Connect with us

Mysore

ಪಾರ್ಲಿಮೆಂಟ್ ಪ್ರದಕ್ಷಣೆ. ಪುಸ್ತಕ ಬಿಡುಗಡೆಗೆ ಹೆಚ್ ವಿಶ್ವನಾಥ್ ಮನೆಯಲ್ಲಿ ಪೂರ್ವಭಾವಿ ಸಭೆ.

Published

on

ಕೆ ಆರ್ ನಗರ- ಜಗತ್ತಿನ ಹಲವಾರು ವಿಷಯಗಳನ್ನು ಅಧ್ಯಾಯನ ಮಾಡಿ ದೇಶ ಮತ್ತು ರಾಜ್ಯ ಅಭಿವೃದ್ಧಿ ಬಗ್ಗೆ ಸಾಕಷ್ಟುವಿಷಯಗಳನ್ನು ಆದರಿಸಿ ಪಂಚಾಯಿತಿಯಿಂದ ಪಾರ್ಲಿಮೆಂಟ್ ವರೆಗಿ ವಿಷಯಗಳನ್ನು ವಿಶ್ವಕ್ಕೆ ಸಾರುತ್ತಿರುವ ಪಟ್ಟಣದ ಹಿರಿಯ ರಾಜಕಾರಣಿ ಹೆಚ್ ವಿಶ್ವನಾಥ್ ಬರೆದಿರುವ ಪುಸ್ತಕವನ್ನು ಪ್ರತಿಯೊಬ್ಬರೂ ಓದಬೇಕು ಎಂದು ಪುರಸಭಾ ಸದಸ್ಯ ಪ್ರಭುಶಂಕರ್ ತಿಳಿಸಿದರು
ಕೆ ಆರ್ ನಗರ ಪಟ್ಟಣದ ವಿಶ್ವನಾಥ್ ಅವರು ಮನೆಯಲ್ಲಿ ಸಮಾಜ ಸೇವಕರು ಮತ್ತು ಸಾಹಿತಿಗಳೊಂದಿಗೆ ಹಲವು ವಿಷಯಗಳನ್ನು ಚರ್ಚಿಸಿ ಮಾತನಾಡಿದರು.


ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಅವರು ಬರೆದಿರುವ ಪಾರ್ಲಿಮೆಂಟ್ ಪ್ರದರ್ಶಣೆ ಪುಸ್ತಕ ಜುಲೈ 20ರಂದು. ಲಂಡನ್ ದೇಶದ ತೇಲ್ಸ್ ನದಿ ತೀರದಲ್ಲಿರುವ ಬಸವಣ್ಣ ಪುತ್ತಾಳಿ ಆವರಣದಲ್ಲಿ ಬಿಡುಗಡೆ ಆಗಲಿದೆ. ಎಚ್ ವಿಶ್ವನಾಥ್ ಮತ್ತು ಹಿತೈಷಿಗಳು ಜುಲೈ 18ರಂದು ಹೊರಡಲಿದ್ದಾರೆ ಹಾಗಾಗಿ ಜುಲೈ 14 ರಂದು ಅವರ ಹಿತೈಷಿಗಳು ಮತ್ತು ಅಭಿಮಾನಿಗಳು ಬೀಳ್ಕೊಡುವ ಮೂಲಕ ಲಂಡನ್ ಕಾರ್ಯಕ್ರಮಕ್ಕೆ ಹೋಗಲು ಶುಭ ಹಾರೈಸೋಣ.

ನಂತರ ಲಂಡನ್ ಕಾರ್ಯಕ್ರಮ ಮುಗಿಸಿ ಬಂದಮೇಲೆ ರಾಜಕಾರಣಿಗಳನ್ನ ಹೊರತುಪಡಿಸಿ ಎಲ್ಲಾ ಸಮಾಜದ ಮುಖಂಡರು ಮತ್ತು ಇತೈಷಿಗಳು ಹಾಗೂ ಸಾಹಿತಿಗಳು ಉನ್ನತ ಅಧಿಕಾರಿಗಳೊಂದಿಗೆ ಅವರ ಪುಸ್ತಕ ಬಿಡುಗಡೆಯ ಕಾರ್ಯಕ್ರಮ ಮತ್ತು ಅವರು ಅಧ್ಯಯನ ಮಾಡಿದ ಸಂದರ್ಭಗಳ ಬಗ್ಗೆ ಅನಿಸಿಕೆ ಹಂಚಿಕೊಳ್ಳುವಂತಹ ಕಾರ್ಯಕ್ರಮವನ್ನು ಪಟ್ಟಣದ ರೇಡಿಯೋ ಮೈದಾನದಲ್ಲಿ ಆ ಯೋಜನೆ ಮಾಡಿಕೊಳ್ಳಬೇಕೆಂಬ ಯೋಜನೆಗಳನ್ನು ರೂಪಿಸಿಕೊಳ್ಳಲಾಗಿದೆ.

ವಿಧಾನ ಪರಿಷತ್ ಸದಸ್ಯ ಹಿರಿಯ ರಾಜಕಾರಣಿ ಹೆಚ್ ವಿಶ್ವನಾಥ್ ಮಾತನಾಡಿ ಪಾರ್ಲಿಮೆಂಟ್ ಪ್ರದಕ್ಷಣೆ ಎಂಬ ಪುಸ್ತಕದಲ್ಲಿ ಗ್ರಾಮ ಜಿಲ್ಲಾ ಪಂಚಾಯಿತಿ. ತಾಲೂಕು ಪಂಚಾಯಿತಿ, ವಿಧಾನಸಭೆ, ವಿಧಾನ ಪರಿಷತ್, ಲೋಕಸಭೆ ಸೇರಿದಂತೆ ಪಾರ್ಲಿಮೆಂಟ್ ಚುನಾವಣೆ ಮತ್ತು ಆಳ್ವಿಕೆ ಬಗ್ಗೆ ವಿಶ್ಲೇಷಣೆ ಮಾಡಿ ಅರ್ಥಪೂರ್ಣವಾಗಿ ಪುಸ್ತಕದಲ್ಲಿ ಬರೆಯಲಾಗಿದೆ. ಇತ್ತೀಚಿನ ರಾಜಕಾರಣ ತುಂಬಾ ಬೇಸರ ತಂದಿದೆ. ಯಾವುದೇ ಒಬ್ಬ ವ್ಯಕ್ತಿ ಯಾವುದೇ ಪಕ್ಷದಲ್ಲಿದ್ದರೂ ಆ ಪಕ್ಷಗಳ ಆಳ್ವಿಕೆ ತಪ್ಪು ಸರಿಗಳ ಬಗ್ಗೆ ಪ್ರಶ್ನಿಸುವ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು. ದೇಶ ಮತ್ತು ರಾಜ್ಯವನ್ನು ಆಳುವಂತಹ ಪ್ರಜೆಗಳು ಈ ಹಿಂದೆ ಆಳಿದ ಪ್ರಜೆಗಳು ಮತ್ತು ಅವರ ತಪ್ಪು ಸರಿಗಳನ್ನ ಚರ್ಚೆಸಿದಾಗ ಮಾತ್ರ ಸಮಾಜ ಒಳ್ಳೆಯ ದಿಕ್ಕಿನಲ್ಲಿ ಸಾಗಲು ಸಾಧ್ಯ ಎಂದರು.

ಸಂದರ್ಭದಲ್ಲಿ ವೀರಶೈವ ಹಿರಿಯ ಮುಖಂಡ ಅಡಡೂರು ಚನ್ನಬಸಪ್ಪ, ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಿಮ್ ಡಿಮ್ ಶಂಕರ್, ಕೆ ಎಲ್ ರಮೇಶ್, ಸಾಹಿತಿ ಹೆಗ್ಗಂದೂರು ಪ್ರಭಾಕರ್ , ಪ್ರಭಾಕರ್ ಜೈನ್, ವೈಎಸ್ ಕುಮಾರ್ ಮಾಜಿ ಪುರಸಭಾ ಸದಸ್ಯ ಶಿವಕುಮಾರ್ ಇನ್ನಿತರರು ಇದ್ದರು.

Continue Reading
Click to comment

Leave a Reply

Your email address will not be published. Required fields are marked *

Mysore

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಕೆ.ದೀಪಕ್ ಆಯ್ಕೆ*

Published

on

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಚುನಾವಣೆಯ ಮತದಾನ ನಿನ್ನೆ ಮುಗಿದಿದ್ದು, ಇಂದು ಫಲಿತಾಂಶ ಹೊರ ಬಿದ್ದಿದೆ.

ಮೈಸೂರು: ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕೆ.ದೀಪಕ್ ಅವರು 138 ಮತಗಳನ್ನು ಪಡೆದು ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ನಗರ ಉಪಾಧ್ಯಕ್ಷರಾಗಿ ರವಿ ಪಾಂಡವಪುರ, ಗ್ರಾಮೀಣ ಉಪಾಧ್ಯಕ್ಷರಾಗಿ ಹೆಚ್ ಎಸ್ ವೆಂಕಟಪ್ಪ, ಪ್ರಧಾನ ಕಾರ್ಯದರ್ಶಿ ಧರ್ಮಾಪುರ ನಾರಾಯಣ, ಗ್ರಾಮಾಂತರ ಕಾರ್ಯದರ್ಶಿ ದಾರಾ ಮಹೇಶ್, ನಗರ ಕಾರ್ಯದರ್ಶಿ ಲಕ್ಷ್ಮಿ ನಾರಾಯಣ್ ಯಾದವ್, ಖಜಾಂಜಿಯಾಗಿ ಸುರೇಶ್ ಎಸ್ ಅವರುಗಳು ಆಯ್ಕೆಯಾಗಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ನೂತನ ಕಾರ್ಯಕಾರಿ ಸಮಿತಿ ಸದಸ್ಯರ ವಿವರ ಇಂತಿದೆ.

ಎಂ.ಟಿ ಯೋಗೇಶ್ ಕುಮಾರ್,
ಕವಿತಾ ಎಸ್, ಅನಗೋಡು ನಟರಾಜು, ಡಿ.ಜೆ ರೋಜಾ ಮಹೇಶ್, ನಾಣಿ ಹೆಬ್ಬಾಳ್, ಜೆ.ರವಿಚಂದ್ರ ಹಂಚ್ಯ, ಹಂಪಾ ನಾಗರಾಜು, ಸೋಮಶೇಖರ್ ಚಿಕ್ಕಮರಳ್ಳಿ, ಜೆ ಶಿವಣ್ಣ, ಸತೀಶ್ ಆರ್ ದೇಪುರ, ದೊಡ್ಡನ ಹುಂಡಿ ರಾಜಣ್ಣ, ಹುಲ್ಲಹಳ್ಳಿ ಮೋಹನ, ಪುನೀತ್ ಎಸ್, ರಾಜು ಕಾರ್ಯ, ಸಿಎನ್ ವಿಜಯ್ ಇವರುಗಳು ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ನೂತನ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಗೊಂಡಿದ್ದಾರೆ.

Continue Reading

Mysore

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಕೆ.ದೀಪಕ್ ಆಯ್ಕೆ

Published

on

ಮೈಸೂರು: ಜಿಲ್ಲಾ ಪತ್ರಕರ್ತರ ಸಂಘದ ಚುನಾವಣೆಯ ಮತದಾನ ನಿನ್ನೆ ಮುಗಿದಿದ್ದು, ಇಂದು ಫಲಿತಾಂಶ ಹೋರ ಬಿದ್ದಿದೆ.

ಮೈಸೂರು: ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕೆ.ದೀಪಕ್ ಅವರು 138 ಮತಗಳನ್ನು ಪಡೆದು ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ನಗರ ಉಪಾಧ್ಯಕ್ಷರಾಗಿ ರವಿ ಪಾಂಡವಪುರ, ಗ್ರಾಮೀಣ ಉಪಾಧ್ಯಕ್ಷರಾಗಿ ಹೆಚ್ ಎಸ್ ವೆಂಕಟಪ್ಪ, ಪ್ರಧಾನ ಕಾರ್ಯದರ್ಶಿ ಧರ್ಮಾಪುರ ನಾರಾಯಣ, ಗ್ರಾಮಾಂತರ ಕಾರ್ಯದರ್ಶಿ ದಾರಾ ಮಹೇಶ್, ನಗರ ಕಾರ್ಯದರ್ಶಿ ಲಕ್ಷ್ಮಿ ನಾರಾಯಣ್ ಯಾದವ್, ಖಜಾಂಜಿಯಾಗಿ ಸುರೇಶ್ ಎಸ್ ಅವರುಗಳು ಆಯ್ಕೆಯಾಗಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ನೂತನ ಕಾರ್ಯಕಾರಿ ಸಮಿತಿ ಸದಸ್ಯರ ವಿವರ ಇಂತಿದೆ.

ಎಂ.ಟಿ ಯೋಗೇಶ್ ಕುಮಾರ್,
ಕವಿತಾ ಎಸ್, ಅನಗೋಡು ನಟರಾಜು, ಡಿ.ಜೆ ರೋಜಾ ಮಹೇಶ್, ನಾಣಿ ಹೆಬ್ಬಾಳ್, ಜೆ.ರವಿಚಂದ್ರ ಹಂಚ್ಯ, ಹಂಪಾ ನಾಗರಾಜು, ಸೋಮಶೇಖರ್ ಚಿಕ್ಕಮರಳ್ಳಿ, ಜೆ ಶಿವಣ್ಣ, ಸತೀಶ್ ಆರ್ ದೇಪುರ, ದೊಡ್ಡನ ಹುಂಡಿ ರಾಜಣ್ಣ, ಹುಲ್ಲಹಳ್ಳಿ ಮೋಹನ, ಪುನೀತ್ ಎಸ್, ರಾಜು ಕಾರ್ಯ, ಸಿಎನ್ ವಿಜಯ್ ಇವರುಗಳು ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ನೂತನ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಗೊಂಡಿದ್ದಾರೆ.

Continue Reading

Mysore

ಮುಡಾ ಅಕ್ರಮ ನಿವೇಶನ ಹಂಚಿಕೆ: ಏಕ ಸದಸ್ಯ ವಿಚಾರಣಾ ಆಯೋಗ ರಚನೆ

Published

on

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಿವೇಶನಗಳನ್ನು ಅಕ್ರಮವಾಗಿ ಹಂಚಿಕೆ ಮಾಡಿರುವ ಆರೋಪ ಕುರಿತು ವಿಚಾರಣೆ ನಡೆಸಲು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಪಿ.ಎನ್‌.ದೇಸಾಯಿ ನೇತೃತ್ವದಲ್ಲಿ ಏಕ ಸದಸ್ಯ ವಿಚಾರಣಾ ಆಯೋಗವನ್ನು ರಾಜ್ಯ ಸರ್ಕಾರ ರಚಿಸಿದೆ.

ಅಕ್ರಮಕ್ಕೆ ಸಂಬಂಧಿಸಿದಂತೆ ಸಮಗ್ರ ಮಾಹಿತಿ, ದಾಖಲೆಗಳನ್ನು ಒದಗಿಸಿ, ಆಯೋಗವು ವಿಚಾರಣೆಯನ್ನು ಪೂರ್ಣಗೊಳಿಸಲು, ತಾಂತ್ರಿಕ, ಆರ್ಥಿಕ ಮತ್ತು ಆಡಳಿತಾತ್ಮಕ ಸಲಹೆಗಾರರನ್ನು ನೀಡಲು ನಗರಾಭಿವೃದ್ಧಿ ಇಲಾಖೆ ಮತ್ತು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಸಹಕರಿಸಬೇಕು ಎಂದು ಸೂಚಿಸಲಾಗಿದೆ.

ಆಯೋಗವು ವಿಚಾರಣೆಗೆ ಬಯಸುವ ಎಲ್ಲ ಕಡತಗಳು ಮತ್ತು ದಾಖಲಾತಿಗಳನ್ನು ನಗರಾಭಿವೃದ್ಧಿ ಇಲಾಖೆ ಮತ್ತು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಒದಗಿಸಬೇಕು. ಅಲ್ಲದೆ, ವಿಚಾರಣೆ ಸಂದರ್ಭದಲ್ಲಿ ಹಾಜರಿದ್ದು ಸಂಪೂರ್ಣವಾಗಿ ಸಹಕರಿಸಬೇಕು ಎಂದು ಆದೇಶದಲ್ಲಿ ವಿವರಿಸಲಾಗಿದೆ.

ತನಿಖೆಗೆ ಆದೇಶಿಸಿರುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು, ಮುಡಾ ನಿವೇಶನ ಹಂಚಿಕೆಯ ವಿರುದ್ಧ ಆರೋಪಗಳು ಕೇಳಿ ಬರುತ್ತಿದ್ದು, ಈ ಬಗ್ಗೆ ಪಾರದರ್ಶಕ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂಬ ಆಶಯದೊಂದಿಗೆ ರಾಜ್ಯ ಸರ್ಕಾರವು ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಶ್ರೀ ಪಿ. ಎನ್. ದೇಸಾಯಿ ಅವರ ನೇತೃತ್ವದಲ್ಲಿ ಏಕ ಸದಸ್ಯ ವಿಚಾರಣಾ ಆಯೋಗವನ್ನು ರಚಿಸಿ ತನಿಖೆಗೆ ವಹಿಸಿದೆ. ಪ್ರಕರಣದ ಕೂಲಂಕಷವಾದ ವಿಚಾರಣೆ ನಡೆದು, ಸತ್ಯಾಸತ್ಯತೆ ಹೊರಬರಲಿ ಎಂದು ಆಶಿಸುತ್ತೇನೆ’ ಎಂದು ಹೇಳಿದ್ದಾರೆ.

Continue Reading

Trending

error: Content is protected !!