Connect with us

Mysore

ಹಳೆ ಕಾಮಗಾರಿಗೆ ಗುದ್ದಲಿ ಪೂಜೆ ಮಾಡುವ ದರಿದ್ರ ನನಗೆ ಬಂದಿಲ್ಲ, ಹೊಸದಾಗಿ ತರುವ ತಾಕತ್ತು ನನಗೆ ಇದೆ – ಶಾಸಕ ಡಿ. ರವಿಶಂಕರ್

Published

on

ಸಾಲಿಗ್ರಾಮ ಸಮೀಪದ ಬಟಿಗನಹಳ್ಳಿ ಗ್ರಾಮದಲ್ಲಿ 4 ಕೋಟಿ ರೂ ಗಳ ವೆಚ್ಚದ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಬೇರೆ ಯಾರೋ ಮನೆ ಕಟ್ಟಿರುವುದಕ್ಕೆ ನಾನು ಹೋಗಿ ಗೃಹಪ್ರವೇಶ ಮಾಡುವ ದರಿದ್ರ ನನಗೆ ಇನ್ನು ಬಂದಿಲ್ಲ, ನಾನು ಹಳೇ ಕಾಮಗಾರಿಗೆ ಗುದ್ದಲಿ ಪೂಜೆ ಮಾಡುವುದಿಲ್ಲ, ಹೊಸ ಕಾಮಗಾರಿಗೆ ಮಾತ್ರ ಗುದ್ದಲಿ ಪೂಜೆ ಮಾಡುತ್ತೇನೆ. ನಾನು ಮುಖ್ಯಮಂತ್ರಿ ಸಿದ್ದರಾಮಯ್ಯ ರವರ ಹತ್ತಿರ ಹೋಗಿ ಎಷ್ಟು ಕೋಟಿ ಬೇಕಾದರೂ ಅನುದಾನ ತಂದು ಅಭಿವೃದ್ಧಿ ಪಡಿಸುವ ತಾಕತ್ತು ನನಗೆ ಇದೆ. ಇದು ಹೊಸ ಕಾಮಗಾರಿಯೇ ಹೊರತು ಹಳೆಯ ಕಾಮಗಾರಿ ಅಲ್ಲ, ನಾನು ಸ್ಪಷ್ಟವಾಗಿ ಹೇಳುತ್ತಿದ್ದೇನೆ ಎಂದರು.
ನಾನು ಚುನಾವಣೆಯ ಜನಾಶೀರ್ವಾದ ಸಂದರ್ಭದಲ್ಲಿ ಈ ಊರಿಗೆ ಬಂದಾಗ ಜನರ ಬೇಡಿಕೆಯಂತೆ ಕೊಟ್ಟ ಭ ರವಸೆಯಂತೆ ರಸ್ತೆ ಅಭಿವೃದ್ಧಿ ಮಾಡಿಸುತ್ತಿದ್ದೇನೆ, ರಸ್ತೆಗಳು ತೀರಾ ಹಾಳಾಗಿ ತಿರುಗಾಡಲು ಬಹಳ ತೊಂದರೆ ಪಡುತ್ತಿದ್ದಾರೆ, ಆದ್ದರಿಂದ ಸ್ಥಳದಲ್ಲಿಯೇ ಅಧಿಕಾರಿಗಳು ಇದ್ದು, ಉತ್ತಮ ಗುಣ ಮಟ್ಟದ ಕಾಮಗಾರಿಯನ್ನು ಮಾಡಿಸಿ ಗ್ರಾಮದ ಜನತೆಗೆ ಅನುಕೂಲ ಮಾಡಬೇಕು ಎಂದರು.
ಇದೆ ರೀತಿ ತಾಲೂಕಿನಲ್ಲಿ ಹಲವು ರಸ್ತೆಗಳು ತೀರಾ ಹದ ಗೆಟ್ಟಿವೆ,30 ಕೋಟಿ ರೂ ವೆಚ್ಚದಲ್ಲಿ ನಾನಾ ಯೋಜನೆಯಡಿಯಲ್ಲಿ ಮದುವನಹಳ್ಳಿ- ಹೊಸಕೋಟೆ ರಸ್ತೆ, ಬ್ಯಾಡರಹಳ್ಳಿ – ಮಳಲಿ ರಸ್ತೆ, ಚುಂಚನಕಟ್ಟೆ – ಹುಣಸೂರು ತಾಲೂಕು ಗಡಿ ಭಾಗ, ಗೇರುದಡ -ಬಸವರಾಜಪುರ, ಮುದುಗುಪ್ಪೆ -ಕುಪ್ಪಳ್ಳಿ, ಬಾಚಹಳ್ಳಿ ಗೇಟ್, ಕುರುಬಳ್ಳಿ, ಅಂಕನಹಳ್ಳಿ ರಸ್ತೆಗಳ ಅಭಿವೃದ್ಧಿಗೆ ಅತೀ ಶೀಘ್ರದಲ್ಲಿಯೇ ಗುದ್ದಲಿ ಪೂಜೆ ಮಾಡಲಾಗುವುದು ಎಂದು ಹೇಳಿದರು.
ಮಿರ್ಲೆ ಆಸ್ಪತ್ರೆಗೆ ವೈದ್ಯರು ಇಲ್ಲದಿರುವುದನ್ನು ಗಮನಿಸಿ ಈಗ ಖಾಯಂ ಆಗಿ ಇಬ್ಬರು ವೈದ್ಯರನ್ನು ನೇಮಿಸಲಾಗಿದೆ. ಈ ಭಾಗದ ಜನತೆಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

ಎರಡು ತಾಲೂಕಿನಲ್ಲಿ ಹೆಚ್ಚು ಅಭಿವೃದ್ಧಿ ಯಾಗಬೇಕಾಗಿದೆ ದೊಡ್ಡ ಮಟ್ಟದ ಅನುದಾನ ತಂದು ಸಾಕಷ್ಟು ರೀತಿಯಲ್ಲಿ ಅಭಿವೃದ್ಧಿ ಪಡಿಸಿ ಮಾದರಿ ಕ್ಷೇತ್ರ ಮಾಡುವ ಜವಾಬ್ದಾರಿ ನನ್ನದು ಎಂದರು.
ಲೋಕೋಪಯೋಗಿ ಎಇಇ ಸುಮಿತಾ, ಇಂಜಿನಿಯರ್ ರಘು, ಪಿ. ಡಿ. ಒ. ಮಂಜು, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಂಠಿ ಕುಮಾರ್, ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷ ಹರದನಹಳ್ಳಿ ಮಂಜು, ಉದಯಕುಮಾರ್, ಮುತ್ತಾರ್ ಪಾಶ,ಮಿರ್ಲೆ ನಾಗರಾಜ್, ದಿಡ್ಡಳ್ಳಿ ಬಸವರಾಜ್,ಬಾಚಹಳ್ಳಿ ಪುಟ್ಟಸ್ವಾಮಿ, ವೆಂಕಟೇಶ್ ಇನ್ನಿತರರು ಇದ್ದಾರೆ.

ವರದಿ :ಎಸ್ ಬಿ ಹರೀಶ್ ಸಾಲಿಗ್ರಾಮ

Continue Reading
Click to comment

Leave a Reply

Your email address will not be published. Required fields are marked *

Mysore

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಕೆ.ದೀಪಕ್ ಆಯ್ಕೆ*

Published

on

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಚುನಾವಣೆಯ ಮತದಾನ ನಿನ್ನೆ ಮುಗಿದಿದ್ದು, ಇಂದು ಫಲಿತಾಂಶ ಹೊರ ಬಿದ್ದಿದೆ.

ಮೈಸೂರು: ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕೆ.ದೀಪಕ್ ಅವರು 138 ಮತಗಳನ್ನು ಪಡೆದು ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ನಗರ ಉಪಾಧ್ಯಕ್ಷರಾಗಿ ರವಿ ಪಾಂಡವಪುರ, ಗ್ರಾಮೀಣ ಉಪಾಧ್ಯಕ್ಷರಾಗಿ ಹೆಚ್ ಎಸ್ ವೆಂಕಟಪ್ಪ, ಪ್ರಧಾನ ಕಾರ್ಯದರ್ಶಿ ಧರ್ಮಾಪುರ ನಾರಾಯಣ, ಗ್ರಾಮಾಂತರ ಕಾರ್ಯದರ್ಶಿ ದಾರಾ ಮಹೇಶ್, ನಗರ ಕಾರ್ಯದರ್ಶಿ ಲಕ್ಷ್ಮಿ ನಾರಾಯಣ್ ಯಾದವ್, ಖಜಾಂಜಿಯಾಗಿ ಸುರೇಶ್ ಎಸ್ ಅವರುಗಳು ಆಯ್ಕೆಯಾಗಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ನೂತನ ಕಾರ್ಯಕಾರಿ ಸಮಿತಿ ಸದಸ್ಯರ ವಿವರ ಇಂತಿದೆ.

ಎಂ.ಟಿ ಯೋಗೇಶ್ ಕುಮಾರ್,
ಕವಿತಾ ಎಸ್, ಅನಗೋಡು ನಟರಾಜು, ಡಿ.ಜೆ ರೋಜಾ ಮಹೇಶ್, ನಾಣಿ ಹೆಬ್ಬಾಳ್, ಜೆ.ರವಿಚಂದ್ರ ಹಂಚ್ಯ, ಹಂಪಾ ನಾಗರಾಜು, ಸೋಮಶೇಖರ್ ಚಿಕ್ಕಮರಳ್ಳಿ, ಜೆ ಶಿವಣ್ಣ, ಸತೀಶ್ ಆರ್ ದೇಪುರ, ದೊಡ್ಡನ ಹುಂಡಿ ರಾಜಣ್ಣ, ಹುಲ್ಲಹಳ್ಳಿ ಮೋಹನ, ಪುನೀತ್ ಎಸ್, ರಾಜು ಕಾರ್ಯ, ಸಿಎನ್ ವಿಜಯ್ ಇವರುಗಳು ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ನೂತನ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಗೊಂಡಿದ್ದಾರೆ.

Continue Reading

Mysore

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಕೆ.ದೀಪಕ್ ಆಯ್ಕೆ

Published

on

ಮೈಸೂರು: ಜಿಲ್ಲಾ ಪತ್ರಕರ್ತರ ಸಂಘದ ಚುನಾವಣೆಯ ಮತದಾನ ನಿನ್ನೆ ಮುಗಿದಿದ್ದು, ಇಂದು ಫಲಿತಾಂಶ ಹೋರ ಬಿದ್ದಿದೆ.

ಮೈಸೂರು: ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕೆ.ದೀಪಕ್ ಅವರು 138 ಮತಗಳನ್ನು ಪಡೆದು ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ನಗರ ಉಪಾಧ್ಯಕ್ಷರಾಗಿ ರವಿ ಪಾಂಡವಪುರ, ಗ್ರಾಮೀಣ ಉಪಾಧ್ಯಕ್ಷರಾಗಿ ಹೆಚ್ ಎಸ್ ವೆಂಕಟಪ್ಪ, ಪ್ರಧಾನ ಕಾರ್ಯದರ್ಶಿ ಧರ್ಮಾಪುರ ನಾರಾಯಣ, ಗ್ರಾಮಾಂತರ ಕಾರ್ಯದರ್ಶಿ ದಾರಾ ಮಹೇಶ್, ನಗರ ಕಾರ್ಯದರ್ಶಿ ಲಕ್ಷ್ಮಿ ನಾರಾಯಣ್ ಯಾದವ್, ಖಜಾಂಜಿಯಾಗಿ ಸುರೇಶ್ ಎಸ್ ಅವರುಗಳು ಆಯ್ಕೆಯಾಗಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ನೂತನ ಕಾರ್ಯಕಾರಿ ಸಮಿತಿ ಸದಸ್ಯರ ವಿವರ ಇಂತಿದೆ.

ಎಂ.ಟಿ ಯೋಗೇಶ್ ಕುಮಾರ್,
ಕವಿತಾ ಎಸ್, ಅನಗೋಡು ನಟರಾಜು, ಡಿ.ಜೆ ರೋಜಾ ಮಹೇಶ್, ನಾಣಿ ಹೆಬ್ಬಾಳ್, ಜೆ.ರವಿಚಂದ್ರ ಹಂಚ್ಯ, ಹಂಪಾ ನಾಗರಾಜು, ಸೋಮಶೇಖರ್ ಚಿಕ್ಕಮರಳ್ಳಿ, ಜೆ ಶಿವಣ್ಣ, ಸತೀಶ್ ಆರ್ ದೇಪುರ, ದೊಡ್ಡನ ಹುಂಡಿ ರಾಜಣ್ಣ, ಹುಲ್ಲಹಳ್ಳಿ ಮೋಹನ, ಪುನೀತ್ ಎಸ್, ರಾಜು ಕಾರ್ಯ, ಸಿಎನ್ ವಿಜಯ್ ಇವರುಗಳು ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ನೂತನ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಗೊಂಡಿದ್ದಾರೆ.

Continue Reading

Mysore

ಮುಡಾ ಅಕ್ರಮ ನಿವೇಶನ ಹಂಚಿಕೆ: ಏಕ ಸದಸ್ಯ ವಿಚಾರಣಾ ಆಯೋಗ ರಚನೆ

Published

on

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಿವೇಶನಗಳನ್ನು ಅಕ್ರಮವಾಗಿ ಹಂಚಿಕೆ ಮಾಡಿರುವ ಆರೋಪ ಕುರಿತು ವಿಚಾರಣೆ ನಡೆಸಲು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಪಿ.ಎನ್‌.ದೇಸಾಯಿ ನೇತೃತ್ವದಲ್ಲಿ ಏಕ ಸದಸ್ಯ ವಿಚಾರಣಾ ಆಯೋಗವನ್ನು ರಾಜ್ಯ ಸರ್ಕಾರ ರಚಿಸಿದೆ.

ಅಕ್ರಮಕ್ಕೆ ಸಂಬಂಧಿಸಿದಂತೆ ಸಮಗ್ರ ಮಾಹಿತಿ, ದಾಖಲೆಗಳನ್ನು ಒದಗಿಸಿ, ಆಯೋಗವು ವಿಚಾರಣೆಯನ್ನು ಪೂರ್ಣಗೊಳಿಸಲು, ತಾಂತ್ರಿಕ, ಆರ್ಥಿಕ ಮತ್ತು ಆಡಳಿತಾತ್ಮಕ ಸಲಹೆಗಾರರನ್ನು ನೀಡಲು ನಗರಾಭಿವೃದ್ಧಿ ಇಲಾಖೆ ಮತ್ತು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಸಹಕರಿಸಬೇಕು ಎಂದು ಸೂಚಿಸಲಾಗಿದೆ.

ಆಯೋಗವು ವಿಚಾರಣೆಗೆ ಬಯಸುವ ಎಲ್ಲ ಕಡತಗಳು ಮತ್ತು ದಾಖಲಾತಿಗಳನ್ನು ನಗರಾಭಿವೃದ್ಧಿ ಇಲಾಖೆ ಮತ್ತು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಒದಗಿಸಬೇಕು. ಅಲ್ಲದೆ, ವಿಚಾರಣೆ ಸಂದರ್ಭದಲ್ಲಿ ಹಾಜರಿದ್ದು ಸಂಪೂರ್ಣವಾಗಿ ಸಹಕರಿಸಬೇಕು ಎಂದು ಆದೇಶದಲ್ಲಿ ವಿವರಿಸಲಾಗಿದೆ.

ತನಿಖೆಗೆ ಆದೇಶಿಸಿರುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು, ಮುಡಾ ನಿವೇಶನ ಹಂಚಿಕೆಯ ವಿರುದ್ಧ ಆರೋಪಗಳು ಕೇಳಿ ಬರುತ್ತಿದ್ದು, ಈ ಬಗ್ಗೆ ಪಾರದರ್ಶಕ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂಬ ಆಶಯದೊಂದಿಗೆ ರಾಜ್ಯ ಸರ್ಕಾರವು ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಶ್ರೀ ಪಿ. ಎನ್. ದೇಸಾಯಿ ಅವರ ನೇತೃತ್ವದಲ್ಲಿ ಏಕ ಸದಸ್ಯ ವಿಚಾರಣಾ ಆಯೋಗವನ್ನು ರಚಿಸಿ ತನಿಖೆಗೆ ವಹಿಸಿದೆ. ಪ್ರಕರಣದ ಕೂಲಂಕಷವಾದ ವಿಚಾರಣೆ ನಡೆದು, ಸತ್ಯಾಸತ್ಯತೆ ಹೊರಬರಲಿ ಎಂದು ಆಶಿಸುತ್ತೇನೆ’ ಎಂದು ಹೇಳಿದ್ದಾರೆ.

Continue Reading

Trending

error: Content is protected !!