Hassan
ಜನಸ್ನೇಹಿ ಸಂಸದನಾಗುವೇ, ಭ್ರಷ್ಟಾಚಾರ ಮುಕ್ತ ಸರಕಾರಿ ಇಲಾಖೆಗಳಾಗಲಿ : ಎಂಪಿ ಶ್ರೇಯಸ್ ಪಟೇಲ್
ಹಾಸನ: ಜನಸ್ನೇಹಿ ಸಂಸದನಾಗಿರಬೇಕು ಎಂಬುದು ನನ್ನ ಆಸೆಯಾಗಿದ್ದು, ಜನರ ಸಂಕಷ್ಟಗಳಿಗೆ ಯಾವಾಗಲು ಸಿಗಬೇಕು. ಸಾಮಾನ್ಯ ಜನರು ಇಲಾಖೆಗೆ ಬಂದರೇ ಶೀಘ್ರ ಕೆಲಸ ಆಗುವಂತೆ ಹಾಗೂ ಭ್ರಷ್ಠಾಚಾರ ಮುಕ್ತ ನಮ್ಮ ಜಿಲ್ಲೆ ಆಗಬೇಕು ಎಂಬುದು ಉದ್ದೇಶವಾಗಿದ್ದು, ಜಿಲ್ಲಾ ಮಂತ್ರಿಗಳು, ಜಿಲ್ಲೆಯ ಎಲ್ಲಾ ಶಾಸಕರು, ಎಲ್ಲಾ ಇಲಾಖೆ ಅಧಿಕಾರಿಗಳು ಸೇರಿ ಎಲ್ಲಾರು ಒಗ್ಗಟ್ಟಾಗಿ ನಿರ್ವಹಿಸಿದರೇ ಮಾತ್ರ ನಮ್ಮ ಜಿಲ್ಲೆಯ ಅಭಿವೃದ್ಧಿ ಸಾಧ್ಯ ಎಂದು ನೂತನ ಲೋಕಸಭಾ ಸದಸ್ಯ ಶ್ರೇಯಸ್ ಎಂ. ಪಟೇಲ್ ಅಭಿಪ್ರಾಯಪಟ್ಟರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಮಂಗಳವಾರದಂದು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾದ ಕೆ.ಹೆಚ್. ವೇಣುಕುಮಾರ್ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ನೂತನ ಲೋಕಸಭಾ ಸದಸ್ಯರಿಗೆ ಅಭಿನಂದನೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ನಂತರ ಉದ್ದೇಶಿಸಿ ಮಾತನಾಡಿದ ಅವರು, ಚುನಾವಣೆಯಲ್ಲಿ ಪತ್ರಕರ್ತರ ಪಾತ್ರ ಬಹಳ ಮುಖ್ಯವಾಗಿದ್ದು, ಯಾವುದಾದರೂ ತಪ್ಪು ನಡೆಯುತ್ತಿದ್ದರೇ ಆ ಲೋಪ ದೋಷವನ್ನು ಎತ್ತಿ ಹಿಡಿಯುವ ಕೆಲಸವನ್ನು ಮಾಡುತ್ತಾರೆ. ಲೋಕಸಭಾ ಚುನಾವಣೆಯಲ್ಲಿ ಗೆಲುವು ಪಡೆದಿರುವುದಕ್ಕೆ ಒಂದು ಕಡೆ ಸಂತೋಷವಾದರೇ ಮತ್ತೊಂದು ಕಡೆ ಸವಾಲುಗಳು, ಜನರ ನಿರೀಕ್ಷೆಗಳು ಇರುವುದರಿಂದ ನಮ್ಮ ಮೇಲೆ ಜವಬ್ದಾರಿಗಳು ಹೆಚ್ಚಿದೆ. ಹೊಸಬರನು ಆಯ್ಕೆ ಮಾಡಲಾಗಿದ್ದು, ಜಿಲ್ಲೆಯ ಸರ್ವೋತಮುಖ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಅಧಿಕಾರಿಗಳೊಂದಿಗೆ ಸಮಲೋಚನೆ ಮಾಡಿ ಜಿಲ್ಲೆಯ ಚಿತ್ರಣವನ್ನು ಈ ತಿಂಗಳ ಒಳಗೆ ಪಡೆಯಲಾಗುವುದು. ಈಲ್ಲೆಯಲ್ಲಿ ಪ್ರಮುಖ ಸಮಸ್ಯೆ ಕಾಣುವುದು ಎಂದರೇ ಆನೆ ದಾಳಿ. ಕಾರೀಡರ್ ಬಗ್ಗೆ ಮನವಿ ಕೇಳಿ ಬಂದಿದ್ದು, ಆನೆ ದಾಳಿಯಿಂದ ಪ್ರಾಣ ಹಾನಿಯಾದಾಗ ಪರಿಹಾರ ಕೊಡದಿರುವುದು, ಶಾಶ್ವತ ಪರಿಹಾರಕ್ಕೆ ಇದುವರೆಗೂ ಕಂಡು ಹಿಡಿಯಲು ಸಾಧ್ಯವಾಗಿರುವುದಿಲ್ಲ. ಸರಕಾರದಿಂದ ೫೦ ಕೋಟಿ ರೂಗಳನ್ನು ಬಿಡುಗಡೆ ಮಾಡಿಸಿಕೊಡುವಂತೆ ಬೇಡಿಕೆ ಇದ್ದು, ಈ ಬಗ್ಗೆ ಕೇಂದ್ರ ಸರಕಾರದಿಂದ ಹಣ ಬಿಡುಗಡೆ ಆದರೇ ತಾತ್ಕಲಿಕವಾಗಿ ಊರಿಗೆ ಬಾರದಾಗೆ ಮಾಡುವುದಾಗಿ ಹೇಳಲಾಗಿದ್ದು, ಈ ಬಗ್ಗೆ ನಾನು ವರದಿ ಕೇಳಿದ್ದು, ಇನ್ನೆರಡು ದಿನಗಳಲ್ಲಿ ಕೊಡುವ ಭರವಸೆ ನೀಡಿದ್ದಾರೆ ಎಂದರು. ಈ ವಿಚಾರವಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಎಲ್ಲಾ ಶಾಸಕರನ್ನು ಕರೆಯಲಾಗುವುದು. ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳ ಗಮನಕ್ಕೂ ಹಾಗೂ ಅರಣ್ಯ ಸಚಿವರ ಗಮನಕ್ಕೂ ತರಲಾಗುವುದು. ಸಂಸತ್ತಿನಲ್ಲಿ ಇರುವ ನನ್ನ ಜವಬ್ಧಾರಿಯೊಂದಿಗೆ ಈ ಬಗ್ಗೆ ಧ್ವನಿ ಎತ್ತಲಾಗುವುದು.
ಹಾಸನ ಜಿಲ್ಲೆಯಲ್ಲಿ ಮೇಲು ಸೇತುವೆ, ಹಂಗರಹಳ್ಳಿಯ ಪ್ಲೇ ಓವರ್ ಕಳಪೆ ಕಾಮಗಾರಿ ಬಗ್ಗೆ ಮಾಹಿತಿ ಕೇಳಲಾಗಿದೆ. ಹಾಸನ ಎಂದರೇ ಪ್ರವಾಸೋಧ್ಯಮಕ್ಕೆ ಹೆಚ್ಚಿನ ಉತ್ತೇಜನ ಕೊಡುವ ಆಸೆ ಇದೆ. ಇಲ್ಲಿನ ಏಳು ತಾಲೂಕಿನಲ್ಲೂ ಅದರದೆಯಾದ ಪ್ರವಾಸಿ ತಾಣವಿದೆ. ಅಭಿವೃದ್ಧಿಗೊಳಿಸುವ ಗುರಿ ಇದೆ. ಇಲಿ ಗುರುತರವಾದಂತಹ ಕೈಗಾರಿಕೆ ಇರುವುದಿಲ್ಲ. ಇನ್ನೊಂದು ಸಂತೋಷ ಎಂದರೇ ನಮ್ಮ ಜಿಲ್ಲೆಯವರಾದ ಮಂಡ್ಯದಲ್ಲಿ ಸಂಸದರಾಗಿರುವ ಹೆಚ್.ಡಿ. ಕುಮಾರಸ್ವಾಮಿ ಅವರು, ಅವರಲ್ಲೂ ಮನವಿ ಮಾಡಿ ಜಿಲ್ಲೆಯ ಸರ್ವೋತಮುಖ ಅಭಿವೃದ್ಧಿಗೆ ಹೆಚ್ಚಿನ ಹೊತ್ತು ನೀಡಿ ಇಂಡಸ್ಟ್ರೀಸ್ ನ್ನು ನಮ್ಮ ಜೊತೆಗೂಡಿ ಪಕ್ಷತೀತವಾಗಿ ತರಬೇಕು. ಚುನವಣೆ ಮುಗಿದು ಹೋಗಿದ್ದು, ಇನ್ನೆನೆ ಇದ್ದರೂ ನಮ್ಮ ಮೂಲ ಮಂತ್ರ ಅಭಿವೃದ್ಧಿ. ಮಾನ್ಯ ಸಚಿವರಾದ ಹೆಚ್.ಡಿ ಕುಮಾರಸ್ವಾಮಿ ಅವರಲ್ಲಿ ನಾನು ಹೋಗಿ ಜಿಲ್ಲೆಗೆ ಹೊಂದಿಷ್ಟು ಖಾರ್ಕಾನೆಗಳನ್ನು ಕೊಡುವಂತೆ ವಯಕ್ತಿಕವಗಿ ಮನವಿ ಮಾಡುತ್ತೇನೆ ಎಂದು ಹೇಳಿದರು.ಮಹಿಳಾ ಸಬೀಲಿಕರಣಕ್ಕೆ ಬಂದರೇ ಸ್ವ-ಸಹಯ ಕೈಗಾರಿಕೆಗಳ್ನು ಮಾಡಬೇಕು. ತಾಲೂಕು ಮಟ್ಟದ ಎಲ್ಲಾ ಕಛೇರಿಗಳಲ್ಲಿ ನಮಗೆ ಜನರ ಕೆಲಸ ಬೇಗ ಆಗಬೇಕು. ಅದಕ್ಕೆ ಚುರುಕು ಮುಟಿಸುವ ಕೆಲಸವನ್ನು ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಜಿಲ್ಲಾಧಿಕಾರಿಗಳು ಒಗ್ಗೂಡಿ ಸಾಮಾನ್ಯ ಜನರು ಇಲಾಖೆಗೆ ಬಂದರೇ ಶೀಘ್ರ ಕೆಲಸ ಆಗುವಂತೆ ಹಾಗೂ ಭ್ರಷ್ಠಾಚಾರ ಮುಕ್ತ ನಮ್ಮ ಜಿಲ್ಲೆ ಆಗಬೇಕು. ಎಲ್ಲಾರು ಒಗ್ಗಟ್ಟಾಗಿ ನಿರ್ವಹಿಸಿದರೇ ಮಾತ್ರ ನಮ್ಮ ಜಿಲ್ಲೆಯ ಅಭಿವೃದ್ಧಿ ಸಾಧ್ಯ. ಪಕ್ಷ ನೋಡಿಕೊಂಡು ಹೋದರೇ ಅಭಿವೃದ್ಧಿಯತ್ತ ಹೋಗುವುದಿಲ್ಲ. ದೀಶಾ ಸಭೆಯಲ್ಲಿ ನಾನು ಮನವಿ ಮಾಡಲಾಗುವುದು.
ಸಕಲೇಶಪುರ, ಬೇಲೂರು ಶಾಸಕರನ್ನು ಅಭಿವೃದ್ಧಿಗೆ ಒಟ್ಟಾಗಿ ಶ್ರಮಿಸೋಣ ಎಂದು ಕೇಳಿದಕ್ಕೆ ಸ್ಪಂದಿಸಿದ್ದಾರೆ. ೨೦೦೭ ರಲ್ಲಿ ಏರ್ಪೋಟ್ ಪ್ರಾರಂಭವಾಗಿದ್ದು, ಇಂದಿನವರೆಗೂ ಸಮಸ್ಯೆ ಅಂತ್ಯ ಕಂಡಿರುವುದಿಲ್ಲ. ರಾಜ್ಯ ಸರಕಾರ ಸಲ್ಪ ಈಗ ಹಣ ಬಿಡುಗಡೆ ಮಾಡಿದ್ದು, ರೈತರಿಗೆ ಪರಿಹಾರ ಸಿಗೇಬೇಕು. ಏರ್ಪೋಟ್ ಗೆ ಜಿಲ್ಲಾಧಿಕಾರಿಗಳಿದ್ದು, ಚರ್ಚೆ ಮಾಡಲಾಗುವುದು. ಒಂದು ಸಿಟಿ ಎಂದರೇ ಏರ್ಪೋಟ್ ಇರಬೇಕು. ವಿಮಾನಯಾನ ಸಚಿವರಲ್ಲೂ ಕೂಡ ಮನವಿಯನ್ನು ಮಾಡಲಾಗುವುದು. ಇನ್ನು ಹಲವು ಕಡೆ ನೀರಿನ ಸಮಸ್ಯೆ ಇದ್ದು, ಜನಸ್ನೇಹಿ ಸಂಸದನಾಗಿರಬೇಕು ಎಂಬುದು ನನ್ನ ಆಸೆ. ಜನರ ಸಂಕಷ್ಟಗಳಿಗೆ ಯಾವಾಗಲು ಸಿಗಬೇಕು ಎನ್ನುವ ಉದ್ದೇಶ ಹೊಂದಿದ್ದೇನೆ. ಭೂ ಪರಿಹಾರ ವಿತರಣೆಯಲ್ಲಿ ವಿಳಂಬವಾಗಿದ್ದು, ಟಾಸ್ಟ್ ಪೋರ್ಸ್ ಅಧ್ಯಕ್ಷರಾದ ಜಿಲ್ಲಾಧಿಕಾರಿಗಳ ಸಭೆ ಕರೆದು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಕುರಿತು ಚರ್ಚೆ ಗುವುದು ತಿಳಿಸಿದರು. ನೆಫೆಡ್ ಮೂಲಕವೇ ಕೊಬ್ಬರಿಯನ್ನು ಖರೀದಿ ಮಾಡಲು ವರ್ಷವಡಿ ಅವಕಾಶ ಕೊಡುವಂತೆ ಮೊದಲ ಅಧಿವೇಶನದಲ್ಲೆ ಒತ್ತಾಯಿಸಲಾಗುವುದು. ಹಾಸನದ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿರುವ ಸಂಸದರ ಕಚೇರಿಯಲ್ಲಿ ವಾರದಲ್ಲಿ ಎರಡು ದಿನ ಇದ್ದು ಜನರ ಅಹವಾಲು ಸ್ವೀಕರಿಸಲಾಗುವುದು ಕಡೂರಿನ ಲ್ಲಿಯೂ ಕಚೇರಿ ತೆರೆದು ಅಲ್ಲಿನ ಜನರ ಸಮಸ್ಯೆ ಆಲಿಸುವ ನಿಟ್ಟಿನಲ್ಲಿ ಚಿಂತನೆ ಇದೆ ಎಂದರು ಶಾಂತಿಗ್ರಾಮದಿಂದ ಹಿರಿಯೂರುವರೆಗೂ ನಡೆಯುತ್ತಿ ರುವ ರಸ್ತೆ ಕಾಮಗಾರಿಗೆ ೩೫೦೦ ಕೋಟಿ ನಿಗದಿಪಡಿಸಲಾಗಿದ್ದು ಈ ಕಾಮಗಾರಿ ಶೀಘ್ರಗತಿಯಲ್ಲಿ ನಡೆಯಲು ಕ್ರಮವಹಿಸಲಾಗುವುದು ಅಂತೆಯೇ ರೈಲ್ವೆ ಕಾಮಗಾರಿ ಯೂ ನೆನೆಗುದಿಗೆ ಬಿದ್ದಿದ್ದು ಈ ಬಗ್ಗೆಯೂ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು. ಜನರು ಒಂದು ಬದಲಾವಣೆ ಬಯಸಿ ನನ್ನ ಆರಿಸಿದ್ದು, ಜನರ ಆಸೆಯಂತೆ ಕೆಲಸ ಮಾಡಬೇಕಾಗಿದೆ. ನನ್ನ ಪರಿಮಿತಿಯಲ್ಲಿ ಕೆಲಸ ಮಾಡಲಾಗುವುದು. ಇನ್ನು ರಾಜ್ಯದಲ್ಲಿ ನಮ್ಮ ಕಾಂಗ್ರೆಸ್ ಸರಕಾರ ಇರುವುದರಿಂದ ಒಂದು ಸಮಧಾನವಿದೆ. ಗೆದ್ದಿರುವುದಾಗಿ ನಾನು ಎಂದು ಧರ್ಮ ಪ್ರದರ್ಶಿಸುವುದಿಲ್ಲ. ಜನರ ಆಶೀರ್ವಾದದಂತೆ ನಗರ ಹಾಗೂ ಜಿಲ್ಲೆಯ ಸಮಸ್ಯೆ ಬಗ್ಗೆ ಹೆಚ್ಚಿನ ಒತ್ತು ಕೊಡುವುದಾಗಿ ತಮ್ಮ ಮನದಾಳದ ಮಾತನ್ನು ಹೇಳಿದರು.
ರಾಜ್ಯ ಪತ್ರಕರ್ತರ ಸಂಘದ ಕಾರ‍್ಯಕಾರಣಿ ಸದಸ್ಯರಾದ ಹೆಚ್.ಬಿ. ಮದನ್ ಗೌಡ ಮಾತನಾಡಿ, ಬೇರೆ ಬೇರೆ ಜಿಲ್ಲೆಗಳಲ್ಲಿ ವಿವಿಧ ಉತ್ಸವಗಳು ನಡೆಯುತ್ತದೆ ಆದರೇ ನಮ್ಮ ಹಾಸನ ಜಿಲ್ಲೆಯಲ್ಲಿ ಹೊಯ್ಸಳ ಉತ್ಸವ ನಿಂತು ಹೋಗಿದೆ. ಹೊಯ್ಸಳ ಉತ್ಸವ ಎಂದರೇ ಈ ಜಿಲ್ಲೆಯ ಸಂಸ್ಕೃತಿ, ಇತಿಹಾಸ, ಸಾಂಸ್ಕೃತಿಕವಾಗಿ ಜಿಲ್ಲೆಯನ್ನು ಇಡೀ ನಾಡಿಗೆ ಪರಿಚಯಿಸುವಂತಹ ಕೆಲಸ ಮಾಡಿದೆ. ಮುಂದಿನ ಪೀಳಿಗೆಗೆ ನಮ್ಮ ಇತಿಹಾಸ ಹೇಳದಿದ್ದರೇ ಏನು ಪ್ರಯೋಜನ? ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದ ಕಲಾವಿದರನ್ನು ಕರೆಯಿಸಿ ಹಾಸನ, ಹಳೇಬೀಡು, ಬೇಲೂರು ವಿವಿಧ ತಾಲೂಕುಗಳಲ್ಲಿ ಕಾಯಕ್ರಮ ನಡೆಯುತಿತ್ತು. ಜಿಲ್ಲಾ ಮಂತ್ರಿಯ ಬಳಿ ಮಾತನಾಡಿ ಈ ಸಾಂಸ್ಕೃತಿಕ ಉತ್ಸವ ಆದರೇ ಈ ಜಿಲ್ಲೆಯನ್ನು ಮತ್ತಷ್ಟು ಗೌರವದಿಂದ ನೋಡುವ ಕೆಲಸ ಮಾಡುವಂತೆ ಲೋಕಸಭಾ ಸದಸ್ಯರಾದ ಶ್ರೇಯಸ್ ಪಟೇಲ್ ಅವರಲ್ಲಿ ಮನವಿ ಮಾಡಿದರು.
ಇದೆ ವೇಳೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಹೆಚ್. ವೇಣು ಕುಮಾರ್, ರಾಜ್ಯ ಸಮಿತಿ ಸದಸ್ಯ ಎಚ್.ಬಿ. ಮದನ ಗೌಡ, ವಿಶೇಷ ಆಹ್ವಾನಿತರಾದ ರವಿನಾಗಲಗೂಡು, ಉಪಾಧ್ಯಕ್ಷ ಕೆ.ಎಂ. ಹರೀಶ್, ಕಾರ್ಯದರ್ಶಿ ಸಿ.ಬಿ. ಸಂತೋಷ್ ಇತರರು ಭಾಗವಹಿಸಿದ್ದರು.
Hassan
ಈ ಸಲದ ಗಣರಾಜ್ಯೋತ್ಸವ ಸನ್ಮಾನಕ್ಕೆ ಅಪರೂಪದ ವೈದ್ಯ ಡಾ.ನಿತಿನ್ ಆಯ್ಕೆ
ಹಾಸನ: ನಗರದ ಪ್ರತಿಷ್ಠಿತ ರಾಜೀವ್ ಆಯುರ್ವೇದ ವೈದ್ಯಕೀಯ ವಿಜ್ಞಾನಗಳ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದ ಪ್ರಾಂಶುಪಾಲರು ಮತ್ತು ಮುಖ್ಯ ವೈದ್ಯಾಧಿಕಾರಿಗಳಾಗಿರುವ ಡಾ.ಎಸ್.ಎ.ನಿತಿನ್ ಅವರು ಈ ಬಾರಿಯ ಜಿಲ್ಲಾಡಳಿತದ ಗಣರಾಜ್ಯೋತ್ಸವದ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರತಿವರ್ಷ ಗಣರಾಜ್ಯೋತ್ಸವ ದಿನದಂದು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಜಿಲ್ಲಾಡಳಿತ ಅಭಿನಂದಿಸುತ್ತಿದ್ದು, ಈ ಸಲ ವೈದ್ಯಕೀಯ ಕ್ಷೇತ್ರದಿಂದ ಡಾ.ನಿತಿನ್ ಅವರನ್ನು ಆಯ್ಮೆ ಮಾಡಲಾಗಿದೆ. 2001 ರಿಂದ ಆಯುರ್ವೇದ ವೈದ್ಯರಾಗಿ ಜಿಲ್ಲೆಯಲ್ಲಿ ವೃತ್ತಿ ಆರಂಭಿಸಿದ ಇವರು, 25 ವರ್ಷಗಳ ಕಾಲ ಸಾರ್ಥಕ ಸೇವೆ ಸಲ್ಲಿಸಿದ್ದಾರೆ.
ಹಾಸನದ ಪ್ರತಿಷ್ಠಿತ ರಾಜೀವ್ ಶಿಕ್ಷಣ ವಿದ್ಯಾಸಂಸ್ಥೆಯಲ್ಲಿ ವೈದ್ಯರಾಗಿ, ಶೈಕ್ಷಣಿಕ ಸಲಹೆಗಾರರಾಗಿ, ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2018 ರಿಂದ ರಾಜೀವ್ ಆಯುರ್ವೇದ ವೈದ್ಯಕೀಯ ವಿಜ್ಞಾನಗಳ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದ ಪ್ರಾಂಶುಪಾಲರು ಮತ್ತು ಮುಖ್ಯ ವೈದ್ಯಾಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2024 ರಿಂದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಶೈಕ್ಷಣಿಕ ಮಂಡಳಿ ಸದಸ್ಯರಾಗಿದ್ದಾರೆ.
2017 ರಲ್ಲಿ ರಾಷ್ಟ್ರೀಯ ಜೈನ್ ಯುವ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗೆ ಭಾಜರಾಗಿದ್ದಾರೆ,
ವೈದ್ಯ ಸೇವೆ ಜೊತೆಗೆ ಜನಪರ ಕೆಲಸ ಕಾರ್ಯವನ್ನೂ ಮಾಡುತ್ತಿದ್ದಾರೆ. ವಿಶೇಷವಾಗಿ ರೋಗಿಗಳ ಔಷಧ ಚೀಟಿಯನ್ನೂ ಕನ್ನಡದಲ್ಲೇ ಬರೆಯುತ್ತಿರುವುದು ಇವರ ಕನ್ನಡ ಪ್ರೀತಿಗೆ ಹಿಡಿದ ಕನ್ನಡಿ.
ಜಿಲ್ಲೆ ಹಾಗೂ ರಾಜ್ಯಮಟ್ಟದ ಪತ್ರಿಕೆಗಳಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ, ವಿವಿಧ ರೋಗ-ರುಜಿನಗಳ ಬಗ್ಗೆ ಅನುಸರಿಸಬೇಕಾದ ಮುನ್ನೆಚ್ಚರಿಕೆ ಬಗ್ಗೆ ಲೇಖನ ಬರೆದು ಜಾಗೃತಿ ಮೂಡಿಸುವ ಕೆಲಸವನ್ನೂ ಮಾಡುತ್ತಿದ್ದಾರೆ. ಈ ರೀತಿಯ 250ಕ್ಕೂ ಹೆಚ್ಚು ಲೇಖನ ಬರೆದಿದ್ದಾರೆ. ಅಲ್ಲದೆ ಈಗಿನ ಸಂದರ್ಭಕ್ಕೆ ಆಯುರ್ವೇದ ಮಹತ್ವದ ಬಗ್ಗೆಯೂ ಹತ್ತಾರು ಲೇಖನ ಬರೆದು ವೈದ್ಯಕೀಯ ಸೇವೆ ಜೊತೆಗೆ ಸಾಮಾಜಿಕ ಅರಿವು, ಜಾಗೃತಿ ಕೆಲಸವನ್ನೂ ಮಾಡುತ್ತಿರುವ ಅಪರೂಪದ ವೈದ್ಯರು. ಜೊತೆಗೆ 200ಕ್ಕೂ ಹೆಚ್ಚು ಹನಿಗವನ, 100ಕ್ಕೂ ಹೆಚ್ಚು ವ್ಯಕ್ತಿತ್ವ ವಿಕಸನ ಕಾರ್ಯಕ್ರಮ, 100ಕ್ಕೂ ಹೆಚ್ಚು ಆರೋಗ್ಯ ಮಾಹಿತಿ ಕುರಿತು ಉಪನ್ಯಾಸ, 70ಕ್ಕೂ ಹೆಚ್ಚು ಆರೋಗ್ಯ ಶಿಬಿರ ಮಾಡಿದ್ದಾರೆ. ಜಿಲ್ಲಾಮಟ್ಟದ ಗಣರಾಜ್ಯೋತ್ಸವ ಪುರಸ್ಕಾರಕ್ಕೆ ಭಾಜನರಾಗಿರುವುದಕ್ಕೆ ವಿವಿಧ ಕ್ಷೇತ್ರಗಳ ಗಣ್ಯರು ಹಾರ್ದಿಕ ಅಭಿನಂದನೆ ಸಲ್ಲಿಸಿದ್ದಾರೆ.
ಹಿರಿಯ ಪತ್ರಕರ್ತ ಶ್ರವಣಬೆಳಗೊಳದ ಎಸ್.ಎನ್.ಅಶೋಕ್ ಕುಮಾರ್-ಜಿ.ಪಿ.ಶ್ಯಾಮಲಾದೇವಿ ಅವರ ಸುಪುತ್ರರಾದ ನಿತಿನ್ ಅವರು, ಪ್ರಾಥಮಿಕ ಶಿಕ್ಷಣವನ್ನೇ ಶ್ರವಣಬೆಳಗೊಳದಲ್ಲೇ ಮುಗಿಸಿ ಪ್ರೌಢಶಿಕ್ಷಣವನ್ನು ಮಾವಿನಕೆರೆಯ ಜವಾಹರ್ ನವೋದಯ ವಿದ್ಯಾಲಯದಲ್ಲಿ ಪಡೆದರು. ಹಾಸನದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯದಲ್ಲಿ ಬಿಎಎಂಎಸ್, ಎಂಡಿ ಪಡೆದರು. ಬೆಂಗಳೂರು ರಾಜೀವ್ ಗಾಂಧಿ ಆರೋಗ್ಯ ವಿವಿಯಲ್ಲಿ ಪಿಹೆಚ್ಡಿ ಪಡೆದರು.
Hassan
ಅರೇಳ್ಳಿ: ಜ.26 ರಂದು 207ನೇ ಭೀಮ ಕೋರೇಗಾಂವ್ ವಿಜಯೋತ್ಸವ ಆಚರಣೆ
ಹಾಸನ: ಸಂವಿಧಾನ ದಿನಾಚರಣೆ ಅಂಗವಾಗಿ ಜನವರಿ 26ರ ರಂದು ಬೇಲೂರು ತಾಲೂಕಿನ ಅರೇಳ್ಳಿಯಲ್ಲಿ 207ನೇ ಭೀಮ ಕೋರೇಗಾಂವ್ ವಿಜಯೋತ್ಸವ ಆಚರಿಸಲಾಗುವುದು ಎಂದು ದಲಿತ ಮುಖಂಡರಾದ ಅರೆಹಳ್ಳಿ ನಿಂಗರಾಜು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಭೀಮ ಕೋರೆಂಗಾವ್ ಯುದ್ಧ ದಲಿತರ ಸ್ವಾಭಿಮಾನದ ಪ್ರತೀಕವಾಗಿದೆ ಕೇವಲ ೫೦೦ ಜನ ಮಹರ್ ಸೈನಿಕರು ೨೮,೦೦೦ ಪೇಶ್ವೆ ಸೈನಿಕರನ್ನು ಬಗ್ಗುಬಡಿದ ವಿಜಯದ ದಿನವೇ ಭೀಮಾ ಕೋರೇಗಾಂವ್ ವಿಜಯೋತ್ಸವವನ್ನು ಪ್ರತಿ ವರ್ಷವೂ ಹರೇಹಳ್ಳಿಯಲ್ಲಿ ಆಚರಿಸಲಾಗುತ್ತಿದ್ದು ಅದೇ ರೀತಿ ಈ ವರ್ಷವೂ ವಿಜೃಂಭಣೆಯ ಉತ್ಸವ ನಡೆಯಲಿದೆ ಎಂದರು. ಜನವರಿ ೨೬ ರಂದು ಬೆಳಗ್ಗೆ ೧೧ ಗಂಟೆಗೆ ಅಂಬೇಡ್ಕರ್ ವೃತ್ತದ ಬಳಿ ಇರುವ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಹೊರಡಲಿರುವ ಬೃಹತ್ ಮೆರವಣಿಗೆಯಲ್ಲಿ ಸಾವಿರಾರು ಸಂಖ್ಯೆಯ ಅಂಬೇಡ್ಕರ್ ಅಭಿಮಾನಿಗಳು ಹಾಗೂ ಅನುಯಾಯಿಗಳು ಭಾಗವಹಿಸಲಿದ್ದಾರೆ. ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಲಿದ್ದು, ಅಂಬೇಡ್ಕರ್ ಭಾವಚಿತ್ರ ಹಾಗೂ ವಿಜಯ ಸ್ತಂಭದ ಮೆರವಣಿಗೆ ನಡೆಯಲಿದೆ ಎಂದರು.
ಅದೇ ದಿನ ಸಂಜೆ ೬ ಸುಮಾರಿಗೆ ಪಟ್ಟಣದ ಪದವಿಪೂರ್ವ ಕಾಲೇಜು ಮೈದಾನದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದ್ದು ಕಾರ್ಯಕ್ರಮಕ್ಕೆ, ಬಾಬಾಸಾಹೇಬ್ ಅಂಬೇಡ್ಕರ್ ವಿಚಾರವಾದಿ ಬಿ.ಗೋಪಾಲ್, ಅಂಬೇಡ್ಕರ್ ಅನುಯಾಯಿ ಹಾಗೂ ನಟ ಚೇತನ್ ಅಹಿಂಸಾ, ಹಾಸ್ಯನಟ ಸಾಧುಕೋಕಿಲ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಅವರ ವಿಚಾರಧಾರೆಗಳು ಹಾಗೂ ಭೀಮ ಕೋರೆಗಾಂವ್ ವಿಜಯೋತ್ಸವ ವಿಚಾರಗಳನ್ನು ಹಂಚಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಊಟ ಹಾಗೂ ಉಪಕಾರದ ವ್ಯವಸ್ಥೆ ಕಲ್ಪಿಸಲಾಗಿದ್ದು, ನಡೆಯಲಿರುವ ಅದ್ದೂರಿ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯ ಅಂಬೇಡ್ಕರ್ ಅಭಿಮಾನಿಗಳು, ಸಾರ್ವಜನಿಕರು, ಅರೆಹಳ್ಳಿ ಗ್ರಾಮಸ್ಥರು ಹಾಗೂ ಆ ಭಾಗದ ಎಲ್ಲಾ ಮುಖಂಡರು ಜನಪ್ರತಿನಿಧಿಗಳು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ವಿಜಯೋತ್ಸವ ಸಮಿತಿಯ ಅಧ್ಯಕ್ಷ ಎಸ್. ವಿರೂಪಾಕ್ಷ, ಲಿಂಗರಾಜು, ವಿಜಯೋತ್ಸವ ಸಮಿತಿಯ ಉಪಾಧ್ಯಕ್ಷ ಮಲ್ಲಿಕಾರ್ಜುನ್, ರಮೇಶ್, ಸಿದರಾಜು, ದಿನೇಶ್, ಸೋಮಶೇಖರ್ ಕುಮಾರ್ ಇತರರು ಉಪಸ್ಥಿತರಿದ್ದರು.
Hassan
ಸಣ್ಣ ಕೈಗಾರಿಕ ಇಂಡಸ್ಟ್ರೀಯಸ್ ಅಸೋಸಿಯೇಷನ್ ಭವನದ ೨ನೇ ಅಂತಸ್ಥಿನ ಭವನದ ಶಂಕುಸ್ಥಾಪನೆ
ಹಾಸನ: ನಗರದ ಡೈರಿ ವೃತ್ತ, ಅರಸೀಕೆರೆ ರಸ್ತೆ ಬಳಿ ಕೈಗಾರಿಕ ಪ್ರದೇಶದಲ್ಲಿ ಸಣ್ಣ ಕೈಗಾರಿಕ ಇಂಡಸ್ಟ್ರೀಯಸ್ ಅಸೋಸಿಯೇಷನ್ ಭವನದ ೨ನೇ ಅಂತಸ್ಥಿನ ಭವನದ ಶಂಕುಸ್ಥಾಪನೆ ಸಮಾರಂಭಕ್ಕೆ ಶುಕ್ರವಾರದಂದು ಗುದ್ದಲಿ ಪೂಜೆ ಸಲ್ಲಿಸಿ ಕಟ್ಟಡ ನಿರ್ಮಾಣಕ್ಕೆ ನಗರಸಭೆ ಅಧ್ಯಕ್ಷರಾದ ಎಂ. ಚಂದ್ರೇಗೌಡರು ಚಾಲನೆ ನೀಡಿದರು.
ನಂತರ ಮಾಧ್ಯಮದೊಂದಿಗೆ ಮಾತನಾಡಿ, ನಗರಸಭೆ ಅಧ್ಯಕ್ಷರಾದ ಎಂ. ಚಂದ್ರೇಗೌಡ ಮಾತನಾಡಿ, ಎರಡನೇ ಅಂತಸ್ಥಿತನ ನೂತನ ಕಟ್ಟಡ ನಿರ್ಮಾಣಕ್ಕೆ ಈಗಾಗಲೇ ಗುದ್ದಲಿಪೂಜೆ ನೆರವೇರಿದೆ. ಈ ಕಟ್ಟಡ ಸಂಘಕ್ಕೆ ಉಪಯೋಗವಾಗಲಿ ಎಂದು ಶುಭ ಹಾರೈಸುವುದಾಗಿ ಹೇಳಿದರು.
ಎಫ್.ಕೆ.ಸಿ.ಸಿ.ಐ. ಐಟಿ-ಬಿಟಿ ಸಮಿತಿ ಅಧ್ಯಕ್ಷ ಹೆಚ್.ಎ. ಕಿರಣ್ ಮಾತನಾಡಿ, ಸಂಘದ ಎರಡನೇ ಹಂತದ ಶಿಲನ್ಯಾಸ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿದ್ದು, ಕಳೆದ ಎರಡು ದಶಕಗಳಿಂದ ನಮ್ಮ ಸಂಘದ ಕಾರ್ಯಕ್ರಮಗಳು ಹಾಗೂ ಕಾರ್ಯವ್ಯಾಪ್ತಿ ಜಿಲ್ಲಾಧ್ಯಂತ ಹರಡಿದೆ. ಎರಡು ಸಾವಿರ ಜನ ಇದ್ದಂತಹ ಉದ್ಯಮಿಗಳು ಜಿಲ್ಲಾಧ್ಯಂತ ಈಗ ೨೦ ಸಾವಿರಕ್ಕೂ ಹೆಚ್ಚುಜನ ಉದ್ಯಮಿಗಳು ಇದ್ದಾರೆ. ಈ ಭಾಗವು ಕೂಡ ನಗರಸಭೆ ವ್ಯಾಪ್ತಿಗೆ ಸೇರಿದ್ದು, ಇ-ಖಾತೆ ವಿಚಾರವಾಗಿಯೂ ಕೂಡ ನಗರಸಭೆ ಅಧ್ಯಕ್ಷರು ಮಾಡಿಕೊಡುವ ಭರವಸೆ ನೀಡಿದ್ದಾರೆ ಎಂದರು.
ನಿರ್ಮಾಣವಾಗುತ್ತಿರುವ ಎರಡನೇ ಅಂತಸ್ಥಿನ ಕಟ್ಟಡವು ಕೈಗಾರಿಕ ಉದ್ಯಮಿಗಳ ಕಾರ್ಯಕ್ರಮಕ್ಕೆ ಮತ್ತು ಇಂಡಸ್ಟ್ರಿಯಲ್ ಕಾರ್ಯಕ್ರಮ ನಡೆಸುವುದಕ್ಕೆ ಒಂದು ಹಾಲ್ ನಿರ್ಮಾಣ ಮಾಡಲಾಗುತ್ತಿದೆ. ಮೊದಲನೇ ಅಂತಸ್ಥನ್ನು ಸ್ಕಿಲ್ ಡೆವಲಪ್ ಮೆಂಟ್ ಗೆ ಈಗಾಗಲೇ ಉದ್ಘಾಟನೆಗೊಂಡಿದೆ. ಉದ್ಯಮಿಗಳ ಹಲವಾರು ಜನರಿಗೆ ಕಾರ್ಯಕ್ರಮವನ್ನು ಸದ್ಯದಲ್ಲೆ ಮಾಡಲಾಗುವುದು ಎಂದು ಹೇಳಿದರು.
ಇದೆ ಸಂದರ್ಭದಲ್ಲಿ ಹೆಚ್.ಎ.ಡಿ.ಎಸ್.ಎಸ್.ಐ.ಎ. ಅಧ್ಯಕ್ಷ ಆರ್. ಶಿವರಾಮ್, ಉಪಾಧ್ಯಕ್ಷ ಪ್ರಕಾಶ್ ಎಸ್. ಯಾಜಿ, ಪ್ರಧಾನ ಕಾರ್ಯದರ್ಶಿ ಎನ್. ಸುದರ್ಶನ್, ಲಘು ಒದ್ಯೋಗ ಭಾರತೀ ಪ್ರಸನ್ನ ಕುಮಾರ್ ಮತ್ತು ಶಿವಾನಂದ್ ಇತರರು ಉಪಸ್ಥಿತರಿದ್ದರು.
-
Mysore23 hours ago
ನಮ್ಮನ್ನ ಟಾರ್ಗೆಟ್ ಮಾಡುತ್ತಿದ್ದಾರೆ: ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಹೇಳಿದ್ದೇನು?
-
Education24 hours ago
Free Coaching : ಮಾಸಿಕ 5,000ರೂ. ಜೊತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕರ್ನಾಟಕ ಸರ್ಕಾರದಿಂದ ಉಚಿತ ತರಬೇತಿ
-
Cinema24 hours ago
ಬಿಗ್ಬಾಸ್ ಸೀಸನ್ 11: ಮೀಸಲಾತಿ ಮೂಲಕ ಹನುಮಂತು ಫೈನಲ್ಸ್ ತಲುಪಿದ್ದಾರೆ ಎಂದ ನಟಿ ಹಂಸ
-
Mysore8 hours ago
ಹೃದಯಾಘಾತದಿಂದ ಯುವರಾಜ ಕಾಲೇಜಿನ ಪ್ರಾಂಶುಪಾಲ ನಿಧನ
-
Kodagu9 hours ago
ಎ.ಸಿ.ಎಫ್ ಆಗಿ ವಾಟೇರಿರ ಕಾರ್ಯಪ್ಪ ಅಧಿಕಾರ ಸ್ವೀಕಾರ
-
Kodagu9 hours ago
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಅಲ್ಪಸಂಖ್ಯಾತರಿಗೆ ದಕ್ಕಬೇಕು
-
Mysore6 hours ago
ಲೋಕಾಯುಕ್ತ ಸರ್ಕಾರದ ಕೈಗೊಂಬೆ: ಸಿಎಂ ಕ್ಲೀನ್ ಚೀಟ್ಗೆ ಹಳ್ಳಿಹಕ್ಕಿ ಪ್ರತಿಕ್ರಿಯೆ
-
Kodagu7 hours ago
ಕಡಂಗ ಪ್ರೀಮಿಯರ್ ಲೀಗ್ ಕ್ರಿಕೆಟ್ ಬಿಡ್ಡಿಂಗ್ ಪ್ರಕ್ರಿಯೆ