Connect with us

Hassan

ಎಂಪಿ ಚುನಾವಣೆ ಹಿನ್ನಲೆ, ಶೀಘ್ರದಲ್ಲಿ ಕಾಂಗ್ರೆಸ್ ಸಮಾವೇಶ ವಿನಯಗಾಂಧಿ

Published

on

ಹಾಸನ: ಲೋಕಸಭೆ ಚುನಾವಣೆ ಸಮೀಪದಲ್ಲಿದ್ದು, ಈಗಾಗಲೇ ಮುಖಂಡರ ಜೊತೆ ಚರ್ಚೆ ಮಾಡಲಾಗಿದೆ. ಕಾಂಗ್ರೆಸ್ ಸಂಘಟನೆಗಾಗಿ ಅತಿ ಶೀಘ್ರದಲ್ಲಿ ಪಕ್ಷದ ಮುಖಂಡರ ಸಮಾವೇಶವನ್ನು ಹಮ್ಮಿಕೊಳ್ಳುವುದಾಗಿ ಪಕ್ಷದ ಮುಖಂಡರಾದ ವಿನಯಗಾಂಧಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ಲೋಕಸಭಾ ಚುನಾವಣೆ ಹತ್ತಿರವಿರುವುದರಿಂದ ಈಗ ಜಿಲ್ಲೆಯ ಎಲ್ಲಾ ತಾಲೂಕುಗಳಿಯೂ ಭೇಟಿ ನೀಡಿ ಎಲ್ಲಾ ಕಾಂಗ್ರೇಸ್ ಮುಖಂಡರನ್ನು ಭೇಟಿಮಾಡಲಾಗಿದೆ. ಜಿಲ್ಲೆಯ ಎಲ್ಲಾ ಹಳೆಯ ಕಾಂಗ್ರೇಸ್ ಮುಖಂಡರ ಜೊತೆ ಮಾತನಾಡಿದ್ದೇವೆ. ಪ್ರಸ್ತುತ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರದಿಂದ ಚುನಾವಣೆಗೆ ಮುಂಚೆ ಭರವಸೆ ನೀಡಿದ ಎಲ್ಲಾ ೫ ಗ್ಯಾರಂಟಿಗಳನ್ನು ಜಾರಿಮಾಡಿ ಎಲ್ಲಾ ವರ್ಗದ ಜನಸಾಮಾನ್ಯರಿಗೂ ಅನುಕೂಲ ಮಾಡಲಾಗಿದೆ. ಇದರ ಲಾಭವನ್ನು ಎಲ್ಲಾ ವರ್ಗದ ಜನರಿಗೂ ಮತ್ತು ಎಲ್ಲಾ ಧರ್ಮದ ಜನರಿಗೂ ಸರ್ಕಾರದ ಸವಲತ್ತುಗಳನ್ನು ತಲುಪಿಸುತ್ತಿದ್ದಾರೆ. ಹಾಸನ ಲೋಕಸಭಾ ಕ್ಷೇತ್ರದಲ್ಲಿ ಹೆಚ್ಚು ಮತದಾರರಿದ್ದು, ಇದರಲ್ಲಿ ಅಹಿಂದ ಮತದಾರರು ಮತ್ತು ಇತರರು ಇದ್ದಾರೆ ಇವರೆಲ್ಲ ಕಾಂಗ್ರೇಸ್ ಪರವಾಗಿದ್ದಾರೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಎಲ್ಲಾ ಜಾತಿಯ ಮತ್ತು ವರ್ಗದ ಜನರು ಕಾಂಗ್ರೇಸ್ ಪಕ್ಷಕ್ಕೆ ಮತ ಹಾಕುತ್ತಾರೆ ಎಂಬ ಭರವಸೆ ಇದೆ. ಕಾಂಗ್ರೇಸ್ ಸರ್ಕಾರವು ಸಿದ್ದರಾಮಯ್ಯನವರ ನೇತೃತ್ವದಲ್ಲಿ ಎಲ್ಲಾ ಜನಾಂಗದ ಕಷ್ಟಸುಖ ದುಖಃ ದುಮ್ಮಾನಗಳನ್ನು ಅರಿತು ಸಾರ್ವಜನಿಕರ ಅಭಿವೃದ್ಧಿಗೆ ಸದಾ ಚಿಂತನೆ ಮಾಡುತ್ತಾ ಎಲ್ಲಾ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಎಲ್ಲಾರಿಗೂ ಮನವರಿಕೆಯಾಗಿದೆ ಎಂದರು.

ಹಾಸನ ಜಿಲ್ಲೆಯ ಉಸ್ತುವಾರಿ ಸಚಿವರಾದ ಮಾನ್ಯ ಕೆ.ಎನ್. ರಾಜಣ್ಣನವರು ಕೂಡ ಜಿಲ್ಲೆಗೆ ಭೇಟಿನೀಡಿ ಅಧಿಕಾರಿಗಳೊಂದಿಗೆ ಸಭೆಮಾಡಿ ಸಾರ್ವಜನಿಕರು ಕಾರ್ಯಕರ್ತರ ಅವಹಾಲುಗಳನ್ನು ಕೇಳಿ ಅವರ ಅವಶ್ಯಕತೆಗಳನ್ನು ಪೂರ್ಣಗೊಳಿಸುತ್ತಿರುವುದು ಜಿಲ್ಲೆಯ ಕಾರ್ಯಕರ್ತರಿಗೆ ಸಂತೋಷತಂದಿದೆ. ಹಾಸನ ಲೋಕಸಭೆಗೆ ಸಮರ್ಥ ಅಭ್ಯರ್ಥಿಯನ್ನು ನಿಲ್ಲಿಸಿ ಜೆ.ಡಿ.ಎಸ್., ಬಿ.ಜೆ.ಪಿ. ಕೋಮುವಾದಿ ಸಮಿಶ್ರ ಪಕ್ಷದ ಅಭ್ಯರ್ಥಿ ಯಾರೇ ಆದರೂ ಅವರ ವಿರುದ್ಧ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಶ್ರಮವಹಿಸುತ್ತಿದ್ದಾರೆ, ಹಾಸನ ಲೋಕಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಮಾನ್ಯ ಹೆಚ್.ಡಿ. ದೇವೇಗೌಡರಿಗೆ ನಡುಕ ಉಂಟುಮಾಡುತ್ತಿದಾರೆ, ಕಾಂಗ್ರೇಸ್ ಪಕ್ಷದ ಕಾರ್ಯಕರ್ತರಲ್ಲಿ ಹುಮ್ಮಸು ತುಂಬುತ್ತಿದ್ದಾರೆ, ಅವರ ನಾಯಕತ್ವದಲ್ಲಿ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಪಣತೊಟ್ಟಿದೇವೆ. ಜಿಲ್ಲೆಯಲ್ಲಿ ಎಲ್ಲಾ ಮುಖಂಡರು ಮತ್ತು ಕಾರ್ಯಕರ್ತರು ಒಂದಾಗಿದ್ದೂ ನಮ್ಮಗಳ ಉದ್ದೇಶ ಕಾಂಗ್ರೇಸ್ ಪಕ್ಷವನ್ನು ತಳಹಂತದಿಂದ ಸಂಘಟನೆಮಾಡಲು ತಯಾರು ಆಗಬೇಕಾಗಿದೆ ಆದ್ದರಿಂದ ಜಿಲ್ಲೆಯಲ್ಲಿ ಜನಾಂಗದವರು ಜಾತಿಯವರು ಧರ್ಮದವರು ಒಗ್ಗೂಡಿ ಕೆಲಸ ಮಾಡಬೇಕು ನಮ್ಮಲ್ಲಿ ಎಲ್ಲರೂ ಕೂಡಿ. ಒಟ್ಟಿಗೆ ಕಾಂಗ್ರೇಸ್ ಪಕ್ಷ ಸಂಟನೆ ಮಾಡಬೇಕಾಗಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಹಾಲಿ ಲೋಕಸಭಾ ಚುನಾವಣೆಗೆ ಅನೇಕ ಮುಖಂಡರುಗಳು ಆಕಾಂಕ್ಷಿಗಳಿದ್ದಾರೆ ನಾನು ಕೂಡ ಕಾಂಗ್ರೇಸ್ ಪಕ್ಷದಲ್ಲಿ ನಿಷ್ಠಾವಂತ ಮುಖಂಡನಾಗಿ ಸುಮಾರು ೪೫ ವರ್ಷಗಳಿಂದ ಕಾಂಗ್ರೇಸ್ ಪಕ್ಷದಲ್ಲಿ ಎನ್.ಎಸ್.ಯು.ಐ. ಜಿಲ್ಲಾಧ್ಯಕ್ಷರಾಗಿ, ಜಿಲ್ಲಾ ಯುವ ಕಾಂಗ್ರೇಸ್ ಅಧ್ಯಕ್ಷನಾಗಿ, ರಾಜ್ಯ ಯುವ ಕಾಂಗ್ರೇಸ್ ಉಪಾಧ್ಯಕ್ಷನಾಗಿ, ಕೆ.ಪಿ.ಸಿ.ಸಿ ಸದಸ್ಯನಾಗಿ, ಸಂಘಟನ ಮಗೇಕೊಂಡು ಬಂದಿರುತ್ತೇನೆ. ಅಲ್ಲದೇ ನಾನು ೬ ಬಾರಿ ವಿಧಾನಸಭಾ ಶಾಸಕನಾಗಲು ಟಿಕೆಟ್ ಆಕಾಂಕ್ಷಿಯಾಗಿ ಹಾಗೂ ೪ ಬಾರಿ ಲೋಕಸಭಾ ಚುನಾವಣೆ ಟಿಕೇಟ್ ಆಕಾಂಕ್ಷಿಯಾಗಿದ್ದು, ಈ ಬಾರಿ ಲೋಕಸಭಾ ಚುನಾವಣೆಗೆ ಅಭ್ಯರ್ಥಿಯಾಗಲಿಕ್ಕೆ ನಾನು ಒಬ್ಬ ಬಲಿಷ್ಠನಾಗಿರು ಸೀಟನ್ನು ಕೇಳುತ್ತಿದ್ದೇನೆ. ನಾನು ಪ್ರಾರಂಭದಿಂದಲೂ ಇದುವರೆಗೆ ನನಗೆ ಪಕ್ಷದಲ್ಲಿ ಅನುಕೂಲವಾಗದಿದ್ದರೂ ಕಾಂಗ್ರೇಸ್ ಪಕ್ಷದಲ್ಲಿ ನಿಷ್ಠಾವಂತನಾಗಿ ಉಳಿದುಕೊಂಡು ಪ್ರತಿಚುನಾವಣೆಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಈಗ ಹಾಲಿ ಲೋಕಸಭಾ ಚುನಾವಣೆ ಸೀಟಿಗಾಗಿ ಎಲ್ಲಾ ರಾಜ್ಯ ಮುಖಂಡರನ್ನು ಹಾಗೂ ದೆಹಲಿಯ ಮುಖಂಡರನ್ನು ಲೋಕಸಭಾ ಕ್ಷೇತ್ರದ ಮುಖಂಡರನ್ನು ಭೇಟಿ ಮಾಡಿರುತ್ತೇನೆ. ಅಂತಿಮವಾಗಿ ನನ್ನ ಪಕ್ಷದ ನಿಷ್ಠೆ ಮತ್ತು ಪ್ರಾಮಾಣಿಕತೆ ಎಲ್ಲವನ್ನು ಪರಿಗಣಿಸಿ ನನಗೆ ಈ ಬಾರಿ ಲೋಕಸಭಾ ಚುನಾವಣೆಗೆ ಅನುಕೂಲ ಮಾಡಿಕೊಟ್ಟು ಜಿಲ್ಲೆಯಲ್ಲಿ ಪಕ್ಷ ಬಲಿಷ್ಠಗೊಳಿಸಲು ಲೋಕಸಭಾ ಚುನಾವಣೆಯಲ್ಲಿ ಗೆಲವು ಸಾಧಿಸಲು ಸಹಾಯ ಮಾಡಬೇಕಾಗಿ ಮನವಿ ಮಾಡುತ್ತೇನೆ ಎಂದು ಕೋರಿದರು.

ಈಗ ರಾಜ್ಯ ಸರ್ಕಾರದ ನಿಗಮ ಮಂಡಳಿಯಲ್ಲಿ ಹಾಗೂ ಜಿಲ್ಲೆಯ ಎಲ್ಲಾ ಇಲಾಖೆಯ ನಾಮನಿರ್ದೇಶನ ನಡೆಯುತ್ತಿರುವುದರಿಂದ ಜಿಲ್ಲೆಯ ನಿಷ್ಠಾವಂತ ಕಾರ್ಯಕರ್ತರು ಬಹಳ ವರ್ಷಗಳಿಂದ ಪಕ್ಷಕ್ಕಾಗಿ ದುಡಿಯುತ್ತಿರುವ ಹಿರಿಯರು ಮತ್ತು ಪ್ರಾಮಾಣಿಕ ಕಾರ್ಯಕರ್ತರನ್ನು ಗುರುತಿಸಿ ಜಾತಿವಾರು, ಧರ್ಮವಾರು ಅಭ್ಯರ್ಥಿಗಳನ್ನು ಗುರುತಿಸಿ ಅವಕಾಶಮಾಡಿಕೊಡ ಬೇಕಾಗಿ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕೆ.ಪಿ.ಸಿ.ಸಿ. ಅಧ್ಯಕ್ಷರು ಮುಖ್ಯಮಂತ್ರಿಗಳಲ್ಲಿ ಕಳಕಳಿಯ ಮನವಿ ಮಾಡುತ್ತಿರುವುದಾಗಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಮುನಿಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಶರ್ಮಾ, ಅಲ್ಪಸಂಖ್ಯಾತ ಜಿಲ್ಲಾ ಮುಖಂಡ ಧಾಮಸ್ ಇತರರು ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Hassan

ಮುಂದಿನ ದಿನಗಳಲ್ಲಿ ಚೊಂಬು-ಜಾಗಟೆ ಗ್ಯಾರಂಟಿ

Published

on

ಕಾಂಗ್ರೆಸ್ ವಿರುದ್ಧ ಹೆಚ್.ಡಿ. ರೇವಣ್ಣ ವಾಗ್ದಾಳಿ

ಹಾಸನ: ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ರಾಜ್ಯದ ಖಜಾನೆ ಖಾಲಿ ಮಾಡಿ ಜನರಿಗೆ ಬಿಕ್ಷೆ ಹಾಕುತ್ತಿದ್ದು, ಮುಂದಿನ ದಿನಗಳಲ್ಲಿ ಚೊಂಬು ಮತ್ತು ಜಾಗಟೆ ಕೊಡುವುದು ಗ್ಯಾರಂಟಿ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಭವಿಷ್ಯ ನುಡಿದರು.

ನಗರದಲ್ಲಿ ಆಪ್ತರ ನಿವಾಸದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ಕರ್ನಾಟಕ ರಾಜ್ಯ ಲೂಟಿ ಕೋರರ ಕೈಯಲ್ಲಿ ಸಿಲುಕಿಕೊಂಡಿದೆ ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ರಾಜ್ಯದ ಖಜಾನೆ ಖಾಲಿ ಮಾಡಿ ಜನರಿಗೆ ಬಿಕ್ಷೆ ಹಾಕುತ್ತಿದೆ ಮುಂದಿನ ದಿನಗಳಲ್ಲಿ ಕೈಯಲ್ಲಿ ಚೊಂಬು ಹಾಗೂ ಜಾಗಟೆ ಕೊಡುವುದು ಗ್ಯಾರಂಟಿ ಎಂದರು.

ಹೆಚ್.ಡಿ. ಕುಮಾರಸ್ವಾಮಿ ಸರ್ಕಾರದ ಅವಧಿಯಲ್ಲಿ ಹಾಸನ ಜಿಲ್ಲೆಯ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರರ ಬದಲಾವಣೆ ಆಗಿದೆ. ಶಾಲಾ ಕಾಲೇಜು ಕಟ್ಟಡಗಳು, ಗುಣಮಟ್ಟದ ಶಿಕ್ಷಣದ ಮೂಲಕ ಹಾಸನ ಜಿಲ್ಲೆ ಎಸ್.ಎಸ್.ಎಲ್.ಸಿ. ಯಲ್ಲಿ ಕೂಡ ಪ್ರಥಮ ಸ್ಥಾನ ಪಡೆಯುವ ಮೂಲಕ ಇಡೀ ರಾಜ್ಯಕ್ಕೆ ಮಾದರಿಯಾಗಿದೆ. ಆದರೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಹಾಸನ ಜಿಲ್ಲೆಗೆ ಕೊಡುಗೆ ಶೂನ್ಯ ಎಂದು ದೂರಿದರು. ನಂಬಿದವರಿಗೆ ಟೋಪಿ ಹಾಕಿ ನಿಷ್ಕಲ್ಮಶ ರಾಜಕಾರಿಣಿ ದೇವೇಗೌಡರನ್ನು ಪ್ರಧಾನಿ ಸ್ಥಾನದಿಂದ ಕೆಳಗಿಳಿಸಿದ್ದಾರೆ ಎಂದು ಕಿಡಿಕಾರಿದರು.

ಹಿಂದಿನಿಂದಲೂ ನಮ್ಮ ಕುಟುಂಬದ ಬಗ್ಗೆ ಅನೇಕರು ಒಂದಲ್ಲ, ಒಂದು ರೀತಿಯ ಅಪಪ್ರಚಾರ ಮಾಡುತ್ತಿದ್ದಾರೆ. ದೇವೇಗೌಡರ ಕಾಲದಿಂದಲೂ ಇದು ನಡೆಯುತ್ತಿದೆ. ಇದಕ್ಕೆಲ್ಲಾ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ನಮ್ಮ ಕುಟುಂಬದ ಬಗ್ಗೆ ಅಪಪ್ರಚಾರ ಮಾಡುವುದು ಮಾಮೂಲಿ. ಇದನ್ನೆಲ್ಲ ಜಿಲ್ಲೆಯ ಜನರು ಗಮನಿಸುತ್ತಿದ್ದಾರೆ. ಈ ಚುನಾವಣೆಯಲ್ಲಿ ಹಾಸನ, ಮಂಡ್ಯ, ಕೋಲಾರ ಸೇರಿದಂತೆ ಎಲ್ಲಾ ೨೮ಕ್ಕೆ ೨೮ ಸ್ಥಾನವನ್ನೂ ನಾವು ಗೆಲ್ಲುತ್ತೇವೆ ಎಂದು ವಿಶ್ವಾಸವ್ಯಕ್ತಪಡಿಸಿದರು.

ರಾಜ್ಯದಲ್ಲಿ ಗ್ಯಾರಂಟಿ ಆಯ್ತು ಈಗ ಪೊಳ್ಳು ಗ್ಯಾರಂಟಿ ಶುರುವಾಗಿದೆ. ಬಾಂಡ್ ಪೇಪರ್‌ನಲ್ಲಿ ಸಿಎಂ ಹಾಗೂ ಡಿಸಿಎಂ ಒಂದು ಲಕ್ಷ ಕೊಡುವುದಾಗಿ ಕರಪತ್ರ ಹಂಚುತ್ತಿದ್ದಾರೆ. ಈ ಬಗ್ಗೆ ಚುನಾವಣಾ ಆಯೋಗ ಗಮನಿಸಬೇಕು ಎಂದು ಆಗ್ರಹಿಸಿದರು. ಒಂದು ಕಡೆ ಪ್ರಜ್ವಲ್, ದೇವೇಗೌಡರು ಏನು ಮಾಡಿದ್ದಾರೆ ಅಂತಾರೆ. ಆದರೆ ಅವರು ಈ ಜಿಲ್ಲೆಗೆ ಏನು ಕೊಡುಗೆ ಕೊಟ್ಟಿದ್ದಾರೆ ಎಂಬುದು ಜನರಿಗೆ ಗೊತ್ತು. ೧೧ ತಿಂಗಳಲ್ಲಿ ರಾಜ್ಯದ ಖಜಾನೆ ಖಾಲಿ ಮಾಡಿ ಖಾಲಿ ಚೊಂಬು ಕೊಟ್ಟಿದ್ದಾರೆ. ಒಂದೇ ಒಂದು ಅಭಿವೃದ್ಧಿ ಕೆಲಸ ಆಗಿಲ್ಲ ಎಂದು ಗಂಬೀರವಾಗಿ ಆರೋಪಿಸಿದರು.

ಹಾಸನ ಫ್ಲೈ ಓವರ್ ಮಾಡಲು ನಾನು ಬರಬೇಕಾಯ್ತಾ, ಹಾಸನದ ಬಸ್ ನಿಲ್ದಾಣಕ್ಕೆ ನಿತ್ಯ ನಾಲ್ಕು ಸಾವಿರ ಬಸ್ ಬರ್ತವೆ. ಆದರೆ ಇವರು ಕೇವಲ ಎರಡು ಪಥದ ರಸ್ತೆಯ ಫ್ಲೈ ಓವರ್ ಮಾಡಿದ್ದಾರೆ. ಹಾಸನದ ಮೆಡಿಕಲ್ ಕಾಲೇಜು ಉಳಿಸಲು ಇವರ ಕೊಡುಗೆ ಏನು? ನಮ್ಮ ಕೊಡುಗೆ ಏನು ಅಂತಾರೆ, ಇವರ ಕೊಡುಗೆ ಏನು ಹೇಳಲಿ? ಎಂದು ಸವಾಲು ಹಾಕಿದರು. ಅರವತ್ತು ವರ್ಷ ಆದರೂ ಈ ಕಾಂಗ್ರೆಸ್ ಸರ್ಕಾರ ಶಿಕ್ಷಣಕ್ಕೆ ಆದ್ಯತೆ ಕೊಡಲಿಲ್ಲ. ಶೇಕಡಾ ೪೦ ರಷ್ಡು ಶಿಕ್ಷಕರ ಹುದ್ದೆ ಖಾಲಿ ಇದೆ. ಬಡ ಜನರಿಗೆ ಮೋದಿಯವರು ಐದು ಕೆಜಿ ಅಕ್ಕಿ ಕೊಡ್ತಾರೆ ಇವರು ಅದನ್ನ ಹೇಳ್ತಾರಾ! ಇವರು ಗ್ಯಾರಂಟಿ ಗಾಗಿ ಲಕ್ಷಾಂತರ ಕೋಟಿ ಸಾಲ ಮಾಡಿದ್ದಾರೆ.

ಇವರು ಬಿಜೆಪಿಯನ್ನ ಪರ್ಸೆಂಟೇಜ್ ಎನ್ನೋರು ಇವರು ರೈತರಿಂದಲು ಪರ್ಸೆಂಡೇಜ್ ತಗೊತಾರಲ್ಲ ಸ್ವಾಮಿ ಎಂದು ಆರೋಪ ಮಾಡಿದರು.

Continue Reading

Hassan

ಪೆನ್ ಡ್ರೈವ್ ಪ್ರಕರಣ ಸಮಗ್ರ ತನಿಖೆ ಆಗಲಿ ಅನುಪಮ ಆಗ್ರಹ

Published

on

ಹಾಸನ: ಈಗಾಗಲೇ ಎಲ್ಲಾ ಕಡೆ ಮಾತಾಗಿರುವ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಗ್ರ ತನಿಖೆ ಆಗಬೇಕಾಗಿದೆ. ಬೇರೆ ಹೆಣ್ಣು ಮಕ್ಕಳ ಬಗ್ಗೆ ಮಾತನಾಡುವರ ಕುರಿತು ಕಾಂಗ್ರೆಸ್ ಅಭ್ಯರ್ಥಿ ತಾಯಿ ಅನುಪಮ ಅಸಮಧಾನವ್ಯಕ್ತಪಡಿಸಿದರು. ಈ ಲೋಕಸಭಾ ಚುನಾವಣೆಯಲ್ಲಿ ನನ್ನ ಮಗ ಶ್ರೇಯಸ್ ಪಟೇಲ್ ಗೆಲ್ಲುವುದು ನಿಶ್ಚಿತ ಎಂದು ವಿಶ್ವಾಸವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ಈ ವಿಚಾರ ಎತ್ತಿರುವುದೆ ಜಿ. ದೇವರಾಜೇಗೌಡರು ಆಗಿರುವುದರಿಂದ ಪೆನ್ ಡ್ರೈವ್ ಇದೆ ಎಂದು ಹೇಳಿಕೆ ನೀಡುವ ಜಿ. ದೇವರಾಜೇಗೌಡರು ಏಕೆ ಮಾಡಿರಬಾರದು ಎಂದು ಗಂಭೀರವಾಗಿ ಆರೋಪಿಸಿ ಟಾಂಗ್ ನೀಡಿದರು.

ಈ ಚುನಾವಣೆಯಲ್ಲಿ ಜಿಲ್ಲೆಯ ಜನ ಬದಲಾವಣೆ ಬಯಸಿದ್ದು, ಎಲ್ಲಾ ಕಡೆ ಶ್ರೇಯಸ್ ಪಟೇಲ್‌ಗೆ ಉತ್ತಮವಾದ ವಾತಾವರಣ ಇದೆ. ಒಂದು ಲಕ್ಷ ಮತಗಳ ಅಂತರದಲ್ಲಿ ಗೆಲ್ಲುತ್ತಾರೆ. ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ಹಾಗೂ ಪುಟ್ಟಸ್ವಾಮಿಗೌಡರ ಮೊಮ್ಮಗ ಎಂಬುದು ಸೇರಿ ಗೆಲುವಿಗೆ ಪೂರಕ ಆಗಲಿದೆ ಎಂದರು. ನಮ್ಮ ಮಾವ ೧೯೯೯ ರಲ್ಲಿ ಎಂಪಿ ಆಗಿದ್ದಾಗ ಆಸ್ಪತ್ರೆ, ನೀರಾವರಿ ಯೋಜನೆ ಮಾಡಿದ್ದಾರೆ. ನಾನು ಎರಡು ಎಲೆಕ್ಷನ್‌ನಲ್ಲಿ ಅವರ ಮುಂದೆ ಮಂಡಿಯೂರಿದ್ದೇನೆ. ನನ್ನ ಮಗ ೩ನೇ ಚುನಾವಣೆ ಎದುರಿಸುತ್ತಿದ್ದು, ಜಿಲ್ಲೆಯ ಜನ ನಮಗೆ ಆಶೀರ್ವಾದ ಮಾಡಬೇಕು ಎಂದು ಕೋರಿದರು. ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಗೆಲ್ಲಿಸಲು ಎಷ್ಟೆ ಹಣ ಹಂಚಿಕೆ ಮಾಡಿದರೂ ಈ ಬಾರಿ ಶ್ರೇಯಸ್ ಪಟೆಲ್ ಗೆಲ್ಲುವುದು ನಿಶ್ಚಿತ. ಕುಟುಂಬದ ವಿರುದ್ಧ ಹೋರಾಟ ನಡೆಸುವುದು ಅಷ್ಟು ಸುಲಭವಲ್ಲ. ಈಗ ಈ ಕುಟುಂಬಕ್ಕೆ ಶಕ್ತಿ ಇಲ್ಲ. ಸಿಎಂ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಶ್ರೇಯಸ್ ಪಟೇಲ್ ಬೆನ್ನ ಹಿಂದೆ ನಿಂತಿರುವುದರಿಂದ ಇಡೀ ಕಾಂಗ್ರೆಸ್ ಪಕ್ಷ ಒಟ್ಟಾಗಿ ಕಸಲೆ ಮಾಡಿದ್ದು ಶ್ರೀರಕ್ಷೆ ಆಗಲಿದೆ. ಜಿಲ್ಲೆಯ ಜನತೆ ನಮ್ಮ ಮಗನಿಗೆ ಮತ ಹಾಕುವಂತೆ ಇದೆ ವೇಳೆ ಮನವಿ ಮಾಡಿದರು.

ಕಾಂಗ್ರೆಸ್ ಮುಖಂಡರಾದ ಹೆಚ್.ಕೆ. ಜವರೇಗೌಡ ಮಾತನಾಡಿ, ಈ ಲೋಕಸಭಾ ಚುನಾವಣೆಯಲ್ಲಿ ವಾತವರಣ ಕಾಂಗ್ರೆಸ್ ಪರವಾಗಿದ್ದು, ಸ್ವಯಂ ಪ್ರೇರಿತವಾಗಿ ಶ್ರೇಯಸ್ ಪಟೇಲ್ ಗೆ ಮತ ಹಾಕಬೇಕು ಎನ್ನುವ ವಾತವರಣ ಬಂದಿದೆ. ಕಾಂಗ್ರೆಸ್ ಕಾರ್ಯಕ್ರಮದ ಕಾರ್ಯಕ್ರಮಗಳು ಶ್ರೀರಕ್ಷೆ ಆಗಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲಕ್ಷ್ಮಣ್, ಮುಖಂಡರಾದ ಹೆಚ್.ಕೆ. ಜವರೇಗೌಡ, ಬನವಾಸೆ ರಂಗಸ್ವಾಮಿ, ಮುರುಳಿಮೋಹನ್, ಜಾವಗಲ್ ಮಂಜುನಾಥ್ ಇತರರು ಉಪಸ್ಥಿತರಿದ್ದರು.

Continue Reading

Hassan

ಹಾಸನದಲ್ಲಿ ಬಿಜೆಪಿಯ ಕೆಲ ವ್ಯಕ್ತಿಗಳು, ಮಂಡ್ಯದಲ್ಲಿ ಸುಮಲತಾ ನಮಗೆ ಸಹಕರಿಸುತ್ತಿಲ್ಲ

Published

on

ಕಾವೇರಿ ನೀರನ್ನು ಉಳಿಸಲು ಶತಸಿದ್ಧ : ಹೆಚ್.ಡಿ. ದೇವೇಗೌಡ

ಹಾಸನ : ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಕೆಲ ವ್ಯಕ್ತಿಗಳು ಹಾಸನದಲ್ಲಿ ಮತ್ತು ಮಂಡ್ಯದಲ್ಲಿ ಸುಮಲತಾ ಅವರು ನಮಗೆ ಸಹಕರಿಸುತ್ತಿಲ್ಲ ಎಂದು ಬೇಸರವ್ಯಕ್ತಪಡಿಸಿದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ನಮ್ಮ ಮೂರು ಕ್ಷೇತ್ರದಲ್ಲೂ ಜಯಗಳಿಸುವುದಾಗಿ ವಿಶ್ವಾಸವ್ಯಕ್ತಪಡಿಸಿ, ಕಾವೇರಿ ನೀರನ್ನು ಉಳಿಸಲು ಶತಸಿದ್ಧ ಎಂದು ಶಪತ ಮಾಡಿದರು.

ನಗರದ ಹೊರವಲಯದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ದೇಶದ ಸಂಪತ್ತನ್ನು ಹಂಚುತ್ತೇವೆ ಎಂದು ಕಾಂಗ್ರೆಸ್‌ನವರು ಜಗಳವಾಡುತ್ತಿದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬರಲು ಶಕ್ತಿನೇ ಇಲ್ಲ. ಆದರೆ ಮನಸ್ಸಿಗೆ ಬಂದಂತೆ ಮಾತನಾಡುತ್ತಾರೆ. ಭೂಮಿ, ಸಂಪತ್ತನ್ನು ಹಂಚುತ್ತೇವೆ ಎಂದು ರಾಹುಲ್ ಗಾಂಧಿ ಹೇಳ್ತಾರೆ. ಕಾವೇರಿ ಬೇಸಿನ್‌ಗೆ ಸಂಬಂಧಪಟ್ಟ ಎಲ್ಲಾ ಕ್ಷೇತ್ರಗಳಲ್ಲಿ ಪ್ರವಾಸ ಮಾಡಿದ್ದೇನೆ. ಪ್ರಧಾನ ಮಂತ್ರಿಗಳ ಜೊತೆ ಎರಡು ಸಭೆ ಮಾಡಿದ್ದೇನೆ. ಎರಡನೇ ಹಂತದ ಚುನಾವಣೆ ಹೈದರಾಬಾದ್, ಕರ್ನಾಟಕ, ಮುಂಬೈ ಕರ್ನಾಟಕ ಮೇ.೭ ರಂದು ನಡೆಯಲಿದೆ. ಶಿವಮೊಗ್ಗ ಸೇರಿ ಎರಡನೇ ಹಂತದ ಚುನಾವಣೆ ನಡೆಯುತ್ತದೆ ಎಂದರು.

ಹಾಸನದಲ್ಲಿ ಬಿಜೆಪಿಯ ಒಬ್ಬರು ವಿರೋಧ ಮಾಡ್ತಾರೆ ಅಂತ ನೀವು ಕೇಳಬಹುದು, ನಾನೇ ಹೇಳ್ತಿನಿ! ಇವತ್ತು ಕಾವೇರಿ ಬೇಸಿನ್‌ನಲ್ಲಿ ಎಲ್ಲಾ ಕ್ಷೇತ್ರಗಳನ್ನು ಗೆಲ್ಲುವ ಸಾಧ್ಯತೆ ಇದೆ. ಬಿಜೆಪಿಯ ಕೆಲವು ವ್ಯಕ್ತಿಗಳು ಹಾಸನದಲ್ಲಿ ಕೋ-ಆಪರೇಟ್ ಮಾಡ್ತಿಲ್ಲ. ಮಂಡ್ಯದಲ್ಲಿ ಸುಮಲತಾ ಕುಮಾರಸ್ವಾಮಿಗೆ ಕೋಆಪರೇಟ್ ಮಾಡ್ತಿಲ್ಲ.

ಅದರಿಂದ ಕುಮಾರಸ್ವಾಮಿ ಏನೋ ಅಪಾಯ ಆಗುತ್ತೆ ಅಂತ, ಏನು ಆಗಲ್ಲ. ಪ್ರಮುಖವಾಗಿ ಕಾವೇರಿ ಸಮಸ್ಯೆ ಇದೆ, ಅದು ಜೀವನ್ಮರಣದ ಪ್ರಶ್ನೆ.

ಮಂಡ್ಯದಲ್ಲಿ ಕೈ ಅಭ್ಯರ್ಥಿ ಗೆಲ್ಲಲು ೧೨೫ ಕೋಟಿ ಎನ್‌ಓಸಿ ರಿಲೀಸ್ ಮಾಡಿದ್ದಾರೆ. ರಾಜ್ಯದಲ್ಲಿ ೨೮ ಕ್ಕೆ ೨೮ ಸ್ಥಾನ ಗೆಲ್ಲುಬೇಕು. ಯಾರೇ ಪ್ರಚಾರ, ಅಪಪ್ರಚಾರ ಏನೇ ಮಾಡಲಿ ಈ ದೇವೇಗೌಡ ೯೧ ವಯಸ್ಸಿನಲ್ಲಿ ಹೋರಾಟ ಮಾಡುತ್ತಿದ್ದಾನೆ ಅದು ಎಲ್ಲರ ಮನಸ್ಸಿಗೆ ನಾಟಿದೆ. ಮೋದಿಯವರು ಡಿಎಂಕೆಯ ಹಂಗಿನಿಂದ ಈ ದೇಶ ಆಳುವ ಪರಿಸ್ಥಿತಿ ಬರುವುದಿಲ್ಲ. ಮೇಕೆದಾಟು ಯೋಜನೆ ಬಗ್ಗೆ ಡಿಎಂಕೆ ಪ್ರಣಾಳಿಕೆಯಲ್ಲಿ ಹಾಕಿದೆ. ಒಬ್ಬ ಪೊಲೀಸ್ ಅಧಿಕಾರಿ ತಮಿಳುನಾಡಿನ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಹೋರಾಡುತ್ತಿದ್ದಾರೆ. ಅಣ್ಣಾ ಡಿಎಂಕೆಯಲ್ಲಿ ಪಕ್ಷದಲ್ಲಿ ಕೆಲವರು ಪರಸ್ಪರ ಭಿನ್ನಾಭಿಪ್ರಾಯಗೊಂಡು ಅವರು ಕೂಡ ಬಿಜೆಪಿ ಜೊತೆ ಅಧಿಕಾರ ಹಂಚಿಕೊಂಡಿದ್ದಾರೆ. ತಮಿಳುನಾಡಿನಲ್ಲಿ ಬಿಜೆಪಿ ಅಕೌಂಟ್ ಓಪನ್ ಮಾಡುತ್ತೆ ಯಾವುದೇ ಸಂಶಯವಿಲ್ಲ. ಚಿಕ್ಕಬಳ್ಳಾಪುರದಲ್ಲಿ ನೀರಿನ ಸಮಸ್ಯೆ ಅರ್ಥ ಆಗಿದೆ.

ನಾನು ಗಮನ ಹರಿಸುತ್ತೇನೆ ಎಂದು ಪ್ರಧಾನಮಂತ್ರಿಗೂ ಹೇಳಿದ್ದೇನೆ. ಮೇಕೆದಾಟು, ಕಾವೇರಿ ಬಗ್ಗೆ ಕೇಂದ್ರ ಜಲಸಂಪನ್ಮೂಲ ಸಚಿವರ ಜೊತೆ ಮಾಡುತ್ತಿದ್ದೇನೆ.

ಅವರು ಏನು ಹೇಳಿದ್ದಾರೆ ಎನ್ನುವುದನ್ನು ಮಾಧ್ಯಮದ ಮುಂದೆ ಹೇಳಲ್ಲ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಹೋದಲೆಲ್ಲ ಜನಕ್ಕೆ ಅವರು ಹಣದ ಹೊಳೆಯನ್ನು ಹರಿಸುತ್ತಿದ್ದಾರೆ. ಮೂವರು ಇದ್ದರೂ ಆದರೇ ಡಾ. ಮಂಜುನಾಥ್ ಅವರನ್ನು ನಿಲ್ಲಿಸಿದ್ದಾರೆ. ಆದರೂ ಡಾ.ಮಂಜುನಾಥ್ ಗೆಲ್ತಾರೆ. ಅವರು ಅಧಿಕಾರ ಎಷ್ಟು ದುರುಪಯೋಗ ಮಾಡಬೇಕು ಮಾಡಿದ್ದಾರೆ.ಏನೇ ಸಮಸ್ಯೆ ಇಲ್ಲ, ಡಾ.ಮಂಜುನಾಥ್ ಗೆಲ್ತಾರೆ ಎಂದು ವಿಶ್ವಾಸವ್ಯಕ್ತಪಡಿಸಿದರು. ಯಾವ ಕಾವೇರಿ ನೀರನ್ನು ಉಳಿಸುತ್ತೇನೆ ಎಂದು ಹೇಳಿದ್ದೇನೋ ಅದನ್ನು ಮಾಡುತ್ತೇನೆ, ಅದು ಶತಸಿದ್ದ. ಆದರೆ ಭತ್ತದ ಬೆಳೆಯಿರಿ ಎಂದು ಹೇಳಲು ಹೋಗಲ್ಲ ಎಂದು ಹೇಳಿದರು.

ಇದೆ ವೇಳೆ ಹುಡಾ ಮಾಜಿ ಅಧ್ಯಕ್ಷ ಕೆ.ಎಂ. ರಾಜೇಗೌಡ, ಮಾಜಿ ಶಾಸಕ ಬಿ.ವಿ. ಕರೀಗೌಡ, ಒಕ್ಕಲಿಗರ ಸಂಘದ ರಾಜ್ಯ ನಿರ್ದೇಶಕ ಸುಮುಖ ರಘು, ಒಕ್ಕಲಿಗರ ಸಂಘದ ಅಧ್ಯಕ್ಷ ಪೂರ್ಣಚಂದ್ರ ತೇಜಸ್ವಿ ಇತರರು ಉಪಸ್ಥಿತರಿದ್ದರು.

 

Continue Reading

Trending

error: Content is protected !!