Connect with us

Hassan

ಎಂಸಿಇ ಕಾಲೇಜಿನಲ್ಲಿ ನ್ಯಾಷನಲ್ ಸಿಂಪೋಸಿಯಂ ನಾಲ್ಕು ದಿನದ ಕಾರ್ಯಾಗಾರಕ್ಕೆ ಚಾಲನೆ

Published

on

ಹಾಸನ : ನಗರದ ಸಾಲಗಾಮೆ ರಸ್ತೆ ಬಳಿ ಇರುವ ಮಲೆನಾಡು ತಾಂತ್ರಿಕ ಮಹಾವಿದ್ಯಾಲಯದ ಎಲೆಕ್ಟ್ರಾನಿಕ್ ವಿಭಾಗದ ಹಾಗೂ ಐಇಇಇ ಕಾಮ್ಸಕ್ ಚಾಪ್ಟರ್ ಮತ್ತು ಸ್ಟೂಡೆಂಟ್ ಚಾಪ್ಟರ್ ವತಿಯಿಂದ ಮಂಗಳವಾರದಂದು ಬೆಳಿಗ್ಗೆ ಆಯೋಜಿಸಲಾಗಿದ್ದ ನ್ಯಾಷನಲ್ ಸಿಂಪೋಸಿಯಂ ನಾಲ್ಕು ದಿನದ ಕಾರ್ಯಾಗಾರ ಹಾಗೂ ಒಂದು ದಿನದ ಪ್ರಾಜೆಕ್ಟ್ ಎಕ್ಸೊಪೊ ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರಾಂಶುಪಾಲರಾದ ಡಾ. ಎ.ಜೆ. ಕೃಷ್ಣಯ್ಯ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ಈ ರೀತಿಯ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಉತ್ತೇಜನವನ್ನು ನೀಡುತ್ತವೆ ಹಾಗೂ ಈ ಕಾರ್ಯಕ್ರಮವು ಫಲಕಾರಿಯಾಗಲಿ ಎಂದರು. ಇಂದಿನ ತಾಂತ್ರಿಕ ಮತ್ತು ಸ್ಪರ್ದಾ ಯುಗದಲ್ಲಿ ಕಲಿಕೆ ಹೆಚ್ಚು ಇದ್ದು, ವಿದ್ಯಾರ್ಥಿಗಳು ಕೂಡ ಹೆಚ್ಚಿನ ಒತ್ತು ನೀಡುವಂತೆ ಕರೆ ನೀಡಿದರು.

ಇ ಅಂಡ್ ಅ ವಿಭಾಗದ ಮುಖ್ಯಸ್ಥರಾದ ಡಾ. ಪಿ.ಸಿ. ಶ್ರೀಕಾಂತ್ ಹಾಗೂ ಪ್ರವೀಮ್ ಸಾಫ್ಟ್ ವೇರ್ ಸಲ್ಯೂಶನ್ ನ ಮೋಹಿತ್, ಸಂತೋಷ್, ಎಂ. ನವೀನ್ ಇತರರು ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಇಂಜಿನಿಯರಿಂಗ್ ಕಾಲೇಜಿನ ಹಾಗೂ ಮಲೆನಾಡು ಇಂಜಿನಿಯರಿಂಗ್ ಕಾಲೇಜಿನ ೧೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಎಲೆಕ್ಟ್ರಾನಿಕ್ಸ್ ವಿಭಾಗದ ಕಾರ್ಯಕ್ರಮದ ಆಯೋಜಕರಾದ ಡಾ. ತ್ರಿವೇಣಿ, ಡಾ. ಮೂರ್ತಿ ಮಹದೇವ ನಾಯಕ್, ಕಾಲೇಜಿನ ಸೂಪರ್ ಡೆಂಟ್ ಆದ ಶಿವಕುಮಾರಸ್ವಾಮಿಯವರು ಹಾಗೂ ಛಾಯಾಂಕ್ ಉಪಸ್ಥಿತರಿದ್ದರು. ಕಾರ್ಯಕ್ರಮದ ಸ್ವಾಗತ ಭಾಷಣವನ್ನು ಡಾ. ದೀಪಿಕಾ ರವರು ಹಾಗೂ ವಂದನಾರ್ಪಣೆಯನ್ನು ಸುಷ್ಮಾ ರವರು ನೆರವೇರಿಸಿದರು.

Continue Reading
Click to comment

Leave a Reply

Your email address will not be published. Required fields are marked *

Hassan

ರೈಲ್ವೆ ಹಳಿ ಮೇಲೆ ಗುಡ್ಡ ಕುಸಿತ – ಮಾರ್ಗಮಧ್ಯೆ ಸಿಲುಕಿದ್ದ ಐದು ರೈಲುಗಳು

Published

on

ಹಾಸನ : ಮಂಗಳೂರಿನಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ಎರಡು ರೈಲು

ಬೆಂಗಳೂರಿನಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಮೂರು ರೈಲು

ಮಧ್ಯರಾತ್ರಿಯಿಂದ ಪರದಾಡಿದ ಪ್ರಯಾಣಿಕರು

ಸಕಲೇಶಪುರ, ಆಲೂರು ಹಾಗೂ ಹಾಸನ ರೈಲು ನಿಲ್ದಾಣಗಳಲ್ಲಿ ನಿಂತಿರುವ ರೈಲುಗಳಿದ್ದ ಪ್ರಯಾಣಿಕರಿಗೆ ತಿಂಡಿ, ಕುಡಿಯುವ ನೀರಿನ ವ್ಯವಸ್ಥೆ ಮಾಡಿದ ರೈಲ್ವೆ ಇಲಾಖೆ ಅಧಿಕಾರಿಗಳು

ಪ್ರಯಾಣಿಕರು ಬೆಂಗಳೂರು, ಮಂಗಳೂರಿಗೆ ತೆರಳಲು ಬಸ್ ವ್ಯವಸ್ಥೆ ಕಲ್ಪಿಸಿದ ರೈಲ್ವೆ ಇಲಾಖೆ ಅಧಿಕಾರಿಗಳು

ಬಸ್‌, ಕಾರುಗಳಲ್ಲಿ ತೆರಳುತ್ತಿರುವ ಸಾವಿರಾರು ಪ್ರಯಾಣಿಕರು

ಇನ್ನೂ ರೈಲ್ವೆ ನಿಲ್ದಾಣದಲ್ಲೇ ಇರುವ ನೂರಾರು ಪ್ರಯಾಣಿಕರು

ಬಸ್‌ಗಾಗಿ ಕಾದು ನಿಂತಿರುವ ಪ್ರಯಾಣಿಕರು

ಮತ್ತೊಂದೆಡೆ ಬಿರುಸಿನಿಂದ ನಡೆಯುತ್ತಿರುವ ಮಣ್ಣು ತೆರವು ಕಾರ್ಯಾಚರಣೆ

Continue Reading

Hassan

ಮಂಗಳೂರು ಹಾಸನ ರೈಲ್ವೇ ಟ್ರ್ಯಾಕ್ ಮೇಲೆ ಗುಡ್ಡ ಕುಸಿತ – ಪ್ರಯಾಣಿಕರ ಪರದಾಟ

Published

on


ಆಲೂರು: ಮಂಗಳೂರು-ಹಾಸನ ಮಾರ್ಗದ ಸಕಲೇಶಪುರ ತಾಲೂಕು ಬಾಳ್ಳುಪೇಟೆ ಬಳಿ ರೈಲ್ವೆ ಹಳಿ ಮೇಲೆ ಶುಕ್ರವಾರ ರಾತ್ರಿ ಭಾರಿ ಪ್ರಮಾಣದಲ್ಲಿ ಮಣ್ಣು ಕುಸಿದು ರೈಲು ಪ್ರಯಾಣ ಸ್ಥಗಿತಗೊಂಡಿದ್ದು ಆಲೂರು ರೈಲು ನಿಲ್ದಾಣದಲ್ಲಿ ಸಾವಿರಾರು ಪ್ರಯಾಣಿಕರು ಪರದಾಡುತ್ತಿದ್ದಾರೆ.

ಭೂಕುಸಿತಮರಗಳ ಸಮೇತವಾಗಿ ರೈಲ್ವೆ ಹಳಿ ಮೇಲೆ ಭಾರಿ ಪ್ರಮಾಣದಲ್ಲಿ ಮಣ್ಣು ಕುಸಿದಿದ್ದು ಹಾಸನದಿಂದ ಮಂಗಳೂರಿಗೆ, ಮಂಗಳೂರಿನಿಂದ ಹಾಸನಕ್ಕೆ ತೆರಳುತ್ತಿದ್ದ ರೈಲುಗಳ ಸಂಚಾರ ಸ್ಥಗಿತಗೊಂಡಿದೆ. ಪ್ರಯಾಣ ಆರಂಭಿಸಿದ್ದ ಆರು ರೈಲುಗಳನ್ನು ಸಕಲೇಶಪುರ, ಯಡಕುಮರಿ, ಶಿರವಾಗಿಲು, ಆಲೂರು ಸೇರಿ ಆರು ನಿಲ್ದಾಣಗಳಲ್ಲಿ ನಿಲ್ಲಿಸಲಾಗಿದೆ.

ದಿಢೀ‌ರ್ ರೈಲುಗಳು ಸ್ಥಗಿತಗೊಂಡಿದ್ದರಿಂದ ರೈಲಿನಲ್ಲಿ ಕುಳಿತಿರುವ ಸಾವಿರಾರು ಪ್ರಯಾಣಿಕರು ಮಧ್ಯರಾತ್ರಿಯಿಂದ ಪ್ರಯಾಣದ ಅನಿಶ್ಚಿತತೆಗೆ ಸಿಲುಕಿ ಪರದಾಡುತ್ತಿದ್ದಾರೆ. ಪರ್ಯಾಯ ವಾಹನ ವ್ಯವಸ್ಥೆ ಮಾಡುವಂತೆ ಅವರು ಒತ್ತಾಯಿಸುತ್ತಿದ್ದಾರೆ.

ಆಲೂರು ರಾಧಮ್ಮ ಜನಸ್ಪಂದನ ಸಂಸ್ಥೆಯ ಅಧ್ಯಕ್ಷ ಹೇಮಂತ್ ಕುಮಾರ್ ಪ್ರಯಾಣಿಕರಿಗೆ ನೀರು ಹಾಗೂ ಬಿಸ್ಕೆಟ್ ವಿತರಿಸಿ ಮಾನವೀಯತೆ ಮೆರೆದಿದ್ದಾರೆ. ರೈಲ್ವೆ ಇಲಾಖೆ ಮಾಹಿತಿ ಪ್ರಕಾರ ಸದ್ಯ ರೈಲ್ವೆ ಇಲಾಖೆ ಕಾರ್ಮಿಕರು ಮಣ್ಣು ತೆರವು ಕಾರ್ಯಾಚರಣೆ ಆರಂಭಿಸಿದ್ದಾರೆ ಎಂದು ತಿಳಿದು ಬಂದಿದೆ.

Continue Reading

Hassan

ರೈಲ್ವೆ ಹಳಿ ಮೇಲೆ ಮತ್ತೆ ಭಾರಿ ಪ್ರಮಾಣದಲ್ಲಿ ಮಣ್ಣು ಕುಸಿತ

Published

on

HASSAN-BREAKING

ಹಾಸನ : ರೈಲ್ವೆ ಹಳಿ ಮೇಲೆ ಮತ್ತೆ ಭಾರಿ ಪ್ರಮಾಣದಲ್ಲಿ ಮಣ್ಣು ಕುಸಿತ

ಮರಗಳ ಸಮೇತವಾಗಿ ರೈಲ್ವೆ ಹಳಿ ಮೇಲೆ ಕುಸಿದಿರುವ ಮಣ್ಣು

ಕಿಲೋಮೀಟರ್ ಸಂಖ್ಯೆ 42/43 ರ ಮಧ್ಯೆ ಭೂಕುಸಿತ

ಹಾಸನ-ಮಂಗಳೂರು ಮಾರ್ಗದ ರೈಲುಗಳ ಸಂಚಾರ ಸ್ಥಗಿತ

ಸಕಲೇಶಪುರ ತಾಲ್ಲೂಕಿನ, ಬಾಳ್ಳುಪೇಟೆ ಬಳಿ ರೈಲ್ವೆ ಹಳಿ ಮೇಲೆ ಕುಸಿದಿರುವ ಮಣ್ಣು

ಹಾಸನದಿಂದ ಮಂಗಳೂರಿಗೆ, ಮಂಗಳೂರಿನಿಂದ ಹಾಸನಕ್ಕೆ ತೆರಳುತ್ತಿದ್ದ ರೈಲುಗಳ ಸಂಚಾರ ಸ್ಥಗಿತ

ಸಕಲೇಶಪುರ, ಯಡಕುಮಾರಿ, ಶಿರವಾಗಿಲು, ಆಲೂರು ಸೇರಿ ಆರು ಕಡೆ ನಿಂತಿರುವ ಆರು ರೈಲುಗಳು

ದಿಢೀರ್ ರೈಲುಗಳು ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರ ಪರದಾಟ

ರೈಲಿನಲ್ಲಿ ಕುಳಿತಿರುವ ಸಾವಿರಾರು ಪ್ರಯಾಣಿಕರು

ಮಧ್ಯರಾತ್ರಿಯಿಂದ ನಿಂತಿರುವ ರೈಲುಗಳ ಸಂಚಾರ

ಸಕಲೇಶಪುರ, ಯಡಕುಮಾರಿ, ಶಿರವಾಗಲು, ಆಲೂರು ಸೇರಿ ಆರು ಕಡೆ ನಿಂತಿರುವ ಆರು ರೈಲುಗಳು

ಪರ್ಯಾಯ ವಾಹನ ವ್ಯವಸ್ಥೆ ಮಾಡುವಂತೆ ಒತ್ತಾಯ

ಮಣ್ಣು ತೆರವು ಕಾರ್ಯಾಚರಣೆ ಆರಂಭಿಸಿರುವ ರೈಲ್ವೆ ಇಲಾಖೆ ಕಾರ್ಮಿಕರು

Continue Reading

Trending

error: Content is protected !!