Hassan
ಹೆಚ್.ಡಿ. ದೇವೇಗೌಡ್ರ ಮೊಮ್ಮಗ ಪ್ರಜ್ವಲ್ ಸೋಲಿಸಿ, ಪುಟ್ಟಸ್ವಾಮಿ ಮೊಮ್ಮಗ ಶ್ರೇಯಸ್ ಪಟೇಲ್ ಗೆಲ್ಲಿಸಲು ಜಿಲ್ಲಾ ಮಂತ್ರಿ ಕೆ.ಎನ್. ರಾಜಣ್ಣ ಕರೆ
ಹಾಸನ: ಮುಂದೆ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಹೆಚ್.ಡಿ. ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣನನ್ನು ಸೋಲಿಸಿ ಜಿ. ಪುಟ್ಟಸ್ವಾಮಿ ಮೊಮ್ಮಗನಾದ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ನನ್ನು ಗೆಲ್ಲಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಕರೆ ನೀಡಿದರು.
ನಗರದ ಕರಾವಳಿ ಹೋಟೆಲ್ ಸಭಾಂಗಣದಲ್ಲಿ ಶುಕ್ರವಾರದಂದು ಕರೆಯಲಾಗಿದ್ದ ದಲಿತ ಮುಖಂಡರ ಸಭೆಯನ್ನು ಗಿಡಕ್ಕೆ ನೀರು ಹಾಕುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ದಲಿತ ಸಮುದಾಯ ಮನಸ್ಸು ಮಾಡಿದರೇ ಒಂದು ಬದಲಾವಣೆ ತರಬಹುದು. ಶಿವಲಿಂಗೇಗೌಡರ ಕ್ಷೇತ್ರದಲ್ಲಿ ಇಪ್ಪತ್ತು ಸಾವಿರ ಒಕ್ಕಲಿಗರು ಇರಬಹುದು. ದಲಿತರು ಮನಸ್ಸು ಮಾಡಿದರೇ ಏನು ಬೇಕಾದರೂ ಮಾಡಬಹುದು ಎನ್ನುವುದಕ್ಕೆ ನಾನು ಮತ್ತು ಶಿವಲಿಂಗೇಗೌಡರೆ ಉದಾಹರಣೆ. ಪುಟ್ಟಸ್ವಾಮಿ ಎಂದರೇ ದೇವರಂತಹ ಮನಷ್ಯ ಎನ್ನುತ್ತಾರೆ. ಅಂತಹ ಕುಟುಂಬದಿಂದ ಸರಳವಾಗಿ ಕುಟುಂಬದವರು ಚುನಾವಣೆಗೆ ಬಂದಿರುವುದು ನಮ್ಮ ಸೌಭಾಗ್ಯ ಕಾಂಗ್ರೆಸ್ ನಿಂದ ಐದು ಗ್ಯಾರಂಟಿ ನೀಡಲಾಗಿದ್ದು, ಬಡ ಕುಟುಂಬಗಳಿಗೆ ಅನುಕೂಲವಾಗಿದೆ. ಹಾಸನಾಂಬೆ ದರ್ಶನಕ್ಕೆ ಇಡೀ ಇತಿಹಾಸದಲ್ಲಿ ಇಷ್ಟೊಂದು ಜನ ಬಂದೆ ಇಲ್ಲ. ಆದರೇ ಕಾಂಗ್ರೆಸ್ ಸರಕಾರ ಬಂದ ಮೇಲೆ ಇಷ್ಟೊಂದು ಜನ ಸೇರಿದ್ದಾರೆ. ಅನ್ನ ಭಾಗ್ಯ ಯೋಜನೆ, ಗೃಹ ಲಕ್ಷ್ಮಿ, ಸೇರಿದಂತೆ ಹತ್ತು ಹಲವಾರು ಯೋಜನೆ ಜಾರಿ ಮಾಡಿ ಜನರ ಆಶಿರ್ವಾದ ಸಿಕ್ಕಿದೆ. ನಾನು ದೇವೇಗೌಡರ ಬಗ್ಗೆ ಟೀಕೆ ಮಾಡುವುದಿಲ್ಲ ಎಂದರು. ದಲಿತ ಸಮಾಜವಾಗಲಿ ಯಾರೆ ಆಗಲಿ ಕೆಳವರ್ಗ ಮತ್ತು ಮೇಲ್ವರ್ಗ ಎಂದು ಯಾರು ಮಾತನಾಡಬೇಡಿ. ಮಾತನಾಡಿದರೇ ನನಗೆ ಕೋಪ ಬರುತ್ತದೆ ಎಂದು ಸಭೆಯಲ್ಲಿ ಮಾತನಾಡಿದ ದಲಿತ ಮುಖಂಡರ ಬಗ್ಗೆ ಬೇಸರವ್ಯಕ್ತಪಡಿಸಿದರು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಟ್ಟು ಸಮಾಜದಲ್ಲಿ ಉನ್ನತ ಮಟ್ಟಕ್ಜೆ ಹೋಗಲು ಅವಕಾಶ ನೀಡಿ. ಈ ಬಾರಿ ದಲಿತರೆಲ್ಲಾ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಗೆಲ್ಲಿಸಬೇಕು. ದೇವೇಗೌಡ ಮೊಮ್ಮಗನನ್ನು ಸೋಲಿಸಿ ಪುಟ್ಟಸ್ವಾಮಿ ಗೌಡರ ಮೊಮ್ಮಗನನ್ನು ಗೆಲ್ಲಿಸಿ ರಾಜ್ಯದಲ್ಲಿ ಇಪ್ಪತೆಂಟು ಕ್ಷೇತ್ರ ಗೆಲ್ಲಿಸಬೇಕೆಂದು ಹೇಳಿದರು.
ಎಲ್ಲಾರೂ ಉತ್ಸಹದಲ್ಲಿ ಕಾಂಗ್ರೆಸ್ ಬೆಂಬಲಿಸುತ್ತಿದ್ದು, ಕಾಂಗ್ರೆಸ್ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಬೇಕು ಎನ್ನುವ ಉದ್ದೇಶ ಹೊಂದಿದ್ದಾರೆ. ಇವತ್ತು ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧೀ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವು ತನ್ನದೆಯಾದಂತಹ ಬಳವಣಿಗೆಯನ್ನು ಹೊಂದುತ್ತಿದೆ. ೧೦ ವರ್ಷದ ಬಿಜೆಪಿ ಆಡಳಿತವು ಕೇವಲ ಸುಳ್ಳು ಹೇಳಿಕೊಂಡು ಕಾಲದೂಡಿದೆ. ಪ್ರತಿ ಖಾತೆಗೆ ೧೫ ಲಕ್ಷ ರೂ ಹಣ ಹಾಕುವುದಾಗಿ ಹೇಳಿ ಬಿಡಿಕಾಸು ಹಾಕಲಿಲ್ಲ. ೨ ಕೋಟಿ ಉದ್ಯೋಗ ಕೊಡುವುದಾಗಿ ಹೇಳಿ ಯಾವ ಭರವಸೆ ಈಡೇರಿಸದೇ ಬರಿ ಸುಳ್ಳು ಹೇಳಿಕೊಂಡು ಬಂದಿದೆ ಎಂದು ದೂರಿದರು. ರಾಜ್ಯದಿಂದ ೪ ಲಕ್ಷಕ್ಕೂ ಹೆಚ್ಚು ಹಣವನ್ನು ತೆರಿಗೆ ರೂಪದಲ್ಲಿ ಕೇಂದ್ರಕ್ಕೆ ಹಣ ಹೋಗುತ್ತದೆ ಆದರೇ ನಮಗೆ ಕೊಡುವುದು ಕೇವಲ ೧ ಸಾವಿರ ಕೋಟಿ ಮಾತ್ರ. ಕೇಂದ್ರದಿಂದ ನಮಗೆ ಆದ ಅನ್ಯಾಯ ತಿಳಿದಿದೆ. ದೇವೇಗೌಡರನ್ನು ನಾನು ಟೀಕೆ ಮಾಡುವುದಿಲ್ಲ ಎಂದು ಹೇಳುತ್ತಲೆ ಟಾಂಗ್ ಕೊಟ್ಟರು.
ಗೃಹ ಮಂಡಳಿ ಅಧ್ಯಕ್ಷ ಕೆ.ಎಂ. ಶಿವಲಿಂಗೇಗೌಡ ಅವರು ಮಾತನಾಡಿ, ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಅವರನ್ನು ಗೆಲ್ಲಿಸಿ ಹಾಸನ ರಾಜಕಾರಣದಲ್ಲಿ ಇತಿಹಾಸ ಬರೆಯಬೇಕು. ಅತೀ ಹೆಚ್ಚು ಮತಗಳ ಅಂತರದಲ್ಲಿ ಗೆಲ್ಲಿಸಲು ಮುಂದಾಗಬೇಕು ಎಂದರು.
ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಮಾತನಾಡಿ, ನಿಮ್ಮ ಮನೆ ಮಗನಾಗಿ ನಿಮ್ಮೆಲ್ಲರ ಜೊತೆ ಇರುವೆನು. ಜೆಡಿಎಸ್ ಪಕ್ಷದಲ್ಲಿ ಪ್ರಧಾನಿಯಾಗಿ, ಮುಖ್ಯಮಂತ್ರಿಯಾಗಿ ಹಾಗೂ ಜಿಲ್ಲಾ ಪಂಚಾಯಿತಿ ವರೆಗೂ ಜಿಲ್ಲೆಯ ಜನರು ಅವಕಾಶ ನೀಡಿದ್ದು, ಈ ಬಾರಿ ನಂಗೆ ಅವಕಾಶ ಕೊಡುವುದರ ಮೂಲಕ ಸೇವೆ ಮಾಡುವ ಅವಕಾಶ ಕೊಡಬೇಕು ಎಂದು ಮನವಿ ಮಾಡಿದರು.
ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಂ. ಸೋಮಶೇಖರ್ ಮಾತನಾಡಿ, ಹಿಂದೆ ದೇವೇಗೌಡರನ್ನು ಪುಟ್ಟಸ್ವಾಮಿ ಅವರು ಸೋಲಿಸಿದರು. ಈಗ ಅದೆ ಕುಟುಂಬದ ಶ್ರೇಯಸ್ಸು ಪಟೇಲ್ ಅವರು ಪ್ರಜ್ವಲ್ ರೇವಣ್ಣರನ್ನು ಸೋಲಿಸಲಿದ್ದಾರೆ ಎಂದು ವಿಶ್ವಾಸವ್ಯಕ್ತಪಡಿಸಿದರು. ಕುಟುಂಬ ರಾಜಕಾರಣವು ಈ ಚುನಾವಣೆಯಲ್ಲಿ ಬದಲಾವಣೆ ಆಗಲಿದೆ. ದೌರ್ಜನ್ಯ ದಬ್ಬಾಳಿಕೆಯನ್ನು ಇಂದು ಜಿಲ್ಲೆಯಲ್ಲಿ ಕಾಣುತ್ತಿದ್ದೇವೆ. ಕೊನೆಗಣಿಸಲು ಶ್ರೇಯಸ್ ಪಟೇಲ್ ಅಂತಹ ನಾಯಕರು ನಮಗೆ ಬೇಕು. ಜಿಲ್ಲೆಯ ಜನರ ಅಭಿವೃದ್ಧಿಗೆ ಶ್ರಮಿಸಲಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ದಲಿತ ಮುಖಂಡರಾದ ಹೆಚ್.ಕೆ. ಸಂದೇಶ್, ಮಾದಿಗ ದಂಡೋರದ ಮುಖಂಡರಾದ ವಿಜಯ್ ಕುಮಾರ್, ಕಾಂಗ್ರೆಸ್ ಮುಖಂಡರಾದ ಬನವಾಸೆ ರಂಗಸ್ವಾಮಿ, ಹೆಚ್.ಕೆ. ಮಹೇಶ್, ಮುರುಳಿಧರ್, ಪ್ರಚಾರ ಸಮಿತಿ ಅಧ್ಯಕ್ಷ ದೇವರಾಜೇಗೌಡ, ವಾಲ್ಮಿಕಿ ಸಮಾಜದ ಜಿ.ಓ. ಮಹಾಂತಪ್ಪ, ದಲಿತ ಸಂಘರ್ಷ ಸಮಿತಿ ಮುಖಂಡರಾದ ರಾಜಶೇಖರ್ ಇತರರು ಉಪಸ್ಥಿತರಿದ್ದರು.

Hassan
ಧರ್ಮಸ್ಥಳಕ್ಕೆ ಪಾದಯಾತ್ರೆ ತೆರಳುತ್ತಿದ್ದ ವ್ಯಕ್ತಿ ಹೃದಯಾಘಾತದಿಂದ ಸಾ*ವು
ಹಾಸನ : ಧರ್ಮಸ್ಥಳಕ್ಕೆ ಪಾದಯಾತ್ರೆ ತೆರಳುತ್ತಿದ್ದ ವ್ಯಕ್ತಿ ಹೃದಯಾಘಾತದಿಂದ ಸಾವು
ಕೃಷ್ಣ (50) ಹೃದಯಾಘಾತದಿಂದ ಸಾವನ್ನಪ್ಪಿದ ವ್ಯಕ್ತಿ
ಹಾಸನ ಜಿಲ್ಲೆ, ಬೇಲೂರು ತಾಲ್ಲೂಕಿನ, ಚೀಕನಹಳ್ಳಿ ಗ್ರಾಮದಲ್ಲಿ ನಿನ್ನೆ ತಡರಾತ್ರಿ ಘಟನೆ

ಧರ್ಮಸ್ಥಳಕ್ಕೆ ಪಾದಯಾತ್ರೆ ತೆರಳುತ್ತಿದ್ದ ಹಾಸನ ತಾಲ್ಲೂಕಿನ, ಜಕ್ಕೇನಹಳ್ಳಿ ಗ್ರಾಮದ ಕೃಷ್ಣ
ಹಿಂದೆ ಬರುತ್ತಿದ್ದ ಕೃಷ್ಣ ಅವರ ಅಳಿಯ ದಿನೇಶ್
ಅಳಿಯ ಬರುವವರೆಗೂ ಚೀಕನಹಳ್ಳಿ ಗ್ರಾಮದ ಆಟೋ ನಿಲ್ದಾಣದಲ್ಲಿ ವಿಶ್ರಾಂತಿ ಪಡೆಯಲು ಮಲಗಿದ್ದ ಕೃಷ್ಣ
ಆಟೋ ನಿಲ್ದಾಣಕ್ಕೆ ಬಂದು ಮಾವನನ್ನು ಎಬ್ಬಿಸಿದ ಅಳಿಯ ದಿನೇಶ್

ಅಷ್ಟರಲ್ಲಿ ಮಲಗಿದಲ್ಲಿಯೇ ಸಾವನ್ನಪ್ಪಿದ್ದ ಕೃಷ್ಣ
ನಂತರ ಆಟೋದಲ್ಲಿ ಬೇಲೂರು ತಾಲ್ಲೂಕು ಆಸ್ಪತ್ರೆಗೆ ಮಾವನನ್ನು ಕರೆ ತಂದ ಅಳಿಯ ದಿನೇಶ್
ಹೃದಯಾಘಾತದಿಂದ ಸಾವನ್ನಪ್ಪಿರುವುದನ್ನು ದೃಢಪಡಿಸಿದ ವೈದ್ಯರು
ಜಕ್ಕೇನಹಳ್ಳಿ ಗ್ರಾಮಕ್ಕೆ ಮೃತದೇಹ ಕೊಂಡೊಯ್ದ ಅಳಿಯ ದಿನೇಶ್
ಅರೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ
Hassan
ಗೋಮಾತೆ ಎಂದಿಗೂ ಕೈ ಬಿಡುವುದಿಲ್ಲ: ಸದಾಶಿವ ಶಿವಾಚಾರ್ಯ ಸ್ವಾಮೀಜಿ
ವರದಿ: ಸತೀಶ್ ಚಿಕ್ಕಕಣಗಾಲು
ಆಲೂರು: ಮನುಷ್ಯನನ್ನು ಭೂಮಿ ಕೈಬಿಟ್ಟರೂ ಗೋಮಾತೆ ಕೈ ಬಿಡುವುದಿಲ್ಲ ಎಂದು ಕಾರ್ಜುವಳ್ಳಿ ಹಿರೇಮಠದ ಪೀಠಾಧ್ಯಕ್ಷರಾದ ಶ್ರೀ ಸದಾಶಿವ ಶಿವಾಚಾರ್ಯಸ್ವಾಮಿಜಿ ಹೇಳಿದರು.
ತಾಲೂಕಿನ ಪಾಳ್ಯ ಹೋಬಳಿ ಯಲಗನಹಳ್ಳಿ ಗ್ರಾಮದಲ್ಲಿ ನೂತನವಾಗಿ ಪ್ರಾರಂಭಗೊಂಡ ಹಾಲು ಉತ್ಪಾದಕರ ಸಂಘದ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದರು. ಇಟ್ಟರೆ ಸಗಣಿಯಾದೆ, ತಟ್ಟಿದರೆ ಕರುಲಾದೆ, ಸುಟ್ಟರೆ ನೊಸಲಿಗೆ ವಿಭೂತಿಯಾದೆ, ತಟ್ಟದೆ ಹಾಕಿದರೆ ಮೇಲು ಗೊಬ್ಬರವಾದೆ, ನೀನಾರಿಗದೆಯೊ ಎಲೆ ಮಾನವ, ಹರಿ ಹರಿ ಗೋವು ನಾನು ಎಂಬ ಕವಿ ವಾಣಿಯಂತೆ. ಗೋವಿನಿಂದ ಪ್ರತಿಯೊಂದು ಫಲವನ್ನು ಮಾನವ ಕಂಡುಕೊಂಡಿದ್ದಾನೆ ಎಂದರು.

ಇತ್ತಿಚೆಗೆ ದೇಶದಲ್ಲಿ ಕ್ಷೀರಕ್ರಾಂತಿಯಾದ ನಂತರ ಹಾಲು ಒಕ್ಕೂಟಗಳು ವಿಶೇಷವಾಗಿ ಬೆಳೆದು ನಿಂತಿವೆ. ರಾಜ್ಯದಲ್ಲಿ ಹಾಲು ಉತ್ಪಾದನೆಲಯಲ್ಲಿ ಬೆಂಗಳೂರು ಪ್ರಥಮ ಸ್ಥಾನದಲ್ಲಿದ್ದರೆ ಹಾಸನ ಹಾಲು ಒಕ್ಕೂಟ ಎರಡನೆ ಸ್ಥಾನದಲ್ಲಿರುವುದು ವಿಶೇಷ. ಇತ್ತಿಚೆಗೆ ಕೃತಕ ಹಾಲು ಉತ್ಪಾದನೆಯಲ್ಲಿ ರಸಾಯನಿಕ ಬೆರೆಸಿ ಮಾರಾಟ ಮಾಡುತ್ತಿರುವುದು ಆಘಾತಕಾರಿ ಬೆಳವಣಿಗೆ ಎಂದು ಹೇಳಿದರು.
ತಿರುಪತಿ ದೇವಸ್ಥಾನದಲ್ಲಿ ಲಡ್ಡು ತಯಾರು ಮಾಡಲು ರಾಜ್ಯದಿಂದ ಶುದ್ಧ ನಂದಿನಿ ಹಾಲು ಪಡೆಯುತ್ತಿದ್ದರು. ದೇವಸ್ಥಾನ ಆಡಳಿತ ಮಂಡಲಿ ಅಧಿಕ ಆರ್ಥಿಕ ಲಾಭದ ದೃಷ್ಟಿಯಿಂದ ಬೇರೆಡೆಯಿಂದ ಹಾಲು ಪಡೆದು ಲಡ್ಡು ತಯಾರು ಮಾಡುತ್ತಿದ್ದರು. ಪರಿಶೀಲಿಸಿದಾಗ ಹಂದಿ ಕೊಬ್ಬು ಬಳಸುತ್ತಿರುವುದು ಕಂಡು ಬಂದಿರುವುದು ಆಘಾತಕಾರಿ ವಿಷಯ. ಶ್ರೀಮಂತ ದೇವಾಲಯದಲ್ಲಿ ಅನಾಚಾರ ನಡೆದು ಬೆಳಕಿಗೆ ಬಂತು. ನಂತರದಲ್ಲಿ ಕರ್ನಾಟಕ ಹಾಲು ಒಕ್ಕೂಟದಿಂದ ತಯಾರಾಗುವ ನಂದಿನಿ ತುಪ್ಪ ಪಡೆಯಲು ಬಂದಿರುವುದು ಬಹಳ ವಿಶೇಷ. ಗೋವು ಕಸವನ್ನು ತಿಂದರೂ ಹಾಲು ನೀಡುತ್ತದೆ. ಹಾಲಿನಲ್ಲಿ 20 ದಿನದ ವರೆಗೆ ವಿಷ ಬರುವುದಿಲ್ಲ. ಯುವಜನರು ಹೈನುಗಾರಿಕೆಯಲ್ಲಿ ತೊಡಗಬೇಕು. ಆಡಳಿತ ಮಂಡಲಿ ಗ್ರಾಹಕರನ್ನು ಪ್ರೋತ್ಸಾಹಿಸಬೇಕು ಎಂದರು.

ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿರ್ದೇಶಕ ಕೆ. ಎಸ್. ಮಂಜೇಗೌಡರು ಮಾತನಾಡಿ, ಗೋವುಗಳನ್ನು ಸಾಕಿ ಅದರ ಉಪಯೋಗ ಪಡೆದುಕೊಂಡವರಿಗೆ ಮಾತ್ರ ಪಡೆದ ಫಲ ಅರ್ಥವಾಗುತ್ತದೆ. ಮಾಜಿ ಸಚಿವ ಎಚ್. ಡಿ. ರೇವಣ್ಣ ರವರು ರಾಜ್ಯದಲ್ಲಿ ಹಾಲು ಉತ್ಪಾದನೆ ಮತ್ತು ಮಾರಾಟ ಮಾಡಲು ಸಹಕಾರ ಮಂಡಲಿಗಳನ್ನು ರಚಿಸಿ, ಹೈನುಗಾರಿಕೆ ಅಭಿವೃದ್ಧಿಗೆ ಕಾರಣವಾಗಿದ್ದಾರೆ. ಹೈನುಗಾರಿಕೆ ಕುಟುಂಬದ ಆರ್ಥಿಕ ಸ್ಥಿತಿ ಉತ್ತಮಗೊಳ್ಳಲು ಸಹಕಾರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಹಾಸನ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕ ಪಿ. ಲಿಂಗರಾಜು, ಆಡಳಿತ ಅಧಿಕಾರಿ ಸೌಜನ್ಯ, ಸಂಘದ ಅಧ್ಯಕ್ಷ ಹಾಲಪ್ಪ, ಕಾರ್ಯದರ್ಶಿ ಯೋಗೇಶ್, ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
Hassan
ಪೋಕ್ಸೋ ಪ್ರಕರಣ: ಮೂವರು ಆರೋಪಿಗಳಿಗೆ ಶಿಕ್ಷೆ ವಿಧಿಸಿದ ಕೋರ್ಟ್
ಸಕಲೇಶಪುರ: ತಾಲೂಕಿನಲ್ಲಿ 2016 ರಲ್ಲಿ ನಡೆದಿದ್ದ ಪೋಕ್ಸೋ ಪ್ರಕರಣವೊಂದರ ಆರೋಪಿಗಳಿಗೆ ಹಾಸನದ ತ್ವರಿತ ನ್ಯಾಯಾಲಯ ವಿವಿಧ ರೀತಿಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಪ್ರಕರಣದ ಎ-1 ಆರೋಪಿ ರೂಪೇಶ್ ಎಂಬಾತನಿಗೆ 10 ಸಜೆ ಜೊತೆಗೆ ಅಟ್ರಾಸಿಟಿ ಕೇಸಲ್ಲಿ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಹಾಗೆಯೇ ಎ-2 ಆರೋಪಿ ಹೊನ್ನಪ್ಪನಿಗೆ 10 ವರ್ಷ ಸಜೆ ಮತ್ತು ಪ್ರಕರಣದ ಮೂರನೇ ಚಂದ್ರಶೇಖರ್‌ಗೆ 7 ವರ್ಷ ಶಿಕ್ಷೆ ವಿಧಿಸಲಾಗಿದೆ.

9 ವರ್ಷಗಳ ಹಿಂದೆ ನಡೆದಿದ್ದ ಪ್ರಕರಣದ ಸುದೀರ್ಘ ತನಿಖೆ ನಡೆಸಿದ ಸಕಲೇಶಪುರ ಗ್ರಾಮಾಂತರ ಪೊಲೀಸರು ನಂತರ ಕೋರ್ಟ್‌ಗೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ.
-
Mandya22 hours agoನದಿಯ ಪಾವಿತ್ರ್ಯತೆ ಮತ್ತು ಪರಿಸರ ರಕ್ಷಣೆಗಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಿ : ಅಸ್ಥಿ ವಿಸರ್ಜನೆಯ ಜೊತೆಗೆ ಬಟ್ಟೆ ಮತ್ತು ಪೂಜಾ ಸಾಮಗ್ರಿ ಬಿಡುವುದು ಸಂಪೂರ್ಣ ನಿಷೇಧ – ಡಿಸಿ
-
Special14 hours agoಉಚಿತ PSI ಕೋಚಿಂಗ್: ಪರೀಕ್ಷೆ ಇಲ್ಲದೆ ಆಯ್ಕೆ!!
-
Kodagu1 hour agoಮಡಿಕೇರಿ ಪೊಲೀಸ್ ಕಾನ್ಸ್ಟೇಬಲ್ ಸಂದೀಪ್ ನಿಧನ
-
State15 hours agoಲೈಂಗಿಕ ದೌರ್ಜನ್ಯ ಕೇಸ್: ಮಂಡ್ಯ ರಮೇಶ್, ಸಾಧು ಕೋಕಿಲ ವಿರುದ್ದದ ಪ್ರಕರಣವನ್ನು ರದ್ದುಗೊಳಿಸಿದ ಹೈಕೋರ್ಟ್
-
Hassan16 hours agoಗೋಮಾತೆ ಎಂದಿಗೂ ಕೈ ಬಿಡುವುದಿಲ್ಲ: ಸದಾಶಿವ ಶಿವಾಚಾರ್ಯ ಸ್ವಾಮೀಜಿ
-
Mysore23 hours agoಪ್ರಧಾನಿ ವಿರುದ್ದ ಸಿಎಂ ಹೇಳಿಕೆ ರಾಜಕೀಯ ಪ್ರೇರಿತ: ಡಾ. ಹೇಮಾ ನಂದೀಶ್
-
Mysore14 hours agoಫೆ. 13ಕ್ಕೆ ನಂಜನಗೂಡು, ತಾಂಡವಪುರದಲ್ಲಿ ರೈತ ಸ್ನೇಹ ಮುಖಾಮುಖಿ ಚರ್ಚೆ : ಕಾರ್ಯಕ್ರಮ ವಿಶೇಷತೆ ಕುರಿತು ವಿದ್ಯಾಸಾಗರ್ ಸುದ್ದಿಗೋಷ್ಠಿ
-
Chamarajanagar20 hours agoಮಲೆ ಮಹದೇಶ್ವರ ಬೆಟ್ಟದ ಮಹಾಶಿವರಾತ್ರಿ ಜಾತ್ರೆಗೆ ದ್ವಿಚಕ್ರ, ತ್ರಿಚಕ್ರ ವಾಹನ ನಿಷೇಧ: ಡಿಸಿ ಆದೇಶ
