Chamarajanagar
ಫಲಾನುಭವಿಗಳಿಗೆ ವಿವಿಧ ಯೋಜನೆಯ ದಾಖಲೆಗಳ ವಿತರಿಸಿ ಶಾಸಕ ಮಂಜುನಾಥ್
ಹನೂರು : ಹಲವಾರು ವರ್ಷಗಳಿಂದ ಬಗೆಹರಿಯದ ಸಮಸ್ಯೆಗಳನ್ನು ವಿಶೇಷವಾಗಿ ರಾಜ್ಯದ ಜನಕ್ಕೆ, ಅರ್ಹ ಫಲಾನುಭವಿಗಳಿಗೆ ಸರ್ಕಾರ ಹಾಗೂ ಕಂದಾಯ ಇಲಾಖೆ ಡಿಜಿಟಲ್ ಮೂಲಕ ದಾಖಲೆ ನೀಡಲಾಗುತ್ತಾ ಬರಲಾಗುತ್ತಿದೆ ಎಂದು ಶಾಸಕ ಎಂ. ಆರ್. ಮಂಜುನಾಥ್ ತಿಳಿಸಿದರು.
ಹನೂರು ತಾಲೂಕಿನ ಲೊಕ್ಕನಹಳ್ಳಿಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಕಂದಾಯ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಕಂದಾಯ/ಪಿಂಚಣಿ ಅದಾಲತ್ ಹಾಗೂ ಕಂದಾಯ ಇಲಾಖೆಯ ವಿವಿಧ ಯೋಜನೆಯ ದಾಖಲೆಗಳ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ರೈತರಿಗೆ ಹಾಗೂ ಸ್ಟಳೀಯ ನಿವಾಸಿಗಳಿಗೆ ಆಧಾರವಾಗವಂತೆ ಮನೆ, ಜಮೀನು ಹಕ್ಕು ಪತ್ರ ಸೇರಿದಂತೆ ಯೋಜನೆಯ ಆದೇಶಗಳನ್ನು ವಿತರಣೆ ಮಾಡಲಾಗುತ್ತಿದೆ. ಜಮೀನು ಪೋಡಿಗೆ ರೈತರು ಅಲೆದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಈ ಸಂಬಂಧ ಕಂದಾಯ ಇಲಾಖೆ ದಿಟ್ಟ ನಿರ್ಧಾರ ಕೈಗೊಂಡು ಅರ್ಹರಿಗೆ ಹಕ್ಕು ದಕ್ಕಿಸುವ ಕೆಲಸ ಮಾಡಲಾಗುತ್ತಿದೆ. ಈ ಕಾರ್ಯವನ್ನು ಕಂದಾಯ ಇಲಾಖೆ ಮನೆ ಬಾಗಿಲಿಗೆ ಯೋಜನೆಯನ್ನು ಒದಗಿಸುವ ಕಾರ್ಯ ಮಾಡುತ್ತಿರುವುದು ಸ್ವಾಗತರ್ಹ ಎಂದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಚೈತ್ರಾ, ಕೊಳ್ಳೇಗಾಲ ಉಪ ತಹಸೀಲ್ದಾರ್ ರವಿ, ಸರ್ವೇ ಅಧೀಕ್ಷಕ ಕುಮಾರಸ್ವಾಮಿ, ಲೊಕ್ಕನಹಳ್ಳಿ ರಾಜಸ್ವ ನಿರೀಕ್ಷಕ ಮಹಾದೇವಸ್ವಾಮಿ, ಕಂದಾಯ ಆಡಳಿತ ಅಧಿಕಾರಿಗಳಾದ ಮಾರುತಿ, ವಿದ್ಯಾಶ್ರೀ, ಶಿವಕುಮಾರ್, ನಂಜುಂಡ, ವಿಷಯ ನಿರ್ವಾಹಕರಾದ ಮಹೇಶ್ವರಿ ಸಿಬ್ಬಂದಿಗಳಾದ ನಿಂಗರಾಜು, ಕೃಷ್ಣ ಮೂರ್ತಿ, ಸಿದ್ದರಾಜು, ಶಿವಚಂದ್ರ, ಇನ್ನಿತರರು ಇದ್ದರು.
Chamarajanagar
ಚಿರತೆ ದಾಳಿಗೆ ಕರು ಬಲಿ
ಚಾಮರಾಜನಗರ: ತಾಲೂಕಿನ ಕಿಲಗೆರೆ ಗ್ರಾಮದಲ್ಲಿ ಚಿರತೆ ದಾಳಿಯಿಂದ ಕರುವೊಂದು ಮೃತಪಟ್ಟಿದೆ.
ಗ್ರಾಮದ ಎಸ್.ಎನ್.ಮಧು ಎಂಬುವವರಿಗೆ ಸೇರಿದ ಕರು ಚಿರತೆ ದಾಳಿಯಿಂದ ಮೃತಪಟ್ಟಿರುವುದು.
ರೈತ ಮಧು ತಮ್ಮ ಜಮೀನಿನಲ್ಲಿ ಮೇಯಲು ಬಿಟ್ಟಿದ್ದಾಗ ಏಕಾಏಕಿ ದಾಳಿ ನಡೆಸಿರುವ ಚಿರತೆ ಕರು ಕೊಂದು ತಿಂದು ಹಾಕಿದೆ.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಬಿಆರ್‌ಟಿ ಸಾಮಾಜಿಕ ಅರಣ್ಯ ವಲಯ ಅಧಿಕಾರಿಗಳು ಪರಿಶೀಲನೆ ನಡೆಸಿ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.
ಚಿರತೆ ಸೆರೆಗೆ ಆಗ್ರಹ: ಗ್ರಾಮದ ಹೊರವಲಯದಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದು, ರೈತರು ಜಾನುವಾರುಗಳನ್ನು ಮೇಯಿಸಲು, ಜಮೀನಿಗೆ ತೆರಳಲು ಆತಂಕ ಪಡುವಂತಾಗಿದೆ. ಆದ್ದರಿಂದ ಅಧಿಕಾರಿಗಳು ಬೋನ್ ಇರಿಸಿ ಚಿರತೆಯನ್ನು ಸೆರೆ ಹಿಡಿಯಬೇಕೆಂದು ಆಗ್ರಹಿಸಿದ್ದಾರೆ.
Chamarajanagar
ಕಸಾಯಿಖಾನೆಗೆ ಸಾಗಿಸುತ್ತಿದ್ದ ಜಾನುವಾರುಗಳ ರಕ್ಷಣೆ
ಚಾಮರಾಜನಗರ: ಕಸಾಯಿಖಾನೆಗೆ ಅಕ್ರಮವಾಗಿ ಸಾಗಿಸುತ್ತಿದ್ದ ಜಾನುವಾರುಗಳನ್ನು ಪೊಲೀಸರು ರಕ್ಷಣೆ ಮಾಡಿ ಆರೋಪಿಯನ್ನು ಬಂಧಿಸಿರುವ ಘಟನೆ ತಾಲೂಕಿನ ಬಾಣಹಳ್ಳಿ ಗ್ರಾಮದ ಗೇಟ್ ಬಳಿ ನಡೆದಿದೆ.
ಟಿ.ನರಸೀಪುರ ತಾಲೂಕಿನ ಬೈರಾಪುರ ಗ್ರಾಮದ ಮೊಹಮ್ಮದ್ ಸಾದಿಕ್(25) ಬಂಧಿತ ಆರೋಪಿ. ಈತ ಟಾಟಾ ಏಸ್ ವಾಹನದಲ್ಲಿ ಅಕ್ರಮವಾಗಿ ಮೂರು ಜಾನುವಾರುಗಳನ್ನು ಕಸಾಯಿಖಾನೆಗೆ ಸಾಗಿಸುತ್ತಿದ್ದ ಖಚಿತ ಮಾಹಿತಿಯನ್ನು ಆಧರಿಸಿ ದಾಳಿ ನಡೆಸಿದ ಪೊಲೀಸರು ವಾಹನ ಸಮೇತ ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಸಂಬಂಧ ಸಂತೇಮರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Chamarajanagar
ಶಾಸಕರು, ಸಂಸದರ ನಿರ್ಲಕ್ಷ್ಯ ಖಂಡಿಸಿ ಬಿಎಸ್‌ಪಿ ಪ್ರತಿಭಟನೆಗೆ ಕರೆ
ವರದಿ : ಸುನೀಲ್ ಪ್ರಶಾಂತ್
ಕೊಳ್ಳೇಗಾಲ: ಪಟ್ಟಣದ ಐಬಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಎಸ್‌ಪಿ ನೂತನ ಪದಾಧಿಕಾರಿಗಳು, ಶಾಸಕರು ಹಾಗೂ ಸಂಸದರ ನಿರ್ಲಕ್ಷ್ಯ ಮತ್ತು ನಗರಸಭೆಯ ದುರಾಡಳಿತವನ್ನು ಖಂಡಿಸಿ ನಗರಸಭೆ ಕಚೇರಿ ಎದುರು ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಈ ಪ್ರತಿಭಟನೆಗೆ ಕನ್ನಡ ಪರ ಸಂಘಟನೆಗಳು, ಪ್ರಗತಿಪರ ಸಂಘಟನೆಗಳು ಹಾಗೂ ಮಹಿಳಾ ಸಂಘಟನೆಗಳು ಬೆಂಬಲ ಸೂಚಿಸಿದ್ದು, ಸುಮಾರು ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಹೇಳಿದರು.

ನಗರಸಭೆಯ 31 ವಾರ್ಡ್‌ಗಳಲ್ಲಿನ ಎಲ್ಲಾ ಮೂಲಭೂತ ಸಮಸ್ಯೆಗಳನ್ನೊಳಗೊಂಡಂತೆ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತಿದ್ದು, ಎಲ್ಲಾ ವಾರ್ಡ್‌ಗಳ ನಾಗರಿಕರು ಪ್ರತಿಭಟನೆಯಲ್ಲಿ ಭಾಗವಹಿಸಿ ಬೆಂಬಲ ನೀಡಬೇಕೆಂದು ಮನವಿ ಮಾಡಿದರು.
-
State22 hours agoಗೃಹಲಕ್ಷ್ಮೀ ಯೋಜನೆಯಲ್ಲಿ ಬದಲಾವಣೆ
-
Mysore11 hours agoಮೈಸೂರಿನಲ್ಲಿ ಸಿಡಿಲು ಬಡಿದು ಮಡಿಕೇರಿಯ ಹೊಸೊಕ್ಲು ರೋಷನ್ ಬಾಲಕೃಷ್ಣ (43) ನಿಧನ .
-
Mysore5 hours agoದೈವ ನಿಂದನೆ ಪ್ರಕರಣ: ಚಾಮುಂಡಿ ತಾಯಿ ಸನ್ನಿಧಿಯಲ್ಲಿ ಕ್ಷಮೆ ಕೇಳಿದ ಬಾಲಿವುಡ್ ನಟ ರಣವೀರ್ ಸಿಂಗ್
-
State3 hours agoರಾಜ್ಯ ರಾಜಕೀಯದಲ್ಲಿ ಮತ್ತೆ ಚರ್ಚೆಗೆ ನಾಯಕತ್ವ ಬದಲಾವಣೆ: ಹೈಕಮಾಂಡ್ ಸಭೆ ಕುತೂಹಲ
-
Sports4 hours agoಧರ್ಮಶಾಲಾದಲ್ಲಿ ಆರ್ಸಿಬಿಗೆ ಗುಡ್ ನ್ಯೂಸ್: ಫಿಲ್ ಸಾಲ್ಟ್ ಕಮ್ಬ್ಯಾಕ್ ಸಾಧ್ಯತೆ
-
Hassan6 hours ago2025-26ರ ರಾಜ್ಯ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ : ಫುಟ್ಬಾಲ್ನಲ್ಲಿ ಹಾಸನ ಜಿಲ್ಲೆಗೆ ರನ್ನರ್-ಅಪ್ ಗೌರವ
-
Chamarajanagar24 hours agoಮಾಸಾಶನ ಪಡೆಯುತ್ತಿರುವ ಸಾಹಿತಿ, ಕಲಾವಿದರು ಜೀವಿತ ಪ್ರಮಾಣ ಪತ್ರ ಸಲ್ಲಿಸಲು ಮನವಿ
-
Hassan4 hours ago“ರಾಜ್ಯದ ಸಾಲ ₹10 ಲಕ್ಷ ಕೋಟಿ ತಲುಪಲಿದೆ”: ಕಾಂಗ್ರೆಸ್ ಸರ್ಕಾರದ ವಿರುದ್ಧ ಆರ್. ಅಶೋಕ್ ವಾಗ್ದಾಳಿ
