Connect with us

National - International

ಹಣಕಾಸು ವಂಚನೆಯಲ್ಲಿ ಭಾಗಿಯಾಗಿದ್ದ 70 ಲಕ್ಷ ಮೊಬೈಲ್ ಸಂಪರ್ಕ ಕಡಿತ

Published

on

ಡಿಜಿಟಲ್ ವಂಚನೆಗಳನ್ನು ಪರಿಶೀಲಿಸಲು, ಸೈಬರ್ ಅಪರಾಧ ಅಥವಾ ಹಣಕಾಸು ವಂಚನೆಗಳಲ್ಲಿ ಭಾಗಿಯಾಗಿರುವ 70 ಲಕ್ಷ ಮೊಬೈಲ್ ಸಂಖ್ಯೆಗಳನ್ನು ಸರ್ಕಾರ ಕಡಿತಗೊಳಿಸಿದೆ ಎಂದು ಹಣಕಾಸು ಸೇವೆಗಳ ಕಾರ್ಯದರ್ಶಿ ವಿವೇಕ್ ಜೋಶಿ  ಹೇಳಿದ್ದಾರೆ.
ಹಣಕಾಸು ಸೈಬರ್ ಭದ್ರತೆ ಮತ್ತು ಹೆಚ್ಚುತ್ತಿರುವ ಡಿಜಿಟಲ್ ಪಾವತಿ ವಂಚನೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಈ ನಿಟ್ಟಿನಲ್ಲಿ ವ್ಯವಸ್ಥೆ ಮತ್ತು ಪ್ರಕ್ರಿಯೆಗಳನ್ನು ಬಲಪಡಿಸಲು ಬ್ಯಾಂಕುಗಳನ್ನು ಕೇಳಲಾಗಿದೆ ಎಂದು ಹೇಳಿದರು. ಡಿಜಿಟಲ್ ಇಂಟೆಲಿಜೆನ್ಸ್ ಪ್ಲಾಟ್‌ಫಾರ್ಮ್‌ಗಳ ಮೂಲಕ ವರದಿಯಾದ ಸೈಬರ್ ಅಪರಾಧ / ಆರ್ಥಿಕ ವಂಚನೆಗಳಲ್ಲಿ ಭಾಗಿಯಾಗಿರುವ 70 ಲಕ್ಷ ಮೊಬೈಲ್ ಸಂಪರ್ಕಗಳನ್ನು ಇಲ್ಲಿಯವರೆಗೆ ಕಡಿತಗೊಳಿಸಲಾಗಿದೆ ಎಂದಿದ್ದಾರೆ.
ಸುಮಾರು 900 ಕೋಟಿ ರೂ.ಗಳ ವಂಚನೆಗೊಳಗಾದ ಹಣವನ್ನು ಉಳಿಸಲಾಗಿದ್ದು, 3.5 ಲಕ್ಷ ಸಂತ್ರಸ್ತರಿಗೆ ಪ್ರಯೋಜನವಾಗಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ. ಇತ್ತೀಚೆಗೆ ವರದಿಯಾದ ಆಧಾರ್ ಎನೇಬಲ್ಡ್ ಪೇಮೆಂಟ್ ಸಿಸ್ಟಮ್ (ಎಇಪಿಎಸ್) ವಂಚನೆಗೆ ಸಂಬಂಧಿಸಿದಂತೆ, ಈ ವಿಷಯವನ್ನು ಪರಿಶೀಲಿಸಲು ಮತ್ತು ಡೇಟಾ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ರಾಜ್ಯಗಳನ್ನು ಕೇಳಲಾಗಿದೆ ಎಂದು ಅವರು ಹೇಳಿದರು.

National - International

14 ಕೋಟಿ ಮಂದಿಗೆ ಆಹಾರ ಭದ್ರತೆ ಇಲ್ಲ: ಸೋನಿಯಾ ಗಾಂಧಿ

Published

on

ನವದೆಹಲಿ: ಒಂದೂವರೆ ದಶಕ ಕಳೆದರೂ ಜನಗಣತಿ ನಡೆಸದೇ ಇರುವುದರಿಂದ ದೇಶದ 14 ಕೋಟಿ ಮಂದಿಗೆ ಆಹಾರ ಭದ್ರತೆ ಯೋಜನೆ ನಿರಾಕರಿಸಿದಂತಾಗಿದೆ ಎಂದು ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.

ರಾಜ್ಯಸಭೆಯಲ್ಲಿ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಸೋನಿಯಾ ಗಾಂಧಿ, 2013ರಲ್ಲಿ ಯುಪಿಎ ಸರ್ಕಾರ ಜಾರಿ ಮಾಡಿದ ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆ, ದೇಶದ ಬಡವರ ಹಸಿವು ನೀಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಕೋವಿಡ್‌-19 ಸಂದರ್ಭದಲ್ಲಿ ಲಕ್ಷಾಂತರ ಕುಟುಂಬಗಳಿಗೆ ಆಸರೆಯಾಗಿದೆ ಎಂದರು.

ಪ್ರತಿ ಹತ್ತು ವರ್ಷಗಳಿಹೊಮ್ಮೆ ನಡೆಯಬೇಕಿದ್ದ ಜನಗಣತಿ ಒಂದೂವರೆ ದಶಕ ಕಳೆದರೂ ನಡೆದಿಲ್ಲ. ಈ ಬಾರಿಯೂ ಕೂಡ ಜನಗಣತಿ ನಡೆಯುವುದಿಲ್ಲ ಎಂಬುದು ಇವರು ಮಂಡಿಸಿದ ಬಜೆಟ್‌ ಅಂಶಗಳಿಂದ ತಿಳಿಯುತ್ತದೆ.

ಜನಗಣತಿ ನಡೆಯದೆ ಇರುವುದರಿಂದ ಸುಮಾರು 14 ಕೋಟಿ ಅರ್ಹ ಫಲಾನುಭವಿಗಳಿಗೆ ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆಯಡಿ (ಎನ್‌ಎಫ್‌ಎಸ್‌ಎ) ಹಕ್ಕು ನಿರಾಕರಿಸಲಾಗುತ್ತಿದೆ. 2011ರ ಜನಗಣತಿಯ ಅನ್ವಯ ಸುಮಾರು 81.4 ಕೋಟಿ ಜನರು ಈ ಸೌಲಭ್ಯಕ್ಕೆ ಅರ್ಹತೆ ಹೊಂದಿದ್ದಾರೆ ಎಂದು ತಿಳಿಸಿದರು.

Continue Reading

National - International

ಇಸ್ರೆಲ್‌-ಹಮಾಸ್‌ ಕದನ: ಒತ್ತೆಯಾಳಗಳನ್ನು ಬಿಡದಿದ್ದರೆ ಯುದ್ದ ಮಾಡಿ ಎಂದ ಟ್ರಂಪ್‌

Published

on

ವಾಷಿಂಗ್ಟನ್‌: ಇಸ್ರೆಲ್‌-ಹಮಾಸ್‌ ನಡುವಿನ ಕದನದಲ್ಲಿ ಹಿಡಿದಿಟ್ಟಿರುವ ಒತ್ತೆಯಾಳಗಳನ್ನು ಬಿಡದಿದ್ದರೆ ಯುದ್ದ ಪುನರಾರಂಭಿಸಬೆಕು ಎಂದು ಅಮೇರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.

ಸುಮಾರು ಒಂದೂವರೆ ವರ್ಷಗಳ ನಿರಂತರ ಯುದ್ಧದಿಂದ ಇಸ್ರೆಲ್‌ ಹಾಗೂ ಹಮಾಸ್‌ ಮಧ್ಯೆ ಕದನ ವಿರಾಮ ಒಪ್ಪಂದ ಏರ್ಪಟ್ಟಿತ್ತು.

ವಾರದ ಹಿಂದೆ ಇಸ್ರೆಲ್‌ ಕದನ ವಿರಾಮ ಉಲ್ಲಂಘಿಸಿದೆ ಎಂದು ಹಮಾಸ್‌, ಗಾಜಾ ಪಟ್ಟಿಯಲ್ಲಿನ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ವಿಳಂಬ ಮಾಡಿದೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಟ್ರಂಪ್‌, ಎಲ್ಲ ಒತ್ತೆಯಾಳುಗಳನ್ನು ವಾರದೊಳಗೆ ಬಿಡುಗಡೆ ಮಾಡಬೇಕು ಇಲ್ಲದಿದ್ದರೆ ಯುದ್ಧ ಮತ್ತೆ ಆರಂಭಿಸಬೇಕು ಎಂದು ಹೇಳಿದ್ದಾರೆ.

ನಾನು ನನ್ನ ನಿರ್ಧಾರವನ್ನು ಹೇಳಿದ್ದೇನೆ. ಅಂತಮ ನಿರ್ಧಾರ ಇಸ್ರೆಲ್‌ಗೆ ಬಿಟ್ಟಿದ್ದು ಎಂದಿದ್ದಾರೆ.

Continue Reading

National - International

ರಾಜಕಾರಣಿಗಳ ಕುಮ್ಮಕ್ಕಿನಿಂದ ಪೊಲಿಸ್ ಠಾಣೆ ಮೇಲೆ ದಾಳಿ: ಬೊಮ್ಮಾಯಿ

Published

on

ನವದೆಹಲಿ: ಮೈಸೂರಿನಲ್ಲಿ ಪೊಲಿಸ್ ಸ್ಟೇಷನ್ ಮೇಲೆ ರಾಜಕಾರಣಿಗಳ ಕುಮ್ಮಕ್ಕಿನಿಂದ ದಾಳಿ ನಡೆದಿದ್ದು, ಇದು ನೇರವಾಗಿ ಕಾಂಗ್ರೆಸ್ ಸರ್ಕಾರದ ಮೇಲಿನ ದಾಳಿ. ಮುಖ್ಯಮಂತ್ರಿ ಗಳು ಇದನ್ನು ಎಷ್ಟು ಗಂಭೀರವಾಗಿ ತೆಗೆದುಕೊಳ್ಳುತ್ತಾರೋ ನೋಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ನವದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕರ್ನಾಟಕ, ಕೇರಳ ತಮಿಳುನಾಡಿನಲ್ಲಿ ಒಂದು ವರ್ಗ ಮತ್ತು ಸಂಘಟನೆ ನಮ್ಮ ಇಡೀ ದೇಶ ಹಾಗೂ ವ್ಯವಸ್ಥೆಯನ್ನೇ ಚಾಲೆಂಜ್ ಮಾಡುವ ರೀತಿ ಕಾರ್ಯ ಚಟುವಟಿಕೆ ಮಾಡುತ್ತಿವೆ. ಪಿಎಫ್ ಐ ನಿಷೇಧ ಆಗಿದೆ. ಆದರೂ ಕೂಡ ಆ ಸಂಸ್ಥೆಯ ಕಾರ್ಯಕರ್ತರು ಬೇರೆ ಬೇರೆ ಹೆಸರಿನಲ್ಲಿ ಕಾರ್ಯಚಟುವಟಿಕೆ ಮಾಡುತ್ತಿದ್ದಾರೆ ಎಂದರು.

ಮಂಗಳೂರು, ಕೆಜಿ ಹಳ್ಳಿ, ಡಿಜೆ ಹಳ್ಳಿ, ಹುಬ್ಬಳ್ಳಿಯಲ್ಲಿ ನಡೆದ ಘಟನೆಗಳಿಗೂ ಮೈಸೂರಿನಲ್ಲಿ ನಡೆದ ಘಟನೆಗೂ ಸಾಮ್ಯತೆ ಇದೆ. ನಮ್ಮ ಸರ್ಕಾರ ಇದ್ದಾಗ ಕಠಿಣ ಕ್ರಮ ಕೈಗೊಂಡು ಹಲವಾರು ಜನರನ್ನು ಜೈಲಿಗೆ ಹಾಕಿದ್ದೇವು. ಈ ಸರ್ಕಾರ ಬಂದ ಮೇಲೆ ಹುಬ್ಬಳ್ಳಿಯಲ್ಲಿ ನಡೆದ ಘಟನೆಯಲ್ಲಿ ಭಾಗಿಯಾದವರ ಮೇಲಿನ ಎಲ್ಲ ಪ್ರಕರಣಗಳನ್ನು ವಾಪಸ್ ಪಡೆದು ಅವರೆಲ್ಲರೂ ಅಮಾಯಕರು ಎಂದು ಹೇಳಿದರು. ಅವರು ಮಾಡಿದ ಘಟನೆಯ ವಿಡಿಯೊ ಸಿಸಿ ಟಿವಿಯಲ್ಲಿ ಸಿಕ್ಕರೂ ಅವರನ್ನು ಅಮಾಯಕರು ಎಂದರು. .ಅದರಿಂದ ಪ್ರೇರಣೆಗೊಂಡು ಈಗ ಮತ್ತೆ ಮೈಸೂರಿನಲ್ಲಿ ಪೊಲಿಸ್ ಸ್ಟೇಷನ್ ಮೇಲೆ ದಾಳಿ, ಪೊಲಿಸ್ ವಾಹನದ ಮೇಲೆ ದಾಳಿ ಮಾಡಿದ್ದಾರೆ. ಇದರಿಂದ ಪೊಲಿಸ್ ಇನ್ಸ್ ಪೆಕ್ಟರ್ ಗಾಯಗೊಂಡಿದ್ದಾರೆ. ಅಷ್ಟೇ ಅಲ್ಲ, ಡಿಸಿಪಿ ಕಾರ್ ಮೇಲೂ ದಾಳಿ ಮಾಡುವಷ್ಟು ಧೈರ್ಯ ಬಂದಿದೆ. ಈ ಧೈರ್ಯ ಎಲ್ಲಿಂದ ಬಂತು. ಸರ್ಕಾರ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ, ರಾಜಕಾರಣಿಗಳ ಕುಮ್ಮಕ್ಕಿನಿಂದ ಈ ದಾಳಿ ನಡೆದಿದ್ದು, ಇದು ನೇರವಾಗಿ ಕಾಂಗ್ರೆಸ್ ಸರ್ಕಾರದ ಮೇಲಿನ ದಾಳಿ ಎಂದು ಆರೋಪಿಸಿದರು.

ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಲ್ಲಿಯೇ ಆಗಿದೆ. ಮುಖ್ಯಮಂತ್ರಿ ಗಳು ಇದನ್ನು ಎಷ್ಟು ಗಂಭೀರವಾಗಿ ತೆಗೆದುಕೊಳ್ಳುತ್ತಾರೋ ನೋಡಬೇಕು. ಅವರು ಯಾವಾಗಲೂ ಸಂವಿಧಾನ, ರೂಲ್ ಆಫ್ ಲಾ ಅಂತ ಹೇಳುತ್ತಾರೆ. ಇವತ್ತು ರೂಲ್ ಆಫ್ ಲಾ ಪ್ರಕಾರ ಕ್ರಮ ಕೈಗೊಳ್ಳುತ್ತಾರಾ ? ಅಥವಾ ತುಷ್ಡೀಕರಣಕ್ಕಾಗಿ ಸುಮ್ಮನಾಗುತ್ತಾರೊ ಎನ್ನುವುದನ್ನು ಜನರು ನೋಡುತ್ತಾರೆ. ಇವರು ಸಂವಿಧಾನ ಬದ್ದವಾಗಿ ಆಡಳಿತ ಮಾಡುತ್ತಾರೊ ಅಥವಾ ರಾಜಕಾರಣಕ್ಕಾಗಿ ಆಡಳಿತ ಮಾಡುತ್ತಾರೊ ಎನ್ನುವನ್ನುದನ್ನು ನೋಡಿ ಜನರು ಮುಂದಿನ ತೀರ್ಮಾನ ಮಾಡುತ್ತಾರೆ‌. ಘಟನೆಯ ವಿಡಿಯೊವನ್ನು ಇಡಿ ಜಗತ್ತೇ ನೋಡಿದರು ಕಾಂಗ್ರೆಸ್ ನವರು ಅದನ್ನು ಸಮರ್ಥಿಸಿಕೊಳ್ಳುತ್ತಾರೆಂದರೆ ಅವರು ಎಷ್ಟು ಭಂಡತನಕ್ಕೆ ಬಿದ್ದಿದ್ದಾರೆ ನೋಡಿ ಎಂದರು.

ಹೈಕಮಾಂಡ್ ತೀರ್ಮಾನ ಅಂತಿಮ: 
ರಾಜ್ಯದ ಬಿಜೆಪಿ ಗೊಂದಲ ಬಗೆ ಹರಿಸಲು ಹೈಕಮಾಂಡ್ ಏನು ತೀರ್ಮಾನ ತೆಗೆದುಕೊಳ್ಳುತ್ತದೆಯೋ ನಾವು ಅದಕ್ಕೆ ಬದ್ದ ರಾಗಿದ್ದೇವೆ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಏನು ನೊಟಿಸ್ ಬಂದಿದೆ. ಅದಕ್ಕೆ ಅವರು ಏನು ಉತ್ತರ ಕೊಟ್ಟಿದ್ದಾರೆ ಎನ್ನುವ ಬಗ್ಗೆ ನನಗೆ ಮಾಹಿತಿ ಇಲ್ಲ. ಆದರೆ, ಅಂತಿಮವಾಗಿ ಹೈಕಮಾಂಡ್ ಪ್ರವೇಶ ಮಾಡಿರುವುದರಿಂದ ಇದು ಸರಿಯಾದ ರೀತಿಯಲ್ಲಿ ಸಮರ್ಪಕವಾಗಿ ಮುಗಿಯುತ್ತದೆ ಎನ್ನುವ ವಿಶ್ವಾಸ ನನಗಿದೆ ಎಂದು ಹೇಳಿದರು.

Continue Reading

Trending

error: Content is protected !!