Connect with us

Uncategorized

ಆರ್. ಧ್ರುವನಾರಾಯಣ್ ಸಾಹೇಬರ ಮೊದಲನೇ ವರ್ಷದ ನೆನಪಿನರ್ಥವಾಗಿ ‘ವಿಚಾರ ಸಂಕಿರಣ’

Published

on

ನಂಜನಗೂಡು ಮಾ.11

ನಗರದ ಡಾ. ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ಅಹಿಂದ ಸಮಾನ ಮನಸ್ಕರ ವೇದಿಕೆ ವತಿಯಿಂದ ಮಾಜಿ ಸಂಸದ ದಿವಂಗತ ಆರ್.ಧ್ರುವನಾರಾಯಣ್ ರವರ ಮೊದಲನೇ ವರ್ಷದ ನೆನಪಿನ ಅಂಗವಾಗಿ ಒಳ ಮೀಸಲಾತಿ ಮತ್ತು ಜಾತಿ ಗಣತಿ ವರದಿಯ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಹೈಕೋರ್ಟ್ ನ್ಯಾಯವಾದಿಗಳಾದ ಹೆಚ್.ಮೋಹನ್ ಕುಮಾರ್ ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಮಾಜಿ ಸಂಸದರು ದಿ. ಆರ್. ಧ್ರುವನಾರಾಯಣ್ ಸಾಹೇಬರ ಮೊದಲನೇ ವರ್ಷದ ನೆನಪಿನರ್ಥವಾಗಿ ‘ವಿಚಾರ ಸಂಕಿರಣ’ ದಲ್ಲಿ ನಂಜನಗೂಡು ಕ್ಷೇತ್ರದ ಶಾಸಕರಾದ ದರ್ಶನ್ ಧ್ರುವನಾರಾಯಣ್ ಪಾಲ್ಗೊಂಡು ತಂದೆಯಾವರ ದಿ. ಆರ್. ಧ್ರುವನಾರಾಯಣ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಮನಗಳು ಸಲ್ಲಿಸಿದರು.

ಬಳಿಕ ಪ್ರಾಧ್ಯಾಪಕ ಪ್ರೊ. ಡಿ. ಆನಂದ್ ಮಾತನಾಡಿ,
ಮೀಸಲಾತಿ ವಿರೋಧಿಸುವವರು ಮೀಸಲಾತಿಯನ್ನು ಪಡೆದುಕೊಳ್ಳುತ್ತಿದ್ದಾರೆ. ಆರ್ಥಿಕವಾಗಿ ಮತ್ತು ಬಡತನದಲ್ಲಿರುವವರಿಗೆ ಮೀಸಲಾತಿ ನೀಡಬೇಕು. ಜಾತಿ ಆಧಾರಿತವಾಗಿ ಮೀಸಲಾತಿ ಅನಿವಾರ್ಯ ಇದೆಯಾ ಎಂಬುದನ್ನು ತಿಳಿದುಕೊಳ್ಳಬೇಕು. ಒಳ ಮೀಸಲಾತಿಯನ್ನು ನೀಡುವ ಬಗ್ಗೆ ವೈಚಾರಿಕವಾಗಿ ಚರ್ಚೆ ನಡೆಯಬೇಕು. ಜನರಿಗೆ ಪೂರಕವಾದ ವಾತಾವರಣವನ್ನು ನಿರ್ಮಾಣ ಮಾಡಬೇಕು. ಇದರ ಸಾಧಕ ಬಾಧಕಗಳ ಬಗ್ಗೆ ವೈಜ್ಞಾನಿಕವಾಗಿ ಚರ್ಚೆ ನಡೆದಾಗ ತಿಳಿಯುತ್ತದೆ. ಮೀಸಲಾತಿಯಿಂದ ಸಂವಿಧಾನದಲ್ಲಿ ಶಕ್ತಿ ತುಂಬುತ್ತದೆಯೇ ಎಂಬುದನ್ನು ಅಧ್ಯಯನ ನಡೆಸಬೇಕು. ಸರ್ಕಾರಿ ಸಂಸ್ಥೆಗಳನ್ನು ಖಾಸಗೀಕರಣ ಮಾಡಲಾಗುತ್ತಿದೆ. ಮೀಸಲಾತಿಯಿಂದ ನಿಜವಾದ ನ್ಯಾಯ ಸಿಗುತ್ತದೆಯೇ ಎಂದು ನೋಡಬೇಕಾಗಿದೆ ಆರ್ಥಿಕ ಸುಧಾರಣೆ ತರುವವರಿಗೆ ಮೀಸಲಾತಿಯ ಅವಶ್ಯಕತೆ ಇದೆ. ಮೆರಿಟ್ ಹೆಸರಿನಲ್ಲಿ ಮೀಸಲಾತಿ ನೀಡುತ್ತೇವೆ ಎಂದು ವಂಚನೆ ಮಾಡುತ್ತಿದ್ದಾರೆ. ಶೇ.90 ರಷ್ಟು ಖಾಸಗಿ ಸಂಸ್ಥೆಗಳಲ್ಲಿ ಜಾತಿಯ ಕಾರಣಕ್ಕೆ ಕೈ ಬಿಟ್ಟಿರುವುದನ್ನು ಸಾಕಷ್ಟು ಗಮನಿಸಿದ್ದೇವೆ. ಜನರ ಮನಸ್ಥಿತಿ ಬದಲಾಗಬೇಕು ಎಂದು ಹೇಳಿದರು.

ನಂಜನಗೂಡು ಕ್ಷೇತ್ರದ ಶಾಸಕ ದರ್ಶನ್ ದ್ರುವ ನಾರಾಯಣ ಮಾತನಾಡಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂತಿ೯,ಕರ್ನಾಟಕ ಅಹಿಂದ ಸಮಾನ ಮಸ್ಕರ ವೇದಿಕೆಯ ರಾಜ್ಯ ಸಂಚಾಲಕ ಡಿ. ಈಶ್ವರ್, ಪ್ರಗತಿಪರ ಚಿಂತಕ ಹರ ಕುಮಾರ್, ಮಾನವ ಬಂಧುತ್ವ ವೇದಿಕೆಯ ಜಿಲ್ಲಾ ಸಂಚಾಲಕ ದ್ಯಾವಪ್ಪ ನಾಯಕ, ಉಪ್ಪಾರ ಸಂಘದ ಜಿಲ್ಲಾಧ್ಯಕ್ಷ ಯೋಗೇಶ್ ಉಪ್ಪಾರ್, ರಾಜ್ಯ ಸಂಘಟನಾ ಸಂಚಾಲಕ ಶೇಖರ್ ಕಿರಗುಂದ, ಮೈಸೂರು ಜಿಲ್ಲಾ ಸಂಚಾಲಕ ಮನೋಜ್ ರಾಮಯ್ಯ, ಜಿಲ್ಲಾ ಸಂಘಟನಾ ಸಂಚಾಲಕ ಕೃಷ್ಣ, ಸೇರಿದಂತೆ ಹಲವರು ಭಾಗವಹಿಸಿದ್ದರು.

ನಂಜನಗೂಡು ಮಹದೇವಸ್ವಾಮಿ ಪಟೇಲ್.

Continue Reading
Click to comment

Leave a Reply

Your email address will not be published. Required fields are marked *

Uncategorized

ಕುಮಾರಸ್ವಾಮಿ ರನ್ನು ಬೆಂಬಲಿಸಿ – ಡಾ.ಪುಣ್ಯವತಿ

Published

on

ಮಂಡ್ಯ: ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬಂದ ನಂತರದ ದಿನಗಳಲ್ಲಿ ವೈದ್ಯಕೀಯ ಸೇರಿದಂತೆ ತಂತ್ರಜ್ಞಾನ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿದೆ, ವೈದ್ಯಕೀಯ ಕ್ಷೇತ್ರದಲ್ಲಿ ಮತ್ತಷ್ಟು ಸಾಧನೆ ಮಾಡಲು ಮತ್ತೊಮ್ಮೆ ಮೋದಿಯವರು ಪ್ರಧಾನಿಯಾಗಬೇಕು. ಅದಕ್ಕಾಗಿ ಮಂಡ್ಯದಲ್ಲಿ ಕುಮಾರಸ್ವಾಮಿಯವರನ್ನು ಬೆಂಬಲಿಸುವಂತೆ ಖ್ಯಾತ ವೈದ್ಯೆ ಡಾ. ಪುಣ್ಯವತಿ ತಿಳಿಸಿದರು.

ಭಾರತೀಯ ಜನತಾ ಪಾರ್ಟಿ ವೈದ್ಯಕೀಯ ಪ್ರಕೋಷ್ಠ ವತಿಯಿಂದ ನಗರದ ಅಮರಾವತಿ ಹೋಟೆಲ್ ಸಭಾಂಗಣದಲ್ಲಿ ನಡೆದ ವೈದ್ಯಕೀಯ ವೃತ್ತಿ ನಿರತರ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲಾ ಆಸ್ಪತ್ರೆಗಳಿಗೆ ಹೆಚ್ಚಿನ ಸೌಲಭ್ಯ ಕೊಡಬೇಕಾಗಿದೆ.

ಸೌಲಭ್ಯ ಸಿಗದಿದ್ದರೆ ಎಲ್ಲರೂ ಬೆಂಗಳೂರಿಗೆ ಬರುವಂತಾಗುತ್ತದೆ. ಇದನ್ನು ತಪ್ಪಿಸುವ ಉದ್ದೇಶದಿಂದ ಆಸ್ಪತ್ರೆಗಳನ್ನು ಮೇಲ್ದರ್ಜೆಗೊಳಿಸಬೇಕಾಗಿದೆ ಎಂದು ಹೇಳಿದರು.

ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದ ವೇಳೆ ರಾಜ್ಯದ ರೈತರ ಸಾಲ ಮನ್ನಾ ಮಾಡಿದ್ದರು. ಲಕ್ಷಾಂತರ ಫಲಾನುಭವಿಗಳು ಈ ಸೌಲಭ್ಯ ಪಡೆದಿದ್ದಾರೆ. ಗ್ರಾಮೀಣ ಪ್ರದೇಶದ ಜನರಿಗೆ ಬಸ್ಸಿನ ವ್ಯವಸ್ಥೆ, ಮೂಲಭೂತ ಸೌಲಭ್ಯ ಸೇರಿದಂತೆ ಎಲ್ಲಾ ಅಗತ್ಯ ಸೌಲಭ್ಯಗಳನ್ನು ನೀಡಿದ್ದೇವೆ ಎಂದು ಹೇಳಿದರು. ಮನ್ಮುಲ್ ನಿರ್ದೇಶಕ ರಾಮಚಂದ್ರ, ಮನ್ಮುನ್ ಉಪಾಧ್ಯಕ್ಷ ರಘುನಂದನ್, ಬಿಜೆಪಿ ಮುಖಂಡರಾದ ಡಾ.ಸಿದ್ದರಾಮಯ್ಯ, ಡಾ.ಸದಾನಂದ, ಕೆ.ಟಿ. ಶ್ರೀಕಂಠೇಗೌಡ ಇದ್ದರು.

Continue Reading

Hassan

ಮೈತ್ರಿ ಅಭ್ಯರ್ಥಿ ಪ್ರಜ್ವಲ್ ಪರ ಶಾಸಕ ಸ್ವರೂಪ್ ಮತಯಾಚನೆ

Published

on

ಹಾಸನ: ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರವಾಗಿ ಶಾಸಕ ಸ್ವರೂಪ್ ಹಾಸನ ತಾಲೂಕಿನ ವಿವಿಧ ಭಾಗಗಳಲ್ಲಿ
ಶನಿವಾರ ಪ್ರಚಾರ ನಡೆಸಿದರು.

ಹಾಸನ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ನಿಡುಡಿ, ದೊಡ್ಡ ಹೊನ್ನೇನಹಳ್ಳಿ, ಯಡಿಯೂರು, ತೇಜೂರು ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಪ್ರಜ್ವಲ್ ರೇವಣ್ಣ ಪರ ಮತಯಾಚನೆ ಮಾಡಿದರು. ಈ ವೇಳೆ ನಗರಸಭೆ ಮಾಜಿ ಅಧ್ಯಕ್ಷ ಅನಿಲ್ ಕುಮಾರ್ ಶಾಸಕ ಸ್ವರೂಪ್ ಅವರಿಗೆ ಸಾಥ್ ನೀಡಿದರು.

ಮನೆ ಮನೆಗೆ ತೆರಳಿ ಕರಪತ್ರ ವಿತರಿಸುವ ಮೂಲಕ ಪ್ರಜ್ವಲ್ ರೇವಣ್ಣ ಪರ ಮತಯಾಚನೆ ಮಾಡಿದ ಸ್ವರೂಪ್ ಬಳಿಕ ಮಾತನಾಡಿ, ಜಿಲ್ಲೆಗೆ ಮಾಜಿ ಪ್ರಧಾನಿ ಎಚ್ಡಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ, ಮಾಜಿ ಸಚಿವ ಎಚ್ಡಿ ರೇವಣ್ಣ ಹಾಗೂ ನಮ್ಮ ತಂದೆಯವರಾದ ದಿವಂಗತ ಎಚ್.ಎಸ್ ಪ್ರಕಾಶ್ ಅವರ ಅನೇಕ ಕೊಡುಗೆಗಳಿವೆ ಅವುಗಳನ್ನು ಆಧರಿಸಿ ಈ ಭಾರಿ ಮೈತ್ರಿ ಅಭ್ಯರ್ಥಿ ಪರ ಮತದಾರರು ಮತ ಯಾಚನೆ ಮಾಡಬೇಕು ಎಂದರು.

ಜಿಲ್ಲೆಯ ಪ್ರತಿ ಹಳ್ಳಿಗಳಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಿ ಹಾಸನ ಜಿಲ್ಲೆಯ ಜನರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳು, ಸರ್ಕಾರಿ ಶಾಲಾ ಕಾಲೇಜುಗಳು, ರೈಲ್ವೆ, ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳು ಸೇರಿದಂತೆ ಎಲ್ಲಾ ಇಲಾಖೆಗಳಲ್ಲೂ ತಮ್ಮದೇ ಆದ ಕೊಡುಗೆಗಳನ್ನು ನೀಡುವ ಮೂಲಕ ಹಾಸನ ಜಿಲ್ಲೆಯನ್ನು ರಾಜ್ಯವೇ ಗುರುತಿಸುವಂತೆ ಮಾಡಿದ್ದಾರೆ ಎಂದರು.

ವಿಶ್ವದ ಅತಿ ದೊಡ್ಡ ಬಸ್ ನಿಲ್ದಾಣ, ವಿಮಾನ ನಿಲ್ದಾಣದ ಕಾಮಗಾರಿಗೆ ಚಾಲನೆ, ಹೇಮಾವತಿ ಮೂಲಕ ಜಿಲ್ಲೆಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಮುಂದಿರುವ ಜೆಡಿಎಸ್ ಗೆ ಈ ಬಾರಿ ಮತ್ತೆ ಶಕ್ತಿ ತುಂಬುವ ಮೂಲಕ ಇನ್ನಷ್ಟು ಕೆಲಸ ಮಾಡಲು ಈ ಬಾರಿ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರಿಗೆ ಮತದಾನ ಮಾಡುವ ಮೂಲಕ ಕೇಂದ್ರದಲ್ಲಿ ನರೇಂದ್ರ ಮೋದಿ ಅವರಿಗೆ ಶಕ್ತಿ ತುಂಬುವ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.

ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಈ ಭಾರಿ ಕನಿಷ್ಠ 20 ಸಾವಿರಕ್ಕೂ ಅಧಿಕ ಮತಗಳನ್ನು ಹೆಚ್ಚುವರಿಯಾಗಿ ನೀಡಿ ಪ್ರಜ್ವಲ್ ರೇವಣ್ಣ ಅವರನ್ನು ಗೆಲ್ಲಿಸಲು ಪಣ ತೊಟ್ಟಿದ್ದೇವೆ. ಜಿಲ್ಲೆಯ ಜನರು ಕೂಡ ಪ್ರಜ್ವಲ್ ರೇವಣ್ಣ ಅವರ ಪರ ಒಲವು ತೋರಿದ್ದಾರೆ ಆದುದರಿಂದ ಬಾರಿ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರಿಗೆ ಮತದಾನ ಮಾಡಬೇಕು ಎಂದು ಮನವಿ ಮಾಡಿದರು.

Continue Reading

Uncategorized

ಅವಳಿ ಮಕ್ಕಳ ಸಾವಿಗೆ ತಾಯಿಯೇ ಹಂತಕಿ..!

Published

on

ಶ್ರೀರಂಗಪಟ್ಟಣ: ಐಸ್ ಕ್ರೀಂ ತಿಂದು ಅವಳಿ ಮಕ್ಕಳು ಮೃತಪಟ್ಟು, 3ವರ್ಷದ ಹೆಣ್ಣು ಮಗಳು ಹಾಗೂ ತಾಯಿ ಅಸ್ವಸ್ಥಗೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸಿ, ತಾಯಿಯೇ ಐಸ್‌ಕ್ರೀಂ ನಲ್ಲಿ ವಿಷ ಪ್ರಾಶಾಣ ಬೆರಸಿ ಕೊಲೆ ಮಾಡಿರುವುದಾಗಿ ತಿಳಿದು ಬಂದಿದೆ.

ತಾಲೂಕಿನ ಬೆಟ್ಟಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಕೌಟುಂಬಿಕ ಕಲಹ ಹಿನ್ನಲೆಯಲ್ಲಿ ಪೂಜಾ ಮತ್ತು ಪ್ರಸನ್ನ ದಂಪತಿ ನಡುವೆ ಜಗಳ ಏರ್ಪಟ್ಟು ತಾಯಿಯೇ ಮಕ್ಕಳಿಗೆ ಐಸ್‌ಕ್ರೀಂನಲ್ಲಿ ಲಕ್ಷಣ ರೇಖೆ ಬೆರಸಿ ಕೊಲೆ ಮಾಡಿದ್ದಾಳೆ ಎಂದು ಪೊಲೀಸರು ತಿಳಿ ತಿಳಿಸಿದ್ದಾರೆ.

ಬುಧವಾರ ಸಂಜೆ ಗ್ರಾಮಕ್ಕೆ ಐಸ್ ಕ್ರೀಂ ಮಾರಲು ಬಂದಿದ್ದ ವ್ಯಕ್ತಿಯಿಂದ ಆರೋಪಿ ಪೂಜಾ ಖರೀದಿ ಮಾಡಿ, ಒಂದೂವರೆ ವರ್ಷದ ಅವಳಿ ಮಕ್ಕಳಾದ ತ್ರಿಶೂಲ್, ತ್ರಿಶಾ ಹಾಗೂ 3 ವರ್ಷದ ಮತ್ತೊಂದು ಹೆಣ್ಣು ಮಗುವಿಗೂ ನೀಡಿ ತಾನು ಸಹ ತಿಂದಿದ್ದಾಳೆ. ಐಸ್ ಕ್ರೀಂ ತಿಂದು ಅಸ್ವಸ್ಥರಾಗಿದ್ದ ಮಕ್ಕಳು ಆಸ್ಪತ್ರೆಗೆ ಸಾಗಿಸುವ ಮಾರ್ಗಮದ್ಯ ಸಾವನ್ನಿಪ್ಪಿದ್ದು, ಪೂಜಾ ಹಾಗೂ ಶಿವರ್ಷದ ಹೆಣ್ಣುಮಗು ಅಸ್ವಸ್ಥಗೊಂಡು ಮಂಡ್ಯ ಜಿಲ್ಲಾಸತೆಗೆ ದಾಖಲಾಗಿದ್ದರು.

ಗ್ರಾಮದ ಇನ್ನೂ ಹಲವರು ಇದೇ ವಾಹನದಲ್ಲಿ ತಂದಿದ್ದ ಐಸ್ ಕ್ರೀಂ ಖರಿದಿಸಿ ತಿಂದಿದ್ದು, ಬೇರೆ ಯಾರಿಗೂ ಸಹ ಯಾವುದೇ ಸಮಸ್ಯೆ ಕಂಡು ಬಂದಿರಲಿಲ್ಲ. ಇದರಿಂದ ಅನುಮಾನಗೊಂಡ ಪೊಲೀಸರು ತನಿಖೆ ನಡೆಸಿದಾಗ ತಾಯಿ ಪೂಜಾ ಐಸ್ ಕ್ರೀಂ ಜೊತೆ ಮನೆಯಲ್ಲಿದ್ದ ಲಕ್ಷ್ಮಣ ರೇಖೆ ಪುಡಿ ಮಾಡಿ ಬೆರಸಿ ನೀಡಿರುವುದಾಗಿ ಪೊಲೀಸರ ಮುಂದೆ ಒಪ್ಪಿಕೊಂಡಿರುವುದಾಗಿ ತಿಳಿದು ಬಂದಿದೆ. ಈ ಸಂಬಂಧ ಅರಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

Trending

error: Content is protected !!