Connect with us

Hassan

ಎಂಸಿಇ ಕಾಲೇಜಿನಲ್ಲಿ ಆಸ್ಟ್ರೇಲಿಯದ ಜೊತೆ ಒಪ್ಪಂದ ಕಾರ್ಯಕ್ರಮ

Published

on

ಹೊರದೇಶದಲ್ಲೂ ಅಧ್ಯಯನ ಮಾಡುವ ಅವಕಾಶ: ಅಶೋಕ್ ಹಾರನಹಳ್ಳಿ

ಹಾಸನ: ಬರೀ ತರಗತಿಯಲ್ಲಿ ಪಾಠ ಕಲಿಯುವುದಕ್ಕೆ ಆಗುವುದಿಲ್ಲ. ಏನು ತರಬೇತಿ ಅವಶ್ಯಕತೆ ಇದಿಯೋ ಅಂತಹ ತರಬೇತಿ ಕೊಡಬೇಕಾಗಿದ್ದು, ವಿದ್ಯಾರ್ಥಿಗಳಿಗೆ ಹೊರದೇಶದಲ್ಲೂ ಸಹ ಅಧ್ಯಯನ ಮಾಡಲು ಅವಕಾಶ ಸಿಗಬೇಕು ಎನ್ನುವ ದೃಷ್ಠಿಯಲ್ಲಿ ಆಸ್ಟ್ರೇಲಿಯಾದ ಎಂಪ್ಲಾಯಿಬಿಲಿಟಿ ಲೈಫ್ ಪ್ರ್ವೈವೇಟ್ ಲಿಮಿಟೆಡ್ ಫೆಡರೇಶನ್ ಯೂನಿವರ್ಸಿಟಿ, ಆಸ್ಟ್ರೇಲಿಯಾದೊಂದಿಗೆ ಸಹಯೋಗ ಒಪ್ಪಂದ ಮಾಡಿಕೊಳ್ಳುತ್ತಿರುವುದಾಗಿ ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಅಶೋಕ್ ಹಾರನಹಳ್ಳಿ ತಿಳಿಸಿದರು.

ನಗರದ ಸಾಲಗಾಮೆ ರಸ್ತೆ ಬಳಿ ಇರುವ ಹಾಸನ ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ಅಲ್ಯೂಮ್ನಿ ಹಾಲ್ ನಲ್ಲಿ ಗುರುವಾರದಂದು ಹಮ್ಮಿಕೊಳ್ಳಲಾಗಿದ್ದ ಮಲೆನಾಡು ಇಂಜಿನೀಯರಿಂಗ್ ಕಾಲೇಜ್ ಹಾಗೂ ಆಸ್ಟ್ರೇಲಿಯಾದ ಎಂಪ್ಲಾಯಿಬಿಲಿಟಿ ಲೈಫ್ ಪ್ರೈವೇಟ್ ಲಿಮಿಟೆಡ್ ಫೆಡರೇಶನ್ ಯೂನಿವರ್ಸಿಟಿ, ಆಸ್ಟ್ರೇಲಿಯಾದೊಂದಿಗೆ ಸಹಯೋಗ ಒಪ್ಪಂದ ಕಾರ್ಯಕ್ರಮದ ಉದ್ಘಾಟನೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಮಲೆನಾಡು ಇಂಜಿನಿಯರಿಂಗ್ ಕಾಲೇಜು ಜೊತೆಗೆ ಆಸ್ಟ್ರೇಲಿಯದ ಫೆಡರೇಷನ್ ಯುನಿವರ್ಸಿಟಿಯಿಂದ ಇಲ್ಲಿಗೆ ಬಂದಿದ್ದು, ತಾಂತ್ರಿಕ ಶಿಕ್ಷಣ ಎಂದರೇ ಬರೀ ತರಗತಿಯಲ್ಲಿ ಪಾಠ ಕಲಿತರೆ ಆಗುವುದಿಲ್ಲ. ಇಂಡಸ್ಟ್ರಿಯಲ್ ಜೊತೆ ಕೆಲಸ ಮಾಡಬೇಕು. ಯಾವ ಕಂಪನಿಯಲ್ಲಿ ಏನು ತರಬೇತಿ ಅವಶ್ಯಕತೆ ಇದಿಯೋ ಅಂತಹ ತರಬೇತಿ ಕೊಡುವ ಅವಶ್ಯಕತೆ ಇದೆ. ವಿದ್ಯಾರ್ಥಿಗಳಿಗೆ ಹೊರದೇಶದಲ್ಲೂ ಸಹ ಅಧ್ಯಾಯನ ಮಾಡಲು ಅವಕಾಶ ಸಿಗಬೇಕು ಎಂದರು. ಅನೇಕ ಕೈಗಾರಿಕೆಗಳ ಜೊತೆ ಅಲ್ಲಿರುವ ಪರಿಸ್ಥಿತಿಗಳನ್ನು ಅಧ್ಯಯನ ಮಾಡುವ ದೃಷ್ಠಿಯಲ್ಲಿ ಆಸ್ಟ್ರೇಲಿಯಾ ಫೆಡರೇಷನ್ ಯುನಿವರ್ಸಿಟಿಯ ಮುಖ್ಯಸ್ಥರು ಬಂದಿದ್ದು, ಅವರ ಜೊತೆ ಒಡಂಬಡಿಕೆ ಮಾಡಿ ಅವರು ನಮ್ಮ ಕಾಲೇಜಿನಲ್ಲಿ ಒಂದು ಕಛೇರಿಯನ್ನು ತೆರೆಯುತ್ತಾರೆ. ನಮ್ಮ ಎಂಸಿಇ ಕಾಲೇಜು ಸಂಸ್ಥೆಯನ್ನು ಆಸ್ಟ್ರೇಲಿಯಾದಲ್ಲಿ ಒಂದು ಕಛೇರಿಯನ್ನು ತೆರೆದು ಮುಂದಿನ ದಿನಗಳಲ್ಲಿ ಹೆಚ್ಚಿನ ಅಧ್ಯಯನ ಮಾಡಲು ಆಸ್ಟ್ರೇಲಿಯಕ್ಕೆ ಹೋಗುವ ಅವಕಾಶವನ್ನು ಕಲ್ಪಿಸುತ್ತಿದ್ದೇವೆ. ಭಾರತ ದೇಶದಲ್ಲೆ ಅನೇಕ ಕೈಗಾರಿಕೆಗಳಲ್ಲಿ ಹೋಗಿ ಅನುಭವ ಪಡೆದುಕೊಳ್ಳುವ ವ್ಯವಸ್ಥೆಯನ್ನು ಸಹ ಮಾಡಲಾಗುತ್ತಿದೆ. ನಮ್ಮ ಕಾಲೇಜಿನ ಅಂತಿಮ ವರ್ಷದಲ್ಲಿ ಶಿಕ್ಷಣ ಪಡೆಯುವುದಕ್ಕೆ ಮೊದಲೆ ಅವರಿಗೆ ಒಳ್ಳೆಯ ಕೆಲಸ ಸಿಗಬೇಕು ಮತ್ತು ಅನೇಕ ಅವಕಾಶವನ್ನು ಸೃಷ್ಠಿ ಮಾಡಬೇಕು. ಓದಿದವರಿಗೆಲ್ಲಾ ಒಂದು ಕೆಲಸ ಸಿಗಬೇಕು ಎನ್ನುವ ದೃಷ್ಠಿಯಲ್ಲಿ ನಾವು ಆಸ್ಟ್ರೇಲಿಯದ ಫೆಡರೇಷನ್ ಯುನಿವರ್ಸಿಟಿಯ ಜೊತೆ ಒಂದು ಒಪ್ಪಂದವನ್ನು ಮಾಡಿಕೊಳ್ಳುತ್ತಿದ್ದೇವೆ. ಇದರಿಂದ ನಮ್ಮ ಕಾಲೇಜಿನ ವಿದ್ಯಾರ್ಥಿಗಳಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಒಂದು ಅನುಭವ ಸಿಕ್ಕಿದಂತಾಗುತ್ತದೆ ಎಂದು ಹೇಳಿದರು. ಈಗಾಗಲೇ ಹೊರ ದೇಶದ ಯೂನಿವರ್ಸಿಟಿ ಜೊತೆ ಒಡಂಬಡಿಕೆ ಮಾಡಿದ್ದರೂ ಸಹ ಇದೊಂದು ಮಹತ್ವದ ಹೆಜ್ಜೆ. ಆಸ್ಟ್ರೇಲಿಯಾದಿಂದ ಅವರೆ ಬಂದು ಯಾವ ಯಾವ ರೀತಿಯಲ್ಲಿ ನಾವು ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತೇವೆ ಎನ್ನುವ ವಿಚಾರದ ಬಗ್ಗೆ ಎಲ್ಲಾ ಅಧ್ಯಾಪಕರಿಗೆ ವಿಷಯವನ್ನು ತಿಳಿಸಿಕೊಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಕಾರ್ಯಕ್ರಮಗಳನ್ನು ಫೆಡರೇಷನ್ ಯುನಿವರ್ಸಿಟಿಯ ಸಹಕಾರದಲ್ಲಿ ಅವಕಾಶವನ್ನು ವಿದ್ಯಾರ್ಥಿಗಳಿಗೆ ಕಲ್ಪಿಸಿಕೊಡುವ ಕಾರ್ಯಕ್ರಮವನ್ನು ಹಾಕಿಕೊಳ್ಳುವ ಯೋಜನೆ ಇದೆ. ವಿದ್ಯಾರ್ಥಿಗಳಿಗೆ ಕೆಲಸ ಸಿಗಲು ಯಾವ ಸ್ಕಿಲ್ ಬೇಕು ಅದನ್ನು ಕೊಡುವ ವ್ಯವಸ್ಥೆ ಮಾಡಲಾಗುವುದು. ಇದರಿಂದ ಎಲ್ಲಾರಿಗೂ ಅನುಕೂಲವಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ಆಸ್ಟ್ರೇಲಿಯಾ ಫೆಡರೇಷನ್ ಯುನಿವರ್ಸಿಟಿಯ ಕಾರ್ಯನಿರ್ವಹಣಾಧಿಕಾರಿ ಡಾ ಮನೀಷ್ ಮಲ್ಹೋತ್ರಾ, ಸಹ ಕಾರ್ಯನಿರ್ವಹಣಾಧಿಕಾರಿ ಎಂಪ್ಲಾಯಿಬಿಲಿಟಿ ಲೈಫ್ ರಾಜದಾಸ್ ಗುಪ್ತ, ಸಮಿತಿಯ ಉಪಾಧ್ಯಕ್ಷ ಎಂಪ್ಲಾಯಿಬಿಲಿಟಿ ಲ್ಯೆಫ್ ರುಚಿಕಾ ಸನ್ರ್, ನಿರ್ದೇಶಕರಾದ ಅನಿರುದ್ಧ ಫಾಗ್ಟೆ, ಮ್ಯಾನೇಜರ್ ಅರುಣ್ ಹಿರಣ್ಣಯ್ಯ, ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಆರ್.ಟಿ. ದ್ಯಾವೇಗೌಡ, ಮ್ಯಾನೇಜರ್ ಶಿವರಾಮ್ ಕೃಷ್ಣಯ್ಯ, ಸಂಸ್ಥೆಯ ನಿರ್ದೇಶಕರಾದ ಪಾರ್ಶ್ವನಾಥ, ಡಿ.ಬಿ. ಹೇಮಂತ್ ಕುಮಾರ್, ಚೌಡವಳ್ಳಿ ಜಗದೀಶ್, ಹೆಚ್.ಎಲ್. ಗುರು ಮೂರ್ತಿ, ಜಿ.ಟಿ. ಕುಮಾರ್, ಮಲೆನಾಡು ಇಂಜಿನೀಯರಿಂಗ್ ಕಾಲೇಜಿನ ನಿರ್ದೇಶಕರಾದ ಡಾ. ಎಸ್. ಪ್ರದೀಪ್, ಮಲೆನಾಡು ಇಂಜಿನೀಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಎ.ಜೆ. ಕೃಷ್ಣಯ್ಯ. ಕಾರ್ಯಕ್ರಮದ ಸಂಯೋಜಕರಾದ ಹಾಗೂ ಪ್ರಾಧ್ಯಾಪಕರಾದ ಡಾ ಶ್ರೀನಾಥ್ ಹಾಗೂ ಕಾಲೇಜಿನ ಎಲ್ಲಾ ವಿಭಾಗದ ಮುಖ್ಯಸ್ಥರು, ಡೀನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Hassan

ಬಿಜೆಪಿ ಪಕ್ಷದ ಸದಸ್ಯತ್ವಕ್ಕೆ ಎಟಿಆರ್‌ ರಾಜಿನಾಮೆ: ಪತ್ರ ವೈರಲ್‌

Published

on

ಹಾಸನ: ರಾಜಕೀಯ ದಿಂದ ದೂರ ಸರಿದ್ರಾ ಹಿರಿಯ ರಾಜಕಾರಣಿ ಎಟಿ ರಾಮಸ್ವಾಮಿ ಬಿಜೆಪಿ ಪಕ್ಷದ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದ್ದಾರೆ ಎನ್ನಲಾದ ಪತ್ರ ವೈರಲ್ ಆಗಿದೆ.

ಏಪ್ರಿಲ್ 15 ರಂದೇ ಬಿಜೆಪಿ ರಾಜ್ಯಾದ್ಯಕ್ಷ ವಿಜಯೇಂದ್ರಗೆ ಬರೆದಿರೊ ಪತ್ರ ಎಂದು ಹೇಳಲಾಗುತ್ತಿರುವ ಈ ಪತ್ರದಲ್ಲಿಪರಿಸರ ಉಳಿವಿಗಾಗಿ ತೊಡಗಿಸಿಕೊಳ್ಳೋದಾಗಿ ಉಲ್ಲೇಖಿಸಿ ರಾಜಿನಾಮೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ.

ಹವಾಮಾನ ವೈಪರಿತ್ಯದಿಂದ ನೆರೆ ಬರ, ಭೂ ಕಂಪ ಸೃಷ್ಟಿ ಆಗುತ್ತಿದೆ. ಕುಡಿಯುವ ನೀರು, ಉಸಿರಾಡುವ ಗಾಳಿ, ಸೇವಿಸುವ ಅಹಾರ ವಿಷಪೂರಿತವಾಗಿದೆ. ಬೆಟ್ಟಗುಡ್ಡ ಅರಣ್ಯ ನಾಶದಿಂದ ನದಿ ತೊರೆ ಗಳು ಬತ್ತಿ ಹೋಗಿವೆ. ಈ ಹೊತ್ತಿನಲ್ಲಿ ರಾಜಕಾರಣ ಕ್ಕಿಂತ ಪರಿಸರ ದ ಉಳಿವು ಮುಖ್ಯವಾಗಿದೆ. ನಾನು ಪರಿಸರದ ಸಂರಕ್ಷಣೆಯಲ್ಲಿ ನನ್ನ ಸಂಪೂರ್ಣ ಸಮಯ ತೊಡಗಿಸಿಕೊಳ್ಳಬೇಕೆಂದಿದ್ದೇನೆ ಎಂದು ಉಲ್ಲೇಖಿಸಲಾಗಿದೆ.

ಈಗಾಗಲೆ ಪರಿಸರಕ್ಕಾಗಿ ನಾವು ಸಂಘಟನೆಯಲ್ಲಿ ರಾಜ್ಯಾದ್ಯಕ್ಷ ಹುದ್ದೆ ಅಲಂಕರಿಸಿರೊ ಎಟಿ ರಾಮಸ್ವಾಮಿ. ರಾಜ್ಯಮಟ್ಟದ ಹಲವು ಸಾಹಿತಿ ಚಿಂತಕರುಣ ಸ್ವಾಮಿಜಿಗಳು ಹೋರಾಟಗಾರ ರ ನೇತೃತ್ವದಲ್ಲಿ ಉದಯಿಸಿರೊ ಸಂಘಟನೆ ರಾಜಕೀಯದಲ್ಲಿ ಸಕ್ರಿಯರಾಗಿರೋರಿಗೆ ಸಂಘಟನೆಯಲ್ಲಿ ಅವಕಾಶ ಇಲ್ಲದ ಹಿನ್ನೆಲೆ ಸಕ್ರಿಯ ರಾಜಕಾರಣದಿಂದ ದೂರ ಸರಿದು ಪರಿಸರ ಸಂರಕ್ಷಣೆ ಯಲ್ಲಿ ತೊಡಗಿಕೊಳ್ಳಲು ತೀರ್ಮಾನ ಮಾಡಿರೊ ಬಗ್ಗೆ ಮಾಹಿತಿ ಇದ್ದು, ಹಾಗಾಗಿಯೇ ಬಿಜೆಪಿ ಪಕ್ಷ ತೊರೆದಿದ್ದಾರೆ ಎಂದು ಹೇಳಲಾಗುತ್ತಿದೆ.

ನಾಲ್ಕು ಬಾರಿ ಶಾಸಕರಾಗಿ ವಿಧಾನಸಬೆಗೆ ಆಯ್ಕೆಯಾಗಿದ್ದ ಎಟಿಆರ್, ಕಳೆದ ವಿಧಾನಸಭೆ ಚುನಾವಣೆ ಹಾಲಿ ಶಾಸಕರಾಗಿದ್ದರೂ ಟಿಕೇಟ್ ನೀಡದ ಜೆಡಿಎಸ್. ಇದರಿಂದ ಮನನೊಂದು ಬಿಜೆಪಿ ಸೇರಿದ್ದ ಎಟಿ ಆರ್, ಕಾಂಗ್ರೆಸ್ ನಿಂದ ಎರಡುಬಾರಿ ಜೆಡಿಎಸ್ ನಿಂದ ಎರಡುಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಎಟಿ ರಾಮಸ್ವಾಮಿ. ಹಾಸನ ಜಿಲ್ಲೆಯ ಅರಕಲಗೂಡು ಕ್ಷೇತ್ರದದಿಂದ ಆಯ್ಕೆಯಾಗಿದ್ದ ಎಟಿಆರ್, 2023 ರಿಂದಲೂ ರಾಜಕೀಯ ದಿಂದ ಅಂತರ ಕಾಯ್ದುಕೊಂಡಿದ್ದರು.

Continue Reading

Hassan

ಮೇಲ್ಸೇತುವೆ ಮುಂದಿನ ಮಾರ್ಚ್‌ಗೆ ಪೂರ್ಣ: ಸಂಸದ ಶ್ರೇಯಸ್‌ ಪಟೇಲ್‌

Published

on

ಹಾಸನ: ನಗರದ ಹೊಸ ಬಸ್ ನಿಲ್ದಾಣದ ಎದುರಿನ ರೈಲ್ವೆ ಮೇಲ್ಸೇತುವೆ 2ನೇ ಹಂತದ ಕಾಮಗಾರಿ ಈಗಾಗಲೇ ಆರಂಭವಾಗಿದ್ದು, 2026ರ ಫೆಬ್ರವರಿ ಇಲ್ಲವೇ ಮಾರ್ಚ್ ವೇಳೆಗೆ ಮುಗಿಸಲಾಗುವುದು ಎಂದು ಸಂಸದ ಶ್ರೇಯಸ್ ಪಟೇಲ್ ತಿಳಿಸಿದರು.

ಶನಿವಾರದಂದು ನಗರದ ಎನ್.ಆರ್. ವೃತ್ತದಿಂದ ಹೊಸ ಬಸ್ ನಿಲ್ದಾಣದವರೆಗೂ ನಿಮಾಣ ಹಂತದಲ್ಲಿರುವ ಮೇಲ್ಸೇತುವೆ ಮೇಲೆ ತೆರಳಿ ಎಲ್ಲೆಲ್ಲಿ ಕಾಮಗಾರಿ ಆಗಬೇಕು ಎಂಬುವರ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಅವರು, ಹಲವು ಕಾರಣಗಳಿಂದಾಗಿ ಕೆಲ ವರ್ಷಗಳಿಂದ ಕಾಮಗಾರಿ ನಿಂತಿತ್ತು. ಇದೀಗ ತಮ್ಮ ತಮ್ಮ ಪಾಲಿನ ಅನುದಾನ ನೀಡಲು ಸಮ್ಮತಿಸಿವೆ. ಹೀಗಾಗಿ ಈಗಾಗಲೇ ಶುರುವಾಗಿರುವ ಕಾಮಗಾರಿಯನ್ನು ಕಾಲಮಿತಿಯಲ್ಲಿ ಮುಗಿಸುವಂತೆ ರೈಲ್ವೆ ಇಲಾಖೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರೊಂದಿಗೆ ಚರ್ಚಿಸಿ, ಯಾವುದೇ ಕಾರಣಕ್ಕೂ ಕಾಮಗಾರಿ ವಿಳಂಬ ಆಗಬಾರದು ಎಂದು ಸೂಚನೆ ನೀಡಲಾಗಿದೆ ಎಂದರು. ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂದಿನ ವರ್ಷದ ಮಾರ್ಚ್ ವೇಳೆಗೆ ಮೇಲ್ಸೇತುವೆ ಸಂಚಾರಕ್ಕೆ ಮುಕ್ತವಾಗಲಿದೆ ಎಂದರು.

ಈ ಯೋಜನೆಯ ಒಟ್ಟು ಅಂದಾಜು ವೆಚ್ಚ ೮೩.೭೨ ಕೋಟಿ. ಇದರಲ್ಲಿ ರಾಜ್ಯದ ಪಾಲು ೪೯.೫೪ ಕೋಟಿ ನೀಡಬೇಕಿದೆ. ಈಗ ೨೧.೮೧ ಕೋಟಿ ರೂ. ನೀಡುವುದಾಗಿ ಸರ್ಕಾರ ಹೇಳಿದ್ದು, ಹೆಚ್‌ಎಂಆರ್‌ಡಿಸಿ ಅಡಿ ೧೫ ಕೋಟಿ ನೀಡಲಾಗಿದೆ. ಅನುದಾನಕ್ಕೆ ಯಾವುದೇ ರೀತಿಯ ಸಮಸ್ಯೆ ಇಲ್ಲ ಎಂದು ಸ್ಪಷ್ಟಪಡಿಸಿದರು. ಮೇಲ್ಸೇತುವೆ ಮೇಲಿನ ಕಬ್ಬಿಣದ ಬೃಹತ್ ಕಮಾನು ನಿರ್ಮಾಣ ಹೈದ್ರಾಬಾದ್‌ನಲ್ಲಿ ಆಗಲಿದೆ, ಅದಕ್ಕಾಗಿ ೮ ತಿಂಗಳು ಸಮಯಾವಕಾಶ ಬೇಕಿದೆ. ಅಲ್ಲೀವರೆಗೂ ಸಿವಿಲ್ ವರ್ಕ್ ಸೇರಿ ಉಳಿದ ಕಾಮಗಾರಿ ನಡೆಯಲಿವೆ ಎಂದರು. ಉಸುಮಾರು ಈ ಹಿನ್ನೆಲೆಯಲ್ಲಿ ಕಾಮಗಾರಿ ಆರಂಭಿಸಲಾಗಿದೆ. ಕೇಂದ್ರ ಸಹ ತನ್ನ ಪಾಲಿನ ಅನುದಾನ ನೀಡಲು ಒಪ್ಪಿದೆ. ಹೀಗಾಗಿ ಮೇಲ್ಸೇತುವೆ ಕಾಮಗಾರಿ ಇನ್ನು ಮಂದೆ ಯಾವುದೇ ಅಡೆ-ತಡೆ ಇಲ್ಲದೆ ಮುನ್ನಡೆಯಲಿದೆ ಎಂದರು. ಎರಡೂ ಬದಿಯ ನಾಲ್ಕು ಪಥದ ಮೇಲ್ಸೇತುವೆ ನಿರ್ಮಾಣ ಆದರೆ ವಾಹನ ಸಮಸ್ಯೆ ನಿವಾರಣೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Continue Reading

Hassan

ಯಾವ ಸಮಾಜವನ್ನು ಒಡೆದಾಡಿಸುವ ಕೆಲಸವನ್ನು ನಮ್ಮ ಸರ್ಕಾರ ಮಾಡಿಲ್ಲ: ಸಂಸದ ಶ್ರೇಯಸ್‌ ಪಟೇಲ್‌

Published

on

ಹಾಸನ : ನಮ್ಮದು ಸಾಮಾಜಿಕ ನ್ಯಾಯಕ್ಕೆ ಒತ್ತು ಕೊಡುವ ಪಕ್ಷ ಹಾಗಾಗಿ ಇದರ ಬಗ್ಗೆ ಜವಾಬ್ದಾರಿಯುತ ತೀರ್ಮಾನವನ್ನು ಸರ್ಕಾರದ ಮುಖ್ಯಮಂತ್ರಿಗಳು ತೆಗೆದುಕೊಳ್ಳುತ್ತಾರೆ ಎಂದು ಭಾವಿಸಿದ್ದೇವೆ. ಎಲ್ಲಾ ಸಮಾಜವನ್ನು ಸಮವಾಗಿ ನೋಡಿ ಜಾತಿಗಣತಿಯಲ್ಲಿ ಪರಿಶೀಲಿಸಿ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಜಾತಿಗಣತಿ ವರದಿ ಗೊಂದಲ ವಿಚಾರ ಹಾಸನದಲ್ಲಿ ಸಂಸದ ಶ್ರೇಯಸ್‌ಪಟೇಲ್ ಹೇಳಿಕೆ ನೀಡಿದರು.

ಮೊನ್ನೆ ನಡೆದ ಸಚಿವ ಸಂಪುಟದ ಸಭೆಯಲ್ಲಿ ಪರಾಮರ್ಶಿಸಿ ತೀರ್ಮಾನ ತೆಗೆದುಕೊಳ್ಳುಬೇಕೆಂದು ಒತ್ತಾಯಿಸಿದ್ದಾರೆ‌. ಸಚಿವರ ಅಭಿಪ್ರಾಯವನ್ನು ಮುಖ್ಯಮಂತ್ರಿಗಳು ತೆಗೆದುಕೊಂಡಿದ್ದಾರೆ. ಯಾವುದೇ ಸಮಾಜಕ್ಕೆ ಅನ್ಯಾಯವಾಗುವ ಕೆಲಸವನ್ನು ನಮ್ಮ‌ ಪಕ್ಷ ಮಾಡಲ್ಲ. ಯಾವ ಸಮಾಜವನ್ನು ಒಡೆದಾಡಿಸುವ ಕೆಲಸವನ್ನು ನಮ್ಮ ಸಮಾಜ ಮಾಡಿಲ್ಲ, ಮಾಡುವುದಿಲ್ಲ. ಜನಸ್ನೇಹಿಯಾಗಿ ತೀರ್ಮಾನವನ್ನು ತೆಗೆದುಕೊಳ್ಳುತ್ತಾರೆ. 2015 ರಲ್ಲಿ ಜಾತಿಗಣತಿ ನಡೆದಿತ್ತು, ಎಲ್ಲರ ಬೇಡಿಕೆ ಇತ್ತು ಜಾತಿಗಣತಿಗಾಗಿ ಕೋಟ್ಯಾಂತರ ರೂ ವೆಚ್ಚ ಮಾಡಿದ್ದಾರೆ. ಈಗೀನ ವರದಿಯ ನೈಜತೆಯನ್ನು, ಸತ್ಯಾಸತ್ಯತೆಯನ್ನು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತಾರೆ. ವರದಿಯನ್ನು ಇನ್ನೂ ಮಂಡಿಸಿಲ್ಲ, ವರದಿ ಹೊರಗೆ ಬಂದ ಮೇಲೆ ಗೊತ್ತಾಗುತ್ತೆ. ಇನ್ನೂ ಯಾರಿಗೂ ವರದಿಯಲ್ಲಿದೆ ಎಂದು ಗೊತ್ತಿಲ್ಲ.

ಬಿಜೆಪಿ ಸರ್ಕಾರ ಕೆಡವಲು ಯತ್ನಿಸುತ್ತಿದೆ ಎಂಬ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ವಿಚಾರ ಯಾವಾಗಲೂ ಆ ಕೆಲಸ ಮಾಡುತ್ತಿದ್ದಾರೆ. ಸರ್ಕಾರ ಅಸ್ಥಿರಗೊಳಿಸುವುದೇ ವಿರೋಧ ಪಕ್ಷಗಳ ಗುರಿ ಎಲ್ಲರಿಗೂ ಅಧಿಕಾರದ ಆಸೆ ಇರುತ್ತೆ ನಮಗೂ ಆಸೆ ಇದೆ, ಆದರೆ ಸಿದ್ಧಾಂತ ಇದೆ, ಜನಸೇವೆ ಮಾಡಲು ನಾವು ಬಂದಿದ್ದೇವೆ. ಅಧಿಕಾರದ ದುರಾಸೆಗೋಸ್ಕರ ಈ ಕೆಲಸ ಮಾಡಬಹುದು.ನಾವು ಎಚ್ಚರಿಕೆಯಿಂದ ಇರಬೇಕು. ನಮ್ಮಲ್ಲಿ ಒಗ್ಗಟ್ಟಿದೆ, ಒಗ್ಗಟ್ಟು ಎಂದರೆ ಕಾಂಗ್ರೆಸ್ ಪಕ್ಷ ಎಂದು ಹೇಳಿದರು.

ಸಿಇಟಿ ಪರೀಕ್ಷೆಗೆ ಹೋಗುವ ವೇಳೆ ಜನಿವಾರ ತೆಗೆಸಿದ ವಿಚಾರವಾಗಿ ಮಾತನಾಡಿ, ಅದನ್ನು ನಾನು ಖಂಡಿತವಾಗಿ ವಿರೋಧಿಸುತ್ತೇನೆ, ಆ ತರ ಮಾಡಬಾರದು. ನಾನು ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿದ್ದು, ಒಬ್ಬ ಸಾರ್ವಜನಿಕನಾಗಿ ಹೇಳುತ್ತಿದ್ದೇನೆ. ಅವರವರ ಆಚರಣೆಗಳು, ಅವರವರ ವೈಯುಕ್ತಿಕ. ಜನಿವಾರ ತೆಗೆದು ಹೋಗಿ ಎನ್ನುವುದು ಅಪರಾಧ. ನಾನಂತು ಇದನ್ನು ಖಂಡಿಸುತ್ತೇನೆ ಎಂದು ಹೇಳಿದರು.

Continue Reading

Trending

error: Content is protected !!