Connect with us

Hassan

ಶಾಸಕರಿಂದ ೧೫ ಜನರಿಗೆ ಸಾಗುವಳಿ ಚೀಟಿ ವಿತರಣೆ

Published

on

ಹಾಸನ: ನಗರದ ರಿಂಗ್ ರಸ್ತೆ ಬಳಿ ಇರುವ ಕ್ಷೇತ್ರದ ಶಾಸಕರಾದ ಹೆಚ್.ಪಿ. ಸ್ವರೂಪ್ ನಿವಾಸದಲ್ಲಿ ಶುಕ್ರವಾರ ಬೆಳಿಗ್ಗೆ ಹಾಸನ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಗೆ ಸೇರುವ ಉಗನೆ ಗ್ರಾಮ ಪಂಚಾಯಿತಿ ದೊಡ್ಡಗದವಳ್ಳಿ ೧೫ ಜನ ಫಲಾನುಭವಿ ಗ್ರಾಮಸ್ಥರಿಗೆ ಸಾಗುವಳಿ ಚಿಟಿ ವಿತರಿಸಿದರು.

ದೊಡ್ಡಗದವಳ್ಳಿಯ ೧೫ ಜನ ಗ್ರಾಮಸ್ಥರಿಗೆ ಅನೇಕ ದಿನಗಳಿಂದ ಸಾಗುವಳಿ ಚೀಟಿ ಸಿಗದೆ ತೊಂದರೆ ಅನುಭವಿಸುತ್ತಿದ್ದರು. ಈ ಬಗ್ಗೆ ನನಗೆ ದೂರು ಬಂದ ಹಿನ್ನಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿ ಸಾಗುವಳಿ ಚೀಟಿ ನೀಡಿರುವುದಾಗಿ ಇದೆ ವೇಳೆ ಮಾಧ್ಯಮಕ್ಕೆ ಮಾಹಿತಿ ನೀಡಿದರು. ಇದೆ ವೇಳೆ ಜೆಡಿಎಸ್ ಮುಖಂಡರು, ಗ್ರಾಮಸ್ಥರು, ಅಧಿಕಾರಿಗಳು ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Hassan

ಮಾ.17 ರಿಂದ 19 ರ ವರೆಗೂ ಸೊಂಪುರದ ಶ್ರೀ ಪಾರ್ವತಿ ನಂಜುಂಡೇಶ್ವರ ಸ್ವಾಮಿಯವರ ಜಾತ್ರಾ ಮಹೋತ್ಸವವರದಿ ಸತೀಶ್ ಚಿಕ್ಕಕಣಗಾಲು

Published

on

ಆಲೂರು : ತಾಲ್ಲೂಕಿನ ಸೊಂಪುರ ಗ್ರಾಮದಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀ ನಂಜುಂಡೇಶ್ವರಸ್ವಾಮಿ ಮತ್ತು ಪಾರ್ವತಮ್ಮ ದೇವಿಯವರ ಗಿರಿಜಾ ಕಲ್ಯಾಣೋತ್ಸವ ಹಾಗೂ ಜಾತ್ರಾ ಮಹೋತ್ಸವವನ್ನು ಮಾರ್ಚ್‌ 17 ರಿಂದ ಮಾರ್ಚ್‌ 19 ರವರೆಗೆ ನೆರವೇರಲಿದ್ದು ಭಕ್ತರು ಪ್ರತಿ ವರ್ಷದಂತೆ ಈ ವರ್ಷವೂ
ಹೆಚ್ಚಿನ ಸಂಖ್ಯೆಯಲ್ಲಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ನಂಜುಂಡೇಶ್ವರಸ್ವಾಮಿ ದೇವಾಲಯದ ಸೇವಾ ಟ್ರಸ್ಟ್ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಮಾ.18 ನೇ ಸೋಮವಾರ ರಾತ್ರಿ 8.30 ರಿಂದ ಸೊಂಪುರ ಗ್ರಾಮದಿಂದ ಶ್ರೀ ನಂಜುಂಡೇಸ್ವರಸ್ವಾಮಿ ಮತ್ತು ಪಾರ್ವತಿ ದೇವಿಯವರ ಕಳಸದೊಂದಿಗೆ ಹಾಗೂ ಸುತ್ತಮುತ್ತಲಿನ ಗ್ರಾಮದ ದೇವರುಗಳ ಕಳಸದೊಂದಿಗೆ ಕಲಾತಂಡಗಳಾದ ವೀರಗಾಸೆ ನೃತ್ಯ,ನಂದಿಧ್ವಜ,ಕೀಲು ಕುದುರೆ ಕುಣಿತ ಉತ್ಸವದೊಂದಿಗೆ ಶ್ರೀ ನಂಜುಂಡೇಸ್ವರಸ್ವಾಮಿ ಬೆಟ್ಟಕ್ಕೆ ಆಗಮನದ ನಂತರ ಎಲ್ಲಾ ದೇವರುಗಳನ್ನು ಬರಮಾಡಿಕೊಂಡು ಅದೇ ದಿನ ರಾತ್ರಿ 11 ಘಂಟೆಯಿಂದ ಶ್ರೀ ನಂಜುಂಡೇಶ್ವರ ಮತ್ತು ಪಾರ್ವತಿ ದೇವಿಯವರ ಮದುವೆಯ ಎಲ್ಲಾ ಶಾಸ್ತ್ರಗಳನ್ನು ಬೆಳಗಿನ ಜಾವದ ತನಕ ನಡೆಸಲಾಗುವುದು. ಮಾ.19 ನೇ ಮಂಗಳವಾರ ಬೆಳಿಗ್ಗೆ 4 ಘಂಟೆಯಿಂದ ಹಲಿಗೆ ದೇವರ ಕುಣಿತ ಹಾಗೂ ವೀರಗಾಸೆ ನೃತ್ಯದ ಮೂಲಕ ಸ್ವಾಮಿಯವರ ಕಳಸದೊಂದಿಗೆ ಪಾದ ಮಂಟಪ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿ ಸುಮಾರು ಬೆಳಿಗ್ಗೆ 7 ಗಂಟೆಗೆ ಬೆಟ್ಟಕ್ಕೆ ಆಗಮಿಸಿ ಮಾ.19 ನೇ ಮಂಗಳವಾರ ಬೆಳಿಗ್ಗೆ 8 ಗಂಟೆಗೆ ಶ್ರೀ ವೀರಭದ್ರೇಶ್ವರಸ್ವಾಮಿಯವರ (ದೊಡ್ಡ ಕಣಗಾಲ್) ಕೆಂಡತ್ಸೋವ ವಿದಿವಧಾನಗಳೊಂದಿಗೆ ಶ್ರೀ. ಶ್ರೀ ಶಿವಾಚಾರ್ಯ ಮಹಾಸ್ವಾಮಿಗಳು ಶ್ರೀ ಪುಷ್ಪಗಿರಿ ಮಹಾ ಸಂಸ್ಥಾನ ಮಠ ಹಳೆಬೇಡು ಇವರ ದಿವ್ಯ ಸಾನಿಧ್ಯದಲ್ಲಿ ಕೆಂಡೋತ್ಸವ ನಡೆಸಲಾಗುವುದು.

ಕಾರ್ಯಕ್ರಮಕ್ಕೆ ಹಾಸನ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಶ್ರೀ ಶಂಭುನಾಥ ಮಹಾಸ್ವಾಮಿಗಳು, ಸಂಸದ ಪ್ರಜ್ವಲ್ ರೇವಣ್ಣ, ಶಾಸಕ ಸಿಮೆಂಟ್ ಮಂಜುನಾಥ್, ಹಾಸನ ವಿಧಾನಸಭಾ ಕ್ಷೇತ್ರದ ಶಾಸಕ ಸ್ವರೂಪ್, ಮಾಜಿ ಶಾಸಕ ಪ್ರೀತಮ್ ಜೆ ಗೌಡ, ಹೆಚ್.ಕೆ.ಕುಮಾರಸ್ವಾಮಿ, ಹೆಚ್.ಎ.ವಿಶ್ವನಾಥ್, ಬಿ.ಆರ್.ಗುರುದೇವ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿದ್ದೇಶ್ ನಾಗೇಂದ್ರ, ತಾಲೂಕು ಅಧ್ಯಕ್ಷ ಹುಲ್ಲಹಳ್ಳಿ ನಾಗರಾಜ್, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಕೆ.ಎಸ್.ಮಂಜೇಗೌಡ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.

Continue Reading

Hassan

ಮದುವೆಗೆ ನಿರಾಕರಿಸಿದ ಪ್ರಿಯಕರ ಮನನೊಂದು ಯುವತಿ ಆತ್ಮಹತ್ಯೆ

Published

on

ಹಾಸನ : ಚನ್ನರಾಯಪಟ್ಟಣ ತಾಲ್ಲೂಕಿನ ಅಕ್ಕನಹಳ್ಳಿಕೂಡು ಗ್ರಾಮದ ಅಮೃತ (19) ಮೃತ ಯುವತಿ

ಹಾಸನ ತಾಲ್ಲೂಕಿನ, ಶಾಂತಿಗ್ರಾಮದಲ್ಲಿ ಘಟನೆ

ಚನ್ನರಾಯಪಟ್ಟಣ ತಾಲ್ಲೂಕಿನ, ಹಿರೀಸಾವೆ ಹೋಬಳಿ ಮಸಕನಹಳ್ಳಿ ಗ್ರಾಮದ ದಿಲೀಪ್ ಎಂಬಾತನ ವಿರುದ್ದ ಆರೋಪ

ಹಾಸನದ ಗೋಕುಲದಾಸ್ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ಅಮೃತ ಹಾಗೂ ದಿಲೀಪ್

ಒಂದೂವರೆ ವರ್ಷದಿಂದ ಪ್ರೀತಿಸುತ್ತಿದ್ದ ಅಮೃತ, ದಿಲೀಪ್

ಎರಡು ತಿಂಗಳ ಹಿಂದೆ ಅಮೃತ ಪೋಷಕರಿಗೆ ತಿಳಿದಿದ್ದ ಪ್ರೀತಿಯ ವಿಷಯ

ಮಾ.11 ರಂದು ದಿಲೀಪ್‌ನನ್ನು ಮನೆಗೆ ಬರಲು ಹೇಳಿದ್ದ ಅಮೃತ ಪೋಷಕರು

ಅಂದು ನುಗ್ಗೇಹಳ್ಳಿಯಲ್ಲಿ ಅಮೃತಳನ್ನು ಭೇಟಿ ಮಾಡಿದ್ದ ದಿಲೀಪ್

ನಿನ್ನನ್ನು ಮದುವೆಯಾಗಲು ಸಾಧ್ಯವಿಲ್ಲ, ನನಗೂ ನಿನಗೂ ಯಾವ ಸಂಬಂಧವಿಲ್ಲ

ನಮ್ಮಿಬ್ಬರ ಜಾತಿ ಬೇರೆ-ಬೇರೆ ಎಂದು ಹೇಳಿ ಅಲ್ಲಿಂದ ವಾಪಾಸ್ಸಾಗಿದ್ದ ದಿಲೀಪ್

ನಂತರ ಕೆಲಸಕ್ಕೆ ಬರಲು ಹಾಸನದ ಬಸ್ ಹತ್ತಿ ಹೊರಟಿದ್ದ ಅಮೃತ

ಆನಂತರ ನಾನು ಕೆಲಸಕ್ಕೆ ಬರುವುದಿಲ್ಲ ಎಂದು ಸ್ನೇಹಿತೆಗೆ ತಿಳಿಸಿ ಶಾಂತಿಗ್ರಾಮದಲ್ಲಿ ಬಸ್ ಇಳಿದಿದ್ದ ಅಮೃತ

ಮಗಳು ಮನೆಗೆ ಬರದೆ ಇದ್ದಾಗ ಎಲ್ಲೆಡೆ ಹುಡುಕಾಡಿ ನುಗ್ಗೇಹಳ್ಳಿ ಠಾಣೆಗೆ ಮಿಸ್ಸಿಂಗ್ ಕಂಪ್ಲೆಂಟ್ ನೀಡಿದ್ದ ಅಮೃತ ಪೋಷಕರು

ನುಗ್ಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ನಾಪತ್ತೆ ಪ್ರಕರಣ

ಇಂದು ಶಾಂತಿಗ್ರಾಮ ಕೆರೆಯಲ್ಲಿ ತೇಲುತ್ತಿದ್ದ ಅಮೃತ ಶವ

ಪ್ರೀಯಕರ ಕೈಕೊಟ್ಟ ಹಿನ್ನಲೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಮೃತ ಯುವತಿ ಕುಟುಂಬಸ್ಥರ ಆರೋಪ

ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ

ಶಾಂತಿಗ್ರಾಮ ಠಾಣೆಯಲ್ಲಿ ಪ್ರಕರಣ ದಾಖಲು

Continue Reading

Hassan

ಡಿಕ್ಕಿ ರಭಸಕ್ಕೆ ಗೂಡ್ಸ್ ಆಟೋ ನಜ್ಜುಗುಜ್ಜು

Published

on

ಹಾಸನ : ಗೂಡ್ಸ್ ಆಟೋಗೆ ಹಿಂಬದಿಯಿಂದ ಮಿನಿ ಕ್ಯಾಂಟರ್ ಡಿಕ್ಕಿ

ಸ್ಥಳದಲ್ಲೇ ಓರ್ವ ಸಾವು, ಓರ್ವ ಮಹಿಳೆಗೆ ಗಂಭೀರ ಗಾಯ

ಇಬ್ರಾಹಿಂ (45) ಸ್ಥಳದಲ್ಲೇ ಮೃತಪಟ್ಟ ವ್ಯಕ್ತಿ

ಹಾಸನ ಜಿಲ್ಲೆ, ಚನ್ನರಾಯಪಟ್ಟಣ ತಾಲ್ಲೂಕಿನ, ಹಿರಿಸಾವೆ ಬಳಿ ಘಟನೆ

ಚನ್ನರಾಯಪಟ್ಟಣದ ಬಾಗೂರು ರಸ್ತೆಯ ನಿವಾಸಿ ಇಬ್ರಾಹಿಂ

ಪತ್ನಿ ಜೊತೆ ತಮ್ಮ ಗೂಡ್ಸ್ ಆಟೋದಲ್ಲಿ ಬೆಂಗಳೂರು ಕಡೆಗೆ ತೆರಳುತ್ತಿದ್ದ ಇಬ್ರಾಹಿಂ

ಹಿಂಬದಿಯಿಂದ ಇಬ್ರಾಹಿಂ ಆಟೋಗೆ ವೇಗವಾಗಿ ಬಂದು ಡಿಕ್ಕಿ ಹೊಡೆದ ಮಿನಿ ಕ್ಯಾಂಟರ್

ಇಬ್ರಾಹಿಂ ಸ್ಥಳದಲ್ಲೇ ಸಾವು, ಪತ್ನಿ ಸ್ಥಿತಿ ಗಂಭೀರ

ಗಾಯಾಳುವಿಗೆ ಚನ್ನರಾಯಪಟ್ಟಣ ಆಸ್ಪತ್ರೆಯಲ್ಲಿ ಚಿಕಿತ್ಸೆ

ಡಿಕ್ಕಿ ರಭಸಕ್ಕೆ ಗೂಡ್ಸ್ ಆಟೋ ನಜ್ಜುಗುಜ್ಜು

ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ

ಹಿರಿಸಾವೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ

Continue Reading

Trending

error: Content is protected !!