Connect with us

Chikmagalur

ಗ್ರಾಮ ಪಂಚಾಯತಿ ಸದಸ್ಯನಿಂದ ಮಾದರಿ ಕಾರ್ಯ: ಸ್ವಂತ ಖರ್ಚಿನಿಂದ ಹೊರನಾಡು ಶೃಂಗೇರಿ ಕಲ್ಪಿಸುವ ಮಾರ್ಗದ ಹೊಂಡ ಗುಂಡಿಗಳನ್ನು ಮುಚ್ಚಿಸಿದ ನಿಸ್ವಾರ್ಥಿ

Published

on

ಕೊಪ್ಪ: ಮಲೆನಾಡು ಮಳೆಗಾಲದಲ್ಲಿ ಪ್ರವಾಸಿಗರಿಗೆ ಸ್ವರ್ಗದ ರೀತಿ ಕಾಣುತ್ತದೆ. ವಾರಾಂತ್ಯದಲ್ಲಂತೂ ಅಬ್ಬಬ್ಬಾ ಕಾಫಿನಾಡಿನ ಕಡೆ ಪ್ರವಾಸಿಗರ ದಂಡೇ ಬರುತ್ತದೆ. ಆದರೆ ಮಲೆನಾಡಿನ ರಸ್ತೆಗಳು ಎಂತವರಿಗೂ ಬೇಸರವನ್ನುಂಟು ಮಾಡೋದಂತು ಸತ್ಯ.

ಮುಖ್ಯರಸ್ತೆಗಳೇ ಸರಿ ಇಲ್ಲದ ಈ ಮಲೆನಾಡಿನಲ್ಲಿ ಗ್ರಾಮೀಣ ಭಾಗದ ರಸ್ತೆಗಳ ಕಥೆ ಊಹಿಸಿಕೊಳ್ಳೋಕು ಸಾಧ್ಯ ಇಲ್ಲ ಬಿಡಿ. ಅಂತದರಲ್ಲಿ ಕೊಪ್ಪ ತಾಲೂಕಿನ ಗುಡ್ಡೆತೋಟ ಗ್ರಾಮ ಪಂಚಾಯತಿ ಸದಸ್ಯರೊಬ್ಬರು ತನ್ನ ಸಾವಿರಾರು ರೂಪಾಯಿ ಹಣ ಖರ್ಚು ಮಾಡಿ ರಸ್ತೆಯ ಹೊಂಡ ಗುಂಡಿಗಳನ್ನು ಮುಚ್ಚಿಸಿ ಪ್ರೇರಣೆಯಾಗಿದ್ದಾರೆ.

ಹೌದು, ಕೊಪ್ಪ ತಾಲೂಕಿನ ಗುಡ್ಡೆತೋಟ ಗ್ರಾಮ ಪಂಚಾಯತಿ ಸದಸ್ಯರಾದ ಪ್ರಶಾಂತ್ ಜಾಲ್ಮರ ಅವರು ತನ್ನ ಗ್ರಾಮ ಪಂಚಾಯತಿ ವ್ಯಾಪ್ತಿಯ ಭೈರೆದೇವರು ಗ್ರಾಮದ ಬಸ್ತಿ ಬಾಲಕ್ಕಿ ತೋಟ ರಸ್ತೆಗೆ ತನ್ನ ಸಾವಿರಾರು ರೂಪಾಯಿ ಹಣ ಖರ್ಚು ಮಾಡಿ ಟ್ರ್ಯಾಕ್ಟರ್, ಜೆಸಿಬಿ ಬಳಸಿ ರಸ್ತೆ ದುರಸ್ಥಿ ಮಾಡಿಸಿದ್ದಾರೆ.

ಈ ರಸ್ತೆಯೂ ಹೊರನಾಡಿನಿಂದ ಕೊಗ್ರೆ ಮಾರ್ಗದ ಮೂಲಕ ಶೃಂಗೇರಿಗೆ ತಲುಪಲು ಬಹಳ ಹತ್ತಿರದ ಮಾರ್ಗವಾಗಿದ್ದು ಪ್ರತಿನಿತ್ಯ ನೂರಾರು ವಾಹನಗಳು ಈ ರಸ್ತೆಯ ಮೂಲಕ ಸಂಚರಿಸುತ್ತವೆ.
ಆದರೆ ಈ ರಸ್ತೆಯೂ ಕೆಲ ವ್ಯವಹಾರಿಕವಾಗಿ ಅಡಚಣೆ ಇದ್ದ ಕಾರಣ ಬಹಳ ವರ್ಷಗಳಿಂದ ಈ ರಸ್ತೆ ಹೊಂಡ ಗುಂಡಿಗಳಿಂದ ಪಾಳು ಬಿದ್ದಿತ್ತು.
ಬಹಳಷ್ಟು ಭಾರೀ ಗ್ರಾಮ ಪಂಚಾಯತಿ ವತಿಯಿಂದ ರಸ್ತೆ ದುರಸ್ಥಿ ಮಾಡಿದ್ದರು ಕೂಡ ಕೆಲ ದಿನಗಳ ನಂತರ ಮತ್ತದೆ ಹೊಂಡ ಗುಂಡಿಗಳು ಸೃಷ್ಠಿಯಾಗಿ ಬಿಡುತ್ತಿದ್ದವೂ.

ಈ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಗುಡ್ಡೆತೋಟ ಗ್ರಾಮ ಪಂಚಾಯಿತಿ ಸದಸ್ಯ ಪ್ರಶಾಂತ್ ಜಾಲ್ಮರ ಅವರು, ರಸ್ತೆಯೂ ಕೆಲ ವ್ಯವಹಾರಿಕವಾಗಿ ಅಡಚಣೆ ಇದ್ದ ಕಾರಣ ರಸ್ತೆಯನ್ನು ಅಭಿವೃದ್ಧಿ ಪಡಿಸಲು ಸಾಧ್ಯವಾಗಿರಲಿಲ್ಲ, ಈಗ ಎಲ್ಲಾ ವ್ಯವಹಾರಿಕವಾಗಿ ಸಮಸ್ಯೆಗಳು ಬಗೆಹರಿದಿದೆ. ಸರ್ಕಾರದಿಂದ ವಿಶೇಷವಾದ ಅನುದಾನ ಕೊಡಿಸಿ ಈ ರಸ್ತೆಯನ್ನು ಕಾಂಕ್ರೀಟಿಕರಣ ಮಾಡಿಸುವುದಾಗಿ ಶಾಸಕರು ಭರವಸೆ ನೀಡಿದ್ದಾರೆ.

Continue Reading

Chikmagalur

ಗಾಯತ್ರಿ ಶಾಂತೇಗೌಡರಿಗೆ ಸಚಿವ ಸ್ಥಾನ: ಚಿಕ್ಕಮಗಳೂರಿನ ರಾಜಕೀಯದಲ್ಲಿ ಹೊಸ ಅಧ್ಯಾಯ

Published

on

ಚಿಕ್ಕಮಗಳೂರು: ಇತ್ತೀಚಿಗಷ್ಟೇ ಕೋರ್ಟಿನ ಮೂಲಕ ನ್ಯಾಯ ಪಡೆದು ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಗೊಂಡಿದ್ದ ಗಾಯತ್ರಿ ಶಾಂತೇಗೌಡರವರಿಗೆ ಮಂತ್ರಿ ಸ್ಥಾನ ಒಲಿದಿದೆ.

ಜಿಲ್ಲೆಯ ಐದೂ ಜನ ಶಾಸಕರನ್ನು ಬದುಗಿಟ್ಟು ಗಾಯತ್ರಿ ಶಾಂತೇಗೌಡರಿಗೆ ಮಂತ್ರಿ ಸ್ಥಾನ ಕೊಡಿಸುವಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದು , ಇದು ಎಲ್ಲರನ್ನು ಬೆರಗುಗೊಳಿಸಿದೆ.


ಮಹಿಳೆ ಮತ್ತು ಕುರುಬ ಜನಾಂಗದ ಕೋಟಾದಲ್ಲಿ ಇವರಿಗೆ ಸ್ಥಾನ ಸಿಕ್ಕಿದ್ದು, ಮೂಡಿಗೆರೆ ಕ್ಷೇತ್ರದಿಂದ ಆಯ್ಕೆಯಾಗಿದ್ದ ಮೋಟಮ್ಮನವರ ಬಳಿಕ ಜಿಲ್ಲೆಯಿಂದ ಮತ್ತೊಮ್ಮೆ ಮಹಿಳೆಯೊಬ್ಬರಿಗೆ ಸಚಿವ ಸ್ಥಾನ ದಕ್ಕಿದೆ.

ಆರತಿ ಕೃಷ್ಣ ರವರ ಹೆಸರು ಮುಂಚೂಣಿಯಲ್ಲಿ ಇದ್ದರೂ ಅವರನ್ನು ಹಿಂದಿಕ್ಕುವಲ್ಲಿ ಗಾಯತ್ರಿ ಶಾಂತೇಗೌಡ ಯಶಸ್ವಿಯಾಗಿರುವುದು ಜಿಲ್ಲೆಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.


ಕಳೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಆರು ಮತಗಳ ಅಂತರದಿಂದ ಸೋಲನ್ನು ಅಪ್ಪಿದ್ದ ಗಾಯತ್ರಿ ಶಾಂತೇಗೌಡ ನ್ಯಾಯಕೋರಿ ಸುಪ್ರೀಂ ಕೋರ್ಟಿನವರೆಗೂ ಹೋಗಿದ್ದರು.

ನಾಮ ನಿರ್ದೇಶನ ಸದಸ್ಯರ ಹಕ್ಕನ್ನು ಮಾನ್ಯ ಮಾಡದಂತೆ ಕೋರಿದ್ದ ಇವರ ಅರ್ಜಿ ಪುರಸ್ಕೃತಗೊಂಡು, ಮರು ಎಣಿಕೆ ನಡೆದಾಗ 9 ಮತಗಳ ಅಂತರದಲ್ಲಿ ಜಯಗಳಿಸಿದ್ದರು.


ಸರಿಸುಮಾರು ನಾಲ್ಕೂವರೆ ವರ್ಷಗಳ ಬಳಿಕ ‘ನ್ಯಾಯ’ ಪಡೆಯುವಲ್ಲಿ ಯಶಸ್ವಿಯಾಗಿದ್ದ ಅವರಿಗೆ ಈಗ ಸಚಿವ ಸ್ಥಾನವೂ ಒಲಿದಿದೆ.

Continue Reading

Chikmagalur

ಕೊಪ್ಪ: ಕೆಎಸ್‌ಆರ್‌ಟಿಸಿ ಬಸ್ ಹಾಗೂ ಕಾರು ಭೀಕರ ಡಿಕ್ಕಿ; ಇಂಜಿನಿಯರಿಂಗ್ ವಿದ್ಯಾರ್ಥಿಗೆ ಗಾಯ

Published

on

ಕೊಪ್ಪ: ಶೃಂಗೇರಿಗೆ ಪ್ರವಾಸ ಹೊರಟಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿಗಳಿದ್ದ ಕಾರಿಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ, ಕಾರಿನಲ್ಲಿದ್ದ ವಿದ್ಯಾರ್ಥಿಯೊಬ್ಬರಿಗೆ ತಲೆಗೆ ಗಾಯವಾಗಿರುವ ಹಾಗೂ ಮತ್ತೊಬ್ಬರಿಗೆ ಎದೆಗೆ ಒಳಪೆಟ್ಟು ಬಿದ್ದಿರುವ ಘಟನೆ ಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಘಟನೆಗೆ ಸಂಬಂಧಿಸಿದಂತೆ ಕೊಪ್ಪ ಪೊಲೀಸ್ ಠಾಣೆಯಲ್ಲಿ ಬಸ್ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ.

ಘಟನೆಯ ವಿವರ:

ಶಿವಮೊಗ್ಗದ ಜೆ.ಎನ್.ಎನ್.ಸಿ. (JNNC) ಕಾಲೇಜಿನಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ದರ್ಶನ್ ಹಾಗೂ ಅವರ ಸ್ನೇಹಿತರಾದ ಚೇತನ್, ಶ್ಯಾಮ್, ಪ್ರದೀಪ್, ಸಾಮ್ ವೆಲ್ ಮತ್ತಿತರರು ಸೇರಿ ಆಗಸ್ಟ್ 02, 2026ರಂದು ಬೆಳಿಗ್ಗೆ ಶೃಂಗೇರಿಗೆ ಕಾರಿನಲ್ಲಿ ಹೊರಟಿದ್ದರು.

ಚೇತನ್ ಎಂಬುವರಿಗೆ ಸೇರಿದ ಟೊಯೋಟಾ ಕಾರಿನಲ್ಲಿ (ಸಂಖ್ಯೆ: KA 14 MC 1718) ದರ್ಶನ್ ಹಾಗೂ ಇತರರು ಬೆಳಿಗ್ಗೆ 8:15ರ ಸುಮಾರಿಗೆ ಎನ್.ಆರ್.ಪುರ ಮಾರ್ಗವಾಗಿ ಕೊಪ್ಪದ ಕಡೆಗೆ ಬರುತ್ತಿದ್ದರು. ಈ ವೇಳೆ ಮಾರ್ಗಮಧ್ಯೆ ಬಲಗಾರು ಕ್ರಾಸ್ ಹತ್ತಿರ ಬರು ಬರುತ್ತಿದ್ದ KSRTC ಬಸ್‌ನ (ಸಂಖ್ಯೆ: KA 14 F 0137) ಚಾಲಕ ಯಾವುದೇ ಸೂಚನೆ ನೀಡದೆ, ಅತೀವೇಗ ಹಾಗೂ ನಿರ್ಲಕ್ಷ್ಯದಿಂದ ಬಸ್ಸನ್ನು ಚಾಲನೆ ಮಾಡಿಕೊಂಡು ಬಂದು ವಿದ್ಯಾರ್ಥಿಗಳ ಕಾರಿಗೆ ಡಿಕ್ಕಿ ಹೊಡೆಸಿದ್ದಾರೆ.

ಗಾಯಾಳುಗಳು ಆಸ್ಪತ್ರೆಗೆ ದಾಖಲು:

ಅಪಘಾತದ ತೀವ್ರತೆಗೆ ಕಾರಿನ ಬಲಬದಿ ಸಂಪೂರ್ಣ ಜಖಂಗೊಂಡಿದ್ದು, ಕಾರಿನ ಹಿಂಬದಿಯಲ್ಲಿದ್ದ ವಿದ್ಯಾರ್ಥಿ ದರ್ಶನ್ ಅವರ ಬಲಭಾಗದ ಹಣೆಗೆ ರಕ್ತಗಾಯವಾಗಿದೆ. ಹಾಗೂ ಚಾಲನೆ ಮಾಡುತ್ತಿದ್ದ ಚೇತನ್ ಅವರ ಎಡಭಾಗದ ಎದೆಗೆ ಒಳಪೆಟ್ಟಾಗಿದೆ. ಬಸ್‌ನಲ್ಲಿದ್ದಯಾರಿಗೂ ಯಾವುದೇ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ.

ಕೂಡಲೇ ಸ್ಥಳಕ್ಕೆ ಆಗಮಿಸಿದ 108 ಆಂಬುಲೆನ್ಸ್ ಮೂಲಕ ಗಾಯಾಳುಗಳನ್ನು ಕೊಪ್ಪ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

ಪೊಲೀಸ್ ಕ್ರಮ:

ಕೊಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ದರ್ಶನ್ ರವರ ಹೇಳಿಕೆಯನ್ನು ಹೆಚ್.ಸಿ. 44 ರವರು ಪಡೆದುಕೊಂಡಿದ್ದು, ಅಪಘಾತ ಉಂಟುಮಾಡಿದ KSRTC ಬಸ್ ಚಾಲಕನ ವಿರುದ್ಧ ಕೊಪ್ಪ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ಸಂಖ್ಯೆ: 63/2026, ಕಲಂ 281, 125(A) BNS ರೀತ್ಯಾ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

Continue Reading

Chikmagalur

ಪತ್ರಿಕಾ ಪ್ರಕಟಣೆ ಚಿಕ್ಕಮಗಳೂರು ಜಿಲ್ಲಾ ಪೊಲೀಸ್

Published

on

ಚಿಕ್ಕಮಗಳೂರು : ಫೆಂಕಾಕ್ ಸಿಲಾತ್ (Pencak Silat) South-East Asian Martial Art & Combat Sport ಕ್ರೀಡೆಯಲ್ಲಿ ಕಂಚಿನ ಪದಕ ವಿಜೇತ ಟಿ ಎಸ್ ಗಿರೀಶ್ ಹೆಡ್ ಕಾನ್ಸ್ಟೇಬಲ್ ಇವರಿಗೆ ಜಿಲ್ಲಾ ಪೊಲೀಸ್ ವತಿಯಿಂದ ಅಭಿನಂದಿಸಿರುವ ಕುರಿತು 11 ನೇ ಅಖಿಲ ಭಾರತೀಯ ಪೊಲೀಸ್ ಜೂಡೋ ಕ್ಲಸ್ಟರ್ -2026 ದಿನಾಂಕ 23-7-2026 ರಿಂದ ದಿನಾಂಕ 30-7-2026 ರವರೆಗೆ ಹೈದರಾಬಾದ ಜಿಎಂಸಿಬಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ “ಪೆಂಕಾಕ್ ಸಿಲಾತ್” ಕ್ರೀಡೆಯಲ್ಲಿ ಗಿರೀಶ್ ಟಿ.ಎಸ್. ಹೆಡ್ ಕಾನ್ಸ್ಟೇಬಲ್ ಡಿ.ಸಿ.ಆರ್.ಇ ಪೊಲೀಸ್ ಠಾಣೆ ಚಿಕ್ಕಮಗಳೂರು ಜಿಲ್ಲೆ ಇವರು ಭಾಗವಹಿಸಿ ಕಂಚಿನ ಪದಕ ಪಡೆದಿರುತ್ತಾರೆ.

ವಿಶೇಷವಾಗಿ ಸತತವಾಗಿ 4ನೇ ಬಾರಿ ಭಾರತದ ಪ್ರತಿಷ್ಠಿತ ಕ್ರೀಡಾಕೂಟದಲ್ಲಿ ಒಂದು ಎಂದು ಗುರುತಿಸಿಕೊಂಡಿರುವ ಅಖಿಲ ಭಾರತೀಯ ಪೊಲೀಸ್ ಕ್ರೀಡಾಕೂಟದಲ್ಲಿ ಪದಕ ಗೆದ್ದಿರುವ ನಮ್ಮ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಹೆಮ್ಮೆಯ ವಿಶೇಷವಾದ ಕ್ರೀಡಾಪಟು ಇವರಾಗಿರುತ್ತಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸದರಿಯವರ ಸಾಧನೆಯನ್ನು ಪ್ರಶಂಶಿಸಿ ಜಿಲ್ಲಾ ಪೊಲೀಸ್ ವತಿಯಿಂದ ಅಭಿನಂದನೆಗಳನ್ನು ತಿಳಿಸಿರುತ್ತಾರೆ.

Continue Reading

Trending

error: Content is protected !!