Connect with us

Hassan

ಆರೋಗ್ಯ ದೃಷ್ಠಿಯಿಂದ ಇಂತಹ ಕ್ರೀಡೆ ಹೆಚ್ಚೆಚ್ಚು ಹಮ್ಮಿಕೊಳ್ಳಲಿ: ಶಾಸಕ ಹೆಚ್.ಪಿ. ಸ್ವರೂಪ್ ಸಲಹೆ

Published

on

ಹಾಸನ: ನಿರಂತರವಾಗಿ ಸದಕಾಲ ಸುದ್ದಿಯಲ್ಲೆ ತೊಡಗುವ ಪತ್ರಕರ್ತರು ವರ್ಷಕ್ಕೆ ಒಮ್ಮೆಯಾದರೂ ಇಂತಹ ಕ್ರೀಡೆಯಲ್ಲಿ ಪಾಲ್ಗೊಳ್ಳುತ್ತಿದ್ದು, ಆರೋಗ್ಯ ದೃಷ್ಠಿಯಿಂದ ಇಂತಹ ಕ್ರೀಡೆಯನ್ನು ಹೆಚ್ಚೆಚ್ಚು ಹಮ್ಮಿಕೊಳ್ಳಬೇಕೆಂದು ಕ್ಷೇತ್ರದ ಶಾಸಕ ಹೆಚ್.ಪಿ. ಸ್ವರೂಪ್ ತಿಳಿಸಿದರು.

ನಗರದ ಸಾಲಗಾಮೆ ರಸ್ತೆ ಬಳಿ ಇರುವ ಸರಕಾರಿ ಕಲಾ ಕಾಲೇಜು ಮೈದಾನದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಕೂಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಶನಿವಾರದಂದು ಹಮ್ಮಿಕೊಳ್ಳಲಾಗಿದ್ದ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೈಹಿಕ ಮತ್ತು ಮಾನಸಿಕ ಸ್ಥೈರ್ಯಕ್ಕೆ ಕ್ರೀಡೆ ಎಂಬುದು ಸ್ಪೂರ್ತಿ ನೀಡಲಿದೆ. ಜಿಲ್ಲೆಯ ಎಲ್ಲಾ ಪತ್ರಕರ್ತರು ಕ್ರೀಡಾಕೂಟದಲ್ಲಿ ಭಾಗವಹಿಸಿ ಕ್ರೀಡಾ ಸ್ಪೂರ್ತಿ ತೋರುತ್ತಿರುವುದು ಆರೋಗ್ಯ ದೃಷ್ಠಿಯಿಂದ ಒಳ್ಳೆಯದು .ಪ್ರತಿ ವರ್ಷ ಕ್ರೀಡಾಕೋಟ ಆಯೋಜನೆ ಮಾಡುತ್ತಿರುವ ಸಂಘದ ಕಾರ್ಯ ಶ್ಲಾಘನೀಯ ಕ್ರೀಡಾಕೂಟ ಯಶಸ್ವಿಯಾಗಲಿ ಎಂದು ಹಾರೈಸಿದರು.

ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಮ್ಮಯ್ಯ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಕ್ರೀಡೆ ಎಂಬುದು ಹೆಚ್ಚೆಚ್ಚು ನಡೆಸಬೇಕು. ಇತ್ತೀಚಿನ ದಿನಗಳಲ್ಲಿ ದೈಹಿಕ ಶ್ರಮ ಇಲ್ಲವಾಗಿದೆ. ಪೋಷಕರು ಮಕ್ಕಳಿಗೆ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸಬೇಕು ಎಂದು ಕಿವಿಮಾತು ಹೇಳಿದರು. ನಮ್ಮ ಪೂರ್ವಜರು ಆಹಾರ ಪದ್ಧತಿಯಿಂದ ಹಿಡಿದು ದೈಹಿಕ ಶ್ರಮಕ್ಕೆ ಹೆಚ್ಚು ಮಹತ್ವ ನೀಡುತ್ತಿದ್ದರು ಆದರೆ ಇತ್ತೀಚಿನ ದಿನಗಳಲ್ಲಿ ಮನೊರಂಜನೆ ಕ್ರೀಡೆಗಳನ್ನು ದೃಶ್ಯ ಮಾಧ್ಯಮಗಳಿಂದಲೇ ನೋಡುತ್ತಾ ಕಾಲ ಕಳೆಯುವ ಹವ್ಯಾಸದಿಂದ ಹೆಚ್ಚಿನ ಮಂದಿ ಕ್ರೀಡೆಯಲ್ಲಿ ಭಾಗವಹಿ ಸುವುದು ಕಡಿಮೆಯಾಗಿದೆ ಎಂದರು .

ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ರಾಜ್ಯ ಸಮಿತಿ ಸದಸ್ಯರಾದ ಎಚ್.ಬಿ. ಮದನ ಗೌಡರು ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಜಿಲ್ಲಾ ಪತ್ರಕರ್ತರ ಸಂಘದಿಂದ ಕ್ರೀಡಾಕೂಟ ಯೋಜನೆ ಮಾಡಲಾಗಿದ್ದು, ಜಿಲ್ಲಾ ಸಂಘವು ಇತ್ತೀಚೆಗೆ ಆಯೋಜಿಸಿದ್ದ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾವಳಿ ಯಶಸ್ವಿಯಾಯಿತು ಮತ್ತು ಜಿಲ್ಲಾ ತಂಡವೇ ಪ್ರಥಮ ಬಹುಮಾನ ಗೆಲ್ಲುವ ಮೂಲಕ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದೆ ಎಂದು ಹೇಳಿದರು.

ಹಿರಿಯ ಪತ್ರಕರ್ತ ಆರ್.ಪಿ. ವೆಂಕಟೇಶಮೂರ್ತಿ ಅವರು ಮಾತನಾಡಿ, ಜಿಲ್ಲಾ ಸಂಘವು ಕ್ರೀಡೆ ಸೇರಿದಂತೆ ಸಂಘಟನೆಯಲ್ಲಿಯೂ ಮುಂದೆ ಇದ್ದಾರೆ. ಪತ್ರಕರ್ತರಿಗೆ ವೃತ್ತಿ ಜೊತೆಗೆ ದೈಹಿಕ ಆರೋಗ್ಯದ ಬಗ್ಗೆಯೂ ಕಾಳಜಿ ಅವಶ್ಯವಾಗಿದೆ. ಇಂತಹ ಕ್ರೀಡಾಕೂಟ ಯಶಸ್ವಿಯಾಗಲಿ ಎಂದು ಶುಭಕೋರಿದರು.

ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಚ್. ವೇಣುಕುಮಾರ್ ಅವರು ಮಾತನಾಡಿ, ಇತ್ತೀಚಿಗೆ ಕೆಸರು ಗದ್ದೆಯಲ್ಲಿ ವಿವಿಧ ಕ್ರೀಡಾಕೂಟ, ಬ್ಯಾಡ್ಮೆಂಟನ್ ಕ್ರೀಡಾಕೂಟ ಮಾಡಲಾಗಿತು. ಸಂಘದ ಸದಸ್ಯರ ಒತ್ತಾಯದ ಮೇರೆಗೆ ಇಂದು ಕ್ರಿಕೆಟ್ ಪಂದ್ಯಾವಳಿ ಸೇರಿದಂತೆ ಇತರೆ ಕ್ರೀಡೆಯನ್ನು ಆಯೋಜಿಸಲಾಗಿದೆ. ಎಲ್ಲರೂ ಸಕ್ರಿಯವಾಗಿ ಭಾಗವಹಿಸುವಂತೆ ತಿಳಿಸಿದ ಅವರು ಕ್ರೀಡಾಕೂಟಗಳು ದೈಹಿಕ ಮಾನಸಿಕ ಆರೋಗ್ಯದ ಜೊತೆಗೆ ಸಂಘದ ಸಂಘಟನೆಗೂ ಪ್ರಮುಖ ಪಾತ್ರವಹಿಸಲಿದೆ. ಕ್ರಿಯಾಶೀಲವಾಗಿ ಭಾಗವಹಿಸುವಂತೆ ಕೋರಿದರು.

ಜಿಲ್ಲಾ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರಾದ ಕೆ.ಆರ್. ಮಂಜುನಾಥ್, ಲೀಲಾವತಿ, ರವಿ ನಾಗಲಗೂಡು ಮಾತನಾಡಿ, ಪತ್ರಕರ್ತರ ಕ್ರೀಡಾಕೂಟ ಪ್ರತಿ ವರ್ಷ ಏರ್ಪಡಿಸುತ್ತಾ ಬರಲಾಗಿದ್ದು, ಈ ವರ್ಷವೂ ಕೂಡ ಅತ್ಯುತ್ತಮವಾಗಿ ಏರ್ಪಡಿಸಲಾಗಿದೆ. ಕ್ರೀಡಾಕೂಡ ಯಶಸ್ವಿಯಾಗಲಿ ಎಂದು ಶುಭ ಕೋರಿದರು.

ಶನಿವಾರ ಬೆಳಗಿನಿಂದಲೂ ವಿವಿಧ ಕ್ರೀಡೆಯೂ ಯಶಸ್ವಿಯಾಗೆ ನಡೆದರೂ ಕ್ರಿಕೆಟ್ ಪಂದ್ಯಾವಳಿ ವೇಳೆ ಮಳೆ ಸುರಿದಿದ್ದರಿಂದ ಸಲ್ಪ ಅಡ್ಡಿ ಉಂಟಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಸಿ. ಶಶಿಧರ್, ಖಜಾಂಚಿ ಕುಮಾರ್, ಕಾರ್ಯದರ್ಶಿ ನಟರಾಜ್, ಪಿ.ಎ. ಶ್ರೀನಿವಾಸ್, ಸಿ.ಬಿ. ಸಂತೋಷ್. ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ತಾಲ್ಲೂಕು ಸಂಘದ ಪದಾಧಿಕಾರಿಗಳು ಹಿರಿಯ, ಕಿರಿಯ ಸದಸ್ಯರು ಹಾಜರಿದ್ದರು. ಜಿಲ್ಲಾ ಪತ್ರಕರ್ತರ ಸಂಘದ ಉಪಾಧ್ಯಕ್ಷ ಕೆ.ಎಮ್. ಹರೀಶ್ ಸ್ವಾಗತಿಸಿದರು.

 

 

Continue Reading

Hassan

ಸಕಲೇಶಪುರ: ಜೆಜೆಎಂ ಕಾಮಗಾರಿಗಳನ್ನು ಪರಿಶೀಲಿಸಿದ ಸಿಇಒ

Published

on

ಸಕಲೇಶಪುರ:  ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಗಾಯಿತ್ರಿ ಅವರು,  ಸಕಲೇಶಪುರ ತಾಲೂಕು ಕುನಿಗನಹಳ್ಳಿ ಪಂಚಾಯಿತಿ ವ್ಯಾಪ್ತಿಯ ಗಾಳಿಗುಡ್ಡ, ಹೊಸಗದ್ದೆ, ಹೊಸಕೆರೆ, ಮಡ್ಡಿನಕೆರೆ, ಕುನಿಗನಹಳ್ಳಿ ಗ್ರಾಮಗಳು ಹಾಗೂ ಬಿರಡಹಳ್ಳಿ ಪಂಚಾಯಿತಿಯ ವ್ಯಾಪ್ತಿಯ ದೊಡ್ಡನಾಗರ ಗ್ರಾಮಗಳಿಗೆ ಭೇಟಿ ನೀಡಿ ಜೆಜೆಎಂ ಕಾಮಗಾರಿಗಳನ್ನು ಪರಿಶೀಲಿಸಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.

ಈ ವೇಳೆ ಕಾರ್ಯಪಾಲಕ ಅಭಿಯಂತರರು, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ಕಾರ್ಯ ಪಾಲಕ ಅಭಿಯಂತರರು, ಸಹಾಯಕ ನಿರ್ದೇಶಕರು(ಗ್ರಾ. ಉ),ಸಹಾಯಕ ಇಂಜಿನಿಯರ್, ಕಿರಿಯ ಇಂಜಿನಿಯರ್ ಹಾಗೂ ಸಂಬಂಧಿಸಿದ ಗ್ರಾಮ ಪಂಚಾಯಿತಿಗಳ ಪಿಡಿಒಗಳು, ಚುನಾಯಿತ ಪ್ರತಿನಿಧಿಗಳು ಮತ್ತು ಸಿಬ್ಬಂದಿಗಳು ಹಾಜರಿದ್ದರು.

Continue Reading

Hassan

ಚಿನ್ನ ಖರೀದಿಗೆ ಬಂದು ಮಗು ಹೊತ್ತೊಯ್ದ ಚಾಲಾಕಿ ಲೇಡಿ

Published

on

ಹಾಸನ: ನಗರದ ಗಾಂಧಿ ಬಜಾರ್ ನಲ್ಲಿ ಚಿನ್ನ ಖರೀದಿ ಮಾಡಲೆಂದು ಅಂಗಡಿಗೆ ಬಂದ ಚಾಲಾಕಿ ಲೇಡಿಯೊಬ್ಬಳು ಎರಡೂವರೆ ವರ್ಷದ ಹೆಣ್ಣು ಮಗುವನ್ನು ಕರೆದುಕೊಂಡು ಹೋಗಿದ್ದಾಳೆ.

ಅಪರಿಚಿತ ಮಹಿಳೆ, ಕೆಂಪು ಚೂಡಿದಾರ್, ಹಳದಿ ವೇಲ್ ಧರಿಸಿದ್ದು, ಉಷಾ ಎಂಬುವವರ ಸುಪ್ರಿಯಾ ಎಂಬ ಹೆಣ್ಣು ಮಗಳನ್ನ ಯಾರಿಗೂ ತಿಳಿಯದಂತೆ ಕರೆದುಕೊಂಡು ಹೋಗಿದ್ದಾಳೆ.

ಈ ದೃಶ್ಯ ಗಾಂಧಿ ಬಜಾರ್ ನಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಹೆಂಗಸಿನ ಬಗ್ಗೆ ಹಾಗೂ ಮಗು ಬಗ್ಗೆ ಮಾಹಿತಿ ಸಿಕ್ಕಲ್ಲಿ ಹಾಸನ ನಗರ ಠಾಣೆ 08172-268333, 9480804745 ಅಥವಾ ತುರ್ತು ಸೇವೆ 112 ಗೆ ಕರೆ ಮಾಡಿ ತಿಳಿಸಲು ಕೋರಲಾಗಿದೆ.

Continue Reading

Hassan

HIMS ಆವರಣದಲ್ಲಿ ಕ್ರಿಟಿಕಲ್ ಕೇರ್ ಸೆಂಟರ್ ಗೆ ಶಾಸಕ ಸ್ವರೂಪ್ ಭೂಮಿ ಪೂಜೆ

Published

on

ಹಾಸನ: ನಗರದ ಹಾಸನ ವೈದ್ಯಕೀಯ ಮಹಾವಿದ್ಯಾಲಯದ ಆವರಣದಲ್ಲಿ ಕೇಂದ್ರ ಸರ್ಕಾರದ ಅನುದಾನದ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಕ್ರಿಟಿಕಲ್ ಕೇರ್ ಸೆಂಟರ್ ಕಾಮಗಾರಿಗೆ ಶಾಸಕ ಸ್ವರೂಪ ಪ್ರಕಾಶ್ ಗುದ್ದಲಿ ಪೂಜೆ ನೆರವೇರಿಸಿದರು.

ಸುಮಾರು 13 ಕೋಟಿ ರೂ. ವೆಚ್ಚದಲ್ಲಿ ನಡೆಯುತ್ತಿರುವ ಕಾಮಗಾರಿಗೆ ಅಧಿಕಾರಿಗಳ ಸಮ್ಮುಖದಲ್ಲಿ ಅವರು ಭೂಮಿ ಪೂಜೆ ನೆರವೇರಿಸಿ ಬಳಿಕ ಸುಮಾರು 6 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ವೈದ್ಯಕೀಯ ವಿದ್ಯಾರ್ಥಿಗಳ ವಸತಿ ನಿಲಯದ ಹೆಚ್ಚುವರಿ ಕಟ್ಟಡಕ್ಕೂ ಅವರು ಭೂಮಿ ಪೂಜೆ ನೆರವೇರಿಸಿದರು.

ಬಳಿಕ ಮಾತನಾಡಿದ ಅವರು, ಹಾಸನ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನಗಳು ಹಾಗೂ ಶಾಸಕರ ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಅದರಂತೆ ಇಂದು ಹಾಲುವಾಗಿಲು ಗ್ರಾಮದಲ್ಲಿ ಅಂಗನವಾಡಿ, ರಸ್ತೆ ಸೇರಿದಂತೆ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದರು.

ಹಾಸನ ವೈದ್ಯಕೀಯ ಮಹಾವಿದ್ಯಾಲಯದ ಆವರಣದಲ್ಲಿಯೂ ಕ್ರಿಟಿಕಲ್ ಕೇರ್ ಸೆಂಟರ್ ಸ್ಥಾಪನೆಗೆ ಕೇಂದ್ರ ಸರ್ಕಾರದಿಂದ ಸಾಕಷ್ಟು ಅನುದಾನ ಬಂದಿದ್ದು ಅದರ ಕಾಮಗಾರಿಯು ನಡೆಯುತ್ತಿದೆ. ಕಾಮಗಾರಿಗಳಲ್ಲಿ ಗುಣಮಟ್ಟ ಕಾಯ್ದುಕೊಂಡು ಒಳ್ಳೆಯ ಕೆಲಸ ಮಾಡುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

Continue Reading

Trending

error: Content is protected !!