Connect with us

Hassan

ಶೀಘ್ರವೇ ಒಳ ಮೀಸಲಾತಿ ಜಾರಿಗಾಗಿ ಡಿಸಿ-ಸಿಎಂಗೆ ಮನವಿ

Published

on

ಹಾಸನ: ನಗರದ ಸ್ವಾಭಿಮಾನ ಭವನದಲ್ಲಿ ಭಾನುವಾರ ಮಾದಿಗ ದಂಡೋರ ಮತ್ತು ಮಾದಿಗ ಮೀಸಲಾತಿ ಸಮಿತಿ ಅಡಿಯಲ್ಲಿ ನಡೆದ ಸಬೆಯಲ್ಲಿ ಕೆಲ ನಿರ್ಣಯ ಕೈಗೊಂಡು ಕೆನೆಪದರ ನೀತಿಯನ್ನು ವಿರೋಧಿಸಿದಲ್ಲದೇ ಕೂಡಲೇ ತೆಗೆದು ಹಾಕಬೇಕು. ಒಂದು ವಿಚಾರ ಸಂಕೀರಣವನ್ನ ಜಿಲ್ಲಾ ಮಟ್ಟದಲಿ ನಡೆಸಬೇಕು. ಶೀಘ್ರವೇ ಒಳಮೀಸಲಾತಿ ಜಾರಿ ಮಾಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಮತ್ತು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು. ಎಕ್ಸ್ ಪೋರ್ಟ್‌ಗಳ ಕರೆಯಿಸಿ ದೊಡ್ಡಮಟ್ಟದಲ್ಲಿ ಇನ್ನೊಂದು ಬಾರಿ ಜಾಗೃತಿ ಸಭೆ ಮಾಡುವುದು ಬಗ್ಗೆ ತೀರ್ಮಾನಿಸಲಾಯಿತು.

ಬಿ.ಎಸ್.ಪಿ. ರಾಜ್ಯ ಉಪಾಧ್ಯಕ್ಷ ಹಾಗೂ ವಕೀಲರಾದ ಗಂಗಾಧರ್ ಬಹುಜನ್ ಉದ್ದೇಶಿಸಿ ಮಾತನಾಡಿ, ಪರಿಶಿಷ್ಟ ಜಾತಿಗಳಲ್ಲಿನ ಒಳ ಮೀಸಲಾತಿಗಾಗಿ ಹಿರಿಯರು ಹೋರಾಟ ಮಾಡಿದ ಹಿನ್ನಲೆಯಲ್ಲಿ ಒಮದು ಹಂತಕ್ಕೆ ತಲುಪಿದೆ. ಅತಿ ಹೆಚ್ಚು ಪರಿಶಿಷ್ಟ ಜಾತಿಯವರು ಇರುವ ಪಂಜಾಬಿನಲ್ಲಿ ೧೯೭೫ನೇ ಅಸವಿಯಲ್ಲಿ ಈ ಹೋರಾಟ ಪ್ರಾರಂಭವಾಗುತ್ತದೆ. ಅಲ್ಲಿನ ಸರಕಾರ ಒಳ ಮೀಸಲಾತಿಯ ವರ್ಗೀಕರಣ ಮಾಡಿ ಪರಿಶಿಷ್ಟ ಜಾತಿಗಳಿಗೆ ಚಾಲನೆ ಕೊಡುವ ಕೆಲಸ ಮಾಡಿರುವುದು ಪಂಜಾಬ್ ರಾಜ್ಯ. ಇದನ್ನೆ ಅನುಸರಿಸಿ ಮುಂದುವರೆಸಿರುವುದು ಹರಿಯಾಣ ರಾಜ್ಯ. ಈ ಎರಡು ರಾಜ್ಯಗಳ ಪ್ರೇರಣೆ ಪಡೆದುಕೊಂಡ ಆಂದ್ರ ಪ್ರದೇಶದಲ್ಲಿ ಈ ಕೂಗು ಹಬ್ಬಿದೆ. ಹರಿಯಾಣದಿಂದ ಪ್ರೇರಣೆ ಹೊಂದಿರುವುದು ಕರ್ನಾಟದವರು. ಈ ಹೋರಾಟಕ್ಕೆ ಸಾಮಾಜಿಕ ಹೋರಾಟಗಾರರು, ದಲಿತ ಸಮಿತಿ, ರಾಜಕೀಯ ಮುಖಂಡರು, ರಾಜಕೀಯಪಕ್ಷದವರು ಎಲ್ಲಾರೂ ಕೂಡ ಕಷ್ಟಪಟ್ಟು ಸಹಕರಿಸಿದ್ದಾರೆ. ಈ ವಿಚಾರವಾಗಿ ಚಳುವಳಿ ಹೊಂದೆಯಲ್ಲ. ರಕ್ತ ಕೂಡ ಸುರಿಸಿದೆ. ಇವೆಲ್ಲಾ ಹೋರಾಟದ ಪ್ರತಿಫಲ ಒಳಮೀಸಲಾತಿ ತೀರ್ಪು ಹೊರ ಬಂದಿದೆ. ತೀರ್ಪು ಕೊಡುವ ಸಂದರ್ಭದಲ್ಲಿ ಅಂತಿಮವಾಗಿ ನಿರ್ಧಾರಕ್ಕೆ ಬರುವ ವೇಳೆ ಒಂದು ರೀತಿಯ ಸಣ್ಣ ಕೊಳಕು ಮಾಡಿದೆ. ಅದನ್ನು ದಾಟುವುದು ಹೇಗೆ ಎಂಬುದು ಒಂದು ರೀತಿಯ ಕಾನೂನಾತ್ಮಕವಾದ ಸವಾಲು

ಆಗಿದೆ. ಒಳಮೀಸಲಾತಿ ವರ್ಗೀಕರಣ ಮೀಸಲಾತಿ ವಿಚಾರ ಏನಿದೆ ಇದನ್ನು ಹೈಕೋರ್ಟ್ ಒಪ್ಪಿಕೊಳ್ಳುತ್ತದೆ. ಇದರ ಅನುಷ್ಠಾನ ಏನಿದೆ ಅದರ ಜವಬ್ಧಾರಿಯನ್ನು ಆಯಾ ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ವಹಿಸುತ್ತದೆ. ಕಾಯಿದೆ, ಕಾನೂನು ಮಾಡುವ ಅಧಿಕಾರ ರಾಜ್ಯ ಸರಕಾರಗಳಿಗಿಲ್ಲ. ಇದನ್ನು ಏನಿದ್ದರೂ ಕೇಂದ್ರವೇ ಮಾಡಬೇಕು. ಆರ್ಟಿಕಲ್ ೩೪೦, ೩೪೧ ನಲ್ಲಿ ಅದು ಕೇಂದ್ರ ಸರಕಾರವೇ ಮಾಡಬೇಕು, ರಾಜ್ಯ ಸರಕಾರ ಮಾಡುವಾಗಿಲ್ಲ ಎಂದು ರದ್ದುಗೊಳಿಸಲಾಗಿತ್ತು. ಮತ್ತೆ ಸುಪ್ರಿಂ ಕೋರ್ಟ್‌ಗೆ ಎತ್ತಿ ಹಿಡಿದಾಗ ಇದು ಸಂವಿಧಾನ ಬದ್ಧವಾಗಿದೆ ಇದನ್ನು ಅನುಷ್ಠಾನಗೊಳಿಸುವ ಜವಬ್ಧಾರಿ ರಾಜ್ಯ ಸರಕಾರಗಳು ತೆಗೆದುಕೊಳ್ಳಬೇಕು ಎಂದು ಹೇಳಿದೆ ಎಂದು ಕಿವಿಮಾತು ಹೇಳಿದರು. ಈ ತೀರ್ಪಿನ ಅನುಸಾರವಾಗಿ ಸಂಬಂಧಪಟ್ಟ ಮಸೂದೆ ತರಬೇಕಾಗುತ್ತದೆ. ಸದಾಶಿವ ಆಯೋಗ ಏನಿದೆ ಬಗ್ಗೆ ಹೇಳ್ಳುತ್ತಿದ್ದೇವೆ ಹೊರತು ಆ ಬಗ್ಗೆ ಪೂರ್ಣವಾಗಿ ತಿಳಿದಿರುವುದಿಲ್ಲ. ಅದರ ಪ್ರಕಾರವೇ ಮೀಸಲಾತಿ ವರ್ಗೀಕರಣ ಹಂಚಿಕೆ ಆಗಬೇಕಾ! ಅದರೊಳಗೆ ಏನಾದರೂ ಲೋಪದೋಷಗಳಿವೆಯೇ ಎನ್ನುವುದನ್ನು ಗಮನಹರಿಸಿ ಜಾರಿ ಮಾಡಿದರೇ ಗೊತ್ತಾಗುತ್ತದೆ ಎಂದು ಸಲಹೆ ನೀಡಿದರು. ಇದು ಒಂದು ರಾಜ್ಯಕ್ಕೆ ಸೀಮಿತಿದ ಬಗ್ಗೆ ಯೋಚನೆ ಮಾಡುವಂತದಲ್ಲ. ಸುಪ್ರಿಂ ಕೋರ್ಟ್ ತೀರ್ಪು ಎಂದರೇ ಇಡೀ ದೇಶಕ್ಕೆ ಅನ್ವಯವಾಗುವ ವಿಚಾರ

ಆಗಿರುವುದರಿಂದ ಎಲ್ಲಾ ರಾಜ್ಯಗಳಲ್ಲಿಯೂ ಕೂಡ ಆಯಾ ರಾಜ್ಯಗಳ ವಿವೇಚನೆಗೆ ಬಿಟ್ಟಿದ್ದರೂ ಸಹ ಇದು ಸಂವಿಧಾನದ ಅನುಗೂಣವಾಗಿ ಕಾಯಿದೆಗಳು ಮತ್ತು ಮಸೂದೆಗಳನ್ನು ತರಬೇಕಾಗುತ್ತದೆ ಎಂದು ಹೇಳಿದರು. ಮೀಸಲಾತಿ ಪರಿಕಲ್ಪನೆಗೆ ಎಲ್ಲೊ ಒಂದು ರೀತಿಯ ಕೊಡಲಿಪೆಟ್ಟು ಎನ್ನುವ ಅಂಶ ಕಾಣುತ್ತದೆ. ಎಸ್.ಸಿ.ಎಸ್.ಟಿಗೆ ಮೀಸಲಾತಿ ಕೊಟ್ಟಿರುವುದು ಆರ್ಥಿಕ ಆಧಾರದ ಮೇಲೆ ಅಲ್ಲ. ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ ಎನ್ನುವ ಕಾರಣದಿಂದ ಸಂವಿಧಾನದ ಆರ್ಟಿಕಲ್ ೧೫ ಮತ್ತು ೧೬ ರಲ್ಲಿ ಶೈಕ್ಷಣಿಕ ಹಾಗೂ ಉದ್ಯೋಗದಲ್ಲಿ ಮೀಸಲಾತಿಯನು ಕೊಟ್ಟಿದೆ ಎಂದು ಒಳಮೀಸಲಾತಿ ಕುರಿತು ವಿಚಾರವನ್ನು ತಿಳಿಸಿದರು.

ಸಭೆಯಲ್ಲಿ ಇದೆ ವೇಳೆ ಒಳ ಮೀಸಲಾತಿಗಾಗಿ ಹೋರಾಟ ಮಾಡಿದಂತಹ ಕೇಂದ್ರ ಸಚಿವ ನಾರಾಯಣಸ್ವಾಮಿ, ಆಂಜನೇಯವರಿಗೆ ಸಭೆಯಲ್ಲಿ ಚಪ್ಪಾಲೆ ತಟ್ಟುವ ಮೂಲಕ ಅಭಿನಂಧಿಸಲಾಯಿತು. ಸುಪ್ರಿಂ ಕೋರ್ಟ್‌ಗೆ ಈ ಪ್ರಕರಣ ತೆಗೆದುಕೊಂಡು ಹೋದ ಪಾರ್ಥಸಾರಥಿ ಅವರು ಮರಣ ಹೊಂದಿದ ಹಿನ್ನಲೆಯಲ್ಲಿ ಎದ್ದು ನಿಂತು ಎರಡು ನಿಮಿಷ ಮೌನ ಆಚರಿಸುವುದರ ಮೂಲಕ ಶ್ರದ್ಧಾಂಜಲಿ ಅರ್ಪಿಸಿ ಗೌರವ ಸೂಚಿಸಲಾಯಿತು. ನಂತರ ನಗರದ ಜಿಲ್ಲಾಧಿಕಾರಿ ಕಛೇರಿ ಆವರಣದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ನೆರವೇರಿಸಿ ಕೆಲ ಸಮಯ ಜೈಕಾರ ಹಾಕಿದರು.

ಇದೆ ವೇಳೆ ಸಭೆಯಲ್ಲಿ ಮಾದಿಗ ದಂಡೋರ ಜಿಲ್ಲಾಧ್ಯಕ್ಷ ಟಿ.ಆರ್. ವಿಜಯಕುಮಾರ್, ವಕೀಲ ರಾಜೇಶ್, ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಂ. ಸೋಮಶೇಖರ್, ರಾಜ್ಯ ಸಂಘಟನಾ ಸಂಚಾಲಕ ಅಂಬೂಗ ಮಲೇಶ್, ಹಿರಿಯ ಮುಖಂಡ ಹೆಚ್.ಕೆ. ಸಂದೇಶ್, ಕೆ. ಈರಪ್ಪ, ಎಡಬ್ಯೂಇ ರಂಗಪ್ಪ, ದೇವರಾಜು, ಸ್ಟೂಡೆಂಟ್ ಫೆಡರೇಶನ್ ಆಫ್ ಇಂಡಿಯಾದ ರಮೇಶ್, ಸತೀಶ್, ಪ್ರವೀಣ್, ಚಿಕ್ಕಣ್ಣ, ಶಿಕ್ಷಣ ಇಲಾಖೆ ಡಿಡಿಪಿಐ ನಿವೃತ್ತ ಉಪನಿರ್ದೇಶಕರಾದ ಎನ್.ಡಿ. ಸಾಲಿ, ವೀರಭದ್ರಪ್ಪ, ಜಾವಗಲ್ ಇಂದ್ರೇಶ್, ಹಳೇಬೀಡು ಭೈರೇಶ್, ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೃಷ್ಣದಾಸ್ ಹೆಚ್.ಪಿ. ಶಂಕರ್ ರಾಜು, ಅಂತರಾಷ್ಟ್ರೀಯ ಚಿತ್ರಕಲಾವಿದ ಕೆ.ಟಿ. ಶಿವಪ್ರಸಾದ್, ಸುವರ್ಣ, ಜೈಭೀಮ್ ಬ್ರಿಗೇಡ್ ಜಿಲ್ಲಾಧ್ಯಕ್ಷ ರಾಜೇಶ್, ಜಿ.ಓ. ಮಹಾಂತಪ್ಪ ಸಹ ಕಾರ್ಯದರ್ಶಿ ವಸಂತಕುಮಾರ್, ಎ.ಟಿ. ಮಂಜುನಾಥ, ಹೆಚ್.ಎಂ. ಮಹೇಶ್, ಹೇಮಂತ್ ಕುಮಾರ್, ಇತರರು ಉಪಸ್ಥಿತರಿದ್ದರು.

Continue Reading

Hassan

ಸಂಘದಲ್ಲಿ ಒಗ್ಗಟ್ಟು ಪ್ರದರ್ಶಿಸುವ ಅಗತ್ಯತೆ ಇದೆ

Published

on

ಹೆಚ್.ಎಸ್. ವೆಂಕಟೇಶ್

ಹಾಸನ: ಟೈಲರ್ ವೃತ್ತಿ ಬಾಂಧವರ ಬೇಡಿಕೆ ಈಡೇರಿಕೆಗಾಗಿ ಹಲವು ಬಾರಿ ಹೋರಾಟ ನಡೆಸಲಾಗಿದ್ದು, ಇನ್ನು ಹೆಚ್ಚಿನ ಶಕ್ತಿ ಪ್ರದರ್ಶನಕ್ಕಾಗಿ ಸಂಘದಲ್ಲಿ ಸದಸ್ಯರ ಸಂಖ್ಯೆ ಹೆಚ್ಚಾಗಬೇಕಾಗಿದೆ ಎಂದು ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಶನ್ ಕ್ಷೇತ್ರ ಸಮಿತಿ ಅಧ್ಯಕ್ಷ ಹೆಚ್.ಎಸ್. ವೆಂಕಟೇಶ್ ತಿಳಿಸಿದರು.

ರವೀಂದ್ರ ನಗರದಲ್ಲಿರುವ ಜಿಲ್ಲಾ ಕುರುಹಿನ ಶೆಟ್ಟಿ ಭವನದಲ್ಲಿ ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಶನ್ ವತಿಯಿಂದ ಭಾನುವಾರದಂದು ಬೆಳಿಗ್ಗೆ ಏರ್ಪಡಿಸಲಾಗಿದ್ದ ಗೌರಿಕೊಪ್ಪಲು ಮತ್ತು ಕೆ.ಆರ್. ಪುರಂ ವಲಯ ಸಮಿತಿ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅವರು, ಪ್ರತಿನಿತ್ಯ ಕೆಲಸ ನಿರ್ವಹಿಸುವ ಟೈಲರ್ ರವರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸರಕಾರಕ್ಕೆ ಮನವಿ ಕೊಡುತ್ತಲೆ ಬರಲಾಗುತ್ತಿದ್ದು, ಟೈಲರ್ ಅಸೋಸಿಯೇಶನ್ ವತಿಯಿಂದ ಇದುವರೆಗೂ ಹಲವಾರು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಸಂಘದ ಸಭೆ ನಡೆಸಲು ಒಂದು ಕಛೇರಿ ಇರಲಿಲ್ಲ. ಈಗ ನಿಮ್ಮೆಲ್ಲರ ಸಹಕಾರದಲ್ಲಿ ಒಂದು ಬಾಡಿಗೆ ಕಟ್ಟಡದಲ್ಲಿ ಕಛೇರಿ ಮಾಡಲಾಗಿದೆ. ಈಗಾಗಲೇ ನಾಲ್ಕು ಸಮಿತಿಯನ್ನು ಮಾಡಲಾಗಿದ್ದು, ಸರಕಾರದಿಂದ ಏನೆನೂ ಸೌಲಭ್ಯ ಸಿಗಬಹುದು ಈ ಬಗ್ಗೆ ನಿರಂತರವಾಗಿ ಹೋರಾಟ ಮಾಡಿಕೊಂಡು ಬರಲಾಗಿದೆ ಎಂದರು. ಟೈಲರ್ ವೃತ್ತಿ ಬಾಂಧವರಿಗೆ ಉಚಿತ ಆರೋಗ್ಯ ಶಿಬಿರವನ್ನು ಮಾಡಿಕೊಂಡು ಬರಲಾಗಿದೆ.

ನಮ್ಮ ನ್ಯಾಯಯುತ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಬೆಂಗಳೂರು ಚಲೋ ಮಾಡಲಾಗಿದೆ. ಹಾಸನ ನಗರದಲ್ಲಿ ೩೫ ವಾರ್ಡ್‌ಗಳಿದ್ದು, ಅಲ್ಲಲ್ಲೆ ವಾರ್ಡ್‌ಗಳನ್ನು ಮಾಡಿದರೇ ಸುತ್ತಮುತ್ತವ ಟೈಲರ್ ಇರುವವರ ಬಗ್ಗೆ ಹೆಚ್ಚಿನ ಮಾಹಿತಿ ಸಿಗುತ್ತದೆ ಹಾಗೂ ಸದಸ್ಯತ್ವ ಕೊಡಲಾಗುವುದು. ಅಲ್ಲಿನ ವೃತ್ತಿ ಬಾಂಧವರಿಗೆ ಒಳ್ಳೆಯದಾಗಲಿ. ಈ ನಿಟ್ಟಿನಲ್ಲಿ ಸಂಘಟನೆ ಗಟ್ಟಿಗೊಳಿಸುವ ಕೆಲಸ ಮಾಡಲಾಗುತ್ತಿದೆ ಎಂದು ಕಿವಿಮಾತು ಹೇಳಿದರು. ಯಾವುದೇ ಹೋರಾಟ ಮಾಡಬೇಕಾದರೇ ಸಂಘದ ಒಗ್ಗಟ್ಟು ಇರಬೇಕು. ಮುಂದಿನ ದಿನಗಳಲ್ಲಿ ನಗರದಲ್ಲಿ ಒಂದು ವಲಯ ಸಮಿತಿ ಮಾಡಲಾಗುವುದು. ಟೈಲರ್ ಸಂಘದಲ್ಲಿ ಒಟ್ಟು ೨೪೦೦ ಜನ ಸದಸ್ಯರು ಇದ್ದು, ಕಳೆದ ೨ ವರ್ಷದಲ್ಲಿ ೪೦೦ ಜನ ಸದಸ್ಯರನ್ನು ಮಾಡಲಾಗಿದೆ. ಬೆಂಗಳೂರು ಚಲೋ ಚಳುವಳಿಯಲ್ಲಿ ನಮ್ಮ ಬೇಡಿಕೆ

ಈಡೇರಿಸುವುದಾಗಿ ಸರಕಾರ ಹೇಳಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಶನ್ ಕ್ಷೇತ್ರ ಸಮಿತಿ ಖಜಾಂಚಿ ಬಿ.ಎಂ. ನಾಗೇಂದ್ರ, ಸರಸ್ವತಿ ಪುರಂ ವಲಯ ಸಮಿತಿ ಅಧ್ಯಕ್ಷ ವೇಲಾಪುರಿ ಗೌಡ, ಕಾರ್ಯದರ್ಶಿ ಮೋಹನ್, ಪೆನ್ಷನ್ ಮೊಹಲ್ಲ ವಲತ ಸಮಿತಿ ಕಾರ್ಯದರ್ಶಿ ಬಾಬು, ಯೂನಿಸ್ ಷರೀಫ್, ಹಿರಿಯರಾದ ಬಿ.ಕೆ. ಬಾಲಕೃಷ್ಣ, ಕಾಟೀಹಳ್ಳಿ ವಲಯ ಸಮಿತಿಯ ಮಂಜೇಗೌಡ, ಹಾಸನಾಂಬ ವಲಯ ಸಮಿತಿಯ ವೀರ ರಾಘವನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Continue Reading

Hassan

ಒಡಲು ತುಂಬಿದ ಹಂದಿನಕೆರೆ-ಹರಳಹಳ್ಳಿ ಕೆರೆಗೆ ಶಾಸಕ ಹೆಚ್.ಪಿ. ಸ್ವರೂಪ್ ಬಾಗಿನ ಅರ್ಪಣೆ

Published

on

ಹಾಸನ: ಸುರಿಯುತ್ತಿರುವ ನಿರಂತರ ಮಳೆಯಿಂದ ಒಡಲು ತುಂಬಿ ಹರಿಯುತ್ತಿರುವ ಹಾಸನ ತಾಲೂಕಿನ ಮಣಚನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಂದಿನಕೆರೆ – ಹರಳಳ್ಳಿ ಕೆರೆಗೆ ಶಾಸಕ ಹೆಚ್.ಪಿ. ಸ್ವರೂಪ್ ಪ್ರಕಾಶ್ ಬಾಗಿನ ಅರ್ಪಿಸಿದರು.

ಬಾಗಿನ ಅರ್ಪಣೆಗೂ ಮುನ್ನ ಗ್ರಾಮದ ಕೆರೆ ದಡದಲ್ಲಿ ಇರುವ ಈಶ್ವರ ದೇವಾಲಯದಲ್ಲಿ ಶಾಸಕ ಸ್ವರೂಪ ಪ್ರಕಾಶ್ ವಿಶೇಷ ಪೂಜೆ ಸಲ್ಲಿಸಿದರು ಈ ಸಂದರ್ಭದಲ್ಲಿ ಸುತ್ತ ಮುತ್ತಲ ಗ್ರಾಮಸ್ಥರು ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸ್ವರೂಪ್ ಅವರಿಗೆ ಸಾತ್ ನೀಡಿದರು. ಬಳಿಕ ಶಾಸಕ ಸ್ವರೂಪ್ ಪ್ರಕಾಶ್ ಮಾತನಾಡಿ, ಈ ಬಾರಿ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದ್ದು ರೈತರ ಮೊಗದಲ್ಲಿ ಮಂದಹಾಸ

ಮೂಡಿಸಿದೆ, ಅದೇ ರೀತಿ ಮಲೆನಾಡು ಭಾಗದಲ್ಲಿ ಸಾಕಷ್ಟು ಹಾನಿಯೂ ಆಗಿದ್ದು ಅದೃಷ್ಟವಶಾತ್ ಹಾಸನ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಹಾನಿಯ ಪ್ರಮಾಣ ಕಡಿಮೆಯಾಗಿದೆ ಎಂದರು. ಭಾರಿ ಮಳೆಯಿಂದ ತಾಲೂಕಿನ ಎಲ್ಲಾ ಕೆರೆಗಳು ತುಂಬಿ ಹರಿಯುತ್ತಿದ್ದು ಇಂದು ಹಂದಿನಕೆರೆ – ಹರಳಹಳ್ಳಿ ಗೆ ಸೇರಿದ ಕೆರೆ ತುಂಬಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಬಾಗಿನ ಅರ್ಪಿಸಲಾಗಿದೆ. ಮುಂದಿನ ದಿನಗಳಲ್ಲಿ ಕೂಡ ಜಿಲ್ಲೆ ಹಾಗೂ ರಾಜ್ಯದಲ್ಲಿ ಒಳ್ಳೆಯ ಮಳೆ ಬೆಳೆಯಾಗಿ ರೈತರು ಸಮೃದ್ಧಿಯಾಗಿ ಜೀವನ ಸಾಗಿಸುವಂತಾಗಲಿ ಎಂದು ಹಾರೈಸಿದರು.

ಈ ಸಂಧರ್ಭದಲ್ಲಿ ಹರಳಹಳ್ಳಿ ಗ್ರಾಂ.ಪ ಪಿಡಿಓ ರಂಗಸ್ವಾಮಿ, ವಿ.ಎ ಶ್ರೀನಿವಾಸ್, ಇಂಜಿನಿಯರ್ ರುಕ್ಮಾಂಗದ ,ನಾಗರಾಜ್ ಹಾಗೂ ಗ್ರಾಮದ ಮುಖಂಡರಾದ ರಂಗರಾಜು, ಮಂಜುನಾಥ್, ವಿಠಲ್,ಹರೀಶ್, ರಮೇಶ್ ಭೂದೇಶ್ ಇತರರು ಉಪಸ್ಥಿತರಿದ್ದರು.

Continue Reading

Hassan

ನೋಟಿಸ್ ವಾಪಸ್ ಪಡೆಯದಿದ್ರೆ ಆ.೫ ರಂದು ಕಾಂಗ್ರೆಸ್ ಪ್ರತಿಭಟನೆ ಇ.ಹೆಚ್. ಲಕ್ಷ್ಮಣ್

Published

on

ಹಾಸನ: ರಾಜ್ಯಪಾಲರು ಮುಖ್ಯಮಂತ್ರಿಗಳಿಗೆ ನೋಟಿಸ್ ನೀಡಿರುವುದು ಸರಿಯಿಲ್ಲ. ಕೂಡಲೇ ನೋಟಿಸ್ ಹಿಂಪಡೆಯಬೇಕು ಎಂದು ಆಗ್ರಹಿಸಿ ಆಗಸ್ಟ್ ೫ ರಂದು ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಮಾಡುವುದಾಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಇ.ಹೆಚ್. ಲಕ್ಷ್ಮಣ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ಮೂಡ ಪ್ರಕರಣ ತನಿಖಾ ಹಂತದಲ್ಲಿ ತನಿಖಾಧಿಕಾರಿಗಳ ನೇಮ ಮಾಡಲಾಗಿದ್ದು, ವರದಿ ಬರುವ ಮೊದಲೇ ಖಾಸಗೀ ವ್ಯಕ್ತಿಗಳ ದೂರು ಆಧರಿಸಿ ನೀಡಿರುವ ನೋಟಿಸ್ ಯಾವುದೋ ಒತ್ತಡಕ್ಕೆ ಮಣಿದು ನೀಡಿರುವ ನೋಟಿಸ್ ಆಗಿದೆ. ಮುಖ್ಯಮಂತ್ರಿಗಳಿಗೆ ನೀಡಿರುವ ನೋಟಿಸ್ ಕೂಡಲೇ ವಾಪಸ್ ಪಡೆಯಬೇಕೆಂಬ ಬೇಡಿಕೆಯನ್ನಿಟ್ಟುಕೊಂಡು ಆಗಸ್ಟ್ ೫ರ ಸೋಮವಾರದಂದು ಬೆಳಿಗ್ಗೆ ೧೦ ಗಂಟೆಗೆ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ಡಿಸಿ ಕಛೇರಿಯವರೆಗೂ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗುವುದು ಎಂದರು. ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೋಟಿಸ್ ನೀಡಿರುವ ಕ್ರಮ ಸರಿಯಲ್ಲ. ಮೂಡ ಹಗರಣವನ್ನು ಬಿಜೆಪಿ ಮತ್ತು ಜೆಡಿಎಸ್‌ನವರು ವಿನಾಕಾರಣ ಸಿದ್ದರಾಮಯ್ಯ

 

ಅವರ ಮೇಲೆ ಸುಳ್ಳು ಆಪಾದನೆ ಮಾಡುತ್ತಿದ್ದಾರೆ, ಒಬ್ಬ ಹಿಂದುಳಿದ ನಾಯಕನಿಗೆ ತೇಜೋವಧೆ ಮಾಡಲಾಗಿದೆ. ಅವರು ಅಧಿಕಾರದಲ್ಲಿದ್ದಾಗ ಸಂದರ್ಭದಲ್ಲಿ ಯಾವುದೇ ಅಕ್ರಮ ನಡೆದಿಲ್ಲ, ಆದರೂ, ಕೂಡ ಸುಳ್ಳು ಹೇಳಿಕೊಂಡು ಜನರನ್ನ ದಾರಿ ತಪ್ಪಿಸಲು ಪಾದಯಾತ್ರೆ ಮಾಡುತ್ತಿದ್ದಾರೆ. ಎಲ್ಲಾ ಸುಳ್ಳು ಆಪಾದನೆಗಳಿಗೆ ಈಗಾಗಲೇ ಈ ಎರಡು ಪಕ್ಷದವರಿಗೆ ಜನರೇ ಉತ್ತರ ನೀಡಿದ್ದಾರೆ ಎಂದು ಆಕ್ರೋಶವ್ಯಕ್ತಪಡಿಸಿದರು. ಇದು ಒಂದು ದಿನದ ಪ್ರತಿಭಟನೆಯಲ್ಲ. ಕಾದು ನೋಡಿ ಮುಂದೆ ನಿರಂತರವಾಗಿ ಹೋರಾಟ ಹಮ್ಮಿಕೊಳ್ಳುವುದಾಗಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹೆಚ್.ಕೆ. ಮಹೇಶ್, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ದೇವರಾಜೇಗೌಡ, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಪಟೇಲ್ ಶಿವಣ್ಣ, ದೇವಪ್ಪ ಮಲ್ಲಿಗೆವಾಳ್, ತಾರಚಂದನ್ ಇತರರು ಉಪಸ್ಥಿತರಿದ್ದರು.

Continue Reading

Trending

error: Content is protected !!