Chamarajanagar
ಕೌಶಲ್ಯಾಧಾರಿತ ತರಬೇತಿಗೆ ಹೆಚ್ಚು ಆದ್ಯತೆ ನೀಡಿ: ಶಾಸಕ ಸಿ.ಪುಟ್ಟರಂಗಶೆಟ್ಟಿ ಸಲಹೆ
ಸಿಇಟಿ ಆನ್‌ಲೈನ್ ಉಚಿತ ತರಬೇತಿ, ಪುಸ್ತಕ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ
ಚಾಮರಾಜನಗರ: ಪ್ರಸ್ತುತ ದಿನಮಾನಗಳಲ್ಲಿ ಸಮಾಜದಲ್ಲಿ ಏನಾದರೂ, ಬದಲಾವಣೆ ಕಾಣುವಂತಾಗಿದ್ದರೆ ಅದು ಶಿಕ್ಷಣದಿಂದ ಮಾತ್ರ ಎಂದು ಎಂಎಸ್‌ಐಎಲ್ ಅಧ್ಯಕ್ಷ, ಶಾಸಕ ಸಿ.ಪುಟ್ಟರಂಗಶೆಟ್ಟಿ ಹೇಳಿದರು.
ನಗರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ನಡೆದ ಸಿಇಟಿ ಉಚಿತ ಆನ್‌ಲೈನ್ ತರಬೇತಿ ಹಾಗೂ ಎಂಎಸ್‌ಐಎಲ್ ವತಿಯಿಂದ ಸಿಇಟಿ ಪುಸ್ತಕ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ತಮ್ಮ ಕುಟುಂಬದಲ್ಲಿ ಸಹೋದರರು ಶಿಕ್ಷಣಕ್ಕೆ ಆದ್ಯತೆ ಕೊಡಲಿಲ್ಲ, ನಾನು ಮಾತ್ರ ಓದಲೇಬೇಕು ಎಂಬ ಹಠತೊಟ್ಟು, ಉನ್ನತ ಶಿಕ್ಷಣ ಪಡೆಯುವ ಮೂಲಕ ಇಂದು ಉನ್ನತಮಟ್ಟದಲ್ಲಿ ನಿಂತಿದ್ದೇನೆ. ಇದಕ್ಕೆಲ್ಲ ಶಿಕ್ಷಣ ಕಾರಣ ಎಂದರು. ಇಂದು ವೈದ್ಯಕೀಯ ಶಿಕ್ಷಣ, ಎಂಜಿನಿಯರಿಂಗ್ ಪ್ರವೇಶ ಪಡೆಯಬೇಕಾದರೆ ಸಿಇಟಿ. ನೀಟ್, ಜೆಇಇ ತರಬೇತಿ ಪಡೆಯಲೇಬೇಕು ಎಂದು ತಿಳಿಸಿದರು.
ವಿದ್ಯಾರ್ಥಿಗಳು ಕೇವಲ ಶಿಕ್ಷಣ ಪಡೆದರೆ ಸಾಲದು, ವಿವಿಧ ಕೌಶಲ್ಯಾಧಾರಿತ ತರಬೇತಿ ಪಡೆಯಬೇಕು, ಬದನಗುಪ್ಪೆ-ಕೆಲ್ಲಂಬಳ್ಳಿ ಕೈಗಾರಿಕಾವಸಾಹತು ಪ್ರದೇ಼ಶ಼ದಲ್ಲಿ ವಿವಿಧ ಪ್ರತಿಷ್ಠಿತ ಕೈಗಾರಿಕೆಗಳು ಸ್ಥಾಪನೆಯಾಗಿದ್ದು, ತರಬೇತಿಗೆ ತಕ್ಕ ಉದ್ಯೋಗಪಡೆಯಬಹುದಾಗಿದೆ ಎಂದರು.

ಚೂಡಾ ಅಧ್ಯಕ್ಷ ಮಹಮದ್ ಅಸ್ಗರ್ ಮುನ್ನಾ ಮಾತನಾಡಿ, ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಬಹುತೇಕ ವ್ಯಾಸಂಗ ಮಾಡುವವರು ಬಡವರ್ಗದ ವಿದ್ಯಾರ್ಥಿಗಳೇ ಆಗಿದ್ದಾರೆ, ಸರ್ಕಾರದಿಂದ ಸಿಗಬಹುದಾದ ಸೌಲಭ್ಯಗಳನ್ನು ಪಡೆದುಕೊಂಡು, ತಾವು ಅಂದುಕೊಂಡ ಗುರಿಮುಟ್ಟಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಜಯಕುಮಾರ್, ನಾರಾಯಣ, ಕೇಶವನ್, ನಿವೃತ್ತ ಪ್ರಾಂಶುಪಾಲ ಸೋಮಣ್ಣ, ಸಂಪನ್ಮೂಲವ್ಯಕ್ತಿಗಳಾದ ಮಾದೇಶ್, ದೀಪಕ್, ಮಲ್ಲಿಕಾರ್ಜುನ್, ಚೂಡಾ ಸದಸ್ಯ ರಾಜೇಂದ್ರ, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎ.ಎಸ್.ಗುರುಸ್ವಾಮಿ ಹಾಗೂ ಉಪನ್ಯಾಸಕರು, ವಿದ್ಯಾರ್ಥಿಗಳು ಹಾಜರಿದ್ದರು.
Chamarajanagar
ಹನೂರು ಕ್ಷೇತ್ರದಲ್ಲಿ ಎಸ್‌ಐಆರ್ ವಿಶೇಷ ಮಹಾ ಸಂಪರ್ಕ ಅಭಿಯಾನ: ಜನಧ್ವನಿ ವೆಂಕಟೇಶ್ ಮನೆ ಮನೆಗೆ ಭೇಟಿ
ವರದಿ: ಸುನೀಲ್ ಪ್ರಶಾಂತ್
ಕೊಳ್ಳೇಗಾಲ: ಎಸ್‌ಐಆರ್ (SIR) ವಿಶೇಷ ಮಹಾ ಸಂಪರ್ಕ ಅಭಿಯಾನ ರಾಜ್ಯದಾದ್ಯಂತ ಪ್ರಗತಿಯಲ್ಲಿದ್ದು, ಅರ್ಜಿ ಸಲ್ಲಿಕೆಗೆ ಇನ್ನೂ ಕೆಲ ದಿನಗಳ ಕಾಲಾವಕಾಶ ಇರುವ ಹಿನ್ನೆಲೆಯಲ್ಲಿ ಬಿಜೆಪಿ ಜಿಲ್ಲಾ ಒಬಿಸಿ ಮೋರ್ಚಾ ಅಧ್ಯಕ್ಷ ಜನಧ್ವನಿ ವೆಂಕಟೇಶ್ ಅವರು ಹನೂರು ಕ್ಷೇತ್ರದ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಅಭಿಯಾನದಲ್ಲಿ ಭಾಗವಹಿಸಿದರು.
ಕೊಳ್ಳೇಗಾಲ ತಾಲ್ಲೂಕಿನ ಉಗನೀಯ, ಜಿನಕನಹಳ್ಳಿ, ನರೀಪುರ, ಚೆಲುವನಹಳ್ಳಿ ಹಾಗೂ ಧನಗೆರೆ ಗ್ರಾಮಗಳ ವಿವಿಧ ಬೂತ್‌ಗಳಲ್ಲಿ ಮನೆ ಮನೆಗೆ ತೆರಳಿ ಸಾರ್ವಜನಿಕರನ್ನು ಭೇಟಿ ಮಾಡಿದ ಅವರು, ಎಸ್‌ಐಆರ್ ಅಭಿಯಾನದ ಕುರಿತು ಮಾಹಿತಿ ನೀಡಿ ಜನರಿಂದ ಅಗತ್ಯ ಮಾಹಿತಿಯನ್ನು ಸಂಗ್ರಹಿಸಿದರು.

ಈ ವೇಳೆ ಎಸ್‌ಐಆರ್‌ನ ಬಾಲಸುಬ್ರಮಣ್ಯಂ, ಹೊನ್ನೂರು ಮಹದೇವಸ್ವಾಮಿ, ವೃಷಭೇಂದ್ರ ಸ್ವಾಮಿ, ವರಪ್ರಸಾದ್, ಉಗನೀಯ ಮಹೇಶ್, ಬಿಎಲ್‌ಎ-1 ಲೋಕೇಶ್ (ಜಟ್ಟಿ), ಮಲ್ಲಣ್ಣ, ಬಸಪ್ಪ, ಸೋಮಶೇಖರ್, ಸತ್ತೇಗಾಲದ ನಂಜುಂಡಸ್ವಾಮಿ ಸೇರಿದಂತೆ ಬಿಎಲ್‌ಎ-2 ಕಾರ್ಯಕರ್ತರು, ಬಿಜೆಪಿ ಮಂಡಲ ಅಧ್ಯಕ್ಷರು, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮಗಳ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
Chamarajanagar
ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಇಬ್ಬರ ಬಂಧನ
ಚಾಮರಾಜನಗರ: ಅಕ್ರಮವಾಗಿ ಮದ್ಯ ಮಾರಾಟ ಮಾಡಲು ಸಾಗಣೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ತಾಲೂಕಿನ ಬೇಡಗುಳಿ ಗ್ರಾಮದ ಮಹದೇವ(40) ಹಾಗೂ ಕಾಡಿಗೆರೆ ಗ್ರಾಮದ ಬಸವ ಬಂಧಿತ ಆರೋಪಿಗಳು.
ಇವರು ದ್ವಿ ಚಕ್ರ ವಾಹನದಲ್ಲಿ ಅಕ್ರಮವಾಗಿ ಮದ್ಯವನ್ನು ಸಾಗಾಟ ಮಾಡುತ್ತಿದ್ದ ಖಚಿತ ಮಾಹಿತಿಯನ್ನು ಆಧರಿಸಿ ದಾಳಿ ನಡೆಸಿದ ಪೊಲೀಸರು ನಗರದ ಎಂಇಟಿ ಶಾಲೆ ಬಳಿ 5995 ರೂ. ಮೌಲ್ಯದ 74 ಮದ್ಯದ ಪೌಚ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Chamarajanagar
ಚೌಡೇಶ್ವರಿ ದೇವಸ್ಥಾನದಲ್ಲಿ ಅರ್ಧ ನಾರೀಶ್ವರ ರೂಪದಲ್ಲಿ ಅಮ್ಮನವರ ದರ್ಶನ
ಚಾಮರಾಜನಗರ: ನಗರದ ದೇವಾಂಗ ಬೀದಿ 2ನೇ ರಸ್ತೆಯಲ್ಲಿರುವ ಶ್ರೀ ಚೌಡೇಶ್ವರಿ ದೇವಸ್ಥಾನದಲ್ಲಿ ಶ್ರೀ ಅಮ್ಮನವರು ಏಕ ದೇಹದಲ್ಲಿ ಅರ್ಧ ನಾರೀಶ್ವರ ರೂಪದಲ್ಲಿ ಆವಿರ್ಭವಿಸಿ ಭಕ್ತರಿಗೆ ದರ್ಶನ ನೀಡುತ್ತಿದ್ದಾರೆ.

ಅರ್ಧ ನಾರೀಶ್ವರ ರೂಪವು ಶಿವ-ಶಕ್ತಿಯ ಏಕತೆಯ ಸಂಕೇತವಾಗಿದ್ದು, ಈ ವಿಶೇಷ ದರ್ಶನಕ್ಕಾಗಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ದೇವಸ್ಥಾನಕ್ಕೆ ಆಗಮಿಸುತ್ತಿದ್ದಾರೆ.
-
Politics22 hours agoಕೆಪಿಎಸ್ಸಿ ಪಿಡಿಒ ನೇಮಕಾತಿಯಲ್ಲೂ ಅಕ್ರಮದ ಆರೋಪ; ಸಮಗ್ರ ತನಿಖೆಗೆ ಅಭ್ಯರ್ಥಿಗಳ ಒತ್ತಾಯ
-
National4 hours agoನೀಟ್ ಪ್ರತಿಭಟನೆಗೆ ಬಿಗ್ ವಿನ್: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ
-
National1 hour agoಶಿಕ್ಷಣ ವ್ಯವಸ್ಥೆ ಸುಧಾರಣೆಗೆ ಪ್ರಧಾನ್ ರಾಜೀನಾಮೆ ದೊಡ್ಡ ಹೆಜ್ಜೆ: ರಾಹುಲ್ ಗಾಂಧಿ
-
National3 hours agoವಿದ್ಯಾರ್ಥಿಗಳ ಹೋರಾಟಕ್ಕೆ ಜಯ? ಧರ್ಮೇಂದ್ರ ಪ್ರಧಾನ್ ರಾಜೀನಾಮೆ, ಸಿಜೆಪಿ ಸಂಭ್ರಮ
-
Politics2 hours agoಧರ್ಮೇಂದ್ರ ಪ್ರಧಾನ್ ರಾಜೀನಾಮೆ| ವಿದ್ಯಾರ್ಥಿ-ಯುವಜನರ ಗೆಲುವು: ಸಿದ್ದರಾಮಯ್ಯ
-
National1 hour ago‘ಒಂದು ಬೇಡಿಕೆ ಈಡೇರಿದೆ, ಮೂರು ಬಾಕಿ’: ಸಿಜೆಪಿ ಹೋರಾಟಕ್ಕೆ ಹೊಸ ಘೋಷಣೆ
-
Mandya3 hours agoಸಾತನೂರು ಕೆರೆಗೆ ₹4.50 ಕೋಟಿ ಅನುದಾನ: ತಡೆಗೋಡೆ ನಿರ್ಮಾಣ ಕಾಮಗಾರಿಗೆ ಶಾಸಕ ಪಿ. ರವಿಕುಮಾರ್ ಗೌಡ ಗಣಿಗರಿಂದ ಭೂಮಿ ಪೂಜೆ
-
Kodagu24 hours agoನಾಪೋಕ್ಲು ಹೋಬಳಿ ಕರ್ನಾಟಕ ರಕ್ಷಣಾ ವೇದಿಕೆ ನೂತನ ಪದಾಧಿಕಾರಿಗಳ ಆಯ್ಕೆ -ಅಧ್ಯಕ್ಷರಾಗಿ ಅನೀಫ್ ನೇಮಕ
