Connect with us

Chamarajanagar

ಹನೂರು: ಕಾಡಾನೆ ದಾಳಿಗೆ ಮೃತಪಟ್ಟಿದ್ದ ಯುವಕನ ಕುಟುಂಬಸ್ಥರಿಗೆ ಮಾಜಿ ಶಾಸಕ ಆರ್ ನರೇಂದ್ರ ಸಾಂತ್ವನ ತಿಳಿಸಿದರು.

Published

on

ಹನೂರು ತಾಲೂಕಿನ ಕತ್ತೆ ಕಾಲ್ ಪೋಡು ಗ್ರಾಮದ ಜಡೆಯ ಎಂಬುವರ ಪುತ್ರ ಮಾದ(೨೩) ಆನೆ ದಾಳಿಗೆ ಸ್ಥಳದಲ್ಲಿಯೇ ಮೃತಪಟ್ಟಿದ್ದರು.

ಬುಧವಾರ ರಾತ್ರಿ ಕಾರ್ಯನಿಮಿತ್ತ ಹಿರಿಯಂಬಲ ಗ್ರಾಮಕ್ಕೆ ತೆರಳಿ ಕತ್ತೆ ಕಾಲ್ ಪೋಡು ಗ್ರಾಮಕ್ಕೆ ವಾಪಸ್ ಆಗುತ್ತಿದ್ದ ವೇಳೆ ಕಾಡಾನೆ ಏಕಾಏಕಿ ದಾಳಿ ನಡೆಸಿದ ಪರಿಣಾಮ ಸ್ಥಳದಲ್ಲಿ ಮೃತಪಟ್ಟಿದ್ದ. ಯುವಕ ಕಾಡಾನೆ ದಾಳಿಗೆ ಮೃತಪಟ್ಟಿರುವ ವಿಚಾರವನ್ನು ಸ್ಥಳೀಯರು ಗುರುವಾರ ಬೆಳಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.
ಮಾಹಿತಿ ತಿಳಿದ ತಕ್ಷಣ ಬೈಲೂರು ವಲಯ ಅರಣ್ಯ ಅಧಿಕಾರಿ ಪ್ರಮೋದ್ ಹಾಗೂ ಪೊಲೀಸ್ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಮೃತ ಶವವನ್ನು ಹನೂರು ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದ ಶವಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಹಸ್ತಾಂತರಿಸಿದರು.

ಮಾಜಿ ಶಾಸಕ ಆರ್ ನರೇಂದ್ರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ತಿಳಿಸಿ, ಘಟನೆ ಕುರಿತು ಮಾಹಿತಿ ಪಡೆದುಕೊಂಡರು. ನಂತರ ಡಿ ಎಫ್ ಒ ರವರ ಜೊತೆ ಮಾತನಾಡಿದ್ದು 5 ಲಕ್ಷ ಪರಿಹಾರ ನೀಡುವುದಾಗಿ ತಿಳಿಸಿದ್ದಾರೆ. ಉಳಿದ ಹತ್ತು ಲಕ್ಷ ಹಣವನ್ನು ಆದಷ್ಟು ಬೇಗ ಆದಷ್ಟು ಬೇಗ ಕೊಡಿಸುವಂತೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಮಂಜುಳಾ, ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ನವೀನ್ ಮಠದ, ಪಟ್ಟಣ ಪಂಚಾಯಿತಿ ಸದಸ್ಯ ಗಿರೀಶ್ ಮುಖಂಡರಾದ ಚಂದ್ರು, ನಿಂಗಶೆಟ್ಟಿ , ರಾಜು ಹಾಜರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Chamarajanagar

ಮಲ್ಲಿಕಾರ್ಜುನಸ್ವಾಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರವೇಶಾತಿ ಪ್ರಾರಂಭ

Published

on

ಯಳಂದೂರು ಪಟ್ಟಣದ ಮಲ್ಲಿಕಾರ್ಜುನಸ್ವಾಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರವೇಶಾತಿ ಪ್ರಾರಂಭಗೊಂಡಿದೆ ಎಂದು ಪ್ರಾಂಶುಪಾಲರಾದ ವಿಜಯ ರವರು ತಿಳಿಸಿದರು

2024-25 ನೇ ಶೈಕ್ಷಣಿಕ ಸಾಲಿನಲ್ಲಿ ರಾಜ್ಯ ಶಿಕ್ಷಣ ನೀತಿಗೆ ಎಸ್ ಇ ಪಿ ಅನುಗುಣವಾಗಿ ಮೂರು ವರ್ಷಗಳ ಬಿ.ಎ ಬಿ.ಕಾಂ. ಹಾಗೂ ಬಿ.ಬಿ.ಎ. ಪದವಿ ಕೋರ್ಸುಗಳು ಹೆಚ್ ಇ ಕೆ , ಹೆಚ್ ಪಿ ಕೆ, ಪಿ ಇ ಎಸ್, ಹೆಚ್ ಎಸ್ ಕೆ, ಈ ಕೋರ್ಸುಗಳ ಪ್ರವೇಶಾತಿಗೆ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದು

Continue Reading

Chamarajanagar

ಸಾರ್ವಜನಿಕರು ಸರ್ಕಾರದಿಂದ ಬರುತ್ತಿರುವ ಗೃಹಲಕ್ಷ್ಮಿ, ಶಕ್ತಿ, ಸುಕನ್ಯಾ ಸಮೃದ್ಧಿ ಯೋಜನೆ

Published

on

ಸಾರ್ವಜನಿಕರು ಸರ್ಕಾರದಿಂದ ಬರುತ್ತಿರುವ ಗೃಹಲಕ್ಷ್ಮಿ, ಶಕ್ತಿ, ಸುಕನ್ಯಾ ಸಮೃದ್ಧಿ ಯೋಜನೆ ಸೇರಿದಂತೆ ವಿವಿಧ ಯೋಜನೆಗಳನ್ನು ಬಳಸಿಕೊಂಡು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂದು ನೋಡಲ್ ಅಧಿಕಾರಿ ಸಕಲೇಶ್ವರ್ ಅವರು ತಿಳಿಸಿದರು.

ಅವರು ತಾಲೂಕಿನ ಎರಗಂಬಳ್ಳಿ ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ನಡೆದ ಸಾಮಾಜಿಕ ಲೆಕ್ಕ ಪರಿಶೋಧನಾ ಮತ್ತು 14 15ನೇ ಹಣಕಾಸಿನ ಯೋಜನೆ ಗ್ರಾಮ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ನರೇಗಾ ಯೋಜನೆ ಮತ್ತು ಸರ್ಕಾರದಿಂದ ಸಾವು ಸಿಗುವಂತಹ ಸವಲತ್ತುಗಳನ್ನು ಪಡೆದುಕೊಂಡು ಆರ್ಥಿಕವಾಗಿ ಮುಂದೆ ಬರಬೇಕು ಎಂದು ತಿಳಿಸಿದರು.

ಸಾಮಾಜಿಕ ಲೆಕ್ಕಪರಿಶೋಧನಾ ಅಧಿಕಾರಿ ನಾರಾಯಣ್ ಮಾತನಾಡಿ ಯರಗಂಬಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು ಗ್ರಾಮ ಪಂಚಾಯತಿ ವತಿಯಿಂದ 119 ಕಾಮಗಾರಿಗಳು, ತೋಟಗಾರಿಕೆ ಇಲಾಖೆ ವತಿಯಿಂದ 9 ಅರಣ್ಯ ಇಲಾಖೆಯಿಂದ ಒಂಬತ್ತು ಕೃಷಿ ಇಲಾಖೆಯಿಂದ ಒಂಬತ್ತು ಕಾಮಗಾರಿಗಳು ಮಾಡಲಾಗಿದ್ದು ಒಟ್ಟು 156 ಕಾಮಗಾರಿಗಳನ್ನು ಮಾಡಲಾಗಿದೆ. ಇದಕ್ಕಾಗಿ ಒಟ್ಟು ಕೂಲಿ ಮತ್ತು 18,24,927 ರೂಪಾಯಿಗಳು ಮತ್ತು ಸಾಮಗ್ರಿ ಮತ್ತು 51,82,599 ರೂಪಾಯಿಗಳು ಸೇರಿ ಒಟ್ಟು ಮೊತ್ತ 70,7,2525 ರೂಪಾಯಿಗಳನ್ನು ಖರ್ಚು ಮಾಡಲಾಗಿದೆ. ಇದಕ್ಕಾಗಿ ಒಟ್ಟು 596 ಮಾನವ ದಿನಗಳನ್ನು ನಿರ್ವಹಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ರೇಷ್ಮೆ ಇಲಾಖೆ ಸಾಮಾಜಿಕ ಅರಣ್ಯ ಇಲಾಖೆ, ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ತಮ್ಮ ಇಲಾಖೆ ಯಲ್ಲಿ ಬರುವ ವಿವಿಧ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಗ್ಯ, ಸದಸ್ಯರಾದ ಮಲ್ಲು ಸಿದ್ದರಾಜು, ಪಿಡಿಒ ಮಂಜು, ಸಿಬ್ಬಂದಿಗಳಾದ ಇಂದ್ರ ,ಸಿದ್ದರಾಮು,ಅಧಿಕಾರಿಗಳಾದ ರಂಜಿನಿ ಸೇರಿದಂತೆ ಗ್ರಾಮಸ್ಥರು ಹಾಗೂ ಇತರರು ಹಾಜರಿದ್ದರು

Continue Reading

Chamarajanagar

ಪರಿಹಾರ, ನಾಲೆ ಹಾಗೂ ಒಳ ಚರಂಡಿ   ಮುಚ್ಚಿರುವುದು, ಎ ಸಿ ಗೆ ಮನವಿ 

Published

on

ಎಸ್ ಬಿ ಹರೀಶ್ ಸಾಲಿಗ್ರಾಮ

ಸಾಲಿಗ್ರಾಮ ಪಟ್ಟಣದ ತಾಲೂಕು ಕಚೇರಿಗೆ ಆಗಮಿಸಿದ ಉಪ – ವಿಭಾಗಧಿಕಾರಿ ರವರಿಗೆ

ಕೆ – ಶಿಪ್ ರವರು ರಸ್ತೆ ಅಗಲೀಕರಣ ಕಾಮಗಾರಿ ಮಾಡುತ್ತಿದ್ದು, ಭೂಮಿ ಕಳೆದುಕೊಂಡ ಮಾಲೀಕರಿಗೆ ಪರಿಹಾರ ನೀಡಿಲ್ಲ,  ಆದರೂ ಕಾಮಗಾರಿ ಮಾಡುವುದಾಗಿ ಹೇಳುತ್ತಿದ್ದಾರೆ.    ಪಟ್ಟಣದ ಸಮೀಪ ಇರುವ  ಹಾರಂಗಿ ಕಿರು ಕಾಲುವೆಯನ್ನು  ಮುಚ್ಚಿದ್ದು, ಈ ಭಾಗದಲ್ಲಿ ಧನ – ಕರು,

ಜಾನುವಾರುಗಳಿಗೆ ತುಂಬಾ ತೊಂದರೆ ಉಂಟಾಗುತ್ತಿದೆ. ಮತ್ತು ಒಳ ಚರಂಡಿಯನ್ನು ಮುಚ್ಚಿ, ಈ ಭಾಗದಲ್ಲಿ ವಾಸಿಸುತ್ತಿರುವವರಿಗೆ ಹಿಂಸೆ ಆಗುತ್ತಿದೆ. ಕೇಳಲು ಹೋದರೆ    ಹೆದರಿಸುತ್ತಿದ್ದಾರೆ, ಸ್ಥಳ ಪರಿಶೀಲನೆ ಮಾಡಬೇಕು  ಎಂದು ಡಿ ಎಸ್ ಎಸ್  ಜಿಲ್ಲಾ ಸಂಚಾಲಕ ಕಳ್ಳಿಮುದ್ದನಹಳ್ಳಿ ಚಂದ್ರು, ಹುಣಸೂರು ಉಪ – ವಿಭಾಗಾಧಿಕಾರಿ ಮಹಮದ್ ಯಾರಿಸ್ ಸುಮೈ ರ್ ರವರಿಗೆ ಮನವಿ ಸಲ್ಲಿಸಿದರು.

ದೂರು ಸ್ವೀಕರಿಸಿ ಮಾತನಾಡಿದ ಉಪ – ವಿಭಾಗಾಧಿಕಾರಿಗಳು ಪರಿಶೀಲನೆ ಮಾಡಿ ಸಾರ್ವಜನಿಕರಿಗೆ ತೊಂದರೆ ಆಗದ ರೀತಿಯಲ್ಲಿ ಕ್ರಮ ಜರುಗಿಸಿ, ಭೂ ಮಾಲೀಕರಿಗೆ ಪರಿಹಾರ,ಕೊಡಿಸುವ ಭರವಸೆ ನೀಡಿದರು.

ತಹಸೀಲ್ದಾರ್ ನರಗುಂದ, ಉಪ – ತಹಸೀಲ್ದಾರ್ ಮಹೇಶ್,ರೈತ ಮತ್ತು ಕಾರ್ಮಿಕ ಜಿಲ್ಲಾ ಅಧ್ಯಕ್ಷ ಮಂಜುನಾಥ್, ಡಿ ಎಸ್ ಎಸ್ ಜಿಲ್ಲಾ ಸಂಚಾಲಕ ಚಂದ್ರು, ಲಕ್ಕಿಕುಪ್ಪೆ ರಮೇಶ್, ಸ್ಥಳೀಯ ವಾಸಿ ವಿನಯ್, ಹರೀಶ್ ಇನ್ನಿತರರು ಇದ್ದಾರೆ.

Continue Reading

Trending

error: Content is protected !!