Connect with us

Mysore

ಶಾಸಕ ಕೆ. ಹರೀಶ್ ಗೌಡ ಹುಟ್ಟುಹಬ್ಬ: ಎಂಎಸ್ಆರ್ ಅಟೋಮೊಬೈಲ್ ಪ್ರೈ.ಲಿ.ಕಂಪೆನಿ ಭಾಗಿ

Published

on

 ಮೈಸೂರು: ನಗರದ ಜೆಕೆ ಆವರಣದಲ್ಲಿ ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕ ಕೆ. ಹರೀಶ್ ಗೌಡ ರವರ ಹುಟ್ಟುಹಬ್ಬದ ಅಂಗವಾಗಿ ನಡೆದ ಉದ್ಯೋಗ ಮೇಳದಲ್ಲಿ ನೂತನವಾಗಿ ಪ್ರಾರಂಭ ವಾಗಿರುವ ಎಂಎಸ್ಆರ್ ಅಟೋಮೊಬೈಲ್ ಪ್ರೈವೇಟ್ ಲಿಮಿಟೆಡ್. ಕಡಕೋಳ ಕಂಪನಿಯು ಕೂಡ ಭಾಗವಹಿಸಿತ್ತು.

ಈ ಸಂದರ್ಭದಲ್ಲಿ ವ್ಯವಸ್ಥಾಪಕ ನಿರ್ದೇಶಕ ಮುಕ್ಕಡಹಳ್ಳಿ ರಾಜಶೇಖರ್, ವ್ಯವಸ್ಥಾಪಕ ಮಲ್ಲೇಶ್, ಕಾರ್ಯನಿರ್ವಾಹಕ ಸಂತೋಷ್, ಮಾನವ ಸಂಪನ್ಮೂಲ ವ್ಯಕ್ತಿಗಳಾದ ನಿಸರ್ಗ ,  ಉಷಾ, ನಿರ್ವಹಣಾ ಸಮಿತಿ ಸದಸ್ಯರಾದ ಯೋಗೇಶ್,  ಬಸವರಾಜು ಹಾಗೂ ವಿಕಾಸ್ ಉಪಸ್ಥಿತರಿದ್ದರು ಎಂದು ಅಂಬಳೆ ರಂಗರಾಜು ಅವರು ತಿಳಿಸಿದ್ದಾರೆ.

Continue Reading

Mysore

ಮೈಸೂರಿನಲ್ಲಿ ಅವಧಿ ಮೀರಿದ 24 ಲಕ್ಷ ರೂ. ಮೌಲ್ಯದ ಮದ್ಯ ನಾಶ

Published

on

ಮೈಸೂರು: ನಗರದ ಕೂರ್ಗಳ್ಳಿಯಲ್ಲಿರುವ ಕೆಎಸ್‌ಬಿಸಿಎಲ್ (KSBCL) ಡಿಪೋ-1 ಮತ್ತು ಡಿಪೋ-2ರ ಮದ್ಯದ ಮಳಿಗೆಯಲ್ಲಿದ್ದ ಅವಧಿ ಮೀರಿದ ಮದ್ಯವನ್ನು ಅಬಕಾರಿ ಇಲಾಖೆ ನಾಶಪಡಿಸಿದೆ.

ದಾಸ್ತಾನಿನಲ್ಲಿದ್ದ 8,870 ಲೀಟರ್ ಬಿಯರ್ ಹಾಗೂ 1,216 ಲೀಟರ್ ವೈನ್ ಸೇರಿದಂತೆ ಒಟ್ಟು ಸುಮಾರು 24 ಲಕ್ಷ ರೂಪಾಯಿ ಮೌಲ್ಯದ ಮದ್ಯವನ್ನು ನಿಯಮಾನುಸಾರ ವಿಲೇವಾರಿ ಮಾಡಲಾಯಿತು.

ಅಬಕಾರಿ ಇಲಾಖೆಯ ಉಪ ಆಯುಕ್ತ ವಿವೇಕ್ ಅವರ ಆದೇಶದ ಮೇರೆಗೆ ಈ ಕಾರ್ಯಾಚರಣೆ ನಡೆಸಲಾಯಿತು. ಅಬಕಾರಿ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಸಮ್ಮುಖದಲ್ಲಿ ಅವಧಿ ಮೀರಿದ ಮದ್ಯವನ್ನು ನಾಶಪಡಿಸಲಾಯಿತು.

ಅವಧಿ ಮೀರಿದ ಮದ್ಯ ಸಾರ್ವಜನಿಕರಿಗೆ ವಿತರಣೆ ಆಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಇಲಾಖೆಯು ಈ ಕ್ರಮ ಕೈಗೊಂಡಿದೆ.

Continue Reading

Mysore

ಕೋರ್ಟ್‌ಗೆ ಬಾಂಬ್ ಬೆದರಿಕೆ ಇ-ಮೇಲ್: ಸ್ಥಳಕ್ಕೆ ಧಾವಿಸಿದ ಪೊಲೀಸರು, ಬಾಂಬ್ ನಿಷ್ಕ್ರಿಯ ದಳ!

Published

on

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸರಣಿ ಬಾಂಬ್ ಬೆದರಿಕೆ ಇ-ಮೇಲ್‌ಗಳು ಸಾರ್ವಜನಿಕರಲ್ಲಿ ಆತಂಕ ಮೂಡಿಸುತ್ತಿದ್ದು, ಇದೀಗ ನಗರದ ನ್ಯಾಯಾಲಯಕ್ಕೂ ಬಾಂಬ್ ಇಟ್ಟಿರುವುದಾಗಿ ಕಿಡಿಗೇಡಿಗಳು ಇ-ಮೇಲ್ ಕಳುಹಿಸಿದ್ದಾರೆ.
ಮೈಸೂರಿನ ಜಯನಗರದಲ್ಲಿರುವ ಹೊಸ ನ್ಯಾಯಾಲಯದ (New Court) ಆವರಣಕ್ಕೆ ಬಾಂಬ್ ಇಡಲಾಗಿದೆ ಎಂದು ಇ-ಮೇಲ್ ಬಂದ ಹಿನ್ನೆಲೆಯಲ್ಲಿ ಕೋರ್ಟ್ ಆವರಣದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.


ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು
ವಿಷಯ ತಿಳಿಯುತ್ತಿದ್ದಂತೆ ಎಚ್ಚೆತ್ತ ಮೈಸೂರು ನಗರ ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳದ (Bomb Disposal Squad) ಅಧಿಕಾರಿಗಳು ಮತ್ತು ಶ್ವಾನ ದಳದ ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ನ್ಯಾಯಾಲಯದ ಮುಂಜಾಗ್ರತಾ ಕ್ರಮವಾಗಿ ಇಡೀ ಆವರಣವನ್ನು ಪರಿಶೀಲನೆಗೆ ಒಳಪಡಿಸಲಾಗಿದೆ. ಅಂಗುಲ ಅಂಗುಲವನ್ನೂ ತಪಾಸಣೆ ನಡೆಸುತ್ತಿರುವ ಅಧಿಕಾರಿಗಳು, ಸದ್ಯಕ್ಕೆ ಇದು ಹುಸಿ ಬಾಂಬ್ ಬೆದರಿಕೆ ಇ-ಮೇಲ್ ಇರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

ಸರಣಿ ಹುಸಿ ಬಾಂಬ್ ಮೇಲ್ ಕಾಟ!
ಮೈಸೂರಿನಲ್ಲಿ ಕಳೆದ ಕೆಲವು ದಿನಗಳಿಂದ ಇಂತಹ ಹುಸಿ ಬಾಂಬ್ ಇ-ಮೇಲ್‌ಗಳ ಕಾಟ ಹೆಚ್ಚಾಗುತ್ತಿದೆ. ಕಳೆದ ವಾರವಷ್ಟೇ ಮೈಸೂರಿನ ಎರಡು ಪ್ರಮುಖ ಖಾಸಗಿ ಹೋಟೆಲ್‌ಗಳಿಗೆ ಬಾಂಬ್ ಇಟ್ಟಿರುವುದಾಗಿ ಕಿಡಿಗೇಡಿಗಳು ಇ-ಮೇಲ್ ಕಳುಹಿಸಿದ್ದರು. ಆ ಸಂದರ್ಭದಲ್ಲೂ ಪೊಲೀಸರು ಇಡೀ ಹೋಟೆಲ್ ಆವರಣವನ್ನು ತಪಾಸಣೆ ನಡೆಸಿದಾಗ, ಅದು ಕೇವಲ ಹುಸಿ ಬಾಂಬ್ ಕರೆ (Hoax Call) ಎಂದು ದೃಢಪಟ್ಟಿತ್ತು.


ಇದೀಗ ನ್ಯಾಯಾಲಯವನ್ನೂ ಗುರಿಯಾಗಿಸಿಕೊಂಡು ಇ-ಮೇಲ್ ಕಳುಹಿಸಿರುವ ಹಿಂದೆ ಯಾರಿದ್ದಾರೆ? ಸಾರ್ವಜನಿಕರಲ್ಲಿ ವಿನಾಕಾರಣ ಭೀತಿ ಹುಟ್ಟಿಸುತ್ತಿರುವ ಕಿಡಿಗೇಡಿಗಳು ಯಾರು? ಎಂಬುದರ ಕುರಿತು ಸೈಬರ್ ಕ್ರೈಂ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸಾರ್ವಜನಿಕರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Continue Reading

Mysore

ಪಕ್ಷದ ಅಡ್ಡ ಮತದಾನದ ಗೊಂದಲಗಳು ಮುಗಿದಿವೆ, ಮತ್ತೆ ಚರ್ಚೆ ಬೇಡ – ಬಿ.ವೈ. ವಿಜಯೇಂದ್ರ:

Published

on

ಮೈಸೂರು:  ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿ, ಪಕ್ಷದಲ್ಲಿನ ಅಡ್ಡ ಮತದಾನದ ಗೊಂದಲಗಳು ಈಗ ಮುಗಿದಿದ್ದು, ಎಲ್ಲಾ ವಿಚಾರಗಳನ್ನು ಪಕ್ಷದ ಹೈಕಮಾಂಡ್‌ಗೆ ತಿಳಿಸಲಾಗಿದೆ ಎಂದು ಹೇಳಿದರು.

“ಈ ವಿಷಯದ ಬಗ್ಗೆ ಮತ್ತೆ ಚರ್ಚೆ ಮಾಡುವ ಅಗತ್ಯವಿಲ್ಲ. ಒಂದು ಪಕ್ಷದಲ್ಲಿ ಸಣ್ಣಪುಟ್ಟ ಗೊಂದಲಗಳು ಸಹಜ. ಅವೆಲ್ಲವನ್ನೂ ನಿಭಾಯಿಸಿಕೊಂಡು ಪಕ್ಷವನ್ನು ಇನ್ನಷ್ಟು ಬಲಪಡಿಸುವ ಕೆಲಸ ಮಾಡುತ್ತಿದ್ದೇನೆ. ಶಾಸಕ ಎಚ್. ವಿಶ್ವನಾಥ್ ಅವರೊಂದಿಗೂ ಮಾತನಾಡಿದ್ದೇನೆ” ಎಂದು ತಿಳಿಸಿದರು.

ಡಿವಿ ಸದಾನಂದ ಗೌಡ ಅವರ ಹೆಸರಿನಲ್ಲಿ ಹರಿದಾಡುತ್ತಿರುವ ಆಡಿಯೋ ಕುರಿತು ಪ್ರತಿಕ್ರಿಯಿಸಿದ ಅವರು, “ಆ ಧ್ವನಿ ನನ್ನದಲ್ಲ ಎಂದು ಸದಾನಂದ ಗೌಡರೇ ಸ್ಪಷ್ಟನೆ ನೀಡಿದ್ದಾರೆ. ಅವರದ್ದೇ ಅಲ್ಲ ಎಂದ ಮೇಲೆ ಮತ್ತೆ ಅದರ ಬಗ್ಗೆ ಚರ್ಚೆ ಯಾಕೆ?” ಎಂದು ಪ್ರಶ್ನಿಸಿದರು.

ಬಿಡದಿ ಟೌನ್‌ಶಿಪ್ ಯೋಜನೆ ಕುರಿತು ಮಾತನಾಡಿದ ವಿಜಯೇಂದ್ರ, “ರಾಜ್ಯ ಸರ್ಕಾರ ತಾನು ಮಾಡಿದ್ದೆಲ್ಲ ಸರಿ ಎನ್ನುವ ಧೋರಣೆಯಲ್ಲಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಟೌನ್‌ಶಿಪ್‌ಗೆ ಶೇ.79ರಷ್ಟು ರೈತರು ವಿರೋಧ ವ್ಯಕ್ತಪಡಿಸಿದ್ದರೂ, ಸರ್ಕಾರ ರೈತರ ವಿರೋಧವಿಲ್ಲ ಎಂದು ಸುಳ್ಳು ಹೇಳುತ್ತಿದೆ” ಎಂದು ಆರೋಪಿಸಿದರು.

“ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಆಗುವ ದಿನದಿಂದಲೇ ಟೌನ್‌ಶಿಪ್ ಯೋಜನೆ ಬಗ್ಗೆ ಅತಿಯಾದ ಆತುರ ತೋರಿಸುತ್ತಿದ್ದಾರೆ. ಬಿಜೆಪಿ ರೈತರ ಪರವಾಗಿ ನಿಂತಿದ್ದು, ಮುಂಬರುವ ವಿಧಾನಮಂಡಲ ಅಧಿವೇಶನದಲ್ಲಿ ಈ ವಿಷಯದ ಬಗ್ಗೆ ವಿಸ್ತೃತ ಚರ್ಚೆ ನಡೆಸಲಿದೆ” ಎಂದು ವಿಜಯೇಂದ್ರ ಹೇಳಿದರು.

Continue Reading

Trending

error: Content is protected !!