Connect with us

Chamarajanagar

ಜೆಡಿಎಸ್ ಪಕ್ಷದ ಮುಖಂಡರ ವರ್ತನೆ ವಿರುದ್ಧ ಕಾಂಗ್ರೆಸ್ ಮುಖಂಡರು ಪತ್ರಿಕಾಗೋಷ್ಠಿ.

Published

on

ಮಹದೇವ್ ಸಿಸಿ ಭೇರ್ಯ.

ಕೆ ಆರ್ ನಗರ- ಚಂದಗಾಲು ಗ್ರಾಮದ ಘಟನೆ ಬಗ್ಗೆ ತಾಲೂಕಿನ ಎಲ್ಲಾ ಜನರಿಗೆ ವಿಷಾದವಿದೆ. ಆದರೆ ಜೆಡಿಎಸ್ ಮುಖಂಡರು ಈ ಘಟನೆಗೆ ಪರೋಕ್ಷವಾಗಿ ವಿವಾದಾತ್ಮಕ ಪ್ರಚೋದನೆ ಉಂಟಾಗುವ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ಸೈಯದ್ ಜಾಬಿರ್ ಆರೋಪಿಸಿದರು. ಕೆ ಆರ್ ನಗರ ಪಟ್ಟಣದ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಈಗಾಗಲೇ ಸಾವನ್ನಪ್ಪಿದ ಕುಟುಂಬಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಮಹದೇವಪ್ಪ ಅವರೊಂದಿಗೆ ಮಾತನಾಡಿ ಪರಿಹಾರವನ್ನು ಕೊಡಿಸಿದ್ದಾರೆ. ಇನ್ನೂ ಹೆಚ್ಚು ಪರಿಹಾರ ಕೊಡಿಸಲು ಶಾಸಕ ರವಿಶಂಕರ್ ನಿರಂತರ ಪ್ರಯತ್ನದಲ್ಲಿದ್ದಾರೆ ಆದರೆ ಇಲ್ಲ ಸಲ್ಲದ ಆರೋಪ ಮಾಡಿಕೊಂಡು ನಮ್ಮ ಸರ್ಕಾರ ಕೊಟ್ಟಿರುವ ಪರಿಹಾರವನ್ನು ನಾನೇ ಕೊಡಿಸಿದ್ದು ಎಂದು ಜೆಡಿಎಸ್ ಮುಖಂಡರು ಹೇಳಿಕೊಂಡು ತಿರುಗುತ್ತಿರುವುದು ಎಷ್ಟು ಸರಿ ಎಂದರು.


ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳನ್ನು ಸಮಾಜದ ಸ್ವಾಮೀಜಿಗಳೊಂದಿಗೆ ಶಾಸಕರು ಭೇಟಿ ಮಾಡಿ ಧೈರ್ಯ ತುಂಬಿದ್ದಾರೆ ಎಂದರು.

ಉಮೇಶ್ ಇದರ ಬಗ್ಗೆ ಪ್ರಶ್ನೆ ಮಾಡುವ ನೈತಿಕತೆ ಇಲ್ಲ. ಅರ್ಕೇಶ್ವರ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಕೊಟ್ಟಿರುವ ನಿವೇಶನ ನಿಮ್ಮ ಅಧಿಕಾರ ಮತ್ತು ನಿಮ್ಮ ಮಾಜಿ ಶಾಸಕ ಸಾ ರಾ ಮಹೇಶ್ ಅವಧಿಯಲ್ಲಿ ಏನು ಮಾಡಿದ್ದೀರಿ ಎಂದು ಬಹಿರಂಗಪಡಿಸಿ ಎಂದು ಸವಾಲು ಹಾಕಿದರು.

ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಎಂ ಟಿ ಕುಮಾರ್ ಬ್ಲಾಕ್ ಮೇಲ್ ರಾಜಕಾರಣಿ. 2018 ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಂದ ಅವರು ರವಿಶಂಕರ್ ಮತ್ತು ದೊಡ್ಡ ಸ್ವಾಮಿಗೌಡರ ಹತ್ತಿರ ಎಷ್ಟು ಸಹಾಯ ಪಡೆದಿದ್ದಾರೆ. ಆಗ ಸಾ ರಾ ಮಹೇಶ್ ಅವರನ್ನು ಯಾವ ಯಾವ ಭಾಷೆಯಲ್ಲಿ ರೀತಿ ಟೀಕಿಸಿದ್ದಾರೆ ಮತ್ತೊಮ್ಮೆ ತಿಳಿಸಿ ಸ್ವಾಮಿ. ಈಗ ರವಿಶಂಕರ್ ಅವರನ್ನ ಟೀಕಿಸುತ್ತಿದ್ದಿರೀ ಇದು ತಾಲೂಕಿನ ಜನರಿಗೆ ನಿಮ್ಮ ವ್ಯಕ್ತಿತ್ವದ ಬಗ್ಗೆ ಗೊತ್ತಿದೆ ಬಿಡ್ರಿ ಎಂದರು.

ಜೆಡಿಎಸ್ ಬಿಜೆಪಿ ಮೈತ್ರಿಯಿಂದ ಒಕ್ಕಲಿಗ ಮತ್ತು ಲಿಂಗಾಯಿತ ಮತಗಳು ಒಂದಷ್ಟು ಹೆಚ್ಚಾಗಿರುವುದರಿಂದ ತಾಲೂಕಿನಲ್ಲಿ ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿ ಅವರಿಗೆ ಒಂದಷ್ಟು ಮತಗಳ ಲೀಡ್ ಬಂದಿದೆ. ಅದೇ ಅವರ ಮಗ ನಿಖಿಲ್ ಕುಮಾರಸ್ವಾಮಿ ಅಭ್ಯರ್ಥಿಯಾಗಿದ್ದಾಗ ಮಂಡ್ಯದಲ್ಲಿ ಏಳು ಶಾಸಕರು. ಕುಮಾರಸ್ವಾಮಿ ಹಾಲಿ ಮುಖ್ಯಮಂತ್ರಿ. ಸಾ ರಾ ಮಹೇಶ್ ಸೂಪರ್ ಸಿಎಂ ಆಗಿದ್ದರು ಆಗ ಬಂದ ಲೀಡ್ ಎಷ್ಟು ಸ್ವಾಮಿ ಎಂದು ಟೀಕಿಸಿದರು.

ನಮ್ಮ ಶಾಸಕರು ಗುದ್ದಲಿ ಪೂಜೆ ಮಾಡುತ್ತಿರುವುದು ಹಿಂದಿನ ಶಾಸಕರ ಅನುದಾನ ಅಲ್ಲ. ನಮ್ಮ ಶಾಸಕರು ತಂದಿರುವ ಅನುದಾನದಲ್ಲೇ ಗುದ್ದಲಿ ಪೂಜೆ ಮಾಡುತ್ತಿದ್ದಾರೆ ಜೆಡಿಎಸ್ ಪಕ್ಷದ ಮುಖಂಡರಿಗೆ ಮಾಹಿತಿ ಕೊರತೆ ಇದೆ ಇದನ್ನ ತಿಳಿದುಕೊಳ್ಳಲಿ ಎಂದರು

ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಎಸ್ ಮಾದೇವ್, ನಗರ ಕಾಂಗ್ರೆಸ್ ಅಧ್ಯಕ್ಷ ಎಂ ಜೆ ರಮೇಶ್, ಸಾಲಿಗ್ರಾಮ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯ್ ಶಂಕರ್, ವಕೀಲ ಮೂರ್ತಿ ಇದ್ದರ

Continue Reading
Click to comment

Leave a Reply

Your email address will not be published. Required fields are marked *

Chamarajanagar

ಮುತ್ತಿಗೆ ಗ್ರಾಮದಲ್ಲಿ ಹಾವು ಪತ್ತೆ: ಸ್ನೇಕ್ ಚಾಂಪು ತಂಡದಿಂದ ಸುರಕ್ಷಿತವಾಗಿ ಹಿಡಿತ

Published

on

ಚಾಮರಾಜನಗರ: ತಾಲೂಕಿನ ಮುತ್ತಿಗೆ ಗ್ರಾಮದ ಕೆಂಪೇಗೌಡ ಅವರ ಮನೆಯಲ್ಲಿ ಹಾವು ಕಾಣಿಸಿಕೊಂಡ ಘಟನೆ ಇಂದು ಸಂಭವಿಸಿದೆ.

ಮನೆಯೊಳಗೆ ಹಾವು ಇರುವುದನ್ನು ಗಮನಿಸಿದ ಕುಟುಂಬದವರು ಆತಂಕಗೊಂಡು ತಕ್ಷಣ ಚಾಮರಾಜನಗರದ ಸ್ನೇಕ್ ಚಾಂಪು ಅವರಿಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ಪಡೆದ ಸ್ನೇಕ್ ಚಾಂಪು ತಂಡದವರು ಸ್ಥಳಕ್ಕೆ ಧಾವಿಸಿ, ಹಾವನ್ನು ಸುರಕ್ಷಿತವಾಗಿ ಹಿಡಿದು ಅರಣ್ಯ ಪ್ರದೇಶಕ್ಕೆ ಬಿಡಲಾಯಿತು. ಈ ಕಾರ್ಯಾಚರಣೆಯಿಂದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

ಈ ಸಂದರ್ಭದಲ್ಲಿ ಕಾರ್ಗೋ ಮಹದೇವಸ್ವಾಮಿ ಮಾತನಾಡಿ, ನಮ್ಮ ಗ್ರಾಮದೊಳಗೆ ಅಥವಾ ಸುತ್ತಮುತ್ತ ಎಲ್ಲಿಯಾದರೂ ಹಾವು ಕಂಡುಬಂದರೆ ಭಯಪಡದೇ ತಕ್ಷಣ ತಿಳಿಸಿ. ಹಾವುಗಳನ್ನು ಸುರಕ್ಷಿತವಾಗಿ ಹಿಡಿದು ಜನರ ಪ್ರಾಣ ರಕ್ಷಿಸುವುದು ನಮ್ಮ ಸಮಾಜ ಸೇವೆಯ ಭಾಗ ಎಂದು ತಿಳಿಸಿದರು.

Continue Reading

Chamarajanagar

ಕೌಶಲ್ಯಾಧಾರಿತ ತರಬೇತಿಗೆ ಹೆಚ್ಚು ಆದ್ಯತೆ ನೀಡಿ: ಶಾಸಕ ಸಿ.ಪುಟ್ಟರಂಗಶೆಟ್ಟಿ ಸಲಹೆ

Published

on

ಸಿಇಟಿ ಆನ್‌ಲೈನ್‌ ಉಚಿತ ತರಬೇತಿ, ಪುಸ್ತಕ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ

ಚಾಮರಾಜನಗರ: ಪ್ರಸ್ತುತ ದಿನಮಾನಗಳಲ್ಲಿ ಸಮಾಜದಲ್ಲಿ ಏನಾದರೂ, ಬದಲಾವಣೆ ಕಾಣುವಂತಾಗಿದ್ದರೆ ಅದು ಶಿಕ್ಷಣದಿಂದ ಮಾತ್ರ ಎಂದು ಎಂಎಸ್‌ಐಎಲ್ ಅಧ್ಯಕ್ಷ, ಶಾಸಕ ಸಿ.ಪುಟ್ಟರಂಗಶೆಟ್ಟಿ ಹೇಳಿದರು.

ನಗರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ನಡೆದ ಸಿಇಟಿ ಉಚಿತ ಆನ್‌ಲೈನ್ ತರಬೇತಿ ಹಾಗೂ ಎಂಎಸ್‌ಐಎಲ್ ವತಿಯಿಂದ ಸಿಇಟಿ ಪುಸ್ತಕ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ತಮ್ಮ ಕುಟುಂಬದಲ್ಲಿ ಸಹೋದರರು ಶಿಕ್ಷಣಕ್ಕೆ ಆದ್ಯತೆ ಕೊಡಲಿಲ್ಲ, ನಾನು ಮಾತ್ರ ಓದಲೇಬೇಕು ಎಂಬ ಹಠತೊಟ್ಟು, ಉನ್ನತ ಶಿಕ್ಷಣ ಪಡೆಯುವ ಮೂಲಕ ಇಂದು ಉನ್ನತಮಟ್ಟದಲ್ಲಿ ನಿಂತಿದ್ದೇನೆ. ಇದಕ್ಕೆಲ್ಲ ಶಿಕ್ಷಣ ಕಾರಣ ಎಂದರು. ಇಂದು ವೈದ್ಯಕೀಯ ಶಿಕ್ಷಣ, ಎಂಜಿನಿಯರಿಂಗ್ ಪ್ರವೇಶ ಪಡೆಯಬೇಕಾದರೆ ಸಿಇಟಿ. ನೀಟ್, ಜೆಇಇ ತರಬೇತಿ ಪಡೆಯಲೇಬೇಕು ಎಂದು ತಿಳಿಸಿದರು.

ವಿದ್ಯಾರ್ಥಿಗಳು ಕೇವಲ ಶಿಕ್ಷಣ ಪಡೆದರೆ ಸಾಲದು, ವಿವಿಧ ಕೌಶಲ್ಯಾಧಾರಿತ ತರಬೇತಿ ಪಡೆಯಬೇಕು, ಬದನಗುಪ್ಪೆ-ಕೆಲ್ಲಂಬಳ್ಳಿ ಕೈಗಾರಿಕಾವಸಾಹತು ಪ್ರದೇ಼ಶ಼ದಲ್ಲಿ ವಿವಿಧ ಪ್ರತಿಷ್ಠಿತ ಕೈಗಾರಿಕೆಗಳು ಸ್ಥಾಪನೆಯಾಗಿದ್ದು, ತರಬೇತಿಗೆ ತಕ್ಕ ಉದ್ಯೋಗಪಡೆಯಬಹುದಾಗಿದೆ ಎಂದರು.

ಚೂಡಾ ಅಧ್ಯಕ್ಷ ಮಹಮದ್ ಅಸ್ಗರ್ ಮುನ್ನಾ ಮಾತನಾಡಿ, ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಬಹುತೇಕ ವ್ಯಾಸಂಗ ಮಾಡುವವರು ಬಡವರ್ಗದ ವಿದ್ಯಾರ್ಥಿಗಳೇ ಆಗಿದ್ದಾರೆ, ಸರ್ಕಾರದಿಂದ ಸಿಗಬಹುದಾದ ಸೌಲಭ್ಯಗಳನ್ನು ಪಡೆದುಕೊಂಡು, ತಾವು ಅಂದುಕೊಂಡ ಗುರಿಮುಟ್ಟಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಜಯಕುಮಾರ್, ನಾರಾಯಣ, ಕೇಶವನ್, ನಿವೃತ್ತ ಪ್ರಾಂಶುಪಾಲ ಸೋಮಣ್ಣ, ಸಂಪನ್ಮೂಲವ್ಯಕ್ತಿಗಳಾದ ಮಾದೇಶ್, ದೀಪಕ್, ಮಲ್ಲಿಕಾರ್ಜುನ್, ಚೂಡಾ ಸದಸ್ಯ ರಾಜೇಂದ್ರ, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎ.ಎಸ್.ಗುರುಸ್ವಾಮಿ ಹಾಗೂ ಉಪನ್ಯಾಸಕರು, ವಿದ್ಯಾರ್ಥಿಗಳು ಹಾಜರಿದ್ದರು.

Continue Reading

Chamarajanagar

ಚಿರತೆ ದಾಳಿ: ಹಸು ಬಲಿ ಗ್ರಾಮಸ್ಥರಲ್ಲಿ ಆತಂಕ

Published

on

ಚಾಮರಾಜನಗರ: ತಾಲೂಕಿನ ಇರಸವಾಡಿ ಗ್ರಾಮದಲ್ಲಿ ಚಿರತೆ ದಾಳಿ ನಡೆಸಿರುವ ಘಟನೆ ಸಂಭವಿಸಿದೆ.

ಭಾನುವಾರ ತಡ ರಾತ್ರಿಯಲ್ಲಿ ಗ್ರಾಮದ ರಂಗಸ್ವಾಮಿ ಶೆಟ್ಟಿ ಅವರ ಕೊಟ್ಟಿಗೆಗೆ ನುಗ್ಗಿದ ಚಿರತೆ, ಹಸುವಿನ ಹಿಂದಿನ ಭಾಗವನ್ನು ಸಂಪೂರ್ಣವಾಗಿ ತಿಂದು ಬಲಿ ಪಡೆದಿದೆ.

ಬೆಳಗಿನ ಜಾವ ವಿಷಯ ತಿಳಿದು ಗ್ರಾಮಸ್ಥರಲ್ಲಿ ಭೀತಿ ಮತ್ತು ಆತಂಕ ಉಂಟಾಗಿದೆ. ಈ ಭಾಗದಲ್ಲಿ ಚಿರತೆ ಕಾಣಿಸಿಕೊಂಡಿರುವುದು ಗ್ರಾಮಸ್ಥರಲ್ಲಿ ಆತಂಕ ಹೆಚ್ಚಿಸಿದೆ.

ಚಿರತೆ ಮರುದಾಳಿ ನಡೆಸುವ ಸಾಧ್ಯತೆ ಇರುವುದರಿಂದ ಅರಣ್ಯ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕು. ಗ್ರಾಮದಲ್ಲಿ ಗಸ್ತು ಹೆಚ್ಚಿಸಬೇಕು ಹಾಗೂ ಚಿರತೆಯನ್ನು ಸೆರೆಹಿಡಿಯುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Continue Reading

Trending

error: Content is protected !!