Connect with us

Hassan

ಮುದ್ದಣ ಕವಿಯ ಶ್ರೀ ರಾಮ ಪಟ್ಟಾಭಿಷೇಕ ಚಿರಿತೆ ಧರ್ಮಾಕಾವ್ಯವಾಗಿದೆ ಜಿಲ್ಲಾಧ್ಯಕ್ಷೆ ಚೈತ್ರ ನಾಯಕರಹಳ್ಳಿ

Published

on

ಹಾಸನ: ಶ್ರೀ ರಾಮ ಪಟ್ಟಾಭಿಷೇಕ ಚಿರಿತೆ ಧರ್ಮಾಕಾವ್ಯವಾಗಿದ್ದು, ಆ ಕಾಲ ಅತ್ಯಂತ ಸುಭಿಕ್ಷವಾಗಿದ್ದು, ನ್ಯಾಯ, ನೀತಿಗಳಿಂದ ಕೂಡಿತ್ತು. ರಾಮರಾಜ್ಯದ ಪರಿಕಲ್ಪನೆ ಇಂದಿಗೂ ರೂಡಿಯಲ್ಲಿದೆ. ನಾವೆಲ್ಲರೂ ಶ್ರೀ ರಾಮನ ಆದರ್ಶಗಳನ್ನು ಪಾಲಿಸೋಣ ಎಂದು ಜಿಲ್ಲಾ ವಚನ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷರಾದ ಚೈತ್ರ ನಾಯಕರಹಳ್ಳಿ ತಿಳಿಸಿದರು.

ನಗರದ ಶಾಂತಿನಗರದಲ್ಲಿರುವ ಹಲ್ಮಿಡಿ ಶಾಸನ ವೃತ್ತದ ಕವಿರಾಜಮಾರ್ಗ ರಸ್ತೆಯ ಚಾಣಕ್ಯ ಸಭಾಂಗಣದಲ್ಲಿ ಜಿಲ್ಲಾ ವಚನ ಸಾಹಿತ್ಯ ಪರಿಷತ್ತು ಮತ್ತು ಕರ್ನಾಟಕ ಗಮಕ ಕಲಾ ಪರಿಷತ್ತು ಜಿಲ್ಲಾ ಘಟಕ ಸಹಯೋಗದಲ್ಲಿ ಆಯೋಜಿಸಿದ್ದ ಅಯೋಧ್ಯೆಯಲ್ಲಿ ಶ್ರೀ ಬಾಲರಾಮ ಪ್ರತಿಷ್ಠಾಪನೆ ಪ್ರಯುಕ್ತ ಶ್ರೀ ಮುದ್ದಣ ಕವಿಯ ಶ್ರೀ ರಾಮ ಪಟ್ಟಾಭಿಷೇಕ ಆಯ್ದ ಭಾಗದ ಕಾವ್ಯ ಗಾಯನ ಮತ್ತು ವ್ಯಾಖ್ಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶ್ರೀ ರಾಮ ಅಯೋಧ್ಯೆಯಲ್ಲಿ ಪುನ: ನೆಲೆ ಗೂಳ್ಳುತ್ತಿರುವ ಪುಣ್ಯ ಸಂದರ್ಭದಲ್ಲಿ ಗಮಕ ಕ್ಷೇತ್ರಕ್ಕೆ ಚಿರಂತನ ಸೇವೆ ಸಲ್ಲಿಸಿದ ಹಿರಿಯರು ನಮ್ಮ ಕುಟೀರಕ್ಕೆ ಪಾದಾರ್ಪಣೆ ಮಾಡಿ ಶ್ರೀ ರಾಮನ ಕಥಾನಕವನ್ನು ಹೇಳುವಂತಾಹ ಸೌಭಾಗ್ಯ, ಕೇಳುವಂತಹ ಭಾಗ್ಯ ನಮ್ಮದಾಗಿದೆ. ಶ್ರೀ ರಾಮನ ಆಳ್ವಿಕೆಯ ಕಾಲ ಅತ್ಯಂತ ಸುಭಿಕ್ಷವಾಗಿದ್ದು, ನ್ಯಾಯ, ನೀತಿಗಳಿಂದ ಕೂಡಿತ್ತು ಎಂದರು. ರಾಮರಾಜ್ಯದ ಪರಿಕಲ್ಪನೆ ಇಂದಿಗೂ ರೂಡಿಯಲ್ಲಿದೆ. ನಾವೆಲ್ಲರೂ ಶ್ರೀರಾಮನ ಆದರ್ಶಗಳನ್ನು ಪಾಲಿಸೋಣ ಎಂದು ಕರೆ ನೀಡಿದರು.

. ವ್ಯಾಖ್ಯಾನವನ್ನು ಶ್ರೀಮತಿ ಸುಷ್ಮಸಂತೋಷ ಗಾಯನ ಮಾಡುತ್ತಾ. ಶ್ರೀರಾಮನ ಅದರ್ಶ ಶರೀರ, ಬುದ್ದಿ, ಅದ್ಮಾತ್ಮವನ್ನು ಒಳಗೊಂಡ ಕಾವ್ಯ ರಾಮಯಾಣ “ರಾಮೋ ವಿಗ್ರಹವಾನ್ ಧರ್ಮ” ಎಂಬ ಧರ್ಮವೇ ಅದ ಕಥೆ ರಾಮನ ಕಥೆ ಹೇಳಿದ ಮುದ್ದಣನ ಸ್ಮರಿಸಿ ಪುಣ್ಯಕಥೆ ಹೇಳಿದ ಬಡಕವಿ ಮುದ್ದಣ.

ಶ್ರೀ ಲಂಕೆಯಲ್ಲಿ ವಿಭೂಷಣನಿಗೆ ಪಟ್ಟಾಭಿಷೇಕ ಮಾಡಿ ಪುಷ್ಪಕ ವಿಮಾನದಲ್ಲಿ ಹೋರಟು ರಾಮ ಬರುವುದು ಸ್ವಲ್ಪ ತಡವಾದರು ಭರತನ ಅಂತ್ಯವಾಗುವುದು ಎಂದು ತಿಳಿದ ರಾಮನು ಆಂಜನೇಯನನ್ನು ನಂದಿಗ್ರಾಮಕ್ಕೆ ಕಳುಹಿಸುವ ಸಂದರ್ಭದಿಂದ ವ್ಯಾಖ್ಯಾನ ಆರಂಭವಾಯಿತು ಎಂದರು. ರಾಮನಿಲ್ಲದ ನಾಡು ಕಾಡು ಹೌದೆಂದು ತಿಳಿದವ ಭರತ ರಾಮನ ಪಾದುಕೆಯನ್ನು ನಮಿಸಿ ಅಗ್ನಿಗೆ ಹಾರಲು ಸಜ್ಜಾಗಿದ್ದಾನೆ. ರಾಮನ ಆಗಮನದ ವಾರ್ತೆ ಮುಟ್ಟಿಸುತ್ತಾ ಆಗ್ನಿಗೆ ಹಾರಲು ಸಿದ್ದನಾದ. ಭರತನನ್ನು ಎಚ್ಚರಿಸಿದ್ದಾನೆ. ಅಮಿತವಾದ ಆನಂದವೆ ರಾಮ, ಕಾಮವಿಲ್ಲದೆ ಹೋದವರು ಬ್ರಹ್ಮನಂದನಾ ನಾಯಕನಾದ ರಾಮ ಬರುತ್ತಲ್ಲಿದ್ದಾನೆ ಎಂಬ ವಿವರಣೆಯನ್ನು ಅದ್ಬುತ ವಾಗಿ ನುಡಿದರು.ಸಂಶಯ ಮಾಡಿದ ಭರತನ ಹತ್ತಾರು ಪ್ರಶ್ನೆಗಳಿಗೆ ಉತ್ತರಿಸುವ ಪ್ರಸಂಗವಂತ್ತು ಸ್ವಾದಿಷ್ಟ ವಾಗಿ ಅಭಿವ್ಯಕ್ತ ಪಡಿಸಿದ ವ್ಯಾಖ್ಯಾನಕಾರರು ಪ್ರೇಕ್ಷಕರ ಮನಗಳನ್ನ್ನು ವಶಪಡಿಸಿಕೊಂಡರು.ಮುದ್ದಣ ಕವಿಯ ಭಾಷೆ,ಶಬ್ದ ಪ್ರಪಂಚವನ್ನೇ ಕಣ್ಣಿಗೆ ಬಿಳುವ ಹಾಗೆ ರಾಮನನ್ನು ನೋಡಲು ಉತ್ಸುಕಲಾಗಿ ಹೊರಡುವ ಚಿತ್ರಣವಂತ್ತು ವಿಶೆಷತೆಯನ್ನು ಪ್ರತಿಬಿಂಬಸಿತು.ಇಟ್ಟು ತೊಟ್ಟು ಪುಟ್ಟಕ್ಕಳಾದ ಶೃಂಗಾರ ಗೊಂಡ ಹೆಣ್ಣಿನ ಚಿತ್ರಣವಂತು ಹಾಸ್ಯ ಮಿಶ್ರಿತ ವಾಗಿ ಸಹೃದಯರನ್ನು ಹಲ್ಲಾದಿಸುವಂತಾಹ ಸಂದರ್ಭ ಸೃಷ್ಟಿಯನ್ನೇ ಮೂಡಿತು ಎಂದು ಹೇಳಿದರು. ಬೆಳಗ್ಗೆ ಮುನ್ನ ಸೂರ್ಯಾಸ್ತ ಚಿತ್ರಣ ಮತ್ತು ಪಟ್ಟಾಭಿಷೇಕದ ಸಿದ್ದತೆಗಳು ಸೂರ್ಯೊಧಯ ವೇಳೆಗೆ ಅಯೋಧ್ಯೆಯನ್ನು ನೋಡಲು ಬಂದವನಂತೆ ಕಂಡಿತು. ಸೂರ್ಯೋದಯಕ್ಕೆ ಪಕ್ಷಿಗಳ ಕಲರವದ ಸಂಭ್ರಮ ಕಾಣುತ್ತಿತ್ತು, ಅತುರಾತುರಕ್ಕೆ ದಿಕ್ಕು ದಿಕ್ಕುಗಳಲ್ಲಿ ಸಡಗರ ತುಂಬಿರುವ ಅಯೋಧ್ಯೆಯಲ್ಲಿ ಭಕ್ತಿ ಪ್ರೀತಿ ಗೌರವಗಳಿಂದ ಬಂದ ರಾಮನು ಎಲ್ಲಾರಿಗೆ ನಮಸ್ಕರಿಸಿದನ್ನು. ರಾಮ ಪಟ್ಟವೇರುವಂತೆ ಹೇಳಿ ವಂಶದಲ್ಲಿ ರಾಜ ಲಾಂಛನ ಕಿರೀಟ ಮುದ್ರ ಉಂಗುರಗಳನ್ನು ತೋಡಿಸಿ ಗಂಧಾಕ್ಷತೆಗಳಿಂದ ಆಶೀರ್ವಾದಿಸಿ ಶ್ರೀ ರಾಮ ಪಟ್ಟಾಭಿಷೇಕ್ತನಾದ ಸಂದರ್ಭವಂತ್ತು ಹೊಸಗನ್ನಡ ಸಾಹಿತ್ಯದ ಮುಗ್ಗೋಳಿಯಾದ ಮುದ್ದಣನ ಶ್ರೀ ರಾಮಸ್ಮರಣೆಗೆ ಸಾಕ್ಷಿಯಾಗಿದೆ ಎಂದು ತಿಳಿಸಿದರು.

ಈ ಕಾರ್ಯಕ್ರಮದ ಕವಿ ಮುದ್ದಣನವರ ಶ್ರೀ ರಾಮ ಪಟ್ಟಾಭಿಷೇಕ ಕಾವ್ಯಭಾಗವನ್ನು ಗಮಕರತ್ನಾಕರ ಶ್ರೀಮತಿ ಗಂಗಮ್ಮ ಕೇಶವಮೂರ್ತಿ ಗಮಕ ವ್ಯಾಖ್ಯಾನ ಮಾಡಿದರು

ಕಾರ್ಯಕ್ರಮದಲ್ಲಿ ಗಮಕ ಕವಿ ಗೋಷ್ಠಿಯ ಗಣೇಶ ಉಡುಪ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ, ಗೌರವಾಧ್ಯಕ್ಷ ರವಿನಾಕಲಗೂಡು, ನಿಕಟಪೂರ್ವ ಗೌರವ ಕಾರ್ಯದರ್ಶಿಗಳಾದ ಕಲ್ಲಹಳ್ಳಿ ಹರೀಶ್, ಕತ್ತಿಮಲ್ಲೇನಹಳ್ಳಿ ಪರಮೇಶ, ಪ್ರೊ.ಅನಸೂಯ, ವೀರಾಪುರ ನಾಗರಾಜು, ಲಕ್ಷ್ಮೀ ದಾಸಪ್ಪ, ಸಾಹಿತಿ ಚಂದ್ರಕಾಂತ ಪಡೆಸೂರು, ಭೂವನಹಳ್ಳಿ ತಮ್ಮಯಣ್ಣ, ಕಾಂಚನ ಮಾಲಾ, ಸೇವಾದಳದ ವಿ.ಎಸ್. ರಾಣಿ ಮುಂತಾದವರು ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Hassan

ವಿಶ್ವ ಪರಿಸರ ದಿನಾಚರಣೆ ಆಚರಿಸಿದ ಪೋದಾರ್ ಪರಿಸರ ಸ್ನೇಹಿಗಳು

Published

on

ಹಾಸನ: ಬಿ. ಕಾಟಿಹಳ್ಳಿ ದೂರವಾಣಿ ನಗರದಲ್ಲಿ ಹೊಸದಾಗಿ ನಿರ್ಮಿಸಿರುವ ಪಂಚಮುಖಿ ಪಾರ್ಕ್ ಉದ್ಯಾನದಲ್ಲಿ “ವಿಶ್ವ ಪರಿಸರ ದಿನಾಚರಣೆ”ಯ ಅಂಗವಾಗಿ ಪೋದಾರ್ ಪರಿಸರ ಸ್ನೇಹಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಗಣ್ಯರು ಭಾಗಿಯಾಗಿ ಗಿಡ ನೆಟ್ಟು ಸಸ್ಯೋತ್ಸವ ಆಚರಣೆ ಅರ್ಥ ಪೂರ್ಣವಾಗಿ ಆಚರಿಸಲಾಯಿತು.

Continue Reading

Hassan

ಬಿರುಗಾಳಿ ಸಹಿತ ಮಳೆಗೆ ಭಾರೀ ಪ್ರಮಾಣದಲ್ಲಿ ಭೂಕುಸಿತ

Published

on

ಹಾಸನ : ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆಯ ಅಬ್ಬರ ಜೋರಾಗಿದ್ದು, ಬಿರುಗಾಳಿ ಸಹಿತ ಧಾರಾಕಾರ ಮಳೆಗೆ ಭಾರೀ  ಪ್ರಮಾಣದಲ್ಲಿ ಭೂಕುಸಿತ ಉಂಟಾಗಿದೆ.

ಈ ಘಟನೆ ಸಕಲೇಶಪುರ ತಾಲ್ಲೂಕಿನ, ಹೆಗ್ಗದ್ದೆ ಗ್ರಾಮದ ಬಳಿ ಶಿರಾಡಿಘಾಟ್ ರಸ್ತೆ ಎನ್‌ಎಚ್‌- 75 ರಲ್ಲಿ ನಡೆದಿದೆ. ಮೊದಲೇ ಭೂಕುಸಿತವಾಗಿದ್ದರಿಂದ ಒಂದು ಬದಿ ರಸ್ತೆ ಸಂಚಾರ ಬಂದ್ ಮಾಡಿದ್ದ ಅಧಿಕಾರಿಗಳು ಇಟಾಚಿ ಮೂಲಕ ನಡೆಯುತ್ತಿದ್ದ ಮಣ್ಣು ತೆರವು ಕಾರ್ಯಾಚರಣೆ ಮಾಡುತ್ತಿದ್ದರು. ಹೀಗಾಗಿ  ವಾಹನಗಳ ಸಂಚಾರ ಬಂದ್ ಮಾಡಲಾಗಿತ್ತು.

ಈ ವೇಳೆ ಮತ್ತೆ ದೊಡ್ಡ ಪ್ರಮಾಣದಲ್ಲಿ ಕುಸಿದ ಭೂಮಿ ಮರಗಳ ಸಮೇತ ಕುಸಿದು ರಸ್ತೆ ಪೂರ್ತಿ ಜಖಂಗೊಂಡಿದೆ. ಇನ್ನೂ ವಾಹನಗಳ ಸಂಚಾರವನ್ನು ಬಂದ್  ಮಾಡಿದ್ದರಿಂದ  ದೊಡ್ಡ ಅನಾಹುತ ತಪ್ಪಿದೆ.

Continue Reading

Hassan

ಮರಿ ಸತ್ತು ಮೂರು ದಿನವಾದರೂ ಸ್ಥಳ ಬಿಟ್ಟು ಕದಲದ ತಾಯಿಯಾನೆ

Published

on

ಅರೇಹಳ್ಳಿ: ತನ್ನ ಮರಿ ಸತ್ತು ಮೂರು ದಿನ ಕಳೆದರೂ ತಾಯಿಯಾನೆ ತಾನು ಹೋದಲೆಲ್ಲಾ ಮೃತ ಮರಿಯಾನೆಯನ್ನು ತನ್ನೊಂದಿಗೆ ಎಳೆದುಕೊಂಡು ಹೋಗುತ್ತಿರುವ ಮನಕಲಕುವ ಘಟನೆ ಬೇಲೂರು ತಾಲೂಕು ಅರೇಹಳ್ಳಿ ಹೋಬಳಿಯ ಶಿರಗುರ ಗ್ರಾಮದ ಜಾಕ್‌ನಳ್ಳಿ ಎಸ್ಟೇಟ್ ಬಳಿ ನಡೆದಿದೆ.

ಘಟನೆ ಹಿನ್ನೆಲೆ:

ಕಳೆದ ಶನಿವಾರ ಗರ್ಭಿಣಿ ಹೆಣ್ಣಾನೆ ಮರಿಯಾನೆಗೆ ಜನ್ಮ ನೀಡಿದೆ. ಆದರೆ ಹುಟ್ಟುವ ವೇಳೆ ಮರಿಯು ಸ್ಥಳದಲ್ಲೆ ಮೃತಪಟ್ಟಿದೆ. ತಾಯಿ ಆನೆ ತನ್ನ ಮರಿ ಜೀವಂತವಾಗಿದೆ ಎಂದು ತಿಳಿದು ಕಾಲಿನಿಂದ ಒದ್ದು ಬದುಕಿಸುವ ಪ್ರಯತ್ನ ಮಾಡಿದರೂ ಸಹ ಮೃತ ಮರಿ ಮೇಲೇಳದಿರುವುದನ್ನು ಸ್ಥಳೀಯರು ತಮ್ಮ ಮೊಬೈಲ್‌ನಲ್ಲಿ ದೃಶ್ಯ ಸೆರೆಹಿಡಿದಿದ್ದಾರೆ.

ಜೋರು ಮಳೆ ಸುರಿಯುತ್ತಿರುವುದರ ಜೊತೆಗೆ ಸತ್ತ ಮರಿಯನ್ನು ಎಳೆದುಕೊಂಡು ಹೋಗುತ್ತಿರುವುದು ಎಂಥ ಕಲ್ಲು ಮನಸ್ಸಿನವರಿಗೂ ಕರುಳು ಚುರುಕ್ ಎನ್ನುವಂತಿದೆ ಈ ದೃಶ್ಯಾವಳಿ. ತನ್ನ ಕರುಳ ಕುಡಿ ಇನ್ನೂ ಬದುಕಿದೆ ಎಂಬ ಭ್ರಮೆಯಲ್ಲಿರುವ ಮಾತೃ ಹೃದಯ ಯಾರನ್ನೂ ಕೂಡ ಹತ್ತಿರ ಹೋಗಲು ಬಿಡುತ್ತಿಲ್ಲ. ಭಾನುವಾರವಷ್ಟೆ ಅರೇಹಳ್ಳಿ ಸಮೀಪದ ಕೆಸಗುಲಿ ಗ್ರಾಮದಲ್ಲಿ ವಿದ್ಯುತ್ ತಂತಿ ತಗುಲಿ ಮರಿಯೊಂದಿಗೆ ತಾಯಿಯಾನೆಯೂ ಸಹ ಮೃತಪಟ್ಟಿತ್ತು. ಈ ಘಟನೆ ಜನಮಾನಸದಲ್ಲಿ ಮಾಸುವ ಮುನ್ನವೇ ಮತ್ತೊಂದು ಮರಿ ಮೃತಪಟ್ಟಿರುವುದು ಪ್ರಾಣಿ ಪ್ರಿಯರಿಗೆ ಅತೀವ ನೋವನ್ನುಂಟುಮಾಡಿದೆ.

“ಕಳೆದೆರಡು ದಿನಗಳ ಹಿಂದೆ ಮೃತಪಟ್ಟ ಮರಿಯೊಂದಿಗೆ ತಾಯಿಯಾನೆ ತೆರಳುತ್ತಿರುವುದು ಬೇಸರ ತಂದಿದೆ. ಹೀಗಾಗಿ ಸಿಬ್ಬಂದಿಗಳನ್ನು ಹತ್ತಿರ ಹೋಗಲು ಬಿಡುತ್ತಿಲ್ಲ. ಮರಿ ವಾಸನೆ ಬಂದರೆ ತಾಯಿಯಾನೆ ತನ್ನಿಂತಾನೆ ಬೇರೆಯಾಗುತ್ತದೆ” ಎಂದು
ಬೇಲೂರಿನ ಆರ್‌ಎಫ್‌ಒ ಅಧಿಕಾರಿ ಯತೀಶ್ ತಿಳಿಸಿದ್ದಾರೆ.

Continue Reading

Trending

error: Content is protected !!