Connect with us

Mysore

5 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಾಸಕ ದರ್ಶನ್ ಧ್ರುವ ನಾರಾಯಣ್ ಚಾಲನೆ: ರಸ್ತೆ ಡಾಂಬರೀಕರಣ_ಬಾಗೂರು ಅಣೆಕಟ್ಟು ಅಭಿವೃದ್ಧಿಗೆ ಗುದ್ದಲಿ ಪೂಜೆ

Published

on

ವರದಿ:  ಮಹದೇವಸ್ವಾಮಿ ಪಟೇಲ್

ನಂಜನಗೂಡು: ತಾಲೂಕಿನಲ್ಲಿ ಅಂದಾಜು 5 ಕೋಟಿ ರೂಪಾಯಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಯುವ ಶಾಸಕ ದರ್ಶನ್ ಧ್ರುವನಾರಾಯಣ್ ಭರ್ಜರಿ ಚಾಲನೆ ನೀಡಿದರು.

ನರಸೀಪುರ ರಸ್ತೆ ಬಸವೇಶ್ವರನಗರದಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ನಂಜನಗೂಡು ತಾಲೂಕು ಶಿರಾ ನಂಜನಗೂಡು ರಾಜ್ಯ ಹೆದ್ದಾರಿ 84ರ ಡಾಂಬರೀಕರಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ಅವರು, ನಂತರ 3 ಕೋಟಿ ರೂ. ವೆಚ್ಚದಲ್ಲಿ ಬಾಗುರು ಅಣೆಕಟ್ಟಿನ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆಯನ್ನು ನೆರವೇರಿಸಿ ಕಾಮಗಾರಿಗಳಿಗೆ ಚಾಲನೆ ನೀಡಿದರು.

ಈ ವೇಳೆ ಕಾಮಗಾರಿಗಳಿಗೆ ಚಾಲನೆ ಕೊಟ್ಟು ವೇದಿಕೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಶಾಸಕ ದರ್ಶನ್ ಧ್ರುವನಾರಾಯಣ್, ಬಾಗುರು ಅಣೆಕಟ್ಟು ತೀರ ಹಳೆಯದಾದ ಅಣೆಕಟ್ಟಾಗಿತ್ತು. ಇದರ ದುರಸ್ತಿ ಕಾರ್ಯ ಮಾಡಲು ಹಲವು ದಿನಗಳಿಂದ ಚಿಂತನೆ ಮಾಡಲಾಗಿತ್ತು. ಈ ಅಣೆಕಟ್ಟು 1965 ರಲ್ಲಿ ಸ್ಥಾಪನೆಯಾಗಿದ್ದು, ರೈತರ ಅನುಕೂಲಕ್ಕೆ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ನಿಜಲಿಂಗಪ್ಪ ಉದ್ಘಾಟಿಸಿದ್ದರು.

ಅಣೆಕಟ್ಟಿನ ಅಭಿವೃದ್ಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಬೋಸರಾಜ್ ಅವರು ಅನುದಾನವನ್ನು ಬಿಡುಗಡೆ ಮಾಡಿದ್ದು, ಆ ಹಣದಲ್ಲಿ ಇವತ್ತು ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ್ದೇವೆ. ಅನುದಾನ ಕೊಟ್ಟ ಮುಖ್ಯಮಂತ್ರಿಗಳು ಹಾಗೂ ಸಚಿವರಿಗೆ ಈ ಸಂದರ್ಭ ಹೃತ್ಪೂರ್ವಕ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

ಬಾಗೂರು ಅಣೆಕಟ್ಟಿನಿಂದ ಸುತ್ತಮುತ್ತಲ ಗ್ರಾಮಗಳ ರೈತರು ಮತ್ತು ಪ್ರಾಣಿ ಪಕ್ಷಿಗಳಿಗೆ ಸಾಕಷ್ಟು ಅನುಕೂಲವಾಗುತ್ತೆ. ಇದರ ಅಭಿವೃದ್ಧಿ ಕಾಮಗಾರಿಗೆ ಹಲವು ವರ್ಷಗಳಿಂದ ರೈತರು ಮತ್ತು ಗ್ರಾಮಸ್ಥರು ಬೇಡಿಕೆಯನ್ನ ಇಟ್ಟಿದ್ದರು. ತಾಂತ್ರಿಕ ಕಾರಣಗಳಿಂದ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಮಾಡಲು ಸಾಧ್ಯವಾಗಿರಲಿಲ್ಲ. ಆದರೆ ಇವತ್ತು ಅಭಿವೃದ್ಧಿ ಕಾಮಗಾರಿಗೆ ಕಾಲ ಕೂಡಿ ಬಂದು ಕಾಮಗಾರಿಗೆ ಚಾಲನೆ ನೀಡಿದ್ದೇವೆ.

ಇದೇ ದಿನ ಎರಡು ಕೋಟಿ ರೂಪಾಯಿ ವೆಚ್ಚದ ನಂಜನಗೂಡು ತಾಲೂಕು ಶಿರಾ ನಂಜನಗೂಡು ರಾಜ್ಯ ಹೆದ್ದಾರಿ ಮರು ಡಾಂಬರೀಕರಣದ ಕಾಮಗಾರಿಗು ಚಾಲನೆ ನೀಡಿದ್ದೇನೆ. ಇದರಿಂದ ಸವಾರರು ಮತ್ತು ಸಾರ್ವಜನಿಕರಿಗೆ ಕಿರಿಕಿರಿಯಾಗಿದ್ದ ರಸ್ತೆ ಶೀಘ್ರದಲ್ಲೇ ಡಾಂಬರೀಕರಣಗೊಳ್ಳಲಿದೆ. ಕಾಮಗಾರಿಗಳನ್ನು ಗುಣಮಟ್ಟದಿಂದ ತ್ವರಿತಗತಿಯಲ್ಲಿ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಸೂಚಿಸಿರುವುದಾಗಿ ತಿಳಿಸಿದರು.

ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಮಾತನಾಡಿ 24- 25 ನೇ ಸಾಲಿನ ಶಾಸಕರು15 ಕೋಟಿ ಅನುದಾನ ತಂದು, 10 ಕೋಟಿ ವೆಚ್ಚದಲ್ಲಿ ಹಳ್ಳಿಕೇರಿ ಯಿಂದ ಉಪ್ಪನಹಳ್ಳಿ ಮಾರ್ಗ ವರೆಗೆ ಕೆಲಸ ಪ್ರಾರಂಭವಾಗಿ ಈಗಾಗಲೇ ಕೆಲಸ ಪೂರ್ಣಗೊಳಿಸುವ ಅಂತಕ್ಕೆ ಬಂದಿದೆ. ಅದೇ ರೀತಿ ನಂಜನಗೂಡು ಟು ಹುಲ್ಲಹಳ್ಳಿ ಬೆಳಲೆ ಹೊರಗೆ ಕೆಲಸ ಮಾಡಲಾಗುತ್ತಿದೆ. ಇಂದು ನಂಜನಗೂಡು ತಾಲೂಕು ಶಿರಾ ನಂಜನಗೂಡು ರಾಜ್ಯ ಹೆದ್ದಾರಿ ಮರು ಡಾಂಬರೀಕರಣದ ಕಾಮಗಾರಿಗೆ ಸರ್ಕಾರದಿಂದ ಅನುದಾನ ತಂದು ಚಾಲನೆ ನೀಡಿದ್ದಾರೆ ಎಂದರು

ಇದೇ ಸಂದರ್ಭ ಪಟ್ಟಣದ ಮಾದೇವ ನಗರ ಗ್ರಾಮದಲ್ಲಿ RWS ಇಲಾಖೆಯ ಕುಡಿಯುವ ನೀರಿನ ಘಟಕವನ್ನು ಶಾಸಕರು ಪರಿಶೀಲನೆಯನ್ನು ನಡೆಸಿದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಟಿಎಪಿಸಿಎಂಎಸ್ ಅಧ್ಯಕ್ಷ ಕುರಹಟ್ಟಿ ಮಹೇಶ್, ವೀರದೇಪುರ ಶ್ರೀನಿವಾಸ್ ಮೂರ್ತಿ, ಜೈ ಮಾಲ, ಚಂದನ್ ಗೌಡ, ಮಾಜಿ ನಗರಸಭೆ ಸದಸ್ಯ ಬಸವರಾಜು, ಶಿವಪ್ಪ ದೇವರು, ಇಂಜಿನಿಯರ್ ಗಳಾದ ರಮೇಶ್, ಬಸವರಾಜು, ಕೂಡ್ಲಾಪುರ ಗ್ರಾಮ ಪಚಾಯಿತಿ ಅಧ್ಯಕ್ಷ ಸುಧಾ ಶಿವರಾಜ್, ಮಾಜಿ ಅಧ್ಯಕ್ಷ ವಾಸುದೇವ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯರುಗಳಾದ ರಾಜು, ತಮ್ಮಯ್ಯ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Continue Reading

Mysore

ರೈತರಿಗೆ ಅನ್ಯಾಯ ಮಾಡಿದಲ್ಲಿ ತಾಯಿಗೆ ಮೋಸ ಮಾಡಿದಂತೆ: ಜಿ.ಡಿ.ಹರೀಶ್‌ಗೌಡ 

Published

on

ವರದಿ:  ಶಂಕರ್ ಕಟ್ಟೆಮಳಲವಾಡಿ

ಹುಣಸೂರು: ರಾಗಿ ಖರೀದಿ ಕೇಂದ್ರಗಳಲ್ಲಿ ರೈತರಿಗೆ ಮೋಸ ಮಾಡುವುದು, ಅನಾವಶ್ಯಕವಾಗಿ ಸತಾಯಿಸುವ ಬಗ್ಗೆ ದೂರುಗಳು ಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಜಿ.ಡಿ.ಹರೀಶ್‌ಗೌಡ ತಿಳಿಸಿದರು.

ನಗರದ ಎಪಿಎಂಸಿ ಆವರಣದಲ್ಲಿ ಮಂಗಳವಾರ ರಾಗಿ ಖರೀದಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.

ತಾಲೂಕಿನ ರತ್ನಪುರಿಯ ಎಪಿಎಂಸಿಯಲ್ಲಿ ಮತ್ತೊಂದು ಖರೀದಿ ಕೇಂದ್ರ ಆರಂಭಿಸಲಾಗಿದೆ. ರಾಗಿ ಖರೀದಿ ಕೇಂದ್ರದಲ್ಲಿ ಕಳೆದ ಬಾರಿ ದಲ್ಲಾಳಿಗಳ ಹಾವಳಿ ಜೊತೆಗೆ ಕ್ವಿಂಟಾಲ್‌ಗೆ 4ಕೆ.ಜಿ.ವೇಸ್ಟೇಜ್ ತೆಗೆಯುವ ಮತ್ತು ರೈತರಿಂದ ಹಣ ವಸೂಲಿ ಮಾಡುವ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ ಯಾವೊಬ್ಬ ರೈತರಿಗೂ ಅನ್ಯಾಯವಾಗದ ರೀತಿಯಲ್ಲಿ ನಿಯಮಾನುಸಾರ ಖರೀದಿ ಪ್ರಕ್ರಿಯೆ ನಡೆಸಬೇಕು.

ರೈತರಿಗೆ ಅನ್ಯಾಯ ಮಾಡಿದಲ್ಲಿ ತಾಯಿಗೆ ಮೋಸ ಮಾಡಿದಂತೆ. ಈ ಬಗ್ಗೆ ರೈತರಿಂದ ದೂರು ಬಂದಲ್ಲಿ ಕ್ರಮ ತೆಗೆದುಕೊಳ್ಳುವುದಾಗಿ ಅಧಿಕಾರಿಗಳನ್ನು ಎಚ್ಚರಿಸಿ, ರೈತರು ಸಹ ಗುಣಮಟ್ಟದ ರಾಗಿಯನ್ನು ತರುವಂತೆ ಸಲಹೆ ನೀಡಿದರು.


ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ ಜಿಲ್ಲಾ ವ್ಯವಸ್ಥಾಪಕ ಕಿರಣ್ ಮಾತನಾಡಿ, ಸರಕಾರ ಪ್ರತಿಕ್ವಿಂಟಾಲ್‌ಗೆ 4.886ರೂಗಳಂತೆ ನಿಗದಿಗೊಳಿಸಿದೆ. ಹುಣಸೂರು ಎಪಿಎಂಸಿಯಲ್ಲಿ 5021ಮಂದಿ ಹಾಗೂ ರತ್ನಪುರಿ ಕೇಂದ್ರದಲ್ಲಿ 251ಮಂದಿ ಸೇರಿದಂತೆ ಒಟ್ಟು 5272ಮಂದಿ ರೈತರು ನೊಂದಾಯಿಸಿಕೊಂಡಿದ್ದಾರೆ. ರೈತರಿಂದ 1,31ಲಕ್ಷ ಕ್ವಿಂಟಾಲ್ ರಾಗಿ ಖರೀದಿಸಲಾಗುವುದು ಎಂದರು.

ಈ ಕಾರ್ಯಕ್ರಮದಲ್ಲಿ ಆಹಾರ ಶಿರಸ್ತೆದಾರ್ ಲಕ್ಷ್ಮಿ, ನಿರೀಕ್ಷಕ ಕರೀಂಖಾನ್,ಎಪಿಎಂಸಿ ಮಾಜಿ ಅಧ್ಯಕ್ಷ ಕಿರಂಗೂರುಬಸವರಾಜು, ಟಿಎಪಿಸಿಎಂಎಸ್‌ನ ಗೋವಿಂದೇಗೌಡ, ಖರೀದಿ ಅಧಿಕಾರಿ ಮೈಕೇಲ್‌ಫರ್ನಾಡಿಸ್, ಎಪಿಎಂಸಿ ಕಾರ್ಯದರ್ಶಿ ನಾಗೇಶ್, ರೈತಸಂಘದ ಮುಖಂಡರಾದ ಚಂದ್ರೇಗೌಡ, ಮೋದೂರುಶಿವಣ್ಣೇಗೌಡ, ವಿಷಕಂಠಪ್ಪ, ಕೃಷ್ಣೇಗೌಡ, ಬನ್ನಿಕುಪ್ಪೆ ನಂಜಪ್ಪ, ಚೆಲುವಾಚಾರಿ, ಬಸವರಾಜು, ಸತೀಶ್, ಮಹದೇವ್ ಸೇರಿದಂತೆ ಹಲವರು ಇದ್ದರು.

Continue Reading

Mysore

ಕಾಲ ಕಾಲಕ್ಕೆ ನೀರಿನ ಪೈಪ್ ಲೈನ್ ಗಳನ್ನು ಪರಿಶೀಲಿಸಿ: ಯುಕೇಶ್ ಕುಮಾರ್

Published

on

ಮೈಸೂರು: ಕಾಲ ಕಾಲಕ್ಕೆ ನೀರಿನ ಪೈಪ್ ಲೈನ್ ಗಳನ್ನು ಪರಿಶೀಲಿಸಿ ಹೊಡೆದ ಪೈಪ್ ಗಳನ್ನು ತಕ್ಷಣವೇ ಸರಿಪಡಿಸಬೇಕು. ನೀರಿನ ಅಭಾವ  ಕಂಡು ಬಂದಲ್ಲಿ ಟ್ಯಾಂಕರ್ ಗಳ ಮೂಲಕ ನೀರು ಪಾರೈಸಿ ನಿಮ್ಮ ಹಂತದಲ್ಲೇ ಸಮಸ್ಯೆ ಸರಿಪಡಿಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಯುಕೇಶ್ ಕುಮಾರ್ ತಿಳಿಸಿದರು.


ನೀರಿನ ಸಮಸ್ಯೆ ದೂರಿನ ಹಿನ್ನೆಲೆ  ಮಂಗಳವಾರ ಹದಿನಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹದಿನಾರುಮೋಳೆ, ಬಿಳಿಗೆರೆ ಗ್ರಾಮ ಪಂಚಾಯತಿಯ ಕುಪ್ಪರವಳ್ಳಿ ಹಾಗೂ ಕಾಮಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ  ನೀರಿನ ಸಮಸ್ಯೆ ಪರಿಶೀಲಿಸಿ  ಮಾತನಾಡಿದರು.

ನೀರು ಬಿಡುವ ಅವಧಿಯನ್ನು ನಿಗದಿ ಪಡಿಸಿ, ಸರಿಯಾದ ಸಮಯಕ್ಕೆ ವಾಟರ್ ಮೆನ್ ಮೂಲಕ ನೀರು ಪೂರೈಸಬೇಕು. ಈಗ ಎಲ್ಲಾ ಗ್ರಾಮೀಣ ಭಾಗಗಳಲ್ಲಿ ಸ್ಥಳೀಯ ಹಬ್ಬ ಗಳು ಜರುಗುತಲಿದ್ದು ಈ ವೇಳೆಯಲ್ಲಿ ನೀರಿನ  ಸಮಸ್ಯೆ ತಲೆದೂರದಂತೆ ಎಚ್ಚರವಹಿಸುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ತಿಳಿಸಿದರು.


ಸಾರ್ವಜನಿಕರೊಂದಿಗೆ ಮಾತನಾಡಿದ ಅವರು ಅತ್ಯಮೂಲ್ಯ ವಾದ ನೀರನ್ನು ಪ್ರತಿಯೊಬ್ಬರು ಇತಮಿತವಾಗಿ ಬಳಸಬೇಕು, ಸಮರ್ಪಕವಾಗಿ ಉಪಯೋಗಿಸಿದರೆ ಬೇಸಿಗೆಕಾಲದಲ್ಲಿ ನೀರಿನ ಸಮಸ್ಯೆ ತಲೆ ದೂರುವುದಿಲ್ಲ ಎಂದು ತಿಳಿಸಿದರು.

ಈ ವೇಳೆ ಗ್ರಾಮಸ್ಥರು  ತಮ್ಮ  ಅಳಲು ತೋಡಿಕೊಂಡಿದ್ದು, ಹಲವು ಮನೆಗಳಲ್ಲಿ  ನಲ್ಲಿಪೈಪ್ ಗಳಿಗೆ ಮೋಟಾರ್ ಗಳನ್ನು ಅಳವಡಿಸಿಕೊಂಡಿರುವ  ಹಿನ್ನೆಲೆ ಎಲ್ಲಾ ಮನೆಗಳಿಗೆ ಸಮರ್ಪಕವಾಗಿ ನೀರು ಬರುತಿಲ್ಲ ಎಂದು ತಿಳಿಸಿದರು.


ನಂಜನಗೂಡು ಹಾಗೂ ವರುಣ ಕ್ಷೇತ್ರದ 62 ಹಳ್ಳಿಗಳಿಗೆ ನೀರು ಪೂರೈಸಬಹುದಾದಾ ದೊಡ್ಡ ಕವಲಂದೆ ಗ್ರಾಮದಲ್ಲಿ ಪ್ರಗತಿಯಲ್ಲಿರುವ ಬಹುಗ್ರಾಮ ಕುಡಿಯುವ ನೀರು ಪುನಃಚೇತನ ಕಾಮಗಾರಿಯ ಪ್ರಗತಿಯ ಬಗ್ಗೆ ಗ್ರಾಮೀಣ ನೀರು ಸರಬರಾಜು ಅಧಿಕಾರಿಗಳಿಂದ ಮಾಹಿತಿ ಪಡೆದರು.

ಈ ವೇಳೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಜೆರಾಲ್ಡ್ ರಾಜೇಶ್,  ಗ್ರಾಮೀಣ ನೀರು ಸರಬರಾಜು ಕಾರ್ಯ ಪಾಲಕ ಅಭಿಯಂತರರಾದ ರಾಮಸ್ವಾಮಿ, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಮನು, ಕಿರಿಯ ಸಹಾಯಕ ಅಭಿಯಂತರರಾದ ಪ್ರವೀಣ್, ಹದಿನಾರು ಪಿಡಿಒ ಪ್ರದೀಪ್, ಬಿಳಿಗೆರೆ ಪಿಡಿಒ ಗಣೇಶ್ ಹಾಗೂ ಇತರೆ ಸಿಬ್ಬಂದಿ ಹಾಜರಿದ್ದರು.

Continue Reading

Mysore

ಮೈಸೂರು-ಕುಶಾಲನಗರ ರೈಲ್ವೆ ಯೋಜನೆ ಪುನಾರಂಭಿಸಲು ಅಶ್ವಿನ್‌ ವೈಷ್ಣವ್‌ಗೆ ಯದುವೀರ್‌ ಮನವಿ

Published

on

ಮೈಸೂರು: ಅನಿವಾರ್ಯ ಕಾರಣಗಳಿಂದ ನನೆಗುದಿಗೆ ಬಿದ್ದಿರುವ ಮೈಸೂರು-ಕುಶಾಲನಗರ ಯೋಜನೆಗೆ ಮರು ಚಾಲನೆ ನೀಡಬೇಕು. ಪ್ರಮುಖವಾಗಿ ಭೂ ಸ್ವಾಧೀನ ಪ್ರಕ್ರಿಯೆ ಆರಂಭಿಸಲು ಮಧ್ಯ ಪ್ರವೇಶಿಸಬೇಕು ಎಂದು ಕೇಂದ್ರ ರೈಲ್ವೆ ಸಚಿವರಿಗೆ ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಮನವಿ ಮಾಡಿದ್ದಾರೆ.

ಈ ಸಂಬಂಧ ಪತ್ರ ಬರೆದಿರುವ ಸಂಸದರು, ಕೆಲವು ಪ್ರಕ್ರಿಯೆ ಪೂರ್ಣಗೊಂಡಿದ್ದರೂ ಯೋಜನೆ ನಿಧಾನಗತಿಯಲ್ಲಿ ಸಾಗಿದೆ ಅಥವಾ ನನೆಗುದಿಗೆ ಬಿದ್ದಿದೆ ಎಂದರು.


ಮೈಸೂರು (ಬೆಳಗೊಳ) – ಕುಶಾಲನಗರ (89 ಕಿಮೀ) ಯೋಜನೆಯ ಅಂತಿಮ ಸ್ಥಳ ಸಮೀಕ್ಷೆ ಪೂರ್ಣಗೊಂಡಿದ್ದರೂ ಕಾರಣಾಂತರಗಳಿಂದ ಸ್ಥಗಿತಗೊಂಡಿದೆ. ಈ ಯೋಜನೆಗೆ ಪುನರುಜ್ಜೀವನಗೊಳಿಸಬೇಕಾಗಿದೆ. ಈ ನಿಟ್ಟಿನಲ್ಲಿ ಸಚಿವರು ಮಧ್ಯಪ್ರವೇಶಿಸಬೇಕು ಎಂದು ಮನವಿ ಮಾಡಲಾಗಿದೆ.

ಕೊಡಗು ಜಿಲ್ಲೆಗೆ ಸೂಕ್ತ ರೈಲು ಸಂಪರ್ಕವಿಲ್ಲದೇ ಪ್ರಮುಖ ಪ್ರವಾಸೋದ್ಯಮ ಮತ್ತು ತೋಟಗಾರಿಕೆ ಕ್ಷೇತ್ರಗಳ ಆರ್ಥಿಕತೆಗೆ ಭಾರಿ ತೊಂದರೆಯಾಗುತ್ತಿದೆ. ಸಂಪೂರ್ಣವಾಗಿ ಸ್ಯಾಚುರೇಟೆಡ್ ರಸ್ತೆ ಸಂಪರ್ಕದ ಮೇಲೆ ಬೆಳೆಗಾರರು ಅವಲಂಬಿತಾಗಿದ್ದಾರೆ ಎಂದು ವಿವರಿಸಿದರು.


ಸುಸ್ಥಿರ ಪ್ರವಾಸೋದ್ಯಮಕ್ಕೆ ಅವಕಾಶ: ಈ ಯೋಜನೆಯು ಕೊಡಗು ಜಿಲ್ಲೆಗೆ ಸುಸ್ಥಿರ ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೇರಳ ಅವಕಾಶ ಒದಗಿಸುತ್ತದೆ. ಕೃಷಿ-ತೋಟಗಾರಿಕೆ ಪೂರೈಕೆ ಸರಪಳಿಗಳನ್ನು ಬಲಪಡಿಸುತ್ತದೆ ಮತ್ತು ಕೊಡಗನ್ನು ಮೈಸೂರು ಮತ್ತು ಬೆಂಗಳೂರಿನ ಬೆಳವಣಿಗೆಯ ಕಾರಿಡಾರ್‌ಗಳೊಂದಿಗೆ ಸಂಯೋಜಿಸುತ್ತದೆ ಎಂದು ಸಚಿವರಿಗೆ ಮನವರಿಕೆ ಮಾಡಿಕೊಡಲಾಗಿದೆ.

ಈ ನಿಟ್ಟಿನಲ್ಲಿ ರೈಲ್ವೆ ಸಚಿವಾಲಯವು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಲಾಗಿದೆ. ರೈಲ್ವೆ ಸಚಿವಾಲಯ ಹಾಗೂ ಅಧಿಕಾರಿಗಳ ಜೊತೆ ನಿರಂತರ ಫಾಲೋ ಅಪ್‌ ಮಾಡಿ ಎರಡೂ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಎಲ್ಲ ರೀತಿಯಲ್ಲೂ ಕ್ರಮ ಕೈಗೊಳ್ಳಲಾಗುವುದು. ನನ್ನ ಕ್ಷೇತ್ರದ ಅಭಿವೃದ್ಧಿಗೆ ನಾನು ಬದ್ಧನಾಗಿದ್ದೇನೆ.


ಈ ಎರಡೂ ಮನವಿಯನ್ನು ಸ್ವೀಕರಿಸಿರುವ ರೈಲ್ವೆ ಸಚಿವ ಅಶ್ವಿನ್‌ ವೈಷ್ಣವ್‌ ಕೂಡಲೇ ಪರಿಶೀಲನೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ಯದುವೀರ್‌ ಮಾಹಿತಿ ನೀಡಿದ್ದಾರೆ.

ಚೆನ್ನೈ-ಬೆಂಗಳೂರು ಹೈಸ್ಪೀಡ್‌ ರೈಲಿಗೆ ಮೈಸೂರು ಸೇರಿಸಲು ಆಗ್ರಹ

ಇದೇ ವೇಳೆ ಕೇಂದ್ರ ಬಜೆಟ್‌ನಲ್ಲಿ ಬೆಂಗಳೂರು-ಮೈಸೂರು ಹೈಸ್ಪೀಡ್‌ ರೈಲು ಯೋಜನೆ ಘೋಷಿಸಲಾಗಿದೆ. ಆದರೆ ಮೈಸೂರು ಕೈ ಬಿಡಲಾಗಿದೆ. ರೈಲ್ವೆ ಸಚಿವರು ಕೂಡಲೇ ಮಧ್ಯ ಪ್ರವೇಶಿಸಿ ಈ ಯೋಜನೆಗೆ ಸಾಂಸ್ಕೃತಿಕ ನಗರಿಯನ್ನೂ ಸೇರಿಸಬೇಕು ಎಂದು ಸಂಸದರು ಮನವಿ ಮಾಡಿದರು.


ಮೈಸೂರು ಈಗ ಪ್ರಮುಖ ಪ್ರವಾಸಿ ತಾಣವಾಗಿದೆ. ಐಟಿ ಹಬ್‌ ಆಗುತ್ತಿದೆ. ರಾಜಧಾನಿ ಬೆಂಗಳೂರಿನೊಂದಿಗೆ ಸೂಕ್ತ ಸಂಪರ್ಕ ಜಾಲ ಹೊಂದಿದರೆ ಆರ್ಥಿಕ ಪ್ರಗತಿಯಾಗಲಿದೆ ಎಂದು ಸಚಿವರಿಗೆ ಮನವರಿಕೆ ಮಾಡಲಾಗಿದೆ ಎಂದು ಸಂಸದರು ವಿವರಿಸಿದರು.

ಬೆಂಗಳೂರನ್ನು ಮೆಟ್ರೊ ಪಾಲಿಟನ್‌ ವಲಯದಿಂದ ದಟ್ಟಣೆ ಕಡಿಮೆ ಮಾಡಲು ಇದರು ನೆರವಾಗಲಿದೆ ಮತ್ತು ಹಲವಾರು ದಿನಗಳ ಬೇಡಿಕೆಯನ್ನು ಈಡೇರಿಸಲು ಸಚಿವರು ಮಂದಾಗಬೇಕು.


ಈ ನಿಟ್ಟಿನಲ್ಲಿ ಚೆನ್ನೈ-ಬೆಂಗಳೂರು ಆರ್ಥಿಕ ಕಾರಿಡಾರ್‌ಗೆ ಮೈಸೂರು ಕೂಡ ಸೇರ್ಪಡೆ ಮಾಡಬೇಕೆಂದು ಮನವಿ ಮಾಡಿದ್ದೇನೆ ಎಂದು ಯದುವೀರ್‌ ಒಡೆಯರ್‌ ತಿಳಿಸಿದ್ದಾರೆ.

Continue Reading

Trending

error: Content is protected !!