Connect with us

Mysore

ನನ್ನ  ಬೆನ್ನೆಲುಬಾಗಿ ಇರುವ  ಕಾರ್ಯ ಕರ್ತರನ್ನು   ಮರೆಯದೆ, ಸೇವಕನಾಗಿ ಕೆಲಸ ಮಾಡುವೆ : ಶಾಸಕ ಡಿ. ರವಿಶಂಕರ್

Published

on

ವರದಿ : ಎಸ್ ಬಿ ಹರೀಶ್ ಸಾಲಿಗ್ರಾಮ

ಸಾಲಿಗ್ರಾಮ ತಾಲೂಕಿನ   ತಂದ್ರೆ ಗ್ರಾಮದ ದೇವಿರಮ್ಮ ದೇವಾಲಯ ಆವರಣದಲ್ಲಿ

ಕೃತಜ್ಞತಾ  ಸಮಾರೋಪ ಸಮಾರಂಭವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟನೆ ಮಾಡಿ  ಮಾತನಾಡಿದ ಅವರು  ಚುನಾವಣೆ ಸಮಯದಲ್ಲಿ ಅಪಹಾಸ್ಯ ಮಾಡಿ, ಗೇಲಿ ಮಾಡಿ ವಿರೋಧಿಯನ್ನು ಹೆದಿರಿಸಿ, ಗೆಲ್ಲಲು ಸಾಧ್ಯವೇ ಇಲ್ಲಾ ಎಂದು ನನಗೆ ಭಯ ಹುಟ್ಟಿಸಿದ್ದರು. ಆದರೆ ನನ್ನ ಜೊತೆ ಪ್ರಾರಂಭದಿಂದಲೂ ಇದ್ದು, ಸಂಪೂರ್ಣ ಸಹಕಾರ ನೀಡಿದವರು ನನ್ನ ಕಾರ್ಯಕರ್ತರು, ಮಳೆ, ಚಳಿ, ಗಾಳಿಯನ್ನು ಲೆಕ್ಕಿಸದೆ, ಸ್ಥಿತಿ ಗತಿಗಳನ್ನು ಅರಿತು, ಧೈರ್ಯವನ್ನು ತುಂಬಿದ್ದಾರೆ. ಗೆಲುವಿನ ಭರವಸೆ ಯನ್ನು ನೀಡಿದ್ದರು.   ಮುಖ್ಯವಾಗಿ ಗೆಲುವಿನ ಸಾಧನೆಗೆ  ಮತದಾರರು, ಅವರು ನೀಡಿದ ಭಿಕ್ಷೆಯಿಂದ ನಾನು ಒಬ್ಬ ಶಾಸಕನಾಗಿ ಅಲ್ಲಾ, ನಿಮ್ಮಗಳ ಸೇವಕನಾಗಿ ಕೆಲಸ ಮಾಡುವೆ,  ಇದರ  ಸಾಕ್ಷಿಯಾಗಿ  ದೇವಾಲಯದ ಮುಂದೆ ತಾಲೂಕಿನ ಜನತೆಗೆ  ಸಾಷ್ಟoಗ ನಮಸ್ಕಾರ ಮಾಡುತ್ತಿದ್ದೇನೆ   ಎಂದರು.

ಅವಳಿ ತಾಲೂಕಿಗೆ 200 ಕೋಟಿಗೂ ಅಧಿಕವಾಗಿ ಅನುದಾನವನ್ನು ತಂದಿದ್ದೇನೆ, ನಮ್ಮ ಸರ್ಕಾರದ ಅವಧಿಯಲ್ಲಿ ಇನ್ನು ಹೆಚ್ಚಿನ ಅನುದಾನ ತಂದು ಅಭಿವೃದ್ಧಿ ಪಡಿಸುತ್ತೇನೆ, ಸಮಯವಕಾಶವನ್ನು ನನಗೆ  ಕೊಟ್ಟು, ತಾಳ್ಮೆಯಿಂದ ಇರಬೇಕು ಇದು ನನ್ನ ಮನವಿ, ಮತ್ತು ಇನ್ನು ಹತ್ತು, ಹಲವಾರು ಯೋಜನೆಗಳಿವೆ , ಹಂತ ಹಂತವಾಗಿ ಅಭಿವೃದ್ಧಿ ಪಡಿಸುತ್ತೇನೆ   ಎಂದು ಹೇಳಿದರು.

ಕೆ ಪಿ ಸಿ ಸಿ ಸದಸ್ಯ ದೊಡ್ಡಸ್ವಾಮಿಗೌಡ ಮಾತನಾಡಿ ನಮಗೆ ಸರ್ವ ಜನಾಂಗವೂ ಕೂಡ ಮತ ಕೊಟ್ಟು ಅಧಿಕ ಮತ ನೀಡಿ ಗೆಲ್ಲಿಸಿದ್ದೀರಾ, 20 ವರ್ಷಗಳಿಂದಲೂ   ಗೆಲ್ಲಲು ಸಾಧ್ಯವಾಗಿರಲಿಲ್ಲ ಈಗ ನಮಗೆ ಸುವರ್ಣ ಅವಕಾಶ ಕಲ್ಪಿಸಿ ಕೊಟ್ಟಿದ್ದೀರಾ, ಬೇರೆಯವರ ರೀತಿ ನಾವು  ಆ ಊರಿನಲ್ಲಿ ಓಟು ಬಂದಿಲ್ಲ, ಈ ಊರಿನಲ್ಲಿ ಕಡಿಮೆ ಮತ ಬಂದಿದೆ ಎಂದುಕೊಂಡು ದ್ವೇಷದ ರಾಜಕಾರಣದಿಂದ ಗ್ರಾಮಗಳನ್ನು  ಅಭಿವೃದ್ಧಿ ಮಾಡದೆ ಇರುವುದಿಲ್ಲ, ಯಾವ ಗ್ರಾಮಗಳು ಅಭಿವೃದ್ಧಿ ಹೊಂದಿಲ್ಲ ಅಂತಹ ಗ್ರಾಮಗಳು ಸೇರಿದಂತೆ ಇತರೆ ಗ್ರಾಮಗಳನ್ನು ಅಭಿವೃದ್ಧಿ ಪತದತ್ತ ಸಾಗಿ, ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇವೆ   ಎಂದು ತಿಳಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು  ಮೈಸೂರು ಜಿಲ್ಲಾ ಗ್ರಾಮಾಂತರ ಅಧ್ಯಕ್ಷರಾದ ಡಾ: ಬಿ ಜೆ ವಿಜಯ್ ಕುಮಾರ್   ವಹಿಸಿದ್ದರು.  ಕೆ ಪಿ ಸಿ ಸಿ ಸದಸ್ಯ  ದೊಡ್ಡಸ್ವಾಮೀಗೌಡ, ಲೋಕಸಭಾ ಕ್ಷೇತ್ರದ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು), ವಿಧಾನಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಮಂಡ್ಯ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಗಂಗಾದರ್ , ತಾ ಪಂ ಮಾಜಿ ಅಧ್ಯಕ್ಷ ಮಂಜು, ಹಾಡ್ಯ ಮಹದೇವಸ್ವಾಮಿ,  ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಂಠಿ ಕುಮಾರ್, ಮಹಿಳಾ ಅಧ್ಯಕ್ಷೆ ಲತಾ ರಾಣಿ, ,ಮುಖಂಡರುಗಳಾದ ಎಸ್ ಎಸ್ ಸಂದೇಶ್, ಮಿರ್ಲೆ ನಂದೀಶ್, ಗಂಧನಹಳ್ಳಿ ವೆಂಕಟೇಶ್, ಶಾಂತರಾಜು, ಪುರಸಭೆ ಸದಸ್ಯ ಕೋಳಿ ಪ್ರಕಾಶ್, ಅಂಕನಲ್ಲಿ ಗೋವಿಂದೇಗೌಡ, ಸಣ್ಣಪ್ಪ, ಧರ್ಮ, ಕುಮಾರಸ್ವಾಮಿ    ಸಿ ಪಿ ರಮೇಶ್,   ಮರ್ಚಳ್ಳಿ ಶಿವರಾಮ್, ರಾಜಯ್ಯ,  ಸೇರಿದಂತೆ ಇನ್ನಿತರರು ಇದ್ದಾರೆ

Continue Reading
Click to comment

Leave a Reply

Your email address will not be published. Required fields are marked *

Mysore

ನಂಜನಗೂಡು ತಾಲ್ಲೂಕಿನ ತಗಡೂರಿನಲ್ಲಿ ವಾಂತಿ-ಭೇದಿ ಪ್ರಕರಣ — ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ ಮಹದೇವಪ್ಪ ಭೇಟಿ

Published

on

ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣ ವಿಧಾನಸಭಾ ಕ್ಷೇತ್ರದ ನಂಜನಗೂಡು ತಾಲ್ಲೂಕಿನ ತಗಡೂರು ಗ್ರಾಮದಲ್ಲಿ ಗ್ರಾಮಸ್ಥರಿಗೆ ವಾಂತಿಭೇದಿ ಕಾಣಿಸಿಕೊಂಡು ಸುಮಾರು 120ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲಾಗಿದ್ದರು. ಗ್ರಾಮದಲ್ಲಿ ಕಲುಷಿತ ನೀರು ಸೇವನೆಯಿಂದಾಗಿ ಕಾಲರಾ ರೋಗವು ಆವರಿಸಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ ಮಹದೇವಪ್ಪ ತಗಡೂರು ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರಿಗೆ ಧೈರ್ಯ ತುಂಬಿದ್ದಾರೆ.


ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ. ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ಗ್ರಾಮಕ್ಕೆ ಭೇಟಿ ನೀಡಲು ಸಾಧ್ಯವಾಗಲಿಲ್ಲ. ದೂರವಾಣಿ ಮೂಲಕ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದೆ ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೀತಿ ಸಮಿತಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಸೂಚನೆ ನೀಡಿದರು. ಮುಖ್ಯಮಂತ್ರಿಗಳ ಆದೇಶದ ಮೇರೆಗೆ ಬಂದಿದ್ದೇನೆ. ಮಳೆಗಾಲ ಇನ್ನು ಕಡಿಮೆಯಾಗಿಲ್ಲ ಕೂಡಲೇ ಅಧಿಕಾರಿಗಳು ಗ್ರಾಮದ ಎಲ್ಲಾ ಚರಂಡಿಗಳನ್ನು ಸ್ವಚ್ಛಗೊಳಿಸಿ ಬ್ಲೇಚಿಂಗ್ ಪೌಡರ್ ಸಿಂಪಡಣೆ ಮಾಡಬೇಕು. ಗ್ರಾಮಸ್ಥರಿಗೆ ಮುಂಜಾಗ್ರತೆ ಕ್ರಮಗಳನ್ನು ಅನುಸರಿಸುವಂತೆ ಸಲಹೆ ನೀಡಬೇಕು. ಸ್ಥಗಿತಗೊಂಡಿರುವ ಜಲಜೀವನ್ ಮಿಷನ್ ಯೋಜನೆಯ ಕಾಮಗಾರಿಯನ್ನು ಪೂರ್ಣಗೊಳಿಸಿ ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರನ್ನು ನೀಡಬೇಕು. ಈಗಾಗಲೇ ಮೂರು ಟ್ಯಾಂಕರ್ ಗಳಿಂದ ಶುದ್ಧ ಕುಡಿಯುವ ನೀರನ್ನು ಗ್ರಾಮಕ್ಕೆ ಸರಬರಾಜು ಮಾಡಲಾಗುತ್ತಿದೆ. ಗ್ರಾಮಸ್ಥರಿಗೆ ಆರೋಗ್ಯ ಸಮಸ್ಯೆ ಆಗದಂತೆ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಜಿಪಂ ಸಿಇಒ ಗಾಯಿತ್ರಿ, ತಹಶೀಲ್ದಾರ್ ಶಿವಕುಮಾರ್ ಕಾಸ್ನೂರ್, ಗ್ರಾಪಂ ಅಧ್ಯಕ್ಷೆ ಚಂದ್ರವತಿ ಬಸವರಾಜು, ಉಪಾಧ್ಯಕ್ಷ ಗುರುಮಲ್ಲೇಶ್, ಜಿಲ್ಲಾ ಆರೋಗ್ಯ ಅಧಿಕಾರಿ ಕುಮಾರಸ್ವಾಮಿ, ಯುವ ಮುಖಂಡರಾದ ಗಾರ್ಡನ್ ಮಹೇಶ್, ಶಿವರಾಂ, ಆಸ್ಪತ್ರೆಯ ವೈದ್ಯಾಧಿಕಾರಿ ಪ್ರಭು ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

ನಂಜನಗೂಡು ಮಹದೇವಸ್ವಾಮಿ ಪಟೇಲ್.

Continue Reading

Mysore

ವೃತ್ತಿನಿರತ ಛಾಯಾಗ್ರಾಹಕನ ಮೇಲೆ ಹಲ್ಲೆ: ಕಾನೂನು ಕ್ರಮಕ್ಕೆ ತಾ.ಅಧ್ಯಕ್ಷ ವಿಶ್ವನಾಥ್ ಸರ್ಕಾರಕ್ಕೆ ಒತ್ತಾಯ

Published

on

ವೃತ್ತಿನಿರತ ಛಾಯಾಗ್ರಾಹಕನ ಮೇಲೆ ಹಲ್ಲೆ: ಕಾನೂನು ಕ್ರಮಕ್ಕೆ ತಾ.ಅಧ್ಯಕ್ಷ ವಿಶ್ವನಾಥ್ ಸರ್ಕಾರಕ್ಕೆ ಒತ್ತಾಯ

 

ಸಾಲಿಗ್ರಾಮ  : ಬೆಂಗಳೂರಿನಲ್ಲಿ ವೃತ್ತಿ ನಿರತ ಛಾಯಾಗ್ರಾಹಕನ ಮೇಲೆ ಹಲ್ಲೆ ನಡೆಸಿದ ಪುಂಡರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕೃಷ್ಣರಾಜನಗರ ತಾಲೂಕು ಫೋಟೋ ಮತ್ತು ವಿಡಿಯೋಗ್ರಾಫರ್ ಸಂಘದ ತಾ.ಅಧ್ಯಕ್ಷ ವಿಶ್ವನಾಥ್ ಸರ್ಕಾರಕ್ಕೆ ಒತ್ತಾಯಿಸಿದರು.
ಪಟ್ಟಣದ ತಾಲೂಕು ಆಡಳಿತ ಕಚೇರಿಯ ಮುಂಭಾಗ ಧರಣಿ ಕೈಗೊಂಡು ಗ್ರೇಡ್-೨ ತಹಸೀಲ್ದಾರ್ ಬಾಲಸುಬ್ರಮಣ್ಯ ಹಾಗೂ ಶಿರಸ್ತೆದಾರ್ ಅಕ್ರಂ ಭಾಷ ಅವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಅಧ್ಯಕ್ಷರು ಮೇ.೧೮ ರಂದು ಬೆಂಗಳೂರಿನ ಶಿವಾಜಿನಗರದ ಶಮ್ಸ್ ಕಲ್ಯಾಣ ಮಂಟಪದಲ್ಲಿ

ನಡೆಯುತ್ತಿದ್ದ ಮದುವೆ ಕಾರ್ಯಕ್ರಮದ ವಿಡಿಯೋ ಚಿತ್ರೀಕರಣಕ್ಕೆ ಹೋಗಿದ್ದ ಛಾಯಾಗ್ರಾಹಕನ ಮೇಲೆ ಕ್ಷುಲ್ಲಕ ಕಾರಣಕ್ಕೆ ಮದುವೆ ಸಮಾರಂಭದಲ್ಲಿದ್ದ ಕೆಲವು ಪುಂಡರು ಮನಬಂದoತೆ ಹಲ್ಲೆ ನಡೆಸಿದವರ ವಿರುದ್ಧ ಸಂಘದ ಪದಾಧಿಕಾರಿಗಳು ನಿರ್ದೇಶಕರು ಹಾಗೂ ಸದಸ್ಯರು ತಾಲೂಕು ಆಡಳಿತ ಸೌಧದ ಆವರಣದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆಯ ಎದುರಿಗೆ ಧರಣಿ ಕುಳಿತು ಪ್ರತಿಭಟನೆ ನಡೆಸಿದರು. ಹೊಟ್ಟೆಪಾಡಿಗಾಗಿ ವಿಡಿಯೋ ಚಿತ್ರೀಕರಣ ಮಾಡುವ ಛಾಯಾಗ್ರಾ ಹಕನ ಮೇಲೆ ಹಲ್ಲೆ ಮಾಡಿರುವುದು ಅಮಾನವೀಯ ಘಟನೆ ಯಾಗಿದ್ದು, ಇದರಿಂದ ಛಾಯಾಗ್ರಹಕರಿಗೆ ಯಾವುದೇ ರಕ್ಷಣೆ ಇಲ್ಲ ಎನ್ನುವುದು ಸಾಬೀತಾಗಿದೆ ಎಂದು ತಮ್ಮ ಆಕ್ರೋಶವನ್ನು ಹೊರಹಾಕಿದರು.


ಈ ಕೃತ್ಯವನ್ನು ಖಂಡಿಸಿ ರಾಜ್ಯ ಛಾಯಾಗ್ರಹಕರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಲ್ಲೆ ನಡೆಸಿದ ಪುಂಡರ ಮೇಲೆ ಪೊಲೀಸರಿಗೆ ದೂರು ನೀಡಿದ್ದು, ಈ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಮತ್ತು ಹಲ್ಲೆ ಮಾಡಿದ ಪುಂಡರನ್ನು ಕೂಡಲೇ ಬಂಧಿಸಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಛಾಯಾಗ್ರಹಕರಿಗೆ ಸೂಕ್ತ ರಕ್ಷಣೆ ದೊರಕಿಸಿಕೊಡಬೇಕು ಹಾಗೂ ಹಲ್ಲೆಗೊಳಾಗಿರುವ ಛಾಯಾಗ್ರಹಕನಿಗೆ ಸರ್ಕಾರದ ವತಿಯಿಂದ ಸೂಕ್ತ ಪರಿಹಾರ ನೀಡಬೇಕು ಹಾಗೂ ಇಂತಹ ಪ್ರಕರಣಗಳು ರಾಜ್ಯದಲ್ಲಿ ಮರುಕಳಿಸದಂತೆ ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಸರ್ಕಾರಕ್ಕೆ ಎಚ್ಚರಿಸಿದರು.
ಈ ಪ್ರತಿಭಟನೆಯಲ್ಲಿ ಸಂಘದ ಉಪಾಧ್ಯಕ್ಷರುಗಳಾದ ಎಂ.ಪಿ.ಮಹದೇವ, ಸಂತೋಷ್, ಕಾರ್ಯದರ್ಶಿ ಶ್ರೀನಿವಾಸ್‌ಗೌಡ, ಪದಾಧಿಕಾರಿಗಳಾದ ಯೋಗೇಶ್, ಜಯರಾಜ್, ಚೀರನಹಳ್ಳಿ ರವಿ, ನಿರ್ದೇಶಕರುಗಳಾದ ಉಮಾಶಂಕರ್, ಶುಭಂರವಿ, ಮಂಜುನಾಥ್, ರಘುಚಂದಗಾಲು, ವಿಜಯ್, ಸದಸ್ಯರಾದ ಶಿಲ್ಪಶ್ರೀನಿವಾಸ್, ತಿಪ್ಪೂರುರವಿ, ಶ್ರೀನಿವಾಸ್, ಸಾರಾ.ನಾಗೇಶ್, ಮಧುವನಹಳ್ಳಿ ರಘು, ದಯನಂದ್, ರಕ್ಷಿತ್, ಸುನೀಲ್, ಶರತ್, ಸುನೀಲ್ ಮೊದಲಿಯರ್ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

Continue Reading

Mysore

ಅಡುಗೆ ಅನಿಲ ಸೋರಿಕೆಯಿಂದ ಮೃತಪಟ್ಟ ಕುಟುಂಬಕ್ಕೆ ಸಾಂತ್ವಾನ ಹೇಳಿದ ಡಾ.ಹೆಚ್.ಸಿ.ಮಹದೇವಪ್ಪ

Published

on

ಮೈಸೂರು,ಮೇ.22: ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ ಅವರು ಯರಗನಹಳ್ಳಿಯಲ್ಲಿ ಅಡುಗೆ ಅನಿಲ ಸೋರಿಕೆಯಿಂದ ಒಂದೇ ಕುಟುಂಬದ ನಾಲ್ಕು ಮಂದಿ ಮೃತಪಟ್ಟ ವಿಷಯ ತಿಳಿದು ಇಂದು ಜೆಎಸ್ಎಸ್ ಆಸ್ಪತ್ರೆಗೆ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವಾನ ಹೇಳಿದರು‌.

ಈ ವೇಳೆ ಆಸ್ಪತ್ರೆಯ ಶವಗಾರದಲ್ಲಿ ಇರಿಸಿದ್ದ ಮೃತದೇಹಗಳನ್ನು ವೀಕ್ಷಿಸಿ ತೀವ್ರ ಸಂತಾಪ ವ್ಯಕ್ತಪಡಿಸಿದ ಸಚಿವರು, ಘಟನೆ ಕುರಿತು ಸಂಬಂಧಿಕರಿಂದ ಮಾಹಿತಿ ಪಡೆದುಕೊಂಡರು.

ಬಳಿಕ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ಸರ್ಕಾರದ ವತಿಯಿಂದ ತಲಾ ಮೂರು ಲಕ್ಷ ರೂ. ಪರಿಹಾರ ಧನ ನೀಡುವುದಾಗಿ ಸ್ಥಳದಲ್ಲಿಯೇ ಘೋಷಿಸಿದರು.

ಈ ಸಂದರ್ಭದಲ್ಲಿ ಮುಡಾ ಅಧ್ಯಕ್ಷ ಮರಿಗೌಡ ಅವರು ಸೇರಿದಂತೆ ಮುಂತಾದವರು ಇದ್ದರು.

Continue Reading

Trending

error: Content is protected !!