Connect with us

Mandya

ಮಂಡ್ಯ ಹೈದ’ ಚಲನಚಿತ್ರ ಬಿಡುಗಡೆ: ಅಭಿಮಾನಿಗಳಿಂದ ಪಟಾಕಿ ಸಿಡಿಸಿ ಸಂಭ್ರಮ

Published

on

ಮಂಡ್ಯ: ಮಹಾವೀರ ಚಿತ್ರಮಂದಿರದಲ್ಲಿ ಶುಕ್ರವಾರ ಬಿಡುಗಡೆಗೊಂಡ ‘ಮಂಡ್ಯ ಹೈದ’ ಸಿನಿಮಾ ನಟರಾದ ಅಭಯ್‌ ಚಂದ್ರು, ನಿರ್ಮಾಪಕ ಎಸ್‌.ಚಂದ್ರಶೇಖರ್ ಅವರು ನಗರಕ್ಕೆ ಆಗಮಿಸಿದಾಗ ಅವರ ಅಭಿಮಾನಿಗಳು ಪಟಾಕಿ ಸಿಡಿಸಿದರು. ನಂತರ ಚಿತ್ರಮಂದಿರದವರೆಗೂ ಮೆರವಣಿಗೆ ನಡೆಸಿದರು.

ನಿರ್ಮಾಪಕ ಎಸ್‌.ಚದ್ರಶೇಖರ್‌ ಮಾತನಾಡಿ, ಇದು ನನ್ನ ಐದನೇ ಚಿತ್ರ ಪ್ರೊಡಕ್ಷನ್‌ ಚಿತ್ರವಾಗಿದೆ, ಮೊದಲನೆಯದು ನೀನಾದೆ, ಸೂಪರ್‌ಮ್ಯಾನ್‌, ಬರ್ತ್‌, ಮನಸಾಗಿದೆ ಎಂಬ ಚಿತ್ರದಲ್ಲಿ ನನ್ನ ಮಗನನ್ನು ಪರಿಚಯಿಸಿದ್ದೆ, ಅದೇರೀತಿ ಆ ಚಿತ್ರವು ಮಹಾವೀರ ಚಿತ್ರ ಮಂದಿರದಲ್ಲಿ ಬಿಡುಗಡೆಗೊಂಡಿತ್ತು ಎಂದರು.

ನಾನು ಹೊಸಬೂದುನೂರು ಗ್ರಾಮದವನಾಗಿದ್ದು, ಮಂಡ್ಯ ಸೊಗಡಿನ ಚಿತ್ರ ಮಾಡಬೇಕೆಂಬುವ ಆಸೆ ಈಡೇರಿದೆ, ಅಭಯ್‌ ಚಂದ್ರು ಅವರ ಎರಡನೇ ಚಿತ್ರವಾಗಿದ್ದು, ಕನ್ನಡ ಸಿನಿ ಪ್ರಿಯರು ನೋಡಬೇಕು ಎಂದು ಮನವಿ ಮಾಡಿಕೊಳ್ಳುತ್ತೇನೆ, ಆ ಮೂಲಕ ಮಂಡ್ಯ ನಟರನ್ನು ಬೆಳೆಸಬೇಕು ಎಂದರು.

ಈ ಚಿತ್ರದಲ್ಲಿ ನಟಿಯಾಗಿ ಭೂಮಿಕಾ ಭೀಮೇಶ್‌ ಅವರು ನಟನೆ ಮಾಡಿದ್ದಾರೆ, ಹೊಸದಾಗಿ ಖಳನಾಯಕನ ಪಾತ್ರಕ್ಕೆ ವಿಷ್ಣುವನ್ನು ಪರಿಚಯಿಸಿದ್ದೇನೆ, ಕಾಮಿಡಿಕಿಲಾಡಿಗಳು 12 ರಿಂದ 15 ಜನರು ನಟನೆ ಮಾಡಿದ್ದಾರೆ, ಈ ಸಿನಿಮಾವು ಚಿಕ್ಕಮಕ್ಕಳಿಂದ ದೊಡ್ಡವರ ತನಕ ನೋಡುವ ಚಿತ್ರವಾಗಿರುವುದರಿಂದ ‘ಮಂಡ್ಯ ಹೈದ’ ಸಿನಿಮಾ ನೋಡಿ ಹರಿಸಿ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಬುಲೆಟ್‌ ರಕ್ಷಕ್‌ ಇದ್ದರು.

Continue Reading
Click to comment

Leave a Reply

Your email address will not be published. Required fields are marked *

Mandya

ಮಹಿಳೆಯರಿಗೆ ಬಾಗಿನ ನೀಡುವುದು ಹಿಂದೂ ಸಂಪ್ರದಾಯದಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ : ಮಾಜಿ ಸಚಿವ ಶ್ರೀರಾಮುಲು

Published

on

ಶ್ರೀರಂಗಪಟ್ಟಣ : ಮಹಿಳೆಯರಿಗೆ ತವರು ಮನೆಯಿಂದ ಬಾಗಿನ ನೀಡುವುದು ಹಿಂದೂ ಸಂಪ್ರದಾಯದಲ್ಲಿ ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ ಎಂದು ಮಾಜಿ ಸಚಿವ ಶ್ರೀರಾಮುಲು ತಿಳಿಸಿದರು.

ಅವರು ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಎನ್.ಶಂಕರೇಗೌಡ ಚಾರಿಟಬಲ್ ಟ್ರಸ್ಟ್ ವತಿಯಿಂದ ಗೌರಿ-ಗಣೇಶ ಹಬ್ಬದ ಪ್ರಯುಕ್ತ ಬಿಜೆಪಿ ಯುವ ಮುಖಂಡ ಇಂಡುವಾಳು ಎಸ್.ಸಚ್ಚಿದನಂದ ಹಮ್ಮಿಕೊಂಡಿದ್ದ ೫ ಸಾವಿರಕ್ಕೂ ಅಧಿಕ ಸಂಖ್ಯೆಯ ಮಹಿಳೆಯರಿಗೆ ಬಾಗಿನ ವಿತರಣೆಯ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದರು.

ಹಿಂದೂ ಸಂಪ್ರದಾಯದಂತೆ ಸಹಸ್ರರಾರು ಮಹಿಳೆಯರಿಗೆ ಬಾಗಿನ ನೀಡುವ ಮೂಲಕ ಶ್ರೀರಕ್ಷೆ ತುಂಬುತ್ತಿರುವ ಎಸ್.ಸಚ್ಚಿದಾನಂದ ಮುಂಬರುವ ವರ್ಷಗಳಲ್ಲಿ ಜನನಾಯಕನಾಗಿ ನಿಮ್ಮ ಸೇವೆ ಮಾಡಲಿದ್ದಾರೆ ಎಂದು ಮಾಜಿ ಸಚಿವ ಶ್ರೀರಾಮಲು ವಿಶ್ವಾಸ ವ್ಯಕ್ತಪಡಿಸಿದರು.

ಸಾಮಾನ್ಯ ರೈತಾಪಿ ಕುಟುಂಬದಲ್ಲಿ ಹುಟ್ಟಿ ಕಷ್ಟಪಟ್ಟು ಬೆಳೆದು ಬಂದ ಎಸ್.ಸಚ್ಚಿದಾನಂದ ತನಗೆ ಯಾವುದೇ ಅಧಿಕಾರ ಇಲ್ಲದಿದ್ದರು ನಿಮ್ಮ ಮನೆಯ ಮಗನಂತೆ, ಸಹೋದರನಂತೆ ನಿಮ್ಮೆಲ್ಲರಿಗೂ ಬಾಗಿನ ನೀಡಿ ಹಿಂದೂ ಸಂಪ್ರದಾಯದಂತೆ ತವರಿನ ಶ್ರೀರಕ್ಷೆ ನೀಡಿ ನಿಮ್ಮೊಂದಿಗೆ ನಾನಿದ್ದೇನೆ ಎಂಬ ಭರವಸೆ ನೀಡಿದ್ದಾರೆ. ಓರ್ವ ರಾಜಕಾರಣಿ ಚುನಾವಣೆ ಸಂದರ್ಭದಲ್ಲಿ ತಾನು ಗೆಲ್ಲಲ್ಲು ಜನರ ಮೇಲೆ ಖರ್ಚು ಮಾಡಿದರೆ, ಗೆದ್ದ ಬಳಿಕ ಸರ್ಕಾರದ ಹಣದಲ್ಲಿ ಕಾರ್ಯಕ್ರಮ ಮಾಡಿ ಜನಸೇವೆ ಮಾಡಿದೆ ಎನ್ನುತ್ತಾರೆ. ಆದರೆ ಕಳೆದ 2023ರ ಚುನಾವಣೆಯಲ್ಲೂ ತಾನು ಸೋತರು ಕುಗ್ಗದೆ, ಜಗ್ಗದೆ ತಮ್ಮ ದುಡಿಮೆಯ ಹಣದಲ್ಲಿ ಸ್ರೀಯರಿಗೆ ಹೊಲಿಗೆ ಯಂತ್ರಗಳ ವಿತರಣೆ, ಬಾಣಂತಿಯರ ಕಾಳಜಿಗೆ ವಿಶೇಷ ಆರೋಗ್ಯ ಕಿಟ್, ಉನ್ನತ ವ್ಯಾಸಂಗ ಹಾಗೂ ವೈದ್ಯಕೀಯ ಶಿಕ್ಷಣದ ಬಡ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆ ಮಾಡಿದ್ದು, ಇತ್ತೀಚೆಗೆ ಮಂಡ್ಯದಲ್ಲಿ ಅಪಘಾತದಲ್ಲಿ ಮೃತಪಟ್ಟ ಪುಟ್ಟಬಾಲಕಿ ಕೃತಿಕಾಳ ಸಾವಿನಿಂದಾಗಿ 10  ಸಾವಿರ ಹೆಲ್ಮೇಟ್ ವಿತರಿಸಿ ಜಿಲ್ಲೆಯ ಜನರ ಸುರಕ್ಷತೆಗೆ ಒತ್ತುನೀಡಿದ್ದಾರೆ.

ತಮ್ಮ ತಂದೆಯವರ ಮಾರ್ಗದರ್ಶನ ಹಾಗೂ ಅವರ ಆಶಯದಂತೆ ಎನ್.ಶಂಕರೇಗೌಡ ಚಾರಿಟಬಲ್ ಟ್ರಸ್ಟ್ ವತಿಯಿಂದ ಇಂತಹ ಸಾಕಷ್ಟು ಜನಪರ ಕಾರ್ಯಗಳನ್ನು ನಿರಂತರವಾಗಿ ನೀಡುವ ಮೂಲಕ ಜನರ ಸೇವೆಯಿಂದ ಸಚ್ಚಿದಾನಂದ ತಂದೆಗೆ ತಕ್ಕ ಮಗನಾಗಿದ್ದು, ಇಂತಹ ಸಮಾಜಮುಖಿ ವ್ಯಕ್ತಿಯನ್ನು ಶ್ರೀರಂಗಪಟ್ಟಣ ವಿಧಾನ ಸಭಾ ಕ್ಷೇತ್ರದ ಜನರು ಕಳೆದುಕೊಳ್ಳದೆ ಬದಲಾವಣೆಯ ರಾಜಕಾರಣದ ಮೂಲಕ ಜನನಾಯಕನಾಗಿ ಆಯ್ಕೆ ಮಾಡಿ ರಾಜಕೀಯ ಶಕ್ತಿ ತುಂಬುವ ಮೂಲಕ ಮಾದರಿ ಅಭಿವೃದ್ದಿಗೆ ಕಾರಣೀಕೃತರಾಗಿ.ಹಳೇ ಮೈಸೂರು ಭಾಗದಲ್ಲಿ ಬೆಸ್ತರು, ಕೋಲಿ, ಗಂಗಾಮತಸ್ಥರಂತಹ ಅನೇಕ ತಳ ಸಮುದಾಯಗಳು ಇನ್ನು ಕೂಡ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಉದ್ಯೋಗ ಗಳಿಕೆಯಲ್ಲಿ ಹಿಂದುಳಿದಿದ್ದು ಮುಂದಿನ ದಿನಗಳಲ್ಲಿ ಬಿಜೆಪಿ ಸರ್ಕಾರ ಇವರುಗಳ ಅಭಿವೃದ್ದಿಗೂ ಮುಂದಾಗಿ ನ್ಯಾಯ ಒದಗಿಸಲಿದೆ. ಇಂತಹ ಬಡಜನರ ಪರ ಧನಿ ಎತ್ತಲು ಸಚ್ಚಿದಾನಂದರಂತ ಜನಸೇವಕರನ್ನು ಅಧಿಕಾರಕ್ಕೆ ಬರಲು ಭಾರತೀಯ ಜನತಾ ಪಾರ್ಟಿಗೆ ಮತಹಾಕುವ ಮೂಲಕ ನೆರವಾಗಿ ಎಂದರು.

ಮೈಸೂರು ಅರಸರ ಕೊಡುಗೆಗಳನ್ನು ಮರೆಮಾಚಲು ಕಾಂಗ್ರೆಸ್ ಸರ್ಕಾರ ಯತ್ನ ಮೈಸೂರು ಮಹಾರಾಜರ ಜನಪರ ಕೊಡುಗೆಗಳಿಂಗಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೊಡುಗೆಗಳೇ ಹೆಚ್ಚು ಎಂದು ತಮ್ಮ ಬೆನ್ನು ತಾವು ತಟ್ಟಿಕೊಳ್ಳಲು ರಾಜ್ಯ ಕಾಂಗ್ರೆಸ್ ಸರ್ಕಾರದ ಜನಪ್ರತಿನಿಧಿಗಳು ಮುಂದಾಗಿದ್ದು, ಇತ್ತೀಚೆಗೆ ಮಂತ್ರಿಯೋರ್ವರು ಕೆಆರ್‌ಎಸ್ ಅಣೆಕಟ್ಟೆ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ದು ಟಿಪ್ಪು ಸುಲ್ತಾನ್ ಎನ್ನುವ ಮೂಲಕ ಸುಳ್ಳಿನ ಹೇಳಿಕೆಗಳ ನೀಡಿ ಅರಮನೆಯ ಸಂಪತ್ತನ್ನು ಒತ್ತೆ ಇಟ್ಟು ಕೆಆರ್‌ಎಸ್ ಡ್ಯಾಂ ನಿರ್ಮಿಸಿದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರನ್ನು ಮರೆಮಾಚಲು ಯತ್ನಿಸುತ್ತಿದೆ ಎಂದು ಕಿಡಿಕಾರಿದರು.

ಎಸ್.ಸಚ್ಚಿದಾನಂದ ಮಾತನಾಡಿ, ತಮ್ಮ ಕುಟುಂಬದಲ್ಲಿ ಹೆಣ್ಣು ಮಕ್ಕಳೊಂದಿಗೆ ತಾವು ಜನಿಸಲಿಲ್ಲ. ತಮಗೆ ಹಾಗೂ ತಮ್ಮ ಸಹೋದರರಿಗೆ ಹೆಣ್ಣು ಮಗು ಆಗಬೇಕೆಂಬ ಆಸೆಯು ಫಲಿಸಲಿಲ್ಲ. ಹೀಗಾಗಿ ನಮ್ಮ ಕ್ಷೇತ್ರ ಮಹಿಳೆಯರನ್ನು ತಾಯಿಯಂತೆ, ಅಕ್ಕ-ತಂಗಿಯರಂತೆ ಸೋದರ ಭಾವದಿಂದ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ನಿಸ್ವಾರ್ಥದಿಂದ ಇಂತಹ ಬಾಗಿನ ಕಾರ್ಯಕ್ರಮ ನಡೆಸುತ್ತಿದ್ದು, ನಿಮ್ಮ ಮನೆ ಮಗನಂತೆ ಪ್ರೀತಿಯ ನಿಮ್ಮೆಲ್ಲರ ಹಾರೈಕೆ ಆರ್ಶೀವಾದ ಇರಲಿ ಎಂದರು.

ಕಾರ್ಯಕ್ರಮದಲ್ಲಿ ಮಹಿಳಾ ಮೋರ್ಚಾದ ಸದಸ್ಯೆಯರು ಮಾಜಿ ಸಚಿವ ಶ್ರೀರಾಮಲು ಹಾಗೂ ಸಚ್ಚಿದಾನಂದ ಅವರಿಗೆ ರಾಖಿ ಕಟ್ಟುವ ಮೂಲಕ ರಕ್ಷಾ ಬಂಧನದ ಶ್ರೀರಕ್ಷೆ ನೀಡಿ ಗೌರವ ಸನ್ಮಾನ ನೀಡಿದ್ದು, ನೆರೆದಿದ್ದವರಿಗೆ ಸಾಮೂಹಿಕವಾಗಿ ಬಾಗಿನ ನೀಡಲಾಯಿತು.

ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್, ಬಿಜೆಪಿ ಮಂಡಲ ಅಧ್ಯಕ್ಷ ಪೀಹಳ್ಳಿ ರಮೇಶ್, ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಡಾ.ಸಿದ್ದರಾಮಯ್ಯ, ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಕೆ.ಎಸ್.ನಂಜುಂಡೇಗೌಡ, ಮನ್‌ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ, ಟಿ.ಶ್ರೀಧರ್, ಪುರಸಭಾ ಸದಸ್ಯರುಗಳಾದ ಗಂಜಾಂ ಕೃಷ್ಣಪ್ಪ, ಗಂಜಾಂ ಶಿವು, ಎಸ್.ಟಿ.ರಾಜು, ಚೈತ್ರಾ , ಶಾಮಿಯಾನ ಪುಟ್ಟರಾಜು, ಕಂಠಿರಘು, ಪ್ರಭಾಕರ ಗುಪ್ತಾ, ಪುಟ್ಟರಾಮು ಇತರರು ಈ ವೇಳೆ ಉಪಸ್ಥಿತರಿದ್ದರು.

Continue Reading

Mandya

ನಮ್ಮ ದೇಶ ರಾಜಕೀಯ ನಾಯಕತ್ವದಿಂದ ಆರ್ಥಿಕ ನಾಯಕತ್ವದ ಕೈಗೆ ಜಾರಿರುವುದರ ಪರಿಣಾಮಗಳನ್ನು ಪತ್ರಕರ್ತರು ಪತ್ತೆ ಹಚ್ಚಬೇಕಿದೆ : ಕೆ. ವಿ. ಪ್ರಭಾಕರ್

Published

on

ಮಂಡ್ಯ: ನಾವು 79ನೇ ಸ್ವಾತಂತ್ರ‍್ಯೋತ್ಸವವನ್ನು ಸಂಭ್ರಮದಿಂದ ಆಚರಿಸುತ್ತಿರುವ ಹೊತ್ತಿನಲ್ಲೇ ನಮ್ಮ ದೇಶ ರಾಜಕೀಯ ನಾಯಕತ್ವದಿಂದ ಆರ್ಥಿಕ ನಾಯಕತ್ವದ ಕೈಗೆ ಜಾರಿರುವುದರ ಪರಿಣಾಮಗಳನ್ನು ಪತ್ರಕರ್ತರು ಪತ್ತೆ ಹಚ್ಚಬೇಕಿದೆ ಎಂದು ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಆತಂಕ ವ್ಯಕ್ತಪಡಿಸಿದರು.

ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್‌ನಲ್ಲಿ ಮಂಡ್ಯ ಜಿಲ್ಲಾ ಪತ್ರಕರ್ತರ ಸಂಘ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ, ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿ ಮಾತನಾಡಿದ ಅವರು,  ದೇಶದ ಸ್ವಾತಂತ್ರ‍್ಯ ಹೋರಾಟವನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ನಮ್ಮ ಭಾರತೀಯ ಪತ್ರಿಕೋದ್ಯಮ ರೂಪಿಸಿದ್ದ ಮಾದರಿಗಳ ಮೇಲೆ ಧೂಳು ಕುಳಿತಿದೆ. ಈ ಧೂಳನ್ನು ಕೊಡವಿ ಮತ್ತೆ ನಮ್ಮ ಮಾದರಿಗಳಿಗೆ ಜೀವಕೊಡಬೇಕಿದೆ ಎಂದರು.

ಸ್ವಾತಂತ್ರ‍್ಯ ಹೋರಾಟದ ಹೊಸ್ತಿಲಲ್ಲಿದ್ದ ನಮ್ಮ ಪತ್ರಿಕೋದ್ಯಮಕ್ಕೆ ಹಣಕಾಸಿನ ಬಡತನವಿತ್ತು. ಆದರೆ ದೇಶವನ್ನು ಕಟ್ಟುವ ರಾಜಕೀಯ ಮತ್ತು ಸಾಮಾಜಿಕ ಇಚ್ಛಾಶಕ್ತಿಯಲ್ಲಿ ಶ್ರೀಮಂತಿಕೆ ಇತ್ತು. ಆದರೆ ಇಂದು ಪತ್ರಿಕೋದ್ಯಮ ಹಣಕಾಸಿನ ಬಡತನದಿಂದ ಮೇಲೆ ಬಂದಿದ್ದು ಸಾಮಾಜಿಕ ಇಚ್ಛಾಶಕ್ತಿಯ ಬಡತನಕ್ಕೆ ತುತ್ತಾಗಿದೆ. ಇದಕ್ಕೆ ದೇಶ ರಾಜಕೀಯ ನಾಯಕತ್ವದ ಕೈ ಜಾರಿ ಆರ್ಥಿಕ ನಾಯಕತ್ವದ ಕೈವಶವಾಗಿರುವುದೂ ಮುಖ್ಯ ಕಾರಣ ಎಂದು ವಿವರಿಸಿದರು.

ಮೊದಲೆಲ್ಲ ಆರ್ಥಿಕ ಶಕ್ತಿಗಳನ್ನು ಸರ್ಕಾರಗಳು ನಿಯಂತ್ರಿಸುತ್ತಿದ್ದವು. ಹೀಗಾಗಿ ಬ್ಯಾಂಕ್‌ಗಳ ರಾಷ್ಟೀಕಾರಣ, ಭೂ ಸುಧಾರಣೆ, ಉಚಿತ ಶಿಕ್ಷಣ, ಕಾರ್ಮಿಕರ ಹಕ್ಕುಗಳು ಮತ್ತು ಕಲ್ಯಾಣ ರಾಜ್ಯದ ಕಾರ್ಯಕ್ರಮಗಳನ್ನು ಜಾರಿಗೆ ತರಲು ಸಾಧ್ಯವಾಗಿತ್ತು. ಆದರೆ ಇಂದು ಆರ್ಥಿಕ ಶಕ್ತಿಗಳೇ ಸರ್ಕಾರಗಳನ್ನು ನಿಯಂತ್ರಿಸುತ್ತಾ, ದೇಶವನ್ನು ಮುನ್ನಡೆಸುತ್ತಿರುವುದರಿಂದ ಇಡೀ ಸಾಮಾಜಿಕ ವ್ಯವಸ್ಥೆಯೇ ತಲೆ ಕೆಳಗಾಗಿ ಪ್ರಜೆಗಳು ಕೇವಲ ಗ್ರಾಹಕರಾಗಿದ್ದಾರೆ. ನಮ್ಮದೇ ಬ್ಯಾಂಕ್ ಅಕೌಂಟಿನಿಂದ ನಮ್ಮದೇ 500 ರೂ. ತೆಗೆದರೂ ಅದಕ್ಕೆ ಶುಲ್ಕ ಬೀಳುತ್ತಿದೆ. ಬಡ ಬೋರೇಗೌಡ ಬೆಳಗ್ಗೆ ಎದ್ದು ಮನೆಯಿಂದ ಹೊರಗೆ ಕಾಲಿಟ್ಟರೆ ತೆರಿಗೆ, ಶುಲ್ಕ, ಜಿಎಸ್‌ಟಿ, ದಂಡ, ಬಡ್ಡಿ, ಚಕ್ರಬಡ್ಡಿಗಳನ್ನು ದಾಟಿಕೊಂಡೇ ವಾಪಸ್ ಮನೆಗೆ ಬರಬೇಕು. ಬೀಡಿ ಬೆಂಕಿಪೊಟ್ಟಣ, ಬಾಳೆ ಹಣ್ಣಿಗೂ ಜಿಎಸ್‌ಟಿ ಕಟ್ಟಿಯೇ ಮನೆಗೆ ಬರಬೇಕಾದ ಪರಿಸ್ಥಿತಿ ಇದೆ. ಯಾಕೆ ಹೀಗಾಯ್ತು ಎನ್ನುವ ಪ್ರಶ್ನೆಯನ್ನು ಕೇಳಬೇಕಾದ ಪತ್ರಿಕೋದ್ಯಮಕ್ಕೆ ಮೈ ಮರೆವು ಬಂದಿರುವುದು ಅಪಾಯದ ಸಂಕೇತ  ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ, ಪತ್ರಕರ್ತರ ಸಮಸ್ಯೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಂದಿಸಿದ್ದಾರೆ. ಆದರೆ ಪತ್ರಕರ್ತರು ವಾಸ್ತವ ಬರೆಯಬೇಕು. ಇದು ಸಮಾಜ, ರಾಜ್ಯ, ದೇಶಕ್ಕೆ ಒಳ್ಳೆಯದಾಗಲಿದೆ ಎಂದರು.

ಪತ್ರಕರ್ತರಿಗೆ 15 ಸಾವಿರ ರೂ. ಮಾಶಾಸನ ನೀಡಲಾಗುತ್ತಿದೆ. ಇದು ನಿವೃತ್ತಿ ಜೀವನಕ್ಕೆ ಪತ್ರಕರ್ತರಿಗೆ ಅನುಕೂಲವಾಗಲಿದೆ. ಐದು ಗ್ಯಾರಂಟಿಗಳ ಜೊತೆಗೆ ಮಾಶಾಸನವೂ ಅನುಕೂಲವಾಗಿದೆ. ಎಲ್ಲ ಪತ್ರಕರ್ತರಿಗೂ ಬಸ್ ಪಾಸ್ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಶಾಸಕರಾದ ಪಿ.ರವಿಕುಮಾರ್‌ಗೌಡ ಗಣಿಗ, ದರ್ಶನ್‌ಪುಟ್ಟಣ್ಣಯ್ಯ, ಕೆ.ವಿವೇಕಾನಂದ, ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲ, ಜೆಡಿಎಸ್ ರಾಷ್ಟಿಯ ಪ್ರಧಾನ ಕಾರ್ಯದರ್ಶಿ ಜಫ್ರುಲ್ಲಾ ಖಾನ್, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ವಸತಿ ಸಚಿವರ ಮಾಧ್ಯಮ ಸಂಯೋಜಕ ಲಕ್ಷಿನಾರಾಯಣ್, ಪತ್ರಕರ್ತರ ಸಂಘದ ರಾಜ್ಯ ಕಾರ್ಯದರ್ಶಿಗಳಾದ ಮತ್ತೀಕೆರೆಜಯರಾಂ, ಸೋಮಶೇಖರ್ ಕೆರಗೋಡು, ರಾಷ್ಟ್ರೀಯ ಮಂಡಳಿ ಸದಸ್ಯ ಮದನ್‌ಗೌಡ, ಜಿಲ್ಲಾಧ್ಯಕ್ಷ ನವೀನ್‌ಕುಮಾರ್, ಮಾಜಿ ಅಧ್ಯಕ್ಷರಾದ ಬಿ.ಪಿ.ಪ್ರಕಾಶ್, ಕೆ.ಸಿ.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಆನಂದ್, ಖಜಾಂಚಿ ನಂಜುಂಡಸ್ವಾಮಿ ಸೇರಿದಂತೆ ಮತ್ತಿತರರಿದ್ದರು.

Continue Reading

Crime

ಚಿನ್ನದಂಗಡಿ ಕ್ಳಳತನ ಮಾಡಿದ್ದನ್ನು ನೋಡಿದ ಹೋಟೆಲ್ ಮಾಲೀಕ‌ನ ಹ*ತ್ಯೆ..

Published

on

ಮಂಡ್ಯ: ಚಿನ್ನದಂಗಡಿಗೆ ಕನ್ನ..ಕಳ್ಳತನ ಮಾಡಿದ್ದನ್ನು ನೋಡಿದ ಹೋಟೆಲ್ ಮಾಲೀಕ‌ನ ಹತ್ಯೆ..ಯಾಗಿರುವ ಘಟನೆ ಮಳವಳ್ಳಿ ತಾಲ್ಲೂಕಿನ

ಕಿರುಗಾವಲು ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಮಹದೇಶ್ವರ ಹೋಟೆಲ್ ಮಾಲೀಕ ಮಾದಪ್ಪ (60) ಕೊಲೆಯಾದ ವ್ಯಕ್ತಿ. ಹೋಟೆಲ್ ಪಕ್ಕದಲ್ಲೆ ಇದ್ದ ಮಹಾಲಕ್ಷ್ಮಿ ಜ್ಯುವೆಲರ್ಸ್ ಗೆ ಬೆಳಗ್ಗಿನ‌ ಜಾವ 3 ಗಂಟೆ ವೇಳೆ ಕಳ್ಳರ ಗ್ಯಾಂಗ್ ಒಂದು ಎಂಟ್ರಿ ಕೊಟ್ಟು ಗ್ಯಾಸ್ ಕಟರ್ ಮೂಲಕ ಚಿನ್ನದಂಗಡಿ ಶಟರ್ ಓಪನ್ ಮಾಡಿ
ಚಿನ್ನಾಭರಣ ದೋಚಿದ್ದಾರೆ.

ಶಬ್ದ ಕೇಳಿ ಹೋಟೆಲ್ ನಿಂದ ಹೊರಬಂದ ಮಾದಪ್ಪ ಕಳ್ಳರ ಗ್ಯಾಂಗ್ ಅನ್ನು ನೋಡಿದ್ದಾರೆ.
ಈ ವೇಳೆ ಮಾದಪ್ಪನ ಕತ್ತು ಹಿಸುಕಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಜೊತೆಗೆ ಹಣ ದೋಚಿ ಸಿಸಿ ಕ್ಯಾಮರಾ ಡಿವಿಆರ್ ಅನ್ನು ಖಾದಿಮರು ಹೊತ್ತೊಯ್ದಿದ್ದಾರೆ

ಸ್ಥಳಕ್ಕೆ ಮಂಡ್ಯ ಎಸ್ಪಿ ಮಲ್ಲಿಕಾರ್ಜುನ್ ಬಳದಂಡಿ ಹಾಗೂ ಕಿರುಗಾವಲು ಠಾಣಾ ಪೊಲೀಸರ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಈ ಸಂಭಂದ ಕಿರುಗಾವಲು ಠಾಣೆಯಲ್ಲಿ ಪ್ರಕರಣ ದಾಖಲೂಗೊಂಡಿದ್ದು ಕಳ್ಳರಿಗಾಗಿ ಹುಡುಕಾಟ ನಡೆಸಲಾಗಿದೆ.

Continue Reading

Trending

error: Content is protected !!