಅವರು ಈ ಮಾಹಿತಿ ಹಂಚಿಕೊಂಡಿದ್ದಾರೆ. ಈ ಬಗ್ಗೆ ಜಿಬಿಎ, ಬೆಸ್ಕಾಂ, ಜಲಮಂಡಳಿಗೂ ಮನವಿ ಮಾಡಿದ್ದೇವೆ. ಕೆಎಸ್‍ಸಿಎ ಸುರಕ್ಷತೆಗೆ ಅಧಿಕ ಆದ್ಯತೆ ನೀಡಲಿದೆ ಎಂದು ತಿಳಿಸಿದ್ದಾರೆ.

ರಾಜ್ಯ ಸರ್ಕಾರ ಇತ್ತೀಚೆಗೆ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐಪಿಎಲ್, ಅಂತಾರಾಷ್ಟ್ರೀಯ ಪಂದ್ಯಗಳನ್ನು ನಡೆಸಲು ಅನುಮತಿ ನೀಡಿತ್ತು.

Continue Reading

National

ವಿರಾಟ್‌ ಕೊಹ್ಲಿ ಈಗ ವಿಶ್ವದ ನಂ.1 ಬ್ಯಾಟ್ಸ್‌ಮನ್‌

Published

on

ಮುಂಬೈ: ರನ್‌ ಮಿಷಿನ್‌ ವಿರಾಟ್‌ ಕೊಹ್ಲಿ ತಮ್ಮ 37ನೇ ವಯಸ್ಸಿನಲ್ಲಿ ಐಸಿಸಿ ಏಕದಿನ ಶ್ರೇಯಾಂಕದಲ್ಲಿ ನಂ.1 ಬ್ಯಾಟರ್‌ ಆಗಿ ಹೊರಹೊಮ್ಮಿದ್ದಾರೆ.

ಇಂದು ಬಿಡುಗಡೆಯಾದ ನೂತನ ಐಸಿಸಿ  ಏಕದಿನ ರ‍್ಯಾಂಕಿಂಗ್‌ ಪಟ್ಟಿಯಲ್ಲಿ  785 ಅಂಕ ಪಡೆಯುವ ಮೂಲಕ ಅಗ್ರಸ್ಥಾನಕ್ಕೇರಿದ್ದಾರೆ.

2013ರಲ್ಲಿ ಮೊಟ್ಟ ಮೊದಲ ಬಾರಿಗೆ ಐಸಿಸಿ ರ‍್ಯಾಂಕಿಂಗ್‌ನಲ್ಲಿ ನಂ.1 ಸ್ಥಾನ ಪಡೆದಿದ್ದ ಕೊಹ್ಲಿ, 2018ರಲ್ಲಿ ಇಂಗ್ಲೆಂಡ್‌ ವಿರುದ್ಧ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಪುನಃ ಅಗ್ರಸ್ಥಾನಕ್ಕೆ ಜಿಗಿದಿದ್ದರು. ಆ ನಂತರ ಟಾಪ್‌ 11 ರಲ್ಲಿ ಅನೇಕ ಸ್ಥಾನಗಳಲ್ಲಿದ್ದ ಕೊಹ್ಲಿ 5 ವರ್ಷಗಳ ಬಳಿಕ ಮತ್ತೆ ನಂ.1 ಪಟ್ಟಕ್ಕೇರಿದ್ದಾರೆ.

ಕಳೆದ ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಏಕದಿನ ಸರಣಿಯಲ್ಲಿ ಮೊದಲ ಎರಡೂ ಪಂದ್ಯಗಳಲ್ಲಿ ಕೊಹ್ಲಿ ಡಕೌಟ್‌ ಆಗಿದ್ದರು. ಮೂರನೇ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ್ದರು. ಇನ್ನೂ ಡಿಸೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ 2 ಶತಕ, 1 ಅರ್ಧಶತಕ ಗಳಿಸುವ ಮೂಲಕ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಇದೀಗ ಕಿವೀಸ್‌ ವಿರುದ್ಧ ನಡೆಯುತ್ತಿರುವ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ 91 ಎಸೆತಗಳಲ್ಲಿ 93 ರನ್‌ ಗಳಿಸಿದ್ದರು. ಈ ಮೂಲಕ 785 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ.

ಮೊದಲು ಐದು ಸ್ಥಾನಗಳಲ್ಲಿರುವ ಆಟಗಾರರು ಯಾರು?

ಹೊಸದಾಗಿ ಬಿಡುಗಡೆಯಾದ ಐಸಿಸಿ ಏಕದಿನ ರ‍್ಯಾಂಕಿಗ್‌ನಲ್ಲಿ 785 ಅಂಕಗಳೊಂದಿಗೆ ಕಿಂಗ್‌ ಕೊಹ್ಲಿ ಅಗ್ರಸ್ಥಾನದಲ್ಲಿದ್ದರೆ, ಡೇರಿಲ್‌ ಮಿಚೆಲ್‌ 784, ರೋಹಿತ್‌ ಶರ್ಮಾ 775, ಇಬ್ರಾಹಿಂ ಜದ್ರಾನ್ 764, ಶುಭಮನ್‌ ಗಿಲ್‌ 725 ಅಂಕ ಅಂಕಗಳೊಂದಿಗೆ ಮೊದಲ 5 ಸ್ಥಾನಗಳಲ್ಲಿದ್ದಾರೆ.

Continue Reading

Sports

ಐಸಿಸಿ ಅಂಡರ್-19 ವಿಶ್ವಕಪ್: ಟೀಂ ಇಂಡಿಯಾ ತಂಡವನ್ನು ಪ್ರಕಟಿಸಿದ BCCI

Published

on

ಮುಂಬೈ:  2026 ರಂದು ನಡೆಯಲಿರುವ ಟಿ-20 ವಿಶ್ವಕಪ್‌ಗೆ ಬಿಸಿಸಿಐ (BCCI) ಕೆಲವೇ ದಿನಗಳ ಹಿಂದೆ ಸೂರ್ಯಕುಮಾರ್ ಯಾದವ್ ನಾಯಕತ್ವದ ಭಾರತ ತಂಡವನ್ನು ಪ್ರಕಟಿಸಿತ್ತು. ಆದರೆ ಅದಕ್ಕೂ ಮೊದಲು ಐಸಿಸಿ ಅಂಡರ್-19 ವಿಶ್ವಕಪ್  ನಡೆಯಲಿದ್ದು, ಈ ವಿಶ್ವಕಪ್‌ಗಾಗಿ ಟೀಂ ಇಂಡಿಯಾ ಯುವ ತಂಡವನ್ನು ಇದೀಗ ಪ್ರಕಟಿಸಲಾಗಿದೆ.

 

ಬಿಸಿಸಿಐ ಇಂದು ಈ ಟೂರ್ನಮೆಂಟ್‌ಗಾಗಿ 15 ಸದಸ್ಯರ ಭಾರತೀಯ ತಂಡವನ್ನು ಘೋಷಿಸಿದೆ. ಇದರಲ್ಲಿ 14 ವರ್ಷದ ಸ್ಟಾರ್ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿ ಸೇರಿದ್ದು, ಎಂದಿನಂತೆ ಆಯುಷ್ ಮ್ಹಾತ್ರೆ ಅವರಿಗೆ ಇನ್ನೊಮ್ಮೆ ತಂಡದ ನಾಯಕತ್ವ ನೀಡಲಾಗಿದೆ. ಜನವರಿ. 15 ರಂದು ಯುನೈಟೆಡ್ ಸ್ಟೇಟ್ಸ್ ವಿರುದ್ಧದ ಗುಂಪು ಪಂದ್ಯದೊಂದಿಗೆ ಟೀಂ ಇಂಡಿಯಾ ತನ್ನ ವಿಶ್ವಕಪ್ ಅನ್ನು ಆಡಲಿದೆ.

ಬಿ ಗುಂಪಿನಲ್ಲಿ ಟೀಂ ಇಂಡಿಯಾ ತಂಡ

ಅಂಡರ್-19 ವಿಶ್ವಕಪ್ ಜ. 15 ರಿಂದ ಫೆ. 6 ರವರೆಗೆ ಜಿಂಬಾಬ್ವೆ ಹಾಗೂ ನಮೀಬಿಯಾದಲ್ಲಿ ನಡೆಯಲಿದೆ. 16 ತಂಡಗಳನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ. ಐದು ಬಾರಿ ಅಂಡರ್-19 ವಿಶ್ವಕಪ್ ವಿಜೇತ ಭಾರತವನ್ನು ನ್ಯೂಜಿಲೆಂಡ್, ಯುನೈಟೆಡ್ ಸ್ಟೇಟ್ಸ್ ಮತ್ತು ಬಾಂಗ್ಲಾದೇಶದೊಂದಿಗೆ ಗ್ರೂಪ್ ಬಿಯಲ್ಲಿ ಇರಿಸಲಾಗಿದೆ.

ಟೀಂ ಇಂಡಿಯಾ ಜ. 15 ರಂದು ಅಮೆರಿಕ ವಿರುದ್ಧ ತನ್ನ ಅಭಿಯಾನವನ್ನು ಆರಂಭಿಸಲಿದೆ. ಬಳಿಕ ತಂಡವು ಜ. 17 ರಂದು ಬಾಂಗ್ಲಾದೇಶ ಹಾಗೂ ಜ. 24 ರಂದು ನ್ಯೂಜಿಲೆಂಡ್ ವಿರುದ್ಧ ಸೆಣಸಲಿದೆ. ಟೂರ್ನಿಯ ಫೈನಲ್ ಪಂದ್ಯ ಹರಾರೆಯಲ್ಲಿ ನಡೆಯಲಿದೆ.

ಆಯುಷ್ ಮ್ಹಾತ್ರೆ (ನಾಯಕ), ವಿಹಾನ್ ಮಲ್ಹೋತ್ರಾ (ಉಪನಾಯಕ), ವೈಭವ್ ಸೂರ್ಯವಂಶಿ, ಆರನ್ ಜಾರ್ಜ್, ವೇದಾಂತ್ ತ್ರಿವೇದಿ, ಅಭಿಜ್ಞಾನ್ ಕುಂಡು, ಹರ್ವಂಶ್ ಸಿಂಗ್, ಆರ್‌ಎಸ್ ಅಂಬರೀಶ್, ಕಾನಿಷ್ಕ್ ಚೌಹಾಣ್, ಖಿಲಾನ್ ಪಟೇಲ್, ಮೊಹಮ್ಮದ್ ಎನಾನ್, ಹೆನಿಲ್ ಪಟೇಲ್, ಡಿ.ದೀಪೇಶ್, ಕಿಶನ್ ಕುಮಾರ್ ಸಿಂಗ್, ಉದ್ಧವ್ ಮೋಹನ್ ಅವರು ಟೀಂ  ಇಂಡಿಯಾ ಪರ ಆಡಲಿದ್ದಾರೆ.
Continue Reading

Trending

error: Content is protected !!