Connect with us

Mandya

ಪೊಲೀಸರು ಬಂಧಿಸಿಲ್ಲ, ನ್ಯಾಯಾಲಯಕ್ಕೆ ಹಾಜರಾಗಿರುವೆ: ಶಾಸಕ ಪಿ.ರವಿಕುಮಾರ್ ಗಣಿಗ

Published

on

ಮಂಡ್ಯ: ಪೊಲೀಸರು ನನ್ನನ್ನು ಬಂಧಿಸಿದ್ದಾರೆಂದು ಹೇಳುತ್ತಿರುವುದು ಶುದ್ಧ ಸುಳ್ಳು, ಈ ಹಿಂದಿನ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಹಾಜರಾಗಿರುವುದಷ್ಟೇ ಸತ್ಯ ಎಂದು ಶಾಸಕ ರವಿಕುಮಾರ್ ಗಣಿಗ ಅವರು ಹೇಳಿಕೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ ಎಂದು ಹೇಳುತ್ತಿರುವುದನ್ನು ನಂಬಬೇಡಿ ಎಂದು ಸುದ್ದಿಗಾರೊಂದಿಗೆ ಮಾತನಾಡಿರುವ ಅವರು, 2013 ರಲ್ಲಿ ಭೈರವೈಕ್ಯ ಡಾ.ಬಾಲಗಂಗಾಧರನಾಥ ಸ್ವಾಮೀಜಿ ಇಹಲೋಕ ತ್ಯಜಿಸಿದ ಸಂದರ್ಭದಲ್ಲಿ ಅವರ ದರ್ಶನ ಪಡೆಯಲು ನಾನು ಬಿಜಿಎಸ್ ಆಸ್ಪತ್ರೆಗೆ ತೆರಳಿದ್ದೆ. ಆ ಸಂದರ್ಭದಲ್ಲಿ ಮಾಜಿ ಪ್ರಧಾನ ಮಂತ್ರಿ ಎಚ್.ಡಿ.ದೇವೇಗೌಡರು ಕೂಡ ಬಂದಿದ್ದರು.

ಜೊತೆಗೆ ಅಲ್ಲಿಗೆ ನೈಸ್ ಸಂಸ್ಥೆಯ ಅಶೋಕ್ ಖೇಣಿ ಕೂಡ ಆಗಮಿಸಿದ್ದರು. ಈ ವೇಳೆ ದೇವೇಗೌಡರನ್ನು ಅಶೋಕ್ ಖೇಣಿ ನಿಂದಿಸಿದ್ದಾರೆಂದು ಕೆಲವರು ಪ್ರಶ್ನೆ ಮಾಡಿದಾಗ ಘರ್ಷಣೆ ಉಂಟಾಗಿತ್ತು ಅಷ್ಟೇ.

ಈ ಹಿನ್ನಲೆಯಲ್ಲಿ ಅಶೋಕ್ ಖೇಣಿ ಅವರು ಕೆಂಗೇರಿ ಪೊಲೀಸ್ ಠಾಣೆಯಲ್ಲಿ ನನ್ನನ್ನು ಸೇರಿದಂತೆ ಎಚ್.ಡಿ.ದೇವೇಗೌಡ, ಅರುಣ್‌ಗೌಡ, ಕೆಪಿಎಸ್ಸಿ ಮಾಜಿ ಅಧ್ಯಕ್ಷ ಎಚ್.ಎನ್.ಕೃಷ್ಣ, ಪತ್ರಕರ್ತ ವೆಂಕಟೇಶ್, ರಾಜ್ಯ ವಕೀಲರ ಸಂಘದ ಮಾಜಿ ಅಧ್ಯಕ್ಷ ಎ.ಪಿ.ರಂಗನಾಥ್ ಮೇಲೆ ದೂರು ನೀಡಿದ್ದರು.

ನಾನು ಶಾಸಕನಾದ ನಂತರ ಈ ಪ್ರಕರಣ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ವರ್ಗಾವಣೆಯಾಗಿದೆ. ಅದರ ವಿಚಾರವಾಗಿ ಬುಧವಾರ ನ್ಯಾಯಾಲಯಕ್ಕೆ ಹಾಜರಾಗಿರುವೆ, ಈ ಸಂದರ್ಭದಲ್ಲಿ ಬೆಂಗಳೂರು ಪೊಲೀಸರು ನನ್ನನ್ನು ಬಂಧಿಸಿದ್ದಾರೆಂದು ಮಾಹಿತಿ ಹರಿದಾಡುತ್ತಿರುವುದು ಸುಳ್ಳು ಎಂದು ತಿಳಿಸಿದರು.

Continue Reading
Click to comment

Leave a Reply

Your email address will not be published. Required fields are marked *

Mandya

Mandya|ಹಣ ಮಾಡುವ ಉದ್ದೇಶದಿಮದ ಕಾವೇರಿ ಆರತಿ ಮತ್ತು ಅಮ್ಯೂಸ್‌ಮೆಂಟ್ ಪಾರ್ಕ್ ಯೋಜನೆ : ಚಂದ್ರಶೇಖರ್

Published

on

ಮಂಡ್ಯ: ಕನ್ನಂಬಾಡಿ ಕಟ್ಟೆ ಮುಖ್ಯದ್ವಾರದ ಬಳಿ ಹಣ ಮಾಡುವ ಉದ್ದೇಶದಿಮದ ಕಾವೇರಿ ಆರತಿ ಮತ್ತು ಅಮ್ಯೂಸ್‌ಮೆಂಟ್ ಪಾರ್ಕ್ ಯೋಜನೆ ಮಾಡಲು ಮುಂದಾಗಿದ್ದು, ಸದರಿ ಕ್ರಿಯಾಯೋಜನೆ ಕೈಬಿಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಇಂಡುವಾಳು ಚಂದ್ರಶೇಖರ್ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಐತಿಹಾಸಿಕ ಕಾವೇರಿಗೆ ಆರತಿ ಎಂಬ ಹೆಸರು ಸೇರಿಸಿ ಕನ್ನಂಬಾಡಿ ಅಣೆಕಟ್ಟೆಯ ಪರಿಸರ, ನೈರ್ಮಲ್ಯಕ್ಕೆ ದಕ್ಕೆ ತರುವಂತಹ ಕೆಲಸ ಮಾಡಲಾಗುತ್ತಿದೆ. ಕಾವೇರಿ ಆರತಿಯ ಯೋಜನೆಯಲ್ಲಿ ಭ್ರಷ್ಟಾಚಾರದ ವಾಸನೆ ಮೂಡುತ್ತಿದೆ ಎಂದರು.

ಸರ್ಕಾರ ಲಾಭ ಮಾಡಿ ಹಣ ಲೂಟಿ ಹೊಡೆಯುವ ಉದ್ದೇಶದಿಂದ ಇಂತಹ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದ್ದು, ಅಚ್ಚುಕಟ್ಟು ವ್ಯಾಪ್ತಿಯ ಮುಖ್ಯನಾಲೆ, ಉಪನಾಲೆ, ಸೀಳುನಾಲೆ, ನಾಲಾ ಬದಿಯ ರಸ್ತೆಗಳು ತೀರ ಹದಗೆಟ್ಟಿದೆ. ನಾಲೆಯ ಕೊನೆಯ ಭಾಗಕ್ಕೆ ನೀರು ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ಮುಂದಾಗಬೇಕು ಎಂದು ಆಗ್ರಹಿಸಿದರು.

ಅಭಿವೃದ್ಧಿ ಕೆಲಸಕ್ಕೆ ಒತ್ತು ಕೊಡದೆ ಅನಾವಶ್ಯಕ ಯೋಜನೆಗೆ ಕೋಟಿಗಟ್ಟಲೆ ಹಣ ವ್ಯಯ ಮಾಡುತ್ತಿರುವುದು ಖಂಡನೀಯವಾಗಿದ್ದು, ಈ ಹಿನ್ನಲೆ ಏಪ್ರಿಲ್ ೧೭ರಂದು ರೈತ ಸಂಘ ಸಭೆ ನಡೆಸಿದ್ದು, ಮೇ.೦೬ರಂದು ಜಿಲ್ಲೆಯಲ್ಲಿ ಪ್ರತಿಭಟನೆ ಮಾಡಲಾಗುವುದು ಎಂದು ತಿಳಿಸಿದರು.

ತಾಲೂಕು ಅಧ್ಯಕ್ಷ ಶಿವಳ್ಳಿ ಚಂದ್ರು ಮಾತನಾಡಿ, ಮೈಷುಗರ್‌ನಲ್ಲಿ ಹಾವು ಕಾಣಿಸಿಕೊಂಡಿದೆ ಎಂದು ೧೩ ಮರಗಳನ್ನು ಕಡಿಸಿ, ತಮ್ಮ ಮನೆಗೆ ಸಾಗಿಸಿಕೊಂಡಿದ ಅಧ್ಯಕ್ಷ ಸಿ.ಡಿ.ಗಂಗಾಧರ್, ಮೈಷುಗರ್ ಲಾಭದಾಯಕವಾಗಿ ನಡೆಯುತ್ತಿದೆ ಎಂದು ಘೋಷಿಸಿಕೊಂಡು ೩೩ ಕೋಟಿ ರೂ ನಷ್ಟದಲ್ಲಿದೆ ಎಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಮಂಜೇಶ್ ಗೌಡ, ಮಾಧ್ಯಮ ಕಾರ್ಯದರ್ಶಿ ಸೋ.ಸಿ.ಪ್ರಕಾಶ್, ಮಲ್ಲೇಶ್, ಲಿಂಗರಾಜು, ಎಂ.ಕುಮಾರ್ ಇದ್ದರು.

Continue Reading

Mandya

Mandya: ಮೇ.1ಕ್ಕೆ ಕುಂದೂರು ಬೆಟ್ಟ ಗ್ರಾಮದ ಶ್ರೀ ರಸ ಸಿದ್ದೇಶ್ವರ ಮಠದ ಪಟ್ಸ್ ದಲ ಬ್ರಹ್ಮೋಪದೇಶ ಪೂರ್ವಕ ಗುರುಪಟ್ಟಾಧಿಕಾರಿ ಮಹೋತ್ಸವ

Published

on

ಮಂಡ್ಯ: ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಕುಂದೂರು ಬೆಟ್ಟ ಗ್ರಾಮದ ಶ್ರೀ ರಸ ಸಿದ್ದೇಶ್ವರ ಮಠದ ಪಟ್ಸ್ ದಲ ಬ್ರಹ್ಮೋಪದೇಶ ಪೂರ್ವಕ ಗುರುಪಟ್ಟಾಧಿಕಾರಿ ಮಹೋತ್ಸವ ಹಾಗೂ ಸುಕ್ಷೇತ್ರದ ಶ್ರೀ ಮಹಾದ್ವಾರ ಉದ್ಘಾಟನೆ ಕಾರ್ಯಕ್ರಮವನ್ನು ಮೇ.01ರಂದು ಆಯೋಜಿಸಲಾಗಿದೆ ಎಂದು ಮಠದ ಮಠಾಧ್ಯಕ್ಷ ನಂಜುಂಡಸ್ವಾಮೀಜಿ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಇಂದು(ಏಪ್ರಿಲ್‌.26) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಸುತ್ತೂರು ವೀರಸಿಹಾಸನ ಮಹಾಸಂಸ್ಥಾನ ಮಠದ ಶಿವರಾತ್ರಿ ದೇಶಿಕೇಂದ್ರಸ್ವಾಮೀಜಿ, ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ, ಆದಿಚುಂಚನಗಿರಿ ಮಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ವಹಿಸಲಿದ್ದಾರೆ ಎಂದರು.

ಸೂರ್ಯಸಿಂಹಾಸನ ಮಠದ ಸಿದ್ಧಲಿಂಗ ಶಿವಾಚಾರ್ಯಸ್ವಾಮೀಜಿ ಬಸವಣ್ಣನವರ ಭಾವಚಿತ್ರ ಅನಾವರಣಗೊಳಿಸಲಾಗುವುದು. ರಸ ಸಿದ್ದೇಶ್ವರ ಮಠಾಧ್ಯಕ್ಷ ನಂಜುಂಡಸ್ವಾಮೀಜಿ ಪ್ರಾಸ್ತವಿಕ ನುಡಿಗಳನ್ನಾಡುವರು, ಸಾಲೂರು ಬೃಹನ್ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ರುದ್ರಮುನಿ ಸ್ವಾಮಿಗಳ ಭಾವಚಿತ್ರ ಅನಾವರಣ ಮಾಡುವರು ಎಂದು ಹೇಳಿದರು.

ಕಾರ್ಯಕ್ರಮವನ್ನು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಉದ್ಘಾಟಿಸಲಿದ್ದು, ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅಧ್ಯಕ್ಷತೆ ವಹಿಸುವರು, ಬಿಜೆಪಿ ರಾಜ್ಯಾಧ್ಯಕ್ಷ ಮಹಾಧ್ವರದ ಉದ್ಘಾಟನೆ ನೆರವೇರಿಸುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ವಿಧಾನಪರಿಷತ್ ಮಾಜಿ ಉಪಸಭಾಪತಿ ಮರಿತಿಬ್ಬೇಗೌಡ, ಶಾಸಕ ಗಣೇಶ್‌ಪ್ರಸಾದ್, ಚಾಂಷುಗರ್ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸನ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಮೂರ್ತಿ, ಜಿಲ್ಲಾ ಶರಣ ಸಂಘಟನೆ ವೇದಿಕೆಯ ಗೌರವ ಅಧ್ಯಕ್ಷ ಬಬ್ರುವಾಹನ, ಮುಖಂಡ ಪುಟ್ಟಬುದ್ದಿ ಇದ್ದರು.

Continue Reading

Mandya

ಗವಿಮಠದ ಬೆಟ್ಟದಲ್ಲಿ ಹಾಡಾಗಲೇ ಚಿರತೆ ಪ್ರತ್ಯಕ್ಷ

Published

on

ಕೆ.ಆರ್.ಪೇಟೆ : ತಾಲ್ಲೂಕಿನ ಕಾಪನಹಳ್ಳಿ ಗವಿಮಠದ ಬೆಟ್ಟದಲ್ಲಿ ಹಾಡಾಗಲೇ ಚಿರತೆಯೊಂದು ಪ್ರತ್ಯಕ್ಷಗೊಂಡು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ.

ಬೆಟ್ಟದ ಮೇಲೆ ಕುಳಿತಿರುವ ಚಿರತೆಯ ಚಲನವಲನ ಪ್ರವಾಸಿಗರ ಮೊಬೈಲಿನಲ್ಲಿ ಸೆರೆಯಾಗಿದ್ದು, ಬೆಟ್ಟದ ತಪ್ಪಲಿನಲ್ಲಿದೆ ಮಾಜಿ ಸಿ.ಎಂ.ಬಿ.ಎಸ್.ವೈ ಮನೆದೇವರ ಶ್ರೀ ಸ್ವತಂತ್ರ ಸಿದ್ದಲಿಂಗೇಶ್ವರ ದೇವಾಲಯವಿದೆ.

ಬೆಟ್ಟಕ್ಕೆ ದಿನನಿತ್ಯ ಹೆಚ್ಚಿನ ಪ್ರವಾಸಿಗರು ಬಂದು ಹೋಗಲಿದ್ದು, ಇದೀಗ ಬೆಟ್ಟದ ತಪ್ಪಲಿನಲ್ಲಿ ಚಿರತೆ ಕಾಣಿಸಿಕೊಂಡು‌ ಆತಂಕ ಸೃಷ್ಟಿಸಿದೆ.

ಚಿರತೆ ಧಾಳಿಯಿಂದ ಅವಘಢ ಸಂಭವಿಸುವ ಮುನ್ನ ಚಿರತೆಯನ್ನು ಸೆರೆ ಹಿಡಿಯುವಂತೆ ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

Continue Reading

Trending

error: Content is protected !!