Connect with us

State

ನಿಮ್​ ಮೊಬೈಲ್​ಗೂ ಬಂತಾ ಅಲರ್ಟ್​ ಮೆಸೇಜ್? ಬಾರದಿದ್ದಲ್ಲಿ ಕಾರಣ ಏನಿರಬಹುದು?

Published

on

ನೆನ್ನೆ ಜನಮಿತ್ರ ಗ್ರೂಪ್‌ನಲ್ಲಿ‌ ಅಚ್ಚರಿಯ ಮಾಹಿತಿಯೊಂದು ಪ್ರಕಟವಾಗಿತ್ತು.  ಆ ಸಂದೇಶದಲ್ಲಿದ್ದ ಪೂರ್ವ ಸೂಚನೆಯಂತೆ ಇಂದು ಬೆಳಗ್ಗೆ 11.58ರ ಸಮಯದಲ್ಲಿ ಹಾಗೂ ಮಧ್ಯಾಹ್ನ 12.12ರ ಹೊತ್ತಿಗೆ ಕರ್ನಾಟಕ ರಾಜ್ಯದ ಬಹುತೇಕ ಎಲ್ಲಾ ಮೊಬೈಲ್​ ಗಳಿಗೆ ಬೀಪ್ ಸೌಂಡ್​ ಹಾಗೂ ಇದರೊಂದಿಗೆ ಭಾರತ ಸರ್ಕಾರದ ದೂರಸಂಪರ್ಕ ಇಲಾಖೆಯಿಂದ ಸೆಲ್ ಬ್ರಾಡ್ ಕಾಸ್ಟಿಂಗ್ ಸಿಸ್ಟಮ್ ಮೂಲಕ ಮಾದರಿ ಪರೀಕ್ಷಾ ಎಚ್ಚರಿಕೆಯ ಸಂದೇಶ ಬಂದಿದೆ. ಈ ರೀತಿ ಎರಡೆರಡು ಸಲ ಅಲರ್ಟ್​ ಮೆಸೇಜ್​ ಬರಲು ಕಾರಣ ಇಲ್ಲಿದೆ….

ಸಾರ್ವಜನಿಕ ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ತುರ್ತು ಸಂದರ್ಭಗಳಲ್ಲಿ ಸಕಾಲಿಕ ಎಚ್ಚರಿಕೆಗಳನ್ನು ಒದಗಿಸುವ ಗುರಿಯನ್ನು ಹೊಂದಿ ಈ ರೀತಿಯ ಸಂದೇಶ ಮೊಬೈಲ್ ಗಳಿಗೆ ರವಾನೆಯಾಗಿದೆ. ಇಂದು ಕರ್ನಾಟಕದಾದ್ಯಂತ ರಾಷ್ಟ್ರೀಯ ವಿಪತ್ತು ನಿರ್ವಹಣ ಪ್ರಾಧಿಕಾರದ ಸಹಯೋಗದಲ್ಲಿ ಬ್ರಾಡ್‌ಕಾಸ್ಟ್​ ಅಲರ್ಟ್​ ಸಿಸ್ಟಮ್​ ಪರೀಕ್ಷೆಯನ್ನು ನಡೆಸುವುದಾಗಿ ಕೇಂದ್ರ ಸರ್ಕಾರದ ದೂರಸಂಪರ್ಕ ಇಲಾಖೆ ಮೊದಲೇ ಸೂಚನೆ ನೀಡಿತ್ತು. . ಮೊಬೈಲ್​ಗೆ ತುರ್ತು ಎಚ್ಚರಿಕೆಯ ಸಂದೇಶ ಬರಲಿದೆ. ಹೀಗಾಗಿ ಯಾರೂ ಗಾಬರಿ ಪಡಬೇಕಿಲ್ಲ. ಇದು ಸರ್ಕಾರದ ವತಿಯಿಂದಲೇ ನಡೆಯುತ್ತಿರುವ ಪರೀಕ್ಷೆಯಾಗಿದೆ ಎಂದು ಹೇಳಿತ್ತು.

ಏನಿದು ಸೆಲ್ ಬ್ರಾಡ್‌ಕಾಸ್ಟ್​ ಅಲರ್ಟ್​ ಸಿಸ್ಟಮ್​?
ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ನಾಗರಿಕರ ಜೀವವನ್ನು ಉಳಿಸಲು ತುರ್ತು ಸಂವಹನ ಅಭಿವೃದ್ಧಿಗಾಗಿ ಮತ್ತು ನಾಗರಿಕರು ಹಾಗೂ ಸಮುದಾಯಗಳ ಸುರಕ್ಷತೆಗೆ ಪ್ರತಿ ಟೆಲಿಕಾಂ ಸೇವಾ ಪೂರೈಕೆದಾರರ ಮೇಲೆ ಸೆಲ್ ಬ್ರಾಡ್‌ಕಾಸ್ಟ್ ಅಲರ್ಟ್ ಸಿಸ್ಟಮ್‌ನ ಪರೀಕ್ಷೆಗಳನ್ನು ನಡೆಸಲಾಗಿದೆ.

ವಿವಿಧ ಮೊಬೈಲ್ ಆಪರೇಟರ್‌ಗಳು ಮತ್ತು ಸೆಲ್ ಬ್ರಾಡ್‌ಕಾಸ್ಟ್ ಸಿಸ್ಟಮ್‌ಗಳ ತುರ್ತು ಎಚ್ಚರಿಕೆ ಪ್ರಸಾರದ ದಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ಅಳೆಯಲು ಕಾಲಕಾಲಕ್ಕೆ ದೇಶದಾದ್ಯಂತ ವಿವಿಧ ಪ್ರದೇಶಗಳಲ್ಲಿ ಈ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಅತ್ಯಾಧುನಿಕ ತಂತ್ರಜ್ಞಾನವಾಗಿರುವ ಸೆಲ್ ಬ್ರಾಡ್‌ಕಾಸ್ಟ್ ಅಲರ್ಟ್​ ಸಿಸ್ಟಮ್​ ಗೊತ್ತುಪಡಿಸಿದ ಭೌಗೋಳಿಕ ಪ್ರದೇಶದ ಎಲ್ಲ ಮೊಬೈಲ್ ಸಾಧನಗಳಿಗೆ ವಿಪತ್ತು ನಿರ್ವಹಣೆಗಾಗಿ ನಿರ್ಣಾಯಕ ಮತ್ತು ಸಮಯ-ಸೂಕ್ಷ್ಮ ಸಂದೇಶಗಳನ್ನು ಕಳುಹಿಸಲು ಅನುಮತಿ ನೀಡುತ್ತದೆ. ಪ್ರಮುಖ ತುರ್ತು ಮಾಹಿತಿಯು ಸರಿಯಾದ ಸಮಯಕ್ಕೆ ಅನೇಕ ಜನರನ್ನು ತಲುಪುವುದನ್ನು ಈ ಸಿಸ್ಟಮ್​ ಖಚಿತಪಡಿಸುತ್ತದೆ. ಸಂಭಾವ್ಯ ಬೆದರಿಕೆಗಳ ನಿರ್ಣಾಯಕ ಸಂದರ್ಭಗಳಲ್ಲಿ ಸಾರ್ವಜನಿಕರಿಗೆ ತಿಳಿಸಲು ಸರ್ಕಾರಿ ಏಜೆನ್ಸಿಗಳು ಮತ್ತು ತುರ್ತು ಸೇವೆಗಳು ಇದನ್ನು ಬಳಸುತ್ತವೆ. ಸುನಾಮಿ, ದಿಢೀರ್​ ಪ್ರವಾಹ, ಭೂಕಂಪನಗಳು ಮುಂತಾದ ಗಂಭೀರ ಸ್ವರೂಪದ ಹವಾಮಾನ ಎಚ್ಚರಿಕೆ ಸಂದೇಶಗಳನ್ನು ಕಳುಹಿಸಲು ಸೆಲ್ ಬ್ರಾಡ್‌ಕಾಸ್ಟ್ ಅನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ಎಚ್ಚರಿಕೆ ಸಂದೇಶದಲ್ಲಿ ಸಾರ್ವಜನಿಕ ಸುರಕ್ಷತಾ ಕ್ರಮಗಳು, ಸ್ಥಳಾಂತರದ ಸೂಚನೆ ಮತ್ತು ಇತರೆ ಮಹತ್ವದ ಮಾಹಿತಿಗಳು ಇರಲಿವೆ.
“ಪರೀಕ್ಷಾ ಹಂತದಲ್ಲಿ ಅನೇಕ ಜನರು ತಮ್ಮ ಮೊಬೈಲ್ ಸಾಧನಗಳಲ್ಲಿ ಈ ತುರ್ತು ಎಚ್ಚರಿಕೆ ಸಂದೇಶಗಳನ್ನು ಪಡೆಯಬಹುದು. ಈ ಎಚ್ಚರಿಕೆಗಳು ಕೇವಲ ಪರೀಕ್ಷಾ ಪ್ರಕ್ರಿಯೆಯ ಭಾಗವಾಗಿದೆ ಹೊರತು ನಿಜವಾದ ತುರ್ತು ಪರಿಸ್ಥಿತಿಯನ್ನು ಸೂಚಿಸುವುದಿಲ್ಲ” ಎಂದು ಈ ಮೆಸೇಜ್​ನಲ್ಲೇ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.

ಅಲರ್ಟ್ ಮೆಸೇಜ್ ಬಾರದಿರಲು ಕಾರಣ…
ಆದರೆ ಕೆಲವರ ಮೊಬೈಲ್​ಗೆ ಈ ಸಂದೇಶ ಬಂದಿರುವುದಿಲ್ಲ . ಈ ಕುರಿತು ಕಲೆಹಾಕಲಾಗಿರುವ ಸಂಭವನಿಯ ಕಾರಣಗಳು…
* ಅಲರ್ಟ್ ಮೆಸೇಜ್ ಸೆಂಡ್ ಆಗಲು ಸುಮಾರು 30 ನಿಮಿಷಗಳ ಅವಧಿವರೆಗೆ ಮಾತ್ರ ಸಮಯಾವಕಾಶ ತೆಗೆದುಕೊಳ್ಳುತ್ತದೆ. ಈ ಅವಧಿಯಲ್ಲಿ ಮೊಬೈಲ್ ಸ್ವಿಚ್ ಆಫ್ ಆಗಿದ್ದೀರಬಹುದು. 30 ನಿಮಿಷದ ಅವಧಿಯೊಳಗೆ ಮೊಬೈಲ್ ಸ್ವಿಚ್ ಆನ್ ಮಾಡಿದಾಗ ಮೆಸೇಜ್ ಬರುತ್ತದೆ. ಆದರೆ ಈ ಅವಧಿ ಮೀರಿದ ಬಳಿಕ ಸ್ವಿಚ್ ಆನ್ ಮಾಡಿದರೂ ಮೆಸೇಜ್ ಬರುವುದಿಲ್ಲ.
* ಮೊಬೈಲ್​​ ಏರ್​ಪ್ಲೇನ್ ಮೋಡ್​ನಲ್ಲಿದ್ದರೂ ಅಲರ್ಟ್ ಮೆಸೇಜ್​​ ಬಂದಿರುವುದಿಲ್ಲ.
* ಫೋನ್ ಸೆಟಿಂಗ್​ನಲ್ಲಿ ಎಮರ್ಜೆನ್ಸಿ ಅಲರ್ಟ್ ಸಿಸ್ಟಂ ಆಫ್ ಆಗಿದ್ದಲ್ಲಿ ಅಥವಾ ಮೊಬೈಲ್​​ ಹಳೆಯದಾಗಿದ್ದರೆ ಅಲರ್ಟ್ ಮೆಸೇಜ್ ಬಂದಿಲ್ಲದಿರಬಹುದು.
* ಎಮರ್ಜೆನ್ಸಿ ಸಿಸ್ಟಂ ವಾರ್ನಿಂಗ್ ವ್ಯವಸ್ಥೆಗೆ ಮೊಬೈಲ್ ಫೋನ್ ಹೊಂದಿಕೆಯಾಗದಿರುವುದು ಕಾರಣವಾಗಿರಬಹುದು.(ವಿವಿಧ ಮೂಲಗಳಿಂದ)

Continue Reading
Click to comment

Leave a Reply

Your email address will not be published. Required fields are marked *

State

ಉಳಿತಾಯದ ಹೂಡಿಕೆಗಳು MSIL ಸಂಸ್ಥೆಯಲ್ಲಿ ಸುಭದ್ರ ಗ್ಯಾರಂಟಿ: ಸಿಎಂ ಸಿದ್ದರಾಮಯ್ಯ

Published

on

ಬೆಂಗಳೂರು: ಸಾರ್ವಜನಿಕರು ಉಳಿತಾಯದ ಹೂಡಿಕೆಗಳು ಸರ್ಕಾರದ ಎಂಎಸ್ಐಎಲ್ ಸಂಸ್ಥೆಯಲ್ಲಿ ಸುಭದ್ರವಾಗಿರುವ ಗ್ಯಾರಂಟಿ ಇದೆಯೆಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್ ಇಂದು ವತಿಯಿಂದ ಆಯೋಜಿಸಲಾಗಿದ್ದ ಎಂಎಸ್ಐಎಲ್  ಚಿಟ್ಸ್ ಹೊಸ ಸಾಫ್ಟ್ ವೆರ್ ಹಾಗೂ ಮೊಬೈಲ್ ಆಪ್ ಬಿಡುಗಡೆಗೊಳಿಸಿ ಸಿಎಂ ಮಾತನಾಡಿದರು.

ಎಂಎಸ್ ಐ ಎಲ್ ಸರ್ಕಾರಿ ಸಂಸ್ಥೆಯು ಹಲವು ದಶಕಗಳಿಂದ ಜನರ ವಿಶ್ವಾಸಕ್ಕೆ ಪಾತ್ರವಾಗಿದೆ. 2005 ರಿಂದ ಚಿಟ್ ಫಂಡ್ ವ್ಯವಸ್ಥೆ ಪ್ರಾರಂಭವಾಗಿದೆ. ಉಳಿತಾಯದ ಸಂಸ್ಕೃತಿ ಅತ್ಯವಶ್ಯ.ವಾಗಿದ್ದು, ಅಗತ್ಯ ಸಂದರ್ಭದಲ್ಲಿ ಉಳಿತಾಯದ ಹಣ ನೆರವಿಗೆ ಬರುತ್ತದೆ. ಜಾತಿವರ್ಗಗಳ ಬೇಧವಿಲ್ಲದೇ ಜಾರಿಯಾಗುವ ಸರ್ಕಾರದ ಗ್ಯಾರಂಟಿ ಯೋಜನೆಗಳಾದ ಶಕ್ತಿ, ಗೃಹಲಕ್ಷ್ಮಿ, ಯುವನಿಧಿ, ಅನ್ನಭಾಗ್ಯದಿಂದ ಉಳಿತಾಯವಾಗುವ ಹಣವನ್ನು ಜನರು ವಿಶೇಷವಾಗಿ ಮಹಿಳೆಯರು ಹೂಡಿಕೆ ಮಾಡಬೇಕು ಎಂದರು.

ಹೂಡಿಕೆ ಹಣವನ್ನು ಸುರಕ್ಷಿತವಾಗಿರುವುದು ಅತ್ಯಂತ ಅಗತ್ಯವಾಗಿದ್ದು, ಎಂಎಸ್ ಐ ಎಲ್ ನ ಚಿಟ್ ಫಂಡ್ ಈ ಭರವಸೆಯನ್ನು ನೀಡುತ್ತದೆ. ಸಾಮಾನ್ಯವಾಗಿ ನಡೆಯುವ ಚೀಟಿ ವ್ಯವಹಾರಗಳಲ್ಲಿ ಮೋಸವಾಗುವ ಸಾಧ್ಯವಿರುತ್ತದೆ. ಆದರೆ ಎಂಎಸ್ ಐ ಎಲ್, ಸರ್ಕಾರಿ ಸಂಸ್ಥೆಯಾಗಿದ್ದು, ಜನರ ಹೂಡಿಕೆಗೆ ಭದ್ರತೆಯನ್ನು ಒದಗಿಸುತ್ತದೆ. ತಮ್ಮ ಹೂಡಿಕೆಯ ಕೇವಲ ಶೇ.5 ರಷ್ಟು ಲಾಭ ಪಡೆಯುವ ಸಂಸ್ಥೆ ಜನರ ಆರ್ಥಿಕ ಭದ್ರತೆಗೆ ನೆರವಾಗಿದೆ ಎಂದು ಹೇಳಿದರು.

ಕೇರಳ ರಾಜ್ಯದಲ್ಲಿ ಈ ಕ್ಷೇತ್ರದಲ್ಲಿ 47,000 ಕೋಟಿ ವಹಿವಾಟು ನಡೆಯುತ್ತದೆ. ಕರ್ನಾಟಕದಲ್ಲಿ ಕೇವಲ 500 ಕೋಟಿ ವ್ಯವಹಾರ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಈ ಮೊತ್ತವನ್ನು 10,000 ಕೋಟಿ ಯಷ್ಟು ವಹಿವಾಟು ನಡೆಸುವ  ಗುರಿಯನ್ನು ಸಂಸ್ಥೆ ಹೊಂದಿದೆ. ಶಿಕ್ಷಣ, ಆರೋಗ್ಯ, ಮದುವೆ, ಮನೆ ಹೀಗೆ, ಜನರು ತಮ್ಮ ಅಗತ್ಯಗಳಿಗಾಗಿ ಹೂಡಿಕೆ ಮಾಡುವ ಉಳಿತಾಯದ ಮೊತ್ತ ಸುಭದ್ರವಾಗಿರುವ ಗ್ಯಾರಂಟಿ ಇದೆ. ಹಣ ಗಳಿಸುವುದು ಹಾಗೂ ಸುಭದ್ರವಾಗು ಹೂಡಿಕೆ ಮಾಡುವುದೂ ಮುಖ್ಯ ಎಂದು ತಿಳಿಸಿದರು.

 

ಎಂಎಸ್ ಐ ಎಲ್ ನ ಚಿಟ್ ಫಂಡ್ ವ್ಯವಹಾರದಲ್ಲಿ ಗ್ರಾಹಕರಿಗೆ ಅನುಕೂಲವಾಗುವಂತೆ ಆಧುನಿಕ ತಂತ್ರಾಂಶವನ್ನು ಇಂದು ಲೋಕಾರ್ಪಣೆಗೊಳಿಸಲಾಗಿದೆ. ಮೈಕ್ರೋ ಫೈನಾನ್ಸ್ ಗಳು ನೀಡುವ ಸಾಲದ ಸುಳಿಯಲ್ಲಿ ಅನೇಕ ಜನರು ಸಿಲುಕುತ್ತಾರೆ. ಆದ್ದರಿಂದ ಕಿರು ಸಾಲ ಮತ್ತು ಸಣ್ಣ ಸಾಲ ಅಧ್ಯಾದೇಶ 2025 ನ ರಕ್ಷಣೆ ನೀಡಲಾಗಿದೆ. ಸಾಲ ಪಡೆದ ಕಿರುಕುಳ ಅನುಭವಿಸುತ್ತಿರುವ ಜನರ ರಕ್ಷಣೆಗಾಗಿ ಈ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ ಎಂದು ಹೇಳಿದರು.

Continue Reading

State

ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಕೋಟಿ ಕೋಟಿ ರೂ. ಮೌಲ್ಯದ ಗಾಂಜಾ ವಶ

Published

on

ಬೆಂಗಳೂರು: ಇಲ್ಲಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಕೋಟಿ ಕೋಟಿ ರೂ. ಮೌಲ್ಯದ ಗಾಂಜಾವನ್ನ ವಶಪಡಿಸಿಕೊಂಡಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

ಮಲೇಶಿಯಾದಿಂದ ಬೆಂಗಳೂರಿಗೆ ಬಂದ ಪ್ರಯಾಣಿಕನೊರ್ವನ ಬಳಿ ಒಂದು ಕೋಟಿ 91 ಲಕ್ಷ ರೂ. ಮೌಲ್ಯದ 5.48 ಕೆ.ಜಿ ಗಾಂಜಾ ವಶಕ್ಕೆ ಪಡೆದಿದ್ದಾರೆ. ಅಲ್ಲದೇ ಇನ್ನೊಂದು ಪ್ರಕರಣದಲ್ಲಿ ಪುಕೇಟ್ನಿಂದ ಬಂದ ಇಬ್ಬರು ಪ್ರಯಾಣಿಕರನ್ನು ಪರಿಶೀಲನೆಗೆ ಒಳಪಡಿಸಿದಾಗ ಒಂದು ಕೋಟಿ ಆರು ಲಕ್ಷ ರೂ. ಮೌಲ್ಯದ 3.03 ಕೆಜಿ ಹೈಡ್ರೋಫೋನಿಕ್ ಗಾಂಜಾ ಪತ್ತೆಯಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಇನ್ನೂ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮೂವರು ಪ್ರಯಾಣಿಕರನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ.

Continue Reading

State

ಸುಳ್ಳು – ಸಿದ್ದರಾಮಯ್ಯ ಒಂದೇ ನಾಣ್ಯದ ಎರಡು ಮುಖ: ಡಾ. ಸಿ.ಟಿ.ರವಿ 

Published

on

ಬೆಂಗಳೂರು: ಮೆಟ್ರೋ ದರ ಏರಿಕೆ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಸುಳ್ಳು ಹೇಳುತ್ತಿದ್ದಾರೆ. ಮೆಟ್ರೋ ದರ ಏರಿಕೆ ಕುರಿತು ಬಿಜೆಪಿ ಹೋರಾಟ ಮಾಡಲಿದೆ ಎಂದು ಎಂಎಲ್‌ಸಿ ಡಾ. ಸಿ.ಟಿ ರವಿ  ತಿಳಿಸಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಇಂದು  ಮೆಟ್ರೋ ದರ ಏರಿಕೆ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಸುಳ್ಳು ಹೇಳೋದರಲ್ಲಿ ಸಿದ್ದರಾಮಯ್ಯ ನಿಸ್ಸೀಮರು. ಸುಳ್ಳು ಹಾಗೂ ಸಿದ್ದರಾಮಯ್ಯ ಒಂದೇ ನಾಣ್ಯದ ಎರಡು ಮುಖ. ಸುಳ್ಳು ಬೆಳಗ್ಗೆ ಪ್ರಾರಂಭ ಮಾಡಿ‌ ಅಂತ್ಯ ಮಾಡೋದು ಸುಳ್ಳಿನಿಂದಲೇ ಎಂದು ವಾಗ್ದಾಳಿ ನಡೆಸಿದ್ದಾರೆ.

ಮೆಟ್ರೋ ದರ ಏರಿಕೆ ಸಂಬಂಧ ಪಿ.ಸಿ ಮೋಹನ್ ವಿವರವಾಗಿ ಪತ್ರ ಬರೆದಿದ್ದರು. ಮೆಟ್ರೋ ಲಾಭದಲ್ಲಿ ನಿಮಗೆ ಪಾಲು ಇಲ್ಲವಾ ಸಿದ್ದರಾಮಯ್ಯ ಅವರೇ? ಸಮಿತಿ ಅಧ್ಯಕ್ಷ ಯಾರ್ ಆಗಬೇಕು ಎಂದು ಶಿಫಾರಸು ಮಾಡೋರು ಯಾರು? ಸಂಸದರು ಹೇಳಿದ ಹಾಗೆ ಮೆಟ್ರೋ ದರ ಏರಿಕೆ ಬಗ್ಗೆ ಬಿಜೆಪಿ ಹೋರಾಟ ಮಾಡುತ್ತದೆ ಎಂದು ರಾಜ್ಯ ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ.

Continue Reading

Trending

error: Content is protected !!