Connect with us

Hassan

ಹಾಸನ ಜಿಲ್ಲೆಗೆ ಇಂದು ಸಿಎಂ ಸಿದ್ದರಾಮಯ್ಯ ಆಗಮನ

Published

on

ಹಾಸನ : ಬೆಳಿಗ್ಗೆ 11.20 ಕ್ಕೆ ಹೆಲಿಕಾಪ್ಟರ್ ಮೂಲಕ ಅರಸೀಕೆರೆ ತಾಲ್ಲೂಕಿನ, ಬಾಣಾವರಕ್ಕೆ ಆಗಮಿಸಲಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ

ಮೊದಲು ಶ್ರೀ ಗುರುಸಿದ್ಧರಾಮೇಶ್ವರ ಸಮುದಾಯ ಭವನ (ಕನಕ ಭವನ) ಉದ್ಘಾಟಿಸಲಿರುವ ಸಿಎಂ

ನಂತರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವತಿಯಿಂದ ಬಿ.ಎಚ್.ರಸ್ತೆಯಲ್ಲಿರುವ ಬಾಣಾವರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ
ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಸಿಎಂ

ಅರಸೀಕೆರೆ ತಾಲ್ಲೂಕು ವ್ಯಾಪ್ತಿಯ ವಿವಿಧ ಕಾರ್ಯಕ್ರಮಗಳ ಉದ್ಘಾಟನೆ, ಶಂಕುಸ್ಥಾಪನೆ ಹಾಗೂ ಫಲಾನುಭವಿಗಳ ಸಮಾವೇಶದಲ್ಲಿ ಭಾಗಿಯಾಗಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ

ಮಧ್ಯಾಹ್ನ 2.30 ಕ್ಕೆ ಬಾಣಾವರದಿಂದ ಹೆಲಿಕಾಪ್ಟರ್ ಮೂಲಕ ನವಲಗುಂದಕ್ಕೆ ತೆರಳಿರುವ ಸಿಎಂ ಸಿದ್ದರಾಮಯ್ಯ

ಸಿಎಂ ಸಿದ್ದರಾಮಯ್ಯಗೆ ಸಾಥ್ ನೀಡಲಿರುವ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ, ಗೃಹ ಮಂಡಳಿ ಅಧ್ಯಕ್ಷ ಕೆ.ಎಂ.ಶಿವಲಿಂಗೇಗೌಡ

Continue Reading
Click to comment

Leave a Reply

Your email address will not be published. Required fields are marked *

Hassan

ಲಂಚ ಸ್ವೀಕರಿಸಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಮಂಜುನಾಥ್

Published

on

ಅರಸೀಕೆರೆ : ಬಿಎಚ್ಎಸ್ಸಿಯಲ್ಲಿರುವ ಕೆಇಬಿ ಕಚೇರಿಯಲ್ಲಿ ತುಂಬಾ ದಿನಗಳಿಂದ ವಿದ್ಯುತ್ ಗುತ್ತಿಗೆದಾರರ ಮೇಲೆ ಅಧಿಕಾರಿಗಳು ಮತ್ತು ಲೈನ್ ಮ್ಯಾನ್ ಗಳು ಪ್ರತಿಯೊಂದು ಕೆಲಸಕ್ಕೂ ಅಸಡ್ಡೆ ತೋರುತ್ತಿದು ಕೆಲವು ಕೆಲಸಗಳಿಗೆ ಹಣದ ಬೇಡಿಕೆಗಳನ್ನು ಇಡುತ್ತಿದ್ದರು. ಇಂದು ಕಂಟ್ರಾಕ್ಟರ್ ಮಧು ಎಂಬುವವರಿಂದ 25000 ಲಂಚವನ್ನು aee ಮಂಜುನಾಥ್ ರವರು ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಹಿಂದೂ ನಡೆದ ದಾಳಿಯಿಂದ ಕೆಲವು ಗುತ್ತಿಗೆದಾರರಿಗೆ ನ್ಯಾಯದ ಭರವಸೆ ಸಿಕ್ಕಿದೆ. ಇದೇ ರೀತಿ ಮುಂದಿನ ದಿನಗಳಲ್ಲಿಯೂ ಲಂಚ ಪಡೆಯುವಂಥ ಅಧಿಕಾರಿಗಳ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಲಿ ಮತ್ತು ಕೆಇಬಿ ಅಧಿಕಾರಿ ವರ್ಗ ಹಾಗೂ ಲೈನ್ ಮ್ಯಾನ್ ಗಳು ನ್ಯಾಯಯುತವಾಗಿ ಕಾರ್ಯನಿರ್ವಹಿಸಲಿ ಎಂದು ತಿಳಿಸಿದರು.

Continue Reading

Hassan

ಕುಡಿದ ಮತ್ತಿನಲ್ಲಿ ಯುವಕನೋರ್ವನ ಬರ್ಬರ ಹ*ತ್ಯೆ

Published

on

ಹಾಸನ: ಕುಡಿದ ಮತ್ತಿನಲ್ಲಿ ಯುವಕನೋರ್ವನನ್ನು ಬರ್ಬರವಾಗಿ ಹತ್ಯೆ ಮಾಡಿ ಶವನದ ಮುಂದೆಯೇ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು ವಿಕೃತಿ ಮೆರೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆ ಮರೆಸಿಕೊಂಡಿದ್ದ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು
ಯಶಸ್ವಿಯಾಗಿದ್ದಾರೆ.

ಚನ್ನರಾಯಪಟ್ಟಣ ತಾಲ್ಲೂಕು ಶ್ರವಣಬೆಳಗೊಳ ಹೋಬಳಿ ಶಿವಪುರ ಗ್ರಾಮದ ಚರಣ್ ಅಲಿಯಾಸ್ ಸಮಂತ್ (21), ಹಾಸನ ನಗರದ ಹೊಸಕೊಪ್ಪಲಿನ ನಿವಾಸಿಗಳಾದ ಚಂದು ( 21), ಅಭಿಷೇಕ್ ಅಲಿಯಾಸ್ ತೀರ್ಥ (21), ಪವನ್ (22) ಹಾಗೂ ಚನ್ನಪಟ್ಟಣ ನಿವಾಸಿ ಚಂದು ಬಿ.ಎ ಅಲಿಯಾಸ್ ಬೇಕರಿ ಚಂದು ಬಂಧಿತ ಆರೋಪಿಗಳು.

ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ
ಆಲೂರು ತಾಲೂಕು ದೊಡ್ಡಕಣಗಾಲು ಗ್ರಾಮದ ಆಟೋರಿಕ್ಷಾ ಚಾಲಕ ಉಲ್ಲಾಸ್ ಕ್ಯಾಟಿ(21) ಎಂಬಾತತನ್ನು ಘಟನೆ ನಡೆದು ಮರು ದಿನವೇ ಪೊಲೀಸರು ಬಂಧಿಸಿದ್ದರು.

ಏನಿದು ಪ್ರಕರಣ?:

ಹೂವಿನಹಳ್ಳಿ ಗ್ರಾಮದ ಆಟೋ ಚಾಲಕ ಕೀರ್ತಿ (೨೧)
ಎಂಬಾತನನ್ನು ನ. 8 ರಂದು ಸಂಜೆ ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದು ಉಲ್ಳಾಸ್ ಹಾಗು ಇತರ ಐವರು ಆರೋಪಿಗಳು ಕೀರ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಿ ಬಳಿಕ ಬಂಧಿತ ಆರೋಪಿ ಉಲ್ಲಾಸ್ ಶವದ ಮುಂದೆಯೇ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದ.

ನ. 9 ರಂದು ಬೆಳಗ್ಗೆ ಮೃತ ಕೀರ್ತಿ ಸಹೋದರ ಕಿರಣ್ ಅವರ ಮೊಬೈಲ್‌ಗೆ ಬಂದ ವೀಡಿಯೋ ನೋಡಿ ಕೂಡಲೇ ಹಾಸನ ನಗರ ಪೊಲೀಸ್ ಠಾಣೆಗೆ ಹೋಗಿ ಮಾಹಿತಿ ತಿಳಿಸಿದ್ದರು. ಬಳಿಕ ನಗರ ಠಾಣೆ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಪ್ರಿಯಾಂಕ, ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಹರೀಶ್, ಸಿಬ್ಬಂದಿ ಲತೇಶ ಅವರೊಂದಿಗೆ ವಿಡಿಯೋದಲ್ಲಿದ್ದ ಜಾಗದ ಅಂದಾಜಿನಲ್ಲಿ ಚನ್ನಪಟ್ಟಣ ಮತ್ತು ಬಿಟ್ಟಗೌಡನಹಳ್ಳಿ ಜಂಕ್ಷನ್ ನಡುವಿನ ಪವನಪುತ್ರ ಕೋಳಿ ಫಾರಂ ಹಿಂಭಾಗದ ಖಾಲಿ ಜಾಗದ ಮುಳ್ಳು ಮತ್ತು ಗಿಡಗಳ ನಡುವೆ ಹುಡುಕುತ್ತಾ ಬಂದಾಗ ಕೀರ್ತಿ ಶವ ಪತ್ತೆಯಾಗಿತ್ತು.

Continue Reading

Hassan

ತಾತನ ಜೊತೆ ಮೊಮ್ಮಕ್ಕಳು ಬೈಕ್‌ನಲ್ಲಿ ಕುಳಿತಿದ್ದ ವೇಳೆ ಗೂಡ್ಸ್ ವಾಹನ ಡಿಕ್ಕಿ : ಓರ್ವ ಬಾಲಕ ಸ್ಥಳದಲ್ಲೇ ಸಾವು

Published

on

ಹಾಸನ : ಕಾನ್ವೆಂಟ್ ಮುಗಿಸಿಕೊಂಡು ತಾತನ ಜೊತೆ ಮೊಮ್ಮಕ್ಕಳು ಬೈಕ್‌ನಲ್ಲಿ ಕುಳಿತಿದ್ದ ವೇಳೆ ಗೂಡ್ಸ್ ವಾಹನ ಡಿಕ್ಕಿ

ಓರ್ವ ಬಾಲಕ ಸ್ಥಳದಲ್ಲೇ ಸಾವು, ಮತ್ತೋರ್ವ ಬಾಲಕನಿಗೆ ಗಂಭೀರ ಗಾಯ

ದೀಕ್ಷಿತ್‌ಗೌಡ (4) ಮೃತ ಬಾಲಕ

ಸಾರ್ಥಕ್ (4) ಗಂಭೀರವಾಗಿ ಗಾಯಗೊಂಡಿರುವ ಬಾಲಕ

ಹಾಸನ ಜಿಲ್ಲೆ, ಚನ್ನರಾಯಪಟ್ಟಣದ ಮಂಡಿಕೊಪ್ಪಲು ಗೇಟ್ ಬಳಿ ನಿನ್ನೆ ಸಂಜೆ ಘಟನೆ

ಮಂಡಿಕೊಪ್ಪಲು ಗೇಟ್‌ನಲ್ಲಿರುವ ಗಾರ್ಡವಿನ್ ಕಾನ್ವೆಂಟ್‌ನಲ್ಲಿ ಎಲ್‌ಕೆಜಿ ಓದುತ್ತಿರುವ ದೀಕ್ಷಿತ್‌ಗೌಡ ಹಾಗೂ ಸಾರ್ಥಕ್

ಕಾನ್ವೆಂಟ್ ಮುಗಿದ ಮೇಲೆ ಮೊಮ್ಮಕ್ಕಳನ್ನು ಕರೆದುಕೊಂಡು ಬರಲು ಬೈಕ್‌ನಲ್ಲಿ ಕೂರಿಸಿಕೊಂಡಿದ್ದ ತಾತ ಚೋಳರಾಜು

ಎರಡು ಕಡೆ ರಸ್ತೆಯಲ್ಲಿ ವಾಹನಗಳು ಬರುತ್ತಿವೆಯಾ ಎಂದು ನೋಡುತ್ತಿದ್ದ ಚೋಳರಾಜು

KA-02-HM-9313 ನಂಬರ್‌ನ ಬೈಕ್‌ನಲ್ಲಿ ಮೊಮ್ಮಕ್ಕಳೊಂದಿಗೆ ಕುಳಿತಿದ್ದ ಚೋಳರಾಜು

ಈ ವೇಳೆ ವೇಗವಾಗಿ ಬಂದು ಬೈಕ್‌ಗೆ ಡಿಕ್ಕಿ ಹೊಡೆದ KA-54-8690 ನಂಬರ್ ಗೂಡ್ಸ್ ವಾಹನ

ಸ್ಥಳದಲ್ಲೇ ಮೃತಪಟ್ಟ ದೀಕ್ಷಿತ್‌ಗೌಡ

ಗಂಭೀರವಾಗಿ ಗಾಯಗೊಂಡಿರುವ ಸಾರ್ಥಕ್

ಸಾರ್ಥಕ್‌ಗೆ ಚನ್ನರಾಯಪಟ್ಟಣದ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ

ಚೋಳರಾಜುಗೂ ಕೈ ಮುರಿತ, ಸಣ್ಣ-ಪುಟ್ಟ ಗಾಯ

ನವೀನ್ ಹಾಗೂ ಬಾಬು ಸಹೋದರರು

ನವೀನ್ ಪುತ್ರ ದೀಕ್ಷಿತ್‌ಗೌಡ, ಬಾಬು ಪುತ್ರ ಸಾರ್ಥಕ್

ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ

ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆಯಲ್ಲಿ ಘಟನೆ

Continue Reading

Trending

error: Content is protected !!