Mysore
ಮೂಡಾದಲ್ಲಿ 1 ಸಾವಿರ ಕೋಟಿ ರೂ. ಅವ್ಯವಹಾರ : ತನಿಖೆ ನಡೆಸುವಂತೆ ಎಸ್ಡಿಪಿಐ ಜಿಲ್ಲಾಧ್ಯಕ್ಷ ರಫತ್ ಖಾನ್ ಒತ್ತಾಯ
ಮೈಸೂರು : ಮೂಡಾದಲ್ಲಿ ನಡೆದಿದೆ ಎನ್ನಲಾದ ಒಂದು ಸಾವಿರ ಕೋಟಿ ರೂ. ಅವ್ಯವಹಾರದ ಬಗ್ಗೆ ಕೂಡಲೇ ತನಿಖೆ ನಡೆಸಿ ಹಣ ವಸೂಲಿ ಮಾಡಿ ತಪ್ಪಿತಸ್ಥರನ್ನು ಶಿಕ್ಷಿಸಬೇಕೆಂದು ಎಸ್ಡಿಪಿಐ ಜಿಲ್ಲಾ ಅಧ್ಯಕ್ಷ ರಫತ್ ಖಾನ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಭೂ ಮಾಲಿಕರಿಗೆ ಪರಿಹಾರವಾಗಿ ಕಾನೂನು ಬಾಹಿರವಾಗಿ ನಿವೇಶನಗಳನ್ನು ಹಂಚಿಕೆ ಮಾಡಿಕೊಡಲಾಗಿದೆ. ಈ ಬಗ್ಗೆ ನಗರಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿ ಕೆ.ಲತಾ ಅವರು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರಿಗೆ ನಿರ್ದೇಶಿಸಿದ್ದು, ಬೃಂದಾವನ ಬಡಾವಣೆಯ ನಿವಾಸಿ ನಿವೃತ್ತ ನಗರ ಯೋಜನೆ ಸಹಾಯಕ ನಿರ್ದೇಶಕ ಹಾಗೂ ಮೂಡ ನೌಕರರ ಸಂಘದ ಮಾಜಿ ಅಧ್ಯಕ್ಷ ಪಿ.ಎಸ್.ನಟರಾಜ್ ಸಲ್ಲಿಸಿರುವ ದೂರಿನ ಅನ್ವಯ ಈ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದರು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಹಲವು ಪ್ರಕರಣಗಳಲ್ಲಿ ಮಾಲೀಕರಿಗೆ ಪರಿಹಾರ ನೀಡಿಲ್ಲವೆಂದು,
ಬದಲಿಯಾಗಿ ಅಭಿವೃದ್ಧಿ ಹೊಂದಿದ ಜಾಗದಲ್ಲಿ ಬೆಲೆ ಬಾಳುವ ಆಸ್ತಿಗಳನ್ನು 50:50 ಅನುಪಾತದಲ್ಲಿ ಕಾನೂನು ಬಾಹಿರವಾಗಿ ಹಂಚಿಕೆ ಮಾಡಲಾಗಿದೆ. ಅದರಿಂದ
ಪ್ರಾಧಿಕಾರಕ್ಕೆ ಹಾಗೂ ಸರ್ಕಾರಕ್ಕೆ 1ಸಾವಿರ ಕೋಟಿಗೂ ಹೆಚ್ಚು ಆರ್ಥಿಕ ನಷ್ಟ ಉಂಟು ಮಾಡಲಾಗಿದೆ. ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್, ಯಶಸ್ವಿನಿ ಸೋಮಶೇಖರ್, ಹಿಂದಿನ ಆಯುಕ್ತ ಡಿ.ಬಿ. ನಟೇಶ್, ಈಗಿನ ಆಯುಕ್ತ ಜಿ.ಟಿ. ದಿನೇಶ್ ಕುಮಾರ್,
ವಿಶೇಷ ಭೂಸ್ವಾಧೀನಾಧಿಕಾರಿಗಳಾದ ಹರ್ಷವರ್ಧನ್, ವಿಷ್ಣುವರ್ಧನ್ ರೆಡ್ಡಿ ಮತ್ತು ಸಂಬಂಧಿಸಿದ ವಿಶೇಷ
ತಹಶೀಲ್ದಾರರು, ನೌಕರರು ಅಕ್ರಮ ಲಾಭ, ಬೇನಾಮಿ ಆಸ್ತಿ ಮಾಡಿಕೊಂಡಿದ್ದಾರೆ. ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ನಟರಾಜ್ ಕೋರಿದ್ದಾರೆ. ಅದನ್ನು ಆಧರಿಸಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗೆ ನಿರ್ದೇಶನ
ನೀಡಲಾಗಿದೆ ಎಂದು ರಫತ್ಖಾನ್ ತಿಳಿಸಿದರು.
ಈ ಪ್ರಕರಣದ ಬಗ್ಗೆ ಸರ್ಕಾರ ಉನ್ನತ ಮಟ್ಟದ ತನಿಖೆ ನಡೆಸಬೇಕು. ತಪ್ಪಿತಸ್ಥರಿಗೆ ಶಿಕ್ಷೆ ನೀಡುವುದರ ಜತೆಗೆ ನಷ್ಟವನ್ನು ವಸೂಲಿ ಮಾಡಬೇಕೆಂದು ಅವರು ಒತ್ತಾಯಿಸಿದ್ದಾರೆ.
Mysore
ಮೈಸೂರು ಶೂಟಿಂಗ್ ಕ್ಲಬ್‌ಗೆ 3 ಪದಕಗಳ ಗರಿ*
ಎಂ.ಎಸ್.ಪುಣ್ಯಗೆ ಬೆಳ್ಳಿ, ವರ್ಷಿಣಿಗೆ ಕಂಚಿನ ಪದಕ
7 ಮಂದಿ ದಕ್ಷಿಣ ವಲಯಕ್ಕೆ ಆಯ್ಕೆ: ಪ್ಯಾರಶೂಟರ್ ದರ್ಶನ್‌ಕುಮಾರ್ ಸಾರಥ್ಯದಲ್ಲಿ ಸಾಧನೆ
ಮೈಸೂರು: ಕರ್ನಾಟಕ ಸ್ಟೇಟ್ ರೈಫಲ್ ಅಸೋಸಿಯೇಷನ್ ವತಿಯಿಂದ ಬೆಂಗಳೂರಿನ ಸಾಯಿ ಶೂಟಿಂಗ್ ರೇಂಜ್‌ನಲ್ಲಿ ನಡೆಯುತ್ತಿರುವ 12ನೇ ಶೂಟಿಂಗ್ ಸ್ಪರ್ಧೆಯಲ್ಲಿ ಮೈಸೂರು ಶೂಟಿಂಗ್ ಕ್ಲಬ್ ಶೂಟರ್‌ಗಳು 3 ವೈಯುಕ್ತಿಕ ಪದಕಗಳನ್ನು ಮುಡಿಗೇರಿಸಿಕೊಂಡು ಕೀರ್ತಿ ತಂದಿದ್ದಾರೆ.
ಮೈಸೂರು ಕ್ಲಬ್‌ನ 6 ಶೂಟರ್‌ಗಳು ಪ್ರಥಮಬಾರಿಗೆ 177 ಮತ್ತು .22(50ಮೀ.ಫೈರ್ ಆಮ್ಸ್)ಪೀಪ್ ಸೈಟ್ ರೈಫಲ್ ಸ್ಪರ್ಧೆಯಲ್ಲಿ ಭಾಗವಹಿಸಿ ದಕ್ಷಿಣ ವಲಯಕ್ಕೆ ಆಯ್ಕೆಯಾಗಿದ್ದಾರೆ.
ಪುಣ್ಯಗೆ ಬೆಳ್ಳಿ ಪದಕ :
ಮೈಸೂರು ಶೂಟಿಂಗ್ ಕ್ಲಬ್‌ನಲ್ಲಿ ಕಳೆದ ಎರಡು ತಿಂಗಳಿಂದ ತರಬೇತಿ ಪಡೆಯುತ್ತಿದ್ದ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ವಿದ್ಯಾರ್ಥಿನಿ ಮಂಡ್ಯದ ಎಂ.ಎಸ್.ಪುಣ್ಯ ಸ್ಪರ್ಧೆಯಲ್ಲಿ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗಳಿಸಿ ವಿಜೇತರಾಗಿದ್ದಾರೆ.
ವರ್ಷಿಣಿಗೆ ಕಂಚು:
ಮೈಸೂರಿನ ಪಿಯುಸಿ ವಿದ್ಯಾರ್ಥಿನಿ ಪಿ.ವರ್ಷಿಣಿ ಕಂಚಿನ ಪದಕ ಗಳಿಸಿ ಕೀರ್ತಿ ತಂದಿದ್ದಾರೆ. ಶೂಟರ್ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಹಾಸನದ ತನೈಚಂದ್ರ, ನಂದಿತಾ ರವಿಚಂದ್ರ, ಕಾವ್ಯ, ಬೆಂಗಳೂರಿನ ಚೇತನ ಓಬುಲಕ್ಷ್ಮಿ ಉತ್ತಮ ಪ್ರದರ್ಶನ ನೀಡಿ ದಕ್ಷಿಣ ವಲಯಕ್ಕೆ ಆಯ್ಕೆಯಾಗಿದ್ದಾರೆ.
ದಶನ್‌ಕುಮಾರ್ ಆಯ್ಕೆ: ಮೈಸೂರು ಶೂಟಿಂಗ್ ಕ್ಲಬ್ ಕೂಚ್ ಹಾಗೂ ರೈಫಲ್ ತರಬೇತುದಾರರಾದ ಬಿ.ಆರ್.ದರ್ಶನ್‌ಕುಮಾರ್ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡಿ ದಕ್ಷಿಣ ವಲಯಕ್ಕೆ ಆಯ್ಕೆಯಾಗಿದ್ದಾರೆ. ಮೈಸೂರು ಶೂಟಿಂಗ್ ಕ್ಲಬ್ ಕೋಚ್ ಪ್ಯಾರ ಶೂಟರ್ ಬಿ.ಆರ್.ದರ್ಶನ್‌ಕುಮಾರ್ ಅವರಿಂದ ತರಬೇತಿ ಪಡೆದು ಮೈಸೂರು ವಿಭಾಗಕ್ಕೆ ಕೀರ್ತಿ ತಂದ ಕ್ಲಬ್‌ನ 7 ಶೂಟರ್‌ಗಳನ್ನು ರಾಷ್ಟಮಟ್ಟದ ಶೂಟರ್ ಕೋಚ್ ಹುಬ್ಬಳ್ಳಿಯ ರವಿಚಂದ್ರ ಬಾಳೆ ಹೊಸೂರು ಅಭಿನಂದಿಸಿದ್ದಾರೆ.
ಇತಿಹಾಸಲ್ಲೇ ಪ್ರಥಮ ಸಾಧನೆ
ವಿಕಲಚೇತನರಾದರೂ ಯುವಕರಿಗೆ ಸ್ಪೂರ್ತಿಯ ಸೆಲೆಯಾಗಿರುವ ಪ್ಯಾರ ಶೂಟರ್ ಬಿ.ಆರ್.ದರ್ಶನ್‌ಕುಮಾರ್ ರೈಫಲ್ ಶೂಟಿಂಗ್‌ನಲ್ಲಿ ಆಸಕ್ತಿ ಹೊಂದಿರುವ ಸಾಹಸಿಗಳಿಗೆ ಉತ್ತಮ ತರಬೇತಿ ನೀಡಿ ಕರ್ನಾಟಕ ಸ್ಟೇಟ್ ರೈಫಲ್ ಅಸೋಸಿಯೇಷನ್ ವತಿಯಿಂದ ಬೆಂಗಳೂರಿನ ಸಾಯಿ ಶೂಟಿಂಗ್ ರೇಂಜ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ಎಲ್ಲಾ ಸ್ಪರ್ಧಿಗಳನ್ನು ದಕ್ಷಿಣವಲಯಕ್ಕೆ ಆಯ್ಕೆಯಾಗುವಂತೆ ಮಾಡುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.
ಮುಂಬರುವ ದಿನಗಳಲ್ಲಿ ಮೈಸೂರು ವಿಭಾಗದಿಂದ ಹೆಚ್ಚು ಮಂದಿ ರಾಜ್ಯ ಹಾಗೂ ರಾಷ್ಟಮಟ್ಟಕ್ಕೆ ಸ್ಪರ್ಧಿಗಳನ್ನು ಕಳಿಸಿಕೊಡುವ ಕನಸು ಹೊತ್ತ ದರ್ಶನ್‌ಕುಮಾರ್ ಮೈಸೂರಿನಲ್ಲಿ ಹೈಟೆಕ್ ಶೂಟಿಂಗ್ ಕ್ಲಬ್ ತೆರೆಯುವ ಯೋಜನೆ ರೂಪಿಸಿದ್ದಾರೆ
.
Mysore
ಮಾಜಿ ಸಚಿವ ಕೋಟೆ ಎಂ.ಶಿವಣ್ಣ ಅವರ ತೋಟದಲ್ಲಿ ಹುಲಿ ಪ್ರತ್ಯಕ್ಷ
*ಹೆಚ್.ಡಿ.ಕೋಟೆ*: ಮಾಜಿ ಸಚಿವ ಕೋಟೆ ಎಂ.ಶಿವಣ್ಣ ಅವರ ತೋಟದಲ್ಲಿ ಹುಲಿ ಪ್ರತ್ಯಕ್ಷ. ಕೃಷ್ಣಪುರ ಗ್ರಾಮದ ಬಳಿ ಇರುವ ಅವರ ತೋಟದಲ್ಲಿ ಹಸುವಿನ ಮೇಲೆ ಹುಲಿ ದಾಳಿ ಮಾಡಿ ಹಸುವನ್ನು ಅರ್ದಭಾಗ ತಿಂದು ಕೊಂದು ಹಾಕಿರುವ ಘಟನೆ ನಡೆದಿದೆ.
Mysore
ಹಿರಿಯ ಪತ್ರಕರ್ತ ಈಚನೂರು ಕುಮಾರ್ ನಿಧನ
ಮೈಸೂರು: ಮೈಸೂರಿನ ಹಿರಿಯ ಪತ್ರಕರ್ತ ಈಚನೂರು ಕುಮಾರ್ ಅವರು ಇಂದು ಬೆಳಗ್ಗೆ 11.30 ಕ್ಕೆ ನಿಧನರಾಗಿದ್ದಾರೆ.
ಅವರ ಇಬ್ಬರು ಮಕ್ಕಳು ಅಕ್ಷರಾ ಹಾಗೂ ಪತ್ರಕರ್ತ ಅಜಿತ್ ಅವರನ್ನು ಅಗಲಿದ್ದಾರೆ.
ಹಿರಿಯ ಪತ್ರಕರ್ತರಾದ ಈಚನೂರು ಕುಮಾರ್ ಅವರ ನಿಧನಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಸಂತಾಪ ವ್ಯಕ್ತಪಡಿಸಿದೆ.
-
Mysore3 months ago
ಶ್ರೀಮತಿ ಭವಾನಿ ರೇವಣ್ಣ ಸಹೋದರ ಇಂದು ಅಂತ್ಯಕ್ರಿಯೆ
-
State6 months ago
Free sewing machine, ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಸಲ್ಲಿಸಿ!
-
State6 months ago
ಶಾಲಾ ಮಕ್ಕಳಿಗೆ ಫೆಬ್ರವರಿ ತಿಂಗಳಲ್ಲಿ ಭರ್ಜರಿ ಹಾಲಿಡೇ! ಇಲ್ಲಿದೆ ರಜಾ ಲಿಸ್ಟ್!!!
-
Health6 months ago
Sugar Control ಆಗಬೇಕು ಅಂದ್ರೆ ಈ ಹಿಟ್ಟನ್ನು ತಿನ್ನಬೇಕಂತೆ! ಕನ್ಫ್ಯೂಸ್ ಆಗ್ಬೇಡಿ ಸುದ್ದಿ ಓದಿ
-
Hassan3 months ago
ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಹರದನಹಳ್ಳಿಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಹೇಳಿಕೆ
-
Uncategorized1 month ago
NEET 2024 ಮರು ಪರೀಕ್ಷೆಗೆ ಒತ್ತಾಯ: ಪೇಪರ್ ಲೀಕ್, ಮೋಸದ ಗ್ರೇಸ್ ಮಾರ್ಕ್, ಒಂದೇ ಕೇಂದ್ರದ ವಿದ್ಯಾರ್ಥಿಗಳು ಟಾಪರ್ಸ್ !!
-
Uncategorized8 months ago
ಅರ್ಜುನನ ಸಮಾದಿಗೆ ಪೂಜೆ ಸಲ್ಲಿಸಿದ ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್
-
State6 months ago
ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ!!. ‘ಹಳೆ ಪಿಂಚಣಿ’ ಜಾರಿಗೆ ಗ್ರೀನ್ ಸಿಗ್ನಲ್ ಕೊಟ್ಟ ರಾಜ್ಯ ಸರ್ಕಾರ.