Connect with us

Hassan

ಮೂರನೇ ದಿನದ ಪುಂಡಾನೆ ಸೆರೆ ಕಾರ್ಯಾಚರಣೆ ಯಶಸ್ವಿ

Published

on

ಹಾಸನ : ಪುಂಡಾನೆ ಸೆರೆ ಕಾರ್ಯಾಚರಣೆ

ಗ್ರಾಮೀಣ ಭಾಗದಲ್ಲಿ ಉಪಟಳ ನೀಡುತ್ತಿದ್ದ ಕಾಡಾನೆ ಸೆರೆ

ಮನೆಯ ಬಳಿ ಬಂದು ಬೈಕ್, ಆಟೋ ಜಖಂಗೊಳಿಸಿ ರೈತರ ಬೆಳೆ ಹಾಳು ಮಾಡಿ ಉಪಟಳ ನೀಡುತ್ತಿದ್ದ ಗಂಡಾನೆ

ಹಾಸನ ಜಿಲ್ಲೆ, ಬೇಲೂರು ತಾಲ್ಲೂಕಿನ, ಕಣದೂರು ಗ್ರಾಮದಲ್ಲಿ ಸೆರೆ

ಕಾಫಿ ತೊಟದೊಳಗೆ ಜೊತೆಯಾಗಿದ್ದ ಎರಡು ಕಾಡಾನೆಗಳು

ಕಾಡಾನೆಗಳನ್ನು ಬೇರ್ಪಡಿಸಿ ಅರವಳಿಕೆ ನೀಡಲು ಹರಸಾಹಸಪಟ್ಟ ವೈದ್ಯರು

ನಂತರ ಸುಮಾರು ಹದಿನೆಂಟು ವರ್ಷದ ಕಾಡಾನೆಗೆ ಅರವಳಿಕೆ ಚುಚ್ಚುಮದ್ದು ನೀಡಿದ ವೈದ್ಯರು

ಸ್ವಲ್ಪ ದೂರು ಓಡಿ ಪ್ರಜ್ಞೆತಪ್ಪಿ ಬಿದ್ದ ಕಾಡಾನೆ

ಕಾಡಾನೆಯನ್ನು ರಸ್ತೆಗೆ ಎಳೆದು ತಂದ ಕುಮ್ಕಿ ಆನೆಗಳು

ಕ್ರೇನ್ ಮೂಲಕ ಲಾರಿಗೆ ಇಳಿಸಿ ಸ್ಥಳಾಂತರಕ್ಕೆ ಸಿದ್ದತೆ

Continue Reading
Click to comment

Leave a Reply

Your email address will not be published. Required fields are marked *

Hassan

ಗೋಮಾತೆ ಎಂದಿಗೂ ಕೈ ಬಿಡುವುದಿಲ್ಲ: ಸದಾಶಿವ ಶಿವಾಚಾರ್ಯ ಸ್ವಾಮೀಜಿ

Published

on

ವರದಿ:  ಸತೀಶ್ ಚಿಕ್ಕಕಣಗಾಲು

ಆಲೂರು: ಮನುಷ್ಯನನ್ನು ಭೂಮಿ ಕೈಬಿಟ್ಟರೂ ಗೋಮಾತೆ ಕೈ ಬಿಡುವುದಿಲ್ಲ ಎಂದು ಕಾರ್ಜುವಳ್ಳಿ ಹಿರೇಮಠದ ಪೀಠಾಧ್ಯಕ್ಷರಾದ ಶ್ರೀ ಸದಾಶಿವ ಶಿವಾಚಾರ್ಯಸ್ವಾಮಿಜಿ ಹೇಳಿದರು.

ತಾಲೂಕಿನ ಪಾಳ್ಯ ಹೋಬಳಿ ಯಲಗನಹಳ್ಳಿ ಗ್ರಾಮದಲ್ಲಿ ನೂತನವಾಗಿ ಪ್ರಾರಂಭಗೊಂಡ ಹಾಲು ಉತ್ಪಾದಕರ ಸಂಘದ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದರು. ಇಟ್ಟರೆ ಸಗಣಿಯಾದೆ, ತಟ್ಟಿದರೆ ಕರುಲಾದೆ, ಸುಟ್ಟರೆ ನೊಸಲಿಗೆ ವಿಭೂತಿಯಾದೆ, ತಟ್ಟದೆ ಹಾಕಿದರೆ ಮೇಲು ಗೊಬ್ಬರವಾದೆ, ನೀನಾರಿಗದೆಯೊ ಎಲೆ ಮಾನವ, ಹರಿ ಹರಿ ಗೋವು ನಾನು ಎಂಬ ಕವಿ ವಾಣಿಯಂತೆ. ಗೋವಿನಿಂದ ಪ್ರತಿಯೊಂದು ಫಲವನ್ನು ಮಾನವ ಕಂಡುಕೊಂಡಿದ್ದಾನೆ ಎಂದರು.

ಇತ್ತಿಚೆಗೆ ದೇಶದಲ್ಲಿ ಕ್ಷೀರಕ್ರಾಂತಿಯಾದ ನಂತರ ಹಾಲು ಒಕ್ಕೂಟಗಳು ವಿಶೇಷವಾಗಿ ಬೆಳೆದು ನಿಂತಿವೆ. ರಾಜ್ಯದಲ್ಲಿ ಹಾಲು ಉತ್ಪಾದನೆಲಯಲ್ಲಿ ಬೆಂಗಳೂರು ಪ್ರಥಮ ಸ್ಥಾನದಲ್ಲಿದ್ದರೆ ಹಾಸನ ಹಾಲು ಒಕ್ಕೂಟ ಎರಡನೆ ಸ್ಥಾನದಲ್ಲಿರುವುದು ವಿಶೇಷ. ಇತ್ತಿಚೆಗೆ ಕೃತಕ ಹಾಲು ಉತ್ಪಾದನೆಯಲ್ಲಿ ರಸಾಯನಿಕ ಬೆರೆಸಿ ಮಾರಾಟ ಮಾಡುತ್ತಿರುವುದು ಆಘಾತಕಾರಿ ಬೆಳವಣಿಗೆ ಎಂದು ಹೇಳಿದರು.

ತಿರುಪತಿ ದೇವಸ್ಥಾನದಲ್ಲಿ ಲಡ್ಡು ತಯಾರು ಮಾಡಲು ರಾಜ್ಯದಿಂದ ಶುದ್ಧ ನಂದಿನಿ ಹಾಲು ಪಡೆಯುತ್ತಿದ್ದರು. ದೇವಸ್ಥಾನ ಆಡಳಿತ ಮಂಡಲಿ ಅಧಿಕ ಆರ್ಥಿಕ ಲಾಭದ ದೃಷ್ಟಿಯಿಂದ ಬೇರೆಡೆಯಿಂದ ಹಾಲು ಪಡೆದು ಲಡ್ಡು ತಯಾರು ಮಾಡುತ್ತಿದ್ದರು. ಪರಿಶೀಲಿಸಿದಾಗ ಹಂದಿ ಕೊಬ್ಬು ಬಳಸುತ್ತಿರುವುದು ಕಂಡು ಬಂದಿರುವುದು ಆಘಾತಕಾರಿ ವಿಷಯ. ಶ್ರೀಮಂತ ದೇವಾಲಯದಲ್ಲಿ ಅನಾಚಾರ ನಡೆದು ಬೆಳಕಿಗೆ ಬಂತು. ನಂತರದಲ್ಲಿ ಕರ್ನಾಟಕ ಹಾಲು ಒಕ್ಕೂಟದಿಂದ ತಯಾರಾಗುವ ನಂದಿನಿ ತುಪ್ಪ ಪಡೆಯಲು ಬಂದಿರುವುದು ಬಹಳ ವಿಶೇಷ. ಗೋವು ಕಸವನ್ನು ತಿಂದರೂ ಹಾಲು ನೀಡುತ್ತದೆ. ಹಾಲಿನಲ್ಲಿ 20 ದಿನದ ವರೆಗೆ ವಿಷ ಬರುವುದಿಲ್ಲ. ಯುವಜನರು ಹೈನುಗಾರಿಕೆಯಲ್ಲಿ ತೊಡಗಬೇಕು. ಆಡಳಿತ ಮಂಡಲಿ ಗ್ರಾಹಕರನ್ನು ಪ್ರೋತ್ಸಾಹಿಸಬೇಕು ಎಂದರು.

ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿರ್ದೇಶಕ ಕೆ. ಎಸ್. ಮಂಜೇಗೌಡರು ಮಾತನಾಡಿ, ಗೋವುಗಳನ್ನು ಸಾಕಿ ಅದರ ಉಪಯೋಗ ಪಡೆದುಕೊಂಡವರಿಗೆ ಮಾತ್ರ ಪಡೆದ ಫಲ ಅರ್ಥವಾಗುತ್ತದೆ. ಮಾಜಿ ಸಚಿವ ಎಚ್. ಡಿ. ರೇವಣ್ಣ ರವರು ರಾಜ್ಯದಲ್ಲಿ ಹಾಲು ಉತ್ಪಾದನೆ ಮತ್ತು ಮಾರಾಟ ಮಾಡಲು ಸಹಕಾರ ಮಂಡಲಿಗಳನ್ನು ರಚಿಸಿ, ಹೈನುಗಾರಿಕೆ ಅಭಿವೃದ್ಧಿಗೆ ಕಾರಣವಾಗಿದ್ದಾರೆ. ಹೈನುಗಾರಿಕೆ ಕುಟುಂಬದ ಆರ್ಥಿಕ ಸ್ಥಿತಿ ಉತ್ತಮಗೊಳ್ಳಲು ಸಹಕಾರಿಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಹಾಸನ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕ ಪಿ. ಲಿಂಗರಾಜು, ಆಡಳಿತ ಅಧಿಕಾರಿ ಸೌಜನ್ಯ, ಸಂಘದ ಅಧ್ಯಕ್ಷ ಹಾಲಪ್ಪ, ಕಾರ್ಯದರ್ಶಿ ಯೋಗೇಶ್, ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

 

Continue Reading

Hassan

ಪೋಕ್ಸೋ ಪ್ರಕರಣ: ಮೂವರು ಆರೋಪಿಗಳಿಗೆ ಶಿಕ್ಷೆ ವಿಧಿಸಿದ ಕೋರ್ಟ್‌

Published

on

ಸಕಲೇಶಪುರ: ತಾಲೂಕಿನಲ್ಲಿ 2016 ರಲ್ಲಿ ನಡೆದಿದ್ದ ಪೋಕ್ಸೋ ಪ್ರಕರಣವೊಂದರ ಆರೋಪಿಗಳಿಗೆ ಹಾಸನದ ತ್ವರಿತ ನ್ಯಾಯಾಲಯ ವಿವಿಧ ರೀತಿಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಪ್ರಕರಣದ ಎ-1 ಆರೋಪಿ ರೂಪೇಶ್ ಎಂಬಾತನಿಗೆ 10 ಸಜೆ ಜೊತೆಗೆ ಅಟ್ರಾಸಿಟಿ ಕೇಸಲ್ಲಿ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಹಾಗೆಯೇ ಎ-2 ಆರೋಪಿ ಹೊನ್ನಪ್ಪನಿಗೆ 10 ವರ್ಷ ಸಜೆ ಮತ್ತು ಪ್ರಕರಣದ ಮೂರನೇ ಚಂದ್ರಶೇಖರ್‌ಗೆ 7 ವರ್ಷ ಶಿಕ್ಷೆ ವಿಧಿಸಲಾಗಿದೆ.


9 ವರ್ಷಗಳ ಹಿಂದೆ ನಡೆದಿದ್ದ ಪ್ರಕರಣದ ಸುದೀರ್ಘ ತನಿಖೆ ನಡೆಸಿದ ಸಕಲೇಶಪುರ ಗ್ರಾಮಾಂತರ ಪೊಲೀಸರು ನಂತರ ಕೋರ್ಟ್‌ಗೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ.

Continue Reading

Hassan

ಪುಲ್ವಾಮ ದಾಳಿಯಲ್ಲಿ ಮೃತಪಟ್ಟರ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ : ಫೆ.14 ರಂದು ಬೈಕ್ ರ‍್ಯಾಲಿ

Published

on

ಹಾಸನ: ಪುಲ್ವಾಮ ದಾಳಿಯಲ್ಲಿ ಮೃತಪಟ್ಟರ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸುವ ಉದ್ದೇಶದಿಂದ ಫೆ.14 ರಂದು ನಗರದಲ್ಲಿ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ನಿವೃತ್ತ ಅರೆಸೇನಾ ಪಡೆ
ಒಕ್ಕೂಟದ ಜಿಲ್ಲಾಧ್ಯಕ್ಷ ಸಿ. ನಾಗೇಶ್ ಹೇಳಿದರು.

ನಗರದಲ್ಲಿ‌‌‌ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2019 ರ ಫೆ. 14 ರಂದು ಜಮ್ಮು ಕಾಶ್ಮೀರ ದ ಪುಲ್ವಾಮ ಬಳಿ‌ ನಡೆದ ಉಗ್ರರ ದಾಳಿಯಲ್ಲಿ 44 ಮಂದಿ ಸಿಆರ್ ಪಿಎಫ್ ಯೋಧರು ಹುತಾತ್ಮರಾಗಿದ್ದು ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಉದ್ದೇಶದಿಂದ ಬೈಕ್ ರ್ಯಾಲಿ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಅಂದು ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ಹಾಸನ ನಗರದ ಡೈರಿ ಸರ್ಕಲ್ ನಿಂದ ಬೈಕ್ ರ್ಯಾಲಿ
ಪ್ರಾರಂಭವಾಗಿ ರಿಂಗ್ ರಸ್ತೆಯವ ತನ್ವಿ ತ್ರಿಷಾ ಕಲ್ಯಾಣ ಮಂಟಪ ಮಾರ್ಗವಾಗಿ ಸುಬೇದಾರ್ ನಾಗೇಶ್ ವೃತ್ತ, ಸಾಲಗಾಮೆ ರಸ್ತೆ, ಮಲೆನಾಡು ಇಂಜಿನಿಯರಿಂಗ್ ಕಾಲೇಜು, ಸಹ್ಯಾದ್ರಿ ಸರ್ಕಲ್, ಹೇಮಾವತಿ ಪ್ರತಿಮೆ ಮುಂಭಾಗದಿಂದ ಎನ್ ಆರ್ ಸರ್ಕಲ್, ಡಿ ಸಿ ಕಛೇರಿ ಮೂಲಕ ಹಾಯ್ದು ರೈಲ್ವೆ ಸ್ಟೇಷನ್ ಮತ್ತು ಡೈರಿ ಸರ್ಕಲ್ ಮುಖಾಂತರ ಕೆಂಚಟಹಳ್ಳಿಯಲ್ಲಿ ಇರುವ ನಮ್ಮ ನಿವೃತ್ತ ಅರಸೇನಾ ಪಡೆಯ ಕಟ್ಟಡದ ಹತ್ತಿರಕ್ಕೆ ಸಾಗುತ್ತದೆ ಮತ್ತು ಅಲ್ಲಿ ಮುಕ್ತಾಯವಾಗುತ್ತದೆ ಎಂದು ವಿವರಿಸಿದರು.

ರ್ಯಾಲಿಯಲ್ಲಿ ಸಾರ್ವಜನಿಕರು, ವಿವಿಧ ಸಂಘಟನೆ ಪ್ರತಿನಿಧಿಗಳು ಭಾಗವಹಿಸಿ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಬೇಕಾಗಿ ಮನವಿ ಮಾಡಿದರು.

ಒಕ್ಕೂಟದ ಜಿಲ್ಲಾ ಉಪಾಧ್ಯಕ್ಷ ರಮೇಶ್, ನಾರಾಯಣಪ್ಪ, ಎಚ್.ಕುಮಾರ್, ಎಚ್.ಆರ್.ವಿಜಯ್ ಕುಮಾರ್ ಮತ್ತಿತರರು ಇದ್ದರು.

Continue Reading

Trending

error: Content is protected !!